www.dgnsgreenworld.blogspot.com

Friday, February 25, 2022

ಏ ಹೆಂಡತಿ ನೀ ಭಾಳ ಕಾಡುತಿ

ಏ ಹೆಂಡತಿ 
ನೀ ಭಾಳ ಕಾಡುತಿ,
ನಂದೆಲ್ಲಾ ನಿಂದೇ ಅಂದ್ರೂ ,
ನಂಗೇನ್ ಮಾಡಿದಿ 
ಎಂದು ಕೇಳುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಹೊರಕ್ಕ್ ಹೋಗಿ ಬಂದ್ಮ್ಯಾಕೆ 
ಜನ್ಮಾ ನೀ ಜಾಲಾಡತಿ ,
ಸ್ವಲ್ಪ್ ಹೊತ್ತಾದ್ರೂ ಥಕಥೈ 
ಅಂತ ಕುಣಿಯುತಿ ,
ಸಂಜೆ ಹೊರಬಿದ್ದೊಡೆ 
ಕಣ್ಣು ಕೆಂಪ ಮಾಡುತಿ ,
ಪ್ರಾಣಾನ ನೀನ್ ಹಿಂಡುತಿ.,
ಹೆಂಡತಿ ನೀ ಭಾಳ ಕಾಡುತಿ ..,

ವಾರವಾದ್ರೂ ಹೊರಗೆಲ್ಲೂ 
ಕರೆದೊಯ್ದಿಲ್ಲ ಎಂದು ಕೆಣುಕುತಿ ,
ಮನೆಯೂಟ ಒಂದ್ತುತ್ತು ಕಮ್ಮಿ 
ತಿಂದ್ರುನೂ ಅನುಮಾನ ನೀ ಪಡತೀ ,
ಕಣ್ಣಂಚಿನಲಿ ಗಂಗಾಭಾಗೀರತಿಯ 
ನೀನು ತೋರುತೀ.,
ಹೆಂಡತಿ ನೀ ಭಾಳ ಕಾಡುತಿ ..,

ಮೊದಮೊದಲು ಚೆಲುವು ವಯ್ಯಾರಗಳ ಒಡತಿ ,
ಈಗೀಗ ಚಿನ್ನ ರನ್ನ ಎಂದರೂ 
ನೀ ಮೂಗು ಮುರಿಯುತಿ ,
ತವರಿನ ಮಾತೆತ್ತಿದ್ರ 
ಮಾತ್ರ ನೀ ಬಳುಕುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಮಕ್ಕಳನು ಕಣ್ಣಲ್ಲಿ ಕಣ್ಣಿಟ್ಟು 
ನೀನ್ ಸಾಕುತಿ ,
ಅವರಾ ಆಗಸ ಮುಟ್ಟಲೆಂದ್ 
ನೀನು ಬಯಸುತಿ ,
ಅವರೆದುರುತ್ತರಕೆ ಮುಖವ 
ಸಣ್ಣ ಮಾಡುತಿ ,
ಅದಕಾಗಿ ನನ್ಮ್ಯಾಲೆ 
ನೀನ್ ಸಿಡುಕುತಿ .,
ಹೆಂಡತಿ ನೀ ಭಾಳ್ ಕಾಡುತಿ ..,

ಈಗೀಗ ದ್ಯಾವ್ರ ಮ್ಯಾಕೆ 
ಜಾಸ್ತಿಯಾತು ನಿಂದ ಭಕುತಿ ,
ಏನೇನೊ ಹರಕೆ ನೀನು ಹೊರತಿ ,
ಅದನೆಲ್ಲ ತೀರಿಸೆಂದು ನನ್ನ ಬೇಡುತಿ ,
ತುಳಸಿಕಟ್ಟೆ ಪ್ರತಿದಿನ 
ನೀನು ಸುತ್ತುತಿ ,
ನಿನಹಿಂದೆ ನಾ ಸುತ್ತಲೆಂದ್ ಬಯಸುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಏನಾದರೆಂತು 
ನನ್ನೊಲವಿಗೆ  ನೀನೊಡತಿ ,
ನನ ಜೀವನದ ಜೋಕಾಲಿ 
ನೀ ಜೀಕುತಿ ,
ನನ ಬಾಳೆಂಬ ಗಾಳಿಪಠದ 
ಸೂತ್ರ ನೀ ಎಳೆಯುತಿ ,
ನನ ಸಂಸಾರವ ನೀ ಬೆಳಗುತಿ ,
ನನ ಕಷ್ಟ ಸುಖಗಳ ಸಮಪಾತಿ ,
ಹಂಗಂತಲೇ ನಿನ್ಮ್ಯಾಗ 
ನಂಗೈತಿ ಬಲು ಪ್ರೀತಿ .....

 ವಂದನೆಗಳೊಂದಿಗೆ

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World