*ಸಣ್ಣಕತೆ:
*ಕೋರ್ಟ್ ಅಲ್ಲಿ ಅಂದು ಆ ಡೈವೋರ್ಸ್ ಗಲಾಟೆಯ ಕೊನೆಯ ತೀರ್ಪು ಬರುವುದರಲ್ಲಿತ್ತು.. ತೀರ್ಪು ಅವಳ ಪರವೇ ಬರುವುದರಲ್ಲಿತ್ತು.ಅಷ್ಟೊಂದು ಸುಂದರವಾಗಿ ವಾದ ಮಂಡಿಸಿದ್ದರು ಅವಳ ಪರ ವಕೀಲರು.. ಆಕೆ ಮತ್ತೆ ಮತ್ತೆ ಹೇಳುತ್ತಿದ್ದಳು..🥱🥱*
*"ನೋಡಿ ಮಹಾ ಸ್ವಾಮಿ 12 ವರ್ಷದ ದಾಂಪತ್ಯ ಜೀವನ ದಿಂದ ರೋಸಿ ಹೋಗಿದ್ದೇನೆ. ಆತನ ಗೊರಕೆಯ ಶಬ್ದಕ್ಕೆ ತತ್ತರಿಸಿ ಹೋಗಿದ್ದೇನೆ🥱, ರಾತ್ರಿ ಆದರೆ ಹೆದರಿಕೆ ಶುರು ಆಗುತ್ತಿದೆ🥱, ಅಷ್ಟೊಂದು ಭಯಾನಕ ಗೊರಕೆ ಆತನದು. ಅದಕ್ಕೆ ಮಾಡಬೇಕಾದ್ದು ಎಲ್ಲಾ ಮಾಡಾಗಿದೆ,ಮೊದಲು ಗೊರಕೆಯ ಪ್ಲಾಸ್ಟರ್ ಹಾಕಿದೆ, ಅವನ ಮೂಗಿಗೆ, ಬಾಯಿಗೆ ತಲೆಗೆ ಪ್ಲಾಸ್ಟರ್, ಟವೆಲ್ ಎಲ್ಲ ಕಟ್ಟಿ ಆಯಿತು, ಹತ್ತಿ ಇಟ್ಟು ಆಯಿತು 😔, ಎಲ್ಲಾ ದೇವರಿಗೆ ಹರಕೆ ಆಯಿತು, ಊರಲ್ಲಿದ್ದ ಎಲ್ಲಾ ನಾಟಿ ಔಷದ ಆಯಿತು🥱, ಇನ್ನು ನನ್ನಿಂದ ಸಾಧ್ಯವಿಲ್ಲ ರಾತ್ರಿ ನಿದ್ದೆ ಇಲ್ಲದೇ ಹುಚ್ಚಿಯಂತಾಗಿದ್ದೇನೆ ದಯವಿಟ್ಟು ಅವನಿಂದ ಮುಕ್ತಿ ದೊರಕಿಸಿ ಸ್ವಾಮಿ ಆಕೆ ಗೋಗರೆದು ಕೇಳಿಕಕೊಂಡಿದ್ದಳು..🥱🥱*
*ನ್ಯಾಯಾದೀಶರು ಕುಟುಂಬ ವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದರು, ತಂದೆ ಕೋರ್ಟ್ ನ ಇನ್ನೊಂದು ಕಟಕಟೆ ಯಲ್ಲಿ ನಿಂತಿದ್ದರೆ.. ಅಲ್ಲೇ ಬೆಂಚ್ ಅಲ್ಲಿ ಕುಳಿತ 9 ವರ್ಷದ ಹಾಗು 6 ವರ್ಷದ ಹೆಣ್ಣುಮಕ್ಕಳಿ ಬ್ಬರು ತಂದೆ ಯ ಮುಖವನ್ನೇ ಸಪ್ಪೆ ಮೊರೆ ಹಾಕಿ ನೋಡುತಿದ್ದರು😔.. ತಂದೆಯೂ ಅದೇ ಮಕ್ಕಳನ್ನು ನೋಡುತಿದ್ದ ಮಕ್ಕಳ ಕಣ್ಣುಗಳು ಅದಾಗಲೇ ಮಂಜಾಗಿದ್ದವು.😔😔*
*ನ್ಯಾಯಾದೀಶ ರು ಹೇಳಿದರು ಆ ಮಹಿಳೆಗೆ...."ಗಂಡನ ಮೂಗಿಗೆ ಪ್ಲಾಸ್ಟರ್ ಹಾಕಿದಿರಿ, ಹತ್ತಿ ಇಟ್ಟಿರಿ, ಬಾಯಿಗೆ ಪ್ಲಾಸ್ಟರ್ ಹಾಕಿದಿರಿ, ಟವೆಲ್ ಸುತ್ತಿದಿರಿ, ಇದೆಲ್ಲ ಓಕೆ ಅಮ್ಮ ಆ ಪುಣ್ಯಾತ್ಮ ನಿಮ್ಮೆಲ್ಲ ಟಾರ್ಚರ್ ಅನ್ನು ಸಹಿಸಿ ಕೊಂಡ😔. ಆದರೆ ಅದೇ ಹತ್ತಿಯನ್ನು, ಟವೆಲ್ ಅನ್ನು ನಿಮ್ಮ ಕಿವಿಗೆ ಸುತ್ತಿ ಮಲಗ ಬಹುದಿತ್ತಲ್ಲ ಯಾಕೆ ಹಾಗೇ ಮಾಡಿಲ್ಲ?... ಎಂದಾಗ ಮಹಿಳೆ ಮೌನ ವಾಗಿದ್ದಳು...👌🥱*
*ಮತ್ತೆ ನ್ಯಾಯಾದೀಶರು ಹೇಳಿದರು.. "ನೋಡಮ್ಮ..ಮೊದಲು ನಾವು ನಮ್ಮನ್ನು ಬದಲಾಯಿಸಿ ಕೊಳ್ಳಲು ಪ್ರಯತ್ನಿಸಬೇಕು, ಆಮೇಲೆ ಬೇರೆಯವರನ್ನು ಬದಲಾಯಿಸೋಣ, ಇದು ನೆನಪಿರಲಿ👌👌".. ಎನ್ನುತ್ತಾ ಡೈವೋರ್ಸ್ ಪ್ರಕರಣ ವನ್ನು ಅಲ್ಲಿಗೆ ವಜಾ ಗೊಳಿಸಿದ್ದರು..👌👌*
*ಮಹಿಳೆಯ ಮುಖ ಚಿಕ್ಕದಾಗಿತ್ತು, ಗಂಡ ಮಕ್ಕಳ ಮುಖ ಅರಳಿತ್ತು, ಹೆಣ್ಣುಮಕ್ಕಳಂತು ಖುಷಿ ಇಂದ ಓಡೋಡಿ ಬಂದು ಅಪ್ಪನನ್ನು ತಬ್ಬಿಕೊಂಡರು... ಅಪ್ಪ ಮಕ್ಕಳ ಕಣ್ಣುಗಳು ಅದಾಗಲೇ ಒದ್ದೆ ಯಾಗಿದ್ದವು 😔😔😔.*
*ಅದೆಷ್ಟು ಅದ್ಭುತ ಸತ್ಯ ನೋಡಿ.. ನಾವು ಅವ ಸರಿ ಇಲ್ಲ, ಇವ ಸರಿ ಇಲ್ಲ, ಸಮಾಜ ಸರಿ ಇಲ್ಲ, ಕುಟುಂಬ ಸರಿ ಇಲ್ಲ ಎಂದು ಬೇರೆಯವರ ತಪ್ಪನ್ನಷ್ಟೇ ಹುಡುಕುತ್ತೇವೆಯೇ ಹೊರತು, ನಮ್ಮ ತಪ್ಪನ್ನು ಮರೆತಿರುತ್ತೇವೆ. ಯಾಕೆ ನಾವು ಬದಲಾಗಬಾರದು?, ಇಂದೇ ಪ್ರಯತ್ನಿಸೋಣ ಬದಲಾಗಲು.. ಮತ್ತೆ ಮತ್ತೆ ನಮ್ಮನ್ನು ನಾವೇ ಪ್ರಶ್ನಿಸೋಣ,*
ವಂದನೆಗಳೊಂದಿಗೆ.
No comments:
Post a Comment
welcome to dgnsgreenworld Family