www.dgnsgreenworld.blogspot.com

Tuesday, August 18, 2020

ಪೈಲೆಟ್ ಟ್ರೈನಿಂಗ್ ಕ್ಲಾಸ್ ಗೆ ಸೇರಿಕೊಳ್ಳಬೇಕು ಅಂದರೆಏನಿಲ್ಲ ಅಂದರೂ 38 ರಿಂದ 40 ಲಕ್ಷ ರೂಪಾಯಿ ಫೀಸನ್ನು ಕಟ್ಟಲೇ ಬೇಕಾಗುತ್ತದೆ.

ಪೈಲೆಟ್ ಟ್ರೈನಿಂಗ್ ಕ್ಲಾಸ್ ಗೆ ಸೇರಿಕೊಳ್ಳಬೇಕು ಅಂದರೆ
ಏನಿಲ್ಲ ಅಂದರೂ 38 ರಿಂದ 40 ಲಕ್ಷ ರೂಪಾಯಿ ಫೀಸನ್ನು ಕಟ್ಟಲೇ ಬೇಕಾಗುತ್ತದೆ. ಇಂದಿರಾಗಾಂಧಿ ನ್ಯಾಷನಲ್ ಅರ್ಬನ್ ಅಕಾಡೆಮಿ ಈ ಒಂದು ಇನ್ಸ್ಟಿಟ್ಯೂಟ್ ಗೆ ಟ್ರೈನಿಂಗಿಗೆ ಅಂತ ಸೇರಿಕೊಂಡರೆ ಇಲ್ಲಿ 38 ಲಕ್ಷ ರೂಪಾಯಿಯನ್ನು ಕಟ್ಟಬೇಕಾಗುತ್ತದೆ.
ಇಲ್ಲಿ ಒಂದು ಅಪ್ಲಿಕೇಶನ್ ತುಂಬಬೇಕು ಅಂದರೆ 6000 ರೂ ಕಟ್ಟಬೇಕಾಗುತ್ತದೆ.
ಇಷ್ಟೊಂದು ದುಬಾರಿ ಹಣವನ್ನು ಕಟ್ಟುವುದು ಮಧ್ಯಮವರ್ಗ ಹಾಗೂ ಬಡ ಜನರಿಗೆ ತುಂಬಾ ಕಷ್ಟವಾಗುತ್ತದೆ.
ಆದರೂ ಟ್ರೈನಿಂಗ್ ಮುಗಿದ ನಂತರ ಒಬ್ಬ ಕಮರ್ಷಿಯಲ್ ಪೈಲೆಟ್ ಆದ ನಂತರದಲ್ಲಿ ಆ ವ್ಯಕ್ತಿಗೆ ನಮ್ಮ ಭಾರತದಲ್ಲಿ ಒಂದುವರೆ ಲಕ್ಷ ರೂಪಾಯಿ ಸಂಬಳವನ್ನು ಕೊಡಲಾಗುತ್ತದೆ. ಇದು ಕೆಲವೊಂದು ಕಂಪನಿಗಳ ಮೇಲೆ ಅವಲಂಬಿತವಾಗಿದ್ದು ಸಂಬಳವನ್ನು ಹೆಚ್ಚು ಸಹ ಮಾಡಬಹುದು.
ಆದರೆ ಇಂಟರ್ನ್ಯಾಷನಲ್ ಪೈಲೆಟ್ ಆದರೆ ತಿಂಗಳಿಗೆ ಐದರಿಂದ ಆರು ಲಕ್ಷ ಸಂಬಳವನ್ನು ಪಡೆಯಬಹುದು.
ಇದರಲ್ಲಿ ಟ್ರೈನಿಂಗ್ ಫೀಸ್ ತುಂಬಾ ಜಾಸ್ತಿ ಇರುತ್ತದೆ ಅದರಲ್ಲಿ ಸಂಬಳ ಕೂಡಾ ಹೆಚ್ಚಾಗಿರುತ್ತದೆ.
ಇನ್ನು ಇಲ್ಲಿನ ಕೋರ್ಸ್ ಬಗ್ಗೆ ನೋಡುವುದಾದರೆ ಒಬ್ಬ ಪೈಲೆಟ್ ಗೆ SPL, PPL ಮತ್ತು CCL ಎಂದು ಈ ಮೂರು ರೀತಿಯಲ್ಲಿ ಲೈಸೆನ್ಸ್ ಗಳನ್ನು ನೀಡಲಾಗುತ್ತದೆ.
ಕೋರ್ಸಿನ ಮೊದಲ ಲೈಸೆನ್ಸ್ ಎಸ್ಪಿಎಲ್ ಅಂದ್ರೆ ಸ್ಟೂಡೆಂಟ್ ಪಾಸ್ ಲೈಸೆನ್ಸ್. ಇಲ್ಲಿ ನೇರವಾಗಿ ವಿಮಾನವನ್ನು ಹಾರಾಡಲು ಬಿಡದೆ ವಿಮಾನದ ಒಳಗೆ ಹಾಗೂ ಹೊರಗಿನ ರಚನೆಯ ಬಗ್ಗೆ ಹಾಗೂ ಅಲ್ಲಿನ ಮಾಹಿತಿಗಳನ್ನು ತಿಳಿಸಿಕೊಡಲಾಗುತ್ತದೆ ಎರಡನೇ ಲೈಸೆನ್ಸ್ ಪಿಪಿಎಲ್ ಅಂದ್ರೆ ಪ್ರೈವೇಟ್ ಪೈಲೆಟ್ ಲೈಸೆನ್ಸ್. ಇಲ್ಲಿ ಸತತವಾಗಿ 16 ಗಂಟೆಗಳ ಕಾಲ ವಿಮಾನವನ್ನು ಹಾರಾಡಿಸುತ್ತಾ ಇರಬೇಕಾಗುತ್ತದೆ.
ಇದರಲ್ಲಿ ಪಾಸಾದರೆ ನಂತರದ ಹಾಗೂ ಕೊನೆಯ ಲೈಸೆನ್ಸ್ ಸಿಪಿಎಲ್ ಅಂದರೆ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್. ಇದನ್ನು ನೀಡಲಾಗುತ್ತದೆ ಇಲ್ಲಿ 258 ಗಂಟೆಗಳ ಕಾಲ ಸತತವಾಗಿ ವಿಮಾನವನ್ನು ಹಾರಾಡಿಸುತ್ತಲೇ ಇರಬೇಕಾಗುತ್ತದೆ.
ಇಲ್ಲಿ ನಿಮ್ಮ ಕೆಪ್ಯಾಸಿಟಿ ಹಾಗೂ ನಿಮ್ಮ ಏಕಾಗ್ರತೆಯನ್ನು ಚೆಕ್ ಮಾಡಲಾಗುತ್ತದೆ. ಕೊನೆಯದಾಗಿ ಒಂದು ಮೆಡಿಕಲ್ ಟೆಸ್ಟ್ ಕೂಡಾ ಮಾಡಿ ಅದರಲ್ಲಿ ಫಿಟ್ ಅಂತ ಅನಿಸಿದರೆ ಮಾತ್ರ ನಿಮಗೆ ಸಿಪಿಎಲ್ ನೀಡಲಾಗುತ್ತದೆ. ಆದರೆ ಇವೆಲ್ಲವೂ ಓಕೆ ಪೈಲೆಟ್ ಆಗಬೇಕು ಎನ್ನುವುದು ಕೆಲವರ ಕನಸಾಗಿದ್ದು ಇಷ್ಟೊಂದು ಪೀಸ್ ಗಳನ್ನು ಕೊಡುವಷ್ಟು ಸಾಮರ್ಥ್ಯ ಅವರಲ್ಲಿ ಇರುವುದಿಲ್ಲ ಎನ್ನುವ ಪ್ರಶ್ನೆ ಇದ್ದೇ ಇರುತ್ತದೆ.
ಇದಕ್ಕೊಂದು ದಾರಿ ಇದ್ದು ಸರ್ಕಾರದ ಕಡೆಯಿಂದ NDA ಪರೀಕ್ಷೆ ನಡೆಸಲಾಗುತ್ತದೆ ಪರೀಕ್ಷೆಯನ್ನು ಬರೆದು ಇದರಲ್ಲಿ ಉತ್ತೀರ್ಣರಾಗಿದ್ದರೆ ನಿಮ್ಮ ಟ್ರೈನಿಂಗ್ ನ ಎಲ್ಲಾ ಖರ್ಚನ್ನು ಸಹ ಸರ್ಕಾರ ವಹಿಸಿಕೊಳ್ಳುತ್ತದೆ ಹಾಗೂ ಆರಂಭದಲ್ಲಿ 50000 ರೂಪಾಯಿ ಸಂಬಳವನ್ನು ಸಹ ನೀಡುತ್ತದೆ. ಈ ಮೂಲಕ ಇಂಡಿಯನ್ ಏರ್ ಫೋರ್ಸ್ ಗೆ ಜಾಯಿನ್ ಆಗಬಹುದು.

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World