www.dgnsgreenworld.blogspot.com

Wednesday, December 30, 2020

ಮತ್ತೆ ಕಾಣದಿರು ನೀ 2020!

*ಮತ್ತೆ ಕಾಣದಿರು ನೀ 2020!*

ತುಂಬಿದ ಕಂಗಳ ವಿದಾಯ ನಿನಗೆ, 
ಮತ್ತೆ ಕಾಣದಿರು ಓ 2020!

ದುಡಿವ ಕೈಗಳ  ಕೆಲಸ ಕಸಿದೆ,
ದಿನ ದುಡುಮೆಯವರ ಹೊಟ್ಟೆಗೆ ಹೊಡೆದೆ,
ಬದುಕನು ಭರಿಸಲಾಗದ ಬವಣೆಯಾಗಿಸಿದೆ,
ನಗುವ ಕಂಗಳಲಿ ಕಂಬನಿಯು  ತುಂಬಿದೆ,
ನೀನಾರಿಗಾದೆಯೋ ಓ 2020!

ಹಿರಿಯ ಜೀವಗಳು ಬೆಂದು ಬವಳಿದವು,
ಕಾಲು ಮುರಿದ ಕಪ್ಪೆಗಳಂತಾದರು,
ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,
ನೋಡು ನೋಡುತಲೇ ಅಂತರ್ಧಾನರಾದರು,
ನೀನಾರಿಗಾದೆಯೋ ಓ 2020!

ನೆನ್ನೆ ಮೊನ್ನೆ ಕಂಡ ಗೆಳೆಯರು, 
ಮನಬಿಚ್ಚಿ ಬೆರೆತು ನಕ್ಕವರು,
ತಿರುಗಿ ನೋಡುವಷ್ಟರಲಿ ಮರೆಯಾದರು,
ನಿನ್ನ ಕ್ರೂರನೋಟಕೆ ಬಲಿಯಾದರು,
ನೀನಾರಿಗಾದೆಯೋ ಓ 2020!

ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ,
ಹೊರಗೆ ಕಾಲಿಡುವ ಧೈರ್ಯ ಕಸಿದೆ,
ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ,
ಮೃದುಮನಗಳಿಗೆ ಮಾಯದ ಬರೆಯೆಳೆದೆ, 
ನೀನಾರಿಗಾದೆಯೋ ಓ 2020!

ವ್ಯಾಪಾರಗಳ       ದಿವಾಳಿ ತೆಗೆದೆ,
ವ್ಯಾಪಾರಿಗಳ ಬೆನ್ನಿಗೆ - ಚೂರಿ ಇಟ್ಟೆ,
ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ,
ಉಳಿದದ್ದು ಕೇವಲ ತಣ್ಣೀರ ಬಟ್ಟೆ,
ನೀನಾರಿಗಾದೆಯೋ ಓ 2020!

ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು, 
ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ,
ನೋವು, ನಿರಾಸೆಗಳನು  ಅಡಗಿಸಿಕೊಂಡೆವು
 - ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು,
ನೀನಾರಿಗಾದೆಯೋ ಓ 2020!

ಈಗ ಹೇಳುತಿರುವೆವು ನಿನಗೆ ವಿದಾಯ,
ನೀ ಮರೆಯಾಗುತಿರುವುದು ಅಭಯ ಪ್ರದಾಯ,
ಶೋಕದ ಕಣ್ಣಿರು ಆವಿಯಾಗುತಿದೆ,
ಆನಂದಭಾಷ್ಪ ಮೂಡುತಿದೆ - 
ಹೋಗು, ಇನ್ನು ನೀ ಬರಬೇಡ 2020!

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World