www.dgnsgreenworld.blogspot.com

Wednesday, July 29, 2020

👉 *ನಮಗೊಂದು ಚಿಂತನೆ* 👈*ಹೃದಯಸ್ಪರ್ಶಿ ಸಹಾಯ*

👉 *ನಮಗೊಂದು ಚಿಂತನೆ* 👈
*ಹೃದಯಸ್ಪರ್ಶಿ  ಸಹಾಯ*

ಒಮ್ಮೆ ಬಿಲ್ ಗೇಟ್ಸ್ ಬಳಿ ಮಾತನಾಡುತ್ತಿರುವಾಗ ಒಬ್ಬಾತ ಹೇಳಿದ - " ಜಗತ್ತಿನಲ್ಲಿ ನಿಮಗಿಂತಲೂ ದೊಡ್ಡ ಶ್ರೀಮಂತರಿಲ್ಲ...." ಎಂದ.
ಆಗ ಬಿಲ್ ಗೇಟ್ಸ್ ತನ್ನ ಒಂದು ಅನುಭವವನ್ನು ಹೀಗೆ ವಿವರಿಸುತ್ತಾರೆ -

ಕೆಲವು ವರ್ಷಗಳ ಹಿಂದೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ ಸಮಯವಾಗಿತ್ತು....
ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ನ್ಯೂಸ್ ಪೇಪರ್ ಮಾರುವ ಹುಡುಗನನ್ನು ನೋಡಿದೆ... ಆ ಹುಡುಗನ ಕೈಯಲ್ಲಿದ್ದ ಪೇಪರ್ ನ ಹೆಡ್ ಲೈನ್ಸ್ ಓದಿದಾಗ ಒಂದು ಪೇಪರ್ ಖರೀದಿಸಲು ಮುಂದಾದೆ. ಆ ಹುಡುಗನನ್ನು ಕರೆದೆ.. ಆದರೆ ನನ್ನ ಬಳಿ ಚಿಲ್ಲರೆ ಇರಲಿಲ್ಲ.... ಆದ್ದರಿಂದ ನಾನು ಪೇಪರ್ ಬೇಡ ಅಂದು ಬಿಟ್ಟೆ..
ಆದರೆ ಆ ಕಪ್ಪು ವರ್ಣದ ಹುಡುಗ ಒಂದು ಪೇಪರನ್ನು ತೆಗೆದು ನನಗೆ ಕೊಟ್ಟ..
ನನ್ನ ಬಳಿ ಚಿಲ್ಲರೆ ಇಲ್ಲ ಅಂತ ಹೇಳಿದಾಗ, ಪರವಾಗಿಲ್ಲ ಇದು ಫ್ರೀಯಾಗಿ ಇರಲಿ ಅಂತ ಹೇಳಿ ಪೇಪರನ್ನು ಕೊಟ್ಟು ಹೊರಟು ಹೋದ....
ಸುಮಾರು ಮೂರು ತಿಂಗಳ ನಂತರ ಪುನಃ ನಾನು ಅದೇ ವಿಮಾನ ನಿಲ್ದಾಣಕ್ಕೆ ಹೋಗಬೇಕಾಯಿತು. 
ಪುನಃ ಹಿಂದಿನ ಹಾಗೆ ಹೆಡ್ ಲೈನ್ಸ್ ನೋಡಿದ ನಾನು ಆ ಹುಡುಗನಿಂದ ಪೇಪರ್ ಖರೀದಿಸಲು ಮುಂದಾದೆ. ಅಂದು ಕೂಡಾ ನನ್ನ ಬಳಿ ಚಿಲ್ಲರೆ ಇರಲಿಲ್ಲ. 
ಅವತ್ತು ಕೂಡಾ ಆ ಹುಡುಗ ಫ್ರೀಯಾಗಿ ನನಗೆ ಪೇಪರ್ ಕೊಟ್ಟ.. ನಾನು ಆತನಿಂದ ಪೇಪರನ್ನು ತೆಗೊಳ್ಳಲು ಹಿಂಜರಿದೆ..
ಆಗ ಆತ ಪರವಾಗಿಲ್ಲ ಇಟ್ಟುಕೊಳ್ಳಿ... ನನ್ನ ಲಾಭದಲ್ಲಿ ಒಂದು ಚಿಕ್ಕ ಪಾಲು ಇದಾಗಿದೆ ಅಂತ ಹೇಳುತ್ತಾ ಒತ್ತಾಯಿಸಿ ಪೇಪರ್ ಕೊಟ್ಟು ಹೋದ...

ಹತ್ತೊಂಬತ್ತು ವರ್ಷಗಳ ನಂತರ ನಾನು ಶ್ರೀಮಂತನಾದೆ...
ಅದ್ಯಾಕೋ ನನಗೆ ಆ ಹುಡುಗನನ್ನೊಮ್ಮೆ ಕಾಣಬೇಕು ಅಂತ ಮನಸಾಯಿತು.
ಒಂದೂವರೆ ತಿಂಗಳ ಹುಡುಕಾಟದ ಬಳಿಕ ಆ ಹುಡುಗ ಸಿಕ್ಕಿದ...
ಆತನತ್ರ ನಾನು ಕೇಳಿದೆ - " ನನ್ನ ಗುರುತ್ತು ಇದೆಯಾ?"
ಹೌದು ಸರ್ ಗುರುತು ಸಿಕ್ಕಿದೆ. ತಾವು ಅತ್ಯಂತ ದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಅಲ್ಲವೇ?
ಕೆಲವು ವರ್ಷಗಳ ಹಿಂದೆ ನೀನು ನನಗೆ ಎರಡು ನ್ಯೂಸ್ ಪೇಪರ್ ಫ್ರೀಯಾಗಿ ಕೊಟ್ಟದ್ದು ನಿನಗೆ ನೆನಪಿದೆಯಾ?
ಅದಕ್ಕೆ ಪ್ರಾಯಶ್ಚಿತ್ತವಾಗಿ ನಿನಗೆ ಏನಾದರೂ ಕೊಡಲು ನಾನು ಬಯಸುವೆ... ನೀನು ಏನು ಬೇಕಾದರೂ ಕೇಳಬಹುದು...
ಆ ಹುಡುಗ - ತಮ್ಮಿಂದ ನನಗೆ ಅದರ ಪ್ರಾಯಶ್ಚಿತ್ತ ವನ್ನು ಕೊಡಲು ಸಾಧ್ಯವಿಲ್ಲ ಸರ್...
ಬಿಲ್ ಗೇಟ್ಸ್ - ಏನು ಕಾರಣ....!??
ಆ ಹುಡುಗ - ನಾನು ಬಡವನಾಗಿದ್ದಾಗ ನಾನು ನಿಮಗೆ ಕೊಟ್ಟೆ...
ಆದರೆ ತಾವು ಶ್ರೀಮಂತರಾದ ಬಳಿಕ ನನಗೆ ಕೊಡಲು ತಾವು ಬಂದಿದ್ದೀರಿ...

ಹಾಗಿರುವಾಗ ಬಡವನಾಗಿದ್ದ ಅವಸ್ಥೆಯಲ್ಲಿ ನಾನು ಕೊಟ್ಟದ್ದು ಮತ್ತು ಶ್ರೀಮಂತನಾದ ಬಳಿಕ ತಾವು ಕೊಡುವುದಕ್ಕೂ ಸಾಮ್ಯತೆ ಇಲ್ಲ ಸರ್....

ಇಷ್ಟು ಹೇಳಿದ ನಂತರ ಬಿಲ್ ಗೇಟ್ಸ್ ತನ್ನನ್ನು ಅತಿ ದೊಡ್ಡ ಶ್ರೀಮಂತ ಅಂತ ಹೇಳಿದ ವ್ಯಕ್ತಿಯತ್ರ ಹೇಳುತ್ತಾರೆ - ಈಗ ಹೇಳಿ ಅತ್ಯಂತ ದೊಡ್ಡ ಶ್ರೀಮಂತ ಆ ಕಪ್ಪಾದ ಹುಡುಗನಲ್ಲವೇ...?

ದಾನ ಧರ್ಮ ಮಾಡಲು ಶ್ರೀಮಂತರಾಗಬೇಕಿಲ್ಲ ಅಥವಾ ಶ್ರೀಮಂತನಾಗುವವರೆಗೂ ಕಾಯಬೇಕಿಲ್ಲ...
ಸಹಾಯ ಮಾಡುವ ಗುಣಕ್ಕೆ ಸಮಯದ ಪರಿಧಿಯಿಲ್ಲ. ಶ್ರೀಮಂತ ಬಡವ ಎಂಬ ಭೇದಭಾವ ಇಲ್ಲ. ಆ ಗುಣವು ಹೃದಯದಿಂದ ಬರಬೇಕು.

Friday, July 24, 2020

Today is the birthday of our beloved Chariji Maharaj. In 1984, one young abhyasi asked Him, just to know His birthday.

Today is the birthday of our beloved Chariji Maharaj. 
In 1984, one young abhyasi asked Him, just to know His birthday,
" When were you born?"
Pat came the reply from the Master," Before Creation!"
I can still recall the shocked expression of the abhyasi !
After quite a few years, Sri CSR, who was older than Rev. Chariji Maharaj, came to BMA on 24 July, to the  Master's cottage adjacent to the old mediation hall. As usual Rev. Chariji Maharaj welcomed him. Sri CSR said, "Congratulations to the new born!"
Rev. Chariji Maharaj immediately replied," Sir, l am yet to be born!" and hugged him.
I leave it to you to mull over the meanings of both the statements of Rev. Chariji Maharaj.
      As for myself, l have never come across, interacted, lived with a personality like Rev. Chariji Maharaj. He was the most magnificent, gentle, soft, lovable, erudite, majestic ..... well go on adding... personality! Who can deny this? He was compassionate even to those who didn't like Him or harmed Him.
If ever God walked on earth, it was He, our beloved Chariji Maharaj!
Let's offer our sincere gratitude to Him for choosing to be with us all!
      So many memories. Full of Rev. Chariji Maharaj. How can one exhaust them. 
       Rev. Chariji Maharaj is infinite in every thing.... knowledge, love, patience, compassion, commitment, discipline....
      Who on earth can measure His  unfathomable Personality?
      Eyes are filled with tears, mind with His personality, heart with His love!
      May He continue to bless us all!

Wednesday, July 22, 2020

*ಪ್ರಣಾಮ್/ ನಮಸ್ಕಾರ ಪ್ರಾಮುಖ್ಯತೆ*

*ಪ್ರಣಾಮ್/ ನಮಸ್ಕಾರ ಪ್ರಾಮುಖ್ಯತೆ*

       ಮಹಾಭಾರತದ ಯುದ್ಧ ನಡೆಯುತ್ತಿತ್ತು -
     ಒಂದು ದಿನ, ದುರ್ಯೋಧನನ ವಿಡಂಬನೆಯಿಂದ ನೋಯುತ್ತಿರುವ "ಭೀಷ್ಮ ಪಿತಾಮಹ" ಹೀಗೆ ಘೋಷಿಸುತ್ತಾನೆ -

       "ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"

        ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -

    ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. 

ನಂತರ ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮನ ಶಿಬಿರವನ್ನು ತಲಿಪಿದರು -

  ಶಿಬಿರದ ಹೊರಗೆ ನಿಂತು ದ್ರೌಪತಿಗೆ – “ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದರು

      ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ ಅವರು -    *ಅಖಂಡ ಸೌಭಾಗ್ಯವತಿ ಭವ* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!

   " ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿಮ್ಮನ್ನು ಇಲ್ಲಿಗೆ  ಕರೆತಂದಿದ್ದಾರಾ "? ಆಗ ದ್ರೌಪದಿ ಹೀಗೆ ಹೇಳಿದಳು -
     "ಹೌದು ಮತ್ತು ಅವರು ಕೋಣೆಯ ಹೊರಗೆ ನಿಂತಿದ್ದಾರೆ" ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. "ನನ್ನ ಒಂದು ವಚನವನ್ನು ನನ್ನ ಇತರ ವಚನಗಳಿಂದ  ಕತ್ತರಿಸಲು ಶ್ರೀ ಕೃಷ್ಣ ಮಾತ್ರ ಮಾಡಬಹುದು"

   ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು -

    *ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದರಿಂದ, ನಿನ್ನ ಗಂಡಂದಿರಿಗೆ ಜೀವನ ಸಿಕ್ಕಿದೆ*

  "ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿಗಳಿಗೆ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷಾಸನ, ಇತ್ಯಾದಿ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ
"
...... ಅಂದರೆ ...... 

ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -

    *ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತಿದೆ*

    "ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"

     ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ.

  ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಅಳವಡಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ ಮನೆ ಸ್ವರ್ಗವಾಗುತ್ತದೆ."

       ಏಕೆಂದರೆ: -

        ನಮಸ್ಕಾರ ಪ್ರೀತಿ.
       ನಮಸ್ಕಾರ ಶಿಸ್ತು.
        ನಮಸ್ಕಾರ ಶೀತಲತೆ.
        ನಮಸ್ಕಾರ ಗೌರವವನ್ನು ಕಲಿಸುತ್ತವೆ.
        ನಮಸ್ಕಾರದಿಂದ ಸು-ವಿಚಾರ ಬರುತ್ತದೆ

Sunday, July 19, 2020

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.
ಒಣ ಹಣ್ಣುಗಳ( Dry fruits)ಲ್ಲಿ ಒಂದಾದ, ಭಾರತ ಮೂಲದ ಈ ಅಕ್ರೋಟು ಕಾಶ್ಮೀರ ಹಾಗೂ ಹಿಮಾಲಯ ಶ್ರೇಣಿಯ ರಾಜ್ಯಗಳಲ್ಲಿ ಬೆಳೆಯುತ್ತಾರೆ.

ಗಟ್ಟಿಯಾದ ಕವಚ ಹೊಂದಿರುವ  ಕಾಯಿಯನ್ನು ಒಡೆದಾಗ ಸುರುಳಿಯಾಕಾರದ ಅಕ್ರೋಟ್ ಥೇಟ್ ಮೆದುಳಿನ ಆಕಾರದಂತೆ ಕಾಣುತ್ತದೆ.

ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಪೊಟ್ಯಾಷಿಯಂ, ಪ್ರೋಟಿನ್, ಒಮೆಗಾ 3,ರಂಜಕ, ನಾರಿನಂಶ, ಇತ್ಯಾದಿ ಅತಿ ಹೆಚ್ಚು ಪೋಷಕಾಂಶಗಳು ಇರುವುದರಿಂದ ಶರೀರದ ಅಂದ ಹಾಗೂ ಆರೋಗ್ಯಕ್ಕೆ
ಸಹಕಾರಿಯಾಗಿದೆ.

      { ಅಕ್ರೋಟ್ ಸೇವನೆಯ ಲಾಭಗಳು}

* ಮೆದುಳನ್ನು ಚುರುಕುಗೊಳಿಸಿ ಮರೆಗುಳಿತನ ನಿವಾರಿಸುತ್ತದೆ.

* ಮೂಳೆಗಳಿಗೆ ಬಲ ನೀಡಿ ಸ್ನಾಯುಗಳನ್ನು ಬಲಪಡಿಸುತ್ತದೆ.

*ಹೃದಯ ಆರೋಗ್ಯಕರವಾಗಿರಲು ಸಹಕಾರಿಯಾಗಿದೆ.

* ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ.

*ಚರ್ಮ ಕಲೆ ರಹಿತವಾಗಿ ಕಾಂತಿಯುಕ್ತವಾಗಿಇರುತ್ತದೆ,
ಹಾಗೂ ಮುಖದ ನೆರಿಗೆಗಳನ್ನು ನಿವಾರಿಸುತ್ತದೆ.

* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ,ದೇಹ ಉತ್ಸಾಹ ಹುರುಪಿನಿಂದ ಇರುವಂತೆ ಮಾಡುತ್ತದೆ.

* ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಅಗತ್ಯ ಪೋಷಕಾಂಶ ಗಳನ್ನು ಒದಗಿಸುತ್ತದೆ.

* ಮಧುಮೇಹಿಗಳಿಗೆ ಕೂಡ ಅತ್ಯುತ್ತಮ.

* ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.

* ಅಕ್ರೋಟ್ ತೈಲ (Walnut oil) ಕಾಲ್ಬೆರಳುಗಳ ನಡುವೆ ಕಾಣಿಸಿಕೊಳ್ಳುವ ಫಂಗಸ್,ಸೋರಿಯಾಸಿಸ್
ನಂತಹ ಚರ್ಮದ ಕಾಯಿಲೆಗಳಿಗೆ ಉಪಯುಕ್ತ ವಾಗಿದೆ.

* ವಾಲ್ ನಟ್ ಆಯಿಲ್ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

* ಬೆಳೆಯುವ ಮಕ್ಕಳಿಗೆ ತಿನ್ನಿಸುವುದರಿಂದ ಮೆದುಳಿನ ಬೆಳವಣಿಗೆ ಉತ್ತಮವಾಗಿ, ಬುದ್ಧಿ ಚುರುಕಾಗುತ್ತದೆ.

ಅಕ್ರೋಟ್ ಉಷ್ಣಕಾರಕ ಗುಣ ಹೊಂದಿದ್ದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಸೇವಿಸಬಹುದು.

*ಹಿರಿಯರು ಒಂದು ದಿನಕ್ಕೆ 02 ಅಕ್ರೋಟ ಸೇವಿಸಬೇಕು. ಮಕ್ಕಳಿಗೆ 01ಸಾಕು.
ಅಕ್ರೋಟನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅರೆದು ಹಾಲಿನಲ್ಲಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು. 
ಅಕ್ರೋಟನೊಂದಿಗೆ ನಾಲ್ಕೈದು ಬದಾಮು ಸೇರಿಸಬಹುದು.
 ಅಕ್ರೋಟು ದರದಲ್ಲಿ ತುಟ್ಟಿಯಾದರೂ ರೆಡಿಮೇಡ್ ಫುಡ್, ಬೇಕರಿ ತಿನಿಸು ತಿನ್ನುವುದಕ್ಕಿಂತ, 
ಅಕ್ರೋಟ್ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ.         ( ವಿವಿಧ ಮೂಲಗಳ ಸಂಗ್ರಹ)
         

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.

ಅಕ್ರೋಟ್, ಅಖ್ರೋಟ್, ಅಕ್ರೋಡ ಎಂದು ಕರೆಯಲ್ಪಡುವ ಇದಕ್ಕೆ ಆಂಗ್ಲ ಭಾಷೆಯಲ್ಲಿ wal nut ಎಂದು ಕರೆಯುತ್ತಾರೆ.
ಒಣ ಹಣ್ಣುಗಳ( Dry fruits)ಲ್ಲಿ ಒಂದಾದ, ಭಾರತ ಮೂಲದ ಈ ಅಕ್ರೋಟು ಕಾಶ್ಮೀರ ಹಾಗೂ ಹಿಮಾಲಯ ಶ್ರೇಣಿಯ ರಾಜ್ಯಗಳಲ್ಲಿ ಬೆಳೆಯುತ್ತಾರೆ.

ಗಟ್ಟಿಯಾದ ಕವಚ ಹೊಂದಿರುವ  ಕಾಯಿಯನ್ನು ಒಡೆದಾಗ ಸುರುಳಿಯಾಕಾರದ ಅಕ್ರೋಟ್ ಥೇಟ್ ಮೆದುಳಿನ ಆಕಾರದಂತೆ ಕಾಣುತ್ತದೆ.

ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಪೊಟ್ಯಾಷಿಯಂ, ಪ್ರೋಟಿನ್, ಒಮೆಗಾ 3,ರಂಜಕ, ನಾರಿನಂಶ, ಇತ್ಯಾದಿ ಅತಿ ಹೆಚ್ಚು ಪೋಷಕಾಂಶಗಳು ಇರುವುದರಿಂದ ಶರೀರದ ಅಂದ ಹಾಗೂ ಆರೋಗ್ಯಕ್ಕೆ
ಸಹಕಾರಿಯಾಗಿದೆ.

      { ಅಕ್ರೋಟ್ ಸೇವನೆಯ ಲಾಭಗಳು}

* ಮೆದುಳನ್ನು ಚುರುಕುಗೊಳಿಸಿ ಮರೆಗುಳಿತನ ನಿವಾರಿಸುತ್ತದೆ.

* ಮೂಳೆಗಳಿಗೆ ಬಲ ನೀಡಿ ಸ್ನಾಯುಗಳನ್ನು ಬಲಪಡಿಸುತ್ತದೆ.

*ಹೃದಯ ಆರೋಗ್ಯಕರವಾಗಿರಲು ಸಹಕಾರಿಯಾಗಿದೆ.

* ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ.

*ಚರ್ಮ ಕಲೆ ರಹಿತವಾಗಿ ಕಾಂತಿಯುಕ್ತವಾಗಿಇರುತ್ತದೆ,
ಹಾಗೂ ಮುಖದ ನೆರಿಗೆಗಳನ್ನು ನಿವಾರಿಸುತ್ತದೆ.

* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ,ದೇಹ ಉತ್ಸಾಹ ಹುರುಪಿನಿಂದ ಇರುವಂತೆ ಮಾಡುತ್ತದೆ.

* ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಅಗತ್ಯ ಪೋಷಕಾಂಶ ಗಳನ್ನು ಒದಗಿಸುತ್ತದೆ.

* ಮಧುಮೇಹಿಗಳಿಗೆ ಕೂಡ ಅತ್ಯುತ್ತಮ.

* ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.

* ಅಕ್ರೋಟ್ ತೈಲ (Walnut oil) ಕಾಲ್ಬೆರಳುಗಳ ನಡುವೆ ಕಾಣಿಸಿಕೊಳ್ಳುವ ಫಂಗಸ್,ಸೋರಿಯಾಸಿಸ್
ನಂತಹ ಚರ್ಮದ ಕಾಯಿಲೆಗಳಿಗೆ ಉಪಯುಕ್ತ ವಾಗಿದೆ.

* ವಾಲ್ ನಟ್ ಆಯಿಲ್ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

* ಬೆಳೆಯುವ ಮಕ್ಕಳಿಗೆ ತಿನ್ನಿಸುವುದರಿಂದ ಮೆದುಳಿನ ಬೆಳವಣಿಗೆ ಉತ್ತಮವಾಗಿ, ಬುದ್ಧಿ ಚುರುಕಾಗುತ್ತದೆ.

ಅಕ್ರೋಟ್ ಉಷ್ಣಕಾರಕ ಗುಣ ಹೊಂದಿದ್ದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಸೇವಿಸಬಹುದು.

*ಹಿರಿಯರು ಒಂದು ದಿನಕ್ಕೆ 02 ಅಕ್ರೋಟ ಸೇವಿಸಬೇಕು. ಮಕ್ಕಳಿಗೆ 01ಸಾಕು.
ಅಕ್ರೋಟನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅರೆದು ಹಾಲಿನಲ್ಲಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು. 
ಅಕ್ರೋಟನೊಂದಿಗೆ ನಾಲ್ಕೈದು ಬದಾಮು ಸೇರಿಸಬಹುದು.
 ಅಕ್ರೋಟು ದರದಲ್ಲಿ ತುಟ್ಟಿಯಾದರೂ ರೆಡಿಮೇಡ್ ಫುಡ್, ಬೇಕರಿ ತಿನಿಸು ತಿನ್ನುವುದಕ್ಕಿಂತ, 
ಅಕ್ರೋಟ್ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ.         ( ವಿವಿಧ ಮೂಲಗಳ ಸಂಗ್ರಹ)
                    

ಈ ಅಗಸೆ ಬೀಜ ವಿಶ್ವದಲ್ಲಿಯೇ ಅತ್ಯಧಿಕ ಮೆಗ್ನೀಷಿಯಂ ಹೊಂದಿರುವ ಬೀಜವಾಗಿದೆ.

ಅಗಸೆ ಬೀಜ , ಅಗಸಿ ಬೀಜ ಎಂದು ಕರೆಯಲ್ಪಡುವ  ಈ Flax seeds ಬೀಜಗಳಿಗೆ,ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಅಲಸಿ ಎಂದು ಕರೆಯುತ್ತಾರೆ.

ಈ ಅಗಸೆ ಬೀಜಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬಿಳಿ ಜೋಳದ ಜೊತೆಗೆ ಅಗಸಿ ಯನ್ನು ಬೆಳೆಯಲಾಗುತ್ತದೆ.

ಉತ್ತರ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಬಿಳಿಜೋಳದ ರಾಶಿಯ ಕೊನೆಯಲ್ಲಿ ಅಗಸೆ ಹಾಗೂ ಕುಸಿಬೆ ರಾಶಿ ಮಾಡುತ್ತಾರೆ. ಏಕೆಂದರೆ ಈ ಎರಡೂ ಬೆಳೆಗಳ ಹೊಟ್ಟು ದನ ಕರುಗಳಿಗೆ ಉಪಯೋಗವಿಲ್ಲ.

 ಈ ಅಗಸಿ ಹುಲ್ಲು ಜಿಗುಟಾಗಿದ್ದು ದನಗಳು ತಿಂದರೆ ಗಂಟಲಲ್ಲಿ ಸಿಕ್ಕು ಸಾಯುವ ಸಂಭವ ಹೆಚ್ಚು. ಅದಕ್ಕಾಗಿ ರಾಶಿಯ ನಂತರ ಸುಟ್ಟು ಬಿಡುತ್ತಾರೆ. 

ಈ ಅಗಸೆ ಬೀಜ ವಿಶ್ವದಲ್ಲಿಯೇ ಅತ್ಯಧಿಕ ಮೆಗ್ನೀಷಿಯಂ ಹೊಂದಿರುವ ಬೀಜವಾಗಿದೆ.

 ಮೊದಲೆಲ್ಲ ನಾವು ಹೊಲದಲ್ಲಿ ಕುಳಿತು ಊಟ ಮಾಡುವಾಗ ಅಗಸೆ ಗಿಡದ ಎಲೆ, ಹೂವು ಕಾಯಿಗಳನ್ನು ತಿಂದಿದ್ದೇವೆ. 

*ಶೇಂಗಾ, ಬದಾಮು,ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಈ ಬೀಜಗಳಲ್ಲಿದ್ದು, ಇದರ ನಾರಿನಂಶ ದೇಹದ ಕೊಬ್ಬು ಕರಗಿಸಿ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಈ ಬೀಜಗಳ ಸೇವನೆ ❤️ ಹೃದಯಾಘಾತ, ಪಾರ್ಶ್ವವಾಯು ತಡೆಯಲು ಸಹಕಾರಿಯಾಗುತ್ತದೆ.

* ಅಗಸೆ ಬೀಜಗಳಲ್ಲಿ ಒಮೆಗಾ -03 ಇದ್ದು ಕಣ್ಣಿನ ಆರೋಗ್ಯಕ್ಕೆ ಉತ್ತಮ.

*ಈ ಬೀಜಗಳ ಸೇವನೆ ಸುಕ್ಕುಗಳನ್ನು ತಡೆದು ಚರ್ಮಕ್ಕೆ ಕಾಂತಿ ನೀಡುತ್ತದೆ.

 * ಮಲಬದ್ಧತೆ ನಿವಾರಣೆಗೆ ಬೀಜಗಳ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

*ಮೂಳೆಗಳ ಸವೆತ ತಡೆಗಟ್ಟುತ್ತದೆ ಮತ್ತು ವಾತ ನಿವಾರಕವಾಗಿ ಕೆಲಸ ಮಾಡುತ್ತದೆ.

*ಅಗಸೆ ಎಲೆ  ಮತ್ತು ಹೂವುಗಳ ಪಲ್ಯ ಮಾಡಿ ತಿನ್ನುವ
ದರಿಂದ ಇರುಳುಗಣ್ಣುರೋಗ ನಿವಾರಣೆಯಾಗುತ್ತದೆ. 

*ಅಗಸಿ ಬೀಜಗಳನ್ನು ಹುರಿಯದೇ ಪೌಡರ್ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಶೋಧಿಸಿ ಕುದಿಸಿ ಆರಿಸಿದ ನಂತರ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಸೇರಿಸಿ ಕುಡಿದರೆ ಶ್ವಾಸ ರೋಗದಲ್ಲಿ ಲಾಭಕರ.

* ಉತ್ತರ ಕರ್ನಾಟಕದಲ್ಲಿ ಅಗಸಿ ಚಟ್ನಿ ಇಲ್ಲದೇ ಊಟವೇ ಇಲ್ಲ.ಅಗಸಿ ಚಟ್ನಿ ಉತ್ತರ ಕರ್ನಾಟಕದ ಫೇಮಸ್.

  ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ಮಾಡಿದ ನಂತರ ಈ ಅಗಸೆ ಬೀಜಗಳನ್ನು ಹುರಿದುFLAX SEEDS ಎಂದು ಆಕರ್ಷಕ ವಾಗಿ ಪ್ಯಾಕಿಂಗ್ ಮಾಡಿ 100 ಗ್ರಾಂ ಗೆ 70ರಿಂದ80 ರೂಪಾಯಿಗೆ ಮಾಲ್ ಗಳಲ್ಲಿ, ಮೆಡಿಕಲ್ ಗಳಲ್ಲಿ ಮಾರುತ್ತಿದ್ದಾರೆ.

 ಮಾರುಕಟ್ಟೆಯಲ್ಲಿ  ಕೆ ಜಿ ಗೆ 200 ರೂಪಾಯಿ ಇರಬಹುದು.

ಅಥವಾ ಒಂದು ದಿನಕ್ಕೆ  ಎರಡರಿಂದ ಮೂರು ಟೀ ಚಮಚದಷ್ಟು ಹುರಿದ ಅಗಸೆ ಬೀಜಗಳನ್ನು ತಿನ್ನಬಹುದು.

 ಪೌಡರ್ ಮಾಡಿ ನೀರಿನಲ್ಲಿ ಸೇವನೆ ಮಾಡಬಹುದು.

 ಅಗಸೆ ಬೀಜಗಳ ಎಣ್ಣಿಯನ್ನು ವಾರ್ನಿಶ್, ಪೇಂಟ್ ಗಳಲ್ಲಿ ಶೈನಿಂಗ್ ಬರಲು ಉಪಯೋಗಿಸುತ್ತಾರೆ. ಹೀಗೆ ಬಹು ಉಪಯೋಗಿಯಾದ ಈ ಅಗಸೆ ಬೀಜ ಆಕಾರದಲ್ಲಿ ಚಿಕ್ಕದಾದರೂ ಗುಣಗಳ ರಾಜ. 

ಸಾವಯವ ಬೇಸಾಯದಲ್ಲಿ ಬೆಳೆದಿರುವ ಔಷಧಿಯ ಗಿಡಮೂಲಿಕೆಗಳಲ್ಲಿ ಆರೋಗ್ಯಕ್ಕೆ ಉಪಯೋಗವಾಗುವ ಕಣಗಳನ್ನು ಬೇರ್ಪಡಿಸಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ದೊಂದಿಗೆ ತಯಾರಿಸಿರುವ  ಆಯುರ್ವೇದ ನೈಸರ್ಗಿಕ ಪೌಷ್ಟಿಕ ಆಹಾರ ಉತ್ಪನ್ನಗಳು, ಮನುಷ್ಯರನ್ನು ಆರೋಗ್ಯದಿಂದ ಅನಾರೋಗ್ಯದ ಕಡೆಗೆ ಹೋಗದಂತೆ ಆರೋಗ್ಯ ಕಾಪಾಡುತ್ತವೆ ಹಾಗೂ ಅನಾರೋಗ್ಯ ವಂತರು ಆರೋಗ್ಯವಂತರಾಗಲು ಈ ಆಯುರ್ವೇದ ಪೌಷ್ಟಿಕ ಆಹಾರ ಉತ್ಪನ್ನಗಳು ಸಹಕಾರಿಯಾಗುತ್ತವೆ.  
 
 ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ.

ವಿಶೇಷ ಸೂಚನೆ 
ಸಮಯ - ಬೆಳಿಗ್ಗೆ 10-00. ರಿಂದ ಸಂಜೆ 6-00 ಗಂಟೆಯವರೆಗೆ ಲಭ್ಯ.

ಮೋ  - 9886801163
Email- samidirect2010@gmail.com
                        
ನಮ್ಮ ದೇಶದ ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಹಾಗೂ ವೈದ್ಯಕೀಯ ಪ್ರಮಾಣಿಕೃತ ದಾಖಲೆಗಳಿಗಾಗಿ ಜೊತೆಗೆ ಅತ್ಯುತ್ತಮ ಆರೋಗ್ಯಕ್ಕಾಗಿ ಈ ಕೆಳಗಿನ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ 

Invite to Join with Samidirect

Joining Link 
https://www.samidirect.com/distributor-registration?refId=MC17495310-L-374025
ವಂದೆಗಳೊಂದಿಗೆ

Friday, July 17, 2020

ಭಾಗವತದಲ್ಲಿ ಶ್ರೀಕೃಷ್ಣ ತನ್ನ ಸ್ನೇಹಿತನಾದ ಉದ್ಧವನಿಗೆ ಉಪದೇಶಿಸಿದ ಉದ್ಧವಗೀತೆ*........

_*#ಭಾಗವತದಲ್ಲಿ ಶ್ರೀಕೃಷ್ಣ ತನ್ನ ಸ್ನೇಹಿತನಾದ ಉದ್ಧವನಿಗೆ ಉಪದೇಶಿಸಿದ ಉದ್ಧವಗೀತೆ*_

ಈ ಇಪ್ಪತ್ತು ನಾಲ್ಕು ಜನರಿಂದ ಕಲಿಯಬಹುದಾದ ಗುಣಗಳು 

1. ಪೃಥ್ವಿ:
ಪೃಥ್ವಿಯಿಂದ ಸಹನಶೀಲತೆ, ಕ್ಷಮೆ, ತಾಳ್ಮೆ ಹಾಗೂ ಎಲ್ಲಾ ಜೀವಿಗಳ ಒಳಿತಿಗಾಗಿ ಬಾಳುವುದನ್ನು ಕಲಿಯಬಹುದು.

2. ವಾಯು:
ಯಾವ ಸಂದರ್ಭದಲ್ಲಿಯು ವಾಯು ಹೇಗೆ ತನ್ನ ಗುಣಾದರ್ಶಗಳನ್ನು ಕಳೆದುಕೊಳ್ಳುವುದಿಲ್ಲವೋ ಹಾಗೆ ನಾವು ಯಾವ ವಿಷಯಗಳಿಂದಲೂ ವಿಚಲಿತರಾಗದೆ ಮಾರ್ಗಕ್ರಮಣವನ್ನು ಮಾಡಬೇಕು.

3. ಆಕಾಶ:
ಆಕಾಶಕ್ಕೆ ಯಾವುದೆ ಎಲ್ಲೆಗಳಿಲ್ಲ, ಅಂತೆಯೆ ನಮ್ಮ ಆತ್ಮವೂ ಕೂಡ ಇರಬೇಕು. ಹಾಗೆಯೆ ಎಲ್ಲವನ್ನು ಮೀರಿ ಅನಂತವಾಗಿರುವುದಲ್ಲದೆ ನಮ್ಮ ಮನಸ್ಸಿನ ಪ್ರಕ್ಷುಬ್ಧತೆಗಳಿಗೆ ಅತೀತವಾಗಿ ನಿರ್ಮಲವಾಗಿರ ಬೇಕೆಂದು ತಿಳಿಸತ್ತದೆ.

4. ನೀರು:
ನೀರಿನಂತೆಯೆ ಉತ್ತಮ ವ್ಯಕ್ತಿ ಸಹ ತನ್ನ ಬಳಿ ಇರುವ ಪ್ರತಿಯೊಬ್ಬರ ಆರೊಗ್ಯ, ಶಾಂತಿಗಳಿಗೆ ಅಗತ್ಯವಾಗುವಂತೆ ಬದುಕಬೇಕು. ನೀರು ಯಾವುದೆ ಅಹಮಿಕೆ ತೋರದಿರುವಂತೆ ಪರಮಾತ್ಮನ ಶ್ರೇಷ್ಠ ಸೃಷ್ಟಿಯ ತೆರೆದು ಬಾಳಬೇಕು.

5. ಅಗ್ನಿ:
ಬೆಂಕಿಗೆ ಯಾವುದೇ ಸ್ವರೂಪವಿಲ್ಲದಿದ್ದಾಗಿಯೂ ತಾನು ಸುಡುತ್ತಿರುವ ಕಟ್ಟಿಗೆ ರೂಪದಲ್ಲಿ ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳುತ್ತೆದೆ. ಅಂತೆಯೇ ತಾನು ಪಡೆದ ದೇಹದ ರೂಪದ ಮುಖಾಂತರವೆ ಆತ್ಮವೂ ತನ್ನನ್ನು ತೋರ್ಪಡಿಸಿಕೂಳ್ಳುತ್ತದೆ.

6. ಚಂದ್ರ:
ಚಂದ್ರ ಕುಗ್ಗುತ್ತಾನೆ ಹಿಗ್ಗುತ್ತಾನೆ. ಹೀಗೆ ನಿರಂತರ ಪ್ರಕ್ರಿಯೆಗಳಿಗೆ ಒಳಗಾದರು ಶಾಂತನಾಗಿರುತ್ತಾನೆ. ಹಾಗೆ ವ್ಯಕ್ತಿಯು ಜನನದಿಂದ ಮರಣದವರೆಗಿನ ನಿರಂತರ ಬದಲಾವಣೆಗಳಿಂದ ಬಾಧಿಸಲ್ಪಡುವುದಿಲ್ಲ.

7. ಸೂರ್ಯ:
ಸೂರ್ಯನ ಪ್ರತಿಫಲನಗಳು ಪರಮಾತ್ಮನು ಒಬ್ಬನೆ ಒಬ್ಬನಾಗಿದ್ದು ವಿವಿಧ ಜೀವಿಗಳ ಮೇಲೆ ತನ್ನನ್ನು ಪ್ರತಿಫಲಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಹೀಗೆ ಆತ್ಮವು ದೇಹವಲ್ಲ ಎಂಬುದನ್ನು ಅರಿಯಬಹುದಾಗಿದೆ.

8. ಪಾರಿವಾಳ:
ಪಾರಿವಾಳವು ತನ್ನ ಮಕ್ಕಳಿಂದ ದೂರವಿರುವುದು ಅಸಾಧ್ಯವೆನಿಸಿ ತಾನೂ ಮೂರ್ಖತನದಿಂದ ಬಲೆಯಲ್ಲಿ ಬಂಧಿತಗೊಳ್ಳುತ್ತದೆ. ಪ್ರಾಜ್ಙನು ಅತಿಯಾದ ವ್ಯಾಮೋಹಗಳಿಂದ ಬಂಧಿತನಾಗುವುದಿಲ್ಲ.

9. ಹೆಬ್ಬಾವು:
ಕೆಲವೊಂದು ಸಮಯದಲ್ಲಿ ಹೆಬ್ಬಾವು ತಿನ್ನುವುದಕ್ಕೆ ಏನು ಸಿಗದಿದ್ದರೂ ಹೆದರುವುದಿಲ್ಲ ಪ್ರಾಜ್ಙನೂ ಸುಖದ ಆಮಿಷಗಳ ಅರಸುವಿಕೆಯಲ್ಲಿ ಎಂದೂ ಕಳೆದು ಹೋಗುವುದಿಲ್ಲ.

10. ಸಮುದ್ರ:
ನದಿಗಳು ಎಷ್ಟೇ ನೀರನ್ನು ತಂದರೂ, ತರದಿದ್ದರೂ ಸುಖ ಪಡುವುದು ಇಲ್ಲ, ದುಃಖ ಪಡುವುದಿಲ್ಲ. ಅಂತೆಯೆ ಮನುಷ್ಯನೂ ಭೋಗಗಳು ಲಭಿಸಿದಾಗ ಸುಖ ಪಟ್ಟು, ನೋವುಗಳು ಬಂದಾಗ ದುಃಖಿಸಲೂ ಬಾರದು ಎನ್ನುವುದನ್ನು ತಿಳಿಸಿದೆ.

11. ದೀಪದ ಹುಳ:
ದೀಪದ ಹುಳು ಹೇಗೆ ಉರಿವ ದೀಪಕ್ಕೆ ಸಿಲುಕಿ ಸಾಯುತ್ತದೆಯೊ ಹಾಗೆಯೇ ಯಾವ ಮನುಷ್ಯನು ಮೋಹಿತನಾಗುತ್ತಾನೋ ಅವನು ದೀಪದ ಹುಳದಂತೆ ಅದರಲ್ಲಿಯೆ ನಾಶನಾಗುತ್ತಾನೆ.

12. ಜೇನುನೊಣ:
ಜೇನುನೊಣದಂತೆ ಧನವನ್ನು( ಜೇನು ತುಪ್ಪವನ್ನು) ಸಂಗ್ರಹಿಸುವುದರಿಂದ ಹಠಾತ್ತಾಗಿ ಮರಣ ಬರುತ್ತದೆ. ಈ ಉಪದೇಶವನ್ನು ಪಡೆದುಕೊಂಡು ದ್ರವ್ಯಸಂಗ್ರಹವನ್ನು ಮಾಡುವುದನ್ನು ಬಿಡಬೇಕು.

13. ಆನೆ:
ಆನೆಯು ಸ್ತ್ರೀ ವ್ಯಾಮೋಹಕ್ಕೆ ಒಳಗಾಗಿ ಹೇಗೆ ಗುಂಡಿಯಲ್ಲಿ ಸಿಲುಕಿಕೊಳ್ಳುತ್ತದೆಯೋ ಹಾಗೆಯೆ ಯಾವ ಪುರುಷನು ಸ್ತ್ರೀ ಸುಖಕ್ಕೆ ಮರುಳಾಗುತ್ತಾನೆಯೋ ಅವನು ಬಂಧನದಲ್ಲಿ ಸಿಲುಕಿಕೊಳ್ಳುತ್ತಾನೆ.

14. ಭ್ರಮರ:
ಭ್ರಮರವು ಒಂದೇ ಕಮಲದ ಸುಗಂಧವನ್ನು ಸೇವಿಸದೆ ಬಹಳಷ್ಟು ಕಮಲಗಳ ಸುವಾಸನೆಯ ಆನಂದವನ್ನು ಪಡೆಯುತ್ತಿರುತ್ತದೆ. ಹಾಗೆಯೆ ನಾವು ಪ್ರತಿಯೊಂದನ್ನು ಕಲಿಯಲು ಪ್ರಯತ್ನಿಸಬೇಕು.

15. ಕಸ್ತೂರಿ ಮೃಗ:
ಕಸ್ತೂರಿ ಮೃಗಕ್ಕೆ ಸಂಗೀತದ ವ್ಯಾಮೋಹವು ಇರುವುದರಿಂದ ಬೇಟೆಗಾರ ಸಂಗೀತ ಕೇಳಿಸಿ ಸುಲಭವಾಗಿ ಭೇಟೆಯಾಡುತ್ತಾನೆ. ಇದರಂತೆಯೆ ನಾವು ಯಾವುದೆ ಮೋಹದಲ್ಲಿ ಸಿಲಿಕಿಕೊಳ್ಳಬಾರದು.

16. ಮೀನು:
ಮೀನು ತನ್ನ ಆಹಾರದ ರುಚಿಗೆ ಮೋಹಗೊಂಡು ಗಾಳಕ್ಕೆ ಸಿಲುಕುತ್ತದೆ. ಹಾಗೆಯೆ ಮನುಷ್ಯನು ನಾಲಿಗೆಯ ರುಚಿಯಲ್ಲಿ ಬದ್ಧನಾಗಿದ್ದು ಜನ್ಮ ಮರಣದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ.

17. ಪಿಂಗಲಾ ವೇಶ್ಯೆ:
ಎಲ್ಲಿಯವರೆಗೆ ಮನುಷ್ಯನಲ್ಲಿ ಆಸೆಯು ಪ್ರಬಲವಾಗಿರುತ್ತದೆಯೊ ಅಲ್ಲಿಯವರೆಗೆ ಅವನಿಗೆ ಸುಖ ನಿದ್ರೆ ಬರುವುದಿಲ್ಲ. ಯಾವ ಪುರುಷನು ಆಸೆಯನ್ನು ತ್ಯಜಿಸಿದ್ದಾನೆಯೊ ಅವನಿಗೆ ಈ ಸಂಸಾರದ ದುಃಖಗಳು ಬಧಿಸುವುದಿಲ್ಲ.

18. ಟಿಟ್ಟಿಭ:
ಟಿಟ್ಟಿಭ ಹಕ್ಕಿ ಮೀನನ್ನು ಕಚ್ಚಿಕೊಂಡು ಹೋಗುವಾಗ ಉಳಿದ ಹದ್ದು, ಕಾಗೆಗಳೆಲ್ಲಾ ಬೆನ್ನು ಹತ್ತಿದಾಗ ದಣಿದ ಟಿಟ್ಟಿಭ ಮೀನನ್ನು ಅಲ್ಲೆ ಬಿಡಲು, ಹದ್ದು ಅದನ್ನು ಕಚ್ಚಿಕೊಳ್ಳುವುದಕ್ಕೂ ಎಲ್ಲಾ ಕಾಗೆಗಳು ಅದನ್ನು ಬೆನ್ನು ಹತ್ತಿದವು. ಇದರಿಂದ ಆ ಟಿಟ್ಟಿಭವು ನಿಶ್ಚಿಂತವಾಗಿ ಕುಳಿತಿತು. ಈ ಸಂಸಾರದಲ್ಲಿ ಮೋಹವನ್ನು ಬಿಡುವುದರಲ್ಲಿಯೆ ಶಾಂತಿ ಇದೆ ಇಲ್ಲದಿದ್ದರೆ ಘೋರ ವಿಪತ್ತಿದೆ.

19. ಬಾಲಕ:
ಮನಾಪಮಾನಗಳ ಬಗ್ಗೆ ವಿಚಾರ ಮಾಡದೆ, ಎಲ್ಲ ಚಿಂತೆಗಳ ಪರಿಹಾರ ಮಾಡಿಕೊಂಡು ಬಾಲಕನಂತೆ ಆನಂದದಿಂದ ಇರಬೇಕು.

20. ಕೈಬಳೆ:
ಎರಡು ಬಳೆಗಳಿದ್ದರೆ ತಗುಲಿ ಶಬ್ದವಾಗುತ್ತದೆ. ಬಳೆಗಳು ಹೆಚ್ಚಿಗೆ ಇದ್ದರೆ ಹೆಚ್ಚು ಶಬ್ಬವಾಗುತ್ತದೆ. ಹಾಗೆಯೇ ಇಬ್ಬರು ಸೇರಿದ್ದಲ್ಲಿ ಮಾತುಕತೆಗಳಾಗುತ್ತವೆ. ಅದೇ ಹೆಚ್ಚು ಜನ ಸೇರಿದ್ದಲ್ಲಿ ಕಲಹವಾಗುತ್ತದೆ. ಆದ್ದರಿಂದ ಸಾಧನೆ ಮಾಡುವಾಗ ಒಂಟಿಯಾಗಿರಬೇಕು.

21. ಶಸ್ತ್ರಕಾರ:
ಶಸ್ತ್ರಕಾರ ಬಾಣವನ್ನು ಮಾಡುವಾಗ ರಾಜನು ಹಾದು ಹೋದನು. ನಂತರ ಒಬ್ಬ ರಾಜನು ಹೀಗೆ ಹೋದನಾ ಎಂದು ಕೇಳಿದಾಗ ಆತ ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದು ನೋಡಲಿಲ್ಲ ಎಂದನು. ಹೀಗೆ ನಾವು ಪ್ರತಿಯೊಂದು ಕಾರ್ಯ ಮಾಡಬೇಕು.

22. ಸರ್ಪ:
ಸರ್ಪಗಳು ಅಪಕಾರ ಮಾಡಿದ ಹೊರತು, ಕೆಣಕದ ಹೊರತು ಯಾರನ್ನು ಕಚ್ಚುವುದಿಲ್ಲ. ಅದರಂತೆಯೆ ಮಿತವಾಗಿ ಮಾತನಾಡ ಬೇಕು, ಜಗಳ ಮಾಡಬಾರದು, ಸದಾ ವಿವೇಕದಿಂದ ವರ್ತಿಸಬೇಕು, ಯಾರಿಗೂ ನೋವುಂಟು ಮಾಡಬಾರದು.

23. ಜೇಡ:
ಜೇಡಗಳು ಹಗಲೂ ರಾತ್ರಿ ಎನ್ನದೆ ಬಲೆಯನ್ನು ಹಣೆಯುತ್ತವೆ. ಮುಂದೆ ಮನಸ್ಸಿಗೆ ಬಂದಾಗ ಆ ಮನೆಯನ್ನೆ ನುಂಗಿ ಸ್ವತಂತ್ರವಾಗುತ್ತದೆ. ಆದುದರಿಂದ ಜಗತ್ತಿನಲ್ಲಿನ ಘಟನೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಬಾರದು.

24. ಕಣಜ:
ಕಣಜವು ಯಾವುದೋ ಒಂದು ಹುಳುವನ್ನು ತಂದಿಟ್ಟುಕೊಂಡು ಗಾಳಿ ಊದುತ್ತಾ ಆ ಕೀಟವನ್ನು ಕೊನೆಗೆ ಅದು ಕೂಡ ಕಣಜದ ಹುಳುವನ್ನೇ ಮಾಡುತ್ತದೆ. ಹಾಗೆಯೇ ನಾವು ಸತತ ನಮ್ಮ ಗುರಿಯ ಕಡೆಗೆ ಧ್ಯಾನ ಮಾಡಬೇಕು..

Thursday, July 9, 2020

ನೀನು ಬಂದ ದಾರಿಯಲ್ಲಿ ಹಿಂದೆ ನೋಡು ಅನುಭವ ಸಿಗುತ್ತೆ.

💐ನೀನು ಬಂದ ದಾರಿಯಲ್ಲಿ ಹಿಂದೆ ನೋಡು ಅನುಭವ ಸಿಗುತ್ತೆ,
   ನಡೆಯುವ ಹಾದಿಯಲ್ಲಿ ಮುಂದೆ ನೋಡು ಭವಿಷ್ಯ ಸಿಗುತ್ತೆ,
   ನಿನ್ನ ಸುತ್ತ ಮುತ್ತಲು ನೋಡು ಸತ್ಯ ಅರಿವಾಗುತ್ತೆ,
   ನಿನ್ನೊಳಗೆ ನೀನೇ ನೋಡು ಆತ್ಮ ವಿಶ್ವಾಸ ಹೆಚ್ಚುತ್ತದೆ💐

       💐ಶುಭೋದಯ💐

Wednesday, July 8, 2020

*ಉಷ್ಣಂ ಉಷ್ಣಾರ್ತಂ ಉಷ್ಣೇ ಚ ಯುಕ್ತಂ ಚ ಉಷ್ಣೈಃ ನಿಹಂತಿತತ್||53||*-ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ -5 ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

🙏🏽ಅತ್ಯಂತ ಬೆಲೆ ಬಾಳುವ ಸಂದೇಶ🙏🏽

*ಉಷ್ಣಂ ಉಷ್ಣಾರ್ತಂ ಉಷ್ಣೇ ಚ ಯುಕ್ತಂ ಚ ಉಷ್ಣೈಃ ನಿಹಂತಿತತ್||53||*
-ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ -5 ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

*ಉಷ್ಣ ಕಾಲದಲ್ಲಿ, ಬಿಸಿಲಿನಲ್ಲಿ ಕೆಲಸಮಾಡಿ ಉಷ್ಣ ಪೀಡಿತನಾದವನಿಗೆ ಬಿಸಿ ಆಹಾರದೊಂದಿಗೆ ಬಿಸಿ ಮಾಡಿದ ಜೇನನ್ನು ತಿನ್ನಿಸಿದರೆ ತಕ್ಷಣ ಮರಣ ಸಂಭವಿಸುತ್ತದೆ!!!* 

ಅಂದರೆ ಜೇನು ಇಲ್ಲಿ ಸದ್ಯೋಮರಣಕಾರಕ.
ಹಾಗಾಗಿ ಜೇನು ತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು. ಜೇನನ್ನು ಬಿಸಿಮಾಡಿದರೆ ಅದು ನಿಧಾನಗತಿಯ ವಿಷವಾಗುತ್ತದೆ. ಅದನ್ನು ಬಿಸಿ ಆಹಾರಕ್ಕೆ ಹಾಕಿದರೆ ಆ ವಿಷ ತೀಕ್ಷ್ಣತೆ ಪಡೆಯುತ್ತದೆ.‌ ಜ್ವರಪೀಡಿತನಿಗೆ ಕುಡಿಸಿದರೆ ಅದು ಅತ್ಯುಗ್ರ ರೋಗ ತರುತ್ತದೆ. ಬಿಸಿಲಿನಲ್ಲಿ ಬಳಲಿದ ಉಷ್ಣಪೀಡಿತನಿಗೆ ಕೊಟ್ಟರೆ ತಕ್ಷಣ ಕೊಂದೇ ಹಾಕುತ್ತದೆ!!!

*****

*ಏನು ಮಾಡುತ್ತಿದ್ದೇವೆ?*
ಈಗ ಬಹುತೇಕರು, ಶರೀರವನ್ನು ತೆಳ್ಳಗೆ ಮಾಡಿಕೊಳ್ಳಲು, ಕೊಬ್ಬಿನ ಅಂಶ ಕರಗಿಸಲು ಪ್ರತಿದಿನ ಬೆಳಿಗ್ಗೆ ಬಿಸಿನೀರು ಜೇನುತುಪ್ಪವನ್ನು ಯಾವ ಸಂಶಯ ಭಯವೂ ಇಲ್ಲದೇ ಸೇವಿಸುತ್ತಿದ್ದಾರೆ!! ಯಾವ ಫಲಿತಾಂಶವೂ ಇಲ್ಲದೇ!!!
ಇದು ಅಚ್ಚರಿಯೇ ಸರಿ.

*ಪರಿಣಾಮ ಏನು?*
ಬಿಸಿನೀರಿನ ಸಂಪರ್ಕದಿಂದ ಜೇನು ಮಂದಗತಿಯ ವಿಷವಾಗುತ್ತದೆ. ಇದರಿಂದ ಹಾನಿಗೊಳಗಾಗುವುವ ಮೊದಲ ಅಂಗ ಎಂದರೆ *LIVER* *ಯಕೃತ್!*
ನೆನಪಿಡಿ, ಯಾವುದೇ ಕಾಯಿಲೆಗೆ ನಾವು ಬಿಟ್ಟೂ ಬಿಡದಂತೆ ಆಸ್ಪತ್ರೆಯ ಮೆಟ್ಟಿಲನ್ನು ಹತ್ತುತ್ತಿರುವುದಕ್ಕೆ ಕಾರಣವೇ ( ಲಿವರ್ ) ಯಕೃತ್ತನ್ನು ವಿಷಮಯವಾಗಿಸಿರುವುದು.

*ನಿಧಾನಗತಿಯ ವಿಷವಾಗುವ ಕಾರ್ಯ:*
ಬಿಸಿ ಜೇನುತುಪ್ಪ ಶರೀರದ ಅಂಗಗಳಿಗೆ ಬದುಕಲು ಅತ್ಯಗತ್ಯವಾಗಿ ಬೇಕಾಗುವ ಲಿಪಿಡ್ ಅನ್ನು ವಿಭಜನೆ ಮಾಡುತ್ತದೆ. ಆಗ ‌ಲಿವರ್ ಯಕೃತ್ ಅದನ್ನು ತಡೆಯಲು ಪ್ರಯತ್ನಿಸಿ ತನ್ನ ಸ್ನಿಗ್ಧತೆಯ ಸತ್ವವನ್ನೇ ಕಳೆದುಕೊಂಡು *ಲಿವರ್ ಸಿರೋಸಿಸ್ ಎಂಬ ತಾನೇ ಒಣಗಿಹೋಗುವ ಕಾಯಿಲೆಗೆ ತುತ್ತಾಗುತ್ತದೆ.*

ತದನಂತರ ವಿಷವನ್ನು ನೇರ ರಕ್ತಕ್ಕೆ ಬಿಟ್ಟುಬಿಡುತ್ತದೆ, ತತ್ಪರಿಣಾಮ ಎರಡೂ ಕಿಡ್ನಿಗಳು ವಿಷ ಸೋಸಲು ಪ್ರಯತ್ನಿಸಿ ಶಕ್ತಿಹೀನವಾಗಿ *ನೆಫ್ರೈಟೀಸ್* ಆಗಿ ಕಿಡ್ನಿ ಫೇಲ್ ನಲ್ಲಿ ಅಂತ್ಯವಾಗುತ್ತಿವೆ.

*ಶೀಘ್ರ ವಿಷಕಾರಿ ಪರಿಣಾಮ*
ಬಿಸಿ ಜೇನು
+ಬಿಸಿನೀರು
+ಬೇಸಿಗೆ ಕಾಲದಲ್ಲಿ 
+ಉಷ್ಣಪೀಡಿತ ಅವಸ್ಥೆಯಲ್ಲಿ 
"ಕುದಿಸಿದ ಜೇನನ್ನು ಕೊಟ್ಟರೆ, ಲಿವರ್ ಯಕೃತ್-ಕಿಡ್ನಿಯನ್ನೂ ಮೀರಿ ಹೃಯದಯ/ ಪುಪ್ಪುಸದ ರಕ್ತನಾಳಗಳನ್ನು ಒಣಗಿಸಿ ತತ್ಕ್ಷಣ ಸಂಕೋಚ ಮಾಡಿ ಹೃದಯ ಸ್ತಂಭನ ಮಾಡಿ ಕೊಲ್ಲುತ್ತದೆ.
 ಅಥವಾ 
ಮೆದುಳು/ನರಗಳ ಲಿಪಿಡ್ ವಿಭಜನೆ ಮಾಡಿ ಒಣಗಿಸಿ ವಿದ್ಯುತ್ ಸಂವೇದನೆಯನ್ನು ನಿಲ್ಲಿಸಿ ತಕ್ಷಣ ಕೊಂದುಹಾಕುತ್ತದೆ.

*ವೈಜ್ಞಾನಿಕ ವಿವರಣೆ:*
ಬಿಸಿ ಜೇನಿಗೆ ಕೊಬ್ಬನ್ನು ಕರಗಿಸುವ ಪ್ರಭಲ ಶಕ್ತಿ ಇದೆ ಎಂದು ಸಂಶೋಧನೆಗಳಿಂದ ತಿಳಿದಿದೆ. ಆದರೆ ಜೀವ ಉಳಿಯಲು ಅಗತ್ಯವಾದ ಕೊಬ್ಬನ್ನೇ ಕರಗಿಸುತ್ತದೆ ಎಂದು ಅನೇಕರು ಅರಿಯರು.
ಇದೇ ಕಾರಣಕ್ಕೆ  *ಆಯುರ್ವೇದ ಓದದ, ಆ ವಿಜ್ಞಾನದ ಗಂಧವನ್ನೇ ಅರಿಯದ ಅನಾಮಧೇಯರೂ ಆಯುರ್ವೇದ ಸಲಹೆ ಮತ್ತು ಔಷಧ ಕೊಡುತ್ತಿದ್ದಾರೆ!*

*ಸಾವಿರಾರು ಜನರನ್ನು ಸೇರಿಸಿ ಯೋಗ ಹೇಳಿಕೊಡುವವರೂ ಯಾವುದೇ ಅಧ್ಯಯನ ಇಲ್ಲದೇ ಇದ್ದರೂ ಎಗ್ಗಿಲ್ಲದೇ ಸಲಹೆ ಕೊಡುತ್ತಿದ್ದಾರೆ, ಔಷಧಗಳನ್ನೂ ಕೊಡುತ್ತಿದ್ದಾರೆ(ಎಲ್ಲರೂ ಹಾಗಲ್ಲ, ಹಲವಾರು ಜನ ಯೋಗ್ಯ ಸ್ವ-ಅಧ್ಯಯನ, ಕುಟುಂಬ ಪರಂಪರೆಯಿಂದ ಶುದ್ಧ ಆಯುರ್ವೇದ ಫಾಲಿಸುವವರೂ ಇದ್ದಾರೆ)*

*ತೂಕ ಕಳೆದುಕೊಳ್ಳಲು ಜೇನುತುಪ್ಪ+ಬಿಸಿನೀರನ್ನು ಎಂದಿಗೂ ಸೇವನೆ ಮಾಡದಿರಿ.*
ಮತ್ತು
ಯಾರೇ ಹೇಳಲಿ ದಯಮಾಡಿ ಯಾವ ಆಯುರ್ವೇದ ಆಚಾರ್ಯರು ಎಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ ಎಂದು ರೆಫೆರೆನ್ಸ್ ಕೇಳಿ ತಿಳಿದುಕೊಳ್ಳುವುದನ್ನು ಮರೆಯದಿರಿ. ಇದು ನಮ್ಮೆಲ್ಲರ ಹಕ್ಕು, ಅಲ್ಲವೇ?

*ಕಂಡ ಸತ್ಯ:*
ಹಿಮಾಚಲ ಪ್ರದೇಶದ, ಕಾಂಗ್ರಾದ ಅಥರ್ವ ಆಯುರ್ಧಾಮದ ಶಾಖೆಗೆ ಇತ್ತೀಚಿಗೆ ದಂಪತಿಗಳಿಬ್ಬರೂ *"ಸಿರೋಸಿಸ್ ಆಫ್ ಲಿವರ್"* ಸಮಸ್ಯೆಯಿಂದ ಬಂದರು, ಅವರು ಜೇನು ಮತ್ತು ಬಿಸಿಬಿಸಿ ನೀರನ್ನು ನಿತ್ಯವೂ ಆರು ತಿಂಗಳಿನಿಂದ ಸೇವಿಸುತ್ತಿದ್ದರು!! ಅವರ ಕೊಬ್ಬಿನ ಮೂಲ ಸ್ಥಾನ ಯಕೃತ್ ( ಲಿವರ್ ) ಒಣಗಿಹೋಗಿತ್ತು.!!!

ಶ್ರೀ ಕೃಷ್ಣ ಮಾಡಿದ ಉಪಾಯ ನಾವೂ ಪಾಲಿಸಿದರೆ ಸಾಕಲ್ಲ. ಕೋರೋಣದಿಂದ ಪಾರಾಗಲು ?

ಮಹಾಭಾರತದ ಯುದ್ಧದಲ್ಲಿ ತನ್ನ ತಂದೆ ದ್ರೋಣಾಚಾರ್ಯರನ್ನು ಮೋಸದಿಂದ ಕೊಂದಿದ್ದಕ್ಕೆ ಅಶ್ವತ್ಥಾಮನಿಗೆ ಕೋಪ ಬಂದಿತ್ತು.

ಅವನು ತನ್ನ ಬಳಿ ಇದ್ದ ನಾರಾಯಣ ಅಸ್ತ್ರವನ್ನು ಪಾಂಡವ ಸೇನೆಯ ಮೇಲೆ ಪ್ರಯೋಗಿಸಿದ.

ಈ ಅಸ್ತ್ರವನ್ನು ಎದುರಿಸಲು ಸಾಧ್ಯವಿರಲಿಲ್ಲ. ಯಾರ ಬಳಿ ಶಸ್ತ್ರವಿದೆಯೋ ಅವರ ಮೇಲೆ ಈ ಅಸ್ತ್ರ ಬೆಂಕಿ ಸುರಿಸಿ ನಾಶ ಮಾಡುತ್ತಿತ್ತು

ಜಾಣ ಶ್ರೀ ಕೃಷ್ಣ ಎಲ್ಲರಿಗೂ ಶಸ್ತ್ರ ತ್ಯಾಗ ಮಾಡಿ
ಸುಮ್ಮನೆ ಕೈ ಮುಗಿದು ನಿಲ್ಲಲು ತಿಳಿಸಿದ. ಮನಸ್ಸಿನಲ್ಲಿ ಕೂಡ ಯುದ್ಧದ ಯೋಚನೆ ಮಾಡಬೇಡಿ ಎಂದ.

ಅಶ್ವತ್ಥಾಮ ಹೂಡಿದ ನಾರಾಯಣ ಅಸ್ತ್ರ ಸಮಯ ಕಳೆದ ಮೇಲೆ ಶಾಂತವಾಯಿತು.
ಹೀಗೆ ಪಾಂಡವ ಸೇನೆ ಸುರಕ್ಷಿತವಾಗಿ ಉಳಿಯಿತು.

ಈ ಕಥೆ ಈಗೇಕೆ ಅಂತ ಅರ್ಥವಾಯಿತು ಅಲ್ಲವಾ?

ಎಲ್ಲಾ ಕಡೆ ಯುದ್ದ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಪ್ರಕೃತಿಯ ಈ ವಿಕೋಪ ತಾಳಲು ನಾವು ಸ್ವಲ್ಪ ದಿನ ಎಲ್ಲಾ ಬಿಟ್ಟು, ಒಳ್ಳೆಯ ಯೋಚನೆ ಮಾಡುತ್ತಾ ಒಂದು ಜಾಗದಲ್ಲಿ ಕುಳಿತರೆ ಸಾಕು. ಸಮಯಕ್ಕೆ ಅನುಸಾರವಾಗಿ ಪ್ರಕೃತಿಯ ವಿಕೋಪ ತಣ್ಣಗೆ ಆಗುತ್ತದೆ. ಕರೊನ ಕೂಡ ಶಾಂತವಾಗುತ್ತದೆ.

ಶ್ರೀ ಕೃಷ್ಣ ಮಾಡಿದ ಉಪಾಯ ನಾವೂ ಪಾಲಿಸಿದರೆ ಸಾಕಲ್ಲ.. 💐😷🏡🙏🏻 dgnsgreenworld
ವಂದೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World