www.dgnsgreenworld.blogspot.com

Wednesday, July 8, 2020

*ಉಷ್ಣಂ ಉಷ್ಣಾರ್ತಂ ಉಷ್ಣೇ ಚ ಯುಕ್ತಂ ಚ ಉಷ್ಣೈಃ ನಿಹಂತಿತತ್||53||*-ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ -5 ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

🙏🏽ಅತ್ಯಂತ ಬೆಲೆ ಬಾಳುವ ಸಂದೇಶ🙏🏽

*ಉಷ್ಣಂ ಉಷ್ಣಾರ್ತಂ ಉಷ್ಣೇ ಚ ಯುಕ್ತಂ ಚ ಉಷ್ಣೈಃ ನಿಹಂತಿತತ್||53||*
-ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ -5 ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

*ಉಷ್ಣ ಕಾಲದಲ್ಲಿ, ಬಿಸಿಲಿನಲ್ಲಿ ಕೆಲಸಮಾಡಿ ಉಷ್ಣ ಪೀಡಿತನಾದವನಿಗೆ ಬಿಸಿ ಆಹಾರದೊಂದಿಗೆ ಬಿಸಿ ಮಾಡಿದ ಜೇನನ್ನು ತಿನ್ನಿಸಿದರೆ ತಕ್ಷಣ ಮರಣ ಸಂಭವಿಸುತ್ತದೆ!!!* 

ಅಂದರೆ ಜೇನು ಇಲ್ಲಿ ಸದ್ಯೋಮರಣಕಾರಕ.
ಹಾಗಾಗಿ ಜೇನು ತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು. ಜೇನನ್ನು ಬಿಸಿಮಾಡಿದರೆ ಅದು ನಿಧಾನಗತಿಯ ವಿಷವಾಗುತ್ತದೆ. ಅದನ್ನು ಬಿಸಿ ಆಹಾರಕ್ಕೆ ಹಾಕಿದರೆ ಆ ವಿಷ ತೀಕ್ಷ್ಣತೆ ಪಡೆಯುತ್ತದೆ.‌ ಜ್ವರಪೀಡಿತನಿಗೆ ಕುಡಿಸಿದರೆ ಅದು ಅತ್ಯುಗ್ರ ರೋಗ ತರುತ್ತದೆ. ಬಿಸಿಲಿನಲ್ಲಿ ಬಳಲಿದ ಉಷ್ಣಪೀಡಿತನಿಗೆ ಕೊಟ್ಟರೆ ತಕ್ಷಣ ಕೊಂದೇ ಹಾಕುತ್ತದೆ!!!

*****

*ಏನು ಮಾಡುತ್ತಿದ್ದೇವೆ?*
ಈಗ ಬಹುತೇಕರು, ಶರೀರವನ್ನು ತೆಳ್ಳಗೆ ಮಾಡಿಕೊಳ್ಳಲು, ಕೊಬ್ಬಿನ ಅಂಶ ಕರಗಿಸಲು ಪ್ರತಿದಿನ ಬೆಳಿಗ್ಗೆ ಬಿಸಿನೀರು ಜೇನುತುಪ್ಪವನ್ನು ಯಾವ ಸಂಶಯ ಭಯವೂ ಇಲ್ಲದೇ ಸೇವಿಸುತ್ತಿದ್ದಾರೆ!! ಯಾವ ಫಲಿತಾಂಶವೂ ಇಲ್ಲದೇ!!!
ಇದು ಅಚ್ಚರಿಯೇ ಸರಿ.

*ಪರಿಣಾಮ ಏನು?*
ಬಿಸಿನೀರಿನ ಸಂಪರ್ಕದಿಂದ ಜೇನು ಮಂದಗತಿಯ ವಿಷವಾಗುತ್ತದೆ. ಇದರಿಂದ ಹಾನಿಗೊಳಗಾಗುವುವ ಮೊದಲ ಅಂಗ ಎಂದರೆ *LIVER* *ಯಕೃತ್!*
ನೆನಪಿಡಿ, ಯಾವುದೇ ಕಾಯಿಲೆಗೆ ನಾವು ಬಿಟ್ಟೂ ಬಿಡದಂತೆ ಆಸ್ಪತ್ರೆಯ ಮೆಟ್ಟಿಲನ್ನು ಹತ್ತುತ್ತಿರುವುದಕ್ಕೆ ಕಾರಣವೇ ( ಲಿವರ್ ) ಯಕೃತ್ತನ್ನು ವಿಷಮಯವಾಗಿಸಿರುವುದು.

*ನಿಧಾನಗತಿಯ ವಿಷವಾಗುವ ಕಾರ್ಯ:*
ಬಿಸಿ ಜೇನುತುಪ್ಪ ಶರೀರದ ಅಂಗಗಳಿಗೆ ಬದುಕಲು ಅತ್ಯಗತ್ಯವಾಗಿ ಬೇಕಾಗುವ ಲಿಪಿಡ್ ಅನ್ನು ವಿಭಜನೆ ಮಾಡುತ್ತದೆ. ಆಗ ‌ಲಿವರ್ ಯಕೃತ್ ಅದನ್ನು ತಡೆಯಲು ಪ್ರಯತ್ನಿಸಿ ತನ್ನ ಸ್ನಿಗ್ಧತೆಯ ಸತ್ವವನ್ನೇ ಕಳೆದುಕೊಂಡು *ಲಿವರ್ ಸಿರೋಸಿಸ್ ಎಂಬ ತಾನೇ ಒಣಗಿಹೋಗುವ ಕಾಯಿಲೆಗೆ ತುತ್ತಾಗುತ್ತದೆ.*

ತದನಂತರ ವಿಷವನ್ನು ನೇರ ರಕ್ತಕ್ಕೆ ಬಿಟ್ಟುಬಿಡುತ್ತದೆ, ತತ್ಪರಿಣಾಮ ಎರಡೂ ಕಿಡ್ನಿಗಳು ವಿಷ ಸೋಸಲು ಪ್ರಯತ್ನಿಸಿ ಶಕ್ತಿಹೀನವಾಗಿ *ನೆಫ್ರೈಟೀಸ್* ಆಗಿ ಕಿಡ್ನಿ ಫೇಲ್ ನಲ್ಲಿ ಅಂತ್ಯವಾಗುತ್ತಿವೆ.

*ಶೀಘ್ರ ವಿಷಕಾರಿ ಪರಿಣಾಮ*
ಬಿಸಿ ಜೇನು
+ಬಿಸಿನೀರು
+ಬೇಸಿಗೆ ಕಾಲದಲ್ಲಿ 
+ಉಷ್ಣಪೀಡಿತ ಅವಸ್ಥೆಯಲ್ಲಿ 
"ಕುದಿಸಿದ ಜೇನನ್ನು ಕೊಟ್ಟರೆ, ಲಿವರ್ ಯಕೃತ್-ಕಿಡ್ನಿಯನ್ನೂ ಮೀರಿ ಹೃಯದಯ/ ಪುಪ್ಪುಸದ ರಕ್ತನಾಳಗಳನ್ನು ಒಣಗಿಸಿ ತತ್ಕ್ಷಣ ಸಂಕೋಚ ಮಾಡಿ ಹೃದಯ ಸ್ತಂಭನ ಮಾಡಿ ಕೊಲ್ಲುತ್ತದೆ.
 ಅಥವಾ 
ಮೆದುಳು/ನರಗಳ ಲಿಪಿಡ್ ವಿಭಜನೆ ಮಾಡಿ ಒಣಗಿಸಿ ವಿದ್ಯುತ್ ಸಂವೇದನೆಯನ್ನು ನಿಲ್ಲಿಸಿ ತಕ್ಷಣ ಕೊಂದುಹಾಕುತ್ತದೆ.

*ವೈಜ್ಞಾನಿಕ ವಿವರಣೆ:*
ಬಿಸಿ ಜೇನಿಗೆ ಕೊಬ್ಬನ್ನು ಕರಗಿಸುವ ಪ್ರಭಲ ಶಕ್ತಿ ಇದೆ ಎಂದು ಸಂಶೋಧನೆಗಳಿಂದ ತಿಳಿದಿದೆ. ಆದರೆ ಜೀವ ಉಳಿಯಲು ಅಗತ್ಯವಾದ ಕೊಬ್ಬನ್ನೇ ಕರಗಿಸುತ್ತದೆ ಎಂದು ಅನೇಕರು ಅರಿಯರು.
ಇದೇ ಕಾರಣಕ್ಕೆ  *ಆಯುರ್ವೇದ ಓದದ, ಆ ವಿಜ್ಞಾನದ ಗಂಧವನ್ನೇ ಅರಿಯದ ಅನಾಮಧೇಯರೂ ಆಯುರ್ವೇದ ಸಲಹೆ ಮತ್ತು ಔಷಧ ಕೊಡುತ್ತಿದ್ದಾರೆ!*

*ಸಾವಿರಾರು ಜನರನ್ನು ಸೇರಿಸಿ ಯೋಗ ಹೇಳಿಕೊಡುವವರೂ ಯಾವುದೇ ಅಧ್ಯಯನ ಇಲ್ಲದೇ ಇದ್ದರೂ ಎಗ್ಗಿಲ್ಲದೇ ಸಲಹೆ ಕೊಡುತ್ತಿದ್ದಾರೆ, ಔಷಧಗಳನ್ನೂ ಕೊಡುತ್ತಿದ್ದಾರೆ(ಎಲ್ಲರೂ ಹಾಗಲ್ಲ, ಹಲವಾರು ಜನ ಯೋಗ್ಯ ಸ್ವ-ಅಧ್ಯಯನ, ಕುಟುಂಬ ಪರಂಪರೆಯಿಂದ ಶುದ್ಧ ಆಯುರ್ವೇದ ಫಾಲಿಸುವವರೂ ಇದ್ದಾರೆ)*

*ತೂಕ ಕಳೆದುಕೊಳ್ಳಲು ಜೇನುತುಪ್ಪ+ಬಿಸಿನೀರನ್ನು ಎಂದಿಗೂ ಸೇವನೆ ಮಾಡದಿರಿ.*
ಮತ್ತು
ಯಾರೇ ಹೇಳಲಿ ದಯಮಾಡಿ ಯಾವ ಆಯುರ್ವೇದ ಆಚಾರ್ಯರು ಎಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ ಎಂದು ರೆಫೆರೆನ್ಸ್ ಕೇಳಿ ತಿಳಿದುಕೊಳ್ಳುವುದನ್ನು ಮರೆಯದಿರಿ. ಇದು ನಮ್ಮೆಲ್ಲರ ಹಕ್ಕು, ಅಲ್ಲವೇ?

*ಕಂಡ ಸತ್ಯ:*
ಹಿಮಾಚಲ ಪ್ರದೇಶದ, ಕಾಂಗ್ರಾದ ಅಥರ್ವ ಆಯುರ್ಧಾಮದ ಶಾಖೆಗೆ ಇತ್ತೀಚಿಗೆ ದಂಪತಿಗಳಿಬ್ಬರೂ *"ಸಿರೋಸಿಸ್ ಆಫ್ ಲಿವರ್"* ಸಮಸ್ಯೆಯಿಂದ ಬಂದರು, ಅವರು ಜೇನು ಮತ್ತು ಬಿಸಿಬಿಸಿ ನೀರನ್ನು ನಿತ್ಯವೂ ಆರು ತಿಂಗಳಿನಿಂದ ಸೇವಿಸುತ್ತಿದ್ದರು!! ಅವರ ಕೊಬ್ಬಿನ ಮೂಲ ಸ್ಥಾನ ಯಕೃತ್ ( ಲಿವರ್ ) ಒಣಗಿಹೋಗಿತ್ತು.!!!

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World