www.dgnsgreenworld.blogspot.com

Saturday, December 9, 2023

ತಂಧೆ ತಾಯಿಯ ಮೇಲೆ ಪ್ರೀತಿ ಇರುವವರು ಓದಿ ಶೇರ್ ಮಾಡುವ ಅಕ್ಷರಗಳು

ತಂಧೆ ತಾಯಿಯ ಮೇಲೆ ಪ್ರೀತಿ ಇರುವವರು ಓದಿ ಶೇರ್ ಮಾಡುವ  ಅಕ್ಷರಗಳು
*ತಾಯಿ  :  ಕಾಮಧೇನು*
*ತಂದೆ    :  ಕಲ್ಪವೃಕ್ಷ*
*ತಾಯಿ  :  ಸೃಷ್ಠಿ*  
*ತಂದೆ    :  ದೃಷ್ಟಿ*
*ತಾಯಿ  :  ಪ್ರಾಣ*  
*ತಂದೆ    :   ತ್ರಾಣ*
*ತಾಯಿ  : ವ್ಯಕ್ತಿತ್ವ*  
*ತಂದೆ    : ಅಸಿತ್ತ್ವ*
*ತಾಯಿ  : ಸಂಸ್ಕಾರ* 
 *ತಂದೆ   : ಸಂಪ್ರದಾಯ*
*ತಾಯಿ  : ಆದರ್ಶ*   
*ತಂದೆ    :  ಆಶ್ರಯ*
*ತಾಯಿ  : ಚೄೆತನ್ಯ*  
*ತಂದೆ    : ಸಾಮರ್ಥ್ಯ*

*ತಾಯಿ  : ಕನಿಕರ*  
*ತಂದೆ    : ಕಾಳಜಿ*

*ತಾಯಿ  : ಒಲವು*  
*ತಂದೆ    : ಗೆಲುವು*

*ತಾಯಿ  : ದಯೆ*  
*ತಂದೆ    : ಧೄೆರ್ಯ*

*ತಾಯಿ  :  ಮಮತೆ*  
*ತಂದೆ    : ಹಣತೆ*

*ತಾಯಿ  : ಗುಡಿ*  
*ತಂದೆ    : ಗೋಪುರ*

*ತಾಯಿ  : ನಂಬಿಕೆ* 
 *ತಂದೆ   : ವಿಶ್ವಾಸ*

*ತಾಯಿ  : ಹೂವು* 
 *ತಂದೆ   : ಪರಿಮಳ*

*ತಾಯಿ  : ಅಡಿಪಾಯ* 
 *ತಂದೆ   :   ಮೇಲ್ಚಾವಣಿ*

*ತಾಯಿ  : ಸ್ಫೂರ್ತಿ* 
 *ತಂದೆ   : ಭರವಸೆ*

*ತಾಯಿ  : ಸಾಕ್ಷರತೆ* 
 *ತಂದೆ   : ಸಾಧನೆ*

*ತಾಯಿ  : ಜನ್ಮ*  
*ತಂದೆ    : ಜೀವನ*

*ತಾಯಿ  : ದೀಪ*  
*ತಂದೆ    : ದ್ವೀಪ*

*ತಾಯಿ  :  ರಕ್ಷಕಿ*  
*ತಂದೆ    : ಶಿಕ್ಷಕ*

*ತಾಯಿ  : ಆರೄೆಕೆ*  
*ತಂದೆ    : ಆತ್ಮೀಯ*

*ತಾಯಿ  : ಕನಸು*  
*ತಂದೆ    : ನನಸು*

*"ನನ್ನ ತಾಯಿ ತಂದೆಗೆ ನನ್ನ ನಮನಗಳು"*

*🔘 ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನವಿರುತ್ತದೆಯೋ*
                *ಆ ವ್ಯಕ್ತಿ*
*ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾನೆ.

Friday, November 24, 2023

*ಐಷಾರಾಮಿ*

*ಐಷಾರಾಮಿ*
👇 👇 👇 👇 👇
*60 ರ ದಶಕದಲ್ಲಿ ಕಾರು ಒಂದು ಐಷಾರಾಮಿಯಾಗಿತ್ತು ,
*70 ರ ದಶಕದಲ್ಲಿ ದೂರದರ್ಶನವು ಒಂದು ಐಷಾರಾಮಿಯಾಗಿತ್ತು,
*80 ರ ದಶಕದಲ್ಲಿ ಟೆಲಿಫೋನ್ ಒಂದು ಐಷಾರಾಮಿಯಾಗಿತ್ತು,
*90 ರ ದಶಕದಲ್ಲಿ ಕಂಪ್ಯೂಟರ್ ಒಂದು ಐಷಾರಾಮಿಯಾಗಿತ್ತು. 
-
ಇನ್ನು ಮುಂದೆ ಐಷಾರಾಮಿಯೆಂದರೆ   ವಿಹಾರಕ್ಕೆ ಹೋಗುವುದಲ್ಲ ಮತ್ತು
ಹೆಸರಾಂತ ಬಾಣಸಿಗರಿಂದ ತಯಾರಿಸಿದ ಆಹಾರವನ್ನು ಸೇವಿಸುವುದಲ್ಲ.

ನಮ್ಮ ಸ್ವಂತ ಹಿತ್ತಲಿನಲ್ಲಿ ಬೆಳೆದ ತಾಜಾ ಸಾವಯವ ಆಹಾರವನ್ನು ತಿನ್ನುವುದೇ  ಐಷಾರಾಮಿ.
-
**ಐಷಾರಾಮಿಯೆಂದರೆ  ನಮ್ಮ ಮನೆಯಲ್ಲಿ ಲಿಫ್ಟ್ ಇರುವುದಲ್ಲ ,
**ಐಷಾರಾಮಿಯೆಂದರೆ ಮನೆಯ 3-4 ಮಹಡಿಗಳ ಮೆಟ್ಟಿಲುಗಳನ್ನು ಕಷ್ಟವಿಲ್ಲದೆ ಹತ್ತಿ ಇಳಿಯುವ  ಸಾಮರ್ಥ್ಯ,
**ಐಷಾರಾಮಿಯೆಂದರೆ ದೊಡ್ಡ ರೆಫ್ರಿಜರೇಟರನ್ನು ಖರೀದಿಸುವ ಸಾಮರ್ಥ್ಯವಲ್ಲ,
**ಐಷಾರಾಮಿಯೆಂದರೆ ಆಗಾಗ  ಬೇಯಿಸಿದ ಆಹಾರವನ್ನು ದಿನಕ್ಕೆ 2-3 ಬಾರಿ ತಿನ್ನುವ ಸಾಮರ್ಥ್ಯ.
**ಐಷಾರಾಮಿಯೆಂದರೆ ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಹೊಂದುವುದಲ್ಲ,  
 **ಹಿಮಾಲಯದ ಯಾತ್ರೆಯನ್ನು ವೀಕ್ಷಿಸುವುದಲ್ಲ, 
**ಐಷಾರಾಮಿಯೆಂದರೆ ಹಿಮಾಲಯದ ಯಾತ್ರೆಯನ್ನು ಭೌತಿಕವಾಗಿ ಅನುಭವಿಸುವುದು, 
**ಅಮೇರಿಕಾದ ಅತ್ಯಂತ ದುಬಾರಿ ಆಸ್ಪತ್ರೆಯಿಂದ ಐಷಾರಾಮಿ ಚಿಕಿತ್ಸೆ ಪಡೆಯುವುದಲ್ಲ.
-  
ಹಾಗಾದರೆ ಈಗ ಐಷಾರಾಮಿ ಎಂದರೇನು ??
👉 ಆರೋಗ್ಯವಾಗಿರುವುದೇ ಐಷಾರಾಮಿ , 
👉 ಸಂತೋಷವಾಗಿರುವುದೇ ಐಷಾರಾಮಿ ,  
👉 ದಾಂಪತ್ಯದಲ್ಲಿ ಆನಂದ ವಾಗಿರುವುದೇ ಐಷಾರಾಮಿ , 
👉 ಪ್ರೀತಿಯ ಕುಟುಂಬವನ್ನು ಹೊಂದುವುದೇ ಐಷಾರಾಮಿ ,  
👉 ಪ್ರೀತಿಯ ಸ್ನೇಹಿತರೊಂದಿಗೆ ಇರುವುದೇ ಐಷಾರಾಮಿ ,  
👉 ಮಾಲಿನ್ಯರಹಿತ ಸ್ಥಳದಲ್ಲಿ ವಾಸಿಸುವುದೇ ಐಷಾರಾಮಿ , 

ಈ ಎಲ್ಲಾ ಸಂಗತಿಗಳು ಅಪರೂಪವಾಗಿ ಮಾರ್ಪಟ್ಟಿವೆ ಮತ್ತು ಇವೇ  *ನಿಜವಾದ* *"ಐಷಾರಾಮಿ*".

Saturday, November 18, 2023

ಯಾವುದನ್ನೂ ನಾಳೆಗೆ ಮುಂದೂಡಬೇಡಿ!ಈ ದಿನವನ್ನು ಅನುಭವಿಸಿ ಏಕೆಂದರೆ ನಾಳೆ ಎಂಬುದು ಎಂದಿಗೂ ಬರುವುದಿಲ್ಲ! ಪ್ರತಿ ದಿನ *ಇಂದು*(ಈದಿನ) ಆಗಿ ಬರುತ್ತದೆ

ಯಾವುದನ್ನೂ ನಾಳೆಗೆ ಮುಂದೂಡಬೇಡಿ!
ಈ ದಿನವನ್ನು ಅನುಭವಿಸಿ ಏಕೆಂದರೆ ನಾಳೆ ಎಂಬುದು ಎಂದಿಗೂ ಬರುವುದಿಲ್ಲ! 
ಪ್ರತಿ ದಿನ *ಇಂದು*(ಈದಿನ) ಆಗಿ ಬರುತ್ತದೆ.

ಯಾರಬಗ್ಗೆಯೂ ಬೇಸರಿಸ ಬೇಡಿ, ಅವರನ್ನು ಬದಲಿಸಲೂ ಪ್ರಯತ್ನಿಸಬೇಡಿ. 
ಬೇಸರಿಸುವುದರಿಂದ ನಿಮಗೇ ಹಾನಿ, ಪ್ರತಿಯೊಬ್ಬರೂ ಅವರದೇ ಆದ ವ್ಯಕ್ತಿತ್ವವನ್ನು  ಹೊಂದಿರುತ್ತಾರೆ, 
ಸಹನೆ ಶಾಂತಿಗೆ ದಾರಿ.*
*ಸರಳತೆ ಸುಖಜೀವನಕ್ಕೆ ದಾರಿ.*
ಈ ಜೀವನವೇ ಒಂದು ಕನಸು! ಇದನ್ನು ಸುಂದರ ಕನಸಾಗಿಸಿಕೊಳ್ಳುವ ಶಕ್ತಿ ನಿಮ್ಮಲ್ಲೇ ಇದೆ. ಪಟ್ಟು ಬಿಡದ ಪ್ರಯತ್ನಿಸಿ, ಆದರೆ ಜೀವನ ಕನಸು ಎಂಬುದ ಮರೆಯದಿರಿ. ಏಕೆಂದರೆ ಇಲ್ಲಿ ಯಾವುದೂ ಶಾಶ್ವತವಲ್ಲ. ಈ ಸತ್ಯವ ನೆನಪಿನಲ್ಲಿರಿಸಿಕೊಂಡರೆ ಚಿಂತಿಸುವ ಅಗತ್ಯವೂ ಇರುವುದಿಲ್ಲ.

Tuesday, October 17, 2023

ಫ್ರಿಜ್ ವಸ್ತುಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವೇನು? ಆದರೆ ಇದೆ..

*ಭಾರತೀಯ ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣ: ಫ್ರಿಡ್ಜ್‌ನಲ್ಲಿರುವ ವಸ್ತುಗಳನ್ನು ಶೀಘ್ರದಲ್ಲೇ ಬಳಸಿ._* 
~~~~~~~~~~~~~~~~ 

◆ ಫ್ರಿಜ್ ವಸ್ತುಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವೇನು? ಆದರೆ ಇದೆ....

◆ ಹಾಲಿನಿಂದ ಮೊಸರು ಬೆಣ್ಣೆ ತನಕ 
◆ ಸಾಗೋದಿಂದ ಸೋಯಾ ಸಾಸ್‌ಗೆ ಹಿಟ್ಟು, 
◆ ಈಜು, ◆ ರವೆ, ◆ ಉಪ್ಪಿನಕಾಯಿ, 
◆ ಹಪ್ಪಳ ◆ ಮಸಾಲೆಗಳು, ◆ ಒಣ ಹಣ್ಣುಗಳು,
◆ ತರಕಾರಿಗಳು ಅಥವಾ ಇನ್ನು ಏನೇ ಇರಲಿ ಅದನ್ನು ಫ್ರಿಜಲ್ಲಿ ತುರ್ಕೊದು!

ಮಹಿಳೆಯರ ಈ ವರ್ತನೆ. ಅಷ್ಟೇ ಅಲ್ಲ, ಅರ್ಧ ತಿಂದ ಹಣ್ಣು, 

◆ ನಿನ್ನೆಯಿಂದ ಉಳಿದ ದಾಲ್, ■ ತರಕಾರಿಗಳು, ■ ಎರಡು ದಿನಗಳ ಹಿಂದಿನ ಚಪಾತಿ ■ ಮಸಾಲೆ, ■ ಎಲ್ಲಾ ರೀತಿಯ ಬೇಳೆಕಾಳುಗಳು, ■ ವಿವಿಧ ಮಸಾಲಾ ಪ್ಯಾಕೆಟ್‌ಗಳು ಸಹ ತೆರೆದಿರುತ್ತವೆ, ■ ಉಳಿದಿರುವ ತಂಪು ಪಾನೀಯಗಳು, ■ ಸಿಹಿತಿಂಡಿಗಳು, ಸಾಮಗ್ರಿಗಳ ಹೊರೆ! ಇವೆಲ್ಲವೂ ನಿಮ್ಮ ಫ್ರಿಡ್ಜ್‌ನಲ್ಲಿ ಸುಖವಾಗಿ ಬದುಕುತ್ತಿವೆ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿದೆ. ಆದರೆ ಇಲ್ಲಿ ಕ್ಯಾನ್ಸರ್ ವೈರಸ್ ಸೃಷ್ಟಿಯಾಗುತ್ತಿದೆ. ಇದುಕ್ಕೂ ಫ್ರಿಡ್ಜ್ ಗೂ ಯಾವುದೇ ಲಾಕ್ಷಣಿಕ ಸಂಬಂಧವಿಲ್ಲ ಎಂದು ಅನೇಕರಿಗೆ ತೋರುತ್ತದೆ. ಆದರೆ, ಈ ರೀತಿ ವರ್ತಿಸುವ 1000 ಜನರನ್ನು ಅಧ್ಯಯನ ಮಾಡಿದ ನಂತರ, ಅವರಲ್ಲಿ 538 ಮಂದಿ ಕ್ಯಾನ್ಸರ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಬಂದಿದೆ, ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿದ್ದಾರೆ. ಆಶ್ಚರ್ಯವೆಂಬಂತೆ ಈ 538 ಸ್ಥಳಗಳಲ್ಲಿ ಮೇಲೆ ಹೇಳಿದಂತೆ ಫ್ರಿಜ್ ನಲ್ಲಿ ಸುಖದ ಲೋಕವೇ ನಡೆಯುತ್ತಿತ್ತು. 

■ ಸಿಕ್ಕಾಪಟ್ಟೆ ಆಹಾರ ತಂದು ಫ್ರಿಜ್ ನಲ್ಲಿ ತುಂಬುವ ಬದಲು ನಿಮಗೆ ಬೇಕಾದುದನ್ನು ಮಾತ್ರ ತನ್ನಿ. 
■ ಇಡ್ಲಿ, ದೋಸೆ, ■ ವಡಾ ಸಾಂಬಾರನ ತಾಜಾ ಹಿಟ್ಟು ತನ್ನಿ.. ಎಂಟು ದಿನದ್ದಲ್ಲ. 

■ ಕಡಲೆ ಹಿಟ್ಟು, 
■ ಜೋಳದ ಹಿಟ್ಟು,
■ ದ್ವಿದಳ ಧಾನ್ಯಗಳು 
ಕೀಟಗಳಿಗೆ ಬಹಳ ಒಳಗಾಗುತ್ತವೆ. ಕಡಿಮೆ ತಂದು ಬಿಸಿಲಿನಲ್ಲಿ ಒಣಗಿಸಿ. ಎರಡು ದಿನಗಳಲ್ಲಿ ಸೇವಿಸುವಷ್ಟು ಹಣ್ಣು ಮತ್ತು ಎಲೆಗಳ ತರಕಾರಿಗಳನ್ನು ಮಾತ್ರ ತನ್ನಿ.

ಉಳಿದ ಹಾಲನ್ನು 48 ಗಂಟೆಗಳ ಒಳಗೆ ಬಳಸಿ ಉಳಿದದ್ದನ್ನು ಎಸೆಯಿರಿ! ಇಡಬೇಡಿ.

ಕೃಪೆ: ಡಾ. ಮಕರಂದ್ ಕರ್ಮಾಕರ್ 
*ಟಾಟಾ ಮೆಮೋರಿಯಲ್ ಆಸ್ಪತ್ರೆ, ಮುಂಬೈ*

ಈ ಸಂದೇಶವನ್ನು ಪ್ರತಿ ಮನೆಗೆ ಮತ್ತು ಮನೆಯಲ್ಲಿರುವ ಎಲ್ಲರಿಗೂ ತಲುಪಿಸಲು ವಿನಂತಿ.  ಪ್ರೀತಿಪಾತ್ರರಿಗೆ ಕ್ಯಾನ್ಸರ್ ಬಂದು ಅಕಾಲದಲ್ಲಿ ಅಗಲಿದಾಗ ಆಗುವ ದುಃಖವನ್ನು ಅರ್ಥ ಮಾಡಿಕೊಳ್ಳಿ. 🙏* 

*ವಾಸ್ತವವಾಗಿ ಫ್ರಿಡ್ಜ್ ಅನ್ನೇ ಬಿಸಾಡುವುದು ಉತ್ತಮ..*

Saturday, October 7, 2023

ಆರೋಗ್ಯವಾಗಿರಲು ಕೆಲವು ಸಲಹೆಗಳು. "ಸರ್ವಜನ ಸುಖೇನೋ ಭವಂತು"

*ಎಲ್ಲರಿಗೂ ಆರೋಗ್ಯ ದಿನದ ಶುಭಾಶಯಗಳು*
 🄷🄰🄿🄿🅈 🄸🄽🅃🄴🅁🄽🄰🅃🄸🄾🄽🄰🄻
 🄷🄴🄰🄻🅃🄷   🄳🄰🅈
 ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು:
 1. ಬಿಪಿ: 120/80
 2. ನಾಡಿ: 70 - 100
 3. ತಾಪಮಾನ: 36.8 - 37
 4. ಉಸಿರು: 12-16
 5. ಹಿಮೋಗ್ಲೋಬಿನ್: ಪುರುಷ -13.50-18
 ಹೆಣ್ಣು - 11.50 - 16
 6. ಕೊಲೆಸ್ಟ್ರಾಲ್: 130 - 200
 7. ಪೊಟ್ಯಾಸಿಯಮ್: 3.50 - 5
 8. ಸೋಡಿಯಂ: 135 - 145
 9. ಟ್ರೈಗ್ಲಿಸರೈಡ್‌ಗಳು: 220
 10. ದೇಹದಲ್ಲಿನ ರಕ್ತದ ಪ್ರಮಾಣ: PCV 30-40%
 11. ಸಕ್ಕರೆ ಮಟ್ಟ: ಮಕ್ಕಳಿಗೆ (70-130) ವಯಸ್ಕರಿಗೆ: 70 - 115
 12. ಕಬ್ಬಿಣ: 8-15 ಮಿಗ್ರಾಂ
 13. ಬಿಳಿ ರಕ್ತ ಕಣಗಳು WBC: 4000 - 11000
 14. ಕಿರುಬಿಲ್ಲೆಗಳು: 1,50,000 - 4,00,000
 15. ಕೆಂಪು ರಕ್ತ ಕಣಗಳು ಆರ್ಬಿಸಿ: 4.50 - 6 ಮಿಲಿಯನ್.
 16. ಕ್ಯಾಲ್ಸಿಯಂ: 8.6 -10.3 mg/dL
 17. ವಿಟಮಿನ್ D3: 20 - 50 ng/ml.
 18. ವಿಟಮಿನ್ B12: 200 - 900 pg/ml.
 *40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು:*
 *1- ಮೊದಲ ಸಲಹೆ:* ನಿಮಗೆ ಬಾಯಾರಿಕೆಯಿಲ್ಲದಿದ್ದರೂ ಅಥವಾ ಅವಶ್ಯಕತೆಯಿಲ್ಲದಿದ್ದರೂ ಸಹ ಯಾವಾಗಲೂ ನೀರನ್ನು ಕುಡಿಯಿರಿ, ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದಾಗಿ.  ದಿನಕ್ಕೆ ಕನಿಷ್ಠ 2 ಲೀಟರ್.
 *2- ಎರಡನೇ ಸೂಚನೆ:* ದೇಹದಿಂದ ಸಾಧ್ಯವಾದಷ್ಟು ಕೆಲಸವನ್ನು ಮಾಡಿ, ನಡಿಗೆ, ಈಜು ಅಥವಾ ಯಾವುದೇ ರೀತಿಯ ಕ್ರೀಡೆಯಂತಹ ದೇಹದ ಚಲನೆ ಇರಬೇಕು.
 *3-3 ನೇ ಸಲಹೆ:* ಕಡಿಮೆ ತಿನ್ನಿ... ಹೆಚ್ಚು ತಿನ್ನುವ ಹಂಬಲವನ್ನು ಬಿಡಿ... ಏಕೆಂದರೆ ಅದು ಎಂದಿಗೂ ಒಳ್ಳೆಯದನ್ನು ತರುವುದಿಲ್ಲ.  ನಿಮ್ಮನ್ನು ವಂಚಿತಗೊಳಿಸಬೇಡಿ, ಆದರೆ ಪ್ರಮಾಣವನ್ನು ಕಡಿಮೆ ಮಾಡಿ.  ಪ್ರೋಟೀನ್, ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ.
 *4- ನಾಲ್ಕನೇ ಸೂಚನೆ:* ವಾಹನವು ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದರೆ ಅದನ್ನು ಬಳಸಬೇಡಿ.  ನೀವು ದಿನಸಿಗಳನ್ನು ತೆಗೆದುಕೊಳ್ಳಲು, ಯಾರನ್ನಾದರೂ ಭೇಟಿ ಮಾಡಲು ಅಥವಾ ಕೆಲಸ ಮಾಡಲು ಎಲ್ಲಿಯಾದರೂ ಹೋಗುತ್ತಿದ್ದರೆ, ನಿಮ್ಮ ಕಾಲುಗಳ ಮೇಲೆ ನಡೆಯಲು ಪ್ರಯತ್ನಿಸಿ.  ಲಿಫ್ಟ್, ಎಸ್ಕಲೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಬೇಕು.
 *5- 5ನೇ ಸೂಚನೆ* ಕೋಪವನ್ನು ಬಿಟ್ಟುಬಿಡಿ, ಚಿಂತಿಸುವುದನ್ನು ನಿಲ್ಲಿಸಿ, ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ.  ತೊಂದರೆಯ ಸಂದರ್ಭಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ, ಅವರು ಎಲ್ಲಾ ಆರೋಗ್ಯವನ್ನು ಹಾಳುಮಾಡುತ್ತಾರೆ ಮತ್ತು ಆತ್ಮದ ವೈಭವವನ್ನು ಕಸಿದುಕೊಳ್ಳುತ್ತಾರೆ.  ಸಕಾರಾತ್ಮಕ ಜನರೊಂದಿಗೆ ಮಾತನಾಡಿ ಮತ್ತು ಅವರ ಮಾತುಗಳನ್ನು ಆಲಿಸಿ.
 *6- ಆರನೇ ಸೂಚನೆ* ಮೊದಲನೆಯದಾಗಿ, ಹಣದ ಮೇಲಿನ ಬಾಂಧವ್ಯವನ್ನು ಬಿಟ್ಟುಬಿಡಿ
 ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ, ನಗು ಮತ್ತು ಮಾತನಾಡಿ!  ಹಣವು ಉಳಿವಿಗಾಗಿ ಮಾಡಲ್ಪಟ್ಟಿದೆ, ಹಣಕ್ಕಾಗಿ ಜೀವನವಲ್ಲ.
 *7-7 ನೇ ಟಿಪ್ಪಣಿ* ನಿಮ್ಮ ಬಗ್ಗೆ ಅಥವಾ ನೀವು ಸಾಧಿಸಲು ಸಾಧ್ಯವಾಗದ ಯಾವುದನ್ನಾದರೂ ಅಥವಾ ನೀವು ಆಶ್ರಯಿಸಲು ಸಾಧ್ಯವಾಗದ ಯಾವುದನ್ನಾದರೂ ಕುರಿತು ವಿಷಾದಿಸಬೇಡಿ.
 ಅದನ್ನು ನಿರ್ಲಕ್ಷಿಸಿ ಮತ್ತು ಮರೆತುಬಿಡಿ.
 *8- ಎಂಟನೇ ಸೂಚನೆ* ಹಣ, ಸ್ಥಾನ, ಪ್ರತಿಷ್ಠೆ, ಅಧಿಕಾರ, ಸೌಂದರ್ಯ, ಜಾತಿ ಮತ್ತು ಪ್ರಭಾವ;
 ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತವೆ.  ನಮ್ರತೆಯು ಜನರನ್ನು ಪ್ರೀತಿಯಿಂದ ಹತ್ತಿರ ತರುತ್ತದೆ.
 *9- ಒಂಬತ್ತನೇ ಸಲಹೆ* ನಿಮ್ಮ ಕೂದಲು ಬಿಳಿಯಾಗಿದ್ದರೆ, ಅದು ಜೀವನದ ಅಂತ್ಯ ಎಂದು ಅರ್ಥವಲ್ಲ.  ಇದು ಉತ್ತಮ ಜೀವನಕ್ಕೆ ನಾಂದಿ.  ಆಶಾವಾದಿಯಾಗಿರಿ, ನೆನಪಿನೊಂದಿಗೆ ಬದುಕಿ, ಪ್ರಯಾಣಿಸಿ, ಆನಂದಿಸಿ.  ನೆನಪುಗಳನ್ನು ರಚಿಸಿ!
 *10- 10ನೇ ಸೂಚನೆಗಳು* ನಿಮ್ಮ ಪುಟ್ಟ ಮಕ್ಕಳನ್ನು ಪ್ರೀತಿ, ಸಹಾನುಭೂತಿ ಮತ್ತು ಪ್ರೀತಿಯಿಂದ ಭೇಟಿ ಮಾಡಿ!  ವ್ಯಂಗ್ಯವಾಗಿ ಏನನ್ನೂ ಹೇಳಬೇಡಿ!  ನಿಮ್ಮ ಮುಖದಲ್ಲಿ ನಗುವನ್ನು ಇರಿಸಿ!
 ಹಿಂದೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವರ್ತಮಾನದಲ್ಲಿ ಅದನ್ನು ಮರೆತು ಎಲ್ಲರೊಂದಿಗೆ ಬೆರೆಯಿರಿ!

 *ಆರೋಗ್ಯ ದಿನದ ಶುಭಾಶಯಗಳು*.

Tuesday, October 3, 2023

"ಲಂಚ" ಪ್ರಪಂಚದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಒಂದು ಮಂಚವನ್ನು ಬಾಡಿಗೆಗೆ ಪಡೆಯುವುದುಂಟೆ?

"ಲಂಚ" ಪ್ರಪಂಚದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಒಂದು ಮಂಚವನ್ನು ಬಾಡಿಗೆಗೆ ಪಡೆಯುವುದುಂಟೆ?

ದಿವಂಗತ ಮಧುಕರ್ ಶೆಟ್ಟಿ ಸಾಹೇಬರು ತಾವು ಚಾಮರಾಜನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ತಮ್ಮ ಸಂಬಂಧಿಕರು ಮನೆಗೆ ಬಂದಾಗ ಅತಿಥಿಗಳಿಗೆ ಮಲಗಲು ಒಂದು ಮಂಚವನ್ನು ಬಾಡಿಗೆಗೆ ಪಡೆದಿದ್ದರಂತೆ,ಸರ್ ಮಾತ್ರ ಸದಾ ನೆಲದ ಮೇಲೆ ಒಂದು ಚಾಪೆ ಹಾಸಿಕೊಂಡು ಮಲಗುವ ಅಭ್ಯಾಸವಿತ್ತು.

ಜೀವನವನ್ನು ಹೊರೆಮಾಡಿಕೊಳ್ಳದೆ ಕನಿಷ್ಠ  ವಸ್ತುಗಳೊಂದಿಗೆ ತೀರಾ ಅಗತ್ಯ ಅವಶ್ಯ ಪದಾರ್ಥಗಳನ್ನು ಮಾತ್ರ ಖರೀದಿಸಿ ಸ್ವಂತ ಮಾಡಿಕೊಳ್ಳುತ್ತಿದ್ದರಂತೆ,ನಿತ್ಯದ ಖರ್ಚಿನ ಬಗೆ ಡೈರಿಯಲ್ಲಿ ಬರೆದಿಡುತ್ತಿದ್ದರಂತೆ ತಿಂಗಳ ಕೊನೆಯಲ್ಲಿ ಅಧೀನ ಸಿಬ್ಬಂದಿಗಳಿಂದಲೂ ಸಾಲ ಪಡೆಯುತ್ತಿದ್ದರಂತೆ,ಒಟ್ಟಾರೆ ಲೆಕ್ಕದಲ್ಲಿ ಪಕ್ಕ.

ಪ್ರತಿ ಬಾರಿ ವರ್ಗಾವಣೆಯಾದಗಲು,ನಾಲ್ಕು ಬ್ಯಾಗ್ ಗಳಿಗಿಂತ ಹೆಚ್ಚಿಗೆ ಲಗೇಜ್ ಇರುತ್ತಿರಲಿಲ್ಲ,ಹಾಗೆಯೇ ಅದನ್ನು ಸಾಗಿಸಲು ಎಂದಿಗೂ ಸರ್ಕಾರಿ ವಾಹನವನ್ನು ಬಳಸಿಲ್ಲ,

ಸಾಮಾನ್ಯವಾಗಿ ಕರ್ತವ್ಯ ಮಾಡಿದ ಕಡೆಯಲ್ಲಿ ಅಧಿಕಾರ ಉಪಯೋಗಿಸಿಕೊಂಡು ಕೆಲವೊಮ್ಮೆ ದುರುಪಯೋಗ ಪಡಿಸಿಕೊಂಡು ಒಂದೊಂದು ಆಸ್ತಿ ಕಟ್ಟಡ ಕಾಂಪ್ಲೆಕ್ಸ್ ಕಟ್ಟಿ ಬಾಡಿಗೆ ಬರುವ ರೀತಿ ಮಾಡಿಕೊಳ್ಳಬೇಕು ಎಂಬ ಧೋರಣೆ ಇರುವವರ ನಡುವೆ ಸಾಹೇಬರು ಮಾತ್ರ ಈ ಬಾಡಿಗೆ ಜಗತ್ತಿನಲ್ಲಿ ಒಬ್ಬ ಲೋಕ ಸಂಚಾರಿಯಂತೆ ಹೋದಲೆಲ್ಲಾ ಅಳಿಸಲಾಗದ ಆದರ್ಶ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.

ಅಜಾನುಬಾಹು ಸ್ಪುರದ್ರೂಪಿಯಾಗಿದ್ದ ಮಧುಕರ್ ಶೆಟ್ಟಿ ರವರು ವಿದ್ಯಾರ್ಥಿ ದೆಸೆಯಿಂದಲೂ ನಿತ್ಯ ಒಂದೆ ನಿಶ್ಚಿತ ಶಿಸ್ತಿನ ದಿನಚರಿ,ಮುಂಜಾನೆ ಏಳುವ ಅಭ್ಯಾಸ ತಮ್ಮ ದೇಹತೂಕ ಎಂದು ಕೂಡ ಹೆಚ್ಚಾಗದಂತೆ ಕಾಯ್ದುಕೊಳ್ಳಲು ತಪ್ಪದೆ ನಿತ್ಯ ಕಸರತ್ತು ಮಾಡುತಿದ್ದರಂತೆ,ಹಾಗೆಯೇ ಜೀವನಸಂತೆಯಲ್ಲಿ ಜೀವನ ಭಾರದ ಮೂಟೆಯೂ ಹೆಚ್ಚಾಗದಂತೆ ನೋಡಿಕೊಂಡಿದ್ದಾರೆ.

ದೇಹವನ್ನು ಹೇಗೋ ಸದೃಢ ಇಟ್ಟುಕೊಳ್ಳಬಹುದು ಆದರೆ ಆಕರ್ಷಣೆ ಲಾಭಿಯ ಜಗತ್ತಿನಲ್ಲಿ ಮಾನಸಿಕ ನಿಯಂತ್ರಣ ಬದ್ಧತೆ ದೃಢತೆ ಹೊಂದುವುದು ಒಂದು ಯಜ್ಞವೇ ಸರಿ!

ತನ್ನ ದೊಡ್ಡ ಹುದ್ದೆಯ ಜೊತೆಗೆ ತನ್ನ ಇತಿಮಿತಿ ಅರಿತುಕೊಂಡು ತಮ್ಮ ಸರಳ ಬದುಕಿನಲ್ಲಿ ಸಂತೃಪ್ತರಾಗಿದ್ದರು.

ಆಸೆ ಅಮೀಷ ಆಕರ್ಷಣೆ  ಲಾಭಿಗೆ ಮಾರುಹೋಗಿ ಜೀವನವನ್ನು ಇಕ್ಕಟ್ಟು ಬಿಕ್ಕಟು ಕಗ್ಗಂಟು ಮಾಡಿಕೊಳ್ಳುತ್ತಿರುವ ಕಾಲಘಟ್ಟಕ್ಕೆ ಮಧುಕರ್ ಶೆಟ್ಟಿ ರವರ ತತ್ವ ಸಿದ್ಧಾಂತ ಆದರ್ಶ ಜೀವನ ಶೈಲಿ ಕ್ರಮ ವಿಚಾರಧಾರೆಯಲ್ಲಿ ಸಂತೃಪ್ತಿ ಕಂಡುಕೊಳ್ಳುವ ಅಧ್ಭುತ ಜೀವನ ಸಂದೇಶವಿದೆ,ಹಿಂಬಾಲಿಸಿ ಹೋದಂತೆ ದಾರ್ಶನಿಕತೆ ಕಾಣ ಸಿಗುತ್ತದೆ.

ಆದರ್ಶಗಳ ಜೀವನ ಸಪ್ಪೆ ರುಚಿಸದು ಆದರೆ ಮಾನಸಿಕ ಸಂತೃಪ್ತಿ ನೀಡುತ್ತೆ ಜೊತೆಗೆ ಸಮಾಜಕ್ಕೆ ಒಳ್ಳೆಯದು,ಹೇಗೆಂದರೆ ಉಪ್ಪು ಖಾರ ಹುಳಿ ಕಡಿಮೆ ಇರುವ ಆಹಾರವೂ ಕೂಡ ಸಪ್ಪೆ ಬಾಯಿಗೆ ರುಚಿಸದು ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲವೇ?

ಒಂದು ಮಾತು,ಮಧುಕರ್ ಶೆಟ್ಟಿ ಅವರು ಬರೇ ಉನ್ನತ ವ್ಯಕ್ತಿ ಅಧಿಕಾರಿಯಾಗಿದ್ದ ಮಾತ್ರಕ್ಕೆ ಇಷ್ಟೆಲ್ಲ ಬರಿಯಬೇಕೆಂದಿಲ್ಲ ಅದೊಂದು ಉನ್ನತ ವಿಚಾರಧಾರೆಯ ಅಸಾಮಾನ್ಯ ವ್ಯಕ್ತಿತ್ವ ಅದಕ್ಕಾಗಿ ಈ ಅಗೆದು ಬಗೆಯುವ ಕೃಷಿ ಕಾರ್ಯ!

#udupi #madhukarshetty #ips #KarnatakaPolice #karnataka #kundapura

*ಹನ್ನೆರಡು ನಿಯಮಗಳು*

*ಹನ್ನೆರಡು  ನಿಯಮಗಳು* 

1. *ಜಗದ ನಿಯಮ*

ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಬರುತ್ತದೆ. ನಾವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ.

2. *ಸೃಷ್ಟಿಯ ನಿಯಮ*

ಜಗತ್ತಿನಲ್ಲಿ ತಾನಾಗಿ ತಾನೇ ಯಶಸ್ಸು ಸಿಗುವುದಿಲ್ಲ ಅಥವಾ ಬರುವುದಿಲ್ಲ, ಪ್ರತಿಯೊಂದು ಯಶಸ್ಸು ನಮ್ಮ ಪರಿಶ್ರಮದಿಂದಲೇ ಸಿಗುವುದು.

3. *ನಮ್ರತೆಯ ನಿಯಮ*

ಮೊದಲು ನಾವು ನಮ್ಮ ತಪ್ಪನ್ನು ತಿದ್ದಿಕೊಂಡರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ.

4. *ಅಭಿವೃದ್ಧಿಯ ನಿಯಮ*

ನಮ್ಮನ್ನು ನಾವು ಬದಲಾಯಿಸಿಕೊಂಡರೆ ಮಾತ್ರ ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಸಾಗುತ್ತದೆ. ಶ್ರಮ ಪಟ್ಟು ಕೆಲಸ ಮಾಡಬೇಕು, ಸೋಮಾರಿಗಳಾಗಬಾರದು.

5. *ಜವಾಬ್ದಾರಿಯ ನಿಯಮ*

ನಮ್ಮ ಜೀವನಕ್ಕೆ ನಾವೇ ಹೊಣೆ, ಬೇರೆಯವರನ್ನು ದೂಷಿಸುವುದು ಸರಿಯಲ್ಲ.

6. *ಸಂಪರ್ಕ ನಿಯಮ*

ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಸದಾ ಸಂಪರ್ಕದಲ್ಲಿರುತ್ತದೆ. ನಮ್ಮ ನಿನ್ನೆಯ ಕರ್ಮಗಳು ಇಂದು, ಮತ್ತು ಇಂದಿನ ಕರ್ಮಗಳು ನಾಳೆ ಅನುಭವಿಸುತ್ತಿರುತ್ತೇವೆ.

7. *ಗಮನದ ನಿಯಮ*

ನಾವು ಎರಡೆರೆಡು ಕೆಲಸಗಳ ಮೇಲೆ ಗಮನ ವಹಿಸುವುದು ವ್ಯರ್ಥ. ಮಾಡುವ ಒಂದು ಕೆಲಸ ಅಥವಾ ಕಾರ್ಯದಲ್ಲಿ ಗಮನವಿರಲಿ.

8. *ಅತಿಥ್ಯದ ನಿಯಮ*

ನಮ್ಮ ನೆಡವಳಿಕೆ, ನಮ್ಮ ಆಚಾರ, ವಿಚಾರ ಹಾಗೂ ಚಿಂತನೆಗೆ ಕನ್ನಡಿ ಇದ್ದಂತೆ.

9. *ಇಂದು ಮತ್ತು ಈಗಿನ ನಿಯಮ*

ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು ಭೂತ -ಭವಿಷ್ಯದ ಬಗ್ಗೆ ಅಲ್ಲ.

10. *ಪರಿವರ್ತನೆಯ ನಿಯಮ*

ಹಿಂದಿನ ಕರ್ಮಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ನಾವು ಪರಿವರ್ತನೆಯಾಗಲು ಪ್ರಯತ್ನಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.

11. *ತಾಳ್ಮೆಯ ನಿಯಮ*

ತಾಳ್ಮೆ, ಸಹನೆ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಇವು ಜೀವನದಲ್ಲಿ ಬಹಳ ಮುಖ್ಯ.

12. *ಯಶಸ್ಸಿನ ನಿಯಮ*

ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿ ಕಾಣುತ್ತದೆ. ನಾವು ಜೀವನದಲ್ಲಿ ಯಶಸ್ಸನ್ನು ಒಮ್ಮೆ ಗಳಿಸಲು ಪ್ರಾರಂಭಿಸಿದರೆ ನಮ್ಮ ಪರಿಶ್ರಮ ಲೆಕ್ಕಕ್ಕೆ ಬರುವುದಿಲ್ಲ. ಆ ಯಶಸ್ಸಿನ ಖುಷಿಯ ಮುಂದೆ ಎಲ್ಲಾ ಪರಿಶ್ರಮವೂ, ಅದರ ನೋವು, ನಾವು ಪಟ್ಟ ಕಷ್ಟ ಎಲ್ಲವೂ ಮರೆತು ಹೋಗುತ್ತದೆ.

🙏ಶ್ರೀ ಕೃಷ್ಣಾರ್ಪಣ ಮಸ್ತು 🙏

Monday, September 4, 2023

ಭಾರತೀಯರು ಸ್ವಭಾವತಃ ದೇವರನ್ನು ನಂಬುವ ಜನರು, ಇದಕ್ಕೆ ವಿಜ್ಞಾನಿಗಳೂ ಹೊರತಲ್ಲ.

ಭಾರತೀಯರು ಸ್ವಭಾವತಃ ದೇವರನ್ನು ನಂಬುವ ಜನರು, ಇದಕ್ಕೆ ವಿಜ್ಞಾನಿಗಳೂ ಹೊರತಲ್ಲ. ಅವರು ವಿಜ್ಞಾನವು ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಯ ವಿರುದ್ಧವಾಗಿದೆ ಎಂದು ನಂಬುವುದಿಲ್ಲ. ನಮ್ಮ ವಿಜ್ಞಾನಿಗಳ ನೀತಿಯು ವಿಶಾಲವಾಗಿದೆ - ಅವರು ತಮ್ಮ ನಂಬಿಕೆಗೆ ಬೇರೂರಿರುವುದರ ಜೊತೆ ಜೊತೆಗೆ ಹೊಸ ಹೊಸ ಆಲೋಚನೆಗಳು, ಜ್ಞಾನ ಮತ್ತು ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಾರೆ. ನಮ್ಮ ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ, ವಿಜ್ಞಾನ ಮತ್ತು ದೇವರ ನಡುವೆ ಯಾವುದೇ ಮೂಲಭೂತ ವ್ಯತ್ಯಾಸವಿಲ್ಲ, ಎಂದು ಹಾಗೂ ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು. 

ಪ್ರಪಂಚದ ಬಹುಪಾಲು ವಿಜ್ಞಾನಿಗಳು ದೇವರ ಅಸ್ತಿತ್ವ ಅಥವಾ ಈ ವಿಶ್ವದ ಹಿಂದಿರುವ, ಇದರ ಅಸ್ತಿತ್ವಕ್ಕೆ ಕಾರಣೀಭೂತವಾದ ಯಾವುದೋ ಒಂದು ದಿವ್ಯಶಕ್ತಿಯೊಂದು ಇರಲೇಬೇಕು ಮತ್ತು ಅದು ಇದ್ದೇ ಇದೆ ನಂಬುತ್ತಾರೆ. ಹಾಗೆಯೇ ಬಹುಪಾಲು ಭಾರತೀಯ ವಿಜ್ಞಾನಿಗಳು ತಾವು ಆಧ್ಯಾತ್ಮಿಕರು ಎಂದು ಭಾವಿಸುತ್ತಾರೆ. ಧರ್ಮ, ಆಧ್ಯಾತ್ಮ ಅಥವಾ ದೇವರ ಮೇಲಿನ ನಂಬಿಕೆಯು ಸನಾತನ ಭಾರತೀಯ ಮೌಲ್ಯ ವ್ಯವಸ್ಥೆಯ ಭಾಗವಾಗಿದೆ. ಇದು ನಮ್ಮ ಕೌಟುಂಬಿಕ ಮೌಲ್ಯ ಮತ್ತು ಸಾಮಾಜಿಕ ಜನಜೀವನದಲ್ಲಿ ಅತ್ಯಗತ್ಯವಾದ ಒಂದು ಭಾಗವಾಗಿದೆ.
ವಂದನೆಗಳೊಂದಿಗೆ
ನಂಜುಂಡಸ್ವಾಮಿ.
🙏🙏🙏🙏🙏

Sunday, September 3, 2023

*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ.

*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*

 *ಬಾಲ ಗಣಪತಿ*

    ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
    
    *ತರುಣ ಗಣಪತಿ*

    ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
    
    *ಭಕ್ತಿ ಗಣಪತಿ*

    ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.
    
    *ವೀರ ಗಣಪತಿ*

    ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
    
    *ಶಕ್ತಿ ಗಣಪತಿ*

    ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
    
    *ದ್ವಿಜ ಗಣಪತಿ*

    "ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
   
   *ಸಿದ್ಧಿ ಗಣಪತಿ*

    ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
  
    *ಉಚ್ಚಿಷ್ಟ ಗಣಪತಿ*

    ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
    
    *ವಿಘ್ನ ಗಣಪತಿ*

    ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.
    
    *ಕ್ಷಿಪ್ರ ಗಣಪತಿ*

    ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
   
    *ಹೇರಂಬ ಗಣಪತಿ*

    ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.
    
    *ಲಕ್ಷ್ಮೀ ಗಣಪತಿ*

    ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
   
    *ಮಹಾ ಗಣಪತಿ*

    "ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
    
    *ವಿಜಯ ಗಣಪತಿ*

    ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.
    
    *ನೃತ್ಯ ಗಣಪತಿ*

    ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?
    
    *ಊರ್ಧ್ವ ಗಣಪತಿ*

    ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
    
    *ಏಕಾಕ್ಷರ ಗಣಪತಿ*

    "ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
    
    *ವರದ ಗಣಪತಿ*

    ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
    
    *ತ್ರಯಾಕ್ಷರ ಗಣಪತಿ*

    ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
    
    *ಕ್ಷಿಪ್ರ ಪ್ರಸಾದ ಗಣಪತಿ*

    ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
    
    *ಹರಿದ್ರ ಗಣಪತಿ*

    ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
    
    *ಏಕದಂತ ಗಣಪತಿ*

    ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
    
    *ಸೃಷ್ಟಿ ಗಣಪತಿ*

    ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.
    
    *ಉದ್ಧಂಡ ಗಣಪತಿ*

    ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
    
    *ಋಣಮೋಚನ ಗಣಪತಿ*

    ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
    
    *ದುಂಧಿ ಗಣಪತಿ*

    ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
    
    *ದ್ವಿಮುಖ ಗಣಪತಿ*

    ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
    
    *ತ್ರಿಮುಖ ಗಣಪತಿ*

    ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
    
    *ಸಿಂಹ ಗಣಪತಿ*

    ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
    
    *ಯೋಗ ಗಣಪತಿ*

    ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
   
    *ದುರ್ಗಾ ಗಣಪತಿ*

    ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
   
    *ಸಂಕಷ್ಟ ಹರ ಗಣಪತಿ*

    ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.                         

💐 *ಸರ್ವೇ ಜನಃ ಸುಖಿನೋ ಭವಂತು* 💐

ಶ್ರೀ ಕೃಷ್ಣ ಮತ್ತು ಎಂಟರ ಸಂಖ್ಯೆಇದರ ಒಂದು ಕಿರು ಮಾಹಿತಿ.

ಶ್ರೀ ಕೃಷ್ಣ ಮತ್ತು ಎಂಟರ ಸಂಖ್ಯೆ
ಇದರ ಒಂದು ಕಿರು ಮಾಹಿತಿ

 ಮೊದಲನೆಯದಾಗಿ ಭಗವಾನ್ ಶ್ರೀಕೃಷ್ಣ ದೇವಕಿ ಹಾಗೂ ವಸುದೇವರ
8 ನೇ ಮಗನಾಗಿ ಭೂಮಿಯ ಮೇಲೆ ಜನ್ಮತಾಳಿದ.

 ಇನ್ನು ಭಗವಾನ್ ಕೃಷ್ಣನ ಜನನವಾಗಿದ್ದು 8ನೇ ಮನ್ವಂತರದ, ಅಷ್ಟಮಿಯ ದಿನವೇ ಎಂಬುದು ಕೂಡಾ ಸತ್ಯ.

 ಅದಕ್ಕೆ ಕೃಷ್ಣಾಷ್ಟಮಿ ಎಂದೇ ಆ ದಿನವನ್ನು ಸಂಭ್ರಮದಿಂದ ಆಚರಿಸಿ ಆನಂದಿಸುವರು ಭಕ್ತವೃಂದ.

ಎರಡನೆಯದಾಗಿ, ಶ್ರೀಕೃಷ್ಣ ಭಗವಾನನಿಗೆ ಅಷ್ಟ ಪತ್ನಿಯರು ಎಂಬುದು ಒಂದು ಪ್ರಮುಖ ವಿಷಯ

 ರುಕ್ಮಿಣಿ, ಜಾಂಭವತಿ, ಸತ್ಯಭಾಮೆ, ಮಿತ್ರವಿಂದ, ಲಕ್ಷ್ಮಣಾ, ಸತ್ಯ, ಭದ್ರ, ಕಾಳಿಂದಿ.

 ಈ ಎಂಟು ಜನ ಭಗವಂತನ ಕೃಷ್ಣ ಅವತಾರದಲ್ಲಿ ಆತನ ಅಷ್ಟಭಾರ್ಯೆಯರೇ ಎಂದು ಆರಾಧಿಸಲ್ಪಟ್ಟಿದ್ದಾರೆ. 

ಇನ್ನು ಶ್ರೀಕೃಷ್ಣ ಪರಮಾತ್ಮನ ಆಪ್ತ ಮಿತ್ರರ ಸಂಖ್ಯೆ ಕೂಡಾ ಎಂಟು,

 ಶ್ರೀಧಾಮ, ಸುಧಾಮ, ಸುಬಲ,ಸ್ತೋಕ ಕೃಷ್ಣ, ಅರ್ಜುನ, ವೃಷಬಂಧು,ಸುಭಗ್ , ಬಲಿ, ಪ್ರಾಣಭಾನು ಎಂಬವವರೇ ಆ ಅಷ್ಟ ಮಿತ್ರರು. 

ಈ ಹೆಸರುಗಳು ಆದಿ ಪುರಾಣದಲ್ಲಿ ನಮೂದಿತವಾಗಿವೆ. ಹೀಗೆ ಪತ್ನಿಯರು ಎಂಟು , ಆಪ್ತ ಮಿತ್ರರೂ ಎಂಟು ಭಗವಾನ್ ಶ್ರೀಕೃಷ್ಣ ಪರಮಾತ್ಮನಿಗೆ.

ಇನ್ನು ಪತ್ನಿಯರು ಹೊರತು ಪಡಿಸಿದರೆ, ಶ್ರೀಕೃಷ್ಣ ಪರಮಾತ್ಮನಿಗೆ ಇದ್ದ ಆಪ್ತ ಸಖಿಯರ ಸಂಖ್ಯೆ ಕೂಡಾ ಎಂಟು
ಎಂದರೆ ಆಶ್ಚರ್ಯವಾಗುತ್ತದೆ.

 ಚಂದ್ರಾವಳಿ, ಭದ್ರಾ, ಶ್ಯಾಮಾ, ಶೈವ್ಯಾ, ಪಗ್ಯಾ, ರಾಧಾ, ಲಲಿತಾ, ವಿಶಾಖಾ ಎಂಬುವವರೇ ಆ ಅಷ್ಟ ಸಖಿಯರು.

 ಆದರೆ ಈ ಹೆಸರುಗಳು ಕೆಲವೆಡೆ ಬೇರೆಯಾಗಿ ನಮೂದಿಸಲಾಗಿದ್ದರೂ, ಸಾಮ್ಯತೆಯಂತೂ ಇದ್ದೇ ಇದೆ. 

ಇನ್ನು ಕೃಷ್ಣನ ಹೆಸರಿನಿಂದ ಆತನ ಮಹಿಮೆಗಳಿಂದ ಪಾವನವೆನಿಸಿರುವ ಕೃಷ್ಣ ನಗರಗಳೆಂದೇ ಖ್ಯಾತಿ ಪಡೆದಿರುವ ಪವಿತ್ರ ಎಂಟು ಸ್ಥಳಗಳಿವೆ. 

ಮಥುರಾ, ಗೋಕುಲ, ನಂದಗಾಂವ್, ಬೃಂದಾವನ, ಗೋವರ್ಧನ, ಬರ್ಸಾನಾ, ಮಧುವನ ಹಾಗೂ ದ್ವಾರಿಕಾ. ಈ ಅಷ್ಟನಗರಗಳು ಶ್ರೀಕೃಷ್ಣ ನು ನಡೆದಾಡಿದ ಪಾವನ ಭೂಮಿ ಎನಿಸಿದ್ದವು. 

ಒಟ್ಟಾರೆ ಶ್ರೀಕೃಷ್ಣ ಹಾಗೂ ಅಷ್ಟ ಅಂದರೆ ಎಂಟು ಈ ಸಂಖ್ಯೆಗೆ ಇರುವ ಸಂಬಂಧ ನಿಜವಾಗಿಯೂ ರೋಚಕ ಹಾಗೂ ಅದ್ಭುತ.

ಕೃಷ್ಣಾರ್ಪಣಮಸ್ತು.

ಸರ್ವಜನ ಸುಖಿನೋಭವಂತು.

Wednesday, August 2, 2023

ಜೈಹಿಂದ್ ವಂದೇ ಮಾತರಂ ಜೈಜವಾನ್ ಭಾರತ್ ಮಾತಾಕೀ ಜೈ

🇮🇳 20 ಡಿಗ್ರಿಯಲ್ಲಿ ನಮಗೆ ಚಳಿ ಅನ್ನಿಸುತ್ತದೆ 

🇮🇳 16 ಡಿಗ್ರಿಯ  ಚಳಿಯಲ್ಲಿ  ನಮಗೆ ಬೆಚ್ಚಗಿನ ಉಡುಗೆ ಧರಿಸಬೇಕು ಅನ್ನಿಸುತ್ತದೆ 

🇮🇳 12  ಡಿಗ್ರಿಯ ಚಳಿಗೆ ಇನ್ನೂ ತಲೆಗೆ ಟೋಪಿ ಇತ್ಯಾದಿಯನ್ನು ಹಾಕಿಕೊಳ್ಳಬೇಕು 

🇮🇳 8  ಡಿಗ್ರಿ ಚಳಿಯ ನಂತರ ನಾವುಗಳು ನಡುಗಿ ಹೋಗುತ್ತೇವೆ 

🇮🇳 4/5  ಡಿಗ್ರಿ ಚಳಿಗೆ ಇನ್ನೂ ಅಡುಗೆ ಮನೆಯನ್ನು ಬಿಟ್ಟು ಹೊರಗೆ ಬರುವುದಿಲ್ಲ 

🇮🇳 1/2  ಡಿಗ್ರಿ ಚಳಿಗೆ ಮನೆಗಳಲ್ಲಿ ಬೆಂಕಿ ಕಾಯಿಸಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ 

🇮🇳 0  ಡಿಗ್ರಿಯ ಮೇಲೆ ನೀರು ಸುರಿಯಲು ಶುರುವಾಗುತ್ತದೆ 

🇮🇳 --1/2  ಡಿಗ್ರಿಯ ಚಳಿಗೆ ನಮ್ಮ ಬಾಯಿಂದ ಬರುವ ಮಾತುಗಳು ತೊದಲಲೂ ಶುರುವಾಗುತ್ತದೆ 

🇮🇳 --5/8  ಡಿಗ್ರಿ ಚಳಿಯ ಮೇಲೆ .......

🇮🇳 --10/12  ಡಿಗ್ರಿ ಚಳಿಯ ಮೇಲೆ ….....

🇮🇳 -- 15/18  ಡಿಗ್ರಿ ಚಳಿಯ ಮೇಲೆ ಸ್ವಲ್ಪ ಯೋಚಿಸಿ …...........

🇮🇳 -- 20  ಡಿಗ್ರಿಯ ಚಳಿಯ ಮೇಲೆ  ಸಿಯಾಚಿನ್ ನಲ್ಲಿ ನಮ್ಮ ದೇಶದ ವೀರ ಸೈನಿಕರು ನಮ್ಮ ದೇಶದ ಗಡಿಯನ್ನು ಕಾಯುತ್ತಾರೆ ರಕ್ಷಣೆ ಮಾಡುತ್ತಾರೆ ...........

🇮🇳 ಸಂಪೂರ್ಣ ತನ್ನ ಶಕ್ತಿಯ ಜೊತೆಗೆ 
 7-12  ಕೆಜಿಯ ಬಂದುಕು ಮತ್ತು 
 ಹತ್ತಿರ ಹತ್ತಿರ  20  ಕೆಜಿಯ ಸರಕುಗಳನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡು ಮೊಳಕಾಲಿನವರೆಗೂ ಇರುವ ಹಿಮದ ಗಡ್ಡೆಯಲ್ಲಿ ನಡೆಯುತ್ತಾರೆ
 

🇮🇳 ಏಕೆಂದರೆ  ನಾವೆಲ್ಲರೂ ನಮ್ಮ 
     ಸ್ವಾತಂತ್ರ್ಯದ  ಆನಂದವನ್ನು 
  ಅನುಭವಿಸಲಿ ಅಂತ ………........
…………….........…!!!!!!!!

🇮🇳 ಏಕೆಂದರೆ   ನಾವೆಲ್ಲರೂ ನಮ್ಮ ಕುಟುಂಬದ ಜೊತೆಗೆ ಕ್ರಿಕೆಟ್ ಪಂದ್ಯದ ಆನಂದವನ್ನು ನೋಡಲು 
…….......
........................... .!!!!!!!!!

🇮🇳 ಏಕೆಂದರೆ ನಮ್ಮ ಮಕ್ಕಳು ಶಾಂತಿಯ ಜೊತೆಗೆ ಶಾಲೆಗೆ ಹೋಗಲಿ ಅಂತ   …..

🇮🇳  ದಯವಿಟ್ಟು ಅವಶ್ಯಕವಾಗಿ ಇಂತಹ ಒಂದು  ಸಂದೇಶವನ್ನು  ನಮ್ಮ ಭಾರತೀಯ ವೀರ ಸೈನಿಕರಿಗಾಗಿ ಶೇರ್ ಮಾಡಿ 

🇮🇳 ಈ ದಿನ ಚಲನಚಿತ್ರ ನಟರು ಕ್ರಿಕೆಟಿಗರಿಗೆ ಕೊಡುವಂತಹ ಒಂದು  ಅಭಿಮಾನ ಪ್ರೀತಿ ನಮ್ಮ ದೇಶದ ಸೈನಿಕರಿಗೆ ಕೊಡಿ 
_______________________
🇮🇳 ದಯವಿಟ್ಟು ಭಾರತೀಯರು ಆಗಿ … I             _______________________

🇮🇳  ನಮ್ಮ ದೇಶವನ್ನು ಪ್ರೀತಿಸಿ 
_______________________
🇮🇳  ಈ ಒಂದು ಸಂದೇಶವನ್ನು ಆ ಒಂದು ಸೈನಿಕರ ಹೆಸರು ಏನೂ ಅಂತ ಸಹ ನಮಗೆ ಗೊತ್ತಿಲ್ಲ ಆದರೆ ಹಗಲು ರಾತ್ರಿ ನಮಗಾಗಿ ತನ್ನ ಪ್ರಾಣವನ್ನು ಒತ್ತೆ �ಇಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ  
  
ಜೈಹಿಂದ್ ವಂದೇ ಮಾತರಂ ಜೈಜವಾನ್ 
ಭಾರತ್ ಮಾತಾಕೀ ಜೈ 

________________

Friday, June 9, 2023

ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= ಸಮಯ.

ಉಪಯುಕ್ತ ಮಾಹಿತಿ
॰॰॰॰॰॰॰॰॰॰॰॰॰॰॰॰॰॰॰

1. ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = ಸಚ್ಚಾರಿತ್ರ್ಯ
2. ಎಲ್ಲ ದುರ್ದೈವಕ್ಕೆ ಕಾರಣ = ಆಲಸ್ಯ
3. ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ = ಭೀತಿ.
4. ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= ಸಮಯ.
5. ಸಾವಿರ ಯಜ್ಞಗಳಿಗಿಂತ  ಶ್ರೇಷ್ಠ ಕರ್ಮ = ಪರೋಪಕಾರ.
6. ಅತ್ಯಂತ ಶ್ರೇಷ್ಠ  ಸ್ವಭಾವ = ತಾಳ್ಮೆ .
7. ಅತ್ಯಂತ ಕೆಟ್ಟ ಗುಣ = ಪರನಿಂದೆ.
8. ಬಹುತೇಕ ಎಲ್ಲಾ ರೋಗಗಳಿಗೆ ಮುಖ್ಯ ಕಾರಣ = ಅಜೀರ್ಣ
9. ಚಟಗಳಲ್ಲಿ ಅತೀ ಕೆಟ್ಟ ಚಟ = ಚಾಡಿ ಹೇಳುವುದು.
10. ಬಂಧುಗಳಲ್ಲಿ ಶ್ರೇಷ್ಠ ಬಂಧು = ವಿಶ್ವಾಸ .
11. ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = ಅಹಂಕಾರ .
12. ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = ಆತ್ಮ ವಿಶ್ವಾಸ .
13. ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ = ಆಧ್ಯಾತ್ಮಿಕ ಶಿಕ್ಷಣ .
14. ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = ಸಾಲಬಾಧೆ.
15. ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = ಹೊಗಳಿಸಿಕೊಳ್ಳುವುದು.
16. ಬದುಕಿನಲ್ಲಿಯೇ ಅತೀ ಹೀನಬದುಕು = ಹಂಗಿನ ಬದುಕು.
17. ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = ವಿಶ್ವಾಸ .
18. ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು  ಕತ್ತಲಾಗಿರುವುದು = ಅಜ್ಞಾನ.
19. ಜಗತ್ತಿನ ಎಲ್ಲಾ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = ಸಜ್ಜನರ ನಿಷ್ಕ್ರಿಯತೆ .
20. ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = ನಾಲಿಗೆ.
21. ವರಗಳಲ್ಲಿ ಅತೀ ದೊಡ್ಡ ವರ = ಆರೋಗ್ಯ .
22. ದೊಡ್ಡ ಶ್ರೀಮಂತಿಕೆ =  ಸಂತೃಪ್ತಿ.
23. ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = ಮೌನ.

Sunday, June 4, 2023

*ಅಂಗಡಿಯಲ್ಲಿ ದೇವರು ಸಿಗಬಹುದೇ?*

*ಅಂಗಡಿಯಲ್ಲಿ ದೇವರು ಸಿಗಬಹುದೇ?*

     *ಐದು ವರ್ಷದ ಹುಡುಗನೊಬ್ಬ ಕೈಯಲ್ಲಿ ಒಂದು  ರೂಪಾಯಿ ಹಿಡಿದುಕೊಂಡು ಕಿರಾಣಿ ಅಂಗಡಿಗೆ ಹೋಗಿ ನಿಂತ.*
*ಅಂಗಡಿಯವನು  ಹುಡುಗನನ್ನು ಕೇಳಿದ  "ಮಗು ನಿನಗೆ ಏನು ಬೇಕು?" ಹುಡುಗ ಅಂಗಡಿಯವನನ್ನು "ನಿಮ್ಮ ಅಂಗಡಿಯಲ್ಲಿ ದೇವರು ಸಿಗಬಹುದೇ?"*
     *ಇದನ್ನು ಕೇಳಿದ ಅಂಗಡಿಯವನು ಕೋಪಗೊಂಡು ಹುಡುಗನನ್ನು ಜೋರಾಗಿ ಕೂಗಿ ಬೈದು, ಆ ಹುಡುಗನನ್ನು ಅಂಗಡಿಯಿಂದ ಹೊರಗೆ ಓಡಿಸಿದನು.*
    *ಹುಡುಗ ಹೀಗೇ ಸುಮಾರು 30-40 ಅಂಗಡಿಗಳನ್ನು ಸುತ್ತಿ ತುಂಬಾ ಪ್ರಯತ್ನ ಮಾಡಿದನು.*

    *ಪ್ರತಿ ಅಂಗಡಿಗೆ ಹೋಗಿ, "ನಿಮ್ಮ ಅಂಗಡಿಯಲ್ಲಿ ದೇವರು ಸಿಗಬಹುದೇ?" ಎಂದು ಕೇಳುತ್ತಿದ್ದ.*
*ಒಂದು ಅಂಗಡಿಯಲ್ಲಿ ಒಬ್ಬ ತುಂಬಾ ವಯಸ್ಸಾದ ಅಜ್ಜ ಕೂತಿದ್ದ, ಅವನನ್ನು ನೋಡಿ ಈ ಪುಟ್ಟ ಹುಡುಗ ಕೇಳಿದ, "ಅಜ್ಜಾ , ನಿನ್ನ ಅಂಗಡಿಯಲ್ಲಿ ದೇವರು ಸಿಗುತ್ತಾನೆಯೇ ?".*
*"ನಿನ್ನ ಬಳಿ ಎಷ್ಟು ಹಣವಿದೆ" ಎಂದು ಆ ಅಜ್ಜ ಮಗುವನ್ನು ಕೇಳಿದರು. "ನನ್ನ ಬಳಿ ಒಂದು ರೂಪಾಯಿ ಇದೆ" ಎಂದು ಹುಡುಗ  ಹೇಳಿದ. ಮಗುವನ್ನು ಹತ್ತಿರಕ್ಕೆ ಕರೆದು ಕೇಳಿದರು, "ದೇವರು ನಿನಗೆ ಏಕೆ ಬೇಕು ಮಗು? ದೇವರನ್ನು ಖರೀದಿಸಿ ಏನು ಮಾಡುತ್ತೀ?"*

*ಪ್ರಶ್ನೆ ಕೇಳಿದ ನಂತರ ಮಗುವಿಗೆ ತುಂಬಾ ಸಂತೋಷವಾಯಿತು. ಈ ರೀತಿಯಲ್ಲಿ ಕೇಳುತ್ತಿದ್ದಾರೆಂದರೆ, ಈ ಅಜ್ಜನವರ ಅಂಗಡಿಯಲ್ಲಿ ಖಂಡಿತವಾಗಿಯೂ ದೇವರು ಇದ್ದಾನೆ ಎಂದು ತಿಳಿದುಕೊಂಡು, ಆ ಅಜ್ಜನಿಗೆ ಹೇಳುತ್ತಾನೆ, "ನನ್ನ ತಾಯಿಯನ್ನು ಬಿಟ್ಟು ನನಗೆ ಈ ಜಗತ್ತಿನಲ್ಲಿ ಯಾರೂ ಇಲ್ಲ. ಪ್ರತಿದಿನ ನನ್ನ ತಾಯಿ ಕೆಲಸಕ್ಕೆ ಹೋಗುತ್ತಾರೆ ಮತ್ತು ನನಗೆ ಊಟ ತರುತ್ತಾರೆ. ಆದರೆ ನಿನ್ನೆಯಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಳೆ ನನ್ನ ತಾಯಿ ಸತ್ತರೆ ನನಗೆ ಯಾರು ಊಟ ಕೊಡುತ್ತಾರೆ? ದೇವರು ಮಾತ್ರ ನಿನ್ನ ತಾಯಿಯನ್ನು ರಕ್ಷಿಸಬಲ್ಲನು ಎಂದು ವೈದ್ಯರು ಹೇಳಿದರು.*
*ಆದ್ದರಿಂದ ನಾನು ದೇವರನ್ನು ಹುಡುಕುತ್ತಿದ್ದೇನೆ. ನಿಮ್ಮ ಅಂಗಡಿಗಳಲ್ಲಿ ದೇವರಿದ್ದಾನೆಯೇ?"*

*"ನಿನ್ನ ಬಳಿ ಎಷ್ಟು ಹಣವಿದೆ" ಎಂದು ಅಂಗಡಿಯವನು ಹುಡುಗನನ್ನು ಕೇಳಿದನು. "ಕೇವಲ ಒಂದು ರೂಪಾಯಿ ಅಜ್ಜಾ" ಎಂದ. "ಸರಿ, ಚಿಂತಿಸಬೇಡ.*
*ಒಂದು ರೂಪಾಯಿಯಲ್ಲೂ ದೇವರು ಸಂಧಿಸುತ್ತಾನೆ" ! ಒಂದು ರೂಪಾಯಿಯನ್ನು ತೆಗೆದುಕೊಂಡು ಒಂದು ಲೋಟ  ನೀರನ್ನು ಹುಡುಗನ ಕೈಗೆ ಕೊಟ್ಟು ಈ ನೀರನ್ನು ತೆಗೆದುಕೊಂಡು ನಿನ್ನ ತಾಯಿಗೆ ಕುಡಿಯಲು ಕೊಡು" ಎಂದನು.*

*ಮರುದಿನ ತಜ್ಞ ವೈದ್ಯರು ಆಸ್ಪತ್ರೆಗೆ ಬಂದು ತಾಯಿಗೆ ಶಸ್ತ್ರಚಿಕಿತ್ಸೆ ಮಾಡಿದರು. ಕೆಲವೇ ದಿನಗಳಲ್ಲಿ ಅವಳು ಗುಣಮುಖಳಾದಳು.*

*ಡಿಸ್ಚಾರ್ಜ್ ಆದ ದಿನ ಆಸ್ಪತ್ರೆಯ ಬಿಲ್ ನೋಡಿದ ಮಹಿಳೆಗೆ ತಲೆ ಸುತ್ತು! ಆದರೆ ವೈದ್ಯರು ಧೈರ್ಯ ತುಂಬಿದರು. ಚಿಂತಿಸಬೇಡ ವಯಸ್ಸಾದ ವ್ಯಕ್ತಿಯೊಬ್ಬರು ಇಷ್ಟೆಲ್ಲ ಬಿಲ್ ಪಾವತಿಸಿ ಅದರ ಜೊತೆಗೆ ಒಂದು ಚೀಟಿ ಕೊಟ್ಟಿದ್ದಾರೆ.*
     *ಮಹಿಳೆ  ಪತ್ರವನ್ನು ತೆರೆದು ಓದಿದಾಗ, "ನನಗೆ ಧನ್ಯವಾದಗಳನ್ನು ಹೇಳಬೇಡಿ, ನಿಮ್ಮನ್ನು ರಕ್ಷಿಸಿದ್ದು ಭಗವಂತ. ನಾನು ಕೇವಲ ನಿಮಿತ್ತ ಮಾತ್ರ ಅಷ್ಟೇ. ನೀವು  ಧನ್ಯವಾದಗಳನ್ನು ಹೇಳಬೇಕೆಂದರೆ, ಒಂದು ರೂಪಾಯಿಯೊಂದಿಗೆ ದೇವರನ್ನು ಹುಡುಕುತ್ತಾ ತಿರುಗುತ್ತಿದ್ದ ನಿನ್ನ ಪುಟ್ಟ ಮುಗ್ಧ ಮಗುವಿಗೆ ಹೇಳಿ" ಎಂದಿತ್ತು.*
 
*ಇದನ್ನೇ ನಂಬಿಕೆ ಎಂದು ಕರೆಯುತ್ತಾರೆ...*
*ದೇವರನ್ನು ಕಾಣಲು ಕೋಟ್ಯಂತರ ರೂಪಾಯಿ ದಾನ ಮಾಡಬೇಕಿಲ್ಲ! ನಂಬಿಕೆ, ಒಳ್ಳೆಯ ಭಾವನೆ ಇದ್ದರೆ ಒಂದು ರೂಪಾಯಿಯಲ್ಲೂ ದೇವರನ್ನು ಕಾಣಬಹುದು.*

*ಮರಾಠಿಯಲ್ಲಿ ಓದಿದ್ದು📚📙*

*ಅರ್ಥ:*
*ಭಕ್ತಿ ಸರಳ ಮತ್ತು ನಿಷ್ಕಪಟವಾಗಿರಲಿ. ಕೇವಲ ಹೃದಯದಿಂದ ನಾಮವನ್ನು ಜಪಿಸುವುದರಿಂದ, ದೇವರು ಯಾವುದಾದರೂ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ.*
ವಂದನೆಗಳೊಂದಿಗೆ.

Wednesday, May 31, 2023

ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ:~

ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ:~

ಒಂದು ದಿನ ಕ್ಲಾಸ್ ನಲ್ಲಿ
ಪ್ರೊಫೆಸರ್ ಸಡನ್ ಆಗಿ
ಒಂದು ಪರೀಕ್ಷೆ ಮಾಡಲು
ತಯಾರಾದರು.

ಕ್ಲಾಸ್ ಅಲ್ಲಿ ಇದ್ದ ಎಲ್ಲ ವಿಧ್ಯಾರ್ಥಿಗಳು ಶಾಕ್!! ಆದರು.
ಹೆದರಲು ಶುರು ಮಾಡಿದರು.

ಪ್ರೊಫೆಸರ್ ಎಕ್ಜಾಮ್ ಪೇಪರ್ ಕೊಟ್ಟರು. ಎಲ್ಲರಿಗೂ ಕೊಟ್ಟ ನಂತರ ಕೊಟ್ಟ ಪೇಪರ್
ತಿರುಗಿಸಲು ಹೇಳಿದರು.

ಎಲ್ಲ ಮಕ್ಕಳು ತಿರುಗಿಸಿ ನೋಡಿದಾಗ ಅಲ್ಲಿ ಯಾವುದೇ ಪ್ರಶ್ನೆ 
ಇರಲಿಲ್ಲ

ಬದಲಾಗಿ ಬಿಳಿ ಕಾಗದದ ಮದ್ಯದಲ್ಲಿ ಸಣ್ಣ ಕಪ್ಪು ಚುಕ್ಕೆ ಇತ್ತು 

ಎಲ್ಲ ವಿಧ್ಯಾರ್ಥಿಗಳ ಮುಖದಲ್ಲಿ ಪ್ರಶ್ನೆಗಳು ಮೂಡಿದವು.❓❓ .

ಪ್ರೊಫೆಸರ್ ಅವರನ್ನು ನೋಡಿ
ಹೀಗೆ ಹೇಳಿದರು,
" ನೀವು ಆ ಪೇಪರ್ ಅಲ್ಲಿ ಏನನ್ನು ಕಾಣುತ್ತಿದ್ದಿರಿ ಅದರ ಬಗ್ಗೆ ಬರೆಯಿರಿ".📝

ವಿದ್ಯಾರ್ಥಿಗಳು ಏನು ಬರೆಯಬೇಕಂತ ತಿಳಿಯದೆ ಕನ್ಫ್ಯೂಸ್ ಆದರು.

ಆದರೆ ಕ್ಲಾಸ್ ಕೊನೆಯಲ್ಲಿ,
ಪ್ರೊಫೆಸರ್
ವಿಧ್ಯಾರ್ಥಿಗಳು ಬರೆದ ಪೇಪರ್ ಗಳನ್ನು ತೆಗೆದು
ಓದಲು ಶುರು ಮಾಡಿದರು.

ಎಲ್ಲ ವಿಧ್ಯಾರ್ಥಿಗಳು ಆ ಬಿಳಿ ಕಾಗದದ ಮಧ್ಯ ಇರೋ ಆ ಕಪ್ಪು ಚುಕ್ಕೆ ಬಗ್ಗೆ ಬರೆದಿದ್ದರು.
ಎಲ್ಲರೂ ಆ ಕಪ್ಪು ಚುಕ್ಕೆ ಬಗ್ಗೆನೇ ಏನೇನೊ ಬರೆದು ವಿವರಿಸಿದ್ದರು. ಪ್ರೊಫೆಸರ್ ಎಲ್ಲರ ಉತ್ತರವನ್ನು ಓದಿ ಮುಗಿಸಿದರು . ಕ್ಲಾಸ್
ಸೈಲೆಂಟ್ ಆಗಿತ್ತು .

ಪ್ರೊಫೆಸರ್ ಮಾತನಾಡಲು
ಶುರು ಮಾಡಿದರು.
"ನಾನು ನೀವು ಬರೆದ ಉತ್ತರವನ್ನು ನೋಡಿ ಯಾವುದೇ ಗ್ರೇಡ್ ಕೊಡಲು ಹೋಗೋದಿಲ್ಲ. ನಾನು ನಿಮಗೆ ಯೋಚಿಸಲು ಬಿಡುತ್ತೇನೆ. ನೀವೆಲ್ಲರೂ ಆ ಬಿಳಿ ಕಾಗದದ ಮೇಲಿರೋ ಕಪ್ಪು ಚುಕ್ಕೆ ಬಗ್ಗೆ ಮಾತ್ರ ಬರೆದಿದ್ದೀರಿ.
ಯಾಕೆ ಆ ಕಪ್ಪು ಚುಕ್ಕೆ ಬಿಟ್ಟು ಬಿಳಿ ಭಾಗದ ಬಗ್ಗೆ ಬರೆಯಲಿಲ್ಲ?

ನೀವೆಲ್ಲರೂ ನಿಮ್ಮ ಮನಸನ್ನು ಆ ಕಪ್ಪು ಚುಕ್ಕೆ ಕಡೆಗೆ ಗಮನಹರಿಸಿದ್ದಿರಿ ಆದ್ದರಿಂದ
ನಿಮಗೆ ಬಿಳಿ ಭಾಗ ಕಾಣಲೇ ಇಲ್ಲ. 

ಇದೆ ತರಹ ನಮ್ಮ
ಜೀವನದಲ್ಲೂ ನಡೆಯುತ್ತದೆ.
ನಮ್ಮಲ್ಲಿ ಬಿಳಿ ಕಾಗದದ ಭಾಗವನ್ನು ನೋಡಿ ಖುಷಿಪಡಲು ಅವಕಾಶ ಇದ್ದರೂ ನಾವು ನಮ್ಮ ಗಮನವನ್ನು ನಮ್ಮ ಜೀವನ ಅನ್ನೋ ಬಿಳಿ ಕಾಗದದ ನಡುವೆ ಇರೋ ಒಂದು ಕಪ್ಪು ಚುಕ್ಕೆ ಬಗ್ಗೆನೇ ಹೆಚ್ಚು ಗಮನ ಕೊಡುತ್ತೇವೆ.
ನಮ್ಮ ಜೀವನ ಅನ್ನೋದು ದೇವರ ಉಡುಗೊರೆ, ಪ್ರೀತಿ ಮತ್ತು ಕಾಳಜಿ ಜೊತೆಗೆ ಯಾವಾಗಲೂ ಸಂಬ್ರಮಿಸಲು ಅವಕಾಶ ಇದೆ.

ನಿಸರ್ಗ ದಿನದಿಂದ ದಿನಕ್ಕೆ ಬದಲಾಗುತ್ತೆ, ಸ್ನೇಹಿತರ ಜೊತೆ,
ಕೆಲಸದ ಜೊತೆ,
ಕುಟುಂಬದ ಜೊತೆ
ಸಂತೋಷದಿಂದ ಇರಬಹುದು.

ಆದರೆ ನಾವು ಬರಿ ನಮ್ಮ ಜೀವನದಲ್ಲಿ ಇರೋ ಕೊರತೆ ಬಗ್ಗೆ ತಲೆಕೆಡಿಸಿ ಕೊಳ್ಳುತೇವೆ,
ಇರೋದರ ಬಗ್ಗೆ ಯೋಚಿಸೋದನ್ನೇ ಮರೆಯುತ್ತೇವೆ. 

ಕೆಲವರು ಆರೋಗ್ಯದ ಬಗ್ಗೆ,
ಕೆಲವರು ಹಣದ ಬಗ್ಗೆ,
ಸಂಭಂದಗಳ ಬಗ್ಗೆ,
ಸ್ನೇಹಿತರ ಬಗ್ಗೆ ನಿರಾಶೆ

ಮುಂತಾದವುಗಳ ಬಗ್ಗೆನೇ ತಲೆ
ಕೆಡಿಸಿಕೊಳ್ಳುತ್ತೇವೆ. 
ಆದರೆ ಕಪ್ಪು ಚುಕ್ಕೆ ಅನ್ನೋದು
ಒಂದು ಸಣ್ಣ ಭಾಗ
ನಮ್ಮ
ಜೀವನದಲ್ಲಿ ಇರೋದೆಲ್ಲದರ ಮಧ್ಯದ್ದು . 
ಆದರೆ ಆ ಸಣ್ಣ ನಕಾರತ್ಮಕತೆ ನಮ್ಮ ತಲೆಯನ್ನು
ಹಾಳುಮಾಡುತ್ತದೆ.

ನಿಮ್ಮ ಕಣ್ಣನ್ನು ಆ ನೆಗೆಟಿವ್ ಅನ್ನೋ ಕಪ್ಪು ಚುಕ್ಕೆ ಇಂದ ತೆಗೆದುಬಿಡಿ. ನಿಮ್ಮಲಿರುವುದರ ಬಗ್ಗೆ ಯೋಚಿಸಿ
ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಿರಿ,
ಜೀವನದಲ್ಲಿ ಸಿಗೋ ಎಲ್ಲವನ್ನು
ಸಕಾರಾತ್ಮಕವಾಗಿ ಸ್ವೀಕರಿಸಿ.!!

ಸವೇ೯ ಜನ ಸುಖಿನೊಭವಂತು..

Wednesday, May 17, 2023

ಸಮಾಜದಲ್ಲಿ ಇನ್ನೂ ಒಳ್ಳೆಯ ತನವಿದೆ. ಮೊದಲು ನಾವು ನೋಡುವ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು

*ಒಂದು ನಿಜ ಜೀವನದ ಕಥೆ...🖋️*

ತಾಜಾ ಹಣ್ಣುಗಳನ್ನು ತೆಗೆದುಕೊಳ್ಳಲೆಂದು ತುಂಬಾ ಜನಸಂದಣಿ ಇರುವ ದಾರಿಯಲ್ಲಿ ಒಂದು ಅಂಗಡಿ ಕಾಣಿಸಿತು. ಅಂಗಡಿಯಲ್ಲಿ ತರತರವಾದ ಹಣ್ಣುಗಳು ಇವೆ, ಆದರೆ ಅಂಗಡಿಯ ಯಜಮಾನ ಮಾತ್ರ ಎಲ್ಲೂ ಕಾಣಲಿಲ್ಲ. ಹಣ್ಣುಗಳ ಬೆಲೆಯನ್ನು ಕಾಗದದ ಮೇಲೆ ಬರೆದು ಇಟ್ಟಿದ್ದಾರೆ. ಅಂಗಡಿಯ ಮಧ್ಯದಲ್ಲಿ ಒಂದು ಕಾಗದದ ಚೀಟಿ ನೇತಾಡುತ್ತಿತ್ತು .

ಅದು ನನ್ನನ್ನು ಆಕರ್ಷಿಸಿ ಕುತೂಹಲದಿಂದ ಅದರಲ್ಲಿ ಬರೆದಿರುವುದನ್ನು ಓದಿದೆ
"ನನ್ನ ತಾಯಿಯವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಸೇವೆ ಮಾಡಲು ನಾನು ಸದಾ ಅವರ ಬಳಿ ಇರಬೇಕಾಗಿದೆ. ಆದ್ದರಿಂದ ನೀವುಗಳು ನಿಮಗೆ ಬೇಕಾದ ಹಣ್ಣುಗಳನ್ನು ಪಡೆದು ಅದಕ್ಕೆ ಸರಿಯಾದ ದರವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಹಾಕಿ" ಎಂದು ಬರೆದಿತ್ತು .
ನನಗೆ ಆಶ್ಚರ್ಯವಾಯ್ತು.
 
ಈ ಕಾಲದಲ್ಲೂ ಇಂತಹ ಅಮಾಯಕರು ಇರುತ್ತಾರೆಯೇ ? ಯಾರಾದರೂ ಅವನ ಗಲ್ಲಾಪೆಟ್ಟಿಗೆಯನ್ನು ದೋಚಿದರೆ ? ಅವನ ಪರಿಸ್ಥಿತಿ ಏನು? ಅವನ  ಅಮಾಯಕತ್ವ ಕಂಡು ನಗು ಸುಳಿಯಿತು.

ಏನಾದರೂ ಆಗಲಿ ಇವನಿಗೆ ಈ ತರಹ ಮಾಡಬಾರದೆಂದು ತಿಳಿ ಹೇಳಬೇಕೆಂದು ನಿರ್ಣಯಿಸಿ ಸಾಯಂಕಾಲ ಅಂಗಡಿಗೆ ಬಂದು ಹಣವನ್ನು ತೆಗೆದುಕೊಳ್ಳಲು ಬರುತ್ತಾರಲ್ಲ ಆಗ ಅವನಿಗೆ ತಿಳಿ ಹೇಳಬೇಕೆಂದು  ಸಾಯಂಕಾಲ ಅವನ ಅಂಗಡಿಯ ಬಳಿ ಬರುತ್ತಾನೆ.

ಅಂಗಡಿಯ ಮಾಲೀಕ ಹಣವನ್ನು ತೆಗೆದುಕೊಂಡು ಅಂಗಡಿಯನ್ನು ಮುಚ್ಚಲು ಮುಂದಾಗುತಿರುತ್ತಾನೆ. ನನ್ನನ್ನು ನಾನು ಪರಿಚಯಿಸಿಕೊಂಡು 'ನೀನು ಎಂತಹ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವೆ ತಿಳಿಯಿತೆ ?'. 
ನಿನ್ನ ಗಲ್ಲಾ ಪೆಟ್ಟಿಗೆಯಲ್ಲಿನ ಹಣವನ್ನು ಯಾರಾದರೂ ಕಳ್ಳರು ದೋಚಿದರೆ ? ಹಣ್ಣುಗಳನ್ನು ಉಚಿತವಾಗಿ ತೆಗೆದುಕೊಂಡರೆ ??' ಎಂದು ಬುದ್ಧಿ ಹೇಳಲು ಹೋದರೆ...

ಆಗ ಅವನು 'ಅಯ್ಯಾ ನಾನು ಮೊದಲು ನಿಮ್ಮ ಹಾಗೆ ನಮ್ಮ ತಾಯಿಯನ್ನು ಕೇಳಿದೆ "ನಾನು ನಿನ್ನ ಸೇವೆಯಲ್ಲಿ ಇದ್ದಾಗ ಅಂಗಡಿಯ ಪರಿಸ್ಥಿತಿ ಏನು ಎಂದು.

ಅದಕ್ಕೆ ನಮ್ಮ ತಾಯಿ ನಾನು ಈಗ ಅವಸಾನದ ಸ್ಥಿತಿಯಲ್ಲಿ ಇದ್ದೇನೆ. ನಿನ್ನನ್ನು ನೋಡದೇ ಇರಲು ಆಗೋದಿಲ್ಲ, ನಾನು ದೇವರನ್ನು ಪ್ರಾರ್ಥಿಸುತ್ತೇನೆ. ನಾನು ಹೇಳಿದ ರೀತಿಯಲ್ಲಿ ಮಾಡು ಎಂದು ಹೇಳಿದಳು.

ಆ ದಿನದಿಂದ ನಾನು ಈ ರೀತಿ ಮಾಡುತ್ತಿದ್ದೇನೆ'. ಎಂದೂ ನಿನಗೆ  ನಷ್ಟವಾಗಿಲ್ಲವೆ ? ಎಂದು ಕೇಳಿದೆನು. ಅದಕ್ಕೆ ಅವನು ಗಲ್ಲಾ ಪೆಟ್ಟಿಗೆಯನ್ನು ತೆಗೆದು ತೋರಿಸುತ್ತಾನೆ. ಆಶ್ಚರ್ಯ!! ಅದರ ತುಂಬಾ ಹಣ. 

ಅಂಗಡಿಯ ಹಣ್ಣಿನ ಬೆಲೆಗಿಂತ ಹತ್ತರಷ್ಟು ಹಣ ಅದರಲ್ಲಿದೆ. ಅಂಗಡಿಯಲ್ಲಿ ತರತರವಾದ ವಸ್ತುಗಳನ್ನು ತೋರಿಸಿದನು. ಅದರಲ್ಲಿ ಸೀರೆಗಳು, ಸ್ವೆಟರುಗಳು.

ಆಗಲೇ ತಯಾರಿಸಿದ ಪಲಾವ್, ಅನೇಕ ತರಹದ ತಿಂಡಿ ತಿನಿಸುಗಳು ಇವೆ. ಅದರ ಮೇಲೆ ಈ ರೀತಿ ಬರೆದಿದೆ, "ತಾಯಿಯವರಿಗೆ ಇವುಗಳನ್ನು ನನ್ನ ಕಡೆಯಿಂದ ಕೊಡುವುದು".
"ಅಂಕಲ್, ತಾಯಿಯವರನ್ನು ನಮ್ಮ ಹಾಸ್ಪಿಟಲ್ ಗೆ ಕರೆದು ತನ್ನಿ, ನಾನು ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವೆನು" ಎಂದು ಬರೆದಿತ್ತು .
ಅವರ ವಿಸಿಟಿಂಗ್ ಕಾರ್ಡ್ ಇಟ್ಟಿದ್ದರು. ಇದನ್ನೆಲ್ಲಾ ನೋಡಿದ ನನಗೆ ಕಣ್ಣಲ್ಲಿ ನೀರಾಡಿತ್ತು . ಸಮಾಜವು ಸ್ವಾರ್ಥದಿಂದ ತುಂಬಿದೆ, ಒಳ್ಳೆಯತನ ಕಾಣುತ್ತಿಲ್ಲವೆಂದು ತಿಳಿದ ನಾನು, ಆಗ ನನ್ನ ಭಾವನೆಯಲ್ಲಾ ಹರಿದು ಚೂರಾಯಿತು.
ಸಮಾಜದಲ್ಲಿ ಇನ್ನೂ ಒಳ್ಳೆಯ ತನವಿದೆ. ಮೊದಲು ನಾವು ನೋಡುವ ದೃಷ್ಟಿಯನ್ನು  ಬದಲಾಯಿಸಿಕೊಳ್ಳಬೇಕು.

ತಾಯಿಯ ಸೇವೆ ಮಾಡುವುದರಿಂದ ಸಾಕ್ಷಾತ್ ದೇವರೇ ಅವನ ಅಂಗಡಿಯ ಕಾವಲುಗಾರನಾಗಿದ್ದಾನೆ.

ಎಷ್ಟೇ ಕೋಪಗೊಂಡರೂ ಮತ್ತೆ ನಮ್ಮ ಮೇಲೆ ಕೋಪಿಸಿಕೊಳ್ಳದೇ  ಇರುವವರು ಈ ಸೃಷ್ಟಿಯಲ್ಲಿ ತಾಯಿಯೊಬ್ಬರೇ. ತಾಯಿಗೆ ಮಾಡುವ ಸೇವೆ ಎಂದೂ ನಿರರ್ಥಕವಾಗದು.
ಮಾತೃ ದೇವೋಭವ.

🙏🏻🙏🏻🙏🏻🙏🏻🙏🏻🙏🏻

Tuesday, March 14, 2023

*ಬ್ರೇಕ್ ಇರುವುದು ಕಾರು ನಿಲ್ಲಿಸುವುದಕ್ಕಲ್ಲ!*

*ಬ್ರೇಕ್ ಇರುವುದು ಕಾರು ನಿಲ್ಲಿಸುವುದಕ್ಕಲ್ಲ!*

ಅದು ಪಿಯುಸಿಯ ಒಂದು ಕ್ಲಾಸ್. ಭೌತಶಾಸ್ತ್ರ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದರು: ನಮ್ಮ ಕಾರುಗಳಲ್ಲಿ ಬ್ರೇಕ್‍ಗಳು ಯಾಕಿರ್ತವೆ ಅಂತ ಹೇಳಿನೋಡೋಣ.

ಎಲ್ಲ ಮಕ್ಕಳಿಗೆ ವಿಚಿತ್ರ ಅನಿಸಿತು.. ಇದೆಂಥ ಪ್ರಶ್ನೆ ಅಂತ. ಒಬ್ಬ ವಿದ್ಯಾರ್ಥಿ ಕೂಡಲೇ ಎದ್ದು ನಿಂತು ಹೇಳಿದ: ಸರ್ ಬ್ರೇಕುಗಳಿರುವುದು  ಕಾರನ್ನು ನಿಲ್ಲಿಸಲು.

ಇನ್ನೊಬ್ಬ ಹೇಳಿದ: ಕಾರಿನ ವೇಗವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು.

ವಿನುತಾ ಹೇಳಿದಳು: ಅಪಘಾತ ಆಗುವುದನ್ನು ತಪ್ಪಿಸಲಿಕ್ಕೆ.. ಡಿಕ್ಕಿ ಹೊಡೆಯೋದು ತಪ್ಪುತ್ತದೆ.

ಹೀಗೆ ವಿದ್ಯಾರ್ಥಿಗಳು ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಎಲ್ಲರ ಉತ್ತರಗಳೂ ಬಹುತೇಕ ಒಂದೇ ರೀತಿ ಇದ್ದವು.

ಆಗ ಮಾಸ್ಟರ್ ತಾವೇ ಉತ್ತರ ನೀಡಲು ಮುಂದಾದರು.

`ನೀವೆಲ್ಲ ಸರಿಯಾದ ಉತ್ತರಗಳನ್ನೇ ನೀಡಿದ್ದೀರಿ. ನಿಮ್ಮ ಯೋಚನಾ  ಶಕ್ತಿ ನನಗೆ ಖುಷಿಯಾಯಿತು. ಆದರೆ, ಇದಕ್ಕಿಂತಲೂ ಮಿಗಿಲಾದ ದೊಡ್ಡ ಕಾರಣವೊಂದಿದೆ'-ಎಂದು ಹೇಳಿದಾಗ ವಿದ್ಯಾರ್ಥಿಗಳಿಗೆ ಅಚ್ಚರಿ. ಇನ್ನೇನಿರುತ್ತದೆ ಅಂತ.

ಬ್ರೇಕ್ ಇರುವುದು ಕಾರನ್ನು ಅತ್ಯಂತ ವೇಗವಾಗಿ ಓಡಿಸಲಿಕ್ಕೆ !

ಹೀಗೆಂದು ಮಾಸ್ಟರ್ ಹೇಳಿದಾಗ ವಿದ್ಯಾರ್ಥಿಗಳು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು. ಕ್ಲಾಸಿನಲ್ಲಿ ಒಂದು ಗಾಢ ಮೌನ. ಯಾಕೆಂದರೆ, ಯಾರು ಕೂಡಾ ಈ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ವೇಗವಾಗಿ ಹೋಗಲು ಬೇಕಿರುವುದು ಎಕ್ಸಿಲೇಟರ್ ಅಲ್ವಾ? ಬ್ರೇಕ್ ಹೇಗಾಗ್ತದೆ ಎಂಬ ಪ್ರಶ್ನೆ ಅವರೆಲ್ಲರನ್ನೂ ಕಾಡಿತು.

ಮಾಸ್ಟರ್ ತಾವೇ ಉತ್ತರಿಸಲು ಶುರು ಮಾಡಿದರು.

ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ಕಾರಿಗೆ ಬ್ರೇಕೇ ಇಲ್ಲ ಅಂತಿದ್ರೆ ನೀವು ಕಾರನ್ನು ಎಷ್ಟು ವೇಗವಾಗಿ ಓಡಿಸುತ್ತೀರಿ? ಬ್ರೇಕ್ ಫೇಲ್ ಆಗಿರೋ ಕಾರು ಕೊಡ್ತೇನೆ ಅಂತಿಟ್ಕೊಳ್ಳಿ.
ವೇಗ ಬಿಡಿ, ಒಂದು ಮೀಟರ್ ಮುಂದೆ ಕೂಡಾ ಹೋಗುವುದಿಲ್ಲ ಅಲ್ವೇ? ಒಂದು ಕಾರನ್ನು ವೇಗವಾಗಿ ಓಡಿಸಲು ನಮಗೆ ಧೈರ್ಯ ನೀಡುವುದು ಅದಕ್ಕೊಂದು ಬ್ರೇಕ್ ಇದೆ ಎನ್ನುವ ನಂಬಿಕೆ ಅಲ್ವೇ? ಏನೇ ಆದರೂ ಬ್ರೇಕ್ ಇದೆ ಎನ್ನುವ ನಂಬಿಕೆಯಿಂದ ಅಲ್ಲವೇ ಕಾರನ್ನು 100, 200 ಕಿ.ಮೀ. ವೇಗದಲ್ಲಿ ಓಡಿಸುವುದು?

ಮಾಸ್ಟರ್ ಮುಂದುವರಿಸಿದರು. ನಮ್ಮ ಬದುಕಿನಲ್ಲೂ ಅಷ್ಟೆ ಕೆಲವೊಂದು ಬ್ರೇಕ್‍ಗಳಿರ್ತವೆ. ಹೆತ್ತವರು, ಶಿಕ್ಷಕರು, ಸ್ನೇಹಿತರು ಎಲ್ಲರೂ ನಮ್ಮನ್ನು ಪ್ರಶ್ನೆ ಮಾಡ್ತಾರೆ. ಎಲ್ಲಿ ಹೋಗ್ತಾ ಇದ್ದೀಯಾ, ಏನ್ಮಾಡ್ತಾ ಇದೀಯಾ, ಮುಂದೇನು ಮಾಡ್ತೀಯಾ ಅಂತೆಲ್ಲ. ಇದೆಲ್ಲ ನಮಗೆ ಕಿರಿಕಿರಿ ಅನಿಸ್ತಾ ಇರ್ತದೆ. ಇದೆಲ್ಲ ನಮಗೆ ಅಡೆತಡೆ ಎಂದೇ ನಾವು ಭಾವಿಸುತ್ತೇವೆ.

ಆದರೆ, ಇವೇ ಪ್ರಶ್ನೆಗಳು ನಾವು ಹೋಗ್ತಾ ಇರುವ ದಾರಿ ಸರಿ ಇದೆಯಾ? ಎಷ್ಟು ವೇಗವಾಗಿ ಹೋಗ್ತಾ ಇದೇವೆ (ಹೋಮ್ ವರ್ಕ್ ಕಂಪ್ಲೀಟ್ ಆಯ್ತಾ?), ದಾರಿ ತಪ್ಪಿದ್ದೇವಾ ಎನ್ನುವುದನ್ನು ಅವಲೋಕನ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತವೆ.

 ನಾವು ಬ್ರೇಕ್ ಅಂದುಕೊಂಡಿದ್ದು ನಿಜದಲ್ಲಿ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತಾ ಇರುತ್ತದೆ. ತಪ್ಪಿದ್ದರೆ ಸರಿ ಮಾಡಿಕೊಳ್ಳಲು ಅವಕಾಶ ಕೊಡುತ್ತದೆ. ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಎಲ್ಲೂ ಆಕ್ಸಿಡೆಂಟ್ ಆಗದಂತೆ ನೋಡಿಕೊಳ್ಳುತ್ತದೆ.

ಅಂತ ಹೇಳಿ ಮಾಸ್ಟರ್ ಮಕ್ಕಳ ಮುಖ ಮುಖ ನೋಡಿದರು. ಹೌದಲ್ವಾ ಅನ್ನುವ ಅಚ್ಚರಿ ಮಕ್ಕಳ ಮುಖದಲ್ಲಿತ್ತು.
👏👌🙏🙏👍

ವಂದನೆಗಳೊಂದಿಗೆ.

Friday, February 10, 2023

"ಶಾಂತವಾಗಿ ಆಲೋಚಿಸಿ ನೋಡಿ"*⚘"ಬದುಕು ಸಾರ್ಥಕವಾಗುತ್ತದೆ..⚘*

""ಈ ಪ್ರೇರಣಾ ಸಾಲನ್ನು ಓದಿ""                                                        
    🎤 *ಅಮೃತವಾಣಿ* 📢              
   ⚘⚘* "ಗೆಳೆಯರೆ"* ⚘⚘

"ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ .... 
"ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ ... 
"ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೊರಗುತ್ತವೆ ... 
"ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ ...                              
"ಮನುಜನ ಜೀವನದಲ್ಲೂ  ಏಳುಬೀಳುಗಳು ಕಾಣುತ್ತಲೇ ಇರುತ್ತದೆ ...                                    
"ಕೆಳಗೆ ಬೀಳುವಾಗ ಕುಗ್ಗದೆ ...                                           "ಮೇಲೇರುವಾಗ ಹಿಗ್ಗದೆ ....                               "ಸಮಚಿತ್ತದಿ ಬಾಳಿ ಬದುಕುವುದು  ಒಳಿತು .....
*⚘ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*......                                                             🙏                                    "ಶಾಂತವಾಗಿ ಆಲೋಚಿಸಿ ನೋಡಿ"*⚘"ಬದುಕು  ಸಾರ್ಥಕವಾಗುತ್ತದೆ..⚘*           
      
🙏� *ಸರ್ವೇ ಜನಾ ಸುಖಿನೋಭವಂತು* 🙏

ವಂದನೆಗಳೊಂದಿಗೆ
 🌹🙏🌻💞🌻🙏🌹

Wednesday, February 8, 2023

*ಅಭಿಮನ್ಯು ಹೇಗೆ ಕೊಲ್ಲಲ್ಪಟ್ಟನು**ಎಂದು ಯಾರಾದರೂ ನಿಮ್ಮನ್ನು ಕೇಳಿದರೆ**ನೀವು ಬಹುಶಃ ಎರಡು ಉತ್ತರಗಳನ್ನು ಹೊಂದಿರಬಹುದು*!

*ಅಭಿಮನ್ಯು ಹೇಗೆ ಕೊಲ್ಲಲ್ಪಟ್ಟನು*
*ಎಂದು ಯಾರಾದರೂ ನಿಮ್ಮನ್ನು ಕೇಳಿದರೆ*
*ನೀವು ಬಹುಶಃ ಎರಡು ಉತ್ತರಗಳನ್ನು ಹೊಂದಿರಬಹುದು*!

            *ಪ್ರಥಮ* :
         *ಅಭಿಮನ್ಯುವನ್ನು ಹತ್ತಾರು ಕೌರವ ಸೇನೆಯ ಮಹಾರಥಿಗಳು ಸುತ್ತುವರೆದು ಕೊಂದರು*!!

         *ಎರಡನೇ* :

 *ಚಕ್ರವ್ಯೂಹವನ್ನು ಭೇದಿಸುವ ಕೃಷ್ಣನ ಜ್ಞಾನವನ್ನು ಕೇಳುತ್ತಾ ಸುಭದ್ರೆ ನಿದ್ರಿಸಿದಳು*.
*ಅದಕ್ಕೆ ಅಭಿಮನ್ಯು ತಾಯಿಯ ಗರ್ಭದಲ್ಲಿ ಚಕ್ರವ್ಯೂಹವನ್ನು ಭೇಧಿಸುವ ಕೌಶಲ್ಯ ಪೂರ್ತಿ ತಿಳಿದು ಕೊಳ್ಳಲು ಸಾಧ್ಯವಾಗದೆ  ಚಕ್ರವ್ಯೂಹದಲ್ಲಿ ಸಿಲುಕಿ ಬಲಿಯಾದ*!!

         *ಆದರೆ ಈ ಪ್ರಶ್ನೆಗೆ ಇದು ಸರಿಯಾದ ಉತ್ತರ ಇವೆರಡೂ ಅಲ್ಲ*
     *ಈ ಪ್ರಶ್ನೆಗೆ ಸರಿಯಾದ ಉತ್ತರ..  ಕೌರವರ ಆ ಯುದ್ಧ ತಂತ್ರ*
*ಅವರ ಯುಧ್ದ ತಂತ್ರದ ಕಾರಣ ಅರ್ಜುನನ್ನು* *ಯುದ್ಧಭೂಮಿಯಿಂದ ಉದ್ದೇಶಪೂರ್ವಕವಾಗಿ ಬಹು ದೂರ ಸಾಗುವಂತೆ ರಣತಂತ್ರ ರಚಿಸಲಾಯಿತು* *ಮತ್ತು ಅರ್ಜುನ  ತನ್ನ ಮಗನನ್ನು ರಕ್ಷಿಸಲು ಬಯಸುತ್ತಿದ್ದರೂ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ*
                 
         *ಒಂದು ವೇಳೆ*
*ಅರ್ಜುನ ಅಭಿಮನ್ಯುವಿನಿಂದ ದೂರ* *ಹೋಗದೆ ಬಳಿಯಲ್ಲಿದ್ದಿದ್ದರೇ* 
*ಬಹುಶಃ ಯಾರಿಂದಲೂ ಸಹಾ ಅಭಿಮನ್ಯುವನ್ನು* *ಕೊಲ್ಲಲಾಗುತ್ತಿರಲಿಲ್ಲವೇನೋ*!

         *ಸದ್ಯ ರಣರಂಗ ಸಜ್ಜುಗೊಂಡಿದೆ..!*
        
 *ಅಭಿಮನ್ಯುವನ್ನು (ಮೋದಿ ಜಿ) *ಸುತ್ತುವರಿಯಲು ಸಕಲ ಸಿದ್ಧತೆಗಳೂ ಆಗಲೇ ತಯಾರಿಗೊಂಡಿವೆ*!!

         
*ಕೌರವರ ಯೋಧರು*
         *ಕಾಂಗ್ರೆಸ್*
         *ಎಸ್ಪಿ*,
         *ಬಿಎಸ್ಪಿ*,
        *ಅಕಾಲಿದಳ*
         *ಮಮತಾ*,
         *ಲಾಲು*,
         *ಜೆಡಿಯು*,
         *ಶಿವಸೇನೆ*,
        *ಎನ್ಸಿಪಿ*
         *ಎಡಪಂಥೀಯ*,
         *ಆಪ್*,
         *ಓವೈಸಿ*,
         *ಚೀನಾ ಮತ್ತು*
         *ಪಾಕಿಸ್ತಾನ*
         *ಒಟ್ಟಾಗುವುದು...!!!*

         *ಈಗ ಸಾಕು*
         
*ಕೊನೆಯ ಯುದ್ಧ ತಂತ್ರದ ಅಡಿಯಲ್ಲಿ*
         *ಅರ್ಜುನನ್ನು *(ಎಲ್ಲ ಹಿಂದೂಗಳನ್ನು ಜಾತಿಗಳ ಆಧಾರದಲ್ಲಿ ಬೇರ್ಪಡಿಸಿ ಅವರ ಬಲವನ್ನ ಮುರಿಯುವುದು)*ಯುದ್ಧ ಕ್ಷೇತ್ರದಿಂದ ದೂರ ಕಳಿಸುವ ಪ್ರಯತ್ನ ಜಾರಿಯಲ್ಲಿದೆ*
         *ಯುದ್ಧಭೂಮಿಯಿಂದ ತಪ್ಪಿಸುವ ಪ್ರಯತ್ನ ಮುಂದುವರಿದಿದೆ..!*

         *ಈಗ ಇದು ನಿಮಗೆ ಬಿಟ್ಟದ್ದು*,
         
*ನೀವು*..!
         *ಅಭಿಮನ್ಯುವನ್ನು ಒಂಟಿಯಾಗಿ ಬಿಟ್ಟು*
 
*ಅವನ ನಿಧನದ ನಂತರ ಪಶ್ಚಾತ್ತಾಪ ಪಡುತ್ತೀರೋ ?*
        
         *ಅಥವಾ*..!
         *ಅವನೊಂದಿಗೆ ನಿಂತು ಅವನು ವಿಜಯಿಯಾಗುವುದನ್ನು ನೋಡಲು ಬಯಸುತ್ತೀರೋ ?*
         

 *ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಶೇರ್ ಮಾಡಿ!*

 *ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಈ ಪ್ರಶ್ನೆಯಲ್ಲಿದೆ!*

ಹರ ಹರ ಮಹಾದೇವ🕉️🚩*🙏*
        
*ವಂದೇ ಮಾತರಂ*
      *ಭಾರತ್ ಮಾತಾ ಕಿ ಜೈ*

Tuesday, January 17, 2023

ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

ಮನೆಸುತ್ತ ಕಾಂಪೌಂಡು, ಗೇಟು ಭದ್ರ, ಒಳಗಿರುವ ಮನಸುಗಳೇ ಏಕೋ ಛಿದ್ರ ಛಿದ್ರ...! 

ಬಂಧುಗಳೇ ಬಾರದ, ಸ್ನೇಹಿತರೂ ಸೇರದ ಮನೆಗಳ ಮುಂದೆ ಸದಾ ಕಾವಲುಗಾರ...! 

 ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ...! 

 ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ...! 

 ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ... ಎತ್ತರ... ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ...ಹತ್ತಿರ...! ಸಂತೋಷ ಏನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ...! 

 ಅಂದು...ಬಿಸಿಲು, ಮಳೆ, ಚಳಿಗೆ ಮೈ ಒಗ್ಗಿತ್ತು, ಮನೆ ತಣ್ಣಗಿತ್ತು. ಒಲೆ ಹೊಗೆಯಾಡುತ್ತಿತ್ತು. ಬಿಸಿನೀರ ಹಂಡೆ ಹಬೆಯಾಡುತ್ತಿತ್ತು...! 

 ಕಣಜದ ತುಂಬಾ... ದವಸ ಧಾನ್ಯ ತುಂಬಿತ್ತು. ಬಂಧುಬಳಗದ ನಡುವೆ ಅನುಬಂಧವಿತ್ತು 

 ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು...! 
 ಮನೆ ಚಿಕ್ಕದಾದ್ರೂ, ಮನಸು ಚೊಕ್ಕವಾಗಿತ್ತು...! 

 ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...ನಲಿವಿತ್ತು, ಒಲವಿತ್ತು, ಸಂತಸದ ಸೆಲೆಯಿತ್ತು...! 

 ಮುಖ್ಯ ಬಾಗಿಲು ಚಿಕ್ಕದಿತ್ತು, ತಲೆಬಾಗಬೇಕಿತ್ತು.

ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು 

 ಮಾಡು ಚಿಕ್ಕದಿತ್ತು, ಬದುಕು ದೊಡ್ಡದಿತ್ತು. ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು.ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು...! 

 ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ. ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು.ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು. 

 ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು...ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ...! 

 ಕೆಲಸಕ್ಕೆ ಶ್ರದ್ಧೆ, ದೇವರ ಮೇಲೆ ನಂಬಿಕೆಯಿತ್ತು...! 
 ಸಾವಿಗೂ ಸಹ ಮನೆಯೇ ಸಾಕ್ಷಿ ಯಾಗುತ್ತಿತ್ತು...!

 ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು.ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು....! 

 ನೆಂಟರು ಬಂದರೆ, ಹಬ್ಬದ ಸಡಗರವಿತ್ತು. ಕೆಲವು ಸಾವುಗಳ ಸೂತಕವೂ ಇತ್ತು. ಸತ್ತ ಹಿರಿಯರ ನೆನಪು ಅಚ್ಚಳಿಯದೇ ಉಳಿದಿತ್ತು...! 

 ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕ ವೂ ಇತ್ತು...! ಬದುಕಿನ ಸಾಧಕ ಭಾದಕ ಗಳೆಲ್ಲವೂ ಇತ್ತು...! 

 ಇಂದು...? ಮನೆ ರಾಜನಿಲ್ಲದ ಅರಮನೆಯಂತೆ, ಸಕಲ ಸವಲತ್ತು ಗಳಿರುವ ದರ್ಬಾರಿನಂತೆ,ನೆರೆ ಮನೆಯ ಹಂಗಿಲ್ಲದ ಸೆರೆಮನೆ ಯಂತೆ. ಆದ್ರೂ ಮನೆಮಂದಿಗೆಲ್ಲ ಬಹಳ  ದುಡ್ಡಿನದೇ ಚಿಂತೆ ಚಿಂತೆ..! 

 ಬೇಕಾಗಿದ್ದಕ್ಕಿಂತ, ಬೇಕೆನಿಸಿದ್ದೇ ತುಂಬಿದೆ, ದೊಡ್ಡದಿದೆ, ಶ್ರೀಮಂತವಾಗಿದೆ, ಸಜ್ಜಾಗಿದೆ. ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ...! 

 ಶುಭ ಕಾರ್ಯಗಳು, ಸಂತೋಷ ಕೂಟಗಳು, ಮನೆಬಿಟ್ಟು, ಹೋಟೆಲ್ಲುಗಳ ಸೇರಿಕೊಂಡಿವೆ. ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ...! 

 ನೆಂಟರಿಷ್ಟರು ಮನೆಗೆ ಬಂದರೆ, ಬರೀ ನಕ್ಕೂ ನಗದೇ... ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆ ಮಕ್ಕಳು. 

 ಸ್ನೇಹ,ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...! 

 ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...! 

ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...! 

 ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

Saturday, January 14, 2023

*"ಚಕ್ರವರ್ತಿ ಅಶೋಕ"ನ ಜನ್ಮ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಏಕೆ ಆಚರಿಸುವುದಿಲ್ಲ??*

[ *"ಚಕ್ರವರ್ತಿ ಅಶೋಕ"ನ ಜನ್ಮ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಏಕೆ ಆಚರಿಸುವುದಿಲ್ಲ??*

 ಸಾಕಷ್ಟು ಯೋಚಿಸಿದರೂ "ಉತ್ತರ" ಸಿಕ್ಕಿಲ್ಲ!  ನೀವು ಈ "ಪ್ರಶ್ನೆಗಳನ್ನು" ಸಹ ಪರಿಗಣಿಸಿ!🤔🤔🤔

 ಚಕ್ರವರ್ತಿ ಅಶೋಕ
 *ತಂದೆಯ ಹೆಸರು - ಬಿಂದುಸರ್ ಗುಪ್ತಾ*
 ತಾಯಿಯ ಹೆಸರು - ಸುಭದ್ರಾಣಿ

 "ಚಕ್ರವರ್ತಿ" ಯಾರ ಹೆಸರಿನೊಂದಿಗೆ ಪ್ರಪಂಚದಾದ್ಯಂತದ ಇತಿಹಾಸಕಾರರು "ಶ್ರೇಷ್ಠ" ಎಂಬ ಪದವನ್ನು ಹಾಕುತ್ತಾರೆ

 ಯಾರ - "ಚಕ್ರವರ್ತಿಯ" ರಾಜ ಚಿಹ್ನೆ "ಅಶೋಕ ಚಕ್ರ" ಭಾರತೀಯರು ತಮ್ಮ ಧ್ವಜದಲ್ಲಿ ಹಾಕಿದರು.

 ರಾಯಲ್ ಚಿಹ್ನೆ "ಚಾರ್ಮುಖಿ ಸಿಂಹ" ವನ್ನು ಭಾರತ ಸರ್ಕಾರವು "ರಾಷ್ಟ್ರೀಯ ಚಿಹ್ನೆ" ಮತ್ತು "ಸತ್ಯಮೇವ್ ಜಯತೆ" ಎಂದು ಪರಿಗಣಿಸಿ ನಡೆಸುತ್ತಿರುವ "ಚಕ್ರವರ್ತಿ" ಯನ್ನು ಅಳವಡಿಸಿಕೊಳ್ಳಲಾಗಿದೆ.

 ಚಕ್ರವರ್ತಿ ಅಶೋಕನ ಹೆಸರಿನ ಸೈನ್ಯದ ಅತ್ಯುನ್ನತ ಯುದ್ಧ ಗೌರವವು "ಅಶೋಕ ಚಕ್ರ" ಆಗಿರುವ ದೇಶವಾಗಿದೆ.

 ಚಕ್ರವರ್ತಿ ಮೊದಲು ಅಥವಾ ನಂತರ ಅಂತಹ ರಾಜ ಅಥವಾ ಚಕ್ರವರ್ತಿ ಇರಲಿಲ್ಲ"... "ಅಖಂಡ ಭಾರತ" (ಇಂದಿನ ನೇಪಾಳ, ಬಾಂಗ್ಲಾದೇಶ, ಇಡೀ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ) ವಿಶಾಲವಾದ ಪ್ರದೇಶವನ್ನು ಏಕಾಂಗಿಯಾಗಿ ಆಳಿದವರು.

 ಅಶೋಕ ಚಕ್ರವರ್ತಿಯ ಕಾಲದಲ್ಲಿ "23 ವಿಶ್ವವಿದ್ಯಾನಿಲಯಗಳು" ಸ್ಥಾಪಿತವಾದವು.ಇದರಲ್ಲಿ ತಕ್ಷಶಿಲಾ, ನಳಂದ, ವಿಕ್ರಮಶಿಲಾ, ಕಂದಹಾರ್ ಇತ್ಯಾದಿ ವಿಶ್ವವಿದ್ಯಾನಿಲಯಗಳು ಪ್ರಮುಖವಾಗಿದ್ದವು.ಈ ವಿಶ್ವವಿದ್ಯಾಲಯಗಳಲ್ಲಿ ವಿದೇಶದಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬರುತ್ತಿದ್ದರು.

 ಜಿಸ್-"ಚಕ್ರವರ್ತಿಯ" ಆಳ್ವಿಕೆಯನ್ನು ಪ್ರಪಂಚದ ಬುದ್ಧಿಜೀವಿಗಳು ಮತ್ತು ಇತಿಹಾಸಕಾರರು ಭಾರತೀಯ ಇತಿಹಾಸದ ಅತ್ಯಂತ "ಸುವರ್ಣ ಅವಧಿ" ಎಂದು ಪರಿಗಣಿಸಿದ್ದಾರೆ.

 "ಚಕ್ರವರ್ತಿ" ಭಾರತದ ಆಳ್ವಿಕೆಯಲ್ಲಿ "ವಿಶ್ವ ಗುರು" ಆಗಿತ್ತು. ಇದು "ಚಿನ್ನದ ಹಕ್ಕಿ" ಆಗಿತ್ತು. ಸಾರ್ವಜನಿಕರು ಸಂತೋಷ ಮತ್ತು ತಾರತಮ್ಯ ಮುಕ್ತರಾಗಿದ್ದರು.

 ಇವರ ಆಳ್ವಿಕೆಯಲ್ಲಿ, ಅತ್ಯಂತ ಪ್ರಸಿದ್ಧ ಹೆದ್ದಾರಿ "ಗ್ರೇಡ್ ಟ್ರಂಕ್ ರೋಡ್" ನಂತಹ ಅನೇಕ ಹೆದ್ದಾರಿಗಳನ್ನು ನಿರ್ಮಿಸಲಾಯಿತು. 2,000 ಕಿಲೋಮೀಟರ್ಗಳ ಸಂಪೂರ್ಣ "ರಸ್ತೆ" ಯ ಎರಡೂ ಬದಿಗಳಲ್ಲಿ ಮರಗಳನ್ನು ನೆಡಲಾಯಿತು. "ಸಾರೈಸ್" ನಿರ್ಮಿಸಲಾಯಿತು.
 ಮನುಷ್ಯರು ಮನುಷ್ಯರೇ.., ಪ್ರಾಣಿಗಳಿಗೂ ಮೊಟ್ಟಮೊದಲ ಬಾರಿಗೆ "ವೈದ್ಯಕೀಯ ಮನೆಗಳು" (ಆಸ್ಪತ್ರೆಗಳು) ತೆರೆಯಲಾಯಿತು, ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಲಾಯಿತು.

 ಅಂತಹ *"ಮಹಾ ಚಕ್ರವರ್ತಿ ಅಶೋಕ್"* ಅವರ ಜನ್ಮದಿನವನ್ನು ಅವರ ಸ್ವಂತ ದೇಶ ಭಾರತದಲ್ಲಿ ಏಕೆ ಆಚರಿಸುವುದಿಲ್ಲ ??  ಅಥವಾ ಯಾವುದೇ ರಜೆ ಘೋಷಿಸಿಲ್ಲವೇ?

 ಈ ಜನ್ಮದಿನಾಚರಣೆಯನ್ನು ಆಚರಿಸಬೇಕಾದ ಪ್ರಜೆಗಳು ತಮ್ಮ ಇತಿಹಾಸವನ್ನು ಮರೆತಿದ್ದಾರೆ, ಬಲ್ಲವರಿಗೆ ಏಕೆ ಆಚರಿಸಬಾರದು ಎಂದು ತಿಳಿದಿಲ್ಲ.
[ ಅಂತಹ *"ಮಹಾ ಚಕ್ರವರ್ತಿ ಅಶೋಕ್"* ಅವರ ಜನ್ಮದಿನವನ್ನು ಅವರ ಸ್ವಂತ ದೇಶ ಭಾರತದಲ್ಲಿ ಏಕೆ ಆಚರಿಸುವುದಿಲ್ಲ ??  ಅಥವಾ ಯಾವುದೇ ರಜೆ ಘೋಷಿಸಿಲ್ಲವೇ?

 ಈ ಜನ್ಮದಿನಾಚರಣೆಯನ್ನು ಆಚರಿಸಬೇಕಾದ ಪ್ರಜೆಗಳು ತಮ್ಮ ಇತಿಹಾಸವನ್ನು ಮರೆತಿರುವುದು ಬೇಸರದ ಸಂಗತಿಯಾಗಿದೆ, ತಿಳಿದವರು ಏಕೆ ಆಚರಿಸಲು ಬಯಸುವುದಿಲ್ಲ ಎಂದು ತಿಳಿದಿಲ್ಲವೇ?

 *"ಗೆದ್ದವನು ಚಂದ್ರಗುಪ್ತ"* ಎನ್ನುವ ಬದಲು *"ಗೆದ್ದವನು ಅಲೆಕ್ಸಾಂಡರ್"* ಅದು ಹೇಗೆ ಆಯಿತು??
 ಚಂದ್ರಗುಪ್ತ ಮೌರ್ಯನ ಪ್ರಭಾವವನ್ನು ನೋಡಿದ ನಂತರವೇ ಅಲೆಕ್ಸಾಂಡರ್ನ ಸೈನ್ಯವು ಯುದ್ಧಕ್ಕೆ ನಿರಾಕರಿಸಿತು ಎಂದು ಎಲ್ಲರಿಗೂ ತಿಳಿದಿದೆ.  ನೈತಿಕತೆಯು ಕೆಟ್ಟದಾಗಿ ಮುರಿದುಹೋಯಿತು ಮತ್ತು ಅಲೆಕ್ಸಾಂಡರ್ "ಹಿಂತಿರುಗಬೇಕಾಯಿತು".

 *ಈ "ಐತಿಹಾಸಿಕ ಪ್ರಮಾದ"ವನ್ನು ಸರಿಪಡಿಸಲು ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ.🙏 🏻*

 

Thursday, January 12, 2023

ನಮ್ಮ ದೇಶದ ಘನತೆಯನ್ನ ವಿಶ್ವಕ್ಕೆ ತಿಳಿಸಿದ ಮಹಾತ್ಮ ಜನಿಸಿದ ಪುಣ್ಯದಿನ ಇಂದು...

ಯಾವ ವ್ಯಕ್ತಿಯ ಹೆಸರು ಕೇಳಿದರೆ ಯುವ ಶಕ್ತಿಯಲ್ಲಿ ರೋಮಾಂಚನವಾಗುತ್ತೋ ಆ ವ್ಯಕ್ತಿಯ ಹುಟ್ಟುಹಬ್ಬ ಇಂದು...

ನಮ್ಮ ದೇಶದ ಘನತೆಯನ್ನ ವಿಶ್ವಕ್ಕೆ ತಿಳಿಸಿದ ಮಹಾತ್ಮ ಜನಿಸಿದ ಪುಣ್ಯದಿನ ಇಂದು...

'ಓ ಧೀರನೆ! ನಿನ್ನೆಲ್ಲ ಶಕ್ತಿ ಸಾಮರ್ಥ್ಯ ಗಳನ್ನು ಒಗ್ಗೂಡಿಸಿಕೊಂಡು ಕಗ್ಗತ್ತಲೆಯಂತ ಪರಿಸ್ಥಿತಿಯಲ್ಲಿ ಎದೆಗೆಡದೆ ಮುನ್ನಡೆ' ಎಂದು ಯುವಜನತೆಯನ್ನ ಬಡಿದೆಬ್ಬಿಸಿದ ಚಿರಯುವಕನ ಹುಟ್ಟುಹಬ್ಬ ಇಂದು...

'ನಾವು ದುರ್ಬಲರು ಎಂದು ಹೇಳಿಕೊಳ್ಳದಿರಿ! ಎಲ್ಲವನ್ನೂ, ಏನನ್ನು ಬೇಕಾದರೂ ಸಾಧಿಸಬಲ್ಲಿರಿ' ಎಂದು ಯಾವಾಗಲೂ ನಮಗೆ ಸ್ಫೂರ್ತಿ ತುಂಬುವ ಆ ಮಹಾನಾಯಕನ ಹುಟ್ಟಹಬ್ಬ ಇಂದು...

'ಆಗಿದ್ದು ಆಗಿಹೋಯಿತು! ಅದರ ಬಗ್ಗೆಯೇ ಯೋಚಿಸುತ್ತ ಕೂರಬೇಡ! ಮುಂದಿನ ಪರಿಣಾಮ ಎದುರಿಸಲು ಸಿದ್ಧನಾಗು! ನೀನು ಸಾಧಿಸುವುದು ಬಹಳಷ್ಟಿದೆ!' ಎಂದ ಧೀರ ಸನ್ಯಾಸಿಯ ಹುಟ್ಟುಹಬ್ಬ ಇಂದು...

'ನೀನು ನಿನಗಿಷ್ಟವಾದ ಯಾವ ವಸ್ತುವಿನ ಮೇಲೆ ಬೇಕಾದರು ಧ್ಯಾನ ಮಾಡು! ನಾನು ಮಾತ್ರ ಸಿಂಹದ ಹೃದಯದ ಮೇಲೆ ಧ್ಯಾನ ಮಾಡುವವನು! ನನಗದು ಶಕ್ತಿ ನೀಡುತ್ತದೆ! 
ಎಂದ ಯುಗಪುರುಷನ ಹುಟ್ಟುಹಬ್ಬ ಇಂದು...

'ಏಳಿ! ಎದ್ದೇಳಿ! ! ಗುರಿಮುಟ್ಟುವ ತನಕ ನಿಲ್ಲದಿರಿ!! ಎಂದು ಸದಾ ನಮ್ಮನ್ನು ಬಡಿದೆಬ್ಬಿಸುವ ಗುರುವಿನ ಹುಟ್ಟುಹಬ್ಬ ಇಂದು..

  ಪ್ರಿಯ ಅಮೆರಿಕಾದ ಸಹೋದರ ಸಹೋದರಿಯರೆ" ಎಂಬ ಪದಪುಂಜಗಳ ಮೂಲಕ ಇಡೀ ಅಮೇರಿಕಾವನ್ನು ನತಮಸ್ತಕಗೊಳಿಸಿದ ಸಿಡಿಲಸಂತ ಆತ. 

ಭಾರತೀಯರೆಂದರೆ ಹಾವಾಡಿಗರು ಎಂದು ನಂಬಿದ್ದ ಜಗದ ಜನರ ಕಣ್ತೆರೆಸಿ, ಭಾರತದ ಹಿರಿಮೆ ಮತ್ತು ಹಿಂದೂತ್ವದ ಗರಿಮೆಯನ್ನು ಜಗತ್ತಿಗೆ ಸಾರಿದ ವೀರ ಸಂನ್ಯಾಸಿ ಆತ.

" ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ " ಎಂಬ ಪ್ರಖರ ಸಂದೇಶದಿಂದ ಅಂಧಕಾರದಲ್ಲಿ ಮುಳುಗಿದ್ದ  ಭಾರತದ ಯುವಜನತೆಯನ್ನು ಬೆಳಕಿನಲ್ಲಿ ಪ್ರಜ್ವಲಿಸುವಂತೆ ಮಾಡಿದ ಯುಗಪುರುಷ ಆತ. 

ತಿಲಕ್,  ಸುಭಾಷ್ ಚಂದ್ರ ಬೋಸ್, ಅರವಿಂದ ಘೋಷ್ ರಂತ ಮಹಾನ್ ವ್ಯಕ್ತಿಗಳಿಗೆ ಪ್ರೇರಣಾ ಪುರುಷ ಆತ. 

ಸ್ವಾಮಿ ವಿವೇಕಾನಂದರ ಹೆಸರು ಕೇಳಿದೊಡೆ ಮನ ಪುಳಕಿತಗೊಳ್ಳುತ್ತದೆ. ಸ್ಪೂರ್ತಿಯ ಚಿಲುಮೆ ಉಕ್ಕಿ ಹರಿಯುತ್ತದೆ. ದೇಶದ ಬಾಳ್ವೆಯನ್ನು ಬೆಳಗಲು ಅವರಿತರಿಸಿದ ಯುಗಪುರುಷ ಆತ. 

ಸ್ವಾಮೀಜಿ ನಿಮಗೆ ಕೋಟಿ ಕೋಟಿ ನಮನಗಳು. 

ಸರ್ವರಿಗೂ ವಿವೇಕಾನಂದರ ಜಯಂತಿ ಮತ್ತು ಯುವದಿನದ ಶುಭಾಶಯಗಳು.😍🚩🇮🇳🇮🇳
ಜೈ ಹಿಂದ್ 🇮🇳
ಜೈ ಜವಾನ್ ಜೈ ಕಿಸಾನ್ 🇮🇳
ವಂದೇ ಮಾತರಂ ❣🇮🇳

Monday, January 9, 2023

ಒಬ್ಬಳು ಮಹಿಳೆ ಒಂದು ಬಸ್ ಸ್ಟಾಂಡ್ ನಲ್ಲಿ ಒಬ್ಬ ಪುರುಷ ನ ಬಳಿ ಹೋಗಿ ಕೇಳುತ್ತಾಳೆ ,

ಒಬ್ಬಳು ಮಹಿಳೆ ಒಂದು ಬಸ್ ಸ್ಟಾಂಡ್ ನಲ್ಲಿ ಒಬ್ಬ ಪುರುಷ ನ ಬಳಿ ಹೋಗಿ ಕೇಳುತ್ತಾಳೆ ,

ಎಕ್ಸ್ ಕ್ಯೂಸ್ ಮೀ ಸರ್ ,ನಾನೊಂದು ಚಿಕ್ಕ ಸರ್ವೇ ಮಾಡುತ್ತಿದ್ದೇನೆ ,ನಿಮ್ಮ ಬಳಿ ಒಂದು ಪ್ರಶ್ನೆ ಕೇಳಬಹುದಾ ...???

ಪುರುಷ :- ಆಯಿತು ,ಕೇಳಿ ಮೇಡಂ ,

ಮಹಿಳೆ :- ನೀವು ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಒಬ್ಬಳು ಮಹಿಳೆ ಬಸ್ ಹಿಡಿತಾಳೆ ,ಸೀಟ್ ಎಲ್ಲಾ ತುಂಬಿರುತ್ತದೆ ,ನೀವು ಆ ಮಹಿಳೆಗೆ ನಿಮ್ಮ ಸೀಟ್ ಬಿಟ್ಟು ಕೊಡುತ್ತೀರಾ ,,,???

ಪುರುಷ :- ಇಲ್ಲಾ ಮೇಡಂ .

ಮಹಿಳೆ :- ಒಂದು ವೇಳೆ ಗರ್ಭಿಣಿ ಮಹಿಳೆ ಆಗಿದ್ರೆ , ನೀವು ನಿಮ್ಮ ಸೀಟ್ ಬಿಟ್ಟು ಕೊಡುತ್ತೀರಾ ...???

ಪುರುಷ :- ಇಲ್ಲಾ ಮೇಡಂ ,

ಮಹಿಳೆ :- ಇರ್ಲಿ ,ಒಂದು ವೇಳೆ ಮುದುಕಿ ಒಬ್ಬರು ಬಸ್ ನಲ್ಲಿ ನಿಂತು ಕೊಂಡಿದ್ದರೆ ನೀವು ಸೀಟ್ ಬಿಟ್ಟು ಕೊಡುತ್ತೀರಾ ..???

ಪುರುಷ :- ಇಲ್ಲಾ ಮೇಡಂ ,

ಮಹಿಳೆ :-ನೀನೊಬ್ಬ  ಸ್ವಾರ್ಥಿ  ವ್ಯಕ್ತಿ ,ನಿನಗೆ  ಮೂಲಭೂತ  ನೈತಿಕತೇ ಎಂಬುದೇ  ಇಲ್ಲ , ನೀನು  ಯಾರು ...???

ಪುರುಷ :- ಬಸ್ ಡ್ರೈವರ್ ,

      😆😆😆😆😆

Sunday, January 8, 2023

*ಕೋರ್ಟ್ ಅಲ್ಲಿ ಅಂದು ಆ ಡೈವೋರ್ಸ್ ಗಲಾಟೆಯ ಕೊನೆಯ ತೀರ್ಪು, ಸಣ್ಣಕತೆ.

*ಸಣ್ಣಕತೆ: 

*ಕೋರ್ಟ್ ಅಲ್ಲಿ ಅಂದು ಆ ಡೈವೋರ್ಸ್ ಗಲಾಟೆಯ ಕೊನೆಯ  ತೀರ್ಪು ಬರುವುದರಲ್ಲಿತ್ತು.. ತೀರ್ಪು ಅವಳ ಪರವೇ ಬರುವುದರಲ್ಲಿತ್ತು.ಅಷ್ಟೊಂದು ಸುಂದರವಾಗಿ ವಾದ ಮಂಡಿಸಿದ್ದರು ಅವಳ ಪರ ವಕೀಲರು.. ಆಕೆ ಮತ್ತೆ ಮತ್ತೆ ಹೇಳುತ್ತಿದ್ದಳು..🥱🥱*
*"ನೋಡಿ ಮಹಾ ಸ್ವಾಮಿ 12 ವರ್ಷದ ದಾಂಪತ್ಯ ಜೀವನ ದಿಂದ ರೋಸಿ ಹೋಗಿದ್ದೇನೆ. ಆತನ ಗೊರಕೆಯ ಶಬ್ದಕ್ಕೆ ತತ್ತರಿಸಿ ಹೋಗಿದ್ದೇನೆ🥱, ರಾತ್ರಿ ಆದರೆ ಹೆದರಿಕೆ ಶುರು ಆಗುತ್ತಿದೆ🥱, ಅಷ್ಟೊಂದು ಭಯಾನಕ ಗೊರಕೆ ಆತನದು. ಅದಕ್ಕೆ ಮಾಡಬೇಕಾದ್ದು ಎಲ್ಲಾ ಮಾಡಾಗಿದೆ,ಮೊದಲು ಗೊರಕೆಯ ಪ್ಲಾಸ್ಟರ್ ಹಾಕಿದೆ, ಅವನ ಮೂಗಿಗೆ, ಬಾಯಿಗೆ ತಲೆಗೆ ಪ್ಲಾಸ್ಟರ್, ಟವೆಲ್ ಎಲ್ಲ ಕಟ್ಟಿ ಆಯಿತು, ಹತ್ತಿ ಇಟ್ಟು ಆಯಿತು 😔, ಎಲ್ಲಾ ದೇವರಿಗೆ ಹರಕೆ ಆಯಿತು, ಊರಲ್ಲಿದ್ದ ಎಲ್ಲಾ ನಾಟಿ ಔಷದ ಆಯಿತು🥱, ಇನ್ನು ನನ್ನಿಂದ ಸಾಧ್ಯವಿಲ್ಲ ರಾತ್ರಿ ನಿದ್ದೆ ಇಲ್ಲದೇ ಹುಚ್ಚಿಯಂತಾಗಿದ್ದೇನೆ ದಯವಿಟ್ಟು ಅವನಿಂದ ಮುಕ್ತಿ ದೊರಕಿಸಿ ಸ್ವಾಮಿ ಆಕೆ ಗೋಗರೆದು ಕೇಳಿಕಕೊಂಡಿದ್ದಳು..🥱🥱*
*ನ್ಯಾಯಾದೀಶರು ಕುಟುಂಬ ವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದರು, ತಂದೆ ಕೋರ್ಟ್ ನ ಇನ್ನೊಂದು ಕಟಕಟೆ ಯಲ್ಲಿ ನಿಂತಿದ್ದರೆ.. ಅಲ್ಲೇ ಬೆಂಚ್ ಅಲ್ಲಿ ಕುಳಿತ 9 ವರ್ಷದ ಹಾಗು 6 ವರ್ಷದ ಹೆಣ್ಣುಮಕ್ಕಳಿ ಬ್ಬರು ತಂದೆ ಯ ಮುಖವನ್ನೇ ಸಪ್ಪೆ ಮೊರೆ ಹಾಕಿ ನೋಡುತಿದ್ದರು😔.. ತಂದೆಯೂ ಅದೇ ಮಕ್ಕಳನ್ನು ನೋಡುತಿದ್ದ ಮಕ್ಕಳ ಕಣ್ಣುಗಳು ಅದಾಗಲೇ ಮಂಜಾಗಿದ್ದವು.😔😔*

*ನ್ಯಾಯಾದೀಶ ರು ಹೇಳಿದರು ಆ ಮಹಿಳೆಗೆ...."ಗಂಡನ ಮೂಗಿಗೆ ಪ್ಲಾಸ್ಟರ್ ಹಾಕಿದಿರಿ, ಹತ್ತಿ ಇಟ್ಟಿರಿ, ಬಾಯಿಗೆ ಪ್ಲಾಸ್ಟರ್ ಹಾಕಿದಿರಿ, ಟವೆಲ್ ಸುತ್ತಿದಿರಿ, ಇದೆಲ್ಲ ಓಕೆ ಅಮ್ಮ ಆ ಪುಣ್ಯಾತ್ಮ ನಿಮ್ಮೆಲ್ಲ ಟಾರ್ಚರ್ ಅನ್ನು ಸಹಿಸಿ ಕೊಂಡ😔. ಆದರೆ ಅದೇ ಹತ್ತಿಯನ್ನು, ಟವೆಲ್ ಅನ್ನು ನಿಮ್ಮ ಕಿವಿಗೆ ಸುತ್ತಿ ಮಲಗ ಬಹುದಿತ್ತಲ್ಲ ಯಾಕೆ ಹಾಗೇ ಮಾಡಿಲ್ಲ?... ಎಂದಾಗ ಮಹಿಳೆ ಮೌನ ವಾಗಿದ್ದಳು...👌🥱*
*ಮತ್ತೆ ನ್ಯಾಯಾದೀಶರು ಹೇಳಿದರು.. "ನೋಡಮ್ಮ..ಮೊದಲು ನಾವು ನಮ್ಮನ್ನು ಬದಲಾಯಿಸಿ ಕೊಳ್ಳಲು ಪ್ರಯತ್ನಿಸಬೇಕು, ಆಮೇಲೆ ಬೇರೆಯವರನ್ನು ಬದಲಾಯಿಸೋಣ, ಇದು ನೆನಪಿರಲಿ👌👌".. ಎನ್ನುತ್ತಾ ಡೈವೋರ್ಸ್ ಪ್ರಕರಣ ವನ್ನು ಅಲ್ಲಿಗೆ ವಜಾ ಗೊಳಿಸಿದ್ದರು..👌👌*

*ಮಹಿಳೆಯ ಮುಖ ಚಿಕ್ಕದಾಗಿತ್ತು, ಗಂಡ ಮಕ್ಕಳ ಮುಖ ಅರಳಿತ್ತು, ಹೆಣ್ಣುಮಕ್ಕಳಂತು ಖುಷಿ ಇಂದ ಓಡೋಡಿ ಬಂದು ಅಪ್ಪನನ್ನು ತಬ್ಬಿಕೊಂಡರು... ಅಪ್ಪ ಮಕ್ಕಳ ಕಣ್ಣುಗಳು ಅದಾಗಲೇ ಒದ್ದೆ ಯಾಗಿದ್ದವು 😔😔😔.*

*ಅದೆಷ್ಟು ಅದ್ಭುತ ಸತ್ಯ ನೋಡಿ.. ನಾವು ಅವ ಸರಿ ಇಲ್ಲ, ಇವ ಸರಿ ಇಲ್ಲ, ಸಮಾಜ ಸರಿ ಇಲ್ಲ, ಕುಟುಂಬ ಸರಿ ಇಲ್ಲ ಎಂದು ಬೇರೆಯವರ ತಪ್ಪನ್ನಷ್ಟೇ ಹುಡುಕುತ್ತೇವೆಯೇ ಹೊರತು, ನಮ್ಮ ತಪ್ಪನ್ನು ಮರೆತಿರುತ್ತೇವೆ. ಯಾಕೆ ನಾವು ಬದಲಾಗಬಾರದು?, ಇಂದೇ ಪ್ರಯತ್ನಿಸೋಣ ಬದಲಾಗಲು.. ಮತ್ತೆ ಮತ್ತೆ ನಮ್ಮನ್ನು ನಾವೇ ಪ್ರಶ್ನಿಸೋಣ,*

ವಂದನೆಗಳೊಂದಿಗೆ.

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World