www.dgnsgreenworld.blogspot.com

Saturday, July 20, 2019

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹದ ಇತಿಹಾಸದ ಬಗ್ಗೆ ವಿವರ ನೋಡಿ

SAVE NATURE, HEALTHY, WEALTHY & WISE. dgnsgreenworld FAMILY.
ಮೈಸೂರು ನಗರದಿಂದ ಸುಮಾರು 8- 10 ಕಿ.ಮೀ. ಸುತ್ತಳತೆಯ ಅಂತರದಲ್ಲಿರುವವರು ಚಾಮುಂಡಿ ಬೆಟ್ಟವನ್ನು ಸುಲಭವಾಗಿ ವೀಕ್ಷಿಸಬಹುದು ಹಾಗೂ ಚಾಮುಂಡಾಂಬೆ ದೇವಿಯು ಈ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ ಸುಮಾರು 3,489 ಅಡಿಗಳ ಎತ್ತರದಲ್ಲಿದ್ದು ಮತ್ತು ಮೈಸೂರುವಿನಿಂದ 13 ಕಿ.ಮೀ ಗಳ ಅಂತರದಲ್ಲಿರುತ್ತದೆ. ಈ ದೇವಿ ದೇವಸ್ಥಾನವನ್ನು ಮಹಾರಾಜರ ಕುಟುಂಬದವರಿಗೆ ಮನೆ ದೇವರಾಗಿತ್ತು ಮತ್ತು ಮಹಿಷಾಸುರನನ್ನು ಸಂಹರಿಸಿದ ಕಾರಣದಿಂದ "ಮಹಿಷಾಸುರಮರ್ದಿನಿ" ಎಂಬ ನಾಮಾಂಕಿತದಲ್ಲಿ ಮನೆ ದೇವಿಯಂತೆ ನಿರ್ಮಿಸಲಾಗಿತ್ತು. ಚಾಮುಂಡೇಶ್ವರಿ ದೇವಿಯನ್ನು ದುರ್ಗಾ ದೇವಿ ಅವರಾವತಾರವೆಂದು, ಕಾಳೀದೇವಿ ಮತ್ತು ಚಾಮುಂಡಾಂಬೆ ಎಂಬ ಹೆಸರುಗಳಿಂದ ವರ್ಣಿಸಲಾಗುತ್ತಿದೆ. ಚಾಮುಂಡೇಶ್ವರಿ ದೇವಸ್ಥಾನವನ್ನು ಬಹುಪಾಲು ಮಹಾರಾಜರ ಮನೆದೇವಿಯಂತೆ ನಿರ್ವಹಣೆ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿರುತ್ತದೆ. 1659 ರಲ್ಲಿ ದೊಡ್ಡ ದೇವರಾಜ ಒಡೆಯರ್ ಇವರ ಅವಧಿಯಲ್ಲಿ 1000 ಮೆಟ್ಟಿಲುಗಳನ್ನು ಮತ್ತು ಈಶ್ವರನಿಗೆ ಬಹುಪ್ರಿಯವಾದ ನಂದಿಯ ಬಹುದೊಡ್ಡ ನಂದಿ ವಿಗ್ರಹವನ್ನು ನಿರ್ಮಿಸಲಾಯಿತು. ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿರುತ್ತದೆ. ಈ ನಂದಿ ವಿಗ್ರಹಕ್ಕೆ ಬಹು ದೊಡ್ಡ ಮತ್ತು ಆಕರ್ಷಣೆಯಿಂದ ಕೂಡಿದ ಘಂಟೆಗಳನ್ನು ಇದರ ಕುತ್ತಿಗೆ ಭಾಗದಲ್ಲಿ ನಿರ್ಮಿಸಲಗಿದೆ. ನಂದಿ ಮತ್ತು ದೇವಸ್ಥಾನವು ಪಕ್ಕದಲ್ಲಿಯೇ ಇದ್ದು ಚಾಮುಂಡಿ ಬೆಟ್ಟಕ್ಕೆ ಹತ್ತುವ 700 ನೇ ಮೆಟ್ಟಿಲಿನ ಬಳಿಯೇ ನಿರ್ಮಿಸಲಾಗಿದೆ. ಕೃಷ್ಣದೇವರಾಜ ಒಡೆಯರ್ - III ಈ ದೇವಸ್ಥಾನದ 3 ಮಹಡಿಯ ಗೋಪುರವನ್ನು ಪ್ರವೇಶದ್ವಾರದಲ್ಲಿ ಚಿನ್ನದ ಲೇಪನಗಳಿಂದ ಇವರ ಮೂವರು ರಾಣಿಯರ ವಿಗ್ರಹಗಳೊಂದಿಗೆ 1827 ರಲ್ಲಿ ನಿರ್ಮಿಸಿರುತ್ತಾರೆ. ಇವರ ಅವಧಿಯಲ್ಲಿಯೇ ಉತ್ಸವಗಳನ್ನು ಮತ್ತು ಸಿಂಹವಾಹನ ಗಳನ್ನು 1843 ರಂದಲೂ ನಡೆಸುತ್ತಾ ಬಂದಿರುತ್ತದೆ. ಇಲ್ಲಿ ಲಕ್ಷ್ಮಿ ನಾರಾಯಣ ಸ್ವಾಮಿ ಮತ್ತು ಮಹಾಬಲೇಶ್ವರ ಸ್ವಾಮಿ ಎಂಬ ಎರಡು ದೇವಸ್ಥಾನಗಳನ್ನೂ ಸಹ ಶಿವನ ಲಿಂಗಾಕಾರವಾಗಿ ನಿರ್ಮಿಸಲಾಗಿದೆ. ಇದನ್ನು 1128 ಕಿ.ಶ.ದಿಂದಲೂ ಹೊಯ್ಸಳ ಆಳ್ವಿಕೆಯಲ್ಲಿ ಚತುರೋಕ್ತಿಯಲ್ಲಿ ಈ ಆವರಣವನ್ನು ಮಭಲಾ ಅಥವಾ ಮಬ್ಬಲಾ ತೀರ್ಥ ಮತ್ತು ಹೊಯ್ಸಳ ರಾಜನಾದ ವಿಷ್ಣುವರ್ದನ ರ ಸೇವಾರ್ಥವಾಗಿ ನಿರ್ಮಿತವಾಗಿರುವುದು ಕಂಡು ಬರುತ್ತದೆ.
ವಂದನೆಗಳೊಂದಿಗೆ
dgnsgreenworld

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World