ಒಮ್ಮೆ ಒಂದು ಏಡಿ ಸಮುದ್ರದ ತೀರದಲ್ಲಿ ನಡೆದುಕೊಂಡು ಹೋಗುತ್ತಾ ಇತ್ತು , ಹಾಗೆಯೇ ಸ್ವಲ್ಪ ಮುಂದಕ್ಕೆ ಹೋಗಿ ತಿರುಗಿ ತಿರುಗಿ ತನ್ನ ಕಾಲಿನ ಅಚ್ಚು ನೋಡಿ ಖುಷಿ ಪಡುತ್ತಾ ಇತ್ತು. ಇನ್ನು ಮುಂದಕ್ಕೆ ನಡೆದು ತನ್ನ ಕಾಲಿನ ಅಚ್ಚ ಒಂದು ಡಿಸೈನ್ ಆಗಿದೆ ಎಂದು ಅದನ್ನು ನೋಡಿ ಇನ್ನು ಖುಷಿ ಪಟ್ಟಿತು.
ಅಷ್ಟರಲ್ಲೇ ಜೋರಾಗಿ ಸಮುದ್ರದ ಅಲೆ ಬಂದು ಏಡಿಯ ಕಾಲಿನ ಅಚ್ಚು ಎಲ್ಲಾ ಅಳಸಿ ಹೋಯಿತು. ಇದನ್ನು ಕಂಡು ಕೋಪಿತನಾಗಿ ಏಡಿಯು ಸಮುದ್ರದ ಅಲೆಗೆ ಕೇಳಿತು : " ಎ ಅಲೆಯೇ ನಾನು ನಿನ್ನನ್ನು ನನ್ನ ಗೆಳೆಯನೆಂದು ಅಂದು ಕೊಂಡಿದ್ದೆ , ಇದು ಏನು ಮಾಡಿದೆ ನೀನು ನನ್ನ ಕಾಲಿನ ಸುಂದರ ಅಚ್ಚನ್ನು ಯಾಕೆ ಅಳಿಸಿ ಬಿಟ್ಟೆ ನೀನೊಬ್ಬ ಗೆಳೆಯನಾ " .
ಆಗ ಅಲೆಯು ಹೇಳಿತು : " ಅಲ್ಲಿ ನೋಡು ಮೀನುಗಾರರು ಕಾಲಿನ ಅಚ್ಚನ್ನು ನೋಡಿ ಏಡಿಯನ್ನು ಹಿಡಿಯುತ್ತಾ ಇದ್ದಾರೆ, ಓ ಗೆಳೆಯ ಅವರು ನಿನ್ನನು ಹಿಡಿಯ ಬಾರದೆಂದು ನಿನ್ನ ಕಾಲಿನ ಅಚ್ಚನ್ನು ಅಳಿಸಿಬಿಟ್ಟೆ ಕಣೋ ".
ನಿಜ..... ನಾವು ಕೆಲವೊಮ್ಮೆ ನಮ್ಮ ಎದುರಿನವರ ಮಾತನ್ನು ಕೇಳುವುದಿಲ್ಲ, ಮತ್ತು ನಾವು ನಮ್ಮ ಯೋಚನೆಯ ಅನುಗುಣವಾಗಿ ಅವರನ್ನು ತಪ್ಪೆಂದು ಬಾವಿಸುತ್ತೇವೆ.
*ಮನಸ್ಸಿನಲ್ಲಿ ವೈರತ್ವವನ್ನು ಹುಟ್ಟಿಸುವ ಬದಲು ಚೆನ್ನಾಗಿ ಯೋಚಿಸಿ , ಮಾತಿನ ತಿರುಳನ್ನು ಅರಿತು ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದೇ ಲೇಸು ...*
ವಂದನೆಗಳೊಂದಿಗೆ
No comments:
Post a Comment
welcome to dgnsgreenworld Family