*ಹನ್ನೆರಡು ನಿಯಮಗಳು*
1. *ಜಗದ ನಿಯಮ*
ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಬರುತ್ತದೆ. ನಾವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ.
2. *ಸೃಷ್ಟಿಯ ನಿಯಮ*
ಜಗತ್ತಿನಲ್ಲಿ ತಾನಾಗಿ ತಾನೇ ಯಶಸ್ಸು ಸಿಗುವುದಿಲ್ಲ ಅಥವಾ ಬರುವುದಿಲ್ಲ, ಪ್ರತಿಯೊಂದು ಯಶಸ್ಸು ನಮ್ಮ ಪರಿಶ್ರಮದಿಂದಲೇ ಸಿಗುವುದು.
3. *ನಮ್ರತೆಯ ನಿಯಮ*
ಮೊದಲು ನಾವು ನಮ್ಮ ತಪ್ಪನ್ನು ತಿದ್ದಿಕೊಂಡರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ.
4. *ಅಭಿವೃದ್ಧಿಯ ನಿಯಮ*
ನಮ್ಮನ್ನು ನಾವು ಬದಲಾಯಿಸಿಕೊಂಡರೆ ಮಾತ್ರ ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಸಾಗುತ್ತದೆ. ಶ್ರಮ ಪಟ್ಟು ಕೆಲಸ ಮಾಡಬೇಕು, ಸೋಮಾರಿಗಳಾಗಬಾರದು.
5. *ಜವಾಬ್ದಾರಿಯ ನಿಯಮ*
ನಮ್ಮ ಜೀವನಕ್ಕೆ ನಾವೇ ಹೊಣೆ, ಬೇರೆಯವರನ್ನು ದೂಷಿಸುವುದು ಸರಿಯಲ್ಲ.
6. *ಸಂಪರ್ಕ ನಿಯಮ*
ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಸದಾ ಸಂಪರ್ಕದಲ್ಲಿರುತ್ತದೆ. ನಮ್ಮ ನಿನ್ನೆಯ ಕರ್ಮಗಳು ಇಂದು, ಮತ್ತು ಇಂದಿನ ಕರ್ಮಗಳು ನಾಳೆ ಅನುಭವಿಸುತ್ತಿರುತ್ತೇವೆ.
7. *ಗಮನದ ನಿಯಮ*
ನಾವು ಎರಡೆರೆಡು ಕೆಲಸಗಳ ಮೇಲೆ ಗಮನ ವಹಿಸುವುದು ವ್ಯರ್ಥ. ಮಾಡುವ ಒಂದು ಕೆಲಸ ಅಥವಾ ಕಾರ್ಯದಲ್ಲಿ ಗಮನವಿರಲಿ.
8. *ಅತಿಥ್ಯದ ನಿಯಮ*
ನಮ್ಮ ನೆಡವಳಿಕೆ, ನಮ್ಮ ಆಚಾರ, ವಿಚಾರ ಹಾಗೂ ಚಿಂತನೆಗೆ ಕನ್ನಡಿ ಇದ್ದಂತೆ.
9. *ಇಂದು ಮತ್ತು ಈಗಿನ ನಿಯಮ*
ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು ಭೂತ -ಭವಿಷ್ಯದ ಬಗ್ಗೆ ಅಲ್ಲ.
10. *ಪರಿವರ್ತನೆಯ ನಿಯಮ*
ಹಿಂದಿನ ಕರ್ಮಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ನಾವು ಪರಿವರ್ತನೆಯಾಗಲು ಪ್ರಯತ್ನಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.
11. *ತಾಳ್ಮೆಯ ನಿಯಮ*
ತಾಳ್ಮೆ, ಸಹನೆ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಇವು ಜೀವನದಲ್ಲಿ ಬಹಳ ಮುಖ್ಯ.
12. *ಯಶಸ್ಸಿನ ನಿಯಮ*
ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿ ಕಾಣುತ್ತದೆ. ನಾವು ಜೀವನದಲ್ಲಿ ಯಶಸ್ಸನ್ನು ಒಮ್ಮೆ ಗಳಿಸಲು ಪ್ರಾರಂಭಿಸಿದರೆ ನಮ್ಮ ಪರಿಶ್ರಮ ಲೆಕ್ಕಕ್ಕೆ ಬರುವುದಿಲ್ಲ. ಆ ಯಶಸ್ಸಿನ ಖುಷಿಯ ಮುಂದೆ ಎಲ್ಲಾ ಪರಿಶ್ರಮವೂ, ಅದರ ನೋವು, ನಾವು ಪಟ್ಟ ಕಷ್ಟ ಎಲ್ಲವೂ ಮರೆತು ಹೋಗುತ್ತದೆ.
No comments:
Post a Comment
welcome to dgnsgreenworld Family