www.dgnsgreenworld.blogspot.com

Monday, July 22, 2019

ಸದಾಪುಷ್ಪದ ಔಷಧೀಯ ಉಪಯೋಗಗಳು

SAVE NATURE, HEALTHY, WEALTHY & WISE. dgnsgreenworld FAMILY.

ಔಷಧೀಯ ಉಪಯೋಗಗಳು

ಸದಾಪುಷ್ಪವು ೬೬ ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಗಳಲ್ಲಿ ದೊರಕುವ ವಿನ್‍ಕ್ರಿಸ್ಟಿನ್ ಮತ್ತು ವಿನ್‍ಬ್ಲಾಸ್ಟಿನ್‍‍ನನ್ನು ರಕ್ತದ ಕ್ಯಾನ್ಸರ್ನ ನಿವಾರಣೆಯಲ್ಲಿ ಬಳಸುತ್ತಾರೆ. ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುತ್ತಾರೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಬಳಸುತ್ತಾರೆ.


ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ

ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಅಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಕಿ ಕಾಯಿಸಿ ಆರಿಸಿ ಕುಡಿಯುವುದು. 3ಟೀ ಚಮಚ ದಿವಸಕ್ಕೆ 2ವೇಳೆ ಬೆಳಿಗ್ಗೆ ಮತ್ತು ಸಾಯಂಕಾಲ.     ಇಡೀ ಮಾನವಕೋಟಿಯನ್ನು ರಕ್ತದ ಕ್ಯಾನ್ಸರ್‍ನಿಂದ ಉಳಿಸುವ ಸಾಮಾಥ್ಯ ಈ ಗಿಡ ಕ್ಕಿದೆ ಅಂದರೆ ಅತಿಶಯೋಕ್ತಿಯಾಗಲಾರದು.

ಸಕ್ಕರೆ ಕಾಯಿಲೆಯಲ್ಲಿ

ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗಿದು ತಿನ್ನುವುದು. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದು.

ಅಧಿಕ ರಕ್ತ ಒತ್ತಡದಲ್ಲಿ

ನಿತ್ಯಪುಷ್ಟಿ ಎಲೆಗಳನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವುದು.

ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ

ನಿತ್ಯಪುಷ್ಟಿಯ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಗಿ ರಸ ತೆಗೆಯುವುದು ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.

ಬೇಧಿ ಮತ್ತು ರಕ್ತ ಭೇಧಿಯಲ್ಲಿ

10ಗ್ರಾಂ ನಿತ್ಯಪುಷ್ಟೀಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು .ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದುತಿಳಿದು ಬಂದಿದೆ.

ಗಾಯಳುಗಳಿಂದ ರಕ್ತಸ್ರಾವ

ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದು.ಗಾಯಗಳು ವಾಸಿಯಾಗುವವು

ವಂದನೆಗಳೊಂದಿಗೆ
Dgnsgreenworld

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World