www.dgnsgreenworld.blogspot.com

Wednesday, December 30, 2020

ಮತ್ತೆ ಕಾಣದಿರು ನೀ 2020!

*ಮತ್ತೆ ಕಾಣದಿರು ನೀ 2020!*

ತುಂಬಿದ ಕಂಗಳ ವಿದಾಯ ನಿನಗೆ, 
ಮತ್ತೆ ಕಾಣದಿರು ಓ 2020!

ದುಡಿವ ಕೈಗಳ  ಕೆಲಸ ಕಸಿದೆ,
ದಿನ ದುಡುಮೆಯವರ ಹೊಟ್ಟೆಗೆ ಹೊಡೆದೆ,
ಬದುಕನು ಭರಿಸಲಾಗದ ಬವಣೆಯಾಗಿಸಿದೆ,
ನಗುವ ಕಂಗಳಲಿ ಕಂಬನಿಯು  ತುಂಬಿದೆ,
ನೀನಾರಿಗಾದೆಯೋ ಓ 2020!

ಹಿರಿಯ ಜೀವಗಳು ಬೆಂದು ಬವಳಿದವು,
ಕಾಲು ಮುರಿದ ಕಪ್ಪೆಗಳಂತಾದರು,
ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,
ನೋಡು ನೋಡುತಲೇ ಅಂತರ್ಧಾನರಾದರು,
ನೀನಾರಿಗಾದೆಯೋ ಓ 2020!

ನೆನ್ನೆ ಮೊನ್ನೆ ಕಂಡ ಗೆಳೆಯರು, 
ಮನಬಿಚ್ಚಿ ಬೆರೆತು ನಕ್ಕವರು,
ತಿರುಗಿ ನೋಡುವಷ್ಟರಲಿ ಮರೆಯಾದರು,
ನಿನ್ನ ಕ್ರೂರನೋಟಕೆ ಬಲಿಯಾದರು,
ನೀನಾರಿಗಾದೆಯೋ ಓ 2020!

ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ,
ಹೊರಗೆ ಕಾಲಿಡುವ ಧೈರ್ಯ ಕಸಿದೆ,
ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ,
ಮೃದುಮನಗಳಿಗೆ ಮಾಯದ ಬರೆಯೆಳೆದೆ, 
ನೀನಾರಿಗಾದೆಯೋ ಓ 2020!

ವ್ಯಾಪಾರಗಳ       ದಿವಾಳಿ ತೆಗೆದೆ,
ವ್ಯಾಪಾರಿಗಳ ಬೆನ್ನಿಗೆ - ಚೂರಿ ಇಟ್ಟೆ,
ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ,
ಉಳಿದದ್ದು ಕೇವಲ ತಣ್ಣೀರ ಬಟ್ಟೆ,
ನೀನಾರಿಗಾದೆಯೋ ಓ 2020!

ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು, 
ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ,
ನೋವು, ನಿರಾಸೆಗಳನು  ಅಡಗಿಸಿಕೊಂಡೆವು
 - ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು,
ನೀನಾರಿಗಾದೆಯೋ ಓ 2020!

ಈಗ ಹೇಳುತಿರುವೆವು ನಿನಗೆ ವಿದಾಯ,
ನೀ ಮರೆಯಾಗುತಿರುವುದು ಅಭಯ ಪ್ರದಾಯ,
ಶೋಕದ ಕಣ್ಣಿರು ಆವಿಯಾಗುತಿದೆ,
ಆನಂದಭಾಷ್ಪ ಮೂಡುತಿದೆ - 
ಹೋಗು, ಇನ್ನು ನೀ ಬರಬೇಡ 2020!

30 WAYS TO EMP0WER YOUR LIFE

Sunday, December 27, 2020

ರೋಗ ನಿರೋಧಕ ಶಕ್ತಿಹೆಚ್ಚಿಸುವ ಅಗಸೆ**FLAX SEEDS*

*ರೋಗ ನಿರೋಧಕ ಶಕ್ತಿಹೆಚ್ಚಿಸುವ ಅಗಸೆ*
*FLAX SEEDS*

ಅಗಸೆ ಬೀಜ

ಊಟದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಸಮನಾಗಿ, ಸಮಯಕ್ಕೆ ಸರಿಯಾಗಿ ದೇಹದಲ್ಲಿ ಬೆರೆತರೆ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಆದರೆ ಈಗಿನ ಒತ್ತಡದ ಬದುಕಿನಲ್ಲಿ ಪೌಷ್ಟಿಕ ಆಹಾರವನ್ನು ಮರೆತಿದ್ದೇವೆ. ನಮ್ಮ ಪೂರ್ವಜರು ‘ಮೆಂತ್ಯೆ ತಿಂತಿಂದ್ರೆ, ರೋಗಕ್ಕೆ ಅಂತ್ಯ’ ಎನ್ನುತ್ತಿದ್ದರು. ಮೆಂತ್ಯೆಯಂತಹ ಪೌಷ್ಟಿಕಾಂಶವಿರುವ, ಆರೋಗ್ಯ ಸುಧಾರಿಸುವ ಧಾನ್ಯ, ಕಾಳುಗಳು, ಬೀಜಗಳು ನಮ್ಮ ಸುತ್ತಮುತ್ತಲಿವೆ.

ಅವುಗಳ ಸಮರ್ಪಕ ಬಳಕೆ ಗೊತ್ತಿರಬೇಕು ಅಷ್ಟೆ. ಆಧುನಿಕ ಸಿದ್ಧ ಆಹಾರ, ಜಂಕ್‌ ತಿನಿಸಿನ ಹಾವಳಿಯಲ್ಲಿ ಮೂಲೆ ಗುಂಪಾಗಿರುವ ಹಲವಾರು ಪೌಷ್ಟಿಕಾಂಶಯುಕ್ತ ಕಾಳುಗಳಲ್ಲಿ ಅಗಸೆಯೂ ಒಂದು ಎನ್ನಬಹುದು. ಭೂಮಿಯಲ್ಲಿರುವ ತೃಣಧಾನ್ಯಗಳಲ್ಲಿ ಮೊದಲ ಸ್ಥಾನ ಮೆಂತ್ಯೆಯಾದರೆ, 2ನೇ ಸ್ಥಾನ ಅಗಸೆ ಬೀಜದ್ದು.

ಅಗಸೆ ಲೈನಸಿಯೆ ಸಸ್ಯ ಕುಲಕ್ಕೆ ಸೇರಿದೆ. ಅಗಸೆ, ಚೊಗಚೆ, ಬಕಪುಷ್ಪ ಮುಂತಾದ ಹೆಸರುಗಳಿಂದ ಕರೆಯಲಾಗುವ ಇದು ಸುಮಾರು 25– 30 ಅಡಿಗಳಷ್ಟು ಬೆಳೆಯುತ್ತದೆ. ಸಸ್ಯವು ಬರ ನಿರೋಧಕವಾಗಿದ್ದು ಅಲ್ಪ ನೀರಿನಲ್ಲೂ ಹುಲುಸಾಗಿ ಬೆಳೆಯಬಲ್ಲದು. ನೆಟ್ಟ ಮೊದಲ ಐದಾರು ತಿಂಗಳು ಚೆನ್ನಾಗಿ ಆರೈಕೆ ಮಾಡಬೇಕು. ಮಳೆಯ ಏರಿಳಿತಗಳಿಗೆ ಹೊಂದಿಕೊಂಡು, ಕಡು ಬೇಸಿಗೆಯಲ್ಲೂ ಬೆಳೆಯುವ ಸಸ್ಯವಿದು. ಒಮ್ಮೆ ಬೆಳೆದರೆ ಬಹಳ ವರ್ಷಗಳವರೆಗೂ ಫಲವನ್ನು ನೀಡುತ್ತದೆ. ಮಧ್ಯಮ ಗಾತ್ರದ ಪೊದೆಯಂತೆ ಬೆಳೆಯುವ ಈ ಸಸ್ಯವು ಚಿಕ್ಕ ಎಲೆಗಳನ್ನು ಹೊಂದಿದ್ದು ನೀಲಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಇದರ ಕಾಂಡದಿಂದ ನಾರನ್ನು ತೆಗೆದು ಬಟ್ಟೆ (ಲಿನನ್‌ ಬಟ್ಟೆ) ಹಾಗೂ ಹಗ್ಗಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ.

*ಊಟದಲ್ಲಿ ಎಲೆ, ಹೂವು ಬಳಕೆ*

ಅಗಸೆ ಹೂ, ಎಲೆ ಮತ್ತು ಕಾಯಿಗಳನ್ನು ದಿನನಿತ್ಯದ ಆಹಾರವಾಗಿ ಬಳಸಬಹುದು. ಅಗಸೆ ಸೊಪ್ಪು ಮತ್ತು ಹುರುಳಿಕಾಳಿನ ಬಸ್ಸಾರು ಬಯಲುಸೀಮೆಯಲ್ಲಿ ಬಹಳ ಜನಪ್ರಿಯ. ಅಗಸೆ ಹೂವುಗಳಿಂದ ಸಾರು, ಪಲ್ಯ ಮಾಡುವುದರ ಜೊತೆಗೆ ಪರೋಟ ಕೂಡ ಮಾಡಬಹುದು. ಸೊಪ್ಪು ಮತ್ತು ಹೂಗಳಲ್ಲಿ ಪ್ರೊಟೀನ್, ಜೀವಸತ್ವ ಎ, ಶರ್ಕರ– ಪಿಷ್ಟ ಹಾಗೂ ಕಬ್ಬಿಣದ ಅಂಶಗಳಿದ್ದು, ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.

ಮಹಿಳೆಯರು ಋತುಸ್ರಾವ ನಿಲ್ಲುವ ಹಂತದಲ್ಲಿ ಅಗಸೆ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಆ ಸಮಯದಲ್ಲಿ ಅವಶ್ಯವಿರುವ ಪೋಷಕಾಂಶಗಳು ದೊರೆಯುತ್ತವೆ. ಈ ಸಸ್ಯದ ಬೀಜ ಮತ್ತು ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ನಿಯಮಿತವಾಗಿ ಸೇವಿಸುವುದರಿಂದ ರೋಗಗಳು ಬಾರದಂತೆ ತಡೆಗಟ್ಟಬಹುದು. ಜೀರ್ಣಶಕ್ತಿಯನ್ನು ವೃದ್ಧಿಸುವುದಲ್ಲದೇ ಮಲಬದ್ಧತೆಯನ್ನು ನಿವಾರಿಸಬಹುದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಗಸೆ ಬೀಜದಲ್ಲಿ ಕ್ಯಾಲ್ಸಿಯಂ ಕೂಡ ಹೇರಳವಾಗಿದೆ. 

*ವಿವಿಧ ಕಾಯಿಲೆಗಳಿಗೆ..*

*ಕ್ಯಾನ್ಸರ್‌ಗೆ:* ಇದರಲ್ಲಿ ರೋಗ ನಿರೋಧಕ ಗುಣವಿರುವುದರಿಂದ ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಕೆಲವುಮಟ್ಟಿಗೆ ರಕ್ಷಣೆ ಪಡೆಯಬಹುದು. ಬೀಜದಲ್ಲಿರುವ ಲಿಗ್ನನಸ್‌ ಎಂಬ ರಾಸಾಯನಿಕಕ್ಕೆ ಸ್ತನ ಕ್ಯಾನರ್‌ ವಿರುದ್ಧ ಹೋರಾಡುವ ಗುಣವಿದೆ.

*ಆರೋಗ್ಯಕರ ಹೃದಯಕ್ಕೆ:* ಉರಿಯೂತವನ್ನು ಕಡಿಮೆ ಮಾಡುವ ಮತ್ತು ಹೃದಯ ಬಡಿತವನ್ನು ಸಾಮಾನ್ಯ ಮಾಡುವ ಮೂಲಕ ಹೃದಯದ ರಕ್ತನಾಳಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಅಧ್ಯಯನದ ಪ್ರಕಾರ ಇದರಲ್ಲಿರುವ ಒಮೆಗಾ-3 ರಕ್ತನಾಳ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ.

*ಮಧುಮೇಹಕ್ಕೆ:* ಸಕ್ಕರೆ ಕಾಯಿಲೆ ಇರುವವರು, ದಿನಾ ಅಗಸೆ ಬೀಜ ತಿನ್ನುವುದರಿಂದ ಅದರಲ್ಲಿನ ಲಿಗ್ನನಸ್ ಅಂಶ ರಕ್ತದ ಸಕ್ಕರೆ ಮಟ್ಟವನ್ನು ಸುಧಾರಿಸುತ್ತವೆ. ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನನಸ್ ಕೆಲವೊಂದು ಊರಿಯೂತಕಾರಿ ಅಂಶಗಳು ದೇಹದಲ್ಲಿ ಬಿಡುಗಡೆಯಾಗದಂತೆ ತಡೆಯುತ್ತವೆ. ರಕ್ತನಾಳದಲ್ಲೂ ಉರಿಯೂತ ಕಡಿಮೆ ಮಾಡುವ ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವುದನ್ನು ತಡೆಯುತ್ತದೆ.

*ತ್ವಚೆಗೆ:* ಬೀಜದಲ್ಲಿನ ಎಣ್ಣೆ ಅಂಶವು ಚರ್ಮ ಕೆಂಪಾಗುವುದು, ಉರಿ- ತುರಿಕೆಯಾಗುವುದನ್ನು ತಪ್ಪಿಸುತ್ತದೆ. ಮೈ ಚರ್ಮ ಮೃದುವಾಗಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚರ್ಮಕ್ಕೆ ಸೂರ್ಯನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸುತ್ತದೆ. ದಿನಾ ಒಂದೆರಡು ಚಮಚ ಅಗಸೆ ಬೀಜ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳಾಗುವುದಿಲ್ಲ. ಕೂದಲುದುರುವುದು ನಿಲ್ಲುತ್ತದೆ. ಅಗಸೆ ಎಣ್ಣೆ ತಲೆಗೆ ಹಚ್ಚುವುದರಿಂದ ಹೊಟ್ಟು ಕಡಿಮೆಯಾಗುತ್ತದೆ.
ಅಗಸೆ ಬೀಜಗಳ ಸೇವನೆಯು ಹೃದಯಾಘಾತ, ಪಾರ್ಶ್ವವಾಯು ತಡೆಯಲು ಸಹಕಾರಿಯಾಗುತ್ತದೆ.

* ಅಗಸೆ ಬೀಜಗಳಲ್ಲಿ ಒಮೆಗಾ -03 ಇದ್ದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

* ಈ ಬೀಜಗಳ ಸೇವನೆ ಸುಕ್ಕುಗಳನ್ನು ತೆಗೆದು ಚರ್ಮಕ್ಕೆ ಕಾಂತಿ ನೀಡುತ್ತದೆ.

* ಮಲಬದ್ಧತೆ ನಿವಾರಣೆಗೆ ಬೀಜಗಳ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

* ಅಗಸೆ ಬೀಜಗಳು ಮೂಳೆಗಳ ಸವೆತ ತಡೆಗಟ್ಟುತ್ತದೆ ಮತ್ತು ವಾತ ನಿವಾರಕವಾಗಿ ಕೆಲಸ ಮಾಡುತ್ತದೆ.

* ಅಗಸೆ ಎಲೆ ಮತ್ತು ಹೂವುಗಳ ಪಲ್ಯ ಮಾಡಿ ತಿನ್ನುವುದರಿಂದ ಇರುಳುಗಣ್ಣುರೋಗ ನಿವಾರಣೆಯಾಗುತ್ತದೆ.

*ಅಗಸಿ ಬೀಜಗಳನ್ನು ಹುರಿಯದೇ ಪೌಡರ್ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಶೋಧಿಸಿ ಕುದಿಸಿ ಆರಿಸಿದ ನಂತರ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಕುಡಿದರೆ ಶ್ವಾಸಕೋಶ ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

*ಚರ್ಮವ್ಯಾಧಿ, ಮೂಲವ್ಯಾಧಿ, ಮಧುಮೇಹ, ಬೊಜ್ಜಿಗೆ ಇದನ್ನು ಬಳಸಬಹುದು. ಅಗಸೆ ಬೀಜದ ತೈಲವನ್ನು ಲೇಪಿಸುವುದರಿಂದ ಗಾಯಗಳು ಬೇಗ ಗುಣವಾಗುತ್ತವೆ’*  ಎನ್ನುತ್ತಾರೆ ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್.

*ಆಯುರ್ವೇದದಲ್ಲಿ..*

ಐದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಆಯುರ್ವೇದದ ಗ್ರಂಥಗಳಲ್ಲೂ ಅತಸಿ ಎಂದು ಈ ಸಸ್ಯದ ಉಲ್ಲೇಖ ದೊರೆಯುತ್ತದೆ. ಆಯುರ್ವೇದದ ಮೂಲಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ ಹಾಗೂ ಭಾವಪ್ರಕಾಶ ನಿಘಂಟುಗಳಲ್ಲಿ ಇದರ ಔಷಧೀಯ ಗುಣಗಳನ್ನು ವಿವರಿಸಲಾಗಿದೆ. 

(ಲೇಖಕಿ ಆಹಾರ ತಜ್ಞೆ)

ಉತ್ತರ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಬಿಳಿಜೋಳದ ರಾಶಿಯ ಕೊನೆಯಲ್ಲಿ ಅಗಸೆ ಹಾಗೂ ಕುಸಿಬೆ ರಾಶಿ ಮಾಡುತ್ತಾರೆ. ಏಕೆಂದರೆ ಈ ಎರಡೂ ಬೆಳೆಗಳ ಹೊಟ್ಟು ದನ ಕರುಗಳಿಗೆ ಉಪಯೋಗವಿಲ್ಲ.
ಈ ಅಗಸಿ ಹುಲ್ಲು ಜಿಗುಟಾಗಿದ್ದು ದನಗಳು ತಿಂದರೆ ಗಂಟಲಲ್ಲಿ ಸಿಕ್ಕು ಸಾಯುವ ಸಂಭವ ಹೆಚ್ಚು. ಅದಕ್ಕಾಗಿ ರಾಶಿಯ ನಂತರ ಸುಟ್ಟು ಬಿಡುತ್ತಾರೆ.

*ಹೇಗೆ ಸೇವಿಸಬೇಕು?*

ಅಗಸೆ ಬೀಜ ಜೀರ್ಣವಾಗುವುದು ಕಷ್ಟ. ಹೀಗಾಗಿ ಇದನ್ನು ಬಿಸಿಲಿಗೆ ಒಣಗಿಸಿ, ಚೆನ್ನಾಗಿ ನೆನೆಸಿ ಬಳಸಬೇಕು. ಸೇವಿಸುವಾಗಲೂ ಚೆನ್ನಾಗಿ ಅಗಿದು ನುಂಗಬೇಕು. ಇದನ್ನು ಪುಡಿ ಮಾಡಿಟ್ಟುಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತಿಂದು ನೀರು ಕುಡಿಯಬಹುದು. ಅಗಸೆ ಚಟ್ನಿಪುಡಿ ಮಾಡಿಕೊಂಡು ಸೇವಿಸಬಹುದು. ಪುಡಿಯನ್ನು 15 ದಿನಗಳಿಗಾಗುವಷ್ಟು ಮಾತ್ರ ತಯಾರಿಸಿಕೊಳ್ಳಿ. ಇಲ್ಲದಿದ್ದರೆ ಹುಳಿ ಬಂದಂತಾಗಿ ಔಷಧೀಯ ಗುಣ ಕಡಿಮೆಯಾಗಬಹುದು. ಒಂದು ದಿನಕ್ಕೆ ಅಗಸೆ ಬೀಜವನ್ನು ಎರಡು ಚಮಚದಷ್ಟು ತಿಂದರೆ ಸಾಕು,
dgnsgreenworld

 

ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!

▬▬▬▬▬ஜ۩۞۩ஜ▬▬▬▬
  * *ಶುಭೋದಯ ಆತ್ಮೀಯರೆ*   
▬▬▬▬▬ஜ۩۞۩ஜ▬▬▬▬
ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!                                                                "ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!
ತಾಕತ್ತು ಮಾತಿನಲ್ಲಿರಬೇಕೇ ವಿನಃ  ... ಮಾತನಾಡುವ ಧ್ವನಿಯಲ್ಲಲ್ಲ....
ಮಳೆಯಿಂದ ಹೂ ಅರಳುತ್ತೇ ವಿನಃ ... ಪ್ರವಾಹದಿಂದಲ್ಲ... ನೆನಪಿರಲಿ..                                                                                                                                                            
▬▬▬▬▬ஜ۩۞۩ஜ▬▬▬▬
        *ಧಮೋ೯ ರಕ್ಷತಿ ರಕ್ಷಿತ:* 
▬▬▬▬▬ஜ۩۞۩ஜ▬▬▬▬

ಅಹಂಕಾರವು ತನ್ನ ಸೇವೆಯನ್ನೇ ಬಯಸುತ್ತದೆ.ಆತ್ಮವು ಇತರರ ಸೇವೆಮಾಡಲು ಪ್ರಯತ್ನಿಸುತ್ತದೆ.

🌻🍂🦜🌷🐿🍂🌻

ಅಹಂಕಾರವು ತನ್ನ ಸೇವೆಯನ್ನೇ ಬಯಸುತ್ತದೆ.
ಆತ್ಮವು ಇತರರ ಸೇವೆಮಾಡಲು ಪ್ರಯತ್ನಿಸುತ್ತದೆ.

ಅಹಂಕಾರವು ಬಾಹ್ಯ ಪ್ರಪಂಚದ ಮಾನ್ಯತೆಯನ್ನು ಇಚ್ಛಿಸುತ್ತದೆ.
ಆತ್ಮವು ಒಳಗಿನ ನಿಜ ಸತ್ಯವನ್ನರಿಯಲು ಬಯಸುತ್ತದೆ.

ಅಹಂಕಾರವು ಜೀವನವನ್ನು ಒಂದು ಸ್ಪರ್ಧೆಯೆಂದು ಎಣಿಸುತ್ತದೆ
ಆತ್ಮವು ಈ ಜೀವನವು ದೊರೆತ ಒಂದು ಕೊಡುಗೆಯೆಂದು ಪರಿಗಣಿಸುತ್ತದೆ

ಅಹಂಕಾರವು "ನಾನು" ಎಂಬುದನ್ನು ರಕ್ಷಿಸಿಕೊಳ್ಳಲು ಹೆಣಗುತ್ತದೆ
ಆತ್ಮವು ಮತ್ತೊಬ್ಬರನ್ನು ರಕ್ಷಿಸಲು ಬಯಸುತ್ತದೆ

ಅಹಂಕಾರವು ಬಾಹ್ಯವನ್ನು ಬಯಸುತ್ತದೆ
ಆತ್ಮವು ಅಂತರ್ಮುಖಿಯಾಗಿರಲು ಇಚ್ಛಿಸುತ್ತದೆ

ಅಹಂಕಾರವು ಕೊರತೆಯನ್ನು ಅನುಭವಿಸುತ್ತದೆ
ಆತ್ಮವು ಸಮೃದ್ಧತೆಯನ್ನು ಅನುಭವಿಸುತ್ತದೆ

ಅಹಂಕಾರವು ನಶ್ವರ 
ಆತ್ಮವು ಅನಂತ

ಅಹಂಕಾರವು ಕಾಮತೃಷೆಯ ಒಳಸೆಳೆತಕ್ಕೆ ಬಲಿಯಾಗುತ್ತದೆ
ಆತ್ಮವು ಪ್ರೇಮದ ಸೆಳೆತಕ್ಕೆ ಒಳಗಾಗುತ್ತದೆ

ಅಹಂಕಾರವು ಜ್ಞಾನವನ್ನು ಗಳಿಸಲು ಬಯಸುತ್ತದೆ
ಆತ್ಮವು ಜ್ಞಾನವೇ ಆಗಿದೆ

ಅಹಂಕಾರವು ಬಹುಮಾನವನ್ನು ಇಷ್ಟಪಡುತ್ತದೆ
ಆತ್ಮವು ತನ್ನ ಯಾತ್ರೆಯ ಆನಂದವನ್ನು ಅನುಭವಿಸುತ್ತದೆ

ಅಹಂಕಾರವು ನೋವಿಗೆ ಕಾರಣವಾಗುತ್ತದೆ
ಆತ್ಮವು ಶಮನದ ಕಾರಣಕ್ಕೆ ಕಾರಕವಾಗಿದೆ

ಅಹಂಕಾರವು ದೈವತ್ವವನ್ನು ತಿರಸ್ಕರಿಸುತ್ತದೆ
ಆತ್ಮವು ದೈವತ್ವವನ್ನು ಬಿಗಿದಪ್ಪುತ್ತದೆ

ಅಹಂಕಾರವು ಉಬ್ಬಿಹೋಗಲು ಬಯಸುತ್ತದೆ
ಆತ್ಮವು ಪೂರ್ಣತೆಯೊಡನೆ ಅನಂತವಾಗಿದೆ

ಅಹಂಕಾರವು "ನಾನೇ" ಎಂದುಕೊಳ್ಳುತ್ತದೆ
ಆತ್ಮವು ಎಲ್ಲರಲ್ಲೂ ತನ್ನನ್ನೇ ಕಾಣುತ್ತದೆ

dgnsgreenworld

🌻🍂🌿🐿🌿🍂🌻

Thursday, December 24, 2020

ಒಂದು ಕಲ್ಲು ಶಿಲೆಯಾದರೆ ಕೈ ಮುಗಿದು ‌ ನಮಿಸುತ್ತಾರೆ

ಒಂದು  ಕಲ್ಲು  ಶಿಲೆಯಾದರೆ   ಕೈ  ಮುಗಿದು ‌ ನಮಿಸುತ್ತಾರೆ..*
*ಮೆಟ್ಟಿಲಾದರೆ  ತುಳಿದು  ಚಪ್ಪಲಿ  ಬಿಡುತ್ತಾರೆ...*
*ನಮ್ಮ  ಜೀವನವು  ಸಹ  ಹಾಗೆ*
*ಸಾದಿಸಿದರೆ  ನಮ್ಮವನೆಂದು  ಹೊಗಳುತ್ತಾರೆ...*
*ಸೋತರೆ  ನಮ್ಮವರೆ   ನಮ್ಮನ್ನು ಹಿಯಾಳಿಸಿ ನಗುತ್ತಾರೆ..*
 *ಶಿಸ್ತಿನ ಹಾದಿಯಲ್ಲಿ ನಡೆದಾಗ ಮಾತ್ರ ಅಪರೂಪದ ವ್ಯಕ್ತಿ ಆಗಬಲ್ಲಿರಿ ಶಿಸ್ತು ಯಶಸ್ಸಿನ ಗುಟ್ಟು* 
 ಸಾಧನೆಗೆ ವಿಫುಲವಾದ ಅವಕಾಶವಿದೆ ಉಪಯೋಗಿಸಿಕೊಂಡು ಸಾಧಿಸಿ ಸಾಧಕರಾಗೋಣ.
ಸ್ವಂತಕ್ಕಾಗಿ ಬದುಕಿದವರನ್ನ ಪ್ರಪಂಚ ಬಹಳ ಬೇಗ ಮುಲಾಜಿಲ್ಲದೆ ಮರೆತು ಬಿಡುತ್ತೆ. ಸಮಾಜಕ್ಕಾಗಿ ಬದುಕಿದರೆ ಇತಿಹಾಸವಾಗಿ ಸದಾ ನೆನಪಿಡುತ್ತೆ

        🙏🏽 *ಶುಭದಿನದ ಶುಭೋದಯ*🙏🏻

ನಿಂದನೆ" ಬದಲಾಗಿ, "ಸ್ಪಂದನೆ" ಇರಲಿ

*"ನಿಂದನೆ" ಬದಲಾಗಿ, "ಸ್ಪಂದನೆ" ಇರಲಿ*
 ‌        ‌                                         ‌     ‌     ‌                                                                                                                                                  ಒಮ್ಮೆ ಒಬ್ಬಾತ ಮೂರು ದಿನಗಳ ಕಾಲ ಕಷ್ಟಪಟ್ಟು ಒಂದು ಅದ್ಭುತವಾದ ಚಿತ್ರಕಲೆಯನ್ನು ರಚಿಸಿದ. ಆ ಚಿತ್ರಕಲೆ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯಬೇಕೆಂದು ಆಸೆಪಟ್ಟ.  ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ ಚಿತ್ರಕಲೆ ಇದು. ಇದರಲ್ಲಿ  ಲೋಪಗಳು ನಿಮಗೆ ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ ಒಂದು  '×' ಚಿನ್ಹೆ ಬರೆಯಿರಿ " ಎಂದು ಅದರಲ್ಲಿತ್ತು.  
ಸಂಜೆಯ ಹೊತ್ತಿಗೆ ಆ ಚಿತ್ರಕಾರ ಪುನಃ ಬಂದು ಚಿತ್ರವನ್ನು ನೋಡಿದ.  ಆತನಿಗೆ ಒಮ್ಮೆಲೇ ಅಳು ಬಂದಿತು. ಕಾರಣ ಏನಂದರೆ ಆ ಚಿತ್ರದ ತುಂಬಾ '×' ಚಿನ್ಹೆಗಳೇ ತುಂಬಿ ಹೋಗಿತ್ತು. .
ಚಿತ್ರಕಾರ ಅಳುತ್ತಾ ತನಗೆ ಚಿತ್ರಕಲೆ ಹೇಳಿಕೊಟ್ಟ ಗುರುವಿನ ಬಳಿಗೆ ಬಂದು ಈ ರೀತಿ ಹೇಳಿದ  "ನಾನು ಚಿತ್ರಕಲೆ ಮಾಡಲು ಸಾಧ್ಯವಿಲ್ಲ ಎಂದು ಇವತ್ತು ನನಗೆ ತಿಳಿಯಿತು" ಎಂದು ವಿಷಾದಿಸಿದ.  ಗುರುಗಳು ಆತನಿಗೆ ಸಮಾಧಾನ ಮಾಡಿ ಮತ್ತೆ  ಆದೇ ಚಿತ್ರಕಲೆ  ಅನ್ನು ಪುನಃ ರಚನೆ ಮಾಡು ಎಂದು ಹೇಳಿದರು. 
ಮತ್ತೊಮ್ಮೆ ಆ ಚಿತ್ರಕಲೆ ಬರೆದು ತಂದನು.  ಈ ಬಾರಿ ಕೂಡ ಅದೇ ಸ್ಥಳದಲ್ಲಿ ಇಟ್ಟು ಕೆಳಗೆ ಹೀಗೆ ಬರೆಯಲು ಗುರುಗಳು ಸೂಚಿಸಿದರು..."ನಾನು ಬರೆದ ಮೊದಲ ಪೇಂಟಿಂಗ್ ಇದು.  ಇದರಲ್ಲಿ ನಿಮಗೆ ಲೋಪಗಳು ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ ಕೆಳಗೆ ಇಟ್ಟಿರುವ ಕುಂಚ ಹಾಗೂ ವರ್ಣಗಳನ್ನು ಉಪಯೋಗಿಸಿ ಸರಿ ಮಾಡಿ"  ಎಂದು. ಗುರುಗಳು ಹೇಳಿದಂತೆ ಬರೆದು ಅಲ್ಲಿಟ್ಟನು. ಒಂದು ವಾರ ಕಾಲ ಕಳೆದರೂ... ಒಬ್ಬರಾದರೂ ಅದರಲ್ಲಿರುವ ಲೋಪಗಳನ್ನು ಸರಿಪಡಿಸಲಿಲ್ಲ..
ಆತನಿಗೆ  ಆಶ್ಚರ್ಯವಾಯಿತು. ತಪ್ಪುಗಳನ್ನು ಕಂಡುಹಿಡಿದವರು ಅದನ್ನು ಸರಿಪಡಿಸಿ ಎಂದು ಹೇಳಿದಾಗ ಒಬ್ಬರಿಂದಲೂ ಆಗಲಿಲ್ಲವೇಕೆ..? ಯೋಚಿಸಿದನು. ನಂತರ ಅವನಿಗೆ ಅರ್ಥವಾಯಿತು...ಇದು ನಿಮಗೂ ಅರ್ಥವಾಗಿದೆಯೆಂದೂ ನಂಬುತ್ತೇನೆ. *ನಮ್ಮಲ್ಲಿ ತಪ್ಪುಗಳನ್ನು ತೋರಿಸಲು ಅನೇಕರು ಇದ್ದಾರೆ. ಆದರೆ ನಮ್ಮನ್ನು ಸರಿಪಡಿಸಲು ಯಾರೂ ಮನಸ್ಸು ಮಾಡುವುದಿಲ್ಲ. ಅದು ಅವರಿಂದಾಗಿ ಆಗದು...!!*
ಜನರ ನಿಂದನೆಗಳಿಗೆ ಅವಮಾನಗಳಿಗೆ  ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸ್ವಾಭಿಮಾನ, ಆತ್ಮವಿಶ್ವಾಸದೊಂದಿಗೆ ಈ ಜಗತ್ತನ್ನು ನೋಡುತ್ತಾ ಮುಂದೆ ಸಾಗಿರಿ.

 ಕೃಷ್ಣಾರ್ಪಣಮಸ್ತು...🙏💐

Friday, December 18, 2020

Dream Big. Set Goals. Work Hard.Never ever give up in life.

2 stories
1. Yahoo refused Google
2. Nokia refused Android

Moral:
1. Update yourself with time, else you will become obsolete
2. Taking no risk is the biggest risk. Take risks and adopt new technologies

2 more stories:
1. Google acquired YouTube and Android
2. Facebook acquired Instagram and WhatsApp

Moral
1. Become so powerful that your enemies become your allies
2. Grow fast, become big, and then eliminate competition

2 more stories:
1. Barack Obama was an ice cream seller
2. Elon Musk was a worker in a lumber mill

Moral:
1. Don't judge people based on their past jobs
2. Your present doesn't decide your future, your courage and hard work does

2 more stories:
1. Colonel Sanders created KFC at the age of 65
2. Jack Ma who was rejected by KFC founded Alibaba

Moral:
1. Age is just a number - you can be successful at any age
2. Never ever give up in life - only those who never give up win

2 final stories:
1. Owner of Ferrari insulted a tractor maker
2. The tractor maker created Lamborghini

Moral:
1. Never underestimate or disrespect anyone
2. Success is the best revenge

You can be successful at any age and from any background.

Dream Big. Set Goals. Work Hard.

Never ever give up in life.

Thursday, December 17, 2020

ಗಂಟೆಗಟ್ಟಲೆ ಕ್ಯೂನಲ್ಲಿ ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.

#ದೇವರಿಗೆ #ಬೆಲೆ #ಕಟ್ಟುವವರು #ನಾವೇ

ಗಂಟೆಗಟ್ಟಲೆ ಕ್ಯೂನಲ್ಲಿ  ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.

ಓ ದೇವರೇ! ದುಡ್ಡು ಕೊಟ್ಟ ಭಕ್ತರಿಗೆ ಹತ್ತಿರದಿಂದ ದರ್ಶಿಸಲು  ಬೇರೊಂದು ಸಾಲು.ದುಡ್ಡುಕೊಡದ ಭಕ್ತರಿಗೆ ದೂರದ ದರ್ಶನಕ್ಕಾಗಿ ಬೇರೆ 
 ದೊಡ್ಡ ಸಾಲು. ಇದಾವ ನ್ಯಾಯ ಭಗವಂತನೇ?

ಆ ದೇವರು ನಕ್ಕು ಉತ್ತರಿಸುತ್ತಾರೆ.

ನಾನು ತಂದೆತಾಯಿಗಳು ದೈವಸಮಾನ ಎಂದೆ. ನೀವು  ಅವರನ್ನು ಅದೇ ರೀತಿ ಪರಿಗಣಿಸಿ ಗೌರವಿಸುತ್ತೀರಾ?

ಗುರು ಬ್ರಹ್ಮ ಗುರುಃ ವಿಷ್ಣು ಗುರುಸಾಕ್ಷಾತ್ ಪರಬ್ರಹ್ಮ ಎಂದು ಹೇಳಿದೆ. ನೀವು ಅದೇ ರೀತಿ ಗುರುಗಳನ್ನು ಗೌರವಿಸುತ್ತೀರಾ?

ಜನಸೇವೆಯೇ ಜನಾರ್ದನ  ಸೇವೆಎಂದು ಹೇಳಿದೆ. ನೀವು ಅದೇರೀತಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತೀರಾ?

ಇಲ್ಲಿ ಅಲ್ಲಿ ಎನ್ನ ದೆ ಎಲ್ಲೆಲ್ಲೂ ನಾನೇ ಇದ್ದೇನೆ.ಎಲ್ಲಿ ಹುಡುಕಿದರೂ ನಾನೇ ಇದ್ದೇನೆ. ನಿನ್ನಲ್ಲಿಯೂ, ಎಲ್ಲರಲ್ಲಿಯೂ ನಾನೇ ಇರುವೆ. ನೀನು ನಂಬಲಿಲ್ಲ. 

ನನ್ನ ಮೂರ್ತಿಯನ್ನು ದೇವಸ್ಥಾನದಲ್ಲಿರಿಸಿ, ದರ್ಶನದ ವೇಳೆಯನ್ನೂ, ದರ್ಶನದ ದರವನ್ನು, ಯಾರು ಎಷ್ಟು ಕಾಲ, ಹೇಗೆ ದರ್ಶನ ಮಾಡಬೇಕೆಂದು, ನೀನೇ ನಿರ್ಧರಿಸಿದೆ. ವಿವಿಧ ಪೂಜಾವಿಧಿ,ವಿಧಾನಗಳನ್ನೂ, ಅವುಗಳ ದರಗಳನ್ನೂಸಹ ನೀನೇ ನಿರ್ಧರಿಸಿರುವೆ. 

ಎಲ್ಲವನ್ನೂ ನೀನೇಮಾಡಿ ನನ್ನನ್ನು ಕೇಳುವುದು ಯಾವ ನ್ಯಾಯವಯ್ಯಾ?

ಹುಚ್ಚ ಮಾನವಾ, ನಿಜವಾಗಿಯೂ ನನ್ನನ್ನು ಕಾಣುವ ಹಂಬಲವಿದ್ದರೆ, ಪಶು,ಪಕ್ಷಿ,ವೃಕ್ಷಗಳಲ್ಲಿ ಕಾಣು. ನಿನ್ನಲ್ಲಿ ಕಾಣು, ಇತರರಿಗೆ ಪ್ರೀತಿಯಿಂದ ಸೇವೆ ಮಾಡುವುದರ ಮೂಲಕ ಎಲ್ಲರಲ್ಲೂ ನನ್ನನ್ನೇ ಕಾಣು. ಮಾತಾ ಪಿತೃಗಳಲ್ಲಿ,ಗುರುಹಿರಿಯರಲ್ಲಿ ಕಾಣು. ನದಿ,ಬೆಟ್ಟ ಗುಡ್ಡ ಗಳಲ್ಲಿ, ಈ ಸುಂದರವಾದ ಪ್ರಕೃತಿಯಲ್ಲಿ ,ಆ ನೀಲಾಕಾಶದಲ್ಲಿ ಕಾಣು. ಕೇವಲ ದೇವಸ್ಥಾನಕ್ಕೆ ಮಾತ್ರ ನನ್ನ ಇರುವಿಕೆಯನ್ನು ಸೀಮಿತಗೊಳಿಸಬೇಡ.
dgnsgreenworld

Tuesday, December 15, 2020

ವಸುದೈವಕುಟುಂಬಕಂ

ವಸುದೈವಕುಟುಂಬಕಂ!
ಓರ್ವ ತಂದೆಯು ಅಂಗಡಿಯಿಂದ ವಿಶ್ವದ ನಕ್ಷೆಯನ್ನು ತಂದಿದ್ದನು. ಅವನ ಸಣ್ಣ ಮಗನು ತಿಳಿಯದೆ ಆ ನಕ್ಷೆಯನ್ನು ಚೂರುಚೂರಾಗಿ ಹರಿದು ಹಾಕಿಬಿಟ್ಟನು. ತಂದೆಗೆ ವಿಪರೀತ ಕೋಪ ಬಂದು ಮಗನ ಮೇಲೆ ರೇಗಾಡಲು ಪ್ರಾರಂಭಿಸಿದನು. ಆದರೆ ಮಗನು ಶಾಂತನಾಗಿ ತಂದೆಗೆ ಹೇಳಿದ, “ಅಪ್ಪ! ನೀವೇನೂ ಚಿಂತಿಸಬೇಡಿ. ನಾನು ಕೆಲವೇ ನಿಮಿಷಗಳಲ್ಲಿ ಈ ನಕ್ಷೆಯನ್ನು ಮತ್ತೆ ಜೋಡಿಸುತ್ತೇನೆ”. ತಂದೆಗೆ ಬಹಳ ಆಶ್ಚರ್ಯ! ಅದು ಹೇಗೆ ಆ ಸಣ್ಣ ಮಗನು ಹರಿದುಹೋಗಿರುವ ವಿಶ್ವನಕ್ಷೆಯನ್ನು ಜೋಡಿಸಬಲ್ಲ?! ಎಂದು
ಮಗ ಅವನ ಕೊಠಡಿಗೆ ಹೋಗಿ, ಕೆಲವು ನಿಮಿಷಗಳಲ್ಲೇ ಹೊರಬಂದು ಸರಿಯಾಗಿ ಜೋಡಿಸಿದ್ದ ವಿಶ್ವದ ನಕ್ಷೆಯನ್ನು ತಂದೆಗೆ ಕೊಟ್ಟನು. ತಂದೆಯು ತನ್ನ ಕಣ್ಣನ್ನು ತಾನೇ ನಂಬದಾದನು. ‘ಅದು ಹೇಗೆ ಇಷ್ಟು ಸ್ವಲ್ಪ ಸಮಯದಲ್ಲಿ ವಿಶ್ವನಕ್ಷೆಯನ್ನು ಜೋಡಿಸಿದೆ?’ ಎಂದು ಕೇಳಲು, ಮಗ ಉತ್ತರಿಸಿದ. ‘ಈ ನಕ್ಷೆಯ ಹಿಂದೆ ಒಂದು ತಂದೆ, ತಾಯಿ, ಮಕ್ಕಳ ಕುಟುಂಬದ ಚಿತ್ರವಿತ್ತು. ನಾನು ಆ ಚಿತ್ರವನ್ನು ಸರಿಯಾಗಿ ಜೋಡಿಸಿ, ಅದನ್ನು ತಿರುಗಿಸಿದೆ. ವಿಶ್ವ ನಕ್ಷೆ ಸಿದ್ಧವಾಗಿತ್ತು!’ ಎಂದು.
ಕುಟುಂಬಗಳು ಒಂದಾಗಿದ್ದರೆ ಮಾತ್ರ ವಿಶ್ವವು ಒಂದಾಗಿರುತ್ತದೆ. ಕುಟುಂಬದಲ್ಲಿ ವಾದ-ವಿವಾದಗಳು, ಘರ್ಷಣೆಗಳು, ಕೋಪ-ತಾಪಗಳಿದ್ದು, ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುತ್ತೇನೆಂದು ಹೊರಡುವುದು ಮೂರ್ಖತನ. ಕುಟುಂಬದ ಸದಸ್ಯರಲ್ಲಿ ಸೌಹಾರ್ದತೆ, ಸಾಮರಸ್ಯ, ಒಗ್ಗಟ್ಟು, ತ್ಯಾಗ ಮನೋಭಾವಗಳಿದ್ದರೆ ಮಾತ್ರ ವಿಶ್ವದಲ್ಲಿ ಸುಖ-ಶಾಂತಿಗಳು ನೆಲೆಸಬಲ್ಲವು.
'ತಂದೆತಾಯಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ' ಎಂಬ ಮಕ್ಕಳ ಮನದ ಮಾತುಗಳೇ ಇಂಗ್ಲೀಷಿನಲ್ಲಿ ಕುಟುಂಬವಾಗಿದೆ. ಅಂದರೆ Father And Mother I Love You ಈ ವಾಕ್ಯದ ಮೊದಲ ಅಕ್ಷರಗಳನ್ನು ಸೇರಿಸಿದರೆ ನಮಗೆ ಸಿಗುವುದು FAMILY ಅಂದರೆ 'ಕುಟುಂಬ!'. ನಾವು ನಮ್ಮ ಕುಟುಂಬದತ್ತ ಗಮನಹರಿಸಿ, ಸಂಬಂಧಗಳನ್ನು ಮಧುರವಾಗಿರಿಸಿಕೊಂಡರೆ, ದೇವರು ಅವನ ಕುಟುಂಬವಾದ ಈ ವಿಶ್ವವನ್ನು ನೋಡಿಕೊಳ್ಳುತ್ತಾನೆ.

ಶ್ರೀಕೃಷ್ಣಾರ್ಪಣಮಸ್ತು

Friday, December 11, 2020

ನೋಟು ತಿರುಗಿ ಗ್ರಾಹಕನ ಕೈಗೇ ಬ೦ತು. ಅದರೆ ಅದು ಸಂಚಾರ ಮಾಡಿದ ದಾರಿಯಲ್ಲಿ ಹಲವು ರೀತಿಯ ಸಾಲವನ್ನು ತೀರಿಸಿತು...

ಒಂದು ಲಾಡ್ಜಿಗೆ ಒಬ್ಬರು ರೂಮ್ ಬುಕ್ ಮಾಡಲು ಬಂದರು. ಅವರಿಗೆ ಮೊದಲು ರೂಮ್ ನೋಡಬೇಕಾಗಿತ್ತು. 
ಅದಕ್ಕೆ ಅಲ್ಲಿನ ಮ್ಯಾನೇಜರ್ ಕೇಳಿದಂತೆ 500 ರೂ. ಡಿಪಾಸಿಟ್ ನೀಡಿ ರೂಮು ನೋಡಲು ತೆರಳಿದರು.

ತನ್ನಲ್ಲಿ ಬಂದ 500 ರೂ. ವನ್ನು ಮ್ಯಾನೇಜರ್ ಕಸ ಗುಡಿಸುವಳನ್ನು ಕರೆದು ಅವಳ ಕಳೆದ ತಿಂಗಳ ಸಂಬಳದ ಬಾಕಿ ನೀಡಿದ.

ಅವಳದನ್ನು ಹತ್ತಿರದ ಕ್ಯಾಂಟಿನ್ ಗೆ ಹೋಗಿ ತನ್ನ ತಿಂಗಳ ಲೆಕ್ಕ ಚುಕ್ತ ಗೊಳಿಸಿದಳು.

ಕ್ಯಾಂಟಿನ್ ನ ಮಾಲಕ ಅದನ್ನು ಅಲ್ಲೇ ಇದ್ದ ಹಾಲಿನವನಿಗೆ ನೀಡಿ ಬಾಕಿಗೆ ಜಮಾ ಮಾಡುವಂತೆ ಹೇಳಿದ.

ಹಾಲಿನವ ಸಂತೋಷದಿಂದ ಲಾಡ್ಜಿನ ಪಕ್ಕದಲ್ಲಿರುವ ಪಶು ವೈಧ್ಯರಲ್ಲಿ ಹೋಗಿ  ಕಳೆದ ವಾರ 2000 ರೂ. ಚಿಲ್ಲರೆ ಇಲ್ಲದ ಕಾರಣ ಔಷದ ಹಣದಲ್ಲಿ 500 ರೂ.ಬಾಕಿ ಕೂಡ ಬೇಕಿತ್ತು ಎಂದು ಹೇಳಿ ಕೊಟ್ಟ.

ವೈದ್ಯ ಕೂಡಲೇ 500 ರೂ. ಲಾಡ್ಜಿನ ಮ್ಯಾನೇಜರರಿಗೆ ನೀಡಿ ತನ್ನ ರೂಮ್ ಬಾಡಿಗೆಯ ಬಾಕಿ ನೀಡಿ ಮುಗುಳ್ನಗೆ ಬೀರಿದ.

ಅಷ್ಟರಲ್ಲಿ ಗ್ರಾಹಕ ತನಗೆ ರೂಮ್ ಇಷ್ಟವಾಗಿಲ್ಲ ಎಂದು ತಾನು ನೀಡಿದ ತನ್ನ 500 ರೂ. ಮ್ಯಾನೇಜನಿ೦ದ ಹಿಂಪಡೆದ.

ನೋಟು ತಿರುಗಿ ಗ್ರಾಹಕನ ಕೈಗೇ ಬ೦ತು. ಅದರೆ ಅದು ಸಂಚಾರ ಮಾಡಿದ ದಾರಿಯಲ್ಲಿ ಹಲವು ರೀತಿಯ ಸಾಲವನ್ನು ತೀರಿಸಿತು....

 ಜೀವವಿರದ ಒಂದು ಬೆಲೆಯುಳ್ಳ ಕಾಗದದ ಚೂರು ಎಲ್ಲರ ಸಾಲಗಳನ್ನು ತೀರಿಸಿ ಅವರ ಮೊಗದಲ್ಲಿ ನಿಶ್ಚಿಂತೆಯ ನಗುವನ್ನು ತರಿಸಲು ಕಾರಣವಾದರೆ....  ಜೀವವಿರುವ ನಾವುಗಳು ಎಷ್ಟು ಮೊಗಗಳಲ್ಲಿ ನಗೆಯನ್ನು ತರಿಸಲು ಕಾರಣವಾಗಿದ್ದೇವೆ.... ಯೋಚಿಸುವ ಪರಿ ನಮಗೆ ಬಿಟ್ಟದ್ದು . ಸಿಟ್ಟು, ಸೇಡು, ಹಠ, ಅಹಂಕಾರ, ಅಸಹಕಾರ,ದರ್ಪ ದೂರವಿಟ್ಟು ಬುದ್ದಿವಂತಿಕೆಯಿಂದ ಬದುಕಿನ ಕಲೆ ಕಂಡುಕೊಂಡರೆ ನಾವೇ ಸೃಷ್ಟಿಸಿದ ನೋಟಿನ(ಹಣ) ಕಿಂತಾ ಎತ್ತರಕ್ಕೆ ಬೆಳೆಯಬಹುದು...👏👏🙏💐
ಸುಂದರವಾದ ಸಣ್ಣಕಥೆ...ಆದರೆ ಮಾನವೀಯತೆಗಿಂತ ಸುಂದರವಾದ ಮೌಲ್ಯ ಅದ್ಭುತವಾದುದು..💐🌹🌺

 ಭಗವಂತನಾದ  ಶ್ರೀ ಕೃಷ್ಣನು ಹೇಳಿದ್ದು ಇದೆ ಅಲ್ಲವೆ 🙏🙏

ಹೃದಯ ತಜ್ಞರ ಸಲಹೆಗಳು

*ಹೃದಯ ತಜ್ಞರ ಸಲಹೆಗಳು‌...!*

ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.

೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.

೨. ಊಟದ ೩೦ ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.

೩. ಸ್ನಾನ ಮಾಡುವ ಮೊದಲು,  ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)

೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)

೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.

೬. ಕಾಲಿನ ಸ್ನಾಯುಗಳು  ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.

*ಓರ್ವ ಶ್ವಾಸಕೋಶ ಪರಿಣಿತ ವೈದ್ಯರ ಹೇಳಿಕೆಯ ಅನುಸಾರ, ಪ್ರತಿಯೊಬ್ಬರೂ ಹತ್ತು ಜನರಿಗೆ ಈ ಸಂದೇಶವನ್ನು ಕಳಿಸಿದರೆ, ಕನಿಷ್ಟಪಕ್ಷ ಒಂದು ಜೀವವನ್ನಾದರೂ ಉಳಿಸಬಹುದು!*

ಆದ್ದರಿಂದ, ನಾನು ಈ ಸಂಗತಿಯನ್ನು ಎಲ್ಲಾ ಗುಂಪಿಗೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಬಹಳಷ್ಟು ಜನರಿಗೆ ಈ ಸಂಗತಿಗಳು ತಿಳಿದಿರಬಹುದು, ಆದರೆ, ಎಲ್ಲವೂ ತಿಳಿದಿರಲಿಕ್ಕಿಲ್ಲ!

*ಈ ಸಂದೇಶವನ್ನು ಮುಂದುವರಿಕೆ ಮಾಡುವುದು ಅಥವಾ ಬಿಡುವುದು ನಿಮ್ಮ ಆಯ್ಕೆಗೆ ಬಿಟ್ಟ ಸಂಗತಿ.*
*ಆದರೆ, ಹಾಗೆ ಮಾಡಿದ್ದಲ್ಲಿ, ಅದು ಅಮೂಲ್ಯ ಜೀವಗಳನ್ನು ರಕ್ಷಿಸಲು ಕಾರಣವಾಗಬಲ್ಲುದು

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World