....ಪದಗಳ ಸುರಿಮಳೆ. ಒಂದೊಂದು ಪದಗಳ ಹನಿಯಲ್ಲೂ ಗುಂಡೇಟು ಇದೆ. ಮನುಜ ಇನ್ನಾದರೂ ತಿಳಿಯಬೇಕು
......ಸಾಗಿದೆ ಒಂಟಿ ಪಯಣ
ಮಸಣದ ಕಡೆಗೆ...
ಮೆರವಣಿಗೆ ಇಲ್ಲ.. ಬ್ಯಾಂಡ್ ಇಲ್ಲ...ತಮಟೆ ಇಲ್ಲ..
ಹೂವಿಲ್ಲ... ಹಾರವಿಲ್ಲ... ಪಲ್ಲಕ್ಕಿ ಇಲ್ಲ..ಪಟಾಕಿಯ ಶಬ್ದವಿಲ್ಲ...
...ಬಂಧು ಬಳಗವಿಲ್ಲ...
ಗೆಳಯರ ದಂಡಿಲ್ಲ..
ಒಳಿತು ಕೆಡುಕುಗಳ ಮಾತಿಲ್ಲ...
ಸಂಬಂಧಿಕರ ನೋವಿನ ಆಕ್ರಂದನವಿಲ್ಲ...ಇದ್ದರೂ ಕೇಳಿಸುತ್ತಿಲ್ಲ...
..ಕೊನೆಯ ಮುಖ ನೋಡಲು ಅವಕಾಶವಿಲ್ಲ...
ಅಂತಿಮ ವಿಧಿ ವಿಧಾನಗಳಿಲ್ಲ...
ಹೊರುವವರಿಲ್ಲ...ಅದರ ಅಗತ್ಯವು ಇಲ್ಲವೇ ಇಲ್ಲ.....
....ಯಾವುದೋ ಲೋಹದ ವಾಹನ...
ಮೇಲಿಂದ ಕೆಳಗೆ ಮುಚ್ಚಿಟ್ಟು ದೇವರ ಮಕ್ಕಳು ತರುವರು ನಿನ್ನನ್ನು...
ಹೂಳುವರು ನಿನಗೆ ಗೊತ್ತೇನು...
ಮಸಣದಲ್ಲಲ್ಲ.. ಬೇರೆಲ್ಲೋ...
ತಿರುಗಿ ನೋಡದೆ ಹೋಗುವರು ನಿನ್ನ ಹೂಳಿದ ಜಾಗವನ್ನು....
..ಇರುವಾಗ ನನ್ನದೆಂದು ಬಡಿದಾಡಿದವರು ನಾವು..
ಬದುಕಿನ ಯಾನ ಮುಗಿಸಿದಾಗ
ಯಾರೂ ಬರಲಿಲ್ಲ ಜೊತೆಗೆ ನಾನು ನನ್ನವರೆನ್ನುವರು...
..ಬದುಕಿ ಬರಲು ಅವಕಾಶವಿಲ್ಲ
ಮನದಲಿ ಸಾವಿರ ನೋವಿದ್ದರೂ...
ಹೇಳಲು ಯಾರಿಲ್ಲ ನಿನ್ನ ಜೊತೆ ಜೀವನ ಕಳೆದವರು..
....ಕೊನೆಗೂ ಭೂಮಿಗೂ, ರುದ್ರಭೂಮಿಗು ಬೇಡವಾದೆಯಾ ಮನುಜ ನೀನು..
..ಮುಂದಾದರು
ಬಿಡುವೆಯಾ ದುರಾಸೆ, ದುರ್ಬುದ್ಧಿ ಎಂಬ ಲಂಪಟತನವನ್ನು...
*ಒಳಿತು ಮಾಡು ಮನುಷ್ಯ ನೀನು ಇರೋದು ಮೂರು ದಿವಸ*
*ಉಸಿರು ನಿಂತ ಮೇಲೆ ಹೆಣ ಅನ್ನುತಾರ.. ಮಣ್ಣಾಗಿ ಹೂಳುತ್ತಾರ*
🙏🙏🙏
ವಂದನೆಗಳೊಂದಿಗೆ
No comments:
Post a Comment
welcome to dgnsgreenworld Family