www.dgnsgreenworld.blogspot.com

Thursday, December 17, 2020

ಗಂಟೆಗಟ್ಟಲೆ ಕ್ಯೂನಲ್ಲಿ ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.

#ದೇವರಿಗೆ #ಬೆಲೆ #ಕಟ್ಟುವವರು #ನಾವೇ

ಗಂಟೆಗಟ್ಟಲೆ ಕ್ಯೂನಲ್ಲಿ  ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.

ಓ ದೇವರೇ! ದುಡ್ಡು ಕೊಟ್ಟ ಭಕ್ತರಿಗೆ ಹತ್ತಿರದಿಂದ ದರ್ಶಿಸಲು  ಬೇರೊಂದು ಸಾಲು.ದುಡ್ಡುಕೊಡದ ಭಕ್ತರಿಗೆ ದೂರದ ದರ್ಶನಕ್ಕಾಗಿ ಬೇರೆ 
 ದೊಡ್ಡ ಸಾಲು. ಇದಾವ ನ್ಯಾಯ ಭಗವಂತನೇ?

ಆ ದೇವರು ನಕ್ಕು ಉತ್ತರಿಸುತ್ತಾರೆ.

ನಾನು ತಂದೆತಾಯಿಗಳು ದೈವಸಮಾನ ಎಂದೆ. ನೀವು  ಅವರನ್ನು ಅದೇ ರೀತಿ ಪರಿಗಣಿಸಿ ಗೌರವಿಸುತ್ತೀರಾ?

ಗುರು ಬ್ರಹ್ಮ ಗುರುಃ ವಿಷ್ಣು ಗುರುಸಾಕ್ಷಾತ್ ಪರಬ್ರಹ್ಮ ಎಂದು ಹೇಳಿದೆ. ನೀವು ಅದೇ ರೀತಿ ಗುರುಗಳನ್ನು ಗೌರವಿಸುತ್ತೀರಾ?

ಜನಸೇವೆಯೇ ಜನಾರ್ದನ  ಸೇವೆಎಂದು ಹೇಳಿದೆ. ನೀವು ಅದೇರೀತಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತೀರಾ?

ಇಲ್ಲಿ ಅಲ್ಲಿ ಎನ್ನ ದೆ ಎಲ್ಲೆಲ್ಲೂ ನಾನೇ ಇದ್ದೇನೆ.ಎಲ್ಲಿ ಹುಡುಕಿದರೂ ನಾನೇ ಇದ್ದೇನೆ. ನಿನ್ನಲ್ಲಿಯೂ, ಎಲ್ಲರಲ್ಲಿಯೂ ನಾನೇ ಇರುವೆ. ನೀನು ನಂಬಲಿಲ್ಲ. 

ನನ್ನ ಮೂರ್ತಿಯನ್ನು ದೇವಸ್ಥಾನದಲ್ಲಿರಿಸಿ, ದರ್ಶನದ ವೇಳೆಯನ್ನೂ, ದರ್ಶನದ ದರವನ್ನು, ಯಾರು ಎಷ್ಟು ಕಾಲ, ಹೇಗೆ ದರ್ಶನ ಮಾಡಬೇಕೆಂದು, ನೀನೇ ನಿರ್ಧರಿಸಿದೆ. ವಿವಿಧ ಪೂಜಾವಿಧಿ,ವಿಧಾನಗಳನ್ನೂ, ಅವುಗಳ ದರಗಳನ್ನೂಸಹ ನೀನೇ ನಿರ್ಧರಿಸಿರುವೆ. 

ಎಲ್ಲವನ್ನೂ ನೀನೇಮಾಡಿ ನನ್ನನ್ನು ಕೇಳುವುದು ಯಾವ ನ್ಯಾಯವಯ್ಯಾ?

ಹುಚ್ಚ ಮಾನವಾ, ನಿಜವಾಗಿಯೂ ನನ್ನನ್ನು ಕಾಣುವ ಹಂಬಲವಿದ್ದರೆ, ಪಶು,ಪಕ್ಷಿ,ವೃಕ್ಷಗಳಲ್ಲಿ ಕಾಣು. ನಿನ್ನಲ್ಲಿ ಕಾಣು, ಇತರರಿಗೆ ಪ್ರೀತಿಯಿಂದ ಸೇವೆ ಮಾಡುವುದರ ಮೂಲಕ ಎಲ್ಲರಲ್ಲೂ ನನ್ನನ್ನೇ ಕಾಣು. ಮಾತಾ ಪಿತೃಗಳಲ್ಲಿ,ಗುರುಹಿರಿಯರಲ್ಲಿ ಕಾಣು. ನದಿ,ಬೆಟ್ಟ ಗುಡ್ಡ ಗಳಲ್ಲಿ, ಈ ಸುಂದರವಾದ ಪ್ರಕೃತಿಯಲ್ಲಿ ,ಆ ನೀಲಾಕಾಶದಲ್ಲಿ ಕಾಣು. ಕೇವಲ ದೇವಸ್ಥಾನಕ್ಕೆ ಮಾತ್ರ ನನ್ನ ಇರುವಿಕೆಯನ್ನು ಸೀಮಿತಗೊಳಿಸಬೇಡ.
dgnsgreenworld

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World