🌻🍂🦜🌷🐿🍂🌻
ಅಹಂಕಾರವು ತನ್ನ ಸೇವೆಯನ್ನೇ ಬಯಸುತ್ತದೆ.
ಆತ್ಮವು ಇತರರ ಸೇವೆಮಾಡಲು ಪ್ರಯತ್ನಿಸುತ್ತದೆ.
ಅಹಂಕಾರವು ಬಾಹ್ಯ ಪ್ರಪಂಚದ ಮಾನ್ಯತೆಯನ್ನು ಇಚ್ಛಿಸುತ್ತದೆ.
ಆತ್ಮವು ಒಳಗಿನ ನಿಜ ಸತ್ಯವನ್ನರಿಯಲು ಬಯಸುತ್ತದೆ.
ಅಹಂಕಾರವು ಜೀವನವನ್ನು ಒಂದು ಸ್ಪರ್ಧೆಯೆಂದು ಎಣಿಸುತ್ತದೆ
ಆತ್ಮವು ಈ ಜೀವನವು ದೊರೆತ ಒಂದು ಕೊಡುಗೆಯೆಂದು ಪರಿಗಣಿಸುತ್ತದೆ
ಅಹಂಕಾರವು "ನಾನು" ಎಂಬುದನ್ನು ರಕ್ಷಿಸಿಕೊಳ್ಳಲು ಹೆಣಗುತ್ತದೆ
ಆತ್ಮವು ಮತ್ತೊಬ್ಬರನ್ನು ರಕ್ಷಿಸಲು ಬಯಸುತ್ತದೆ
ಅಹಂಕಾರವು ಬಾಹ್ಯವನ್ನು ಬಯಸುತ್ತದೆ
ಆತ್ಮವು ಅಂತರ್ಮುಖಿಯಾಗಿರಲು ಇಚ್ಛಿಸುತ್ತದೆ
ಅಹಂಕಾರವು ಕೊರತೆಯನ್ನು ಅನುಭವಿಸುತ್ತದೆ
ಆತ್ಮವು ಸಮೃದ್ಧತೆಯನ್ನು ಅನುಭವಿಸುತ್ತದೆ
ಅಹಂಕಾರವು ನಶ್ವರ
ಆತ್ಮವು ಅನಂತ
ಅಹಂಕಾರವು ಕಾಮತೃಷೆಯ ಒಳಸೆಳೆತಕ್ಕೆ ಬಲಿಯಾಗುತ್ತದೆ
ಆತ್ಮವು ಪ್ರೇಮದ ಸೆಳೆತಕ್ಕೆ ಒಳಗಾಗುತ್ತದೆ
ಅಹಂಕಾರವು ಜ್ಞಾನವನ್ನು ಗಳಿಸಲು ಬಯಸುತ್ತದೆ
ಆತ್ಮವು ಜ್ಞಾನವೇ ಆಗಿದೆ
ಅಹಂಕಾರವು ಬಹುಮಾನವನ್ನು ಇಷ್ಟಪಡುತ್ತದೆ
ಆತ್ಮವು ತನ್ನ ಯಾತ್ರೆಯ ಆನಂದವನ್ನು ಅನುಭವಿಸುತ್ತದೆ
ಅಹಂಕಾರವು ನೋವಿಗೆ ಕಾರಣವಾಗುತ್ತದೆ
ಆತ್ಮವು ಶಮನದ ಕಾರಣಕ್ಕೆ ಕಾರಕವಾಗಿದೆ
ಅಹಂಕಾರವು ದೈವತ್ವವನ್ನು ತಿರಸ್ಕರಿಸುತ್ತದೆ
ಆತ್ಮವು ದೈವತ್ವವನ್ನು ಬಿಗಿದಪ್ಪುತ್ತದೆ
ಅಹಂಕಾರವು ಉಬ್ಬಿಹೋಗಲು ಬಯಸುತ್ತದೆ
ಆತ್ಮವು ಪೂರ್ಣತೆಯೊಡನೆ ಅನಂತವಾಗಿದೆ
ಅಹಂಕಾರವು "ನಾನೇ" ಎಂದುಕೊಳ್ಳುತ್ತದೆ
ಆತ್ಮವು ಎಲ್ಲರಲ್ಲೂ ತನ್ನನ್ನೇ ಕಾಣುತ್ತದೆ
dgnsgreenworld
🌻🍂🌿🐿🌿🍂🌻
No comments:
Post a Comment
welcome to dgnsgreenworld Family