SAVE NATURE, HEALTHY, WEALTHY & WISE. dgnsgreenworld FAMILY.
pumpkin
1. ಈ ತರಕಾರಿಯಲ್ಲಿ ಎ ಜೀವಸತ್ವ ಹೇರಳವಾಗಿರುವುದರಿಂದ ಕಣ್ಣುಗಳ ದೃಷ್ಟಿ ತೀಕ್ಷ್ಣ ಗೊಳಿಸುತ್ತದೆ
2. ಮೂಲವ್ಯಾಧಿ ಪೀಡಿತರಿಗೂ ಈ ತರಕಾರಿಯ ಸೇವನೆ ತುಂಬಾ ಒಳ್ಳೆಯದು.
3. ಇದರ ಬೀಜವನ್ನು ನುಣ್ಣಗೆ ಅರೆದು ಹಸುವಿನ ಹಾಲು ಮತ್ತು ಜೇನುತುಪ್ಪಗಳೊಂದಿಗೆ ಬೆರೆಸಿ ಸೇವಿಸುತ್ತಿದ್ದರೆ ಶರೀರದ ತೂಕ ಹೆಚ್ಚುತ್ತದೆ.
4. ಸಿಹಿಗುಂಬಳದಿಂದ ಮಾಡಿದ ಆಹಾರಗಳ ಸೇವನೆಯಿಂದ ಜ್ಞಾಪಕಶಕ್ತಿಯೂ ಉತ್ತಮಗೊಳ್ಳುತ್ತದೆ.
5. ಇದರ ಬೀಜಗಳಲ್ಲಿ ಜಂತುನಾಶಕ ಗುಣಗಳಿವೆ. ಸುಟ್ಟ ಗಾಯ, ಊತ ಮುಂತಾದ ಸಮಸ್ಯೆಗಳಿಗೆ ಇದರ ಎಲೆಗಳನ್ನು ಬಿಸಿ ಮಾಡಿ ಹೊದಿಸಿ ಕಟ್ಟಿದರೆ ಗಾಯ ಉಪಶಮನವಾಗುತ್ತದೆ.
6. ಸಿಹಿಗುಂಬಳ ಪೌಷ್ಟಿಕ ತರಕಾರಿ. ಅದರಲ್ಲಿ ಅಧಿಕ ಪ್ರಮಾಣದ ಶರ್ಕರ ಪಿಷ್ಟ, ಪ್ರೋಟೀನ್, ಖನಿಜಾಂಶ ಹಾಗೂ ವಿವಿಧ ಜೀವಸತ್ವಗಳು ಇರುತ್ತವೆ. ಇದರ ಎಲೆ ಮತ್ತು ಹೂಗಳೂ ಪೌಷ್ಟಿಕವಾಗಿರುತ್ತವೆ.
7. 100 ಗ್ರಾಂ ಸಿಹಿಗುಂಬಳದಲ್ಲಿ ತೇವಾಂಶ 92.8 ಗ್ರಾಂ, ಶರ್ಕರ ಪಿಷ್ಟ-4.6 ಗ್ರಾಂ, ಪ್ರೋಟೀನ್-1.4 ಗ್ರಾಂ, ಜಿಡ್ಡು-0.1 ಗ್ರಾಂ, ಖನಿಜಾಂಶ 0.6 ಗ್ರಾಂ ಇವೆ.
8. ಇದೇ ರೀತಿ ರಂಜಕ 30 ಮಿ.ಗ್ರಾಂ, ಕ್ಯಾಲ್ಷಿಯಂ 10 ಮಿ.ಗ್ರಾಂ, ಕಬ್ಬಿಣ-2.7 ಮಿ.ಗ್ರಾಂ ಇವೆ.
ವಂದನೆಗಳೊಂದಿಗೆ
dgnsgreenworld
No comments:
Post a Comment
welcome to dgnsgreenworld Family