www.dgnsgreenworld.blogspot.com

Monday, September 4, 2023

ಭಾರತೀಯರು ಸ್ವಭಾವತಃ ದೇವರನ್ನು ನಂಬುವ ಜನರು, ಇದಕ್ಕೆ ವಿಜ್ಞಾನಿಗಳೂ ಹೊರತಲ್ಲ.

ಭಾರತೀಯರು ಸ್ವಭಾವತಃ ದೇವರನ್ನು ನಂಬುವ ಜನರು, ಇದಕ್ಕೆ ವಿಜ್ಞಾನಿಗಳೂ ಹೊರತಲ್ಲ. ಅವರು ವಿಜ್ಞಾನವು ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಯ ವಿರುದ್ಧವಾಗಿದೆ ಎಂದು ನಂಬುವುದಿಲ್ಲ. ನಮ್ಮ ವಿಜ್ಞಾನಿಗಳ ನೀತಿಯು ವಿಶಾಲವಾಗಿದೆ - ಅವರು ತಮ್ಮ ನಂಬಿಕೆಗೆ ಬೇರೂರಿರುವುದರ ಜೊತೆ ಜೊತೆಗೆ ಹೊಸ ಹೊಸ ಆಲೋಚನೆಗಳು, ಜ್ಞಾನ ಮತ್ತು ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಾರೆ. ನಮ್ಮ ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ, ವಿಜ್ಞಾನ ಮತ್ತು ದೇವರ ನಡುವೆ ಯಾವುದೇ ಮೂಲಭೂತ ವ್ಯತ್ಯಾಸವಿಲ್ಲ, ಎಂದು ಹಾಗೂ ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು. 

ಪ್ರಪಂಚದ ಬಹುಪಾಲು ವಿಜ್ಞಾನಿಗಳು ದೇವರ ಅಸ್ತಿತ್ವ ಅಥವಾ ಈ ವಿಶ್ವದ ಹಿಂದಿರುವ, ಇದರ ಅಸ್ತಿತ್ವಕ್ಕೆ ಕಾರಣೀಭೂತವಾದ ಯಾವುದೋ ಒಂದು ದಿವ್ಯಶಕ್ತಿಯೊಂದು ಇರಲೇಬೇಕು ಮತ್ತು ಅದು ಇದ್ದೇ ಇದೆ ನಂಬುತ್ತಾರೆ. ಹಾಗೆಯೇ ಬಹುಪಾಲು ಭಾರತೀಯ ವಿಜ್ಞಾನಿಗಳು ತಾವು ಆಧ್ಯಾತ್ಮಿಕರು ಎಂದು ಭಾವಿಸುತ್ತಾರೆ. ಧರ್ಮ, ಆಧ್ಯಾತ್ಮ ಅಥವಾ ದೇವರ ಮೇಲಿನ ನಂಬಿಕೆಯು ಸನಾತನ ಭಾರತೀಯ ಮೌಲ್ಯ ವ್ಯವಸ್ಥೆಯ ಭಾಗವಾಗಿದೆ. ಇದು ನಮ್ಮ ಕೌಟುಂಬಿಕ ಮೌಲ್ಯ ಮತ್ತು ಸಾಮಾಜಿಕ ಜನಜೀವನದಲ್ಲಿ ಅತ್ಯಗತ್ಯವಾದ ಒಂದು ಭಾಗವಾಗಿದೆ.
ವಂದನೆಗಳೊಂದಿಗೆ
ನಂಜುಂಡಸ್ವಾಮಿ.
🙏🙏🙏🙏🙏

No comments:

Post a Comment

welcome to dgnsgreenworld Family

ಮನಸೇ ಎಲ್ಲವೂ.

The mind is everything. What you think you become. ಮನಸ್ಸೇ ಎಲ್ಲವೂ. ನೀವು ಏನಾಗುತ್ತೀರಿ ಎಂದು ಯೋಚಿಸುತ್ತೀರೋ ಅದುವೇ ಆಗುತ್ತೀರಿ. ವಂದನೆಗಳೊಂದಿಗೆ.  Very g...

Green World