www.dgnsgreenworld.blogspot.com

Sunday, July 19, 2020

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.
ಒಣ ಹಣ್ಣುಗಳ( Dry fruits)ಲ್ಲಿ ಒಂದಾದ, ಭಾರತ ಮೂಲದ ಈ ಅಕ್ರೋಟು ಕಾಶ್ಮೀರ ಹಾಗೂ ಹಿಮಾಲಯ ಶ್ರೇಣಿಯ ರಾಜ್ಯಗಳಲ್ಲಿ ಬೆಳೆಯುತ್ತಾರೆ.

ಗಟ್ಟಿಯಾದ ಕವಚ ಹೊಂದಿರುವ  ಕಾಯಿಯನ್ನು ಒಡೆದಾಗ ಸುರುಳಿಯಾಕಾರದ ಅಕ್ರೋಟ್ ಥೇಟ್ ಮೆದುಳಿನ ಆಕಾರದಂತೆ ಕಾಣುತ್ತದೆ.

ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಪೊಟ್ಯಾಷಿಯಂ, ಪ್ರೋಟಿನ್, ಒಮೆಗಾ 3,ರಂಜಕ, ನಾರಿನಂಶ, ಇತ್ಯಾದಿ ಅತಿ ಹೆಚ್ಚು ಪೋಷಕಾಂಶಗಳು ಇರುವುದರಿಂದ ಶರೀರದ ಅಂದ ಹಾಗೂ ಆರೋಗ್ಯಕ್ಕೆ
ಸಹಕಾರಿಯಾಗಿದೆ.

      { ಅಕ್ರೋಟ್ ಸೇವನೆಯ ಲಾಭಗಳು}

* ಮೆದುಳನ್ನು ಚುರುಕುಗೊಳಿಸಿ ಮರೆಗುಳಿತನ ನಿವಾರಿಸುತ್ತದೆ.

* ಮೂಳೆಗಳಿಗೆ ಬಲ ನೀಡಿ ಸ್ನಾಯುಗಳನ್ನು ಬಲಪಡಿಸುತ್ತದೆ.

*ಹೃದಯ ಆರೋಗ್ಯಕರವಾಗಿರಲು ಸಹಕಾರಿಯಾಗಿದೆ.

* ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ.

*ಚರ್ಮ ಕಲೆ ರಹಿತವಾಗಿ ಕಾಂತಿಯುಕ್ತವಾಗಿಇರುತ್ತದೆ,
ಹಾಗೂ ಮುಖದ ನೆರಿಗೆಗಳನ್ನು ನಿವಾರಿಸುತ್ತದೆ.

* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ,ದೇಹ ಉತ್ಸಾಹ ಹುರುಪಿನಿಂದ ಇರುವಂತೆ ಮಾಡುತ್ತದೆ.

* ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಅಗತ್ಯ ಪೋಷಕಾಂಶ ಗಳನ್ನು ಒದಗಿಸುತ್ತದೆ.

* ಮಧುಮೇಹಿಗಳಿಗೆ ಕೂಡ ಅತ್ಯುತ್ತಮ.

* ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.

* ಅಕ್ರೋಟ್ ತೈಲ (Walnut oil) ಕಾಲ್ಬೆರಳುಗಳ ನಡುವೆ ಕಾಣಿಸಿಕೊಳ್ಳುವ ಫಂಗಸ್,ಸೋರಿಯಾಸಿಸ್
ನಂತಹ ಚರ್ಮದ ಕಾಯಿಲೆಗಳಿಗೆ ಉಪಯುಕ್ತ ವಾಗಿದೆ.

* ವಾಲ್ ನಟ್ ಆಯಿಲ್ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

* ಬೆಳೆಯುವ ಮಕ್ಕಳಿಗೆ ತಿನ್ನಿಸುವುದರಿಂದ ಮೆದುಳಿನ ಬೆಳವಣಿಗೆ ಉತ್ತಮವಾಗಿ, ಬುದ್ಧಿ ಚುರುಕಾಗುತ್ತದೆ.

ಅಕ್ರೋಟ್ ಉಷ್ಣಕಾರಕ ಗುಣ ಹೊಂದಿದ್ದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಸೇವಿಸಬಹುದು.

*ಹಿರಿಯರು ಒಂದು ದಿನಕ್ಕೆ 02 ಅಕ್ರೋಟ ಸೇವಿಸಬೇಕು. ಮಕ್ಕಳಿಗೆ 01ಸಾಕು.
ಅಕ್ರೋಟನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅರೆದು ಹಾಲಿನಲ್ಲಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು. 
ಅಕ್ರೋಟನೊಂದಿಗೆ ನಾಲ್ಕೈದು ಬದಾಮು ಸೇರಿಸಬಹುದು.
 ಅಕ್ರೋಟು ದರದಲ್ಲಿ ತುಟ್ಟಿಯಾದರೂ ರೆಡಿಮೇಡ್ ಫುಡ್, ಬೇಕರಿ ತಿನಿಸು ತಿನ್ನುವುದಕ್ಕಿಂತ, 
ಅಕ್ರೋಟ್ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ.         ( ವಿವಿಧ ಮೂಲಗಳ ಸಂಗ್ರಹ)
                    

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World