www.dgnsgreenworld.blogspot.com

Wednesday, July 17, 2019

ಅತ್ಯುತ್ತಮ ಆರೋಗ್ಯಕ್ಕಾಗಿ ಬಿಲ್ವಪತ್ರೆ ಮರ

SAVE NATURE, HEALTHY, WEALTHY & WISE. dgnsgreenworld FAMILY.


ಬಿಲ್ವಪತ್ರೆಯು ಶಿವನಿಗೆ ಪ್ರಿಯವಾದುದು ಮತ್ತು ಶಿವಪೂಜೆಗೆ ಅತ್ಯಗತ್ಯವಾದದ್ದು. ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಬಿಲ್ವ ಎಂಬ ಪದಕ್ಕೆ ಎಲ್ಲ ನೋವನ್ನು ನಿವಾರಿಸುವ ಎಂಬವೂ ಅರ್ಥವಿದೆ. ಅದರಂತೆಯೇ ಈ ಬಿಲ್ವಪತ್ರೆಯಿಂದ ಆಗುವ ಉಪಯೋಗಗಳು ಅನೇಕ. ಬಿಲ್ವವೃಕ್ಷದ ವಿವಿಧ ಭಾಗಗಳು ವಿವಿಧ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲಿ ನಾವು ಬಿಲ್ವಪತ್ರೆಯ ಗುಣಗಳನ್ನು ತಿಳಿಯೋಣ.
ಬಿಲ್ವದ ಎಲೆಯಲ್ಲಿನ ಲಾಕ್ಸೇಟಿವ್ ಅಂಶವು ಮಧುಮೇಹ ನಿಯಂತ್ರಣಕ್ಕೆ ಬಹು ಉಪಕಾರಿಯಾಗಿದೆ. ಬಿಲ್ವಪತ್ರೆಯು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುವುದರಿಂದ ಮಧುಮೇಹಿಗಳು ದಿನಕ್ಕೊಂದು ಎಲೆಯನ್ನು ಸೇವಿಸಬಹುದು. ಬಿಲ್ವಪತ್ರೆಯಲ್ಲಿನ ಒಳ್ಳೆಯ ಅಂಶವು ಕಾಲರಾ ಹಾಗೂ ಭೇದಿಯನ್ನು ಗುಣಪಡಿಸುವುದರಲ್ಲಿ ಸಹಾಯಕಾರಿ. ಅತಿಸಾರ, ಜ್ವರ, ಮೂತ್ರಸಂಬಂಧಿತ ರೋಗಗಳಿಗೆ ಬಿಲ್ವಪತ್ರೆ ಸಿದ್ಧೌಷಧ. ಈ ಸಮಸ್ಯೆಗಳಿಂದ ಬಳಲುತ್ತಿರುವವರು ನಿಯತವಾಗಿ ಬಿಲ್ವದ ಎಲೆಯ ಕಷಾಯಸೇವನೆ ಮಾಡಬೇಕು. ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಬಿಲ್ವಪತ್ರೆ ಉತ್ತಮ ಔಷಧ.ಬಿಲ್ವಪತ್ರೆಯು ಕೂದಲಿನ ಆರೋಗ್ಯಕ್ಕೂ ಸಹಾಯಕಾರಿ. ತಲೆಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಬೇಕು. ಇದರಿಂದ ತಲೆಹೊಟ್ಟು ಮತ್ತು ಅಕಾಲ ನರೆಕೂದಲು ನಿವಾರಣೆಯಾಗುತ್ತದೆ. ದಿನಕ್ಕೆ ಎರಡರಿಂದ ಮೂರು ಚಮಚ ಬಿಲ್ವಪತ್ರೆಯ ರಸ ಸೇವಿಸುವುದರಿಂದ ನಿಶ್ಶಕ್ತಿ ದೂರವಾಗುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಬಿಲ್ವಪತ್ರೆಯ ಜೊತೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಮಲಬದ್ಧತೆಯು ನಿವಾರಣೆಯಾಗುತ್ತದೆ. ಬಿಲ್ವಪತ್ರೆಯಲ್ಲಿನ ಆಂಟಿ ಫಂಗಲ್ ಮತ್ತು ಆಂಟಿ ವೈರಲ್ ಗುಣಗಳು ದೇಹದಲ್ಲಾಗುವ ಅನೇಕ ಇನ್​ಫೆಕ್ಷನ್​ಗಳನ್ನು ಗುಣಪಡಿಸುವುದರಲ್ಲಿ ಸಹಕಾರಿಯಾಗಿದೆ.
ವಂದನೆಗಳೊಂದಿಗೆ dgnsgreenworld

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World