ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ:~
ಒಂದು ದಿನ ಕ್ಲಾಸ್ ನಲ್ಲಿ
ಪ್ರೊಫೆಸರ್ ಸಡನ್ ಆಗಿ
ಒಂದು ಪರೀಕ್ಷೆ ಮಾಡಲು
ತಯಾರಾದರು.
ಕ್ಲಾಸ್ ಅಲ್ಲಿ ಇದ್ದ ಎಲ್ಲ ವಿಧ್ಯಾರ್ಥಿಗಳು ಶಾಕ್!! ಆದರು.
ಹೆದರಲು ಶುರು ಮಾಡಿದರು.
ಪ್ರೊಫೆಸರ್ ಎಕ್ಜಾಮ್ ಪೇಪರ್ ಕೊಟ್ಟರು. ಎಲ್ಲರಿಗೂ ಕೊಟ್ಟ ನಂತರ ಕೊಟ್ಟ ಪೇಪರ್
ತಿರುಗಿಸಲು ಹೇಳಿದರು.
ಎಲ್ಲ ಮಕ್ಕಳು ತಿರುಗಿಸಿ ನೋಡಿದಾಗ ಅಲ್ಲಿ ಯಾವುದೇ ಪ್ರಶ್ನೆ
ಇರಲಿಲ್ಲ
ಬದಲಾಗಿ ಬಿಳಿ ಕಾಗದದ ಮದ್ಯದಲ್ಲಿ ಸಣ್ಣ ಕಪ್ಪು ಚುಕ್ಕೆ ಇತ್ತು
ಎಲ್ಲ ವಿಧ್ಯಾರ್ಥಿಗಳ ಮುಖದಲ್ಲಿ ಪ್ರಶ್ನೆಗಳು ಮೂಡಿದವು.❓❓ .
ಪ್ರೊಫೆಸರ್ ಅವರನ್ನು ನೋಡಿ
ಹೀಗೆ ಹೇಳಿದರು,
" ನೀವು ಆ ಪೇಪರ್ ಅಲ್ಲಿ ಏನನ್ನು ಕಾಣುತ್ತಿದ್ದಿರಿ ಅದರ ಬಗ್ಗೆ ಬರೆಯಿರಿ".📝
ವಿದ್ಯಾರ್ಥಿಗಳು ಏನು ಬರೆಯಬೇಕಂತ ತಿಳಿಯದೆ ಕನ್ಫ್ಯೂಸ್ ಆದರು.
ಆದರೆ ಕ್ಲಾಸ್ ಕೊನೆಯಲ್ಲಿ,
ಪ್ರೊಫೆಸರ್
ವಿಧ್ಯಾರ್ಥಿಗಳು ಬರೆದ ಪೇಪರ್ ಗಳನ್ನು ತೆಗೆದು
ಓದಲು ಶುರು ಮಾಡಿದರು.
ಎಲ್ಲ ವಿಧ್ಯಾರ್ಥಿಗಳು ಆ ಬಿಳಿ ಕಾಗದದ ಮಧ್ಯ ಇರೋ ಆ ಕಪ್ಪು ಚುಕ್ಕೆ ಬಗ್ಗೆ ಬರೆದಿದ್ದರು.
ಎಲ್ಲರೂ ಆ ಕಪ್ಪು ಚುಕ್ಕೆ ಬಗ್ಗೆನೇ ಏನೇನೊ ಬರೆದು ವಿವರಿಸಿದ್ದರು. ಪ್ರೊಫೆಸರ್ ಎಲ್ಲರ ಉತ್ತರವನ್ನು ಓದಿ ಮುಗಿಸಿದರು . ಕ್ಲಾಸ್
ಸೈಲೆಂಟ್ ಆಗಿತ್ತು .
ಪ್ರೊಫೆಸರ್ ಮಾತನಾಡಲು
ಶುರು ಮಾಡಿದರು.
"ನಾನು ನೀವು ಬರೆದ ಉತ್ತರವನ್ನು ನೋಡಿ ಯಾವುದೇ ಗ್ರೇಡ್ ಕೊಡಲು ಹೋಗೋದಿಲ್ಲ. ನಾನು ನಿಮಗೆ ಯೋಚಿಸಲು ಬಿಡುತ್ತೇನೆ. ನೀವೆಲ್ಲರೂ ಆ ಬಿಳಿ ಕಾಗದದ ಮೇಲಿರೋ ಕಪ್ಪು ಚುಕ್ಕೆ ಬಗ್ಗೆ ಮಾತ್ರ ಬರೆದಿದ್ದೀರಿ.
ಯಾಕೆ ಆ ಕಪ್ಪು ಚುಕ್ಕೆ ಬಿಟ್ಟು ಬಿಳಿ ಭಾಗದ ಬಗ್ಗೆ ಬರೆಯಲಿಲ್ಲ?
ನೀವೆಲ್ಲರೂ ನಿಮ್ಮ ಮನಸನ್ನು ಆ ಕಪ್ಪು ಚುಕ್ಕೆ ಕಡೆಗೆ ಗಮನಹರಿಸಿದ್ದಿರಿ ಆದ್ದರಿಂದ
ನಿಮಗೆ ಬಿಳಿ ಭಾಗ ಕಾಣಲೇ ಇಲ್ಲ.
ಇದೆ ತರಹ ನಮ್ಮ
ಜೀವನದಲ್ಲೂ ನಡೆಯುತ್ತದೆ.
ನಮ್ಮಲ್ಲಿ ಬಿಳಿ ಕಾಗದದ ಭಾಗವನ್ನು ನೋಡಿ ಖುಷಿಪಡಲು ಅವಕಾಶ ಇದ್ದರೂ ನಾವು ನಮ್ಮ ಗಮನವನ್ನು ನಮ್ಮ ಜೀವನ ಅನ್ನೋ ಬಿಳಿ ಕಾಗದದ ನಡುವೆ ಇರೋ ಒಂದು ಕಪ್ಪು ಚುಕ್ಕೆ ಬಗ್ಗೆನೇ ಹೆಚ್ಚು ಗಮನ ಕೊಡುತ್ತೇವೆ.
ನಮ್ಮ ಜೀವನ ಅನ್ನೋದು ದೇವರ ಉಡುಗೊರೆ, ಪ್ರೀತಿ ಮತ್ತು ಕಾಳಜಿ ಜೊತೆಗೆ ಯಾವಾಗಲೂ ಸಂಬ್ರಮಿಸಲು ಅವಕಾಶ ಇದೆ.
ನಿಸರ್ಗ ದಿನದಿಂದ ದಿನಕ್ಕೆ ಬದಲಾಗುತ್ತೆ, ಸ್ನೇಹಿತರ ಜೊತೆ,
ಕೆಲಸದ ಜೊತೆ,
ಕುಟುಂಬದ ಜೊತೆ
ಸಂತೋಷದಿಂದ ಇರಬಹುದು.
ಆದರೆ ನಾವು ಬರಿ ನಮ್ಮ ಜೀವನದಲ್ಲಿ ಇರೋ ಕೊರತೆ ಬಗ್ಗೆ ತಲೆಕೆಡಿಸಿ ಕೊಳ್ಳುತೇವೆ,
ಇರೋದರ ಬಗ್ಗೆ ಯೋಚಿಸೋದನ್ನೇ ಮರೆಯುತ್ತೇವೆ.
ಕೆಲವರು ಆರೋಗ್ಯದ ಬಗ್ಗೆ,
ಕೆಲವರು ಹಣದ ಬಗ್ಗೆ,
ಸಂಭಂದಗಳ ಬಗ್ಗೆ,
ಸ್ನೇಹಿತರ ಬಗ್ಗೆ ನಿರಾಶೆ
ಮುಂತಾದವುಗಳ ಬಗ್ಗೆನೇ ತಲೆ
ಕೆಡಿಸಿಕೊಳ್ಳುತ್ತೇವೆ.
ಆದರೆ ಕಪ್ಪು ಚುಕ್ಕೆ ಅನ್ನೋದು
ಒಂದು ಸಣ್ಣ ಭಾಗ
ನಮ್ಮ
ಜೀವನದಲ್ಲಿ ಇರೋದೆಲ್ಲದರ ಮಧ್ಯದ್ದು .
ಆದರೆ ಆ ಸಣ್ಣ ನಕಾರತ್ಮಕತೆ ನಮ್ಮ ತಲೆಯನ್ನು
ಹಾಳುಮಾಡುತ್ತದೆ.
ನಿಮ್ಮ ಕಣ್ಣನ್ನು ಆ ನೆಗೆಟಿವ್ ಅನ್ನೋ ಕಪ್ಪು ಚುಕ್ಕೆ ಇಂದ ತೆಗೆದುಬಿಡಿ. ನಿಮ್ಮಲಿರುವುದರ ಬಗ್ಗೆ ಯೋಚಿಸಿ
ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಿರಿ,
ಜೀವನದಲ್ಲಿ ಸಿಗೋ ಎಲ್ಲವನ್ನು
ಸಕಾರಾತ್ಮಕವಾಗಿ ಸ್ವೀಕರಿಸಿ.!!
ಸವೇ೯ ಜನ ಸುಖಿನೊಭವಂತು..
No comments:
Post a Comment
welcome to dgnsgreenworld Family