www.dgnsgreenworld.blogspot.com

Sunday, June 4, 2023

*ಅಂಗಡಿಯಲ್ಲಿ ದೇವರು ಸಿಗಬಹುದೇ?*

*ಅಂಗಡಿಯಲ್ಲಿ ದೇವರು ಸಿಗಬಹುದೇ?*

     *ಐದು ವರ್ಷದ ಹುಡುಗನೊಬ್ಬ ಕೈಯಲ್ಲಿ ಒಂದು  ರೂಪಾಯಿ ಹಿಡಿದುಕೊಂಡು ಕಿರಾಣಿ ಅಂಗಡಿಗೆ ಹೋಗಿ ನಿಂತ.*
*ಅಂಗಡಿಯವನು  ಹುಡುಗನನ್ನು ಕೇಳಿದ  "ಮಗು ನಿನಗೆ ಏನು ಬೇಕು?" ಹುಡುಗ ಅಂಗಡಿಯವನನ್ನು "ನಿಮ್ಮ ಅಂಗಡಿಯಲ್ಲಿ ದೇವರು ಸಿಗಬಹುದೇ?"*
     *ಇದನ್ನು ಕೇಳಿದ ಅಂಗಡಿಯವನು ಕೋಪಗೊಂಡು ಹುಡುಗನನ್ನು ಜೋರಾಗಿ ಕೂಗಿ ಬೈದು, ಆ ಹುಡುಗನನ್ನು ಅಂಗಡಿಯಿಂದ ಹೊರಗೆ ಓಡಿಸಿದನು.*
    *ಹುಡುಗ ಹೀಗೇ ಸುಮಾರು 30-40 ಅಂಗಡಿಗಳನ್ನು ಸುತ್ತಿ ತುಂಬಾ ಪ್ರಯತ್ನ ಮಾಡಿದನು.*

    *ಪ್ರತಿ ಅಂಗಡಿಗೆ ಹೋಗಿ, "ನಿಮ್ಮ ಅಂಗಡಿಯಲ್ಲಿ ದೇವರು ಸಿಗಬಹುದೇ?" ಎಂದು ಕೇಳುತ್ತಿದ್ದ.*
*ಒಂದು ಅಂಗಡಿಯಲ್ಲಿ ಒಬ್ಬ ತುಂಬಾ ವಯಸ್ಸಾದ ಅಜ್ಜ ಕೂತಿದ್ದ, ಅವನನ್ನು ನೋಡಿ ಈ ಪುಟ್ಟ ಹುಡುಗ ಕೇಳಿದ, "ಅಜ್ಜಾ , ನಿನ್ನ ಅಂಗಡಿಯಲ್ಲಿ ದೇವರು ಸಿಗುತ್ತಾನೆಯೇ ?".*
*"ನಿನ್ನ ಬಳಿ ಎಷ್ಟು ಹಣವಿದೆ" ಎಂದು ಆ ಅಜ್ಜ ಮಗುವನ್ನು ಕೇಳಿದರು. "ನನ್ನ ಬಳಿ ಒಂದು ರೂಪಾಯಿ ಇದೆ" ಎಂದು ಹುಡುಗ  ಹೇಳಿದ. ಮಗುವನ್ನು ಹತ್ತಿರಕ್ಕೆ ಕರೆದು ಕೇಳಿದರು, "ದೇವರು ನಿನಗೆ ಏಕೆ ಬೇಕು ಮಗು? ದೇವರನ್ನು ಖರೀದಿಸಿ ಏನು ಮಾಡುತ್ತೀ?"*

*ಪ್ರಶ್ನೆ ಕೇಳಿದ ನಂತರ ಮಗುವಿಗೆ ತುಂಬಾ ಸಂತೋಷವಾಯಿತು. ಈ ರೀತಿಯಲ್ಲಿ ಕೇಳುತ್ತಿದ್ದಾರೆಂದರೆ, ಈ ಅಜ್ಜನವರ ಅಂಗಡಿಯಲ್ಲಿ ಖಂಡಿತವಾಗಿಯೂ ದೇವರು ಇದ್ದಾನೆ ಎಂದು ತಿಳಿದುಕೊಂಡು, ಆ ಅಜ್ಜನಿಗೆ ಹೇಳುತ್ತಾನೆ, "ನನ್ನ ತಾಯಿಯನ್ನು ಬಿಟ್ಟು ನನಗೆ ಈ ಜಗತ್ತಿನಲ್ಲಿ ಯಾರೂ ಇಲ್ಲ. ಪ್ರತಿದಿನ ನನ್ನ ತಾಯಿ ಕೆಲಸಕ್ಕೆ ಹೋಗುತ್ತಾರೆ ಮತ್ತು ನನಗೆ ಊಟ ತರುತ್ತಾರೆ. ಆದರೆ ನಿನ್ನೆಯಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಳೆ ನನ್ನ ತಾಯಿ ಸತ್ತರೆ ನನಗೆ ಯಾರು ಊಟ ಕೊಡುತ್ತಾರೆ? ದೇವರು ಮಾತ್ರ ನಿನ್ನ ತಾಯಿಯನ್ನು ರಕ್ಷಿಸಬಲ್ಲನು ಎಂದು ವೈದ್ಯರು ಹೇಳಿದರು.*
*ಆದ್ದರಿಂದ ನಾನು ದೇವರನ್ನು ಹುಡುಕುತ್ತಿದ್ದೇನೆ. ನಿಮ್ಮ ಅಂಗಡಿಗಳಲ್ಲಿ ದೇವರಿದ್ದಾನೆಯೇ?"*

*"ನಿನ್ನ ಬಳಿ ಎಷ್ಟು ಹಣವಿದೆ" ಎಂದು ಅಂಗಡಿಯವನು ಹುಡುಗನನ್ನು ಕೇಳಿದನು. "ಕೇವಲ ಒಂದು ರೂಪಾಯಿ ಅಜ್ಜಾ" ಎಂದ. "ಸರಿ, ಚಿಂತಿಸಬೇಡ.*
*ಒಂದು ರೂಪಾಯಿಯಲ್ಲೂ ದೇವರು ಸಂಧಿಸುತ್ತಾನೆ" ! ಒಂದು ರೂಪಾಯಿಯನ್ನು ತೆಗೆದುಕೊಂಡು ಒಂದು ಲೋಟ  ನೀರನ್ನು ಹುಡುಗನ ಕೈಗೆ ಕೊಟ್ಟು ಈ ನೀರನ್ನು ತೆಗೆದುಕೊಂಡು ನಿನ್ನ ತಾಯಿಗೆ ಕುಡಿಯಲು ಕೊಡು" ಎಂದನು.*

*ಮರುದಿನ ತಜ್ಞ ವೈದ್ಯರು ಆಸ್ಪತ್ರೆಗೆ ಬಂದು ತಾಯಿಗೆ ಶಸ್ತ್ರಚಿಕಿತ್ಸೆ ಮಾಡಿದರು. ಕೆಲವೇ ದಿನಗಳಲ್ಲಿ ಅವಳು ಗುಣಮುಖಳಾದಳು.*

*ಡಿಸ್ಚಾರ್ಜ್ ಆದ ದಿನ ಆಸ್ಪತ್ರೆಯ ಬಿಲ್ ನೋಡಿದ ಮಹಿಳೆಗೆ ತಲೆ ಸುತ್ತು! ಆದರೆ ವೈದ್ಯರು ಧೈರ್ಯ ತುಂಬಿದರು. ಚಿಂತಿಸಬೇಡ ವಯಸ್ಸಾದ ವ್ಯಕ್ತಿಯೊಬ್ಬರು ಇಷ್ಟೆಲ್ಲ ಬಿಲ್ ಪಾವತಿಸಿ ಅದರ ಜೊತೆಗೆ ಒಂದು ಚೀಟಿ ಕೊಟ್ಟಿದ್ದಾರೆ.*
     *ಮಹಿಳೆ  ಪತ್ರವನ್ನು ತೆರೆದು ಓದಿದಾಗ, "ನನಗೆ ಧನ್ಯವಾದಗಳನ್ನು ಹೇಳಬೇಡಿ, ನಿಮ್ಮನ್ನು ರಕ್ಷಿಸಿದ್ದು ಭಗವಂತ. ನಾನು ಕೇವಲ ನಿಮಿತ್ತ ಮಾತ್ರ ಅಷ್ಟೇ. ನೀವು  ಧನ್ಯವಾದಗಳನ್ನು ಹೇಳಬೇಕೆಂದರೆ, ಒಂದು ರೂಪಾಯಿಯೊಂದಿಗೆ ದೇವರನ್ನು ಹುಡುಕುತ್ತಾ ತಿರುಗುತ್ತಿದ್ದ ನಿನ್ನ ಪುಟ್ಟ ಮುಗ್ಧ ಮಗುವಿಗೆ ಹೇಳಿ" ಎಂದಿತ್ತು.*
 
*ಇದನ್ನೇ ನಂಬಿಕೆ ಎಂದು ಕರೆಯುತ್ತಾರೆ...*
*ದೇವರನ್ನು ಕಾಣಲು ಕೋಟ್ಯಂತರ ರೂಪಾಯಿ ದಾನ ಮಾಡಬೇಕಿಲ್ಲ! ನಂಬಿಕೆ, ಒಳ್ಳೆಯ ಭಾವನೆ ಇದ್ದರೆ ಒಂದು ರೂಪಾಯಿಯಲ್ಲೂ ದೇವರನ್ನು ಕಾಣಬಹುದು.*

*ಮರಾಠಿಯಲ್ಲಿ ಓದಿದ್ದು📚📙*

*ಅರ್ಥ:*
*ಭಕ್ತಿ ಸರಳ ಮತ್ತು ನಿಷ್ಕಪಟವಾಗಿರಲಿ. ಕೇವಲ ಹೃದಯದಿಂದ ನಾಮವನ್ನು ಜಪಿಸುವುದರಿಂದ, ದೇವರು ಯಾವುದಾದರೂ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ.*
ವಂದನೆಗಳೊಂದಿಗೆ.

No comments:

Post a Comment

welcome to dgnsgreenworld Family

ಮನಸೇ ಎಲ್ಲವೂ.

The mind is everything. What you think you become. ಮನಸ್ಸೇ ಎಲ್ಲವೂ. ನೀವು ಏನಾಗುತ್ತೀರಿ ಎಂದು ಯೋಚಿಸುತ್ತೀರೋ ಅದುವೇ ಆಗುತ್ತೀರಿ. ವಂದನೆಗಳೊಂದಿಗೆ.  Very g...

Green World