www.dgnsgreenworld.blogspot.com

Saturday, August 10, 2019

ಹೆಣ್ಣಿನ ಸೃಷ್ಟಿ

SAVE NATURE, HEALTHY, WEALTHY & WISE. dgnsgreenworld Family

ಹೆಣ್ಣಿನ ಸೃಷ್ಟಿ...
                                                                        ದೇವದೇವನು ಹೆಣ್ಣನ್ನು ಸೃಷ್ಟಿ ಮಾಡಿದಾಗ ಆರನೆಯ ದಿನ ಸರಿ ರಾತ್ರಿಯ ವರೆಗೂ ಕೆಲಸ ಮಾಡುತ್ತಿದ್ದ...
ಒಬ್ಬ ದೇವತೆ ಬಂದು ಕೇಳಿದಳು. 'ಏಕೆ ಅವಳಿಗಾಗಿ ಅಷ್ಟೊಂದು ಸಮಯ ಖರ್ಚು ಮಾಡುತ್ತಿರುವೆ?' 
ದೇವದೇವ ಉತ್ತರಿಸಿದ.  'ಇವಳನ್ನು ಸೃಷ್ಟಿಸಲು ನಾನು ಏನೇನು ಅಂಶಗಳನ್ನು ಪೂರ್ಣಗೊಳಿಸಬೇಕು ಎಂದು ನೋಡಿದೆಯಾ? '
'ಎಲ್ಲ ತರಹದ ತಿನಿಸುಗಳನ್ನು ಮಾಡಬೇಕು. ಅನೇಕ ಮಕ್ಕಳನ್ನು ಒಂದೇ ಸಮಯದಲ್ಲಿ ಅಪ್ಪಿಕೊಳ್ಳಲು ಸಮರ್ಥಳಾಗಿರಬೇಕು. ಗಾಯಗೊಂಡ ಮೊಣಕಾಲಿನ ಗಾಯದಿಂದ ಹಿಡಿದು ಘಾಸಿಗೊಂಡ ಹೃದಯದವರನ್ನು ಕೂಡ ಒಮ್ಮೆ ಆಲಿಂಗಿಸಿಕೊಂಡು ಅವರಿಗೆ ಸಾಂತ್ವನ ನೀಡಬೇಕು. ಇವೆಲ್ಲವನ್ನೂ ಅವಳು ಕೇವಲ ಎರಡು ಕೈಗಳಿಂದ ಮಾಡಬೇಕು. ಅಷ್ಟೇ ಅಲ್ಲ.
ಅವಳಿಗೆ ಅನಾರೋಗ್ಯ ಉಂಟಾದರೂ ತಾನೇ ಔಷಧಿ ಮಾಡಿಕೊಂಡು 18 ಗಂಟೆಗಳ ಕಾಲ ಕೆಲಸ ಮಾಡಬಲ್ಲಳು'.
ದೇವತೆಗೆ ಅಚ್ಚರಿಯ ಸಂತಸ.  'ಕೇವಲ ಎರಡೇ ಕೈಗಳಾ? ಅಸಾಧ್ಯ! 'ಎಂದಳು. 'ಇದೇನಾ ಸ್ಟ್ಯಾಂಡರ್ಡ್ ಮಾದರಿ? ' ಎಂದು ಹತ್ತಿರ ಬಂದು ಆ ಹೆಣ್ಣನ್ನು ಮುಟ್ಟಿದಳು.  'ಓ ದೇವದೇವಾ...  ಇವಳನ್ನು ಬಹಳ ಮೃದುವಾಗಿ ಮಾಡಿದ್ದೀ' ಎಂದಳು.
'ಹೌದು. ಇವಳು ಮೃದು. ಆದರೆ ಬಹಳ ಶಕ್ತಿವಂತಳಾಗಿ ಮಾಡಿದ್ದೇನೆ. ಅವಳು ಏನೇನು ತಡೆದುಕೊಳ್ಳಬಲ್ಲಳು... ಏನೇನು ಕ್ರಮಿಸಬಲ್ಲಳು ಎಂದು ನೀನು ಊಹಿಸಲಾರೆ.'
'ಇವಳು ಆಲೋಚನೆ ಮಾಡಬಲ್ಲಳಾ? '
'ಆಲೋಚನೆ ಮಾಡುವುದಷ್ಟೇ ಅಲ್ಲ... ತರ್ಕಬದ್ಧವಾಗಿ, ಸಕಾರಣವಾಗಿ ಮಾತಾಡಬಲ್ಲಳು ಮತ್ತು ವಿಚಾರಿಸಬಲ್ಲಳು'
ದೇವತೆ ಅವಳ ಕೆನ್ನೆಗಳನ್ನು ಮುಟ್ಟಿ 'ದೇವದೇವಾ, ಈ ಸೃಷ್ಟಿ ಸೋರುತ್ತಿದೆ. ಇವಳ ಮೇಲೆ ತುಂಬಾ ಹೊರೆ ಹೊರೆಸಿರುವೆ ನೀನು' ಎಂದಳು.
' ಅದು ಸೋರುವಿಕೆ ಅಲ್ಲ. ಕಣ್ಣೀರು' ಅವಳ ಮಾತನ್ನು ತಿದ್ದಿದ ದೇವದೇವ.
' ಈ ಕಣ್ಣೀರು ಯಾಕೆ? '
' ಕಣ್ಣೀರು ಅವಳ ಅಭಿವ್ಯಕ್ತಿ. ದುಃಖ, ಅನುಮಾನ, ಪ್ರೇಮ, ಒಂಟಿತನ, ನೋವು, ಕಷ್ಟಗಳು,ಹೆಮ್ಮೆ ಎಲ್ಲದಕ್ಕೂ'
ದೇವತೆ ಬಹಳ ಆನಂದದಿಂದ ,  'ದೇವದೇವಾ... ನೀನು ಎಲ್ಲವನ್ನೂ ಆಲೋಚಿಸಿರುವೆ. ಹೆಣ್ಣು ಒಂದು ಅದ್ಭುತ  ಸೃಷ್ಟಿ' ಎಂದಳು.
ದೇವದೇವ ನಗುತ್ತಾ' ಹೌದು. ಅವಳ ಶಕ್ತಿಗೆ ಗಂಡು ಅಚ್ಚರಿಗೊಳ್ಳುತ್ತಾನೆ. ತೊಂದರೆ, ಹೊರೆಗಳನ್ನು ಅವಳು ತಡೆದುಕೊಳ್ಳಬಲ್ಲಳು. ಅವಳದೇ ಆದ ಅಭಿಪ್ರಾಯ ಹೊಂದಿರಬಲ್ಲಳು. ಸಂತಸದ ಮತ್ತು ಪ್ರೀತಿಯ ಚಿಲುಮೆ ಅವಳು. ಚೀರಬೇಕು ಎನ್ನಿಸಿದಾಗಲೂ ಮುಗುಳ್ನಗಬಲ್ಲಳು. ಅಳಬೇಕೆನ್ನಿಸಿದಾಗ ಹಾಡಬಲ್ಲಳು. ಸಂತಸವಾದಾಗ ಅಳಬಲ್ಲಳು. ಹೆದರಿಕೆ ಆದಾಗ ನಗಬಲ್ಲಳು. ತಾನು ನಂಬಿದ್ದರ ಪರವಾಗಿ ಹೋರಾಡಬಲ್ಲಳು. ಬೇಷರತ್ತಿನ ಪ್ರೀತಿ ಅವಳದು. ಸನಿಹದವರು ಸತ್ತರೆ ಅವಳ ಮನ ಒಡೆಯುತ್ತದೆ. ಆದರೆ ಜೀವನದಲ್ಲಿಯೇ ಮತ್ತೆ ಶಕ್ತಿಯನ್ನು ಕಂಡುಕೊಳ್ಳುತ್ತಾಳೆ.'
ದೇವತೆ ಎಂದಳು. 'ಇವಳು ಪರಿಪೂರ್ಣಳಾ?'
'ಇಲ್ಲ. ಇವಳಲ್ಲಿ ಒಂದು ಲೋಪ ಇದೆ. ಅವಳ ಮೌಲ್ಯ ಎಷ್ಟು ಎಂಬುದನ್ನು ಬಹಳ ಸಲ ಮರೆಯುತ್ತಾಳೆ' ಎಂದ ದೇವದೇವ.
ಓ ಹೆಣ್ಣೇ ನೀನೊಂದು ನಿರಂತರ ಅದ್ಬುತ....
ಆಂಗ್ಲ ಲೇಖನದ ಭಾವಾನುವಾದ
ವಂದನೆಗಳೊಂದಿಗೆ
dgnsgreenworld

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World