www.dgnsgreenworld.blogspot.com

Friday, June 9, 2023

ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= ಸಮಯ.

ಉಪಯುಕ್ತ ಮಾಹಿತಿ
॰॰॰॰॰॰॰॰॰॰॰॰॰॰॰॰॰॰॰

1. ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = ಸಚ್ಚಾರಿತ್ರ್ಯ
2. ಎಲ್ಲ ದುರ್ದೈವಕ್ಕೆ ಕಾರಣ = ಆಲಸ್ಯ
3. ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ = ಭೀತಿ.
4. ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= ಸಮಯ.
5. ಸಾವಿರ ಯಜ್ಞಗಳಿಗಿಂತ  ಶ್ರೇಷ್ಠ ಕರ್ಮ = ಪರೋಪಕಾರ.
6. ಅತ್ಯಂತ ಶ್ರೇಷ್ಠ  ಸ್ವಭಾವ = ತಾಳ್ಮೆ .
7. ಅತ್ಯಂತ ಕೆಟ್ಟ ಗುಣ = ಪರನಿಂದೆ.
8. ಬಹುತೇಕ ಎಲ್ಲಾ ರೋಗಗಳಿಗೆ ಮುಖ್ಯ ಕಾರಣ = ಅಜೀರ್ಣ
9. ಚಟಗಳಲ್ಲಿ ಅತೀ ಕೆಟ್ಟ ಚಟ = ಚಾಡಿ ಹೇಳುವುದು.
10. ಬಂಧುಗಳಲ್ಲಿ ಶ್ರೇಷ್ಠ ಬಂಧು = ವಿಶ್ವಾಸ .
11. ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = ಅಹಂಕಾರ .
12. ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = ಆತ್ಮ ವಿಶ್ವಾಸ .
13. ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ = ಆಧ್ಯಾತ್ಮಿಕ ಶಿಕ್ಷಣ .
14. ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = ಸಾಲಬಾಧೆ.
15. ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = ಹೊಗಳಿಸಿಕೊಳ್ಳುವುದು.
16. ಬದುಕಿನಲ್ಲಿಯೇ ಅತೀ ಹೀನಬದುಕು = ಹಂಗಿನ ಬದುಕು.
17. ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = ವಿಶ್ವಾಸ .
18. ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು  ಕತ್ತಲಾಗಿರುವುದು = ಅಜ್ಞಾನ.
19. ಜಗತ್ತಿನ ಎಲ್ಲಾ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = ಸಜ್ಜನರ ನಿಷ್ಕ್ರಿಯತೆ .
20. ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = ನಾಲಿಗೆ.
21. ವರಗಳಲ್ಲಿ ಅತೀ ದೊಡ್ಡ ವರ = ಆರೋಗ್ಯ .
22. ದೊಡ್ಡ ಶ್ರೀಮಂತಿಕೆ =  ಸಂತೃಪ್ತಿ.
23. ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = ಮೌನ.

No comments:

Post a Comment

welcome to dgnsgreenworld Family

. ಉಪವಾಸದಿಂದ ಆಗುವ ಪ್ರಯೋಜನಗಳನ್ನು,2016 ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಜಪಾನಿನ ವಿಜ್ಞಾನಿ ಡಾ. ಯೋಶಿನೋರಿ ಒಹ್ಸುಮಿ (ಡಾ. ಯೋಶಿನೋರಿ ಒಹ್ಸುಮಿ) ಕಂಡುಹಿಡಿದರು

ನಿಮಗೆ ಗೊತ್ತಾ? ನಮ್ಮ ದೇಹದಲ್ಲಿ ನೈಸರ್ಗಿಕ ಕೋಶ ಶುದ್ಧೀಕರಣ ವ್ಯವಸ್ಥೆ ಇದ್ದು, ಅದು ಕೆಟ್ಟ ಮತ್ತು ಹಾನಿಗೊಳಗಾದ ಕೋಶಗಳನ್ನು ಸೇವಿಸುವ ಮೂಲಕ ತನ್ನನ್ನು ತಾ...

Green World