www.dgnsgreenworld.blogspot.com

Monday, September 9, 2019

ಸಂತೋಷ ಎಲ್ಲಿದೆ, ಅಮೃತ ಕ್ಷಣ ಯಾವುದು?

SAVE NATURE, HEALTHY, WEALTHY & WISE. dgnsgreenworld Family

ನಾವೆಲ್ಲರೂ  ನಮ್ಮ ಜೀವನದಲ್ಲಿ , ಅಮೂಲ್ಯವಾದ ಪ್ರತಿಕ್ಷಣವನ್ನು , ಸಂಭ್ರಮಿಸುವುದನ್ನೇ  ಮರೆತಿರುತ್ತೇವೆ. ಯೌವನ, ವಯಸ್ಕ , ಈ ಹಂತಗಳನ್ನು ಆನಂದಿಸದೆ, ದಾಟುತ್ತೇವೆ. ಆಮೇಲೆ ಹಳಹಳಿಸುತ್ತೇವೆ.
ಬಾಲ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೂ, ಸಂಭ್ರಮಿಸುತ್ತಿದ್ದವರು, ಬೆಳೆಯುತ್ತಾ ಹೋದಂತೆ, ಆ ಖುಷಿಯನ್ನು ಮೂಲೆಗೆ ತಳ್ಳಿ, ಕೈಕಾಲು ಕಟ್ಟಿ ಕೂರಿಸಿ ಬಿಡುತ್ತೇವೆ.

ಆಗ , ಒಂದು ರೂಪಾಯಿಯ ಮಿಠಾಯಿ / ಪೆಪ್ಪರಮಿಂಟಿಗೂ ಸಂಭ್ರಮಿಸುತ್ತಿದ್ದವರು, ಸಾವಿರಾರು ರೂಪಾಯಿ ಖರ್ಚು ಮಾಡಿ, ಸ್ಟಾರ್ ಹೋಟೆಲಿನಲ್ಲಿ  ಉಂಡರೂ , ಈಗ ಖುಷಿ ಪಡುವುದಿಲ್ಲ.
ಮೊದಲ ಬಾರಿ  ಸೈಕಲನ್ನು ಬಿದ್ದು  ಎದ್ದು ಓಡಿಸಿದ ಖುಷಿ , ಇಂದು ಲಕ್ಷಗಟ್ಟಲೇ ಸುರಿದು ಕೊಂಡ ಕಾರಿನಲ್ಲಿ ಕಾಣುವುದಿಲ್ಲ. ಆಕಾಶದಲ್ಲಿ ಹಾರಾಡುವ ವಿಮಾನ ನೋಡಿ, ಕೈಬೀಸಿ ಟಾಟಾ ಮಾಡುತ್ತಿದ್ದ ಖುಷಿ, ಇಂದು ವಿಮಾನ ದಲ್ಲಿಯೇ ಪ್ರಯಾಣಿಸಿದರೂ ತೃಪ್ತಿ ಇಲ್ಲ.

ಬಾಲ್ಯದ ಮರಕೋತಿ ,ಕುಂಟೆಬಿಲ್ಲೆ , ಕಣ್ಣಾಮುಚ್ಚಾಲೆ, ಲಗೋರಿ ಆಟಗಳು, ಸೈಕಲ್ ತುಳಿಯುವುದನ್ನು  ಎದ್ದು , ಬಿದ್ದು , ಕಲಿತದ್ದು , ಪರೀಕ್ಷೆಯಲ್ಲಿ ಒಂದು ಮಾರ್ಕ್ಸ್ ಜಾಸ್ತಿ ತೆಗೆದುಕೊಂಡದ್ದು , ಅದಕ್ಕಾಗಿ ಸಂಭ್ರಮಿಸಿದ್ದು , ಗದ್ದೆ ತೋಟಗಳಲ್ಲಿ ಸುತ್ತಾಡಿದ್ದು , ಹಣ್ಣು ಕದ್ದು ತಿಂದಿದ್ದು , ಶಾಲಾ  ಕಾಲೇಜು ಸ್ಪರ್ಧೆಗಳಲ್ಲಿ, ಬಹುಮಾನ, ಪ್ರಶಸ್ತಿ ಗಳಿಸಿದ್ದು , ಜೀವನದ ಸಂಗಾತಿಯೇ ಗೆಳೆಯನಾಗಿದ್ದು ,  ತೊಟ್ಟಿಲು ಕಟ್ಟಿದ್ದು , ಮಗುವಿನ ನಗುವಿನಲ್ಲಿ  ಲೋಕವನ್ನೇ ಮರೆತಿದ್ದು , ಗುರು ಹಿರಿಯರ ಆಶೀರ್ವಾದ ಪಡೆದಿದ್ದು , ಪ್ರೀತಿ ಪಾತ್ರರ ಮೆಚ್ಚುಗೆಯ ಮಾತುಗಳಿಂದ , ಅವರ ಅಪ್ಪುಗೆಯಿಂದ ಅರಳಿದ್ದು , ಎಲ್ಲವೂ ಸಂಭ್ರಮಗಳೇ..ಕೆಲವು ಸಣ್ಣ ಸಂಭ್ರಮಗಳಾದರೆ , ಮತ್ತೊಂದಿಷ್ಟು ದೊಡ್ಡ ಪ್ರಮಾಣದ ಸಂಭ್ರಮಗಳು.

ಸೈಟು ಖರೀದಿಸಿದ್ದು , ಮನೆ ಕಟ್ಟಿಸಿದ್ದು , ಹೊಸ ಗಾಡಿ ಕೊಂಡದ್ದು , ಬರಹಗಳನ್ನು ಬರೆದದ್ದು , ಕಥಾಗುಚ್ಛದಲ್ಲಿ ಹಾಕಿದ್ದು , ಪತ್ರಿಕೆಗಳಿಗೆ ಕಳಿಸಿದ್ದು , ಅವು ಮೆಚ್ಚುಗೆ ಗಳಿಸಿದ್ದು , ಎಲ್ಲವೂ ದೊಡ್ಡ ಸಂಭ್ರಮಗಳೇ. ಆ ಕ್ಷಣವನ್ನು ಆನಂದಿಸಲೇ ಬೇಕಾದ್ದು. ಆದರೆ, ನಾವು ಆಗಲೂ, ಅಯ್ಯೋ ಬಿಡಿ, ಇದೇನು ದೊಡ್ಡ ವಿಷಯ ? ನನ್ನ ಆಸೆ ಬೇರೇನೇ ಇತ್ತು , ಎಂದು ನಮ್ಮ ಮೂಗನ್ನು ನಾವೇ ಮುರಿಯುತ್ತೇವೆ.

ಇದಕ್ಕೆಲ್ಲ ಕಾರಣ ಏನು ? ಅತಿಯಾದ ಆಸೆಯೇ, ಅಸೂಯೆಯೇ, ಅತೃಪ್ತಿಯೇ, ಆಮಿಷವೇ , ಬೇಕು ಬೇಕೆಂಬ ಹಾಹಾಕಾರವೇ ? ಅಥವಾ ಇವೆಲ್ಲದರ ಚರ್ವಿತಚರ್ವಣ ಭಾವವೇ ???

ಒಟ್ಟಿನಲ್ಲಿ ,  ನಮ್ಮೊಳಗಿರುವ ತೃಪ್ತಿಯ ಸೆಲೆಯನ್ನು , ನಾವೇ ಬತ್ತಿಸಿಕೊಂಡು , ಮತ್ತೆಲ್ಲೋ ಅದರ ಹುಡುಕಾಟದಲ್ಲಿ ನಿರತರಾಗಿರುತ್ತೇವೆ. ಅತೃಪ್ತ ಮನಸ್ಸಿಗರಾಗಿ ತೊಳಲಾಡುತ್ತಿರುತ್ತೇವೆ. ತೃಪ್ತಿ , ಎಲ್ಲಿಯಾದರೂ ಮಾರಾಟಕ್ಕಿದೆಯೇ ? ಎಂದು ಅರಸುತ್ತಿರುತ್ತೇವೆ.

ಅದನ್ನೇ ಡಿ ವಿ ಜಿಯವರು ಹೇಳಿದ್ದು ,

ಅವರೆಷ್ಟು ಧನವಂತರ್ , ಇವರೆಷ್ಟು ಬಲವಂತರ್ |
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |ಶ
ವಂದನೆಗಳೊಂದಿಗೆ, 

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World