www.dgnsgreenworld.blogspot.com

Wednesday, December 30, 2020

ಮತ್ತೆ ಕಾಣದಿರು ನೀ 2020!

*ಮತ್ತೆ ಕಾಣದಿರು ನೀ 2020!*

ತುಂಬಿದ ಕಂಗಳ ವಿದಾಯ ನಿನಗೆ, 
ಮತ್ತೆ ಕಾಣದಿರು ಓ 2020!

ದುಡಿವ ಕೈಗಳ  ಕೆಲಸ ಕಸಿದೆ,
ದಿನ ದುಡುಮೆಯವರ ಹೊಟ್ಟೆಗೆ ಹೊಡೆದೆ,
ಬದುಕನು ಭರಿಸಲಾಗದ ಬವಣೆಯಾಗಿಸಿದೆ,
ನಗುವ ಕಂಗಳಲಿ ಕಂಬನಿಯು  ತುಂಬಿದೆ,
ನೀನಾರಿಗಾದೆಯೋ ಓ 2020!

ಹಿರಿಯ ಜೀವಗಳು ಬೆಂದು ಬವಳಿದವು,
ಕಾಲು ಮುರಿದ ಕಪ್ಪೆಗಳಂತಾದರು,
ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,
ನೋಡು ನೋಡುತಲೇ ಅಂತರ್ಧಾನರಾದರು,
ನೀನಾರಿಗಾದೆಯೋ ಓ 2020!

ನೆನ್ನೆ ಮೊನ್ನೆ ಕಂಡ ಗೆಳೆಯರು, 
ಮನಬಿಚ್ಚಿ ಬೆರೆತು ನಕ್ಕವರು,
ತಿರುಗಿ ನೋಡುವಷ್ಟರಲಿ ಮರೆಯಾದರು,
ನಿನ್ನ ಕ್ರೂರನೋಟಕೆ ಬಲಿಯಾದರು,
ನೀನಾರಿಗಾದೆಯೋ ಓ 2020!

ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ,
ಹೊರಗೆ ಕಾಲಿಡುವ ಧೈರ್ಯ ಕಸಿದೆ,
ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ,
ಮೃದುಮನಗಳಿಗೆ ಮಾಯದ ಬರೆಯೆಳೆದೆ, 
ನೀನಾರಿಗಾದೆಯೋ ಓ 2020!

ವ್ಯಾಪಾರಗಳ       ದಿವಾಳಿ ತೆಗೆದೆ,
ವ್ಯಾಪಾರಿಗಳ ಬೆನ್ನಿಗೆ - ಚೂರಿ ಇಟ್ಟೆ,
ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ,
ಉಳಿದದ್ದು ಕೇವಲ ತಣ್ಣೀರ ಬಟ್ಟೆ,
ನೀನಾರಿಗಾದೆಯೋ ಓ 2020!

ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು, 
ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ,
ನೋವು, ನಿರಾಸೆಗಳನು  ಅಡಗಿಸಿಕೊಂಡೆವು
 - ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು,
ನೀನಾರಿಗಾದೆಯೋ ಓ 2020!

ಈಗ ಹೇಳುತಿರುವೆವು ನಿನಗೆ ವಿದಾಯ,
ನೀ ಮರೆಯಾಗುತಿರುವುದು ಅಭಯ ಪ್ರದಾಯ,
ಶೋಕದ ಕಣ್ಣಿರು ಆವಿಯಾಗುತಿದೆ,
ಆನಂದಭಾಷ್ಪ ಮೂಡುತಿದೆ - 
ಹೋಗು, ಇನ್ನು ನೀ ಬರಬೇಡ 2020!

30 WAYS TO EMP0WER YOUR LIFE

Sunday, December 27, 2020

ರೋಗ ನಿರೋಧಕ ಶಕ್ತಿಹೆಚ್ಚಿಸುವ ಅಗಸೆ**FLAX SEEDS*

*ರೋಗ ನಿರೋಧಕ ಶಕ್ತಿಹೆಚ್ಚಿಸುವ ಅಗಸೆ*
*FLAX SEEDS*

ಅಗಸೆ ಬೀಜ

ಊಟದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಸಮನಾಗಿ, ಸಮಯಕ್ಕೆ ಸರಿಯಾಗಿ ದೇಹದಲ್ಲಿ ಬೆರೆತರೆ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಆದರೆ ಈಗಿನ ಒತ್ತಡದ ಬದುಕಿನಲ್ಲಿ ಪೌಷ್ಟಿಕ ಆಹಾರವನ್ನು ಮರೆತಿದ್ದೇವೆ. ನಮ್ಮ ಪೂರ್ವಜರು ‘ಮೆಂತ್ಯೆ ತಿಂತಿಂದ್ರೆ, ರೋಗಕ್ಕೆ ಅಂತ್ಯ’ ಎನ್ನುತ್ತಿದ್ದರು. ಮೆಂತ್ಯೆಯಂತಹ ಪೌಷ್ಟಿಕಾಂಶವಿರುವ, ಆರೋಗ್ಯ ಸುಧಾರಿಸುವ ಧಾನ್ಯ, ಕಾಳುಗಳು, ಬೀಜಗಳು ನಮ್ಮ ಸುತ್ತಮುತ್ತಲಿವೆ.

ಅವುಗಳ ಸಮರ್ಪಕ ಬಳಕೆ ಗೊತ್ತಿರಬೇಕು ಅಷ್ಟೆ. ಆಧುನಿಕ ಸಿದ್ಧ ಆಹಾರ, ಜಂಕ್‌ ತಿನಿಸಿನ ಹಾವಳಿಯಲ್ಲಿ ಮೂಲೆ ಗುಂಪಾಗಿರುವ ಹಲವಾರು ಪೌಷ್ಟಿಕಾಂಶಯುಕ್ತ ಕಾಳುಗಳಲ್ಲಿ ಅಗಸೆಯೂ ಒಂದು ಎನ್ನಬಹುದು. ಭೂಮಿಯಲ್ಲಿರುವ ತೃಣಧಾನ್ಯಗಳಲ್ಲಿ ಮೊದಲ ಸ್ಥಾನ ಮೆಂತ್ಯೆಯಾದರೆ, 2ನೇ ಸ್ಥಾನ ಅಗಸೆ ಬೀಜದ್ದು.

ಅಗಸೆ ಲೈನಸಿಯೆ ಸಸ್ಯ ಕುಲಕ್ಕೆ ಸೇರಿದೆ. ಅಗಸೆ, ಚೊಗಚೆ, ಬಕಪುಷ್ಪ ಮುಂತಾದ ಹೆಸರುಗಳಿಂದ ಕರೆಯಲಾಗುವ ಇದು ಸುಮಾರು 25– 30 ಅಡಿಗಳಷ್ಟು ಬೆಳೆಯುತ್ತದೆ. ಸಸ್ಯವು ಬರ ನಿರೋಧಕವಾಗಿದ್ದು ಅಲ್ಪ ನೀರಿನಲ್ಲೂ ಹುಲುಸಾಗಿ ಬೆಳೆಯಬಲ್ಲದು. ನೆಟ್ಟ ಮೊದಲ ಐದಾರು ತಿಂಗಳು ಚೆನ್ನಾಗಿ ಆರೈಕೆ ಮಾಡಬೇಕು. ಮಳೆಯ ಏರಿಳಿತಗಳಿಗೆ ಹೊಂದಿಕೊಂಡು, ಕಡು ಬೇಸಿಗೆಯಲ್ಲೂ ಬೆಳೆಯುವ ಸಸ್ಯವಿದು. ಒಮ್ಮೆ ಬೆಳೆದರೆ ಬಹಳ ವರ್ಷಗಳವರೆಗೂ ಫಲವನ್ನು ನೀಡುತ್ತದೆ. ಮಧ್ಯಮ ಗಾತ್ರದ ಪೊದೆಯಂತೆ ಬೆಳೆಯುವ ಈ ಸಸ್ಯವು ಚಿಕ್ಕ ಎಲೆಗಳನ್ನು ಹೊಂದಿದ್ದು ನೀಲಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಇದರ ಕಾಂಡದಿಂದ ನಾರನ್ನು ತೆಗೆದು ಬಟ್ಟೆ (ಲಿನನ್‌ ಬಟ್ಟೆ) ಹಾಗೂ ಹಗ್ಗಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ.

*ಊಟದಲ್ಲಿ ಎಲೆ, ಹೂವು ಬಳಕೆ*

ಅಗಸೆ ಹೂ, ಎಲೆ ಮತ್ತು ಕಾಯಿಗಳನ್ನು ದಿನನಿತ್ಯದ ಆಹಾರವಾಗಿ ಬಳಸಬಹುದು. ಅಗಸೆ ಸೊಪ್ಪು ಮತ್ತು ಹುರುಳಿಕಾಳಿನ ಬಸ್ಸಾರು ಬಯಲುಸೀಮೆಯಲ್ಲಿ ಬಹಳ ಜನಪ್ರಿಯ. ಅಗಸೆ ಹೂವುಗಳಿಂದ ಸಾರು, ಪಲ್ಯ ಮಾಡುವುದರ ಜೊತೆಗೆ ಪರೋಟ ಕೂಡ ಮಾಡಬಹುದು. ಸೊಪ್ಪು ಮತ್ತು ಹೂಗಳಲ್ಲಿ ಪ್ರೊಟೀನ್, ಜೀವಸತ್ವ ಎ, ಶರ್ಕರ– ಪಿಷ್ಟ ಹಾಗೂ ಕಬ್ಬಿಣದ ಅಂಶಗಳಿದ್ದು, ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.

ಮಹಿಳೆಯರು ಋತುಸ್ರಾವ ನಿಲ್ಲುವ ಹಂತದಲ್ಲಿ ಅಗಸೆ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಆ ಸಮಯದಲ್ಲಿ ಅವಶ್ಯವಿರುವ ಪೋಷಕಾಂಶಗಳು ದೊರೆಯುತ್ತವೆ. ಈ ಸಸ್ಯದ ಬೀಜ ಮತ್ತು ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ನಿಯಮಿತವಾಗಿ ಸೇವಿಸುವುದರಿಂದ ರೋಗಗಳು ಬಾರದಂತೆ ತಡೆಗಟ್ಟಬಹುದು. ಜೀರ್ಣಶಕ್ತಿಯನ್ನು ವೃದ್ಧಿಸುವುದಲ್ಲದೇ ಮಲಬದ್ಧತೆಯನ್ನು ನಿವಾರಿಸಬಹುದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಗಸೆ ಬೀಜದಲ್ಲಿ ಕ್ಯಾಲ್ಸಿಯಂ ಕೂಡ ಹೇರಳವಾಗಿದೆ. 

*ವಿವಿಧ ಕಾಯಿಲೆಗಳಿಗೆ..*

*ಕ್ಯಾನ್ಸರ್‌ಗೆ:* ಇದರಲ್ಲಿ ರೋಗ ನಿರೋಧಕ ಗುಣವಿರುವುದರಿಂದ ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಕೆಲವುಮಟ್ಟಿಗೆ ರಕ್ಷಣೆ ಪಡೆಯಬಹುದು. ಬೀಜದಲ್ಲಿರುವ ಲಿಗ್ನನಸ್‌ ಎಂಬ ರಾಸಾಯನಿಕಕ್ಕೆ ಸ್ತನ ಕ್ಯಾನರ್‌ ವಿರುದ್ಧ ಹೋರಾಡುವ ಗುಣವಿದೆ.

*ಆರೋಗ್ಯಕರ ಹೃದಯಕ್ಕೆ:* ಉರಿಯೂತವನ್ನು ಕಡಿಮೆ ಮಾಡುವ ಮತ್ತು ಹೃದಯ ಬಡಿತವನ್ನು ಸಾಮಾನ್ಯ ಮಾಡುವ ಮೂಲಕ ಹೃದಯದ ರಕ್ತನಾಳಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಅಧ್ಯಯನದ ಪ್ರಕಾರ ಇದರಲ್ಲಿರುವ ಒಮೆಗಾ-3 ರಕ್ತನಾಳ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ.

*ಮಧುಮೇಹಕ್ಕೆ:* ಸಕ್ಕರೆ ಕಾಯಿಲೆ ಇರುವವರು, ದಿನಾ ಅಗಸೆ ಬೀಜ ತಿನ್ನುವುದರಿಂದ ಅದರಲ್ಲಿನ ಲಿಗ್ನನಸ್ ಅಂಶ ರಕ್ತದ ಸಕ್ಕರೆ ಮಟ್ಟವನ್ನು ಸುಧಾರಿಸುತ್ತವೆ. ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನನಸ್ ಕೆಲವೊಂದು ಊರಿಯೂತಕಾರಿ ಅಂಶಗಳು ದೇಹದಲ್ಲಿ ಬಿಡುಗಡೆಯಾಗದಂತೆ ತಡೆಯುತ್ತವೆ. ರಕ್ತನಾಳದಲ್ಲೂ ಉರಿಯೂತ ಕಡಿಮೆ ಮಾಡುವ ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವುದನ್ನು ತಡೆಯುತ್ತದೆ.

*ತ್ವಚೆಗೆ:* ಬೀಜದಲ್ಲಿನ ಎಣ್ಣೆ ಅಂಶವು ಚರ್ಮ ಕೆಂಪಾಗುವುದು, ಉರಿ- ತುರಿಕೆಯಾಗುವುದನ್ನು ತಪ್ಪಿಸುತ್ತದೆ. ಮೈ ಚರ್ಮ ಮೃದುವಾಗಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚರ್ಮಕ್ಕೆ ಸೂರ್ಯನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸುತ್ತದೆ. ದಿನಾ ಒಂದೆರಡು ಚಮಚ ಅಗಸೆ ಬೀಜ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳಾಗುವುದಿಲ್ಲ. ಕೂದಲುದುರುವುದು ನಿಲ್ಲುತ್ತದೆ. ಅಗಸೆ ಎಣ್ಣೆ ತಲೆಗೆ ಹಚ್ಚುವುದರಿಂದ ಹೊಟ್ಟು ಕಡಿಮೆಯಾಗುತ್ತದೆ.
ಅಗಸೆ ಬೀಜಗಳ ಸೇವನೆಯು ಹೃದಯಾಘಾತ, ಪಾರ್ಶ್ವವಾಯು ತಡೆಯಲು ಸಹಕಾರಿಯಾಗುತ್ತದೆ.

* ಅಗಸೆ ಬೀಜಗಳಲ್ಲಿ ಒಮೆಗಾ -03 ಇದ್ದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

* ಈ ಬೀಜಗಳ ಸೇವನೆ ಸುಕ್ಕುಗಳನ್ನು ತೆಗೆದು ಚರ್ಮಕ್ಕೆ ಕಾಂತಿ ನೀಡುತ್ತದೆ.

* ಮಲಬದ್ಧತೆ ನಿವಾರಣೆಗೆ ಬೀಜಗಳ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

* ಅಗಸೆ ಬೀಜಗಳು ಮೂಳೆಗಳ ಸವೆತ ತಡೆಗಟ್ಟುತ್ತದೆ ಮತ್ತು ವಾತ ನಿವಾರಕವಾಗಿ ಕೆಲಸ ಮಾಡುತ್ತದೆ.

* ಅಗಸೆ ಎಲೆ ಮತ್ತು ಹೂವುಗಳ ಪಲ್ಯ ಮಾಡಿ ತಿನ್ನುವುದರಿಂದ ಇರುಳುಗಣ್ಣುರೋಗ ನಿವಾರಣೆಯಾಗುತ್ತದೆ.

*ಅಗಸಿ ಬೀಜಗಳನ್ನು ಹುರಿಯದೇ ಪೌಡರ್ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಶೋಧಿಸಿ ಕುದಿಸಿ ಆರಿಸಿದ ನಂತರ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಕುಡಿದರೆ ಶ್ವಾಸಕೋಶ ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

*ಚರ್ಮವ್ಯಾಧಿ, ಮೂಲವ್ಯಾಧಿ, ಮಧುಮೇಹ, ಬೊಜ್ಜಿಗೆ ಇದನ್ನು ಬಳಸಬಹುದು. ಅಗಸೆ ಬೀಜದ ತೈಲವನ್ನು ಲೇಪಿಸುವುದರಿಂದ ಗಾಯಗಳು ಬೇಗ ಗುಣವಾಗುತ್ತವೆ’*  ಎನ್ನುತ್ತಾರೆ ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್.

*ಆಯುರ್ವೇದದಲ್ಲಿ..*

ಐದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಆಯುರ್ವೇದದ ಗ್ರಂಥಗಳಲ್ಲೂ ಅತಸಿ ಎಂದು ಈ ಸಸ್ಯದ ಉಲ್ಲೇಖ ದೊರೆಯುತ್ತದೆ. ಆಯುರ್ವೇದದ ಮೂಲಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ ಹಾಗೂ ಭಾವಪ್ರಕಾಶ ನಿಘಂಟುಗಳಲ್ಲಿ ಇದರ ಔಷಧೀಯ ಗುಣಗಳನ್ನು ವಿವರಿಸಲಾಗಿದೆ. 

(ಲೇಖಕಿ ಆಹಾರ ತಜ್ಞೆ)

ಉತ್ತರ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಬಿಳಿಜೋಳದ ರಾಶಿಯ ಕೊನೆಯಲ್ಲಿ ಅಗಸೆ ಹಾಗೂ ಕುಸಿಬೆ ರಾಶಿ ಮಾಡುತ್ತಾರೆ. ಏಕೆಂದರೆ ಈ ಎರಡೂ ಬೆಳೆಗಳ ಹೊಟ್ಟು ದನ ಕರುಗಳಿಗೆ ಉಪಯೋಗವಿಲ್ಲ.
ಈ ಅಗಸಿ ಹುಲ್ಲು ಜಿಗುಟಾಗಿದ್ದು ದನಗಳು ತಿಂದರೆ ಗಂಟಲಲ್ಲಿ ಸಿಕ್ಕು ಸಾಯುವ ಸಂಭವ ಹೆಚ್ಚು. ಅದಕ್ಕಾಗಿ ರಾಶಿಯ ನಂತರ ಸುಟ್ಟು ಬಿಡುತ್ತಾರೆ.

*ಹೇಗೆ ಸೇವಿಸಬೇಕು?*

ಅಗಸೆ ಬೀಜ ಜೀರ್ಣವಾಗುವುದು ಕಷ್ಟ. ಹೀಗಾಗಿ ಇದನ್ನು ಬಿಸಿಲಿಗೆ ಒಣಗಿಸಿ, ಚೆನ್ನಾಗಿ ನೆನೆಸಿ ಬಳಸಬೇಕು. ಸೇವಿಸುವಾಗಲೂ ಚೆನ್ನಾಗಿ ಅಗಿದು ನುಂಗಬೇಕು. ಇದನ್ನು ಪುಡಿ ಮಾಡಿಟ್ಟುಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತಿಂದು ನೀರು ಕುಡಿಯಬಹುದು. ಅಗಸೆ ಚಟ್ನಿಪುಡಿ ಮಾಡಿಕೊಂಡು ಸೇವಿಸಬಹುದು. ಪುಡಿಯನ್ನು 15 ದಿನಗಳಿಗಾಗುವಷ್ಟು ಮಾತ್ರ ತಯಾರಿಸಿಕೊಳ್ಳಿ. ಇಲ್ಲದಿದ್ದರೆ ಹುಳಿ ಬಂದಂತಾಗಿ ಔಷಧೀಯ ಗುಣ ಕಡಿಮೆಯಾಗಬಹುದು. ಒಂದು ದಿನಕ್ಕೆ ಅಗಸೆ ಬೀಜವನ್ನು ಎರಡು ಚಮಚದಷ್ಟು ತಿಂದರೆ ಸಾಕು,
dgnsgreenworld

 

ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!

▬▬▬▬▬ஜ۩۞۩ஜ▬▬▬▬
  * *ಶುಭೋದಯ ಆತ್ಮೀಯರೆ*   
▬▬▬▬▬ஜ۩۞۩ஜ▬▬▬▬
ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!                                                                "ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!
ತಾಕತ್ತು ಮಾತಿನಲ್ಲಿರಬೇಕೇ ವಿನಃ  ... ಮಾತನಾಡುವ ಧ್ವನಿಯಲ್ಲಲ್ಲ....
ಮಳೆಯಿಂದ ಹೂ ಅರಳುತ್ತೇ ವಿನಃ ... ಪ್ರವಾಹದಿಂದಲ್ಲ... ನೆನಪಿರಲಿ..                                                                                                                                                            
▬▬▬▬▬ஜ۩۞۩ஜ▬▬▬▬
        *ಧಮೋ೯ ರಕ್ಷತಿ ರಕ್ಷಿತ:* 
▬▬▬▬▬ஜ۩۞۩ஜ▬▬▬▬

ಅಹಂಕಾರವು ತನ್ನ ಸೇವೆಯನ್ನೇ ಬಯಸುತ್ತದೆ.ಆತ್ಮವು ಇತರರ ಸೇವೆಮಾಡಲು ಪ್ರಯತ್ನಿಸುತ್ತದೆ.

🌻🍂🦜🌷🐿🍂🌻

ಅಹಂಕಾರವು ತನ್ನ ಸೇವೆಯನ್ನೇ ಬಯಸುತ್ತದೆ.
ಆತ್ಮವು ಇತರರ ಸೇವೆಮಾಡಲು ಪ್ರಯತ್ನಿಸುತ್ತದೆ.

ಅಹಂಕಾರವು ಬಾಹ್ಯ ಪ್ರಪಂಚದ ಮಾನ್ಯತೆಯನ್ನು ಇಚ್ಛಿಸುತ್ತದೆ.
ಆತ್ಮವು ಒಳಗಿನ ನಿಜ ಸತ್ಯವನ್ನರಿಯಲು ಬಯಸುತ್ತದೆ.

ಅಹಂಕಾರವು ಜೀವನವನ್ನು ಒಂದು ಸ್ಪರ್ಧೆಯೆಂದು ಎಣಿಸುತ್ತದೆ
ಆತ್ಮವು ಈ ಜೀವನವು ದೊರೆತ ಒಂದು ಕೊಡುಗೆಯೆಂದು ಪರಿಗಣಿಸುತ್ತದೆ

ಅಹಂಕಾರವು "ನಾನು" ಎಂಬುದನ್ನು ರಕ್ಷಿಸಿಕೊಳ್ಳಲು ಹೆಣಗುತ್ತದೆ
ಆತ್ಮವು ಮತ್ತೊಬ್ಬರನ್ನು ರಕ್ಷಿಸಲು ಬಯಸುತ್ತದೆ

ಅಹಂಕಾರವು ಬಾಹ್ಯವನ್ನು ಬಯಸುತ್ತದೆ
ಆತ್ಮವು ಅಂತರ್ಮುಖಿಯಾಗಿರಲು ಇಚ್ಛಿಸುತ್ತದೆ

ಅಹಂಕಾರವು ಕೊರತೆಯನ್ನು ಅನುಭವಿಸುತ್ತದೆ
ಆತ್ಮವು ಸಮೃದ್ಧತೆಯನ್ನು ಅನುಭವಿಸುತ್ತದೆ

ಅಹಂಕಾರವು ನಶ್ವರ 
ಆತ್ಮವು ಅನಂತ

ಅಹಂಕಾರವು ಕಾಮತೃಷೆಯ ಒಳಸೆಳೆತಕ್ಕೆ ಬಲಿಯಾಗುತ್ತದೆ
ಆತ್ಮವು ಪ್ರೇಮದ ಸೆಳೆತಕ್ಕೆ ಒಳಗಾಗುತ್ತದೆ

ಅಹಂಕಾರವು ಜ್ಞಾನವನ್ನು ಗಳಿಸಲು ಬಯಸುತ್ತದೆ
ಆತ್ಮವು ಜ್ಞಾನವೇ ಆಗಿದೆ

ಅಹಂಕಾರವು ಬಹುಮಾನವನ್ನು ಇಷ್ಟಪಡುತ್ತದೆ
ಆತ್ಮವು ತನ್ನ ಯಾತ್ರೆಯ ಆನಂದವನ್ನು ಅನುಭವಿಸುತ್ತದೆ

ಅಹಂಕಾರವು ನೋವಿಗೆ ಕಾರಣವಾಗುತ್ತದೆ
ಆತ್ಮವು ಶಮನದ ಕಾರಣಕ್ಕೆ ಕಾರಕವಾಗಿದೆ

ಅಹಂಕಾರವು ದೈವತ್ವವನ್ನು ತಿರಸ್ಕರಿಸುತ್ತದೆ
ಆತ್ಮವು ದೈವತ್ವವನ್ನು ಬಿಗಿದಪ್ಪುತ್ತದೆ

ಅಹಂಕಾರವು ಉಬ್ಬಿಹೋಗಲು ಬಯಸುತ್ತದೆ
ಆತ್ಮವು ಪೂರ್ಣತೆಯೊಡನೆ ಅನಂತವಾಗಿದೆ

ಅಹಂಕಾರವು "ನಾನೇ" ಎಂದುಕೊಳ್ಳುತ್ತದೆ
ಆತ್ಮವು ಎಲ್ಲರಲ್ಲೂ ತನ್ನನ್ನೇ ಕಾಣುತ್ತದೆ

dgnsgreenworld

🌻🍂🌿🐿🌿🍂🌻

Thursday, December 24, 2020

ಒಂದು ಕಲ್ಲು ಶಿಲೆಯಾದರೆ ಕೈ ಮುಗಿದು ‌ ನಮಿಸುತ್ತಾರೆ

ಒಂದು  ಕಲ್ಲು  ಶಿಲೆಯಾದರೆ   ಕೈ  ಮುಗಿದು ‌ ನಮಿಸುತ್ತಾರೆ..*
*ಮೆಟ್ಟಿಲಾದರೆ  ತುಳಿದು  ಚಪ್ಪಲಿ  ಬಿಡುತ್ತಾರೆ...*
*ನಮ್ಮ  ಜೀವನವು  ಸಹ  ಹಾಗೆ*
*ಸಾದಿಸಿದರೆ  ನಮ್ಮವನೆಂದು  ಹೊಗಳುತ್ತಾರೆ...*
*ಸೋತರೆ  ನಮ್ಮವರೆ   ನಮ್ಮನ್ನು ಹಿಯಾಳಿಸಿ ನಗುತ್ತಾರೆ..*
 *ಶಿಸ್ತಿನ ಹಾದಿಯಲ್ಲಿ ನಡೆದಾಗ ಮಾತ್ರ ಅಪರೂಪದ ವ್ಯಕ್ತಿ ಆಗಬಲ್ಲಿರಿ ಶಿಸ್ತು ಯಶಸ್ಸಿನ ಗುಟ್ಟು* 
 ಸಾಧನೆಗೆ ವಿಫುಲವಾದ ಅವಕಾಶವಿದೆ ಉಪಯೋಗಿಸಿಕೊಂಡು ಸಾಧಿಸಿ ಸಾಧಕರಾಗೋಣ.
ಸ್ವಂತಕ್ಕಾಗಿ ಬದುಕಿದವರನ್ನ ಪ್ರಪಂಚ ಬಹಳ ಬೇಗ ಮುಲಾಜಿಲ್ಲದೆ ಮರೆತು ಬಿಡುತ್ತೆ. ಸಮಾಜಕ್ಕಾಗಿ ಬದುಕಿದರೆ ಇತಿಹಾಸವಾಗಿ ಸದಾ ನೆನಪಿಡುತ್ತೆ

        🙏🏽 *ಶುಭದಿನದ ಶುಭೋದಯ*🙏🏻

ನಿಂದನೆ" ಬದಲಾಗಿ, "ಸ್ಪಂದನೆ" ಇರಲಿ

*"ನಿಂದನೆ" ಬದಲಾಗಿ, "ಸ್ಪಂದನೆ" ಇರಲಿ*
 ‌        ‌                                         ‌     ‌     ‌                                                                                                                                                  ಒಮ್ಮೆ ಒಬ್ಬಾತ ಮೂರು ದಿನಗಳ ಕಾಲ ಕಷ್ಟಪಟ್ಟು ಒಂದು ಅದ್ಭುತವಾದ ಚಿತ್ರಕಲೆಯನ್ನು ರಚಿಸಿದ. ಆ ಚಿತ್ರಕಲೆ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯಬೇಕೆಂದು ಆಸೆಪಟ್ಟ.  ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ ಚಿತ್ರಕಲೆ ಇದು. ಇದರಲ್ಲಿ  ಲೋಪಗಳು ನಿಮಗೆ ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ ಒಂದು  '×' ಚಿನ್ಹೆ ಬರೆಯಿರಿ " ಎಂದು ಅದರಲ್ಲಿತ್ತು.  
ಸಂಜೆಯ ಹೊತ್ತಿಗೆ ಆ ಚಿತ್ರಕಾರ ಪುನಃ ಬಂದು ಚಿತ್ರವನ್ನು ನೋಡಿದ.  ಆತನಿಗೆ ಒಮ್ಮೆಲೇ ಅಳು ಬಂದಿತು. ಕಾರಣ ಏನಂದರೆ ಆ ಚಿತ್ರದ ತುಂಬಾ '×' ಚಿನ್ಹೆಗಳೇ ತುಂಬಿ ಹೋಗಿತ್ತು. .
ಚಿತ್ರಕಾರ ಅಳುತ್ತಾ ತನಗೆ ಚಿತ್ರಕಲೆ ಹೇಳಿಕೊಟ್ಟ ಗುರುವಿನ ಬಳಿಗೆ ಬಂದು ಈ ರೀತಿ ಹೇಳಿದ  "ನಾನು ಚಿತ್ರಕಲೆ ಮಾಡಲು ಸಾಧ್ಯವಿಲ್ಲ ಎಂದು ಇವತ್ತು ನನಗೆ ತಿಳಿಯಿತು" ಎಂದು ವಿಷಾದಿಸಿದ.  ಗುರುಗಳು ಆತನಿಗೆ ಸಮಾಧಾನ ಮಾಡಿ ಮತ್ತೆ  ಆದೇ ಚಿತ್ರಕಲೆ  ಅನ್ನು ಪುನಃ ರಚನೆ ಮಾಡು ಎಂದು ಹೇಳಿದರು. 
ಮತ್ತೊಮ್ಮೆ ಆ ಚಿತ್ರಕಲೆ ಬರೆದು ತಂದನು.  ಈ ಬಾರಿ ಕೂಡ ಅದೇ ಸ್ಥಳದಲ್ಲಿ ಇಟ್ಟು ಕೆಳಗೆ ಹೀಗೆ ಬರೆಯಲು ಗುರುಗಳು ಸೂಚಿಸಿದರು..."ನಾನು ಬರೆದ ಮೊದಲ ಪೇಂಟಿಂಗ್ ಇದು.  ಇದರಲ್ಲಿ ನಿಮಗೆ ಲೋಪಗಳು ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ ಕೆಳಗೆ ಇಟ್ಟಿರುವ ಕುಂಚ ಹಾಗೂ ವರ್ಣಗಳನ್ನು ಉಪಯೋಗಿಸಿ ಸರಿ ಮಾಡಿ"  ಎಂದು. ಗುರುಗಳು ಹೇಳಿದಂತೆ ಬರೆದು ಅಲ್ಲಿಟ್ಟನು. ಒಂದು ವಾರ ಕಾಲ ಕಳೆದರೂ... ಒಬ್ಬರಾದರೂ ಅದರಲ್ಲಿರುವ ಲೋಪಗಳನ್ನು ಸರಿಪಡಿಸಲಿಲ್ಲ..
ಆತನಿಗೆ  ಆಶ್ಚರ್ಯವಾಯಿತು. ತಪ್ಪುಗಳನ್ನು ಕಂಡುಹಿಡಿದವರು ಅದನ್ನು ಸರಿಪಡಿಸಿ ಎಂದು ಹೇಳಿದಾಗ ಒಬ್ಬರಿಂದಲೂ ಆಗಲಿಲ್ಲವೇಕೆ..? ಯೋಚಿಸಿದನು. ನಂತರ ಅವನಿಗೆ ಅರ್ಥವಾಯಿತು...ಇದು ನಿಮಗೂ ಅರ್ಥವಾಗಿದೆಯೆಂದೂ ನಂಬುತ್ತೇನೆ. *ನಮ್ಮಲ್ಲಿ ತಪ್ಪುಗಳನ್ನು ತೋರಿಸಲು ಅನೇಕರು ಇದ್ದಾರೆ. ಆದರೆ ನಮ್ಮನ್ನು ಸರಿಪಡಿಸಲು ಯಾರೂ ಮನಸ್ಸು ಮಾಡುವುದಿಲ್ಲ. ಅದು ಅವರಿಂದಾಗಿ ಆಗದು...!!*
ಜನರ ನಿಂದನೆಗಳಿಗೆ ಅವಮಾನಗಳಿಗೆ  ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸ್ವಾಭಿಮಾನ, ಆತ್ಮವಿಶ್ವಾಸದೊಂದಿಗೆ ಈ ಜಗತ್ತನ್ನು ನೋಡುತ್ತಾ ಮುಂದೆ ಸಾಗಿರಿ.

 ಕೃಷ್ಣಾರ್ಪಣಮಸ್ತು...🙏💐

Friday, December 18, 2020

Dream Big. Set Goals. Work Hard.Never ever give up in life.

2 stories
1. Yahoo refused Google
2. Nokia refused Android

Moral:
1. Update yourself with time, else you will become obsolete
2. Taking no risk is the biggest risk. Take risks and adopt new technologies

2 more stories:
1. Google acquired YouTube and Android
2. Facebook acquired Instagram and WhatsApp

Moral
1. Become so powerful that your enemies become your allies
2. Grow fast, become big, and then eliminate competition

2 more stories:
1. Barack Obama was an ice cream seller
2. Elon Musk was a worker in a lumber mill

Moral:
1. Don't judge people based on their past jobs
2. Your present doesn't decide your future, your courage and hard work does

2 more stories:
1. Colonel Sanders created KFC at the age of 65
2. Jack Ma who was rejected by KFC founded Alibaba

Moral:
1. Age is just a number - you can be successful at any age
2. Never ever give up in life - only those who never give up win

2 final stories:
1. Owner of Ferrari insulted a tractor maker
2. The tractor maker created Lamborghini

Moral:
1. Never underestimate or disrespect anyone
2. Success is the best revenge

You can be successful at any age and from any background.

Dream Big. Set Goals. Work Hard.

Never ever give up in life.

Thursday, December 17, 2020

ಗಂಟೆಗಟ್ಟಲೆ ಕ್ಯೂನಲ್ಲಿ ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.

#ದೇವರಿಗೆ #ಬೆಲೆ #ಕಟ್ಟುವವರು #ನಾವೇ

ಗಂಟೆಗಟ್ಟಲೆ ಕ್ಯೂನಲ್ಲಿ  ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.

ಓ ದೇವರೇ! ದುಡ್ಡು ಕೊಟ್ಟ ಭಕ್ತರಿಗೆ ಹತ್ತಿರದಿಂದ ದರ್ಶಿಸಲು  ಬೇರೊಂದು ಸಾಲು.ದುಡ್ಡುಕೊಡದ ಭಕ್ತರಿಗೆ ದೂರದ ದರ್ಶನಕ್ಕಾಗಿ ಬೇರೆ 
 ದೊಡ್ಡ ಸಾಲು. ಇದಾವ ನ್ಯಾಯ ಭಗವಂತನೇ?

ಆ ದೇವರು ನಕ್ಕು ಉತ್ತರಿಸುತ್ತಾರೆ.

ನಾನು ತಂದೆತಾಯಿಗಳು ದೈವಸಮಾನ ಎಂದೆ. ನೀವು  ಅವರನ್ನು ಅದೇ ರೀತಿ ಪರಿಗಣಿಸಿ ಗೌರವಿಸುತ್ತೀರಾ?

ಗುರು ಬ್ರಹ್ಮ ಗುರುಃ ವಿಷ್ಣು ಗುರುಸಾಕ್ಷಾತ್ ಪರಬ್ರಹ್ಮ ಎಂದು ಹೇಳಿದೆ. ನೀವು ಅದೇ ರೀತಿ ಗುರುಗಳನ್ನು ಗೌರವಿಸುತ್ತೀರಾ?

ಜನಸೇವೆಯೇ ಜನಾರ್ದನ  ಸೇವೆಎಂದು ಹೇಳಿದೆ. ನೀವು ಅದೇರೀತಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತೀರಾ?

ಇಲ್ಲಿ ಅಲ್ಲಿ ಎನ್ನ ದೆ ಎಲ್ಲೆಲ್ಲೂ ನಾನೇ ಇದ್ದೇನೆ.ಎಲ್ಲಿ ಹುಡುಕಿದರೂ ನಾನೇ ಇದ್ದೇನೆ. ನಿನ್ನಲ್ಲಿಯೂ, ಎಲ್ಲರಲ್ಲಿಯೂ ನಾನೇ ಇರುವೆ. ನೀನು ನಂಬಲಿಲ್ಲ. 

ನನ್ನ ಮೂರ್ತಿಯನ್ನು ದೇವಸ್ಥಾನದಲ್ಲಿರಿಸಿ, ದರ್ಶನದ ವೇಳೆಯನ್ನೂ, ದರ್ಶನದ ದರವನ್ನು, ಯಾರು ಎಷ್ಟು ಕಾಲ, ಹೇಗೆ ದರ್ಶನ ಮಾಡಬೇಕೆಂದು, ನೀನೇ ನಿರ್ಧರಿಸಿದೆ. ವಿವಿಧ ಪೂಜಾವಿಧಿ,ವಿಧಾನಗಳನ್ನೂ, ಅವುಗಳ ದರಗಳನ್ನೂಸಹ ನೀನೇ ನಿರ್ಧರಿಸಿರುವೆ. 

ಎಲ್ಲವನ್ನೂ ನೀನೇಮಾಡಿ ನನ್ನನ್ನು ಕೇಳುವುದು ಯಾವ ನ್ಯಾಯವಯ್ಯಾ?

ಹುಚ್ಚ ಮಾನವಾ, ನಿಜವಾಗಿಯೂ ನನ್ನನ್ನು ಕಾಣುವ ಹಂಬಲವಿದ್ದರೆ, ಪಶು,ಪಕ್ಷಿ,ವೃಕ್ಷಗಳಲ್ಲಿ ಕಾಣು. ನಿನ್ನಲ್ಲಿ ಕಾಣು, ಇತರರಿಗೆ ಪ್ರೀತಿಯಿಂದ ಸೇವೆ ಮಾಡುವುದರ ಮೂಲಕ ಎಲ್ಲರಲ್ಲೂ ನನ್ನನ್ನೇ ಕಾಣು. ಮಾತಾ ಪಿತೃಗಳಲ್ಲಿ,ಗುರುಹಿರಿಯರಲ್ಲಿ ಕಾಣು. ನದಿ,ಬೆಟ್ಟ ಗುಡ್ಡ ಗಳಲ್ಲಿ, ಈ ಸುಂದರವಾದ ಪ್ರಕೃತಿಯಲ್ಲಿ ,ಆ ನೀಲಾಕಾಶದಲ್ಲಿ ಕಾಣು. ಕೇವಲ ದೇವಸ್ಥಾನಕ್ಕೆ ಮಾತ್ರ ನನ್ನ ಇರುವಿಕೆಯನ್ನು ಸೀಮಿತಗೊಳಿಸಬೇಡ.
dgnsgreenworld

Tuesday, December 15, 2020

ವಸುದೈವಕುಟುಂಬಕಂ

ವಸುದೈವಕುಟುಂಬಕಂ!
ಓರ್ವ ತಂದೆಯು ಅಂಗಡಿಯಿಂದ ವಿಶ್ವದ ನಕ್ಷೆಯನ್ನು ತಂದಿದ್ದನು. ಅವನ ಸಣ್ಣ ಮಗನು ತಿಳಿಯದೆ ಆ ನಕ್ಷೆಯನ್ನು ಚೂರುಚೂರಾಗಿ ಹರಿದು ಹಾಕಿಬಿಟ್ಟನು. ತಂದೆಗೆ ವಿಪರೀತ ಕೋಪ ಬಂದು ಮಗನ ಮೇಲೆ ರೇಗಾಡಲು ಪ್ರಾರಂಭಿಸಿದನು. ಆದರೆ ಮಗನು ಶಾಂತನಾಗಿ ತಂದೆಗೆ ಹೇಳಿದ, “ಅಪ್ಪ! ನೀವೇನೂ ಚಿಂತಿಸಬೇಡಿ. ನಾನು ಕೆಲವೇ ನಿಮಿಷಗಳಲ್ಲಿ ಈ ನಕ್ಷೆಯನ್ನು ಮತ್ತೆ ಜೋಡಿಸುತ್ತೇನೆ”. ತಂದೆಗೆ ಬಹಳ ಆಶ್ಚರ್ಯ! ಅದು ಹೇಗೆ ಆ ಸಣ್ಣ ಮಗನು ಹರಿದುಹೋಗಿರುವ ವಿಶ್ವನಕ್ಷೆಯನ್ನು ಜೋಡಿಸಬಲ್ಲ?! ಎಂದು
ಮಗ ಅವನ ಕೊಠಡಿಗೆ ಹೋಗಿ, ಕೆಲವು ನಿಮಿಷಗಳಲ್ಲೇ ಹೊರಬಂದು ಸರಿಯಾಗಿ ಜೋಡಿಸಿದ್ದ ವಿಶ್ವದ ನಕ್ಷೆಯನ್ನು ತಂದೆಗೆ ಕೊಟ್ಟನು. ತಂದೆಯು ತನ್ನ ಕಣ್ಣನ್ನು ತಾನೇ ನಂಬದಾದನು. ‘ಅದು ಹೇಗೆ ಇಷ್ಟು ಸ್ವಲ್ಪ ಸಮಯದಲ್ಲಿ ವಿಶ್ವನಕ್ಷೆಯನ್ನು ಜೋಡಿಸಿದೆ?’ ಎಂದು ಕೇಳಲು, ಮಗ ಉತ್ತರಿಸಿದ. ‘ಈ ನಕ್ಷೆಯ ಹಿಂದೆ ಒಂದು ತಂದೆ, ತಾಯಿ, ಮಕ್ಕಳ ಕುಟುಂಬದ ಚಿತ್ರವಿತ್ತು. ನಾನು ಆ ಚಿತ್ರವನ್ನು ಸರಿಯಾಗಿ ಜೋಡಿಸಿ, ಅದನ್ನು ತಿರುಗಿಸಿದೆ. ವಿಶ್ವ ನಕ್ಷೆ ಸಿದ್ಧವಾಗಿತ್ತು!’ ಎಂದು.
ಕುಟುಂಬಗಳು ಒಂದಾಗಿದ್ದರೆ ಮಾತ್ರ ವಿಶ್ವವು ಒಂದಾಗಿರುತ್ತದೆ. ಕುಟುಂಬದಲ್ಲಿ ವಾದ-ವಿವಾದಗಳು, ಘರ್ಷಣೆಗಳು, ಕೋಪ-ತಾಪಗಳಿದ್ದು, ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುತ್ತೇನೆಂದು ಹೊರಡುವುದು ಮೂರ್ಖತನ. ಕುಟುಂಬದ ಸದಸ್ಯರಲ್ಲಿ ಸೌಹಾರ್ದತೆ, ಸಾಮರಸ್ಯ, ಒಗ್ಗಟ್ಟು, ತ್ಯಾಗ ಮನೋಭಾವಗಳಿದ್ದರೆ ಮಾತ್ರ ವಿಶ್ವದಲ್ಲಿ ಸುಖ-ಶಾಂತಿಗಳು ನೆಲೆಸಬಲ್ಲವು.
'ತಂದೆತಾಯಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ' ಎಂಬ ಮಕ್ಕಳ ಮನದ ಮಾತುಗಳೇ ಇಂಗ್ಲೀಷಿನಲ್ಲಿ ಕುಟುಂಬವಾಗಿದೆ. ಅಂದರೆ Father And Mother I Love You ಈ ವಾಕ್ಯದ ಮೊದಲ ಅಕ್ಷರಗಳನ್ನು ಸೇರಿಸಿದರೆ ನಮಗೆ ಸಿಗುವುದು FAMILY ಅಂದರೆ 'ಕುಟುಂಬ!'. ನಾವು ನಮ್ಮ ಕುಟುಂಬದತ್ತ ಗಮನಹರಿಸಿ, ಸಂಬಂಧಗಳನ್ನು ಮಧುರವಾಗಿರಿಸಿಕೊಂಡರೆ, ದೇವರು ಅವನ ಕುಟುಂಬವಾದ ಈ ವಿಶ್ವವನ್ನು ನೋಡಿಕೊಳ್ಳುತ್ತಾನೆ.

ಶ್ರೀಕೃಷ್ಣಾರ್ಪಣಮಸ್ತು

Friday, December 11, 2020

ನೋಟು ತಿರುಗಿ ಗ್ರಾಹಕನ ಕೈಗೇ ಬ೦ತು. ಅದರೆ ಅದು ಸಂಚಾರ ಮಾಡಿದ ದಾರಿಯಲ್ಲಿ ಹಲವು ರೀತಿಯ ಸಾಲವನ್ನು ತೀರಿಸಿತು...

ಒಂದು ಲಾಡ್ಜಿಗೆ ಒಬ್ಬರು ರೂಮ್ ಬುಕ್ ಮಾಡಲು ಬಂದರು. ಅವರಿಗೆ ಮೊದಲು ರೂಮ್ ನೋಡಬೇಕಾಗಿತ್ತು. 
ಅದಕ್ಕೆ ಅಲ್ಲಿನ ಮ್ಯಾನೇಜರ್ ಕೇಳಿದಂತೆ 500 ರೂ. ಡಿಪಾಸಿಟ್ ನೀಡಿ ರೂಮು ನೋಡಲು ತೆರಳಿದರು.

ತನ್ನಲ್ಲಿ ಬಂದ 500 ರೂ. ವನ್ನು ಮ್ಯಾನೇಜರ್ ಕಸ ಗುಡಿಸುವಳನ್ನು ಕರೆದು ಅವಳ ಕಳೆದ ತಿಂಗಳ ಸಂಬಳದ ಬಾಕಿ ನೀಡಿದ.

ಅವಳದನ್ನು ಹತ್ತಿರದ ಕ್ಯಾಂಟಿನ್ ಗೆ ಹೋಗಿ ತನ್ನ ತಿಂಗಳ ಲೆಕ್ಕ ಚುಕ್ತ ಗೊಳಿಸಿದಳು.

ಕ್ಯಾಂಟಿನ್ ನ ಮಾಲಕ ಅದನ್ನು ಅಲ್ಲೇ ಇದ್ದ ಹಾಲಿನವನಿಗೆ ನೀಡಿ ಬಾಕಿಗೆ ಜಮಾ ಮಾಡುವಂತೆ ಹೇಳಿದ.

ಹಾಲಿನವ ಸಂತೋಷದಿಂದ ಲಾಡ್ಜಿನ ಪಕ್ಕದಲ್ಲಿರುವ ಪಶು ವೈಧ್ಯರಲ್ಲಿ ಹೋಗಿ  ಕಳೆದ ವಾರ 2000 ರೂ. ಚಿಲ್ಲರೆ ಇಲ್ಲದ ಕಾರಣ ಔಷದ ಹಣದಲ್ಲಿ 500 ರೂ.ಬಾಕಿ ಕೂಡ ಬೇಕಿತ್ತು ಎಂದು ಹೇಳಿ ಕೊಟ್ಟ.

ವೈದ್ಯ ಕೂಡಲೇ 500 ರೂ. ಲಾಡ್ಜಿನ ಮ್ಯಾನೇಜರರಿಗೆ ನೀಡಿ ತನ್ನ ರೂಮ್ ಬಾಡಿಗೆಯ ಬಾಕಿ ನೀಡಿ ಮುಗುಳ್ನಗೆ ಬೀರಿದ.

ಅಷ್ಟರಲ್ಲಿ ಗ್ರಾಹಕ ತನಗೆ ರೂಮ್ ಇಷ್ಟವಾಗಿಲ್ಲ ಎಂದು ತಾನು ನೀಡಿದ ತನ್ನ 500 ರೂ. ಮ್ಯಾನೇಜನಿ೦ದ ಹಿಂಪಡೆದ.

ನೋಟು ತಿರುಗಿ ಗ್ರಾಹಕನ ಕೈಗೇ ಬ೦ತು. ಅದರೆ ಅದು ಸಂಚಾರ ಮಾಡಿದ ದಾರಿಯಲ್ಲಿ ಹಲವು ರೀತಿಯ ಸಾಲವನ್ನು ತೀರಿಸಿತು....

 ಜೀವವಿರದ ಒಂದು ಬೆಲೆಯುಳ್ಳ ಕಾಗದದ ಚೂರು ಎಲ್ಲರ ಸಾಲಗಳನ್ನು ತೀರಿಸಿ ಅವರ ಮೊಗದಲ್ಲಿ ನಿಶ್ಚಿಂತೆಯ ನಗುವನ್ನು ತರಿಸಲು ಕಾರಣವಾದರೆ....  ಜೀವವಿರುವ ನಾವುಗಳು ಎಷ್ಟು ಮೊಗಗಳಲ್ಲಿ ನಗೆಯನ್ನು ತರಿಸಲು ಕಾರಣವಾಗಿದ್ದೇವೆ.... ಯೋಚಿಸುವ ಪರಿ ನಮಗೆ ಬಿಟ್ಟದ್ದು . ಸಿಟ್ಟು, ಸೇಡು, ಹಠ, ಅಹಂಕಾರ, ಅಸಹಕಾರ,ದರ್ಪ ದೂರವಿಟ್ಟು ಬುದ್ದಿವಂತಿಕೆಯಿಂದ ಬದುಕಿನ ಕಲೆ ಕಂಡುಕೊಂಡರೆ ನಾವೇ ಸೃಷ್ಟಿಸಿದ ನೋಟಿನ(ಹಣ) ಕಿಂತಾ ಎತ್ತರಕ್ಕೆ ಬೆಳೆಯಬಹುದು...👏👏🙏💐
ಸುಂದರವಾದ ಸಣ್ಣಕಥೆ...ಆದರೆ ಮಾನವೀಯತೆಗಿಂತ ಸುಂದರವಾದ ಮೌಲ್ಯ ಅದ್ಭುತವಾದುದು..💐🌹🌺

 ಭಗವಂತನಾದ  ಶ್ರೀ ಕೃಷ್ಣನು ಹೇಳಿದ್ದು ಇದೆ ಅಲ್ಲವೆ 🙏🙏

ಹೃದಯ ತಜ್ಞರ ಸಲಹೆಗಳು

*ಹೃದಯ ತಜ್ಞರ ಸಲಹೆಗಳು‌...!*

ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.

೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.

೨. ಊಟದ ೩೦ ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.

೩. ಸ್ನಾನ ಮಾಡುವ ಮೊದಲು,  ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)

೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)

೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.

೬. ಕಾಲಿನ ಸ್ನಾಯುಗಳು  ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.

*ಓರ್ವ ಶ್ವಾಸಕೋಶ ಪರಿಣಿತ ವೈದ್ಯರ ಹೇಳಿಕೆಯ ಅನುಸಾರ, ಪ್ರತಿಯೊಬ್ಬರೂ ಹತ್ತು ಜನರಿಗೆ ಈ ಸಂದೇಶವನ್ನು ಕಳಿಸಿದರೆ, ಕನಿಷ್ಟಪಕ್ಷ ಒಂದು ಜೀವವನ್ನಾದರೂ ಉಳಿಸಬಹುದು!*

ಆದ್ದರಿಂದ, ನಾನು ಈ ಸಂಗತಿಯನ್ನು ಎಲ್ಲಾ ಗುಂಪಿಗೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಬಹಳಷ್ಟು ಜನರಿಗೆ ಈ ಸಂಗತಿಗಳು ತಿಳಿದಿರಬಹುದು, ಆದರೆ, ಎಲ್ಲವೂ ತಿಳಿದಿರಲಿಕ್ಕಿಲ್ಲ!

*ಈ ಸಂದೇಶವನ್ನು ಮುಂದುವರಿಕೆ ಮಾಡುವುದು ಅಥವಾ ಬಿಡುವುದು ನಿಮ್ಮ ಆಯ್ಕೆಗೆ ಬಿಟ್ಟ ಸಂಗತಿ.*
*ಆದರೆ, ಹಾಗೆ ಮಾಡಿದ್ದಲ್ಲಿ, ಅದು ಅಮೂಲ್ಯ ಜೀವಗಳನ್ನು ರಕ್ಷಿಸಲು ಕಾರಣವಾಗಬಲ್ಲುದು

Saturday, November 28, 2020

ನೀವುಇಷ್ಟೆಲ್ಲ ರಾಮನಾಮ ಗುಣಗಾನಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂಶ್ರೀರಾಮನ ದರ್ಶನ ಆಗಿದೆಯೇ?"

ತುಂಬಾ ಚೆನ್ನಾಗಿದೆ ಓದಿ:

ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...

"ನೀವು
ಇಷ್ಟೆಲ್ಲ ರಾಮನಾಮ ಗುಣಗಾನ
ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ
ಶ್ರೀರಾಮನ ದರ್ಶನ ಆಗಿದೆಯೇ?"

ಅದಕ್ಕೆ ತುಳಸೀದಾಸರು,
"ಖಂಡಿತವಾಗಿಯೂ ಆಗಿದೆ!" ಎಂದು
ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು
"ಹಾಗಿದ್ದರೆ ನನಗೂ ಶ್ರೀರಾಮದರ್ಶನ
ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.

ತುಳಸೀದಾಸರು "ಯಾಕಿಲ್ಲ? ನಿನಗೂ
ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ
ಸುಲಭವಾಗಿಯೂ ಇದೆ. ನೀನು ಈ
ಪ್ರಪಂಚದಲ್ಲಿ ಯಾವುದೇ
ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ
ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ
ಸ್ವಾಮೀ" ಎಂದು ವಿನಂತಿಸಿದ.

ತುಳಸೀದಾಸರು ಹೇಳುತ್ತಾರೆ-
"ನೋಡು, ಇದಕ್ಕೊಂದು ಸುಲಭಸೂತ್ರ
ಇದೆ. ಈ ಪ್ರಪಂಚದಲ್ಲಿ ಯಾರದೇ
ಹೆಸರಿಗಾದರೂ ಸರಿ ಈ ಸೂತ್ರವನ್ನು
ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ
ಹೆಸರೇ ಸಿಗುತ್ತದೆ!"

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ.
ಯಾವುದು ಆ ಸೂತ್ರ? ಎಂದು ಕೇಳಿದ.

ಆಗ ತುಳಸೀದಾಸರು ಹೇಳುತ್ತಾರೆ:

ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ || 

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ,
ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು
ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ
ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು
(ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು
ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ
ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು
ತನ್ನ ಹೆಸರು "ನಿರಂಜನ" ಎಂದು ನಾಲ್ಕು
ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;
21X2=42; 42/8= ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು
ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;
12+5=17; 17X2=34; 34/8 =
ಭಾಗಲಬ್ಧ 4. ಶೇಷ 2.

ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ
ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 = ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"
ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
= ಭಾಗಲಬ್ಧ 6. ಶೇಷ 2.

ಹೌದಲ್ವಾ! ಹೆಸರು ಯಾವುದೇ ಇದ್ದರೂ,
ಎಷ್ಟು ಅಕ್ಷರಗಳೇ ಇದ್ದರೂ
ಕೊನೆಯಲ್ಲುಳಿಯುವುದು ಎರಡಕ್ಷರ
"ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು.

ತುಳಸೀದಾಸರ
ಕಾಲಿಗೆರಗಿದ. ಇವತ್ತು ನನಗೆ
ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು
ಯಾವಾಗಲೂ ನಾನು ರಾಮನನ್ನೇ
ಕಾಣುತ್ತಿರುತ್ತೇನೆ ಎಂದು ಅಲ್ಲಿಂದ
ಹೊರಟುಹೋದ.

ಅಷ್ಟಾಗಿ, ತುಳಸೀದಾಸರು ಹೇಳಿದ
ಸೂತ್ರದಲ್ಲಿನ ಸಂಖ್ಯೆಗಳ ಮತ್ತು
ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ
ಎಂಬ ನಾಲ್ಕು ಪುರುಷಾರ್ಥ.

ಪಂಚತತ್ತ್ವ = ಭೂಮಿ, ನೀರು, ಅಗ್ನಿ,
ವಾಯು, ಆಕಾಶ ಎಂಬ ಪಂಚಮಹಾಭೂತ.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,
ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ
ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ
ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ
ಕೊನೆಗೂ ಉಳಿಯುವ ಶೇಷ "ರಾಮ"
ಮಾತ್ರ!

ಜೈ ಶ್ರೀರಾಮ್
 "ಭಗವತ್ ಗೀತೆ ನುಡಿ "

ಹುಟ್ಟಿದಾಗ ನೀ ಅಳುತ್ತಿದ್ದೆ,
   ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
         ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

           ಹುಟ್ಟಿದಾಗ  ಹುಡುಕುವರು ನಿನಗೆ
                             ನೂರೆಂಟು ನಾಮ,
                    ಮಡಿದಮೇಲೆ ಶವ ಎಂದೇ
                                    ನಿನ್ನ ನಾಮ.

   ನೀನೇನನ್ನೂ ಗಳಿಸದೇ ಬಂದೆ, 
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.
 
ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
                     ನಾನು ಯಾರು ?
                              ಏನಿದೇ ನನ್ನಲ್ಲಿ ?

ವಂದನೆಗಳೊಂದಿಗೆ
 ನಂಜುಂಡಸ್ವಾಮಿ ದೊಡ್ಡಹುಂಡಿ

Sunday, November 22, 2020

ನಮ್ಮ ಮೈ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ

*ನಮ್ಮ ಮೈ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ*

*ನಮ್ಮ ದೇಹಕ್ಕೆ ಯಾವ್ದು ಸರಿ? ಚಳಿ ಇದ್ರೆ ಒಳ್ಳೆದಾ? ಬಿಸಿಲಾದ್ರೆ ಒಳ್ಳೆದಾ? ಯಾವ್ದು ಶೀತ ಯಾವ್ದು ಉಷ್ಣ, ಏನು ತಿಂದ್ರೆ ಒಳ್ಳೇದು ಏನು ಮಾಡಿದ್ರೆ ಒಳ್ಳೇದು... ಈ ಎಲ್ಲಾ ವಿಷಯಗಳು ನಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕೆ ಬ್ರಹ್ಮಾಂಡದಷ್ಟಿದೆ. ಅದರಲ್ಲಿ ನೀವು ಪ್ರಾಯಶಃ ಕೇಳಿಲ್ಲದಿರೋ 20 ವಿಷಯಗಳ್ನ ಹೇಳ್ತೀವಿ ಕೇಳಿ… ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯ ಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…*

*1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.*

*2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.*

*3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.*

*4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.*

*5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.*

*6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.*

*7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.*

*8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.*

*9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.*

*10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.*

*11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು*

*12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.*

*13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!* 

*14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.*

*15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.*

*16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.*

*17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ*

*18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.*

*19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.*

*20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು* 

*21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ*

*22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದಸಿಗಲ್ಲ*      
                        
*23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ*

*24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ*

*25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.*

*26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.*

*27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.*

*28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ*

*29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!*

*30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...*

*31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ*

*32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ*

*33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.*

*34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ*

*35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ*

*ಚುಕ್ಕುಬುಕ್ಕು*

*36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ*

*37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.*

*38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.*

*39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ*

*40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ*

*41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ*

*42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.*

*ಎಲ್ಲರಿಗೂ ಗೊತ್ತಾಗಲಿ ; ಹಂಚಿ* 

😊😊😀😀🙏🏽 *ಕ್ರಪೇ  ಆರೋಗ್ಯ ಕೈಪಿಡಿ*

Saturday, November 21, 2020

ಬೇರೆ ಗುಂಪಿನಿಂದ ಬಂದ ಸಂದೇಶ ಯಾರಿಗಾದರೂ ಉಪಯೋಗ ಆಗಬಹುದು kidney failure, AYURVEDA VAYDYA ADDRESS

(ಬೇರೆ ಗುಂಪಿನಿಂದ ಬಂದ ಸಂದೇಶ ಯಾರಿಗಾದರೂ ಉಪಯೋಗ ಆಗಬಹುದು)
🙏🏻
ನನ್ನ ಹೆಸರು ರವಿ ಕುಮಾರ್ 42 ವರ್ಷ ವಯಸ್ಸು,ನಾನು ಮೈಸೂರಿನಲ್ಲಿ ವಾಸವಾಗಿದ್ದೇನೆ,2014 ರಲ್ಲಿ ಮೂತ್ರದಲ್ಲಿ ರಕ್ತ ಬಂದು ಉರಿ ಆಗುತ್ತಿತ್ತು ,ಕೊನೆಗೆ ಕೈ ಕಾಲು ಊದಿಕೊಂಡು ನೋವಾಗುತ್ತಿತ್ತು,  ನಂತರ  ಮೈಸೂರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಬ್ಲೆಡ್ ಟೆಸ್ಟ್ ಮಾಡಿಸಿದೆ ಆಗ ತಿಳಿಯಿತು  ನನ್ನ ಎರಡೂ ಕಿಡ್ನಿಗಳೂ ಪೈಲೂರ್ ಆಗಿ ಕ್ರಿಯಾಟೀನ್ ಲೆವಲ್ 28 ಕ್ಕೆ ಬಂದಿತ್ತು, ಬಿ ಪಿ 430 ಇತ್ತು,ವೈದ್ಯರ  ಸಲಹೆ ಮೇರೆಗೆ ಕಿಡ್ನಿ ಬೇರೆ ಹಾಕಿಸುವವರೆಗೂ ಡಯಾಲಿಸೀಸ್ ಮಾಡಿಸಬೇಕು,ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡಿಸುತ್ತಿದ್ದೆ,ನಾನು ಮೈಸೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಉಪಾಧ್ಯಾಯನಾಗಿ  ಕೆಲಸ ಮಾಡುತ್ತಿದ್ದೇನೆ,ನನಗೆ 15000 ಸಾವಿರ ಸಂಬಳ ಬರುತ್ತಿತ್ತು,ಒಂದು ತಿಂಗಳಿಗೆ ಡಯಾಲಿಸಿಸ್ ಮಾಡಿಸಬೇಕಾದರೆ 4500 ಖರ್ಚು ಬರುತ್ತಿತ್ತು, ಮನೆ ಬಾಡಿಗೆ ಕಟ್ಟಿ ಮಕ್ಕಳನ್ನು ಪೋಷಿಸುವುದು ಕಷ್ಟವಾಗಿತ್ತು.
           ಬೆಂಗಳೂರಿನಲ್ಲಿ ನನ್ನ ಹೆಂಡತಿಯ ಸಂಬಂದಿಕರೊಬ್ಬರ ಬಳಿ ವಿಷಯ ತಿಳಿಸಿದೆ,ಅದಕ್ಕವರು ನೀನು ನೇರ ನನ್ನ ಮನೆಗೆ ಬಂದು ಬಿಡು ಇಲ್ಲೇ ನಮ್ಮ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ನಾಲ್ಕು ತಲೆ ಮಾರಿನ  ವಂಶಪಾರಂಪರ್ಯ ನಾಟಿ ವೈದ್ಯ ಶಿವ ಕುಮಾರ್ ಅಂಥ ಇದ್ದಾರೆ ಗಿಡಮೂಲಿಕೆ ಚಿಕಿತ್ಸೆ ಕೊಡುತ್ತಾರೆ,ಮೂರು ವರ್ಷಗಳ ಕೆಳಗೆ ನಮ್ಮ ಸ್ನೇಹಿತರೊಬ್ಬರಿಗೂ ಇದೇ ರೀತಿ ಎರಡೂ ಕಿಡ್ನಿ ಪೈಲೂರ್ ಆಗಿತ್ತು ಒಂದೂವರೆ ವರ್ಷ ಡಯಾಲಿಸೀಸ್ ಮಾಡಿಸಿದ ಮೇಲೆ ಅವರ ಬಳಿ ಚಿಕಿತ್ಸೆ ಕೊಡಿಸಿದ್ದು,ಈಗ ಅವರು ಗುಣ ಮುಖರಾಗಿ ಎಲ್ಲರಂತೆ ಚನ್ನಾಗಿದ್ದಾರೆ,ಎಂದು ತಿಳಿಸಿದರು,
         ನಾನು ಕೂಡಲೇ ನಮ್ಮ ಸಂಬಂದಿಕರ ಮನೆ ಬೆಂಗಳೂರಿಗೆ ಬಂದು ಅವರ ಚಿಕಿತ್ಸಾಲಕ್ಕೆ ಹೋದೆ ವೈದ್ಯ ಶಿವಕುಮಾರ್ ರವರು ಇದ್ದರು, ರಿಪೋರ್ಟ್ಸ್ ನೋಡಿಸಿದೆ,ರಿಪೋರ್ಟ್ಸ್ ನೋಡಿದ ಮೇಲೆ ನಾಡಿ ಪರೀಕ್ಷೆ ಮಾಡಿ ಅವರ ಚಿಕಿತ್ಸಾ ವಿಧಾನ ಹಾಗೂ
  ಔಷಧಿ ಕೊಟ್ಟು ಉಪಯೋಗಿಸುವ ವಿಧಾನ ತಿಳಿಸಿ ಒಂದು ವಾರಕ್ಕೆ ಎರಡು ಬಾರಿ  ನೀವು ಡಯಾಲಿಸೀಸ್ ಮಾಡಿಸುತ್ತಿದ್ದೀರಿ,ನಮ್ಮ ಗಿಡ ಮೂಲಿಕೆ ಔಷದಿಯನ್ನು ನೀವು ಸೇವಿಸಿದ 15 ದಿನಗಳ ನಂತರ ವಾರಕ್ಕೂಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ಒಂದು ತಿಂಗಳ ನಂತರ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ನಂತರ ಎರಡನೇ ತಿಂಗಳು ಔಷಧಿ ಸೇವಿಸಿದ ಮೇಲೆ 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,
ಮೂರನೇ ತಿಂಗಳು ಔಷಧಿಯನ್ನು ಸೇವಿಸಿದ ಮೇಲೆ 20 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,
ಕನಿಷ್ಟ ನೀವು  ನಮ್ಮ ಔಷದಿಯನ್ನು 13 ತಿಂಗಳು ಅಂದರೆ 2015 ಮಾರ್ಚ್ ತಿಂಗಳಿ ನಿಂದ ಶುರು ಮಾಡಿ ಮುಂದಿನ ವರ್ಷ 2016 ಏಪ್ರಿಲ್ ನವರೆಗೂ  ಸೇವಿಸಬೇಕು ನಮ್ಮ ಔಷದಿ ಸೇವಿಸಿದ ಆರು ತಿಂಗಳಿಗೆ ಡಯಾಲಿಸೀಸ್ ನ ಅವಶ್ಯಕತೆ  ಸಂಪೂರ್ಣ ನಿಂತು ಹೋಗಿ ಮಾಮೂಲಿನಂತೆ ಮೂತ್ರ ವಿಸರ್ಜನೆ ಮಾಡಬಹುದು ಎಂದು ತಿಳಿಸಿದರು.
ಔಷದಿ ತೆಗೆದುಕೊಂಡು,ನಿಮಗೆ ವಾಸಿಯಾದರೆ ನಾಲ್ಕು ಜನಕ್ಕೆ ಹೇಳಿ ಉಪಯೋಗವಾಗುತ್ತದೆ ಅಂತ ಹೇಳಿದರು,
ವೈದ್ಯ ಶಿವಕುಮಾರ್ ರವರು ಹೇಳಿದ ಹಾಗೆ ಮಾರ್ಚ್ ತಿಂಗಳಿನಲ್ಲಿ ಔಷದಿ ಸೇವಿಸಿದ ಎರಡು ವಾರ ಮೂರು ಬಾರಿ ಡಯಾಲಿಸೀಸ್ ಮಾಡಿಸಿದೆ,ಇನ್ನು ಉಳಿದ ಹದಿನೈದು ದಿನಗಳಲ್ಲಿ ವಾರಕ್ಕೂಂದರಂತೆ ಎರಡು ಬಾರಿ ಡಯಾಲಿಸೀಸ್ ಮಾಡಿಸಿದೆ,
ಮತ್ತೆ ಏಪ್ರಿಲ್ ತಿಂಗಳಿನಲ್ಲಿ ಪುನಃ ಅವರ ಚಿಕಿತ್ಸಾಲಯಕ್ಕೆ ಹೋಗಿದ್ದೆ, ಒಂದು ತಿಂಗಳ ಔಷದಿಯನ್ನು ಕೊಟ್ಟು ಅದೇ ರೀತಿ ಚಾಚೂ ತಪ್ಪದೇ ಉಪಯೋಗಿಸಿದರೆ ಈ ತಿಂಗಳಿಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಬಹುದು ಎಂದು ಹೇಳಿ ಔಷದಿ ಕೊಟ್ಟು ಕಳುಹಿಸಿದರು,ಅವರು ಹೇಳಿದ ಹಾಗೆ ಆ ತಿಂಗಳಿನಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್  ಮಾಡಿಸಿದೆ, 
    ಮತ್ತೆ ಮೂರನೇ ತಿಂಗಳು 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿ ಒಟ್ಟು ಐದು ತಿಂಗಳಿಗೆ ಡಯಾಲಿಸೀಸ್ ಮಾಡಿಸುವ ಅವಶ್ಯಕತೆ ನಿಂತುಹೋಯಿತು,ಅವರು ಆರು ತಿಂಗಳಿಗೆ ಡಯಾಲಿಸೀಸ್ ನಿಲ್ಲುತ್ತದೆ ಎಂದು ಹೇಳಿದ್ದರು ನನಗೆ ಐದು ತಿಂಗಳಿಗೆ ನನ್ನ ಕ್ರಿಯಾಟಿನ್ ಲೆವೆಲ್ 1.5 ಗೆ ಬಂದಿತ್ತು ,ಅವರು ಹೇಳಿದ ಹಾಗೆ 2016 ಏಪ್ರಿಲ್ ವರೆಗೂ ಗಿಡ ಮೂಲಿಕೆ ಔಷದಿಯನ್ನು ಸೇವಿಸಿದ್ದಕ್ಕೆ ನನ್ನ ಎರಡೂ ಕಿಡ್ನಿಗಳು ಗುಣಮುಖವಾಗಿ ಈಗ ನನ್ನ ಕ್ರಿಯಾಟಿನ್ ಲೆವೆಲ್ 1.2 ಇದೆ ಈಗ ನಾನು ಎಲ್ಲರಂತೆ ಚನ್ನಾಗಿದ್ದೇನೆ.
       ಮಿತ್ರರೆ ಈ ಮಾಹಿತಿಯನ್ನು ನೀವು ನಿಮ್ಮ ಕುಟುಂಬ ವರ್ಗದವರಿಗೆ ಬಂಧು ಮಿತ್ರರಿಗೆ ನಿಮಗೆ ತಿಳಿದಿರುವ ಎಲ್ಲರಿಗೂ ತಿಳಿಸಿ,ನಮ್ಮಿಂದ ಎಲ್ಲರಿಗೂ ಸಹಾಯವಾಗಲಿ,
ಇಂತಿ 
ರವಿಕುಮಾರ್ ಮೈಸುರು 

ಪಾರಂಪರಿಕ ವೈದ್ಯ 
 ಶಿವ ಕುಮಾರ್ ರವರ ವಿಳಾಸ  ಕಾಮಧೇನು ಪಂಚಗವ್ಯ ಚಿಕಿತ್ಸಾಲಯ 
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ದೇವಸಂದ್ರ 
ಕೃಷ್ಣರಾಜಪುರ 
ಬೆಂಗಳೂರು 560036 
ಹಳೆ ಮದ್ರಾಸ್ ರಸ್ತೆ 
ಮೊಬೈಲ್ ಸಂಖ್ಯೆ 8747099983
8970788888
     ಸಮಯ: ಬೆಳಗ್ಗೆ 10  ಗಂಟೆಯಿಂದ ಸಂಜೆ 8 ಗಂಟೆಯವರಗೆ 
    ಪೋನ್ ಮಾಡಿಕೊಂಡು ಹೋದರೆ ಒಳ್ಳೆಯದು...

👆
👌👌
🙏🙏🙏

FORWARDED AS RECEIVED...

Friday, November 20, 2020

ಊಟದ ಪ್ರಭಾವ ಜೀವನದ ಮೇಲೆ..

ಊಟದ ಪ್ರಭಾವ ಜೀವನದ ಮೇಲೆ..

ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ‌ಅನ್ನ.
ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ ,both
Physical and mental change.
ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ.so ಅಡಿಗೆ
ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ (ಇದು ಈಗ common ಆಗಿದೆ)
ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆ ಗೆ
Negative vibrations ಹೊಗುವದು common. ನೆನಪಿಡಿ  ನಾವು ಅದನ್ನೇ ಉಣ್ಣುವ ದು.
ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ   ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ  ಗುಡಿ , ಮಠ , ದಾಸೋಹ ಗಳಲ್ಲಿ ಕಾಣುವ ದುಂಟು.

ಅಡಿಗೆ , ಊಟಾ ೩ ತರಹ
*1. ಹೋಟೆಲ್ ಪಾರ್ಟಿಗಳಲ್ಲಿನ ಊಟ*

*2.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ.*

*3.ಮಂದಿರ, ಮಠಗಳಲ್ಲಿ ಮಾಡುವ ಅಡಿಗೆ, ಊಟ.*

ಈ ಮೂರು ಪ್ರಕಾರದ ಊಟದಲ್ಲಿ  ಬೇರೆ ಬೇರೆ ತರಹದ ಸ್ಪಂದನೆಗಳು ಇರುವವೂ.

ಹೋಟೆಲ್ ಊಟ..
ಇಲ್ಲಿ ಯಾವುದೇ ಪಾಸಿಟಿವ್ vibrations ಇರುವುದಿಲ್ಲ.
ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹದ ಇರುವವೋ ಗೊತ್ತಿಲ್ಲ,
ಅವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡಿಗೆಯಲ್ಲಿ ಇಳಿಯುವವು.

*ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡಿಗೆ...*

*ಇಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಪಾಸಿಟಿವ್ ಸ್ಪಂದನೆಗಳು ಇರುವ ಅಡಿಗೆ.*

ಆದರೆ ಇತ್ತೀಚಿಗೆ ಮನೆಯಲ್ಲಿ 
ಅಡಿಗೆ ಕೆಲಸದವಳು ಅಡಿಗೆ ಮಾಡುವ fashion ಆಗಿದೆ.
ಮನೆಯಲ್ಲಿ ಒಂದಿಬ್ಬರೆ  ಇದ್ದರೂ
ಅಡಿಗೆ ಮಾಡುವುದು ಅಡಿಗೆ ಕೆಲಸದವಳೆ , ಅವಳ ಮನಸ್ಸು ಯಾವ ತರಹ ಇದೆ, ಅವಳು ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು so ಅಲ್ಲಿಯೂ
ನೆಗೆಟಿವ್ vibration ಇರುವುದು 
So ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ
ಸ್ವಲ್ಪ ವಿಚಾರ ಮಾಡಿ ನೋಡಿ.
ನಿಮ್ಮ ಮನೆಯ ಅಜ್ಜಿ , ತಾಯೀ ಮಾಡಿದ ಅಡಿಗೆ ಮತ್ತು ಕೆಲಸದವಳು ಮಾಡುವ ಅಡಿಗೆಗೆ ಎಷ್ಟು ‌ವ್ಯತ್ಯಾಸ ?
ತಾಯಿ  ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಅವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.

*ಮಂದಿರ ಮಠಗಳಲ್ಲಿನ ಅಡಿಗೆ....*

ಅದು ದೇವರಿಗೆ ನೈವೇದ್ಯ ಅರ್ಪಿಸಿ , ನಮಗೆ ಬಡಿಸುವ ಅಡಿಗೆ, ಅದು ನಾವು ಉಣ್ಣುವುದು  ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ vibrations ತುಂಬಿ ತುಳುಕುತ್ತಿರುತ್ತದೆ.

ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ ,  .
ಅದರ ಸ್ವಲ್ಪ ಭಾಗ ಬಡವರಿಗೆ
ಸಮರ್ಪಿಸಿ ನಾವು ಸೇವಿಸುವುದು ಉತ್ತಮ.
ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ,
ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ  ಎಂದು ಕೊಡುವುದನ್ನು ನಾನು ಸಣ್ಣವನಿದ್ದಾಗ ನೋಡಿದ ನೆನಪಿದೆ.

*ಅನ್ನದಲ್ಲಿ ಜಾದು ಇದೆ,.*  ಅಡಿಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿದೆ. ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ  ಊಟ ಮಾಡಿ ನೋಡಿ.
3 ತಿಂಗಳು ಇದನ್ನು ಮಾಡಿ ನೋಡಿ.
*ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.* 

*ಓಂ ಅನ್ನಪೂರ್ಣೇಶ್ವರಿಯೇ ನಮಃ*  🙏

Tuesday, October 6, 2020

ಸಿರಿಧಾನ್ಯಗಳು V/S ಅಕ್ಕಿ, ರಾಗಿ, ಗೋಧಿ, ಜೋಳ, ಹಾಗೂ ಕಾರ್ಪೋರೇಟ್ ಕಂಪನಿಗಳ ಷಢ್ಯಂತ್ರ.!!!

ಸಿರಿಧಾನ್ಯಗಳು V/S ಅಕ್ಕಿ, ರಾಗಿ, ಗೋಧಿ, ಜೋಳ, ಹಾಗೂ ಕಾರ್ಪೋರೇಟ್  ಕಂಪನಿಗಳ ಷಢ್ಯಂತ್ರ.!!!
ಈ ಮೇಲಿನ ವಿಚಾರ ಅತಿ ಹೆಚ್ಚು ಚರ್ಚಿತವಾದ ಹಾಗೂ ಕಡಿಮೆ ಅರ್ಥವಾದ ವಿಚಾರ. ಈ ಬಗ್ಗೆ ನನ್ನದೊಂದು ವೈಯಕ್ತಿಕ ವಿಶ್ಲೇಷಣೆ, ನಾನು ಇಲ್ಲಿ ಯಾರ ನಂಬಿಕೆಗಳನ್ನೂ ಬುಡಮೇಲು ಮಾಡಲು ಹೊರಟಿಲ್ಲ ಹಾಗಾಗಿ, ಆರೋಗ್ಯಕರ ಚರ್ಚೆಗೆ ನನ್ನ ಸಹಮತವಿದೆ, ಯಾವುದೋ ಪೂರ್ವಾಗ್ರಹ ಇಟ್ಟುಕೊಂಡು ವಾದಕ್ಕೆ ಇಳಿದರೆ, ನಾನು ಭಾಗವಹಿಸಲಾರೆ. ಎಂದಿನಂತೆ ಎಲ್ಲ ಸಹೃದಯರಿಗೂ ನನ್ನ ಲೇಖನಕ್ಕೆ ಸ್ವಾಗತ, ಓದಿ, ಹಂಚಿ, ಹರಸಿ, ಹಾರೈಸಿ.
ಮೊದಲಿಗೆ ಇಲ್ಲಿ ನನ್ನದೊಂದು ಪ್ರಶ್ನೆ ಇದೆ, ಸಿರಿಧಾನ್ಯಗಳನ್ನು ಬಳಸಿ ಎಂದು ಉದ್ದುದ್ದ ಭಾಷಣ ಮಾಡುವ ಕೆಲವರು ಸಿರಿಧಾನ್ಯಗಳೇ ಆದ ರಾಗಿ, ಗೋಧಿ, ಜೋಳಗಳನ್ನು ಸಿರಿಧಾನ್ಯಗಳ ಪಟ್ಟಿಗೆ ಯಾಕೆ ಸೇರಿಸಲ್ಲ..? ನನಗಂತೂ ತಿಳೀತಿಲ್ಲ. ಅಸಲಿಗೆ, ಅಕ್ಕಿಗೂ ಸಿರಿಧಾನ್ಯಕ್ಕೂ ಇರುವ ವ್ಯತ್ಯಾಸಗಳೇನು..? ಮೂಲತಃ ಭತ್ತವು ಸಮೃದ್ಧ ನೀರಾವರಿ ಹೊಂದಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ, ಸಿರಿಧಾನ್ಯಗಳಿಗೆ ನೀರಾವರಿಯ ಅಗತ್ಯವಿಲ್ಲ ಕಠಿಣ ನೆಲಗಳಲ್ಲೂ ಬೆಳೆಯಬಹುದಾದ ಬೆಳೆಗಳಾಗಿವೆ. ಅಕ್ಕಿ, ರಾಗಿ, ಗೋಧಿ, ಜೋಳಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ, ನಾರಿನಂಶ, ಪೋಷಕಾಂಶಗಳು, ಖನಿಜಾಂಶಗಳು ಹೆಚ್ಚಿರುತ್ತವೆ, ಇದರ ಅರ್ಥ ಅಕ್ಕಿ, ರಾಗಿ, ಗೋಧಿ, ಜೋಳಗಳಲ್ಲಿ ಪೋಷಕಾಂಶಗಳು ಇಲ್ಲವೇ ಇಲ್ಲ ಎಂದು ಅಲ್ಲ. ಇನ್ನು ಕಾರ್ಬೋಹೈಡ್ರೇಟ್ ಗಳು, ಸಿರಿಧಾನ್ಯಗಳಿಗೆ ಹೋಲಿಸಿದರೆ, ಅಕ್ಕಿ, ರಾಗಿ, ಗೋಧಿ, ಜೋಳಗಳಲ್ಲಿ ಹೆಚ್ಚು. ಇಲ್ಲಿದೆ ನೋಡಿ ಒಂದು ವೀಕ್ ಪಾಯಿಂಟ್. ಇದೊಂದೆ ಕಾರಣವನ್ನು ಇಟ್ಟುಕೊಂಡು ಕೆಲವರು ಸಿರಿಧಾನ್ಯಗಳನ್ನು ತಿನ್ನದಿದ್ದರೆ ನಿಮಗೆ, ಸಕ್ಕರೆ ಖಾಯಿಲೆ ಬಂದು ಬಿಡುತ್ತದೆ, Cholesterol, ಬಂದು ಬಿಡುತ್ತದೆ. ಹಾಗೇ ಹೀಗೇ. ಕೆಲವರಿಗೆ ಗೊತ್ತಿರದ ವಿಚಾರ ಏನಂದ್ರೆ ನಾವು ಯಾವುದೇ ಆಹಾರ ತಿಂದು ನಿಯಮಿತ ದೈಹಿಕ ವ್ಯಾಯಾಮ ಮಾಡದೇ ಇದ್ದರೆ ಈ ಮೇಲಿನ ಎಲ್ಲ ಖಾಯಿಲೆಗಳು ಬಂದೇ ಬರುತ್ತವೆ. ಸಕ್ಕರೆ ಖಾಯಿಲೆ ಎಂದರೇನು. ನಾವು ತಿಂದ ಆಹಾರದಲ್ಲಿನ ಕಾರ್ಬೊಹೈಡ್ರೇಟ್ಸ್, ಗ್ಲೂಕೋಸ್ ಆಗಿ, ಆ ಗ್ಲೂಕೋಸ್  ಪರಿವರ್ತನೆಯಾಗಿ, ಕೆಲಸ ಮಾಡಲು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಾಗೂ ಕರಗಿ ಹೋಗುತ್ತದೆ. ಯಾವಾಗ ನಾವು ತಿಂದುಂಡು ಸರಿಯಾದ ದೈಹಿಕ ಶ್ರಮ ಮಾಡುವುದಿಲ್ಲವೋ.. ಆಗ ಗ್ಲೂಕೋಸ್ ಗೆ ಶಕ್ತಿಯಾಗಿ ಪರಿವರ್ತನೆಯಾಗುವ ಅಗತ್ಯವೇ ಬರೋದಿಲ್ಲ. ಆಗ ಆ ಗ್ಲೂಕೋಸ್ ದೇಹದಲ್ಲೇ ಶೇಕರಿಸಲ್ಪಡುತ್ತದೆ. ಇದೇ ಸಕ್ಕರೆ ಖಾಯಿಲೆ.
ಸಿರಿಧಾನ್ಯಗಳನ್ನು ತಿಂದರೆ ಆರೋಗ್ಯವಾಗಿರ್ತೇವೆ ಎನ್ನುವುದು, ದೈಹಿಕ ಶ್ರಮ ಪಡದೆ ಆರೋಗ್ಯವಾಗಿರಬೇಕು ಎಂದುಕೊಳ್ಳುವ ಹಲವರ ಭ್ರಮೆ ಹಾಗೂ ಕಾರ್ಪೋರೇಟ್ ಕಂಪನಿಗಳು ಪ್ರಯೋಗಿಸುತ್ತಿರುವ ಮಾರ್ಕೆಟಿಂಗ್ ದಾಳವಷ್ಟೇ..
ನಾನು ಎಲ್ಲೋ ಓದಿದ ನೆನಪು, ಹಿಂದೆ ವಾಷಿಂಗ್ ಟನ್ ನಲ್ಲಿ, ಅತಿ ಹೆಚ್ಚು ಸೇಬು ಬೆಳೆಯುತ್ತಿದ್ದ ಕಾರಣ, ಅಷ್ಟೂ ಸೇಬುಗಳು ವ್ಯಾಪಾರವಾಗದೆ, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದರಂತೆ. ಅವರಿಗೆ ಒಬ್ಬ ಮನೆಹಾಳ, ಒಂದು ಉಪಾಯ ಸೂಚಿಸಿದನಂತೆ. ಆ ಮನೆಹಾಳು ಉಪಾಯದಿಂದ ಹುಟ್ಟಿಕೊಂಡ ಮಾತೇ “An Apple a day keeps the Doctor away”. ಇಂದು ಇಂಥವೇ ಕಪೋಲ ಕಲ್ಪಿತ ಕಥೆಗಳು ಸಿರಿಧಾನ್ಯಗಳ ಕುರಿತು ಬರುತ್ತಿರುವುದು ವಿಪರ್ಯಾಸ.
ನಾನು ಕಂಡ ನನ್ನ ಹಿಂದಿನ ತಲೆಮಾರು ಯಾವ ಸಿರಿಧಾನ್ಯವನ್ನು ಬಳಸಲೇ ಇಲ್ಲ, ಆದರೂ ಆರೋಗ್ಯವಂತರಾಗಿ, ರೋಗರಹಿತರಾಗಿ, ಸಂಪೂರ್ಣ ಆಯುಷ್ಯ ಮುಗಿಸೇ ಸತ್ತದ್ದು. ಹೀಗೆ ವಿಶ್ಲೇಷಣೆ ಮಾಡುತ್ತಾ ಹೋದಾಗ ನನಗೆ ಮತ್ತೊಂದು ಐತಿಹಾಸಿಕ ದಾಖಲೆ ಸಿಕ್ಕಿತು. ಅದೇ ದಾಸ ಶ್ರೇಷ್ಠ ಕನಕದಾಸರ ಕೃತಿ “ರಾಮಧಾನ್ಯ ಚರಿತೆ” ಈ ಕೃತಿಯ ಸಾರಾಂಶ ಬಹಳ ಮಂದಿಗೆ ಗೊತ್ತಿರಬಹುದು, ಮೂಲತಃ ಇದೊಂದು ಮೇಲು ಕೀಳು ಎಂಬ ಅಂದಿನ ಸಮಾಜಿಕ ವ್ಯವಸ್ಥೆಯನ್ನು ಠೀಕಿಸುವ, ಠೀಕಾಗ್ರಂಥ. ಇಲ್ಲಿ ಕೆಳವರ್ಗವನ್ನು ರಾಗಿಗೆ ಹೋಲಿಸಿ, ಮೇಲ್ವರ್ಗವನ್ನು ಅಕ್ಕಿಗೆ ಹೋಲಿಸಿ, ಕೊನೆಗೆ ಇವೆರಡರಲ್ಲಿ ಯಾವುದು ಬಲಶಾಲಿ ಎಂಬ ಪಂದ್ಯ ಏರ್ಪಟ್ಟಾಗ, ಇಬ್ಬರನ್ನೂ ಸೆರೆಮನೆಯಲ್ಲಿಟ್ಟು, ಕೆಲ ದಿನಗಳ ನಂತರವೂ ಗಟ್ಟಿಮುಟ್ಟಾಗಿಯೇ ಇದ್ದ ರಾಗಿಯೇ ಶ್ರೇಷ್ಠ, ಸೊರಗಿ ಹೋಗಿದ್ದ ಅಕ್ಕಿಯು ರಾಗಿಗಿಂತ ಕನಿಷ್ಠ ಎಂದು ಶ್ರೀ ರಾಮಚಂದ್ರ ತೀರ್ಪನ್ನು ನೀಡುತ್ತಾನೆ. ಆದರೆ ವಿಚಾರ ಇದಲ್ಲ, 16 ನೇ ಶತಮಾನದಲ್ಲಿ ಅಂದರೆ ಸುಮಾರು 500 ವರ್ಷಗಳ ಹಿಂದೆ, ರಚಿತವಾದ ಈ ಕೃತಿಯಲ್ಲಿ, ಅಕ್ಕಿ ಹಾಗೂ ರಾಗಿಗಳ ಉಲ್ಲೇಖವಿದೆ. ಇದರ ಅರ್ಥ ಅಂದೂ ಕೂಡ, ಅಕ್ಕಿ ರಾಗಿಗಳೇ, ಪ್ರಮುಖ ಆಹಾರ ಧಾನ್ಯಗಳಾಗಿದ್ದವು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೆ..? ಕನಕದಾಸರು ಯಾಕೆ ಆರ್ಕಾ, ಊದಲು, ಸಾಮೆ, ನವಣೆ, ಇತ್ಯಾದಿಗಳನ್ನ ಉದಾಹರಣೆಗೆ ತೆಗೆದುಕೊಳ್ಳಲಿಲ್ಲ..? ಇದಕ್ಕೂ ಕಾರಣವಿದೆ, ಅತಿ ಹೆಚ್ಚು ಬಳಕೆಯಲ್ಲಿರುವುದರ ಮೂಲಕ ವಿಚಾರ ತಿಳಿಸಿದರೆ, ಎಲ್ಲರಿಗೂ ತಲುಪುತ್ತದೆ ಅನ್ನುವ ಕಾರಣ ಇರಬಹುದಲ್ವೇ..? ಇನ್ನು ಪುರಂದರ ದಾಸರ ಕೀರ್ತನೆಗಳಲ್ಲೊಂದಾದ, “ರಾಗಿ ತಂದೀರಾ ಭಿಕ್ಷಕೆ” ಕೀರ್ತನೆಯನ್ನು ಕೇಳದೇ ಇರೋರು ಬಹಳ ವಿರಳ. ಹೀಗೇ ಜಾನಪದ ಸಾಹಿತ್ಯಗಳಲ್ಲೂ, ನೆಲ್ಲು(ಭತ್ತ), ರಾಗಿಗಳು ರಾರಾಜಿಸಿವೆ.
ತಮಾಷೆಯೆಂದರೆ ನಮಗೆ ಉತ್ತರ ಕರ್ನಾಟಕ ಎಂದರೆ ಜೋಳದ ರೊಟ್ಟಿ ನೆನಪಿಗೆ ಬರುತ್ತದೆ. ಆದರೆ ಕನಕದಾಸರು, ಹಾಗೂ ಪುರಂದರ ದಾಸರು. ಮೂಲತಃ ಉತ್ತರ ಕರ್ನಾಟಕದವರೇ ಆದರೂ ರಾಗಿಯನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಇದರ ಅರ್ಥ ಅಂದಿನ ಕಾಲಕ್ಕೆ ರಾಗಿ ಎಂಬ ಧಾನ್ಯ ಇಡೀ ಕರ್ನಾಟಕವನ್ನೇ ಆವರಿಸಿತ್ತು ಅಲ್ವೇ..?
ನಾನು ಕಂಡಂತೆಯೇ ಸುಮಾರು ಮಂದಿ ಸಿರಿವಂತರು ರಾಗಿಯನ್ನೇ ಸೇವಿಸುತ್ತಿರಲಿಲ್ಲ, ರಾಗಿ ಬಡವರ ಆಹಾರ ಎಂಬ ತಪ್ಪು ಕಲ್ಪನೆ ಇತ್ತು. ಆದರೆ ಯಾವಾಗ ಈ ಸಕ್ಕರೆ ಖಾಯಿಲೆ ಮನೆಮನೆಗೂ ಲಗ್ಗೆ ಇಟ್ಟಿತೋ.. ವೈದ್ಯರು ರಾಗಿಯನ್ನು ಸೂಚಿಸಲು ಶುರು ಮಾಡಿದರು ಆನಂತರ ಕೆಲ ದಿನಗಳಲ್ಲಿ ರಾಗಿಗೆ ಬಹಳವೇ ಬೆಲೆ ಬಂತು ಹಾಗೂ ನಗರಗಳಲ್ಲಿ ರಾಗಿ ತಿಂತಿದಾನೆ ಅಂದ್ರೆ ಅವನಿಗೇನೋ ಖಾಯಿಲೆ ಅನ್ನೋ ರೀತಿ ಮಾತಾಡೋಕೆ ಶುರುವಿಟ್ಟುಕೊಂಡಿದ್ದರು. ಈಗ ರಾಗಿಯನ್ನೂ ಹಿಂದಿಕ್ಕಿ ಸಿರಿಧಾನ್ಯಗಳು ಮುಂದೆ ಬರಲು ಹವಣಿಸುತ್ತಿವೆ.
ಕಾರ್ಬೋಹೈಡ್ರೇಟ್ಸ್ ಗಾಗಿ, ಅಕ್ಕಿ, ರಾಗಿ, ಗೋಧಿ, ಜೋಳ, ಸೇವಿಸಬಹುದು. ನಮ್ಮ ದೇಹಕ್ಕೆ ಅಗತ್ಯವಾದ, ನಾರಿನಂಶಗಳು, ಪೋಷಕಾಂಶಗಳು, ಖನಿಜಾಂಶಗಳು, ಸೊಪ್ಪು ತರಕಾರಿಗಳಲ್ಲಿ, ಮೊಳಕೆಕಾಳುಗಳಲ್ಲಿ ಹಾಗೂ ಆಯಾ ಕಾಲಕ್ಕೆ ಸಿಗುವ ಹಣ್ಣುಗಳಲ್ಲಿ ಹೇರಳವಾಗಿವೆ. ಇವುಗಳನ್ನು ತಿಂದು, ಸರಿಯಾದ ಆಹಾರ ಕ್ರಮ, ಜೀವನ ಕ್ರಮಗಳನ್ನು ಅನುಸರಿಸಿ, ನಿಯಮಿತ ದೈಹಿಕ ಶ್ರಮ ಮಾಡಿದರೆ, ನಿರೋಗಿಗಳಾಗಿ ಹಾಗೂ ಶತಾಯುಷಿಗಳಾಗಿ ಬದುಕಬಹುದು.
500 ವರ್ಷಗಳ ಹಿಂದೆಯೇ ಸಿರಿಧಾನ್ಯಗಳು ಹೆಚ್ಚು ಪ್ರಚಲಿತದಲ್ಲಿ ಇರಲಿಲ್ಲ ಎಂದು ಸಾಕ್ಷ್ಯ ಸಿಕ್ಕ ಮೇಲೆ. ಈ 6 ವರ್ಷಗಳಿಂದ ಶುರುವಾಗಿರೋ ಗಾಳಿಸುದ್ದಿಗೆ ಕಿವಿ ಕೊಡುವುದು ಯಾಕೆ. ಅಸಲಿಗೆ ಇದೊಂದು ಕಾರ್ಪೋರೇಟ್ ಕಂಪನಿಗಳ ಷಡ್ಯಂತ್ರವಷ್ಟೇ,. ನಮ್ಮ ಅಕ್ಕಪಕ್ಕದ ದಿನಸಿ ಅಂಗಡಿಗಳಲ್ಲಿಯೇ ಈ ಸಿರಿಧಾನ್ಯಗಳು ಸಿಗೋದಿಲ್ಲ, ನಮಗೇನಾದರೂ ಸಿರಿಧಾನ್ಯ ಬೇಕಾದರೆ ದೊಡ್ಡ ದೊಡ್ಡ Super Market ಗಳಿಗೆ ಹೋಗಿ, ಬಣ್ಣ ಬಣ್ಣದ ಐಶಾರಾಮಿ cover ಗಳಲ್ಲಿ Packing ಮಾಡಿದ ಸಿರಿಧಾನ್ಯಗಳನ್ನು, ಅತಿಯೆನಿಸುವಷ್ಟು ಬೆಲೆ ತೆತ್ತು ತರಬೇಕು. ಬೆಲೆ ಹೆಚ್ಚು ಎಂದರೆ ಅವರ ಸಿದ್ಧ ಉತ್ತರ ಇವು Organic (ಸಾವಯವ) ಸಿರಿಧಾನ್ಯಗಳು.
ನೀವೇ ಯೋಚಿಸಿ ನೋಡಿ, ಸಿರಿಧಾನ್ಯ ಶ್ರೇಷ್ಟವೋ..? ರಾಮಧಾನ್ಯ ಶ್ರೇಷ್ಟವೋ…?
ನನ್ನ ವೈಯಕ್ತಿಕ ಅಭಿಪ್ರಾಯ ಸಿರಿಧಾನ್ಯಗಳನ್ನು ತಿನ್ನುವುದರಿಂದ ಮಾತ್ರವೇ ನಾವು ಆರೋಗ್ಯವಾಗಿರುತ್ತೇವೆ ಎಂಬುದೊಂದು ಅಪ್ಪಟ ಭ್ರಮೆಯಷ್ಟೇ!!!
ನಾನು ನನ್ನ ಅರಿವಿಗೆ ನಿಲುಕಿದ ವಿಚಾರಗಳನ್ನು ಹಂಚಿಕೊಂಡಿದ್ದೇನೆ, ಇನ್ನು ತಾವುಗಳೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಕೇಳಿಕೊಳ್ಲುತ್ತಾ, ಲೇಖನ ಇಲ್ಲಿಗೆ ಮುಗಿಸುತ್ತೇನೆ.
ಒಳ್ಳೇದಾಗ್ಲಿ.
ಧನ್ಯವಾದಗಳೊಂದಿಗೆ,
ಸರ್ವೇ ಜನಾಃ ಸುಖಿನೋ ಭವಂತು
ಲೋಕಾ ಸಮಸ್ತ ಸುಖಿನೋ ಭವಂತು
ಶ್ರೀ ಕೃಷ್ಣಾರ್ಪಣಮಸ್ತು

ಜೀವ ಮತ್ತು ಜೀವನಗಳ ವಿದ್ಯಾರ್ಥಿ


Monday, September 28, 2020

ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ - ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.

🕉️🙏🙏🙏🙏🙏🙏🙏🕉️

 *ಅಮೃತವಾಣಿ* 
==================== ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ - ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.
👇👇👇👇👇👇👇👇👇👇👇
೦೧) *"ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!"*
*ಆದರೆ*....
*"ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!"*
*"ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"*
""""""""""""""""""""""""""""""

೦೨) *ತುಳಿಯುವವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು.*
""""""""""""""""""""""""""""""

೦೩) *ಪ್ರಯತ್ನ ಎಂಬುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ....*
""""""""""""""""""""""""""""""

 ೦೪) *ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಏಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.*
""""""""""""""""""""""""""""""

೦೫) *ಒಂದು ಕಾಲು ಮುಂದೆ ಒಂದು ಕಾಲು ಹಿಂದೆ. ಆದರೆ ಮುಂದಿನದಕ್ಕೆ ಗರ್ವವಿಲ್ಲ, ಹಿಂದಿನ ಅದಕ್ಕೆ ಬೇಸರವಿಲ್ಲ, ಏಕೆಂದರೆ ಇದು ಕ್ಷಣಿಕ.*
""""""""""""""""""""""""""""""

೦೬) *ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ*
*ಯಶಸ್ಸು ಮತ್ತು ಕೀರ್ತಿಗಳೂ ಹಾಗೆಯೇ. ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತವೆ.*
""""""""""""""""""""""""""""""

೦೭) *ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ, ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.*
""""""""""""""""""""""""""""""

೦೮) *ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.*
""""""""""""""""""""""""""""""

೦೯) *ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ " ಮತ್ತೆ " ಬಂತು ಇದೇ  - Recycling ??*
""""""""""""""""""""""""""""""

೧೦) *ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ, ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.*
""""""""""""""""""""""""""""""

೧೧) *ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.*
""""""""""""""""""""""""""""""

೧೨) *ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಏಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.*
""""""""""""""""""""""""""""""

೧೩) *ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....*
""""""""""""""""""""""""""""""

೧೪) *ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು  ಚಿಂತಿಸಬೇಕಿಲ್ಲ.*
""""""""""""""""""""""""""""""

೧೫) *ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆ ಪಾದುಕೆಯಾಗುವುದು ಶ್ರೇಷ್ಠ...!*
*ಕಾಲೆಳೆವವರ ನಾಯಕನಾಗುವುದಕ್ಕಿಂತ ಕೈಹಿಡಿವವರ ಸೇವಕನಾಗುವುದು ಉತ್ಕೃಷ್ಟ..!*
""""""""""""""""""""""""""""""

೧೬) *ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ. ಏಕೆಂದರೆ ಸಮಯ ಎಂದೂ ಭೇದ ತೋರುವುದಿಲ್ಲ.*
""""""""""""""""""""""""""""""

೧೭) *ಚಿಂತೆಗೂ, ಚಿತೆಗೊ ಇರುವ ವ್ಯತ್ಯಾಸ ಒಂದು "೦" ಮಾತ್ರ...*

*ಚಿತೆ ಸತ್ತ ದೇಹವನ್ನು ಸುಡುತ್ತದೆ, ಚಿಂತೆ ಬದುಕಿರುವ ದೇಹವನ್ನೇ ಸುಡುತ್ತದೆ.!!*
""""""""""""""""""""""""""""""""

೧೮) *ಸಹನೆ ನಿನ್ನದಾದರೆ ಸಕಲವು ನಿನ್ನದೆ, ವಿನಯ ನಿನ್ನದಾದರೆ ವಿಜಯವು ನಿನ್ನದೇ.*

೧೯) *ಕತ್ತಲೆ ಆವರಿಸಿಕೊಳ್ಳದೆ ನಕ್ಷತ್ರಗಳು ಮಿನುಗುವುದಿಲ್ಲ ಹಾಗೆಯೇ ಕಷ್ಟಗಳು ಬಾರದೆ ವ್ಯಕ್ತಿಯ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯವಿಲ್ಲ.*
""""""""""""""""""""""""""""""""

೨೦) *ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.*
""""""""""""""""""""'"""""""""'""

೨೧) *ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು ಅವರು ನಿನ್ನ ಮುಂದೆ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.*
""""""""""""""""""""""""""""""""

೨೨) *ನಿಮ್ಮ ನಗು ಜಗತ್ತನ್ನು ಬದಲಿಸಲಿ. ಆದರೆ ನಿಮ್ಮ ನಗುವನ್ನು ಬದಲಿಸಲು ಜಗತ್ತಿಗೆ ಅವಕಾಶ ಕೊಡಬೇಡಿ.*
"""""''''''''"""""""""""""""""""""'''''

೨೩) *"ಸಮಯಕ್ಕೆ ರಜೆ ಇಲ್ಲ  ಸ್ವಪ್ನಕ್ಕೆ  ಅಂತಿಮ ತಾರೀಖು ಇಲ್ಲ ಜೀವನದಲ್ಲಿ ತಾತ್ಕಾಲಿಕ ವಿರಾಮ ಕೀಲಿ ಇಲ್ಲ ...ಜೀವಿಸಿ....ಪ್ರೀತಿಸಿ... ಜೀವನದಲ್ಲಿನ ಪ್ರತೀ ಕ್ಷಣ ಅನುಭವಿಸಿ ಆನಂದಿಸಿ "*
"""""""""""""""""""""""""""""

೨೪) *ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ. ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ.*
""""""""""""""""""""""""""""""""

೨೫) *ಇಲ್ಲಿ ಎಲ್ಲರೂ ಹುಟ್ಟಿದ್ದು ಅಳುವಿನಿಂದ ನಗುವಿಗಾಗಿ ಜೀವನಪರ್ಯಂತ ಶ್ರಮಪಡಲೇ ಬೇಕು.*
""""""""""""""""""""""""""""""""

೨೬) *ನಿಮಗೆ ಶತ್ರುಗಳು ಹುಟ್ಟಬೇಕೆಂದರೆ  ನೀವು ಅನ್ಯಾಯ ಮಾಡಬೇಕೆಂದಿಲ್ಲ, ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತವೆ.*
""""""""""""""""""""""""""""""""

೨೭) *ಬೈಯ್ಯೋರು ಬದುಕೋಕೆ ಹೇಳಿದರು...ಹೋಗಳೋರು ಹಾಳಾಗೋಕೆ ಹೇಳಿದರು...*

 *ಬೈಯೋರು ಬಾಗಿಲೊಳಗಿರಬೇಕು, ಹೋಗಳೋರು ಬಾಗಿಲಾಚೆ ಇರಬೇಕು.*
"""''''"""""""""""""""""""""""""""

೨೮) *ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಿಲ್ಲ, ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ ಏಕೆಂದರೆ ಸತ್ತ ಮೇಲೆ ಹೆಗಲು ಕೊಡುವವರು ಅವರೇ, ಶ್ರೀಮಂತರು ನೇರವಾಗಿ ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"*
"""""""""""""""""""""""""""""""

೨೯) *ದಾನ ಧರ್ಮಕ್ಕೇ ಕಣ್ಣಿಲ್ಲ ನ್ಯಾಯ ನೀತಿಗೆ ಸಾವಿಲ್ಲ..., ಜೀವ ಚಿಕ್ಕದು ಜೀವನ ದೊಡ್ಡದು..., ಸತ್ತವನಿಗೆ ಒಂದು ದಾರಿ, ಸಾಧಿಸಿದವನಿಗೆ ಸಾವಿರ ದಾರಿ.*
"""""""""""""""""""""""'"""""""

೩೦) *ಹಣತೆ ಮಣ್ಣಿನದಾಗಿರಲಿ, ಬಂಗಾರದ್ದಾಗಿರಲಿ ಅದು ಮುಖ್ಯವಲ್ಲ. ಕತ್ತಲಾದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ*
      *ಹಾಗೆಯೇ ಗೆಳೆಯ ಬಡವನಾಗಿರಲಿ ಶ್ರೀಮಂತನಾಗಿರಲಿ ಅದು ಮುಖ್ಯವಲ್ಲ, ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ*
""""""""""""""""""""""""""""""

 ೩೧) *ಗಡಿಯಾರವನ್ನು ನೋಡಿ ಕೆಲಸ ಮಾಡುವವರು ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿಯುತ್ತಾರೆ*

*ಗಡಿಯಾರವನ್ನು ನೋಡದೆ ದುಡಿಯುವವರು ಮಾಲಿಕರಾಗಿ ಬೆಳೆಯುತ್ತಾರೆ*
🕉️🙏🏻🙏🏻🙏🏻🙏🏻🙏🏻🕉️
🌹🌹🌹🌹🌹🌹🌹🌹

Sunday, September 27, 2020

*"ಶ್ರೀಕೃಷ್ಣ" ಎಂಬ ಆತ್ಮೀಯ ಬಂಧು*

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌      ‌       ‌       ‌       ‌       ‌       ‌        ‌      ‌                                                                                                         *"ಶ್ರೀಕೃಷ್ಣ" ಎಂಬ ಆತ್ಮೀಯ ಬಂಧು*

🔮ಎಲ್ಲಿಯೂ ಈ ಬದುಕಿನ ಜಂಜಡಗಳಿಂದ ವಿಮುಖವಾಗುವ ಪಾಠ ಹೇಳುವುದಿಲ್ಲ‌. 

🔮ಸಂಸಾರದಲ್ಲಿದ್ದುಕೊಂಡೆ ಮುಕ್ತಿಯ ಪಡೆಯುವ ದಾರಿ ತೋರಿಸಿದ ವ್ಯಕ್ತಿತ್ವ ಅದು. 

🔮ಆತ ದೈವೀ ಸಂಭೂತನಾದರೂ ಮಹಾಭಾರತದುದ್ದಕ್ಕೂ ತನ್ನ ಯೋಚನೆಗಳ, ನಿರ್ಧಾರಗಳ ಚಾಣಾಕ್ಷತೆಯಿಂದಲೇ ಕಾರ್ಯ ಸಾಧಿಸುತ್ತಾನೆಯೇ ಹೊರತು ದೈವೀ ಶಕ್ತಿಯ ಪ್ರಯೋಗ ಮಾಡುವುದಿಲ್ಲ. 

🔮ಜಗತ್ತಿನ ಒಳಿತಿಗಾಗಿ ಆತ ಕೈಗೊಳ್ಳುವ ಪ್ರತಿ ನಿರ್ಧಾರವೂ ಒಂದು ಜೀವನ ಪಾಠ‌.

🔮 ಆತ ಜಗವೆಂಬ ಪ್ರಜಾಪ್ರಭುತ್ವದ ಚಾಣಾಕ್ಷ ಹಾಗೂ ಅತ್ಯುನ್ನತ ಮೌಲ್ಯಗಳ ಬೋಧಿಸಿದ ರಾಜಕಾರಣಿ. 

🔮ಕೃಷ್ಣನ ಅದೆಷ್ಟೋ ಕಥೆಗಳು ನಮ್ಮದೇ ಏನೋ ಅನಿಸುವಷ್ಟು ಹತ್ತಿರವಾಗುತ್ತವೆ. ನಮ್ಮ ಬದುಕಿನ ಹಲವು ಸಮಸ್ಯೆಗಳಿಗೆ ಆ ಕಥೆಗಳು ಅಥವಾ ಕಥೆಯಲ್ಲಿ ಬರುವ ಪಾತ್ರಗಳು ಉತ್ತರವಾಗಬಲ್ಲವು. ಸಂಬಂಧಗಳ ನಡುವಿನ ಗುದ್ದಾಟ, ವೈಷಮ್ಯ, ಹಾಗೂ ಅವನ್ನು ಕೃಷ್ಣ ನಿಭಾಯಿಸುವ ರೀತಿ ಎಲ್ಲವೂ ಅತ್ಯಪೂರ್ವ. ಅದಕ್ಕೇ ತಾನೆ ಮಹಾಭಾರತ ಮತ್ತೆ ಮತ್ತೆ ಮನಸನ್ನು ತಟ್ಟುವುದು. ಸಂಬಂಧಗಳೊಡನೆ ಹೋರಾಡಲಾರೆ ಎಂದು ಅರ್ಜುನ ಕುಳಿತಾಗ ಭಗವದ್ಗೀತೆ ಎಂಬ ಜೀವನ ಸತ್ಯವನ್ನು ಭೋದಿಸಿದ ಆ ಪಾರ್ಥಸಾರಥಿ *“ಇಲ್ಲಿ ಈಸಬೇಕು, ಇದ್ದು ಜಯಿಸಬೇಕು”* ಎಂಬ ಸಾರ್ವತ್ರಿಕ ಸತ್ಯದ ಅನಾವರಣ ಮಾಡುತ್ತಾನೆ. 

🔮ಅದಕ್ಕೇ ನಮಗೆ ಶ್ರೀ ಕೃಷ್ಣ ಕಾಣುವುದು ಜೀವನ ಪ್ರೀತಿಯಾಗಿ. ಸಂದರ್ಭಗಳಿಗೆ ಹೆದರಿ ಹೇಡಿಯಂತೆ ಕರ್ತವ್ಯ ವಿಮುಖನಾಗುವುದು ಉಚಿತವಲ್ಲ. 

🔮ನಾವು ಕೈಗೊಂಡಿರುವ ಕಾರ್ಯ ಒಳಿತಾಗಿದ್ದರೆ ಬೇರೆಲ್ಲವೂ ನಗಣ್ಯ ಎಂಬ ನಗ್ನ ಸತ್ಯದ ಅರಿವನ್ನು ಕೃಷ್ಣನ ವ್ಯಕ್ತಿತ್ವ ಪದೇ ಪದೇ ಮಾಡಿಸುತ್ತದೆ.

🔮ಈ ಬೆಣ್ಣೆ ಕೃಷ್ಣ ಎಲ್ಲರಿಗೂ ಅದೆಷ್ಟು ಆತ್ಮೀಯ ಅನ್ನುವುದಕ್ಕೆ ಅವನ ಕುರಿತಾಗಿ ರಚಿತವಾಗಿರುವ ಹಾಡುಗಳೇ ಸಾಕ್ಷಿ. 

🔮ಅದೆಷ್ಟು ಹಾಡುಗಳು; ಅಬ್ಬಾ ಬಹುಷಃ ಎಣಿಕೆಗೆ ಸಿಗದ ಸಂಖ್ಯೆ ಅದು.

*“ಬೆಣ್ಣೆ ಕದ್ದ ನಮ್ಮ ಕೃಷ್ಣ..ಬೆಣ್ಣೆ‌ ಕದ್ದನಮ್ಮ.. ಬೆಣ್ಣೆ ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ..”*

🔮ದೇವರ ದೇವ ಆ ಕೃಷ್ಣ ಬೆಣ್ಣೆ ಕದ್ದನಂತೆ, ಜಾರಿ ಬಿದ್ದು ಮೊಣಕಾಲು ಬೇರೆ ಊದಿಸಿಕೊಂಡನಂತೆ. ಈ ಒಂದು ಸಾಲು ಸಾಕಲ್ಲವೇ ಕೃಷ್ಣ ಅದೆಷ್ಟು ಆತ್ಮೀಯ ಎಂದು ತಿಳಿಯಲು.

*“ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ…”*

🔮ದೇವರೇ ಇಡುವ‌ ದೇವರಾಣೆ ಅದೆಷ್ಟು ‌ಸೊಗಸು ಅಲ್ಲವೇ?

*“ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ?*

*ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ?”*

🔮ಉಡುಪಿಯ ಕೃಷ್ಣ, ಕೃಷ್ಣನದೇ ಉಡುಪಿ. ಅದೆಷ್ಟು ಸುಂದರ ಬಾಂಧವ್ಯ ಇದು ಅಲ್ಲವೇ?

🔮ಹೀಗೆ ಶ್ರೀಕೃಷ್ಣ ನಮಗೆ ಅವನ ರೂಪದಿಂದಲಾಗಲಿ, ಹೆಸರಿನಿಂದಾಗಲಿ, ಅಥವಾ ಈ ಹಾಡುಗಳಿಂದಾಗಲಿ, ಬೇರೆಲ್ಲೂ ಸಿಗದ, ಮನದೊಳಗೆ ಸಣ್ಣ ಕಚಗುಳಿ ಇಡುವ ನಗುವನ್ನು ತರುವ, ಅದೆಲ್ಲೋ ದೂರದಿಂದ ಅಗೋಚರವಾಗಿ ತನ್ನ ಮುರಳಿಯ ನಾದದಿಂದ ಆತ್ಮಾನಂದ ಕೊಡುವ ಮೋಜುಗಾರ. ಜಗತ್ತೇ ಅವನ ಲೀಲೆ, ಅದರೊಳಗೆ ಮಾನವ ರೂಪಿಯಾಗಿ ಬಂದು ಆತ ನಡೆಸಿದ ಲೀಲೆಗಳಿಗೆ ಮಿತಿ ಇಲ್ಲ.

🔮ಇನ್ನೊಂದು ದಾಸರ ಪದದ ಸಾಲು ನೆನಪಾಗುತ್ತಿದೆ.

*“ಮಣ್ಣುಂಡ ಬಾಯ ತೆರೆದು, ಬ್ರಹ್ಮಾಂಡವನೆ ತೋರಿದ ಕೃಷ್ಣ; ನಿನ್ನ ಲೀಲೆ ಪಾಡಲು ಮತಿಯು ಸಾಲದು…”*

🔮ನಿಜ. ಅವನ ಲೀಲೆಗಳ ಹಾಡಿ ಹೊಗಳುವಷ್ಟು ಮತಿ ನಮಗೆಲ್ಲಿಂದ ಬರಬೇಕು ಹೇಳಿ. 

🔮ಇಲ್ಲಿ ನಾವು ವ್ಯಕ್ತ ಪಡಿಸಲು ಯತ್ನಿಸಿರುವುದು ಅವನ ಮೇಲಿನ ನಮ್ಮ ಪ್ರೀತಿ ಹಾಗೂ ನಮಗೇ ಅರಿಯದ ನಿಷ್ಕಾರಣ ಆಕರ್ಷಣೆ ಅಷ್ಟೇ.

🔮ಶ್ರೀ ಕೃಷ್ಣನ ವ್ಯಕ್ತಿತ್ವದಲ್ಲಿ ನಮ್ಮನ್ನು ಅತಿಯಾಗಿ ಆಕರ್ಷಿಸುವ ಗುಣವೆಂದರೆ, ಆತ ಸಾಮಾನ್ಯರೊಂದಿಗೆ ಸಾಮಾನ್ಯನಾಗಿದ್ದು ಕೂಡ ತನ್ನ ವ್ಯಕ್ತಿತ್ವದ ಘನತೆಯನ್ನು‌ ಉಳಿಸಿಕೊಳ್ಳುವುದು. 

🔮ಸಾರಥಿಯಾಗಿ ಅರ್ಜುನನಿಗೆ ಜೊತೆ ನೀಡುವ ಕೃಷ್ಣ,ಸಂದರ್ಭದ ಅಗತ್ಯತೆಯನ್ನರಿತು, ತನ್ನ ವಿಶ್ವರೂಪ‌ದರ್ಶನ ಮಾಡಿಸುತ್ತಾನೆ. 

🔮ಹಾಗೆಯೇ ಯಾರೇ ಆಗಲಿ ತಮ್ಮಲ್ಲಿರುವ ಅದ್ಭುತ ಶಕ್ತಿಗಳನ್ನು ಪ್ರದರ್ಶನಕ್ಕಿಡದೇ ಅಗತ್ಯ ಬಿದ್ದಾಗ  ಅದನ್ನು ಬಳಸಿ ಆ ಮೂಲಕ ತಮ್ಮ‌ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಅಭಿಪ್ರಾಯ.


Sunday, August 23, 2020

ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದಾ ??

ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದಾ ??

1. ಕೃಷ್ಣರಾಜ ಸಾಗರ ಅಣೆಕಟ್ಟು
2. ಮಹಾರಾಣಿ ಕಾಲೇಜು ಸ್ಥಾಪನೆ , ಬೆಂಗಳೂರು
3. ನಿಮಾನ್ಸ್ ಆಸ್ಪತ್ರೆ , ಬೆಂಗಳೂರು
4. ಮಿಂಟೋ ಹಾಸ್ಪಿಟಲ್ , ಬೆಂಗಳೂರು
5. ಕೆ . ಆರ್ . ಮಾರುಕಟ್ಟೆ , ಬೆಂಗಳೂರು
 6. ಬನಾರಸ್ ಹಿಂದೂ ಮಹಾವಿದ್ಯಾಲಯ , ಸಹ ನಿರ್ಮಾತೃ
7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಬೆಂಗಳೂರು
8. ಶಿವನಸಮುದ್ರ ಜಲವಿದ್ಯುತ್ ಯೋಜನೆ
9. ವಾಣಿವಿಲಾಸ ಅಣೆಕಟ್ಟು ,  ಚಿತ್ರದುರ್ಗ
10. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ
11. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ 
12.ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ 
13. ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ
14. ಯುವರಾಜ ಕಾಲೇಜು ಮೈಸೂರು ಮೈಸೂರ್ 
15. ಮೈಸೂರು ರಾಜ್ಯ ರೈಲ್ವೆ
16. ಮೈಸೂರು ಮೆಡಿಕಲ್ ಕಾಲೇಜ್
17 ಬೆಂಗಳೂರು ಟೌನ್ ಹಾಲ್
18. ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ  ಆಸ್ಪತ್ರೆ
19. ಮಂಡ್ಯ ಜಿಲ್ಲೆ ರಚನೆ
20. ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ
21. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ
22. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ
23. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ
24. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ
25. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಹಾಗೂ ವಿಧವಾ ಹುಡುಗಿಯರಿಗೆ ಸ್ಕಾಲರ್ಶಿಪ್
26. ಬಾಲ್ಯವಿವಾಹ ನಿಷೇಧ
27. ವಿಶ್ವೇಶ್ವರಯ್ಯ ಕಾಲುವೆ ಸ್ಥಾಪನೆ
28. ಮೈಸೂರು ರೆಸಿಡೆನ್ಶಿಯಲ್ ಕೃಷಿ ಶಾಲೆ ಸ್ಥಾಪನೆ
29. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ ಸ್ಥಾಪನೆ 
30. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜ್ , ಮೈಸೂರು ಸ್ಥಾಪನೆ
31. ವುಡ್ ಡಿಸ್ಟಿಲ್ಲೇಶನ್ ಫ್ಯಾಕ್ಟರಿ , ಭದ್ರಾವತಿ ಸ್ಥಾಪನೆ
32. ಮೈಸೂರ್ ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ
33. ಸರ್ಕಾರಿ ವಿಜ್ಞಾನ ಕಾಲೇಜು , ಬೆಂಗಳೂರು
34. ಕೃಷ್ಣರಾಜನಗರ ಟೌನ್ ಸ್ಥಾಪನೆ
35. ಕೃಷ್ಣ ರಾಜೇಂದ್ರ ಆಸ್ಪತ್ರೆ ಮೈಸೂರು , ಸ್ಥಾಪನೆ
36. ಸಮಾಜದ ಜ್ಞಾನಿಗಳ ಜ್ಞಾನವನ್ನು ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳಲು ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆ
37. ದೇಶದಲ್ಲಿ ಮೊಟ್ಟಮೊದಲ ಮೈಸೂರು ಬಾಯ್ಸ್ ಸ್ಕೌಟ್ಸ್ ಸ್ಥಾಪನೆ
38. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ ಸ್ಥಾಪನೆ
39.ಚೇಂಬರ್ ಆಫ್ ಕಾಮರ್ಸ್ , ಮೈಸೂರು
40. ಮೈಸೂರು ಶುಗರ್ ಮಿಲ್ಸ್ , ಮಂಡ್ಯ
41. ಮೈಸೂರ್ ಲ್ಯಾಂಪ್ಸ್ , ಬೆಂಗಳೂರು
42. ಮೈಸೂರ್ ಪೇಪರ್ ಮಿಲ್ಸ್ , ಭದ್ರಾವತಿ
43. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಭೂಮಿ ಕೊಡುಗೆ
44. ಮೈಸೂರು ಕೆಮಿಕಲ್ ಹಾಗೂ ಫರ್ಟಿಲೈಸರ್ಸ್ ಕಾರ್ಖಾನೆ
45. ಗ್ಲಾಸ್ ಹಾಗೂ ಪಿಂಗಾಣಿ ಕಾರ್ಖಾನೆ , ಬೆಂಗಳೂರು
46. ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ - ದೇಶದಲ್ಲೇ ಮೊದಲು
47. ಮೈಸೂರು ಪೈಂಟ್ಸ್ ಹಾಗೂ ವಾರ್ನಿಷ್ ಲಿಮಿಟೆಡ್ ಸ್ಥಾಪನೆ
ಮುಂತಾದವು ...

ಯೆಸ್ ... 
🔸ಕರ್ನಾಟಕ ಹಾಗೂ ಭಾರತ ಕಂಡ ಅದ್ಭುತ ಆಡಳಿತಗಾರ 
🔸 ಹಲವಾರು ಪ್ರಪ್ರಥಮಗಳ ಸರದಾರ 
🔸 ತನ್ನ 11ನೇ ವರ್ಷದಲ್ಲಿ ಮೈಸೂರು ರಾಜ್ಯದ ಸಿಂಹಾಸನ ಏರಿದ ಮಹಾರಾಜ
🔸ದೇಶದ ಆಗಿನ ಸಮಯದ 2ನೇ ಶ್ರೀಮಂತ ರಾಜ 
ಶ್ರೀ #ನಾಲ್ವಡಿ_ಕೃಷ್ಣರಾಜ_ಒಡೆಯರ್ ಅವರ ಜನ್ಮದಿನದಂದು ಅವರ ಸ್ಮರಣೆ ಹಾಗೂ ಕೋಟಿ ಕೋಟಿ ನಮನಗಳು                        

Can a man accomplish these many things in one life ??

 1. Krishnaraja Sagar Dam
 2. Establishment of Maharani College, Bangalore
 3. NIMHANS Hospital, Bangalore
 4. Minto Hospital, Bangalore
 5. K. R. Market, Bangalore
  6. Banaras Hindu College, co-founder
 7. Indian Institute of Science, Bangalore
 8. Shivanasamudra Hydroelectric Project
 9. Vanivilasa Dam, Chitradurga
 10. Establishment of State Bank of Mysore
 11. Establishment of Kannada Sahitya Parishad
12. Establishment of Mysore University
 13. Establishment of Bangalore University (UVCE)
 14. Yuvaraja College Mysore 
 15. Mysore State Railway
 16. Mysore Medical College
 17 Bangalore Town Hall
 18. Vanivilas Women's and Children's Hospital
 19. Mandya District Formation
 20. Installation of street lights in Bengaluru, first of it in the country
 21. Establishment of Vishweshwaraiah Iron and Steel Factory, Bhadravati
 22. Establishment of the Church of Saint Philomena
 23. Establishment of Lalitha Mahal Palace
 24. Establishment of Hirebhaskar Dam across Sharavati River
 25. Promotion of girl child education and scholarship for widowed girls
 26. Prohibition of child marriage
 27. Establishment of Vishweshwaraiah canal
 28. Establishment of Mysore Residential Agricultural School
 29. Establishment of Mysore Social Progress Association
 30. Establishment of Maharani Women's Science College, Mysore
 31. Wood Distillation Factory, Bhadravati Establishment
 32. Mysore Chrome and Tanning Factory
 33. Government Science College, Bangalore
 34. Establishment of Krishnarajanagar Town
 35. Establishment of Krishna Rajendra Hospital, Mysore
 36. Establishment of the Mysore Legislative Council to utilize the knowledge of the society for the benefit of the Government
 37. Establishment Mysore Boys Scouts , first of it's kind in the country
 38. Establishment of Government Sandalwood Oil Factory
 39. Chamber of Commerce, Mysore
40. Mysore sugar mills , Mandya
41. Mysore lamps , Bangalore
42. Mysore Paper Mills , Bhadravathi
43. Land for Raman Research Institute ( RRI )
44. Mysore Chemical & Fertilizers Factory
45. Glass & Porcelain factory , Bangalore 
46. City Improvement Trust Board - first of it's kind in India
47. Establishment of Mysore Paints & Varnishes Ltd 
 Etc ...

Yes ... 
🔹The great administrator in the history of Karnataka and India
 🔹the king of many firsts
🔹 the Maharaja who ascended the throne of the Mysore state in his 11th year
🔹 the 2nd richest king of the country at that time  

Remembering & Crores of salutes to Sri #Nalvadi_Krishnaraja_Odeyar on his birthdate .

Thursday, August 20, 2020

*ಅಗತ್ಯವಿರುವ ಸಂದೇಶ* (ಕ್ಯಾನ್ಸರ್ ರೋಗಿಗಳಿಗೆ)

*ಅಗತ್ಯವಿರುವ ಸಂದೇಶ* 
     (ಕ್ಯಾನ್ಸರ್ ರೋಗಿಗಳಿಗೆ)

 *ಓದದೆ ಅಳಿಸಬೇಡಿ. ಸೂಕ್ತವಾದರೆ, ಅದನ್ನು ಇತರರಿಗೂ ಕಳುಹಿಸಿ.*

 *ಸೂರತ್‌  ಗುಜರಾತ್‌ನಿಂದ ಮುಂಬೈ ಕಡೆ  ಹೆದ್ದಾರಿ 4 ಕಿ.ಮೀ ದೂರದಲ್ಲಿದೆ  ವಲಸಾಡ  ಗ್ರಾಮ.  ವಲಸಾಡ  ಗ್ರಾಮನಿಂದ 16 ಕಿ.ಮೀ ಸೂರತಕಡೆ ಹೋಗಬೇಕು. ಅಲ್ಲಿ  ವಾಘಲಧಾರಾ  ಊರು ಬರುತ್ತದೆ.  ಬಲಭಾಗದಲ್ಲಿ ನೀವು*
 *"ಶ್ರೀ ಪ್ರಭವ್ ಹೇಮ ಕಾಮಧೇನು  ಗಿರಿವಿಹಾರ್ ಟ್ರಸ್ಟ್, ಪಾಲಿತಾಣಾ* " 
 *ನೋಡುತ್ತೀರಿ "ಶ್ರೀ ರಸಿಕಲಾಲ ಮಾಣಿಕ್ಚಂದ್ ಧಾರಿವಾಲ್ ಕ್ಯಾನ್ಸರ್ ಆಸ್ಪತ್ರೆ"ಯ ಕಮಾನು ಕಾಣಿಸುತ್ತದೆ.    ಸಾವಿರಾರು ಚದುರು ಮೀಟರ್ ದಲ್ಲಿ  ಹರಡಿರುವ ಜಮೀನಿನಲ್ಲಿ  ಹಣ್ಣುಗಳು, ಹೂಗಳು, ಹಸಿರನ್ನು ನೋಡಿದರೆ , ಇದು ಪಯಾವುದೇ ಆಶ್ರಮಕ್ಕಿಂತ ಕಡಿಮೆಯಿಲ್ಲ.  ಇಲ್ಲಿ ಸುಂದರವಾದ ಜೈನ ದೇವಾಲಯ ಮತ್ತು ಬೃಹತ್ ಆಹಾರ ಶಾಲೆ ಕೂಡ ಇದೆ.  ಗೌಶಾಲಾದಲ್ಲಿ ಸುಮಾರು 400 ಸ್ಥಳೀಯ ದೇಸಿ ಹಸುಗಳಿವೆ.  ಇಲ್ಲಿ, ಕ್ಯಾನ್ಸರ್ ರೋಗಿಯನ್ನು (ಪೇಶೆಂಟ) ಮತ್ತು  ಒಬ್ಬ  ಜೊತೆಗಾರನನ್ನು ಚಿಕಿತ್ಸೆ ಮತ್ತು ತರಬೇತಿಗಾಗಿ 10 ದಿನಗಳವರೆಗೆ ಇರಿಸಲಾಗುತ್ತದೆ.  80 ಹಾಸಿಗೆಗಳು ಲಭ್ಯವಿದೆ.  ನಾಸ್ಟಾ  ಲಂಚ  ಮತ್ತು ರಾತ್ರಿ ಭೋಜನದ ಸಮಯದಲ್ಲಿ  ರೋಗಿಯನ್ನು  ಕಾಣಬಹುದು.*

 *ಬೆಳಿಗ್ಗೆ  9 ಗಂಟೆಗೆ ನೀವು ಕೇವಲ 50 ರೂ.ಗೆ ಕೇಸ್ ಎಂಟ್ರಿ  ಮಾಡಿಸಬೇಕು.  ರೋಗಿಯ  ಕೇಸ್ ಫೈಲ್ ಅನ್ನು  ತಮ್ಮೊಂದಿಗೆ ತೆಗೆದುಕೊಳ್ಳಬೇಕು ಮತ್ತು ಆಪರೇಷನ್ ಮಾಡಿದರೆ, ಕೀಮೋ ಮಾಡಲಾಗುತ್ತದೆ.  ಬೆಳಿಗ್ಗೆ 10.30 ರಿಂದ 12.30 ರವರೆಗೆ ಮತ್ತು ಮಧ್ಯಾಹ್ನ 3.30 ರಿಂದ 5.30 ರವರೆಗೆ ವೈದ್ಯರು ಪರೀಕ್ಷಿಸಿದ ನಂತರ 10 ದಿನಗಳವರೆಗೆ   ರೋಗಿಯನ್ನು ದಾಖಲಿಸಲಾಗುತ್ತದೆ.  ರೋಗಿ ಮತ್ತು ಒಬ್ಬ  ಜೊತೆಗಾರನಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ.  ಅಂತಹ ಪರಿಸ್ಥಿತಿಯಲ್ಲಿ,  ರೋಗಿಗೆ 11 ದಿನಗಳವರೆಗೆ ಉಪಾಹಾರ  ಊಟ   ಮತ್ತು ಡಿನ್ನರ್  ಸಲುವಾಗಿ ಕೂಪನ್ಗಳನ್ನು ಕೊಡಲಾಗುತ್ತದೆ,   ಬಸ್ ಮತ್ತು ಯಾವುದೇ ಖರ್ಚುಗಳಿಲ್ಲ.  1000 ರೂ ಠೇವಣಿ ಪಾವತಿಸಬೇಕಾಗಿದೆ, ಅದನ್ನು ರಶೀದಿಯನ್ನು ತೋರಿಸಿದ ನಂತರ 11 ನೇ ದಿನಕ್ಕೆ ಹಿಂದಿರುಗಿಸಲಾಗುತ್ತದೆ (10 ದಿನಗಳ ಮೊದಲು ಅದನ್ನು ಹಿಂಪಡೆಯಲಾಗಿದ್ದರೆ ಠೇವಣಿ ಮರುಪಾವತಿ ಮಾಡಲಾಗುವುದಿಲ್ಲ).* 
 
   *ಬೆಳಿಗ್ಗೆ 5.30 ಕ್ಕೆ   ಯೋಗ,  ಪ್ರಾಣಾಯಂ,  7 ಗಂಟೆಗೆ   ಹಸುವಿನ ಸಗಣಿ, ಹಸುವಿನ ಮೂತ್ರ, ಹಸುವಿನ ಹಾಲು, ಮೊಸರು, ತುಪ್ಪದಿಂದ ಮಾಡಿದ ಪಂಚಗವ್ಯ ಮಿಶ್ರಣ*

 *ಬೆಳಿಗ್ಗೆ 8 ರಿಂದ ಸಂಜೆ 9  ರವರೆಗೆ ಉಪಹಾರ,*

 *9 ಗಂಟೆಗೆ, ಗೌಮೂತ್ರದೊಂದಿಗೆ  ಆಯುರ್ವೇದ ಮಾತ್ರೆಗಳು*

 *9 ರಿಂದ 10 ದೇಹದ  ಕ್ಯಾನ್ಸರ್ ಭಾಗದ ಮೇಲೆ, ಹಸುವಿನ ಸಗಣಿ, ಹಸುವಿನ ಮೂತ್ರವನ್ನು   ಲೇಪಿಸಿದ ನಂತರ  ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು,*

 *10 ಗಂಟೆ ಕಾಡಾ (ಕಷಾಯ),*

 *ಮಧ್ಯಾಹ್ನ 11 ರಿಂದ 1 ರ ನಡುವೆ  ಊಟ ,    ಊಟದ ನಂತರ ಆಯುರ್ವೇದ ಮಾತ್ರೆಗಳು,*

 *2 ರಿಂದ 3 ಗಂಟೆತನಕ. ಸಭಾಂಗಣದಲ್ಲಿ  ರೋಗಿಯ ಊಟ  ಮತ್ತು ಚಿಕಿತ್ಸೆಗಾಗಿ ಸಂಬಂಧಿಸಿದ  ಪ್ರಶ್ನೆ  ಉತ್ತರಗಳ ಚರ್ಚೆ*

 *3.30 ಕ್ಕೆ    ಕಾಡಾ (ಕಷಾಯ),*

 *ಸಂಜೆ 5 ರಿಂದ 6 ಗಂಟೆಯ ನಡುವೆ   ಊಟ, ನಂತರ ಆಯುರ್ವೇದ ಮಾತ್ರೆಗಳು,*

 *8 ರಿಂದ ರಾತ್ರಿ 9.30 ರವರೆಗೆ ಸತ್ಸಂಗ್, ಕೀರ್ತನ್, ಮತ್ತು ನಂತರ   ರೋಗಿಗೆ ಹಾಲು,* 

 *ಈ  10 ದಿನಗಳವರೆಗೆ ದಿನಚರಿ ಮುಂದುವರಿಯುತ್ತದೆ.  11 ನೇ ದಿನ ನೀವು 1 ತಿಂಗಳ ಔಷಧಿಯನ್ನು (ಸುಮಾರು 2500 ರಿಂದ 4000 ರೂಪಾಯಿಗಳ ವರೆಗೆ) ತೆಗೆದುಕೊಂಡು ನಿಮ್ಮ ಮನೆಗೆ ಮರಳಬಹುದು, ಮತ್ತು ಇಲ್ಲಿ ಉಪಚಾರಮಾಡಿದ   ಪದ್ಧತಿಯಂತೆ  ಮನೆಯಲ್ಲಿಯೇ ಚಿಕಿತ್ಸೆಯನ್ನು ಕನಿಷ್ಠ ಒಂದು ವರ್ಷ  ಚಿಕಿತ್ಸೆ ನೀಡಬೇಕು.   ಔಷಧಿಗಳನ್ನು ಪ್ರತಿ ತಿಂಗಳು, ಎರಡು ತಿಂಗಳಿಗೊಮ್ಮೆ  ತೆಗೆದುಕೊಂಡು ಹೋಗಬೇಕು.*

 *ಪ್ರಮುಖ ಮಾತುಗಳು*

 *ಕೋಟ್ಯಧಿಪತಿ ಅಥವಾ ಕಡುಬಡವ, ಎಲ್ಲರಿಗೂ ಸಮಾನ ಚಿಕಿತ್ಸೆ, ಏಕರೂಪದ ನಿಯಮಗಳು,*
 *ವಿಐಪಿ ಸಂಸ್ಕೃತಿ ಇಲ್ಲ.*
 *ಅತ್ಯಂತ ನಿಷ್ಠಾವಂತ, ಅಧಿಕೃತ, ವಸತಿ, ಸೇವೆ ಆಧಾರಿತ ಸಿಬ್ಬಂದಿ.*
 *ವೈದ್ಯರು ಮತ್ತು ಸೇವಾ ಮನೋಭಾವದ ಸಿಬ್ಬಂದಿ ಒಂದೇ ಆಹಾರವನ್ನು  ಊಟ ಮಾಡುತ್ತಾರೆ.*
 *ಮೂರು ಬಾರಿ ಸಭೆ, ಸತ್ಸಂಗ ಮತ್ತು   ಊಟದ ಸಮಯ ಮೊಬೈಲ್ ಬಳಕೆಯ ನಿಷೇಧ.*
 *ನೀವು 9 ನೇ ದಿನದಂದು ಬಯಸಿದರೆ ಅಥವಾ ಅನುಕೂಲಕರವಾಗಿದ್ದರೆ, ಇಲ್ಲಿರುವ ಕಚೇರಿಯಿಂದ ತಮಗೊಂದು  ಪ್ರಮಾಣೀಕೃತ ಫಾರ್ಮ್ ನೀಡಲಾಗುವುದು.  ನೀವು ಈ ಫಾರ್ಮ್ ತೆಗೆದುಕೊಳ್ಳಬೇಕು ಮತ್ತು ರೋಗಿ ಮತ್ತು ನಿಮ್ಮ ಆಧಾರ್ ಕಾರ್ಡ್ ಕೇವಲ 14 ಕಿ.ಮೀ ದೂರದಲ್ಲಿರುವ ವಲ್ಸಾಡ  ರೈಲ್ವೆ ನಿಲ್ದಾಣಕ್ಕೆ ಹೋಗಲು, ರೋಗಿಗೆ ಟೋಟಲ್ ಫ್ರೀ ಮತ್ತು  ಜೊತೆಗಾರನಿಗೆ  50% ರಿಯಾಯಿತಿ ದರದ ಕನಫರ್ಮ ಟಿಕೆಟ  ಕೊಡಲಾಗುತ್ತದೆ.   1 ತಿಂಗಳ ನಂತರ, 1 ಬಾರಿ ಬರಲು ಮತ್ತು ಹೋಗಲು ಫಾರ್ಮ್ ಅನ್ನು ತರುವ ಮೂಲಕ ನೀವು ಈ ಸೌಲಭ್ಯವನ್ನು ಮತ್ತೆ  ಪಡೆಯುತ್ತೀರಿ.*

 *ಟಾಟಾ ಆಸ್ಪತ್ರೆ ಮತ್ತು ದೇಶದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ವ್ಯರ್ಥ ಖರ್ಚು ಮಾಡಿ,  ಸಾವಿನ ಸಮೀಪ ತಲುಪಿದ ರೋಗಿಗಳು ದಣಿದು ನೂರಾರು ಸಂಖ್ಯೆಯಲ್ಲಿ ಭರವಸೆಯೊಂದಿಗೆ ಇಲ್ಲಿಗೆ ಬರುತ್ತಿದ್ದಾರೆ.*

  *ಶುಭಮ್ ಭವತು.*
 *ಶುಭಾಶಯಗಳೊಂದಿಗೆ*
 *ವಾಘಲ್ಧಾರಾ ಆಸ್ಪತ್ರೆ*
 *08141880808.*
  *06354514539*

  *ದಯವಿಟ್ಟು ಸಾರ್ವಜನಿಕ ಕಲ್ಯಾಣಕ್ಕಾಗಿ ಫಾರ್ವರ್ಡ್ ಮಾಡಿ* 

  *ಈ ಸಂದೇಶಗಳನ್ನು ಫಾರ್ವರ್ಡ್ ಮಾಡಿ.   ಇದರಿಂದ ಯಾವುದೇ ತುರ್ತು ವ್ಯಕ್ತಿಗೆ  ಒಳ್ಳೆಯ ಸಹಾಯ  ಆಗಬಹುದು* 

 *ಧನ್ಯವಾದ*🙏🙏

Wednesday, August 19, 2020

ಹೃದಯ ಅತ್ಯಂತ ಫಲವತ್ತಾದ ಜಾಗ.ಅಲ್ಲಿ ನೀವು ಪ್ರೇಮ ,ದ್ವೇಷ ,ಮತ್ಸರ,ಸೌಹಾರ್ದ ,ದಯೆ ಏನನ್ನೇ ಬಿತ್ತಿದರು ಸೊಂಪಾಗಿ ಬೆಳೆಯುತ್ತದೆ...

ಹೃದಯ ಅತ್ಯಂತ ಫಲವತ್ತಾದ ಜಾಗ.
ಅಲ್ಲಿ ನೀವು ಪ್ರೇಮ ,ದ್ವೇಷ ,ಮತ್ಸರ,
ಸೌಹಾರ್ದ ,ದಯೆ ಏನನ್ನೇ ಬಿತ್ತಿದರು
        ಸೊಂಪಾಗಿ ಬೆಳೆಯುತ್ತದೆ...
ಅದರಲ್ಲಿ ಬಿಡುವ ಫಲವನ್ನು ನಾವು 
ತಿನ್ನಲೆಬೇಕಿರುವುದು ಕಡ್ಡಾಯ ...
ಅದ್ದರಿಂದ .ಬಿತ್ತುವಾಗಲೇ ಫಲದ     
      ಬಗ್ಗೆ  ಎಚ್ಚರವಿರಲಿ....
🙏ಶುಭೋದಯ🙏

Tuesday, August 18, 2020

ಪೈಲೆಟ್ ಟ್ರೈನಿಂಗ್ ಕ್ಲಾಸ್ ಗೆ ಸೇರಿಕೊಳ್ಳಬೇಕು ಅಂದರೆಏನಿಲ್ಲ ಅಂದರೂ 38 ರಿಂದ 40 ಲಕ್ಷ ರೂಪಾಯಿ ಫೀಸನ್ನು ಕಟ್ಟಲೇ ಬೇಕಾಗುತ್ತದೆ.

ಪೈಲೆಟ್ ಟ್ರೈನಿಂಗ್ ಕ್ಲಾಸ್ ಗೆ ಸೇರಿಕೊಳ್ಳಬೇಕು ಅಂದರೆ
ಏನಿಲ್ಲ ಅಂದರೂ 38 ರಿಂದ 40 ಲಕ್ಷ ರೂಪಾಯಿ ಫೀಸನ್ನು ಕಟ್ಟಲೇ ಬೇಕಾಗುತ್ತದೆ. ಇಂದಿರಾಗಾಂಧಿ ನ್ಯಾಷನಲ್ ಅರ್ಬನ್ ಅಕಾಡೆಮಿ ಈ ಒಂದು ಇನ್ಸ್ಟಿಟ್ಯೂಟ್ ಗೆ ಟ್ರೈನಿಂಗಿಗೆ ಅಂತ ಸೇರಿಕೊಂಡರೆ ಇಲ್ಲಿ 38 ಲಕ್ಷ ರೂಪಾಯಿಯನ್ನು ಕಟ್ಟಬೇಕಾಗುತ್ತದೆ.
ಇಲ್ಲಿ ಒಂದು ಅಪ್ಲಿಕೇಶನ್ ತುಂಬಬೇಕು ಅಂದರೆ 6000 ರೂ ಕಟ್ಟಬೇಕಾಗುತ್ತದೆ.
ಇಷ್ಟೊಂದು ದುಬಾರಿ ಹಣವನ್ನು ಕಟ್ಟುವುದು ಮಧ್ಯಮವರ್ಗ ಹಾಗೂ ಬಡ ಜನರಿಗೆ ತುಂಬಾ ಕಷ್ಟವಾಗುತ್ತದೆ.
ಆದರೂ ಟ್ರೈನಿಂಗ್ ಮುಗಿದ ನಂತರ ಒಬ್ಬ ಕಮರ್ಷಿಯಲ್ ಪೈಲೆಟ್ ಆದ ನಂತರದಲ್ಲಿ ಆ ವ್ಯಕ್ತಿಗೆ ನಮ್ಮ ಭಾರತದಲ್ಲಿ ಒಂದುವರೆ ಲಕ್ಷ ರೂಪಾಯಿ ಸಂಬಳವನ್ನು ಕೊಡಲಾಗುತ್ತದೆ. ಇದು ಕೆಲವೊಂದು ಕಂಪನಿಗಳ ಮೇಲೆ ಅವಲಂಬಿತವಾಗಿದ್ದು ಸಂಬಳವನ್ನು ಹೆಚ್ಚು ಸಹ ಮಾಡಬಹುದು.
ಆದರೆ ಇಂಟರ್ನ್ಯಾಷನಲ್ ಪೈಲೆಟ್ ಆದರೆ ತಿಂಗಳಿಗೆ ಐದರಿಂದ ಆರು ಲಕ್ಷ ಸಂಬಳವನ್ನು ಪಡೆಯಬಹುದು.
ಇದರಲ್ಲಿ ಟ್ರೈನಿಂಗ್ ಫೀಸ್ ತುಂಬಾ ಜಾಸ್ತಿ ಇರುತ್ತದೆ ಅದರಲ್ಲಿ ಸಂಬಳ ಕೂಡಾ ಹೆಚ್ಚಾಗಿರುತ್ತದೆ.
ಇನ್ನು ಇಲ್ಲಿನ ಕೋರ್ಸ್ ಬಗ್ಗೆ ನೋಡುವುದಾದರೆ ಒಬ್ಬ ಪೈಲೆಟ್ ಗೆ SPL, PPL ಮತ್ತು CCL ಎಂದು ಈ ಮೂರು ರೀತಿಯಲ್ಲಿ ಲೈಸೆನ್ಸ್ ಗಳನ್ನು ನೀಡಲಾಗುತ್ತದೆ.
ಕೋರ್ಸಿನ ಮೊದಲ ಲೈಸೆನ್ಸ್ ಎಸ್ಪಿಎಲ್ ಅಂದ್ರೆ ಸ್ಟೂಡೆಂಟ್ ಪಾಸ್ ಲೈಸೆನ್ಸ್. ಇಲ್ಲಿ ನೇರವಾಗಿ ವಿಮಾನವನ್ನು ಹಾರಾಡಲು ಬಿಡದೆ ವಿಮಾನದ ಒಳಗೆ ಹಾಗೂ ಹೊರಗಿನ ರಚನೆಯ ಬಗ್ಗೆ ಹಾಗೂ ಅಲ್ಲಿನ ಮಾಹಿತಿಗಳನ್ನು ತಿಳಿಸಿಕೊಡಲಾಗುತ್ತದೆ ಎರಡನೇ ಲೈಸೆನ್ಸ್ ಪಿಪಿಎಲ್ ಅಂದ್ರೆ ಪ್ರೈವೇಟ್ ಪೈಲೆಟ್ ಲೈಸೆನ್ಸ್. ಇಲ್ಲಿ ಸತತವಾಗಿ 16 ಗಂಟೆಗಳ ಕಾಲ ವಿಮಾನವನ್ನು ಹಾರಾಡಿಸುತ್ತಾ ಇರಬೇಕಾಗುತ್ತದೆ.
ಇದರಲ್ಲಿ ಪಾಸಾದರೆ ನಂತರದ ಹಾಗೂ ಕೊನೆಯ ಲೈಸೆನ್ಸ್ ಸಿಪಿಎಲ್ ಅಂದರೆ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್. ಇದನ್ನು ನೀಡಲಾಗುತ್ತದೆ ಇಲ್ಲಿ 258 ಗಂಟೆಗಳ ಕಾಲ ಸತತವಾಗಿ ವಿಮಾನವನ್ನು ಹಾರಾಡಿಸುತ್ತಲೇ ಇರಬೇಕಾಗುತ್ತದೆ.
ಇಲ್ಲಿ ನಿಮ್ಮ ಕೆಪ್ಯಾಸಿಟಿ ಹಾಗೂ ನಿಮ್ಮ ಏಕಾಗ್ರತೆಯನ್ನು ಚೆಕ್ ಮಾಡಲಾಗುತ್ತದೆ. ಕೊನೆಯದಾಗಿ ಒಂದು ಮೆಡಿಕಲ್ ಟೆಸ್ಟ್ ಕೂಡಾ ಮಾಡಿ ಅದರಲ್ಲಿ ಫಿಟ್ ಅಂತ ಅನಿಸಿದರೆ ಮಾತ್ರ ನಿಮಗೆ ಸಿಪಿಎಲ್ ನೀಡಲಾಗುತ್ತದೆ. ಆದರೆ ಇವೆಲ್ಲವೂ ಓಕೆ ಪೈಲೆಟ್ ಆಗಬೇಕು ಎನ್ನುವುದು ಕೆಲವರ ಕನಸಾಗಿದ್ದು ಇಷ್ಟೊಂದು ಪೀಸ್ ಗಳನ್ನು ಕೊಡುವಷ್ಟು ಸಾಮರ್ಥ್ಯ ಅವರಲ್ಲಿ ಇರುವುದಿಲ್ಲ ಎನ್ನುವ ಪ್ರಶ್ನೆ ಇದ್ದೇ ಇರುತ್ತದೆ.
ಇದಕ್ಕೊಂದು ದಾರಿ ಇದ್ದು ಸರ್ಕಾರದ ಕಡೆಯಿಂದ NDA ಪರೀಕ್ಷೆ ನಡೆಸಲಾಗುತ್ತದೆ ಪರೀಕ್ಷೆಯನ್ನು ಬರೆದು ಇದರಲ್ಲಿ ಉತ್ತೀರ್ಣರಾಗಿದ್ದರೆ ನಿಮ್ಮ ಟ್ರೈನಿಂಗ್ ನ ಎಲ್ಲಾ ಖರ್ಚನ್ನು ಸಹ ಸರ್ಕಾರ ವಹಿಸಿಕೊಳ್ಳುತ್ತದೆ ಹಾಗೂ ಆರಂಭದಲ್ಲಿ 50000 ರೂಪಾಯಿ ಸಂಬಳವನ್ನು ಸಹ ನೀಡುತ್ತದೆ. ಈ ಮೂಲಕ ಇಂಡಿಯನ್ ಏರ್ ಫೋರ್ಸ್ ಗೆ ಜಾಯಿನ್ ಆಗಬಹುದು.

*ಕಿವಿಯ ಕಥೆ-ವ್ಯಥೆ!*

*ಕಿವಿಯ ಕಥೆ-ವ್ಯಥೆ!*

ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ! ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ! 

ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ತಲೆಗೆ ಅಂಟಿಸಿದ್ದಾನೆ ಅ ಸೃಷ್ಟಿಕರ್ತ!

ನಮ್ಮ ದುಃಖ ಇಷ್ಟೇ ಆದರೆ ತೊಂದರೆ ಇರಲಿಲ್ಲ. ನಮ್ಮ ಕರ್ತವ್ಯ ಬರೇ ಕೇಳುವುದು ಮಾತ್ರ. ಹೊಗಳಿಕೆಯೋ, ತೆಗಳಿಕೆಯೋ; ಒಳ್ಳೆಯದೋ, ಕೆಟ್ಟದ್ದೋ; ಕೇಳುವುದಷ್ಟೇ ನಮ್ಮ ಕೆಲಸ. ಏನು ಕೇಳಿದರೂ ಸುಮ್ಮನಿರಬೇಕು, ಮಾತನಾಡುವ ಅಧಿಕಾರವಿಲ್ಲ. ಇಷ್ಟು ಮಾತ್ರವಲ್ಲ, ಕ್ರಮೇಣ ನಮ್ಮನ್ನು ಗೂಟವೆಂದು ಕೂಡ ತಿಳಿಯಲಾಯಿತು. ಕಣ್ಣಿನ ತಪ್ಪಿಗೆ ನಮಗೆ ಶಿಕ್ಷೆ! ಕನ್ನಡಕದ ಭಾರವನ್ನು ನಾವು ಮತ್ತು ಮೂಗು ಹೊರಬೇಕು! ಕನ್ನಡಕದ ಕಡ್ಡಿಯನ್ನು ನಮ್ಮ ಮೇಲೆ ಹೊರಿಸುತ್ತಾರೆ! ನಾವು ಏನೂ ಹೇಳುವುದಿಲ್ಲ, ಬರೀ ಕೇಳುತ್ತೇವೆ ಅಂತ ಸದರದಿಂದ ಈ ರೀತಿಯ ಹೊರೆ ಹೊರಿಸುವುದೇ?

ಯಾರೇ ತಪ್ಪು ಮಾಡಿದರೂ ಶಿಕ್ಷೆ ನಮಗೆ! ಚಿಕ್ಕ ವಯಸ್ಸಿನಲ್ಲಿ ಶರೀರದ ಯಾವುದೇ ಅಂಗ(ಮುಖ್ಯವಾಗಿ ಬಾಯಿ!) ತಪ್ಪು ಮಾಡಿದರೂ ನಮ್ಮನ್ನು ಹಿಡಿದು ತಿರುಚಿ ಬಿಡುತ್ತಿದ್ದರು. ವಿಶೇಷವಾಗಿ ಶಾಲೆಯಲ್ಲಿ ಶಿಕ್ಷಕರು. ಅವರ ಕೈ ಬರುತ್ತಿದ್ದುದೇ ನಮ್ಮ ಕಡೆಗೆ!

ಯೌವನದಲ್ಲಿ ವಿಶೇಷವಾಗಿ ಹೆಂಗಸರು ಕಿವಿಗೆ ಬಗೆಬಗೆಯ ಆಭರಣಗಳನ್ನು ಹಾಕಿಕೊಂಡು ಮೆರೆದರೆ ಹೊಗಳಿಕೆ ಮುಖಕ್ಕೆ, ನಮಗೆ ಕೇವಲ ಚುಚ್ಚಿಸಿಕೊಂಡ ನೋವು ಮಾತ್ರ!

ಮತ್ತೆ ಶೃಂಗಾರಗಳ ಬಗ್ಗೆ ನೋಡಿ! ಕಣ್ಣಿಗೆ ಕಾಡಿಗೆ, ಮುಖಕ್ಕೆ ಪೌಡರು, ಕ್ರೀಮು, ಇನ್ನೂ ಅದೇನೇನೋ, ತುಟಿಗಳಿಗೆ ಬಣ್ಣಬಣ್ಣದ ಲಿಪ್ ಸ್ಟಿಕ್! ನಮಗೆ? ಏನೂ ಇಲ್ಲ! ನಾವು ಈ ತನಕ ನಮಗಾಗಿ ಏನಾದರೂ ಕೇಳಿದ್ದಿದ್ದರೆ ಹೇಳಿ! ಮುಖದ ಎಲ್ಲಾ ಭಾಗಗಳನ್ನೂ ಕವಿಗಳು ವರ್ಣಿಸುತ್ತಾರೆ. ಕಣ್ಣಿಗೆ ಕಮಲದಳ, ಮೀನು, ಇತ್ಯಾದಿ, ಮೂಗಿಗೆ ಸಂಪಿಗೆ, ತುಟಿಗೆ ತೊಂಡೆಯ ಹಣ್ಣು, ಇತ್ಯಾದಿ ಅದೇನೇನು ಹೋಲಿಕೆಗಳು! ನನಗೆ? ಕೊನೆಯ ಪಕ್ಷ ಹಲಸಿನ ಹಣ್ಣಿನ ತೊಳೆಯ ಹೋಲಿಕೆಯಾದರೂ ಮಾಡಬಹುದಿತ್ತಲ್ಲಾ? ಅದೆಷ್ಟು ನಿರ್ಲಕ್ಷ್ಯ ನಮ್ಮ ಬಗ್ಗೆ? ಕೆಲವು ಬಾರಿ ಕೂದಲು ಕತ್ತರಿಸುವಾಗ ನಮಗೂ ಕತ್ತರಿಯ ರುಚಿ ತೋರಿಸುವುದೂ ಇದೆ!

ಹೇಳಲು ಎಷ್ಟೋ ಇದೆ. ಯಾರಲ್ಲಿ ಹೇಳಲಿ? ದುಃಖವನ್ನು ಹಂಚಿಕೊಂಡರೆ ಹಗುರವಾಗುತ್ತದಂತೆ. ಕಣ್ಣಿನ ಹತ್ತಿರ ಹೇಳಿದರೆ ಕಣ್ಣೀರು ಸುರಿಸುತ್ತದೆ ಹೊರತು ಬೇರೇನಿಲ್ಲ. ಮೂಗಿನ ಹತ್ತಿರ ಹೇಳಿದರೂ ನೀರು ಸುರಿಸುವುದು ಮಾತ್ರ. ಬಾಯಿಯ ಹತ್ತಿರ ಹೇಳಿದರೆ ಅಯ್ಯೋ ಪಾಪ ಅನ್ನುವುದು ಬಿಟ್ಟರೆ ಮತ್ತೇನೂ ಇಲ್ಲ.

ಇನ್ನೂ ಇದೆ ನನ್ನ ಸಂಕಟ! ಭಟ್ಟರ ಜನಿವಾರ(ಶೌಚ ಮಾಡುವಾಗ), ದರ್ಜಿ, ಬಡಗಿಯ ಪೆನ್ಸಿಲ್, ಗುಟ್ಕಾ ಪ್ಯಾಕೆಟ್, ನಾಣ್ಯ, ಇತ್ಯಾದಿ ಎಲ್ಲಾ ನಾವು ಹೊತ್ತುಕೊಳ್ಳಬೇಕು!

ಇತ್ತೀಚೆಗೆ ಇನ್ನೊಂದು ರಗಳೆ!

ಕೊರೋನಾದಿಂದಾಗಿ ಮಾಸ್ಕನ್ನು ಕೂಡಾ ನಮಗೆ ಸಿಕ್ಕಿಸಿಬಿಡುತ್ತಾರೆ! ಅದು ಎಳೆದು ಎಳೆದು ನೋವು ಆಗುತ್ತದೆ! ಹೇಳಲು ನಮಗೆ ನಾಲಿಗೆಯೇ ಇಲ್ಲ! ಇನ್ನೂ ಏನಾದರೂ ಇದ್ದರೆ ಹೇಳಿ, ತಂದು ತೂಗುಹಾಕಿ! ನಾವಿದ್ದೇವಲ್ಲ, ಮೂಕಪ್ರಾಣಿಗಳು!

Friday, August 14, 2020

ದೇಹದ ಸೌಂದರ್ಯ ?

💐ದೇಹದ ಸೌಂದರ್ಯ ಮುಪ್ಪಾಗಿ 
ಸುಕ್ಕಾಗಿ ಹೋಗುವುದು
ಆದರೆ ಆತ್ಮದ ಸೌಂದರ್ಯ ಉಸಿರುಯಿರುವವರೆಗೆ 
    ಮಾಗದಿರುವುದು💐

     💐ಶುಭೋದಯ💐
Dgnsgreenworld

Thursday, August 13, 2020

ವಿಭೂತಿ ಮಹಿಮೆಯ ಕಥೆ

ವಿಭೂತಿ ಮಹಿಮೆಯ ಕಥೆ

ಸರಸ್ವತಿ , ಲಕ್ಷ್ಮಿ   ಬಂಗಾರ ಹಾಕಿಕೊಂಡಿದ್ದಾರೆ.  ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬಾರದೆಂದು ಸ್ವಾಮಿ ನನಗೆ ಬಂಗಾರ
ಹಾಕಿಕೊಳ್ಳುವ ಬಯಕೆಯಾಗಿದೆ.  ನನಗೆ ಅನುಗ್ರಹಿಸು ಎಂದು.
ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ

ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ!
ನನ್ನಲ್ಲಿರುವುದು ಇದೆ. ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ ಎಂದ.

ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ)  ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು. ಆಗ ಕುಬೇರ ನಗುತ್ತಾ ಇದಕ್ಕೆ ಏನು ತೂಕದ ಬಂಗಾರ ಕೊಡಲಾಗುತ್ತದೆ.
ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ. 

ಇಲ್ಲ ನನಗೆ ಇದರ ತೂಕವೇ ಬೇಕು. ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ ಅಣತಿಯಂತೆ,  ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ
ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ..  ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ.

ಕುಬೇರನಿಗೂ ನಾನೆಂಬ ಅಹಂ ಭಾವವಿತ್ತು ಅದಕ್ಕೆ ಹೀಗಾಯಿತು. ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು.

ಆಗ ಕುಬೇರನು ತಾಯಿ ನಾನು ಅಹಂಕಾರದಿಂದ ನುಡಿದೆ ಕ್ಷಮಿಸಿ. ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ. ಹಾಕಿದರೂ, ಸರಿದೂಗಲಾರದು ಎಂದು
ಕೈ ಮುಗಿದ. 

ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ  "ಶಿವ ಕೊಟ್ಟ ಭಸ್ಮವೇ ಬಂಗಾರ" ಎಂದು ಧರಿಸಿಕೊಂಡಳು.

*ಓಂ ನಮಃ ‌ಶಿವಾಯ*

Friday, August 7, 2020

ನಮ್ಮ ಹಿರಿಯರು ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆದಿರುವುದರ ಹಿಂದಿರುವ ವೈಜ್ಞಾನಿಕತೆ ತಿಳಿದು ಅದನ್ನು ಸರಿಯಾಗಿ ಬಳಸಿದರೆ ಯಾವ ಔಷಧವೂ ಅಗತ್ಯವಿಲ್ಲ.

ನಮ್ಮ ಹಿರಿಯರು ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆದಿರುವುದರ ಹಿಂದಿರುವ  ವೈಜ್ಞಾನಿಕತೆ ತಿಳಿದು ಅದನ್ನು ಸರಿಯಾಗಿ ಬಳಸಿದರೆ ಯಾವ ಔಷಧವೂ ಅಗತ್ಯವಿಲ್ಲ. 

ಒಣ ಕೊಬ್ಬರಿ ತಿನ್ನುವುದರಿಂದ ಸಿಗುವ ಲಾಭ ತಿಳಿದರೆ ಆಶ್ಚರ್ಯ ವಾಗುತ್ತದೆ.

ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳಿವೆ ಹಾಗೂ ಯಾವೆಲ್ಲ ರೋಗಗಳಿಗೆ ಇದು ಒಳ್ಳೆಯದು ಎಂದು ತಿಳಿಯೋಣ ಬನ್ನಿ

ಸಾಮಾನ್ಯವಾಗಿ ಈಗ ಕಂಡು ಬರುವ ಮುಖ್ಯ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ,ಆಯಾಸ ,ಗಂಟುಗಳಲ್ಲಿ ನೋವು,ಸೊಂಟ ನೋವು,ರಕ್ತಹೀನತೆ,ಅಜೀರ್ಣ,ಕೂದಲು ಉದುರುವುದು,ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದು,ಜ್ಞಾಪಕ ಶಕ್ತಿಯ ತೊಂದರೆ ಇದಕ್ಕಾಗಿ ಹಾಗೂ ಇದನ್ನು ಸರಿಪಡಿಸಿಕೊಳ್ಳಲು ಹಲವಾರು ಮೆಡಿಸಿನ್ ಟ್ಯಾಬ್ಲೆಟ್ ಗಳ ಸೇವನೆ ಕೂಡ ಮಾಡಲಾಗುತ್ತಿದೆ.ಆದರೆ ಫಲಿತಾಂಶ ಆ ಔಷಧಿಗಳನ್ನು ಸೇವಿಸುವ ತನಕ ಅಷ್ಟೇ ಆಮೇಲೆ ಯಾವುದೇ ರೀತಿಯ ಫಲಿತಾಂಶ ದೊರೆಯುವುದಿಲ್ಲ.

ಇದಕ್ಕಾಗಿ ನಾವು ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಕೆಲವು ವಸ್ತುಗಳನ್ನು ತಪ್ಪದೇ ಸೇವಿಸಬೇಕು.ಇದರಲ್ಲಿ ಸಂಪೂರ್ಣವಾದ ಪೋಷಕಾಂಶಗಳಿದ್ದು ನಮ್ಮ ದೇಹದಲ್ಲಿನ ವಿಟಮಿನ್ ಕೊರತೆಗಳನ್ನು ಪೂರ್ಣಗೊಳಿಸಬೇಕು.

ಒಣಕೊಬ್ಬರಿಇದನ್ನು ಸೂಪರ್ ಫುಡ್ ಎಂದು ಕರೆದರು ತಪ್ಪಾಗುವುದಿಲ್ಲ.ಅಷ್ಟು ಪೋಷಕಾಂಶಗಳನ್ನು ಹೊಂದಿದೆ ಈ ಒಣಕೊಬ್ಬರಿ.ತುಂಬಾ ಜನರಿಗೆ ಒಣಕೊಬ್ಬರಿ ಎಂದರೆ ತುಂಬಾನೇ ಇಷ್ಟ.ಮನೆಯಲ್ಲಿ ಹಿರಿಯರು ಇದ್ದರೆ ಅವರು ಕೂಡ ಮಕ್ಕಳಿಗೆ ಒಣ ಕೊಬ್ಬರಿಯನ್ನು ತಿನ್ನಲು ಸಲಹೆ ಮಾಡುತ್ತಾರೆ.ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್,ನಾರಿನಾಂಶ,ಕಾಪರ್,ಸೆಲೆನಿಯಂ ಎನ್ನುವ ಪೋಷಕಾಂಶಗಳಿವೆ.

ಹಾಗಿದ್ರೆ ಯಾವ ರೀತಿಯಲ್ಲಿ ಒಣಕೊಬ್ಬರಿಯನ್ನು ಸೇವಿಸಿದರೆ ಒಳ್ಳೆಯದು ಎಂದು ನೋಡುವುದಾದರೆ 20 ರಿಂದ 25 ಗ್ರಾಂ ನಷ್ಟು ಪ್ರತಿ ದಿನ ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಇದನ್ನು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಚಿಕ್ಕ ತುಂಡು ಒಣಕೊಬ್ಬರಿಯನ್ನು ನೀವು ಸೇವಿಸಬಹುದು.

ಒಣಕೊಬ್ಬರಿ ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡುವುದಾದರೆ.ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುತ್ತದೆ.ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಮೂಳೆಗಳ ಅಂಗಾಂಶ ಅಂದರೆ ಟಿಶುಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ.ಇದು ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ಇದು ತೊಂದರೆ ನೀಡಬಹುದು.

ಒಣ ಕೊಬ್ಬರಿಯ ಸೇವನೆಯಿಂದ ಈ ಮೂಳೆಗಳಲ್ಲಿನ ಖನಿಜಾಂಶ ಅಂದ್ರೆ ಮಿನರಲ್ಗಳ ಕಡಿಮೆ ಯನ್ನು ಪೂರ್ಣಗೊಳಿಸಿ ಕೊಳ್ಳಬಹುದು.ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ.ಇದರಿಂದಾಗಿ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರಾಗಬಹುದು.ಇನ್ನು ಕೆಲವರ ಗಂಟುಗಳಲ್ಲಿ ಕಟಕಟ ಶಬ್ದವಾಗುತ್ತಿರುತ್ತದೆ. ಇದು ಮೂಳೆಗಳಲ್ಲಿರುವ ಲೂಬ್ರಿಕೇನ್ಟ್ ನ ಕೊರತೆಯಿಂದ ಆಗುತ್ತದೆ.ಇಂಥವರು ಒಣಕೊಬ್ಬರಿಯ ಸೇವನೆ ಮಾಡಬೇಕು. ಒಣಕೊಬ್ಬರಿ ಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸಿ ಈ ಸಮಸ್ಯೆಯೂ ಸರಿಹೋಗುತ್ತದೆ.

ಮೆದುಳು ಚುರುಕಾಗಿರುತ್ತದೆ. ಒಣ ಕೊಬ್ಬರಿ ಸೇವನೆಯಿಂದ ನಿಮ್ಮ ಮೆದುಳು ಚುರುಕಾಗುತ್ತದೆ.ಇದರಿಂದ ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ.ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ನೀವು ಒಣ ಕೊಬ್ಬರಿಯನ್ನು ಸೇವಿಸಲೇಬೇಕು.ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯೂ ಕೂಡ ಒಣಕೊಬ್ಬರಿ ಒಳ್ಳೆಯ ಔಷಧಿ.ಇದನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ.ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡ ಸರಿಪಡಿಸುತ್ತದೆ.

ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ,ತಲೆಸುತ್ತು,ಮೊದಲಾದ ತೊಂದರೆ ಎದುರಾಗುತ್ತದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ ಆದ್ದರಿಂದ ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡಲು ಒಣಕೊಬ್ಬರಿಯ ಸೇವನೆಯನ್ನು ತಪ್ಪದೇ ಮಾಡಿ.

ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಒಣಕೊಬ್ಬರಿಯನ್ನು ಹೀಗೆ ಬಳಸಿದರೆ ಸಂಪೂರ್ಣವಾಗಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ತುರಿದ ಕೊಬ್ಬರಿ 20 ರಿಂದ 25 ಗ್ರಾಂ ತೆಗೆದುಕೊಳ್ಳಿ 20 ರಿಂದ 25 ಗ್ರಾಂ ನಷ್ಟು ಕಲ್ಲು ಸಕ್ಕರೆ ತೆಗೆದುಕೊಳ್ಳಿ.ಇವೆರಡನ್ನು ಸೂರ್ಯ ಉದಯಿಸುವುದಕ್ಕಿಂತ ಮೊದಲು ಸೇವಿಸಿ.ಜಗಿದು ಜಗಿದು ಸೇವಿಸಬೇಕು.ಈ ರೀತಿಯಾಗಿ ನೀವು ಪ್ರತಿನಿತ್ಯ ಸೇವಿಸಿದರೆ ಸ್ವಲ್ಪ ದಿನದಲ್ಲೇ ಎಷ್ಟೇ ಹಳೆಯದಾದ ತಲೆನೋವಿದ್ದರು ಹಾಗೂ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

ಥೈರಾಡ್ ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ ಸೆಲೆನಿಯಂ ಕೊರತೆಯಿಂದ ಉಂಟಾಗುತ್ತದೆ.ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ.ನಿಮಗೆ ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ನೀವು ತಪ್ಪದೆ ಒಣಕೊಬ್ಬರಿ ಸೇವಿಸಿ.ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾಗಿ ಇಡುತ್ತದೆ.

ಇನ್ನು ಒಣಕೊಬ್ಬರಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ.ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ.ಇದರಿಂದಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯವೂ ತಪ್ಪದೆ ಒಣಕೊಬ್ಬರಿಯನ್ನು ಸೇವನೆ ಮಾಡುವುದು ಉತ್ತಮ.

ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.

ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ.ಇನ್ನು ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು.ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ.ಒಣಕೊಬ್ಬರಿ ಒಂದು ಒಳ್ಳೆಯ ಆ್ಯಂಟಿ ಬಯಾಟಿಕ್ ತರ ಕೆಲಸ ಮಾಡುತ್ತದೆ.ಇದರಿಂದಾಗಿ ಯಾವುದೇ ರೀತಿಯ ಅಲರ್ಜಿ ಅಥವಾ ಯಾವುದೇ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಸೇರಲು ಸಾಧ್ಯ ಇಲ್ಲ.

ಒಣ ಕೊಬ್ಬರಿ ನಮ್ಮ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇನ್ನು ಇದರಿಂದ ಹಲವಾರು ಲಾಭಗಳು ದೊರೆಯುತ್ತದೆ.ಇದರ ಸೇವನೆಯ ನಂತರ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ದೇಹದಲ್ಲಿ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ.ನಮಗೆ ಯಾವುದೇ ರೋಗ ಇರಲಿ ಇಲ್ಲದಿರಲಿ ಇಂತಹ ಅದ್ಭುತವಾದ ಆಹಾರವನ್ನು ನಮ್ಮ ಪ್ರತಿನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಮ್ಮ ದೇಹವು ಆರೋಗ್ಯವಾಗಿರುತ್ತದೆ. ಯಾವುದೇ ರೋಗವು ನಮ್ಮ ಹತ್ತಿರವೂ ಸುಳಿಯುವುದಿಲ್ಲ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ವಂದನೆಗಳೊಂದಿಗೆ

Sunday, August 2, 2020

*ನಮ್ಮ ಜೀವನ ರಥ ಈ ರೀತಿ ಸಾಗಿಸಲುಪ್ರಯತ್ನಸೋಣ*

🕉🕉🕉🕉🕉🕉🕉

 *ನಮ್ಮ ಜೀವನ ರಥ ಈ ರೀತಿ ಸಾಗಿಸಲುಪ್ರಯತ್ನಸೋಣ* 

🍀 *ಪರಮಾತ್ಮನಲ್ಲಿ ಪೂರ್ಣ ನಿಷ್ಠೆ*
🍀 *ಜ್ಞಾನದಲ್ಲಿ ಪರಿಪೂರ್ಣತೆ*
🍀 *ಆಹಾರದಲ್ಲಿ ಸಾತ್ವಿಕತೆ*
🍀 *ದೃಷ್ಟಿಯಲ್ಲಿ ಪವಿತ್ರತೆ*
🍀 *ಮನದಲ್ಲಿ ವಿಶಾಲತೆ* 
🍀 *ಬುದ್ಧಿಯಲ್ಲಿ ದಿವ್ಯತೆ* 
🍀 *ಸೇವೆಯಲ್ಲಿ ನಮ್ರತೆ* 
🍀 *ಸ್ನೇಹದಲ್ಲಿ ಪರಿಶುದ್ಧತೆ* 
🍀 *ಕರ್ಮದಲ್ಲಿ ಕುಶಲತೆ*
🍀 *ವ್ಯವಹಾರದಲ್ಲಿ ಸಭ್ಯತೆ* 
🍀 *ಮುಖದಲ್ಲಿ ಪ್ರಸನ್ನತೆ* 
🍀 *ಸಾಧನೆಯಲ್ಲಿ ದೃಢತೆ* 
🍀 *ಯೋಗದಲ್ಲಿ ತನ್ಮಯತೆ* 
🍀 *ಆಚಾರದಲ್ಲಿ ಸ್ವಚ್ಛತೆ* 
🍀 *ವಿಚಾರದಲ್ಲಿ ಶ್ರೇಷ್ಠತೆ* 
🍀 *ಪರಿವಾರದಲ್ಲಿ ಏಕತೆ* 
🍀 *ಸಂಸ್ಕಾರದಲ್ಲಿ ಶುದ್ಧತೆ* 
🍀 *ಮಾತಿನಲ್ಲಿ ಮಧುರತೆ* 
🍀 *ಸಂಬಂಧದಲ್ಲಿ ನಿರ್ಲಿಪ್ತತೆ* 
🍀 *ಬದುಕಿನಲ್ಲಿ ನಿಶ್ಚಿಂತತೆ* 
🍀 *ಕಾರ್ಯದಲ್ಲಿ ಸಫಲತೆ* 
🍀 *ಜೀವನದಲ್ಲಿ ಹಗುರತೆ* 

ಮೇಲಿನ ಎಲ್ಲ *ಉಕ್ತಿಗಳಂತೆ* ಜೀವನ ನಡೆಸಲು ನಾವೆಲ್ಲರೂ ಪ್ರಯತ್ನಿಸೋಣ
🙏🏼
 
 ☘☘☘☘☘☘☘ ವಂದನೆಗಳೊಂದಿಗೆ

ಕೋರೋಣ ತೋರಿಸುತ್ತಿದೆ ಜೀವನ

....ಪದಗಳ ಸುರಿಮಳೆ. ಒಂದೊಂದು ಪದಗಳ ಹನಿಯಲ್ಲೂ ಗುಂಡೇಟು ಇದೆ.  ಮನುಜ ಇನ್ನಾದರೂ ತಿಳಿಯಬೇಕು 
......ಸಾಗಿದೆ ಒಂಟಿ ಪಯಣ 
ಮಸಣದ ಕಡೆಗೆ...
ಮೆರವಣಿಗೆ ಇಲ್ಲ.. ಬ್ಯಾಂಡ್ ಇಲ್ಲ...ತಮಟೆ ಇಲ್ಲ..
ಹೂವಿಲ್ಲ... ಹಾರವಿಲ್ಲ...  ಪಲ್ಲಕ್ಕಿ ಇಲ್ಲ..ಪಟಾಕಿಯ ಶಬ್ದವಿಲ್ಲ...

...ಬಂಧು ಬಳಗವಿಲ್ಲ... 
ಗೆಳಯರ ದಂಡಿಲ್ಲ..
ಒಳಿತು ಕೆಡುಕುಗಳ ಮಾತಿಲ್ಲ...
ಸಂಬಂಧಿಕರ ನೋವಿನ ಆಕ್ರಂದನವಿಲ್ಲ...ಇದ್ದರೂ ಕೇಳಿಸುತ್ತಿಲ್ಲ...

..ಕೊನೆಯ ಮುಖ ನೋಡಲು ಅವಕಾಶವಿಲ್ಲ...
ಅಂತಿಮ ವಿಧಿ ವಿಧಾನಗಳಿಲ್ಲ...
ಹೊರುವವರಿಲ್ಲ...ಅದರ ಅಗತ್ಯವು ಇಲ್ಲವೇ ಇಲ್ಲ.....

....ಯಾವುದೋ ಲೋಹದ ವಾಹನ...
ಮೇಲಿಂದ ಕೆಳಗೆ ಮುಚ್ಚಿಟ್ಟು ದೇವರ ಮಕ್ಕಳು ತರುವರು ನಿನ್ನನ್ನು... 
ಹೂಳುವರು ನಿನಗೆ ಗೊತ್ತೇನು...
ಮಸಣದಲ್ಲಲ್ಲ.. ಬೇರೆಲ್ಲೋ...
ತಿರುಗಿ ನೋಡದೆ ಹೋಗುವರು ನಿನ್ನ ಹೂಳಿದ ಜಾಗವನ್ನು....

..ಇರುವಾಗ ನನ್ನದೆಂದು ಬಡಿದಾಡಿದವರು ನಾವು..
ಬದುಕಿನ ಯಾನ ಮುಗಿಸಿದಾಗ
ಯಾರೂ ಬರಲಿಲ್ಲ ಜೊತೆಗೆ  ನಾನು ನನ್ನವರೆನ್ನುವರು...

..ಬದುಕಿ ಬರಲು ಅವಕಾಶವಿಲ್ಲ
ಮನದಲಿ ಸಾವಿರ ನೋವಿದ್ದರೂ...
ಹೇಳಲು ಯಾರಿಲ್ಲ ನಿನ್ನ ಜೊತೆ ಜೀವನ ಕಳೆದವರು..

....ಕೊನೆಗೂ ಭೂಮಿಗೂ,   ರುದ್ರಭೂಮಿಗು ಬೇಡವಾದೆಯಾ ಮನುಜ ನೀನು..
..ಮುಂದಾದರು 
ಬಿಡುವೆಯಾ ದುರಾಸೆ, ದುರ್ಬುದ್ಧಿ ಎಂಬ ಲಂಪಟತನವನ್ನು...

*ಒಳಿತು ಮಾಡು ಮನುಷ್ಯ ನೀನು ಇರೋದು ಮೂರು ದಿವಸ*
*ಉಸಿರು ನಿಂತ ಮೇಲೆ ಹೆಣ ಅನ್ನುತಾರ.. ಮಣ್ಣಾಗಿ ಹೂಳುತ್ತಾರ*
🙏🙏🙏
ವಂದನೆಗಳೊಂದಿಗೆ

Wednesday, July 29, 2020

👉 *ನಮಗೊಂದು ಚಿಂತನೆ* 👈*ಹೃದಯಸ್ಪರ್ಶಿ ಸಹಾಯ*

👉 *ನಮಗೊಂದು ಚಿಂತನೆ* 👈
*ಹೃದಯಸ್ಪರ್ಶಿ  ಸಹಾಯ*

ಒಮ್ಮೆ ಬಿಲ್ ಗೇಟ್ಸ್ ಬಳಿ ಮಾತನಾಡುತ್ತಿರುವಾಗ ಒಬ್ಬಾತ ಹೇಳಿದ - " ಜಗತ್ತಿನಲ್ಲಿ ನಿಮಗಿಂತಲೂ ದೊಡ್ಡ ಶ್ರೀಮಂತರಿಲ್ಲ...." ಎಂದ.
ಆಗ ಬಿಲ್ ಗೇಟ್ಸ್ ತನ್ನ ಒಂದು ಅನುಭವವನ್ನು ಹೀಗೆ ವಿವರಿಸುತ್ತಾರೆ -

ಕೆಲವು ವರ್ಷಗಳ ಹಿಂದೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ ಸಮಯವಾಗಿತ್ತು....
ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ನ್ಯೂಸ್ ಪೇಪರ್ ಮಾರುವ ಹುಡುಗನನ್ನು ನೋಡಿದೆ... ಆ ಹುಡುಗನ ಕೈಯಲ್ಲಿದ್ದ ಪೇಪರ್ ನ ಹೆಡ್ ಲೈನ್ಸ್ ಓದಿದಾಗ ಒಂದು ಪೇಪರ್ ಖರೀದಿಸಲು ಮುಂದಾದೆ. ಆ ಹುಡುಗನನ್ನು ಕರೆದೆ.. ಆದರೆ ನನ್ನ ಬಳಿ ಚಿಲ್ಲರೆ ಇರಲಿಲ್ಲ.... ಆದ್ದರಿಂದ ನಾನು ಪೇಪರ್ ಬೇಡ ಅಂದು ಬಿಟ್ಟೆ..
ಆದರೆ ಆ ಕಪ್ಪು ವರ್ಣದ ಹುಡುಗ ಒಂದು ಪೇಪರನ್ನು ತೆಗೆದು ನನಗೆ ಕೊಟ್ಟ..
ನನ್ನ ಬಳಿ ಚಿಲ್ಲರೆ ಇಲ್ಲ ಅಂತ ಹೇಳಿದಾಗ, ಪರವಾಗಿಲ್ಲ ಇದು ಫ್ರೀಯಾಗಿ ಇರಲಿ ಅಂತ ಹೇಳಿ ಪೇಪರನ್ನು ಕೊಟ್ಟು ಹೊರಟು ಹೋದ....
ಸುಮಾರು ಮೂರು ತಿಂಗಳ ನಂತರ ಪುನಃ ನಾನು ಅದೇ ವಿಮಾನ ನಿಲ್ದಾಣಕ್ಕೆ ಹೋಗಬೇಕಾಯಿತು. 
ಪುನಃ ಹಿಂದಿನ ಹಾಗೆ ಹೆಡ್ ಲೈನ್ಸ್ ನೋಡಿದ ನಾನು ಆ ಹುಡುಗನಿಂದ ಪೇಪರ್ ಖರೀದಿಸಲು ಮುಂದಾದೆ. ಅಂದು ಕೂಡಾ ನನ್ನ ಬಳಿ ಚಿಲ್ಲರೆ ಇರಲಿಲ್ಲ. 
ಅವತ್ತು ಕೂಡಾ ಆ ಹುಡುಗ ಫ್ರೀಯಾಗಿ ನನಗೆ ಪೇಪರ್ ಕೊಟ್ಟ.. ನಾನು ಆತನಿಂದ ಪೇಪರನ್ನು ತೆಗೊಳ್ಳಲು ಹಿಂಜರಿದೆ..
ಆಗ ಆತ ಪರವಾಗಿಲ್ಲ ಇಟ್ಟುಕೊಳ್ಳಿ... ನನ್ನ ಲಾಭದಲ್ಲಿ ಒಂದು ಚಿಕ್ಕ ಪಾಲು ಇದಾಗಿದೆ ಅಂತ ಹೇಳುತ್ತಾ ಒತ್ತಾಯಿಸಿ ಪೇಪರ್ ಕೊಟ್ಟು ಹೋದ...

ಹತ್ತೊಂಬತ್ತು ವರ್ಷಗಳ ನಂತರ ನಾನು ಶ್ರೀಮಂತನಾದೆ...
ಅದ್ಯಾಕೋ ನನಗೆ ಆ ಹುಡುಗನನ್ನೊಮ್ಮೆ ಕಾಣಬೇಕು ಅಂತ ಮನಸಾಯಿತು.
ಒಂದೂವರೆ ತಿಂಗಳ ಹುಡುಕಾಟದ ಬಳಿಕ ಆ ಹುಡುಗ ಸಿಕ್ಕಿದ...
ಆತನತ್ರ ನಾನು ಕೇಳಿದೆ - " ನನ್ನ ಗುರುತ್ತು ಇದೆಯಾ?"
ಹೌದು ಸರ್ ಗುರುತು ಸಿಕ್ಕಿದೆ. ತಾವು ಅತ್ಯಂತ ದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಅಲ್ಲವೇ?
ಕೆಲವು ವರ್ಷಗಳ ಹಿಂದೆ ನೀನು ನನಗೆ ಎರಡು ನ್ಯೂಸ್ ಪೇಪರ್ ಫ್ರೀಯಾಗಿ ಕೊಟ್ಟದ್ದು ನಿನಗೆ ನೆನಪಿದೆಯಾ?
ಅದಕ್ಕೆ ಪ್ರಾಯಶ್ಚಿತ್ತವಾಗಿ ನಿನಗೆ ಏನಾದರೂ ಕೊಡಲು ನಾನು ಬಯಸುವೆ... ನೀನು ಏನು ಬೇಕಾದರೂ ಕೇಳಬಹುದು...
ಆ ಹುಡುಗ - ತಮ್ಮಿಂದ ನನಗೆ ಅದರ ಪ್ರಾಯಶ್ಚಿತ್ತ ವನ್ನು ಕೊಡಲು ಸಾಧ್ಯವಿಲ್ಲ ಸರ್...
ಬಿಲ್ ಗೇಟ್ಸ್ - ಏನು ಕಾರಣ....!??
ಆ ಹುಡುಗ - ನಾನು ಬಡವನಾಗಿದ್ದಾಗ ನಾನು ನಿಮಗೆ ಕೊಟ್ಟೆ...
ಆದರೆ ತಾವು ಶ್ರೀಮಂತರಾದ ಬಳಿಕ ನನಗೆ ಕೊಡಲು ತಾವು ಬಂದಿದ್ದೀರಿ...

ಹಾಗಿರುವಾಗ ಬಡವನಾಗಿದ್ದ ಅವಸ್ಥೆಯಲ್ಲಿ ನಾನು ಕೊಟ್ಟದ್ದು ಮತ್ತು ಶ್ರೀಮಂತನಾದ ಬಳಿಕ ತಾವು ಕೊಡುವುದಕ್ಕೂ ಸಾಮ್ಯತೆ ಇಲ್ಲ ಸರ್....

ಇಷ್ಟು ಹೇಳಿದ ನಂತರ ಬಿಲ್ ಗೇಟ್ಸ್ ತನ್ನನ್ನು ಅತಿ ದೊಡ್ಡ ಶ್ರೀಮಂತ ಅಂತ ಹೇಳಿದ ವ್ಯಕ್ತಿಯತ್ರ ಹೇಳುತ್ತಾರೆ - ಈಗ ಹೇಳಿ ಅತ್ಯಂತ ದೊಡ್ಡ ಶ್ರೀಮಂತ ಆ ಕಪ್ಪಾದ ಹುಡುಗನಲ್ಲವೇ...?

ದಾನ ಧರ್ಮ ಮಾಡಲು ಶ್ರೀಮಂತರಾಗಬೇಕಿಲ್ಲ ಅಥವಾ ಶ್ರೀಮಂತನಾಗುವವರೆಗೂ ಕಾಯಬೇಕಿಲ್ಲ...
ಸಹಾಯ ಮಾಡುವ ಗುಣಕ್ಕೆ ಸಮಯದ ಪರಿಧಿಯಿಲ್ಲ. ಶ್ರೀಮಂತ ಬಡವ ಎಂಬ ಭೇದಭಾವ ಇಲ್ಲ. ಆ ಗುಣವು ಹೃದಯದಿಂದ ಬರಬೇಕು.

Friday, July 24, 2020

Today is the birthday of our beloved Chariji Maharaj. In 1984, one young abhyasi asked Him, just to know His birthday.

Today is the birthday of our beloved Chariji Maharaj. 
In 1984, one young abhyasi asked Him, just to know His birthday,
" When were you born?"
Pat came the reply from the Master," Before Creation!"
I can still recall the shocked expression of the abhyasi !
After quite a few years, Sri CSR, who was older than Rev. Chariji Maharaj, came to BMA on 24 July, to the  Master's cottage adjacent to the old mediation hall. As usual Rev. Chariji Maharaj welcomed him. Sri CSR said, "Congratulations to the new born!"
Rev. Chariji Maharaj immediately replied," Sir, l am yet to be born!" and hugged him.
I leave it to you to mull over the meanings of both the statements of Rev. Chariji Maharaj.
      As for myself, l have never come across, interacted, lived with a personality like Rev. Chariji Maharaj. He was the most magnificent, gentle, soft, lovable, erudite, majestic ..... well go on adding... personality! Who can deny this? He was compassionate even to those who didn't like Him or harmed Him.
If ever God walked on earth, it was He, our beloved Chariji Maharaj!
Let's offer our sincere gratitude to Him for choosing to be with us all!
      So many memories. Full of Rev. Chariji Maharaj. How can one exhaust them. 
       Rev. Chariji Maharaj is infinite in every thing.... knowledge, love, patience, compassion, commitment, discipline....
      Who on earth can measure His  unfathomable Personality?
      Eyes are filled with tears, mind with His personality, heart with His love!
      May He continue to bless us all!

Wednesday, July 22, 2020

*ಪ್ರಣಾಮ್/ ನಮಸ್ಕಾರ ಪ್ರಾಮುಖ್ಯತೆ*

*ಪ್ರಣಾಮ್/ ನಮಸ್ಕಾರ ಪ್ರಾಮುಖ್ಯತೆ*

       ಮಹಾಭಾರತದ ಯುದ್ಧ ನಡೆಯುತ್ತಿತ್ತು -
     ಒಂದು ದಿನ, ದುರ್ಯೋಧನನ ವಿಡಂಬನೆಯಿಂದ ನೋಯುತ್ತಿರುವ "ಭೀಷ್ಮ ಪಿತಾಮಹ" ಹೀಗೆ ಘೋಷಿಸುತ್ತಾನೆ -

       "ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"

        ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -

    ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. 

ನಂತರ ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮನ ಶಿಬಿರವನ್ನು ತಲಿಪಿದರು -

  ಶಿಬಿರದ ಹೊರಗೆ ನಿಂತು ದ್ರೌಪತಿಗೆ – “ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದರು

      ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ ಅವರು -    *ಅಖಂಡ ಸೌಭಾಗ್ಯವತಿ ಭವ* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!

   " ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿಮ್ಮನ್ನು ಇಲ್ಲಿಗೆ  ಕರೆತಂದಿದ್ದಾರಾ "? ಆಗ ದ್ರೌಪದಿ ಹೀಗೆ ಹೇಳಿದಳು -
     "ಹೌದು ಮತ್ತು ಅವರು ಕೋಣೆಯ ಹೊರಗೆ ನಿಂತಿದ್ದಾರೆ" ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. "ನನ್ನ ಒಂದು ವಚನವನ್ನು ನನ್ನ ಇತರ ವಚನಗಳಿಂದ  ಕತ್ತರಿಸಲು ಶ್ರೀ ಕೃಷ್ಣ ಮಾತ್ರ ಮಾಡಬಹುದು"

   ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು -

    *ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದರಿಂದ, ನಿನ್ನ ಗಂಡಂದಿರಿಗೆ ಜೀವನ ಸಿಕ್ಕಿದೆ*

  "ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿಗಳಿಗೆ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷಾಸನ, ಇತ್ಯಾದಿ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ
"
...... ಅಂದರೆ ...... 

ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -

    *ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತಿದೆ*

    "ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"

     ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ.

  ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಅಳವಡಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ ಮನೆ ಸ್ವರ್ಗವಾಗುತ್ತದೆ."

       ಏಕೆಂದರೆ: -

        ನಮಸ್ಕಾರ ಪ್ರೀತಿ.
       ನಮಸ್ಕಾರ ಶಿಸ್ತು.
        ನಮಸ್ಕಾರ ಶೀತಲತೆ.
        ನಮಸ್ಕಾರ ಗೌರವವನ್ನು ಕಲಿಸುತ್ತವೆ.
        ನಮಸ್ಕಾರದಿಂದ ಸು-ವಿಚಾರ ಬರುತ್ತದೆ

Sunday, July 19, 2020

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.
ಒಣ ಹಣ್ಣುಗಳ( Dry fruits)ಲ್ಲಿ ಒಂದಾದ, ಭಾರತ ಮೂಲದ ಈ ಅಕ್ರೋಟು ಕಾಶ್ಮೀರ ಹಾಗೂ ಹಿಮಾಲಯ ಶ್ರೇಣಿಯ ರಾಜ್ಯಗಳಲ್ಲಿ ಬೆಳೆಯುತ್ತಾರೆ.

ಗಟ್ಟಿಯಾದ ಕವಚ ಹೊಂದಿರುವ  ಕಾಯಿಯನ್ನು ಒಡೆದಾಗ ಸುರುಳಿಯಾಕಾರದ ಅಕ್ರೋಟ್ ಥೇಟ್ ಮೆದುಳಿನ ಆಕಾರದಂತೆ ಕಾಣುತ್ತದೆ.

ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಪೊಟ್ಯಾಷಿಯಂ, ಪ್ರೋಟಿನ್, ಒಮೆಗಾ 3,ರಂಜಕ, ನಾರಿನಂಶ, ಇತ್ಯಾದಿ ಅತಿ ಹೆಚ್ಚು ಪೋಷಕಾಂಶಗಳು ಇರುವುದರಿಂದ ಶರೀರದ ಅಂದ ಹಾಗೂ ಆರೋಗ್ಯಕ್ಕೆ
ಸಹಕಾರಿಯಾಗಿದೆ.

      { ಅಕ್ರೋಟ್ ಸೇವನೆಯ ಲಾಭಗಳು}

* ಮೆದುಳನ್ನು ಚುರುಕುಗೊಳಿಸಿ ಮರೆಗುಳಿತನ ನಿವಾರಿಸುತ್ತದೆ.

* ಮೂಳೆಗಳಿಗೆ ಬಲ ನೀಡಿ ಸ್ನಾಯುಗಳನ್ನು ಬಲಪಡಿಸುತ್ತದೆ.

*ಹೃದಯ ಆರೋಗ್ಯಕರವಾಗಿರಲು ಸಹಕಾರಿಯಾಗಿದೆ.

* ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ.

*ಚರ್ಮ ಕಲೆ ರಹಿತವಾಗಿ ಕಾಂತಿಯುಕ್ತವಾಗಿಇರುತ್ತದೆ,
ಹಾಗೂ ಮುಖದ ನೆರಿಗೆಗಳನ್ನು ನಿವಾರಿಸುತ್ತದೆ.

* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ,ದೇಹ ಉತ್ಸಾಹ ಹುರುಪಿನಿಂದ ಇರುವಂತೆ ಮಾಡುತ್ತದೆ.

* ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಅಗತ್ಯ ಪೋಷಕಾಂಶ ಗಳನ್ನು ಒದಗಿಸುತ್ತದೆ.

* ಮಧುಮೇಹಿಗಳಿಗೆ ಕೂಡ ಅತ್ಯುತ್ತಮ.

* ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.

* ಅಕ್ರೋಟ್ ತೈಲ (Walnut oil) ಕಾಲ್ಬೆರಳುಗಳ ನಡುವೆ ಕಾಣಿಸಿಕೊಳ್ಳುವ ಫಂಗಸ್,ಸೋರಿಯಾಸಿಸ್
ನಂತಹ ಚರ್ಮದ ಕಾಯಿಲೆಗಳಿಗೆ ಉಪಯುಕ್ತ ವಾಗಿದೆ.

* ವಾಲ್ ನಟ್ ಆಯಿಲ್ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

* ಬೆಳೆಯುವ ಮಕ್ಕಳಿಗೆ ತಿನ್ನಿಸುವುದರಿಂದ ಮೆದುಳಿನ ಬೆಳವಣಿಗೆ ಉತ್ತಮವಾಗಿ, ಬುದ್ಧಿ ಚುರುಕಾಗುತ್ತದೆ.

ಅಕ್ರೋಟ್ ಉಷ್ಣಕಾರಕ ಗುಣ ಹೊಂದಿದ್ದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಸೇವಿಸಬಹುದು.

*ಹಿರಿಯರು ಒಂದು ದಿನಕ್ಕೆ 02 ಅಕ್ರೋಟ ಸೇವಿಸಬೇಕು. ಮಕ್ಕಳಿಗೆ 01ಸಾಕು.
ಅಕ್ರೋಟನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅರೆದು ಹಾಲಿನಲ್ಲಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು. 
ಅಕ್ರೋಟನೊಂದಿಗೆ ನಾಲ್ಕೈದು ಬದಾಮು ಸೇರಿಸಬಹುದು.
 ಅಕ್ರೋಟು ದರದಲ್ಲಿ ತುಟ್ಟಿಯಾದರೂ ರೆಡಿಮೇಡ್ ಫುಡ್, ಬೇಕರಿ ತಿನಿಸು ತಿನ್ನುವುದಕ್ಕಿಂತ, 
ಅಕ್ರೋಟ್ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ.         ( ವಿವಿಧ ಮೂಲಗಳ ಸಂಗ್ರಹ)
         

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.
ಒಣ ಹಣ್ಣುಗಳ( Dry fruits)ಲ್ಲಿ ಒಂದಾದ, ಭಾರತ ಮೂಲದ ಈ ಅಕ್ರೋಟು ಕಾಶ್ಮೀರ ಹಾಗೂ ಹಿಮಾಲಯ ಶ್ರೇಣಿಯ ರಾಜ್ಯಗಳಲ್ಲಿ ಬೆಳೆಯುತ್ತಾರೆ.

ಗಟ್ಟಿಯಾದ ಕವಚ ಹೊಂದಿರುವ  ಕಾಯಿಯನ್ನು ಒಡೆದಾಗ ಸುರುಳಿಯಾಕಾರದ ಅಕ್ರೋಟ್ ಥೇಟ್ ಮೆದುಳಿನ ಆಕಾರದಂತೆ ಕಾಣುತ್ತದೆ.

ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಪೊಟ್ಯಾಷಿಯಂ, ಪ್ರೋಟಿನ್, ಒಮೆಗಾ 3,ರಂಜಕ, ನಾರಿನಂಶ, ಇತ್ಯಾದಿ ಅತಿ ಹೆಚ್ಚು ಪೋಷಕಾಂಶಗಳು ಇರುವುದರಿಂದ ಶರೀರದ ಅಂದ ಹಾಗೂ ಆರೋಗ್ಯಕ್ಕೆ
ಸಹಕಾರಿಯಾಗಿದೆ.

      { ಅಕ್ರೋಟ್ ಸೇವನೆಯ ಲಾಭಗಳು}

* ಮೆದುಳನ್ನು ಚುರುಕುಗೊಳಿಸಿ ಮರೆಗುಳಿತನ ನಿವಾರಿಸುತ್ತದೆ.

* ಮೂಳೆಗಳಿಗೆ ಬಲ ನೀಡಿ ಸ್ನಾಯುಗಳನ್ನು ಬಲಪಡಿಸುತ್ತದೆ.

*ಹೃದಯ ಆರೋಗ್ಯಕರವಾಗಿರಲು ಸಹಕಾರಿಯಾಗಿದೆ.

* ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ.

*ಚರ್ಮ ಕಲೆ ರಹಿತವಾಗಿ ಕಾಂತಿಯುಕ್ತವಾಗಿಇರುತ್ತದೆ,
ಹಾಗೂ ಮುಖದ ನೆರಿಗೆಗಳನ್ನು ನಿವಾರಿಸುತ್ತದೆ.

* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ,ದೇಹ ಉತ್ಸಾಹ ಹುರುಪಿನಿಂದ ಇರುವಂತೆ ಮಾಡುತ್ತದೆ.

* ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಅಗತ್ಯ ಪೋಷಕಾಂಶ ಗಳನ್ನು ಒದಗಿಸುತ್ತದೆ.

* ಮಧುಮೇಹಿಗಳಿಗೆ ಕೂಡ ಅತ್ಯುತ್ತಮ.

* ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.

* ಅಕ್ರೋಟ್ ತೈಲ (Walnut oil) ಕಾಲ್ಬೆರಳುಗಳ ನಡುವೆ ಕಾಣಿಸಿಕೊಳ್ಳುವ ಫಂಗಸ್,ಸೋರಿಯಾಸಿಸ್
ನಂತಹ ಚರ್ಮದ ಕಾಯಿಲೆಗಳಿಗೆ ಉಪಯುಕ್ತ ವಾಗಿದೆ.

* ವಾಲ್ ನಟ್ ಆಯಿಲ್ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

* ಬೆಳೆಯುವ ಮಕ್ಕಳಿಗೆ ತಿನ್ನಿಸುವುದರಿಂದ ಮೆದುಳಿನ ಬೆಳವಣಿಗೆ ಉತ್ತಮವಾಗಿ, ಬುದ್ಧಿ ಚುರುಕಾಗುತ್ತದೆ.

ಅಕ್ರೋಟ್ ಉಷ್ಣಕಾರಕ ಗುಣ ಹೊಂದಿದ್ದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಸೇವಿಸಬಹುದು.

*ಹಿರಿಯರು ಒಂದು ದಿನಕ್ಕೆ 02 ಅಕ್ರೋಟ ಸೇವಿಸಬೇಕು. ಮಕ್ಕಳಿಗೆ 01ಸಾಕು.
ಅಕ್ರೋಟನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅರೆದು ಹಾಲಿನಲ್ಲಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು. 
ಅಕ್ರೋಟನೊಂದಿಗೆ ನಾಲ್ಕೈದು ಬದಾಮು ಸೇರಿಸಬಹುದು.
 ಅಕ್ರೋಟು ದರದಲ್ಲಿ ತುಟ್ಟಿಯಾದರೂ ರೆಡಿಮೇಡ್ ಫುಡ್, ಬೇಕರಿ ತಿನಿಸು ತಿನ್ನುವುದಕ್ಕಿಂತ, 
ಅಕ್ರೋಟ್ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ.         ( ವಿವಿಧ ಮೂಲಗಳ ಸಂಗ್ರಹ)
                    

ಈ ಅಗಸೆ ಬೀಜ ವಿಶ್ವದಲ್ಲಿಯೇ ಅತ್ಯಧಿಕ ಮೆಗ್ನೀಷಿಯಂ ಹೊಂದಿರುವ ಬೀಜವಾಗಿದೆ.

ಅಗಸೆ ಬೀಜ , ಅಗಸಿ ಬೀಜ ಎಂದು ಕರೆಯಲ್ಪಡುವ  ಈ Flax seeds ಬೀಜಗಳಿಗೆ,ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಅಲಸಿ ಎಂದು ಕರೆಯುತ್ತಾರೆ.

ಈ ಅಗಸೆ ಬೀಜಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬಿಳಿ ಜೋಳದ ಜೊತೆಗೆ ಅಗಸಿ ಯನ್ನು ಬೆಳೆಯಲಾಗುತ್ತದೆ.

ಉತ್ತರ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಬಿಳಿಜೋಳದ ರಾಶಿಯ ಕೊನೆಯಲ್ಲಿ ಅಗಸೆ ಹಾಗೂ ಕುಸಿಬೆ ರಾಶಿ ಮಾಡುತ್ತಾರೆ. ಏಕೆಂದರೆ ಈ ಎರಡೂ ಬೆಳೆಗಳ ಹೊಟ್ಟು ದನ ಕರುಗಳಿಗೆ ಉಪಯೋಗವಿಲ್ಲ.

 ಈ ಅಗಸಿ ಹುಲ್ಲು ಜಿಗುಟಾಗಿದ್ದು ದನಗಳು ತಿಂದರೆ ಗಂಟಲಲ್ಲಿ ಸಿಕ್ಕು ಸಾಯುವ ಸಂಭವ ಹೆಚ್ಚು. ಅದಕ್ಕಾಗಿ ರಾಶಿಯ ನಂತರ ಸುಟ್ಟು ಬಿಡುತ್ತಾರೆ. 

ಈ ಅಗಸೆ ಬೀಜ ವಿಶ್ವದಲ್ಲಿಯೇ ಅತ್ಯಧಿಕ ಮೆಗ್ನೀಷಿಯಂ ಹೊಂದಿರುವ ಬೀಜವಾಗಿದೆ.

 ಮೊದಲೆಲ್ಲ ನಾವು ಹೊಲದಲ್ಲಿ ಕುಳಿತು ಊಟ ಮಾಡುವಾಗ ಅಗಸೆ ಗಿಡದ ಎಲೆ, ಹೂವು ಕಾಯಿಗಳನ್ನು ತಿಂದಿದ್ದೇವೆ. 

*ಶೇಂಗಾ, ಬದಾಮು,ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಈ ಬೀಜಗಳಲ್ಲಿದ್ದು, ಇದರ ನಾರಿನಂಶ ದೇಹದ ಕೊಬ್ಬು ಕರಗಿಸಿ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಈ ಬೀಜಗಳ ಸೇವನೆ ❤️ ಹೃದಯಾಘಾತ, ಪಾರ್ಶ್ವವಾಯು ತಡೆಯಲು ಸಹಕಾರಿಯಾಗುತ್ತದೆ.

* ಅಗಸೆ ಬೀಜಗಳಲ್ಲಿ ಒಮೆಗಾ -03 ಇದ್ದು ಕಣ್ಣಿನ ಆರೋಗ್ಯಕ್ಕೆ ಉತ್ತಮ.

*ಈ ಬೀಜಗಳ ಸೇವನೆ ಸುಕ್ಕುಗಳನ್ನು ತಡೆದು ಚರ್ಮಕ್ಕೆ ಕಾಂತಿ ನೀಡುತ್ತದೆ.

 * ಮಲಬದ್ಧತೆ ನಿವಾರಣೆಗೆ ಬೀಜಗಳ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

*ಮೂಳೆಗಳ ಸವೆತ ತಡೆಗಟ್ಟುತ್ತದೆ ಮತ್ತು ವಾತ ನಿವಾರಕವಾಗಿ ಕೆಲಸ ಮಾಡುತ್ತದೆ.

*ಅಗಸೆ ಎಲೆ  ಮತ್ತು ಹೂವುಗಳ ಪಲ್ಯ ಮಾಡಿ ತಿನ್ನುವ
ದರಿಂದ ಇರುಳುಗಣ್ಣುರೋಗ ನಿವಾರಣೆಯಾಗುತ್ತದೆ. 

*ಅಗಸಿ ಬೀಜಗಳನ್ನು ಹುರಿಯದೇ ಪೌಡರ್ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಶೋಧಿಸಿ ಕುದಿಸಿ ಆರಿಸಿದ ನಂತರ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಸೇರಿಸಿ ಕುಡಿದರೆ ಶ್ವಾಸ ರೋಗದಲ್ಲಿ ಲಾಭಕರ.

* ಉತ್ತರ ಕರ್ನಾಟಕದಲ್ಲಿ ಅಗಸಿ ಚಟ್ನಿ ಇಲ್ಲದೇ ಊಟವೇ ಇಲ್ಲ.ಅಗಸಿ ಚಟ್ನಿ ಉತ್ತರ ಕರ್ನಾಟಕದ ಫೇಮಸ್.

  ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ಮಾಡಿದ ನಂತರ ಈ ಅಗಸೆ ಬೀಜಗಳನ್ನು ಹುರಿದುFLAX SEEDS ಎಂದು ಆಕರ್ಷಕ ವಾಗಿ ಪ್ಯಾಕಿಂಗ್ ಮಾಡಿ 100 ಗ್ರಾಂ ಗೆ 70ರಿಂದ80 ರೂಪಾಯಿಗೆ ಮಾಲ್ ಗಳಲ್ಲಿ, ಮೆಡಿಕಲ್ ಗಳಲ್ಲಿ ಮಾರುತ್ತಿದ್ದಾರೆ.

 ಮಾರುಕಟ್ಟೆಯಲ್ಲಿ  ಕೆ ಜಿ ಗೆ 200 ರೂಪಾಯಿ ಇರಬಹುದು.

ಅಥವಾ ಒಂದು ದಿನಕ್ಕೆ  ಎರಡರಿಂದ ಮೂರು ಟೀ ಚಮಚದಷ್ಟು ಹುರಿದ ಅಗಸೆ ಬೀಜಗಳನ್ನು ತಿನ್ನಬಹುದು.

 ಪೌಡರ್ ಮಾಡಿ ನೀರಿನಲ್ಲಿ ಸೇವನೆ ಮಾಡಬಹುದು.

 ಅಗಸೆ ಬೀಜಗಳ ಎಣ್ಣಿಯನ್ನು ವಾರ್ನಿಶ್, ಪೇಂಟ್ ಗಳಲ್ಲಿ ಶೈನಿಂಗ್ ಬರಲು ಉಪಯೋಗಿಸುತ್ತಾರೆ. ಹೀಗೆ ಬಹು ಉಪಯೋಗಿಯಾದ ಈ ಅಗಸೆ ಬೀಜ ಆಕಾರದಲ್ಲಿ ಚಿಕ್ಕದಾದರೂ ಗುಣಗಳ ರಾಜ. 

ಸಾವಯವ ಬೇಸಾಯದಲ್ಲಿ ಬೆಳೆದಿರುವ ಔಷಧಿಯ ಗಿಡಮೂಲಿಕೆಗಳಲ್ಲಿ ಆರೋಗ್ಯಕ್ಕೆ ಉಪಯೋಗವಾಗುವ ಕಣಗಳನ್ನು ಬೇರ್ಪಡಿಸಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ದೊಂದಿಗೆ ತಯಾರಿಸಿರುವ  ಆಯುರ್ವೇದ ನೈಸರ್ಗಿಕ ಪೌಷ್ಟಿಕ ಆಹಾರ ಉತ್ಪನ್ನಗಳು, ಮನುಷ್ಯರನ್ನು ಆರೋಗ್ಯದಿಂದ ಅನಾರೋಗ್ಯದ ಕಡೆಗೆ ಹೋಗದಂತೆ ಆರೋಗ್ಯ ಕಾಪಾಡುತ್ತವೆ ಹಾಗೂ ಅನಾರೋಗ್ಯ ವಂತರು ಆರೋಗ್ಯವಂತರಾಗಲು ಈ ಆಯುರ್ವೇದ ಪೌಷ್ಟಿಕ ಆಹಾರ ಉತ್ಪನ್ನಗಳು ಸಹಕಾರಿಯಾಗುತ್ತವೆ.  
 
 ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ.

ವಿಶೇಷ ಸೂಚನೆ 
ಸಮಯ - ಬೆಳಿಗ್ಗೆ 10-00. ರಿಂದ ಸಂಜೆ 6-00 ಗಂಟೆಯವರೆಗೆ ಲಭ್ಯ.

ಮೋ  - 9886801163
Email- samidirect2010@gmail.com
                        
ನಮ್ಮ ದೇಶದ ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಹಾಗೂ ವೈದ್ಯಕೀಯ ಪ್ರಮಾಣಿಕೃತ ದಾಖಲೆಗಳಿಗಾಗಿ ಜೊತೆಗೆ ಅತ್ಯುತ್ತಮ ಆರೋಗ್ಯಕ್ಕಾಗಿ ಈ ಕೆಳಗಿನ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ 

Invite to Join with Samidirect

Joining Link 
https://www.samidirect.com/distributor-registration?refId=MC17495310-L-374025
ವಂದೆಗಳೊಂದಿಗೆ

Friday, July 17, 2020

ಭಾಗವತದಲ್ಲಿ ಶ್ರೀಕೃಷ್ಣ ತನ್ನ ಸ್ನೇಹಿತನಾದ ಉದ್ಧವನಿಗೆ ಉಪದೇಶಿಸಿದ ಉದ್ಧವಗೀತೆ*........

_*#ಭಾಗವತದಲ್ಲಿ ಶ್ರೀಕೃಷ್ಣ ತನ್ನ ಸ್ನೇಹಿತನಾದ ಉದ್ಧವನಿಗೆ ಉಪದೇಶಿಸಿದ ಉದ್ಧವಗೀತೆ*_

ಈ ಇಪ್ಪತ್ತು ನಾಲ್ಕು ಜನರಿಂದ ಕಲಿಯಬಹುದಾದ ಗುಣಗಳು 

1. ಪೃಥ್ವಿ:
ಪೃಥ್ವಿಯಿಂದ ಸಹನಶೀಲತೆ, ಕ್ಷಮೆ, ತಾಳ್ಮೆ ಹಾಗೂ ಎಲ್ಲಾ ಜೀವಿಗಳ ಒಳಿತಿಗಾಗಿ ಬಾಳುವುದನ್ನು ಕಲಿಯಬಹುದು.

2. ವಾಯು:
ಯಾವ ಸಂದರ್ಭದಲ್ಲಿಯು ವಾಯು ಹೇಗೆ ತನ್ನ ಗುಣಾದರ್ಶಗಳನ್ನು ಕಳೆದುಕೊಳ್ಳುವುದಿಲ್ಲವೋ ಹಾಗೆ ನಾವು ಯಾವ ವಿಷಯಗಳಿಂದಲೂ ವಿಚಲಿತರಾಗದೆ ಮಾರ್ಗಕ್ರಮಣವನ್ನು ಮಾಡಬೇಕು.

3. ಆಕಾಶ:
ಆಕಾಶಕ್ಕೆ ಯಾವುದೆ ಎಲ್ಲೆಗಳಿಲ್ಲ, ಅಂತೆಯೆ ನಮ್ಮ ಆತ್ಮವೂ ಕೂಡ ಇರಬೇಕು. ಹಾಗೆಯೆ ಎಲ್ಲವನ್ನು ಮೀರಿ ಅನಂತವಾಗಿರುವುದಲ್ಲದೆ ನಮ್ಮ ಮನಸ್ಸಿನ ಪ್ರಕ್ಷುಬ್ಧತೆಗಳಿಗೆ ಅತೀತವಾಗಿ ನಿರ್ಮಲವಾಗಿರ ಬೇಕೆಂದು ತಿಳಿಸತ್ತದೆ.

4. ನೀರು:
ನೀರಿನಂತೆಯೆ ಉತ್ತಮ ವ್ಯಕ್ತಿ ಸಹ ತನ್ನ ಬಳಿ ಇರುವ ಪ್ರತಿಯೊಬ್ಬರ ಆರೊಗ್ಯ, ಶಾಂತಿಗಳಿಗೆ ಅಗತ್ಯವಾಗುವಂತೆ ಬದುಕಬೇಕು. ನೀರು ಯಾವುದೆ ಅಹಮಿಕೆ ತೋರದಿರುವಂತೆ ಪರಮಾತ್ಮನ ಶ್ರೇಷ್ಠ ಸೃಷ್ಟಿಯ ತೆರೆದು ಬಾಳಬೇಕು.

5. ಅಗ್ನಿ:
ಬೆಂಕಿಗೆ ಯಾವುದೇ ಸ್ವರೂಪವಿಲ್ಲದಿದ್ದಾಗಿಯೂ ತಾನು ಸುಡುತ್ತಿರುವ ಕಟ್ಟಿಗೆ ರೂಪದಲ್ಲಿ ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳುತ್ತೆದೆ. ಅಂತೆಯೇ ತಾನು ಪಡೆದ ದೇಹದ ರೂಪದ ಮುಖಾಂತರವೆ ಆತ್ಮವೂ ತನ್ನನ್ನು ತೋರ್ಪಡಿಸಿಕೂಳ್ಳುತ್ತದೆ.

6. ಚಂದ್ರ:
ಚಂದ್ರ ಕುಗ್ಗುತ್ತಾನೆ ಹಿಗ್ಗುತ್ತಾನೆ. ಹೀಗೆ ನಿರಂತರ ಪ್ರಕ್ರಿಯೆಗಳಿಗೆ ಒಳಗಾದರು ಶಾಂತನಾಗಿರುತ್ತಾನೆ. ಹಾಗೆ ವ್ಯಕ್ತಿಯು ಜನನದಿಂದ ಮರಣದವರೆಗಿನ ನಿರಂತರ ಬದಲಾವಣೆಗಳಿಂದ ಬಾಧಿಸಲ್ಪಡುವುದಿಲ್ಲ.

7. ಸೂರ್ಯ:
ಸೂರ್ಯನ ಪ್ರತಿಫಲನಗಳು ಪರಮಾತ್ಮನು ಒಬ್ಬನೆ ಒಬ್ಬನಾಗಿದ್ದು ವಿವಿಧ ಜೀವಿಗಳ ಮೇಲೆ ತನ್ನನ್ನು ಪ್ರತಿಫಲಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಹೀಗೆ ಆತ್ಮವು ದೇಹವಲ್ಲ ಎಂಬುದನ್ನು ಅರಿಯಬಹುದಾಗಿದೆ.

8. ಪಾರಿವಾಳ:
ಪಾರಿವಾಳವು ತನ್ನ ಮಕ್ಕಳಿಂದ ದೂರವಿರುವುದು ಅಸಾಧ್ಯವೆನಿಸಿ ತಾನೂ ಮೂರ್ಖತನದಿಂದ ಬಲೆಯಲ್ಲಿ ಬಂಧಿತಗೊಳ್ಳುತ್ತದೆ. ಪ್ರಾಜ್ಙನು ಅತಿಯಾದ ವ್ಯಾಮೋಹಗಳಿಂದ ಬಂಧಿತನಾಗುವುದಿಲ್ಲ.

9. ಹೆಬ್ಬಾವು:
ಕೆಲವೊಂದು ಸಮಯದಲ್ಲಿ ಹೆಬ್ಬಾವು ತಿನ್ನುವುದಕ್ಕೆ ಏನು ಸಿಗದಿದ್ದರೂ ಹೆದರುವುದಿಲ್ಲ ಪ್ರಾಜ್ಙನೂ ಸುಖದ ಆಮಿಷಗಳ ಅರಸುವಿಕೆಯಲ್ಲಿ ಎಂದೂ ಕಳೆದು ಹೋಗುವುದಿಲ್ಲ.

10. ಸಮುದ್ರ:
ನದಿಗಳು ಎಷ್ಟೇ ನೀರನ್ನು ತಂದರೂ, ತರದಿದ್ದರೂ ಸುಖ ಪಡುವುದು ಇಲ್ಲ, ದುಃಖ ಪಡುವುದಿಲ್ಲ. ಅಂತೆಯೆ ಮನುಷ್ಯನೂ ಭೋಗಗಳು ಲಭಿಸಿದಾಗ ಸುಖ ಪಟ್ಟು, ನೋವುಗಳು ಬಂದಾಗ ದುಃಖಿಸಲೂ ಬಾರದು ಎನ್ನುವುದನ್ನು ತಿಳಿಸಿದೆ.

11. ದೀಪದ ಹುಳ:
ದೀಪದ ಹುಳು ಹೇಗೆ ಉರಿವ ದೀಪಕ್ಕೆ ಸಿಲುಕಿ ಸಾಯುತ್ತದೆಯೊ ಹಾಗೆಯೇ ಯಾವ ಮನುಷ್ಯನು ಮೋಹಿತನಾಗುತ್ತಾನೋ ಅವನು ದೀಪದ ಹುಳದಂತೆ ಅದರಲ್ಲಿಯೆ ನಾಶನಾಗುತ್ತಾನೆ.

12. ಜೇನುನೊಣ:
ಜೇನುನೊಣದಂತೆ ಧನವನ್ನು( ಜೇನು ತುಪ್ಪವನ್ನು) ಸಂಗ್ರಹಿಸುವುದರಿಂದ ಹಠಾತ್ತಾಗಿ ಮರಣ ಬರುತ್ತದೆ. ಈ ಉಪದೇಶವನ್ನು ಪಡೆದುಕೊಂಡು ದ್ರವ್ಯಸಂಗ್ರಹವನ್ನು ಮಾಡುವುದನ್ನು ಬಿಡಬೇಕು.

13. ಆನೆ:
ಆನೆಯು ಸ್ತ್ರೀ ವ್ಯಾಮೋಹಕ್ಕೆ ಒಳಗಾಗಿ ಹೇಗೆ ಗುಂಡಿಯಲ್ಲಿ ಸಿಲುಕಿಕೊಳ್ಳುತ್ತದೆಯೋ ಹಾಗೆಯೆ ಯಾವ ಪುರುಷನು ಸ್ತ್ರೀ ಸುಖಕ್ಕೆ ಮರುಳಾಗುತ್ತಾನೆಯೋ ಅವನು ಬಂಧನದಲ್ಲಿ ಸಿಲುಕಿಕೊಳ್ಳುತ್ತಾನೆ.

14. ಭ್ರಮರ:
ಭ್ರಮರವು ಒಂದೇ ಕಮಲದ ಸುಗಂಧವನ್ನು ಸೇವಿಸದೆ ಬಹಳಷ್ಟು ಕಮಲಗಳ ಸುವಾಸನೆಯ ಆನಂದವನ್ನು ಪಡೆಯುತ್ತಿರುತ್ತದೆ. ಹಾಗೆಯೆ ನಾವು ಪ್ರತಿಯೊಂದನ್ನು ಕಲಿಯಲು ಪ್ರಯತ್ನಿಸಬೇಕು.

15. ಕಸ್ತೂರಿ ಮೃಗ:
ಕಸ್ತೂರಿ ಮೃಗಕ್ಕೆ ಸಂಗೀತದ ವ್ಯಾಮೋಹವು ಇರುವುದರಿಂದ ಬೇಟೆಗಾರ ಸಂಗೀತ ಕೇಳಿಸಿ ಸುಲಭವಾಗಿ ಭೇಟೆಯಾಡುತ್ತಾನೆ. ಇದರಂತೆಯೆ ನಾವು ಯಾವುದೆ ಮೋಹದಲ್ಲಿ ಸಿಲಿಕಿಕೊಳ್ಳಬಾರದು.

16. ಮೀನು:
ಮೀನು ತನ್ನ ಆಹಾರದ ರುಚಿಗೆ ಮೋಹಗೊಂಡು ಗಾಳಕ್ಕೆ ಸಿಲುಕುತ್ತದೆ. ಹಾಗೆಯೆ ಮನುಷ್ಯನು ನಾಲಿಗೆಯ ರುಚಿಯಲ್ಲಿ ಬದ್ಧನಾಗಿದ್ದು ಜನ್ಮ ಮರಣದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ.

17. ಪಿಂಗಲಾ ವೇಶ್ಯೆ:
ಎಲ್ಲಿಯವರೆಗೆ ಮನುಷ್ಯನಲ್ಲಿ ಆಸೆಯು ಪ್ರಬಲವಾಗಿರುತ್ತದೆಯೊ ಅಲ್ಲಿಯವರೆಗೆ ಅವನಿಗೆ ಸುಖ ನಿದ್ರೆ ಬರುವುದಿಲ್ಲ. ಯಾವ ಪುರುಷನು ಆಸೆಯನ್ನು ತ್ಯಜಿಸಿದ್ದಾನೆಯೊ ಅವನಿಗೆ ಈ ಸಂಸಾರದ ದುಃಖಗಳು ಬಧಿಸುವುದಿಲ್ಲ.

18. ಟಿಟ್ಟಿಭ:
ಟಿಟ್ಟಿಭ ಹಕ್ಕಿ ಮೀನನ್ನು ಕಚ್ಚಿಕೊಂಡು ಹೋಗುವಾಗ ಉಳಿದ ಹದ್ದು, ಕಾಗೆಗಳೆಲ್ಲಾ ಬೆನ್ನು ಹತ್ತಿದಾಗ ದಣಿದ ಟಿಟ್ಟಿಭ ಮೀನನ್ನು ಅಲ್ಲೆ ಬಿಡಲು, ಹದ್ದು ಅದನ್ನು ಕಚ್ಚಿಕೊಳ್ಳುವುದಕ್ಕೂ ಎಲ್ಲಾ ಕಾಗೆಗಳು ಅದನ್ನು ಬೆನ್ನು ಹತ್ತಿದವು. ಇದರಿಂದ ಆ ಟಿಟ್ಟಿಭವು ನಿಶ್ಚಿಂತವಾಗಿ ಕುಳಿತಿತು. ಈ ಸಂಸಾರದಲ್ಲಿ ಮೋಹವನ್ನು ಬಿಡುವುದರಲ್ಲಿಯೆ ಶಾಂತಿ ಇದೆ ಇಲ್ಲದಿದ್ದರೆ ಘೋರ ವಿಪತ್ತಿದೆ.

19. ಬಾಲಕ:
ಮನಾಪಮಾನಗಳ ಬಗ್ಗೆ ವಿಚಾರ ಮಾಡದೆ, ಎಲ್ಲ ಚಿಂತೆಗಳ ಪರಿಹಾರ ಮಾಡಿಕೊಂಡು ಬಾಲಕನಂತೆ ಆನಂದದಿಂದ ಇರಬೇಕು.

20. ಕೈಬಳೆ:
ಎರಡು ಬಳೆಗಳಿದ್ದರೆ ತಗುಲಿ ಶಬ್ದವಾಗುತ್ತದೆ. ಬಳೆಗಳು ಹೆಚ್ಚಿಗೆ ಇದ್ದರೆ ಹೆಚ್ಚು ಶಬ್ಬವಾಗುತ್ತದೆ. ಹಾಗೆಯೇ ಇಬ್ಬರು ಸೇರಿದ್ದಲ್ಲಿ ಮಾತುಕತೆಗಳಾಗುತ್ತವೆ. ಅದೇ ಹೆಚ್ಚು ಜನ ಸೇರಿದ್ದಲ್ಲಿ ಕಲಹವಾಗುತ್ತದೆ. ಆದ್ದರಿಂದ ಸಾಧನೆ ಮಾಡುವಾಗ ಒಂಟಿಯಾಗಿರಬೇಕು.

21. ಶಸ್ತ್ರಕಾರ:
ಶಸ್ತ್ರಕಾರ ಬಾಣವನ್ನು ಮಾಡುವಾಗ ರಾಜನು ಹಾದು ಹೋದನು. ನಂತರ ಒಬ್ಬ ರಾಜನು ಹೀಗೆ ಹೋದನಾ ಎಂದು ಕೇಳಿದಾಗ ಆತ ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದು ನೋಡಲಿಲ್ಲ ಎಂದನು. ಹೀಗೆ ನಾವು ಪ್ರತಿಯೊಂದು ಕಾರ್ಯ ಮಾಡಬೇಕು.

22. ಸರ್ಪ:
ಸರ್ಪಗಳು ಅಪಕಾರ ಮಾಡಿದ ಹೊರತು, ಕೆಣಕದ ಹೊರತು ಯಾರನ್ನು ಕಚ್ಚುವುದಿಲ್ಲ. ಅದರಂತೆಯೆ ಮಿತವಾಗಿ ಮಾತನಾಡ ಬೇಕು, ಜಗಳ ಮಾಡಬಾರದು, ಸದಾ ವಿವೇಕದಿಂದ ವರ್ತಿಸಬೇಕು, ಯಾರಿಗೂ ನೋವುಂಟು ಮಾಡಬಾರದು.

23. ಜೇಡ:
ಜೇಡಗಳು ಹಗಲೂ ರಾತ್ರಿ ಎನ್ನದೆ ಬಲೆಯನ್ನು ಹಣೆಯುತ್ತವೆ. ಮುಂದೆ ಮನಸ್ಸಿಗೆ ಬಂದಾಗ ಆ ಮನೆಯನ್ನೆ ನುಂಗಿ ಸ್ವತಂತ್ರವಾಗುತ್ತದೆ. ಆದುದರಿಂದ ಜಗತ್ತಿನಲ್ಲಿನ ಘಟನೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಬಾರದು.

24. ಕಣಜ:
ಕಣಜವು ಯಾವುದೋ ಒಂದು ಹುಳುವನ್ನು ತಂದಿಟ್ಟುಕೊಂಡು ಗಾಳಿ ಊದುತ್ತಾ ಆ ಕೀಟವನ್ನು ಕೊನೆಗೆ ಅದು ಕೂಡ ಕಣಜದ ಹುಳುವನ್ನೇ ಮಾಡುತ್ತದೆ. ಹಾಗೆಯೇ ನಾವು ಸತತ ನಮ್ಮ ಗುರಿಯ ಕಡೆಗೆ ಧ್ಯಾನ ಮಾಡಬೇಕು..

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World