www.dgnsgreenworld.blogspot.com

Thursday, August 8, 2019

ಮಾನವೀಯತೆ ಎಂಬುದು ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ.

SAVE NATURE, HEALTHY, WEALTHY & WISE. dgnsgreenworld Family

ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ.  ಮನಸ್ಸಿನಲ್ಲಿದೆ

ಒಂದು ಕುಟುಂಬವಿತ್ತು. ಅದರಲ್ಲಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಇದ್ದರು. ಊರಿನಿಂದ ಹೊರ ಬಂದ ಅವರು ರಸ್ತೆ ಬದಿಯಲ್ಲೇ ಇರುತ್ತಿದ್ದರು. ಅಲ್ಲೇ ಇದ್ದ ಪುಟ್ಟ ಟೆಂಟ್‌ಗಳಲ್ಲಿ ವಾಸವಿದ್ದರು. ದಿನ ಬರುತ್ತಿದ್ದಂತೆ ಒಂದು ಕುಟುಂಬ ಇದ್ದದ್ದು ಮೂರು ನಾಲ್ಕು ಕುಟುಂಬ ಆಗಿತ್ತು. ಅವರ ಮನೆ ಶ್ರೀಮಂತರೊಬ್ಬರು ಅವರ ಜೀವನ ಶೈಲಿ ದಿನವೂ ನೋಡುತ್ತಿದ್ದರು. ಆ ದಿನ ದುಡಿದರೆ, ಆ ದಿನ ತಿನ್ನಲು ಅನ್ನ ಸಿಗುತ್ತಿತ್ತು. ಒಂದು ದಿನ ಅವರಿಗೆ ಯಾವ ಕೆಲಸವೂ ಸಿಗದೆ ಖಾಲಿ ಕೈಲಿ ವಾಪಾಸಾದರು. ಮನೆ ಹೊರಗೆ ದಿನವೂ ಅಡುಗೆ ಮಾಡುತ್ತಿದ್ದವರು ಒಂದು ದಿನ ಸುಮ್ಮನಿದ್ದರೆ ಕಂಡೇ ಕಾಣುತ್ತದೆ.

ಅವರ ಸ್ಥಿತಿ ನೋಡಲಾರದೆ, ಇವರೇ ಅಡುಗೆ ಮಾಡಿಕೊಂಡು ಹೋಗಿ ಕೊಟ್ಟು ಬರಲು ನಿರ್ಧರಿಸಿದರು. ಅಂತೆಯೇ ಅಡುಗೆ ಮಾಡಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಮನೆಗೆ ನೀಡಿದರು. ಹತ್ತಿರದಿಂದ ಅವರನ್ನು ನೋಡಿದಾಗ ಅವರ ಕಣ್ಣಲ್ಲಿದ್ದ ಹೊಳಪು ಕಂಡಿತು. ಹಸಿವಿನಿಂದ ಅವರ ಮುಖ ಸುಸ್ತಾದಂತೆ ಕಾಣುತ್ತಿತ್ತೇ ಹೊರತು ಬೇರಾವುದಕ್ಕೂ ಕೊರತೆ ಇದ್ದಂತೆ ಕಾಣುತ್ತಿರಲಿಲ್ಲ. ಮನೆಯ ಹೆಣ್ಣು ಮಗಳೊಬ್ಬಳು ಎಲ್ಲರಿಗೂ ಊಟ ಬಡಿಸಿ, ಅರ್ಧ ಆಹಾರ ಮಿಕ್ಕಿಸಿ ಅದನ್ನು ಹೊರಗೆ ತೆಗೆದುಕೊಂಡು ಹೋದಳು. ಇದನ್ನು ಗಮನಿಸಿದ ಶ್ರೀಮಂತರು. ಇವರು ವಿಧಿ ವಿಧಾನಗಳನ್ನು ಮಾಡುತ್ತಾರೆ ಎನಿಸುತ್ತದೆ.

ಎಡೆಯ ಹೆಸರಿನಲ್ಲೋ, ಬೇರೆ ಯಾವುದೋ ರೀತಿ ನೀತಿ ಹೆಸರಿನಲ್ಲಿ ಊಟ ಚೆಲ್ಲಬಹುದು ಇವರ ಆಲೋಚನೆ. ಅಂತೆಯೇ ಆಕೆ ಬರುವಾಗ ಪಾತ್ರೆ ಖಾಲಿಯಾಗಿತ್ತು. ಶ್ರೀಮಂತರಿಗೆ ಕೋಪ ಬಂತು. ‘ ಕೊಟ್ಟದ್ದನ್ನು ಹೀಗೆ ವೇಸ್‌ಟ್ ಮಾಡುತ್ತೀರಲ್ಲಾ, ಅದೇ ಇದ್ದಿದ್ದರೆ ನಾಳೆಗೆ ಬರುತ್ತಿರಲಿಲ್ಲವಾ? ಅಥವಾ ಹೊಟ್ಟೆ ತುಂಬ ಎಲ್ಲರೂ ತಿನ್ನುತ್ತಿರಲಿಲ್ಲವಾ? ಎಂದರು. ಅದಕ್ಕೆ ಆಕೆ‘ ನಾನು ಆಹಾರ ಚೆಲ್ಲಲಿಲ್ಲ. ಅದರ ಬಗ್ಗೆ ಆಲೋಚಿಸುವುದು ಮಹಾಪಾಪ. ಅರ್ಧ ಆಹಾರವನ್ನು ಪಕ್ಕದ ಮನೆಯವರಿಗೆ ನೀಡಿ ಬಂದೆ. ಅವರೂ ನಮ್ಮಂತೆ ಏನೂ ತಿಂದಿರಲಿಲ್ಲ’ ಎಂದರು. ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ. ಆಹಾರದ ಬೆಲೆ ಹೆಚ್ಚಾಗಿ ಕಾಣುತ್ತದೆ ಅಲ್ಲವೆ?

ವಂದನೆಗಳೊಂದಿಗೆ. dgnsgreenworld

No comments:

Post a Comment

welcome to dgnsgreenworld Family

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

Green World