www.dgnsgreenworld.blogspot.com

Wednesday, July 10, 2019

ಆರೋಗ್ಯದ ಸಮಸ್ಯೆಗೆ ಮುತ್ತುಗದ ಹೂವು ಅತ್ಯುತ್ತಮ ಔಷಧ

ಐದರಿಂದ ಎಂಟು ಮುತ್ತಗದ ಹೂವುಗಳನ್ನು ತಣ್ಣೀರಿನಲ್ಲಿ ರಾತ್ರಿ ಇಡೀ ನೆನೆಸಿ, ಬೆಳಗ್ಗೆ ಸೋಸಿ, ಆ ನೀರಿಗೆ ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ಮೂಗು ಸೋರುವಿಕೆ ಮತ್ತು ಗುಣವಾಗುತ್ತವೆ.
muttuga
ಆರೋಗ್ಯ ಸಮಸ್ಯೆಗೆ ಮುತ್ತಗ ಬೆಸ್ಟ್‌

-ಐದರಿಂದ ಎಂಟು ಮುತ್ತಗದ ಹೂವುಗಳನ್ನು ತಣ್ಣೀರಿನಲ್ಲಿ ರಾತ್ರಿ ಇಡೀ ನೆನೆಸಿ, ಬೆಳಗ್ಗೆ ಸೋಸಿ, ಆ ನೀರಿಗೆ ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ಮೂಗು ಸೋರುವಿಕೆ ಮತ್ತು ಗುಣವಾಗುತ್ತವೆ.

-ಹೊಟ್ಟೆ ಹುಳು ಹೋಗಲಾಡಿಸಲು ಮುತ್ತಗದ ಬೀಜದ ಪುಡಿಯನ್ನು ನೀರಲ್ಲಿ ಕಲಸಿ ಕುಡಿಯಬೇಕು.

-ಮುತ್ತಗದ ಎಲೆಯ ಕಷಾಯ ಕುಡಿದರೆ ಹೊಟ್ಟೆ ಉಬ್ಬರ, ಗ್ಯಾಸ್‌ ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತವೆ.

-ಪೈಲ್ಸ್‌ ಸಮಸ್ಯೆಯಿದ್ದರೆ ಮುತ್ತಗದ ಎಲೆಗಳನ್ನು ತುಪ್ಪದಲ್ಲಿ ಹುರಿದು ಮೊಸರಿನ ಕೆನೆ ಜೊತೆ ಸೇವಿಸಿದರೆ ಉತ್ತಮ ಪರಿಣಾಮ ಬೀರುವುದು.

-ಮಂಡಿ ನೋವಿದ್ದರೆ ಮುತ್ತಗದ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಮಂಡಿಗಳ ಮೇಲೆ ಪ್ಯಾಕ್‌ ಮಾಡಿದರೆ ನೋವು ಕಡಿಮೆಯಾಗುತ್ತದೆ.

-ದೇಹದ ಯಾವುದೇ ಭಾಗದಲ್ಲಿ ಊತವಿದ್ದರೆ ಮುತ್ತಗದ ಹೂವಿನ ಮಿಶ್ರಣ ಲೇಪಿಸಿದರೆ ಊತ ಕಡಿಮೆಯಾಗುತ್ತದೆ.

-ಮುತ್ತಗದ ಬೀಜದ ಪುಡಿಗೆ ನಿಂಬೆ ರಸ ಕಲಸಿ ಸ್ಕಿನ್‌ ಅಲರ್ಜಿಗೆ ಲೇಪಿಸಿದೆ ತುರಿಕೆ, ಕಡಿತ ನಿವಾರಣೆಯಾಗುತ್ತವೆ.

-ತಲೆಕೂದಲು ಹೆಚ್ಚಿಸಲು ಹಾಗೂ ದೇಹದ ಶಕ್ತಿ ಹೆಚ್ಚಿಸಲು ಬೆಟ್ಟದ ನೆಲ್ಲಿಕಾಯಿ ಪುಡಿ, ತುಪ್ಪ, ಸಕ್ಕರೆ ಮತ್ತು ಮುತ್ತಗದ ಬೀಜದ ಪುಡಿಯನ್ನು ಸಮಪ್ರಮಾಣದಲ್ಲಿ ಕಲಸಿ ರಾತ್ರಿ ಮಲಗುವ ಮುನ್ನ ಸೇವಿಸಿ.

-ಮುತ್ತಗದ ಬೀಜದ ಕಷಾಯವನ್ನು ಆಡಿನ ಹಾಲಿನ ಜೊತೆ ಊಟದ ನಂತರ ಕುಡಿದರೆ ಬೇಧಿ ನಿಲ್ಲುತ್ತದೆ.

-ಸರಿಯಾಗಿ ಮೂತ್ರ ವಿಸರ್ಜನೆ ಆಗದೆ ನೋವಿದ್ದರೆ ಮುತ್ತಗದ ಹೂವಿನ ಕಷಾಯಕ್ಕೆ ಸೈಂಧವ ಉಪ್ಪು ಸೇರಿಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಆರೋಗ್ಯ ಸಮಸ್ಯೆಗೆ ಮುತ್ತುಗದ ಹೂವು ಬಾಳ ಅತ್ಯುತ್ತಮ

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World