ಯಾವ ವ್ಯಕ್ತಿಯ ಹೆಸರು ಕೇಳಿದರೆ ಯುವ ಶಕ್ತಿಯಲ್ಲಿ ರೋಮಾಂಚನವಾಗುತ್ತೋ ಆ ವ್ಯಕ್ತಿಯ ಹುಟ್ಟುಹಬ್ಬ ಇಂದು...
ನಮ್ಮ ದೇಶದ ಘನತೆಯನ್ನ ವಿಶ್ವಕ್ಕೆ ತಿಳಿಸಿದ ಮಹಾತ್ಮ ಜನಿಸಿದ ಪುಣ್ಯದಿನ ಇಂದು...
'ಓ ಧೀರನೆ! ನಿನ್ನೆಲ್ಲ ಶಕ್ತಿ ಸಾಮರ್ಥ್ಯ ಗಳನ್ನು ಒಗ್ಗೂಡಿಸಿಕೊಂಡು ಕಗ್ಗತ್ತಲೆಯಂತ ಪರಿಸ್ಥಿತಿಯಲ್ಲಿ ಎದೆಗೆಡದೆ ಮುನ್ನಡೆ' ಎಂದು ಯುವಜನತೆಯನ್ನ ಬಡಿದೆಬ್ಬಿಸಿದ ಚಿರಯುವಕನ ಹುಟ್ಟುಹಬ್ಬ ಇಂದು...
'ನಾವು ದುರ್ಬಲರು ಎಂದು ಹೇಳಿಕೊಳ್ಳದಿರಿ! ಎಲ್ಲವನ್ನೂ, ಏನನ್ನು ಬೇಕಾದರೂ ಸಾಧಿಸಬಲ್ಲಿರಿ' ಎಂದು ಯಾವಾಗಲೂ ನಮಗೆ ಸ್ಫೂರ್ತಿ ತುಂಬುವ ಆ ಮಹಾನಾಯಕನ ಹುಟ್ಟಹಬ್ಬ ಇಂದು...
'ಆಗಿದ್ದು ಆಗಿಹೋಯಿತು! ಅದರ ಬಗ್ಗೆಯೇ ಯೋಚಿಸುತ್ತ ಕೂರಬೇಡ! ಮುಂದಿನ ಪರಿಣಾಮ ಎದುರಿಸಲು ಸಿದ್ಧನಾಗು! ನೀನು ಸಾಧಿಸುವುದು ಬಹಳಷ್ಟಿದೆ!' ಎಂದ ಧೀರ ಸನ್ಯಾಸಿಯ ಹುಟ್ಟುಹಬ್ಬ ಇಂದು...
'ನೀನು ನಿನಗಿಷ್ಟವಾದ ಯಾವ ವಸ್ತುವಿನ ಮೇಲೆ ಬೇಕಾದರು ಧ್ಯಾನ ಮಾಡು! ನಾನು ಮಾತ್ರ ಸಿಂಹದ ಹೃದಯದ ಮೇಲೆ ಧ್ಯಾನ ಮಾಡುವವನು! ನನಗದು ಶಕ್ತಿ ನೀಡುತ್ತದೆ!
ಎಂದ ಯುಗಪುರುಷನ ಹುಟ್ಟುಹಬ್ಬ ಇಂದು...
'ಏಳಿ! ಎದ್ದೇಳಿ! ! ಗುರಿಮುಟ್ಟುವ ತನಕ ನಿಲ್ಲದಿರಿ!! ಎಂದು ಸದಾ ನಮ್ಮನ್ನು ಬಡಿದೆಬ್ಬಿಸುವ ಗುರುವಿನ ಹುಟ್ಟುಹಬ್ಬ ಇಂದು..
ಪ್ರಿಯ ಅಮೆರಿಕಾದ ಸಹೋದರ ಸಹೋದರಿಯರೆ" ಎಂಬ ಪದಪುಂಜಗಳ ಮೂಲಕ ಇಡೀ ಅಮೇರಿಕಾವನ್ನು ನತಮಸ್ತಕಗೊಳಿಸಿದ ಸಿಡಿಲಸಂತ ಆತ.
ಭಾರತೀಯರೆಂದರೆ ಹಾವಾಡಿಗರು ಎಂದು ನಂಬಿದ್ದ ಜಗದ ಜನರ ಕಣ್ತೆರೆಸಿ, ಭಾರತದ ಹಿರಿಮೆ ಮತ್ತು ಹಿಂದೂತ್ವದ ಗರಿಮೆಯನ್ನು ಜಗತ್ತಿಗೆ ಸಾರಿದ ವೀರ ಸಂನ್ಯಾಸಿ ಆತ.
" ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ " ಎಂಬ ಪ್ರಖರ ಸಂದೇಶದಿಂದ ಅಂಧಕಾರದಲ್ಲಿ ಮುಳುಗಿದ್ದ ಭಾರತದ ಯುವಜನತೆಯನ್ನು ಬೆಳಕಿನಲ್ಲಿ ಪ್ರಜ್ವಲಿಸುವಂತೆ ಮಾಡಿದ ಯುಗಪುರುಷ ಆತ.
ತಿಲಕ್, ಸುಭಾಷ್ ಚಂದ್ರ ಬೋಸ್, ಅರವಿಂದ ಘೋಷ್ ರಂತ ಮಹಾನ್ ವ್ಯಕ್ತಿಗಳಿಗೆ ಪ್ರೇರಣಾ ಪುರುಷ ಆತ.
ಸ್ವಾಮಿ ವಿವೇಕಾನಂದರ ಹೆಸರು ಕೇಳಿದೊಡೆ ಮನ ಪುಳಕಿತಗೊಳ್ಳುತ್ತದೆ. ಸ್ಪೂರ್ತಿಯ ಚಿಲುಮೆ ಉಕ್ಕಿ ಹರಿಯುತ್ತದೆ. ದೇಶದ ಬಾಳ್ವೆಯನ್ನು ಬೆಳಗಲು ಅವರಿತರಿಸಿದ ಯುಗಪುರುಷ ಆತ.
ಸ್ವಾಮೀಜಿ ನಿಮಗೆ ಕೋಟಿ ಕೋಟಿ ನಮನಗಳು.
ಸರ್ವರಿಗೂ ವಿವೇಕಾನಂದರ ಜಯಂತಿ ಮತ್ತು ಯುವದಿನದ ಶುಭಾಶಯಗಳು.😍🚩🇮🇳🇮🇳
ಜೈ ಹಿಂದ್ 🇮🇳
ಜೈ ಜವಾನ್ ಜೈ ಕಿಸಾನ್ 🇮🇳
ವಂದೇ ಮಾತರಂ ❣🇮🇳
No comments:
Post a Comment
welcome to dgnsgreenworld Family