www.dgnsgreenworld.blogspot.com

Wednesday, August 28, 2019

ದೇವರಿಗೂ ಆಸ್ಪತ್ರೆಗೂ ಇರುವ ವ್ಯತ್ಯಾಸ?

SAVE NATURE, HEALTHY, WEALTHY & WISE. dgnsgreenworld Family



                ಒಬ್ಬ 80 ವರ್ಷದ ಮುದುಕನಿಗೆ ಹೃದಯ ಶಸ್ತ್ರಚಿಕಿತ್ಸೆಯಾಯಿತು. ಆಸ್ಪತ್ರೆ ಬಿಲ್ 8 ಲಕ್ಷ ಬಿಲ್ ನೋಡಿ ಮುದುಕ ಕಣ್ಣೀರು ಹಾಕಿದ ಅದನ್ನು ಕಂಡ  ವೈದ್ಯರು ಅಳಬೇಡಿ ನಿಮ್ಮ ಬಿಲ್ ಸ್ವಲ್ಪ ಕಡಿಮೆ ಮಾಡುತ್ತೇವೆ.
                 ಮುದುಕ.... ಸರ್ ಬಿಲ್ ತುಂಬಾ ಕಡಿಮೆ 10 ಲಕ್ಷ ತುಂಬಲು ನಾನು ಯೋಗ್ಯನಾಗಿರುವೆ, ನಾನು ಅತ್ತಿದ್ದು ಅದಕ್ಕಲ್ಲ ಯಾಕೆಂದರೆ ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಜೋಪಾನವಾಗಿ ಕಾಪಾಡಿದ್ದಕ್ಕೆ ಯಾವುದೇ ಬಿಲ್ ನನಗೆ ಕಳಿಸಲಿಲ್ಲ, ನೀವೂ ಕೇವಲ ಮೂರು ಗಂಟೆ ನನ್ನ ಹೃದಯ ಬಡಿತ ಕೆಲಸ ಕಾರ್ಯನಿರ್ವಹಿಸಲು  ಎಂಟು ಲಕ್ಷ ರೂಪಾಯಿಯೇ... ??

                ಓ ಪರಮಾತ್ಮ ನೀನೇ ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತೀಯಾ, ನೀನು ನಮ್ಮ ಒಂದೊಂದು ಅಂಗಾಂಗದ ಮೇಲು ಬೆಲೆ ಕಟ್ಟಲಾಗದ ಹೂಡಿಕೆ ಮಾಡಿದ್ದಿಯ, ನಮ್ಮ ದೇಹದ ಯಾವುದೊ ಒಂದು ಅಂಗ ಕೆಲಸ ಮಾಡಲಿಲ್ಲ ಅಂತ ಡಾಕ್ಟರ್ ಬಳಿ ಹೋದಾಗಲೇ ನಿನ್ನ ಬೆಲೆ ನಮಗೆ ಅರ್ಥವಾಗುವುದು. ನೀನು ಯಾವುದೇ ಪ್ರತಿಫಲ ಬಯಸದ ಉತ್ಪಾದಕ ನೀನು ಉತ್ಪಾದಿಸಿದ ಅಂಗವನ್ನು ಊನ ಮಾಡಿ ರಿಪೇರಿ ಮಾಡಿಸಲು ಲಕ್ಷಾಂತರ ಹಣ ಕೊಟ್ಟು,ಭ ಭಕ್ತಿಯಿಂದ ನಿಮಗಿಂತಲೂ ಒಂದು ಮಾರು ಮೇಲೆ ಎಂಬಂತೆ ವೈದ್ಯರಿಗೆ ನಮಸ್ಕಾರ ಹೇಳಿ ಬರುತ್ತೇವೆ.
           ಆದರೂ
ನೀನು ಕೋಪಗೊಳ್ಳುವುದಿಲ್ಲ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿದ್ದೀಯ ಎಂಥಹ ಕರುಣಾಳು ನೀನು
ನಿನಗೆ ಕೊಡಲು ನನ್ನ ಬಳಿ ಏನಿದೆ
...... ರಾತ್ರಿ ಕರೆಂಟು ಬಳಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಸೂರ್ಯನ ಬೆಳುಕು ಬಿಸಿಲಿಗೆ ಯಾವುದೇ ಬಿಲ್ಲಿಲ್ಲ.
..... ನೀರು ಬಲಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಕಾಲುವೆ ಬಾವಿ ಏರಿ ಕೆರೆ ಸಮುದ್ರಗಳು ಕೊಟ್ಟ ನಿನಗೆ ಯಾವುದೇ ಬಿಲ್ ಕಟ್ಟುವುದಿಲ್ಲ.
..... a  c ಗಾಳಿಗಾಗಿ ಲಕ್ಷಾಂತರ ವ್ಯಯಸುತ್ತೇವೆ
ನೀನು ಕೊಟ್ಟ ಪರಿಶುದ್ಧ ಗಾಳಿಗೆ ಯಾವುದೇ ಬಿಲ್ಲಿಲ್ಲ.
ಯಾವ ಪಾವತಿಯನ್ನು ಅಪೇಕ್ಷಿಸದೆ ಸಕಲ ಜೀವರಾಶಿಯನ್ನು ಕಾಪಾಡುತ್ತಿರುವ ದೇವರೇ ನಿಮಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು.

ವಂದನೆಗಳೊಂದಿಗೆ

          ಸರ್ವೇಜನಾ ಸುಖಿನೋಭವಂತೋ

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World