www.dgnsgreenworld.blogspot.com

Sunday, September 3, 2023

ಶ್ರೀ ಕೃಷ್ಣ ಮತ್ತು ಎಂಟರ ಸಂಖ್ಯೆಇದರ ಒಂದು ಕಿರು ಮಾಹಿತಿ.

ಶ್ರೀ ಕೃಷ್ಣ ಮತ್ತು ಎಂಟರ ಸಂಖ್ಯೆ
ಇದರ ಒಂದು ಕಿರು ಮಾಹಿತಿ

 ಮೊದಲನೆಯದಾಗಿ ಭಗವಾನ್ ಶ್ರೀಕೃಷ್ಣ ದೇವಕಿ ಹಾಗೂ ವಸುದೇವರ
8 ನೇ ಮಗನಾಗಿ ಭೂಮಿಯ ಮೇಲೆ ಜನ್ಮತಾಳಿದ.

 ಇನ್ನು ಭಗವಾನ್ ಕೃಷ್ಣನ ಜನನವಾಗಿದ್ದು 8ನೇ ಮನ್ವಂತರದ, ಅಷ್ಟಮಿಯ ದಿನವೇ ಎಂಬುದು ಕೂಡಾ ಸತ್ಯ.

 ಅದಕ್ಕೆ ಕೃಷ್ಣಾಷ್ಟಮಿ ಎಂದೇ ಆ ದಿನವನ್ನು ಸಂಭ್ರಮದಿಂದ ಆಚರಿಸಿ ಆನಂದಿಸುವರು ಭಕ್ತವೃಂದ.

ಎರಡನೆಯದಾಗಿ, ಶ್ರೀಕೃಷ್ಣ ಭಗವಾನನಿಗೆ ಅಷ್ಟ ಪತ್ನಿಯರು ಎಂಬುದು ಒಂದು ಪ್ರಮುಖ ವಿಷಯ

 ರುಕ್ಮಿಣಿ, ಜಾಂಭವತಿ, ಸತ್ಯಭಾಮೆ, ಮಿತ್ರವಿಂದ, ಲಕ್ಷ್ಮಣಾ, ಸತ್ಯ, ಭದ್ರ, ಕಾಳಿಂದಿ.

 ಈ ಎಂಟು ಜನ ಭಗವಂತನ ಕೃಷ್ಣ ಅವತಾರದಲ್ಲಿ ಆತನ ಅಷ್ಟಭಾರ್ಯೆಯರೇ ಎಂದು ಆರಾಧಿಸಲ್ಪಟ್ಟಿದ್ದಾರೆ. 

ಇನ್ನು ಶ್ರೀಕೃಷ್ಣ ಪರಮಾತ್ಮನ ಆಪ್ತ ಮಿತ್ರರ ಸಂಖ್ಯೆ ಕೂಡಾ ಎಂಟು,

 ಶ್ರೀಧಾಮ, ಸುಧಾಮ, ಸುಬಲ,ಸ್ತೋಕ ಕೃಷ್ಣ, ಅರ್ಜುನ, ವೃಷಬಂಧು,ಸುಭಗ್ , ಬಲಿ, ಪ್ರಾಣಭಾನು ಎಂಬವವರೇ ಆ ಅಷ್ಟ ಮಿತ್ರರು. 

ಈ ಹೆಸರುಗಳು ಆದಿ ಪುರಾಣದಲ್ಲಿ ನಮೂದಿತವಾಗಿವೆ. ಹೀಗೆ ಪತ್ನಿಯರು ಎಂಟು , ಆಪ್ತ ಮಿತ್ರರೂ ಎಂಟು ಭಗವಾನ್ ಶ್ರೀಕೃಷ್ಣ ಪರಮಾತ್ಮನಿಗೆ.

ಇನ್ನು ಪತ್ನಿಯರು ಹೊರತು ಪಡಿಸಿದರೆ, ಶ್ರೀಕೃಷ್ಣ ಪರಮಾತ್ಮನಿಗೆ ಇದ್ದ ಆಪ್ತ ಸಖಿಯರ ಸಂಖ್ಯೆ ಕೂಡಾ ಎಂಟು
ಎಂದರೆ ಆಶ್ಚರ್ಯವಾಗುತ್ತದೆ.

 ಚಂದ್ರಾವಳಿ, ಭದ್ರಾ, ಶ್ಯಾಮಾ, ಶೈವ್ಯಾ, ಪಗ್ಯಾ, ರಾಧಾ, ಲಲಿತಾ, ವಿಶಾಖಾ ಎಂಬುವವರೇ ಆ ಅಷ್ಟ ಸಖಿಯರು.

 ಆದರೆ ಈ ಹೆಸರುಗಳು ಕೆಲವೆಡೆ ಬೇರೆಯಾಗಿ ನಮೂದಿಸಲಾಗಿದ್ದರೂ, ಸಾಮ್ಯತೆಯಂತೂ ಇದ್ದೇ ಇದೆ. 

ಇನ್ನು ಕೃಷ್ಣನ ಹೆಸರಿನಿಂದ ಆತನ ಮಹಿಮೆಗಳಿಂದ ಪಾವನವೆನಿಸಿರುವ ಕೃಷ್ಣ ನಗರಗಳೆಂದೇ ಖ್ಯಾತಿ ಪಡೆದಿರುವ ಪವಿತ್ರ ಎಂಟು ಸ್ಥಳಗಳಿವೆ. 

ಮಥುರಾ, ಗೋಕುಲ, ನಂದಗಾಂವ್, ಬೃಂದಾವನ, ಗೋವರ್ಧನ, ಬರ್ಸಾನಾ, ಮಧುವನ ಹಾಗೂ ದ್ವಾರಿಕಾ. ಈ ಅಷ್ಟನಗರಗಳು ಶ್ರೀಕೃಷ್ಣ ನು ನಡೆದಾಡಿದ ಪಾವನ ಭೂಮಿ ಎನಿಸಿದ್ದವು. 

ಒಟ್ಟಾರೆ ಶ್ರೀಕೃಷ್ಣ ಹಾಗೂ ಅಷ್ಟ ಅಂದರೆ ಎಂಟು ಈ ಸಂಖ್ಯೆಗೆ ಇರುವ ಸಂಬಂಧ ನಿಜವಾಗಿಯೂ ರೋಚಕ ಹಾಗೂ ಅದ್ಭುತ.

ಕೃಷ್ಣಾರ್ಪಣಮಸ್ತು.

ಸರ್ವಜನ ಸುಖಿನೋಭವಂತು.

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World