www.dgnsgreenworld.blogspot.com

Saturday, February 26, 2022

ಎಲ್ಲಾ ಮಹಿಳೆಯರು ದಯವಿಟ್ಟು ಇದನ್ನು ಓದಿ..." ಪುರುಷರೆಂದರೆ ಯಾರು?"

ಎಲ್ಲಾ ಮಹಿಳೆಯರು ದಯವಿಟ್ಟು ಇದನ್ನು ಓದಿ..." ಪುರುಷರೆಂದರೆ ಯಾರು?"
 ಮೊದಲ ಬಾರಿ  ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!
ಪುರುಷ ಎಂದರೆ ಯಾರು?
❗ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ
❗ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..
❗ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..
❗ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆಯ ಖರೀದಿಸಿ ಖಾಲಿ ಮಾಡುವವನು..
❗ತನ್ನ ಇಡೀ ಯೌವನ ವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..
❗ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.
❗ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ,   ಪತ್ನಿ, ,ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....
❗ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....
ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ ..❓
ಆತ ಮನೆಯಲ್ಲೇ ಇದ್ದರೆ ಸೋಮಾರಿ...❓
ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ ❓
ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ. ❓
 ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವವ❓ 
ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಲಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...❓
ಒಂದು  ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ ❓
ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ ❓
💎 ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ....

ನುಂಗುವ ಮನಸಿದ್ದರೆ* ಕೋಪವನ್ನು ನುಂಗು*ಮಾಡುವ ಮನಸಿದ್ದರೆ* ಸತ್ಕಾರ್ಯವನ್ನು ಮಾಡು

*ನುಂಗುವ ಮನಸಿದ್ದರೆ*
       ಕೋಪವನ್ನು ನುಂಗು
*ಮಾಡುವ ಮನಸಿದ್ದರೆ*
       ಸತ್ಕಾರ್ಯವನ್ನು ಮಾಡು
*ತ್ಯಜಿಸುವ ಮನಸಿದ್ದರೆ*
         ಆಹಂಕಾರ ತ್ಯಜಿಸು
*ಹೇಳುವ ಮನಸಿದ್ದರೆ*
        ಸತ್ಯವನ್ನು ಹೇಳು
*ಕೊಡುವ ಮನಸಿದ್ದರೆ*
       ವಿದ್ಯೆ,ಅನ್ನವನ್ನು ಕೋಡು
*ನೆನಯುವ ಮನಸಿದ್ದರೆ*
   ಸಹಾಯ ಮಾಡಿದವರನ್ನು ನೆನೆ
*ಬಾಳುವ ಮನಸಿದ್ದರೆ*
       ಹಕ್ಕಿಯಂತೆ ಬಾಳು
*ನಡೆಯುವ ಮನಸಿದ್ದರೆ*
      ಧರ್ಮದಂತೆ ನಡೆ
*ಪೂಜಿಸುವ ಮನಸಿದ್ದರೆ*
    ತಂದೆ ತಾಯಿಯನ್ನು ಪೂಜಿಸು
*ಉತ್ತಮ ಆರೋಗ್ಯಕ್ಕೆ ಮನಸಿದ್ದರೆ* 
ಪ್ರತಿ ದಿನ ಬೆಳಿಗ್ಗೆ ಯೋಗ ಮಾಡು
*ಚಂಚಲ ಮನಸ್ಸಿದ್ದರೆ*
ಪ್ರತಿ ನಿತ್ಯ ಧ್ಯಾನ ಮಾಡು
     *🙏ಶುಭೋದಯ*🙏

Friday, February 25, 2022

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು...????

*ಈ ಲೇಖನ ತುಂಬಾ ಅರ್ಥಪೂರ್ಣವಾಗಿದೆ.* 
🙏🏼😊💐💐🙏🙏

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು...????
                                                        ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ... ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ.ನೀರು ತುಂಬಿಸಲು ಪ್ರಯಾಸ ಪಡಬೇಕು... ಬೇಗನೇ ಬಾಗುವುದೂ ಇಲ್ಲ. ಎತ್ತಿ ಕುಕ್ಕಿ ತುಂಬಿಸಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ.

ಯಾವುದು ಬಾಗುತ್ತದೆಯೋ...  ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವುದಿಲ್ಲವೊ ಅದು ಅಪೂರ್ಣವೇ... 
ಇದೇ ಬದುಕಿನ ಸತ್ಯವೂ ಕೂಡ.... 
ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ  ನೈವೇದ್ಯ ಮಾಡುವುದಿಲ್ಲ.. 
ಕಾರಣ.. 
ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ ಕಾಳು ತುಂಬಿಕೊಂಡರೂ ಸಹ ಯಾವ ಕಾರಣಕ್ಕೂ ಭೂಮಿಗೆ ತಲೆ ಬಗ್ಗಿಸದೇ ಆಕಾಶ ನೋಡುತ್ತ ನಿಲ್ಲುತ್ತವೆ.

ಇದರರ್ಥ ಇಷ್ಟೇ... ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ,  ಆ ಭಗವಂತನಿಗೆ, ಭೂ ತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವದನ್ನು ನಾವು ಕಲಿಯಬೇಕು.ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುವುದು.. ಅಹಂಕಾರ ಅಧಿಕಾರ ಶಾಶ್ವತವಲ್ಲ... ನಾನು ಎಂಬ ಗರ್ವ ತನ್ನೊಡಲನ್ನೇ  ಸುಡುತ್ತದೆ. ಕೋಪ, ಅಪಹಾಸ್ಯ ಅವಮಾನ, ದರ್ಪ, ಹಾಗೂ ಭ್ರಷ್ಠತೆ ಮನುಷ್ಯನ ಸರ್ವನಾಶಕ್ಕೆ ಕಾರಣ..

ಎಲ್ಲವನ್ನೂ ನೋಡುತ್ತಿರುವ 
ಆ ಭಗವಂತ ಅಲ್ಲಿ ಕುಳಿತು ನಮ್ಮಾಟವ ನೋಡುತ್ತಿರುತ್ತಾನೆ...

ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ...
ಎಂಬ ಸತ್ಯದ ಅರಿವಾಗಬೇಕು ... 

ಜಾಸ್ತಿ ಓದಿದ್ದೀನಿ, 
ಎನ್ನುವ ಗರ್ವ ಬೇಡ....
ಓದಲು ಸಾಗರದಷ್ಟಿದೆ ಇನ್ನೂ... 

ನಾನೊಬ್ಬನೇ ಎಲ್ಲವನ್ನೂ ಬರೆಯುತ್ತೇನೆ... 
ಎನ್ನುವ ಅಹಂ ಬೇಡ....
ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ... ಎಲ್ಲ ಬಲ್ಲವರಿಲ್ಲ !!
ಬಲ್ಲವರು ಬಹಳಿಲ್ಲ!!!

ಮಗುವಿನಿಂದ ಹಿಡಿದು 
ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವುದು ತುಂಬಾ ಇದೆ..

ಇಷ್ಟೇ ಮುಗಿಯಿತು ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ..

ನೀ ಸಾಗುವ ಪಥ ಹೊಸಹೊಸ ಪಾಠಗಳನ್ನು ಕಲಿಸುತ್ತಾ ಅನುಭವಗಳನ್ನು ನೀಡುತ್ತಾ ಸಾಗುತ್ತದೆ, ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು...

ಏಕೆಂದರೆ ಪ್ರತಿಯೊಂದಕ್ಕೂ ಫಲಾಫಲ ನಮಗಿದೆ.
ಆದ್ದರಿಂದ  ಯೋಚಿಸಿ ನಡೆಯಬೇಕು...!
ಆಲೋಚಿಸಿ ನುಡಿಯಬೇಕು.

ಗುರು ಕಲಿಸಿದ ವಿದ್ಯೆ..
ತಾಯಿ ನೀಡಿದ ಮಮತೆ.. 
ತಂದೆ ಹೇಳಿದ ಸಲಹೆ..
 ಕಿರಿಯರು ನೀಡಿದ ಪ್ರೀತಿ.. 
ರೈತ ಕೊಟ್ಟ ಅನ್ನ..
ಯೋಧ ನೀಡಿದ ರಕ್ಷಣೆ..
ನಿನ್ನ ಹೊತ್ತ ಭೂಮಿತಾಯಿ.. ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು..
ದೇಶ ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂಧವ್ಯಗಳನ್ನು  ಎಂದಿಗೂ ಮರೆಯದಿರು..

ಬದುಕಿನಲ್ಲಿ ತಲೆ ಬಾಗುವುದನ್ನು ಕಲಿಯೋಣ
ಬದುಕುವುದನ್ನು ಕಲಿಯೋಣ
ಇತರರು ಬದುಕಲು ಸಹಕರಿಸೋಣ

ವಂದನೆಗಳೊಂದಿಗೆ

ಏ ಹೆಂಡತಿ ನೀ ಭಾಳ ಕಾಡುತಿ

ಏ ಹೆಂಡತಿ 
ನೀ ಭಾಳ ಕಾಡುತಿ,
ನಂದೆಲ್ಲಾ ನಿಂದೇ ಅಂದ್ರೂ ,
ನಂಗೇನ್ ಮಾಡಿದಿ 
ಎಂದು ಕೇಳುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಹೊರಕ್ಕ್ ಹೋಗಿ ಬಂದ್ಮ್ಯಾಕೆ 
ಜನ್ಮಾ ನೀ ಜಾಲಾಡತಿ ,
ಸ್ವಲ್ಪ್ ಹೊತ್ತಾದ್ರೂ ಥಕಥೈ 
ಅಂತ ಕುಣಿಯುತಿ ,
ಸಂಜೆ ಹೊರಬಿದ್ದೊಡೆ 
ಕಣ್ಣು ಕೆಂಪ ಮಾಡುತಿ ,
ಪ್ರಾಣಾನ ನೀನ್ ಹಿಂಡುತಿ.,
ಹೆಂಡತಿ ನೀ ಭಾಳ ಕಾಡುತಿ ..,

ವಾರವಾದ್ರೂ ಹೊರಗೆಲ್ಲೂ 
ಕರೆದೊಯ್ದಿಲ್ಲ ಎಂದು ಕೆಣುಕುತಿ ,
ಮನೆಯೂಟ ಒಂದ್ತುತ್ತು ಕಮ್ಮಿ 
ತಿಂದ್ರುನೂ ಅನುಮಾನ ನೀ ಪಡತೀ ,
ಕಣ್ಣಂಚಿನಲಿ ಗಂಗಾಭಾಗೀರತಿಯ 
ನೀನು ತೋರುತೀ.,
ಹೆಂಡತಿ ನೀ ಭಾಳ ಕಾಡುತಿ ..,

ಮೊದಮೊದಲು ಚೆಲುವು ವಯ್ಯಾರಗಳ ಒಡತಿ ,
ಈಗೀಗ ಚಿನ್ನ ರನ್ನ ಎಂದರೂ 
ನೀ ಮೂಗು ಮುರಿಯುತಿ ,
ತವರಿನ ಮಾತೆತ್ತಿದ್ರ 
ಮಾತ್ರ ನೀ ಬಳುಕುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಮಕ್ಕಳನು ಕಣ್ಣಲ್ಲಿ ಕಣ್ಣಿಟ್ಟು 
ನೀನ್ ಸಾಕುತಿ ,
ಅವರಾ ಆಗಸ ಮುಟ್ಟಲೆಂದ್ 
ನೀನು ಬಯಸುತಿ ,
ಅವರೆದುರುತ್ತರಕೆ ಮುಖವ 
ಸಣ್ಣ ಮಾಡುತಿ ,
ಅದಕಾಗಿ ನನ್ಮ್ಯಾಲೆ 
ನೀನ್ ಸಿಡುಕುತಿ .,
ಹೆಂಡತಿ ನೀ ಭಾಳ್ ಕಾಡುತಿ ..,

ಈಗೀಗ ದ್ಯಾವ್ರ ಮ್ಯಾಕೆ 
ಜಾಸ್ತಿಯಾತು ನಿಂದ ಭಕುತಿ ,
ಏನೇನೊ ಹರಕೆ ನೀನು ಹೊರತಿ ,
ಅದನೆಲ್ಲ ತೀರಿಸೆಂದು ನನ್ನ ಬೇಡುತಿ ,
ತುಳಸಿಕಟ್ಟೆ ಪ್ರತಿದಿನ 
ನೀನು ಸುತ್ತುತಿ ,
ನಿನಹಿಂದೆ ನಾ ಸುತ್ತಲೆಂದ್ ಬಯಸುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಏನಾದರೆಂತು 
ನನ್ನೊಲವಿಗೆ  ನೀನೊಡತಿ ,
ನನ ಜೀವನದ ಜೋಕಾಲಿ 
ನೀ ಜೀಕುತಿ ,
ನನ ಬಾಳೆಂಬ ಗಾಳಿಪಠದ 
ಸೂತ್ರ ನೀ ಎಳೆಯುತಿ ,
ನನ ಸಂಸಾರವ ನೀ ಬೆಳಗುತಿ ,
ನನ ಕಷ್ಟ ಸುಖಗಳ ಸಮಪಾತಿ ,
ಹಂಗಂತಲೇ ನಿನ್ಮ್ಯಾಗ 
ನಂಗೈತಿ ಬಲು ಪ್ರೀತಿ .....

 ವಂದನೆಗಳೊಂದಿಗೆ

ಮನದಮಾತು

✍...ಮನದಮಾತು.

👉 ನೋವು ಕೊಟ್ಟವರೆ ನನಗೆ ಮಾರ್ಗದರ್ಶಕರು.
👉 ನಂಬಿಸಿ ಮೋಸ ಮಾಡಿದವರೆ ನನಗೆ ಗುರುಗಳು.
👉 ಕಷ್ಟ ಕೊಟ್ಟವರೆ ನನಗೆ ಹಿತೈಸಿಗಳು.
👉 ಅವಮಾನ ಮಾಡಿದವರೆ ನನಗೆ ಸ್ಫೂರ್ತಿದಾತರು.
👉 ಕಾಲೆಳೆದವರೆ ನನಗೆ ಶಕ್ತಿದಾತರು.
👉 ತಿರಸ್ಕಾರ ಮಾಡಿದವರೆ ನನಗೆ ಪುರಸ್ಕೃತರು.
👉 ಹಂಗಿಸಿದವರೆ ನನಗೆ ಅನ್ನದಾತರು.
👉 ನಿಂದಿಸಿದವರೆ ನನಗೆ ಬದುಕನ್ನಿತ್ತವರು.
👉 ದೂರ ತಳ್ಳಿದವರೆ ನನಗೆ ಬಂಧುಗಳು.
👉👉 ಎಲ್ಲಕ್ಕೂ ಮಿಗಿಲಾಗಿ ಪ್ರೀತಿ ಕೊಟ್ಟವರೇ ನನ್ನ ದೇವರುಗಳು, ಹಾಗಾಗಿ ಈ ಜಗದಲ್ಲಿ ನನಗೆ ಯಾರೂ ಶತೃಗಳಲ್ಲ. ..👍👍

Monday, February 21, 2022

ಪ್ರಕೃತಿಯ ಮೂರು ಕಟು ಸತ್ಯಗಳು

ಪ್ರಕೃತಿಯ ಮೂರು ಕಟು ಸತ್ಯಗಳು :-
1) ಹೊಲವನ್ನು ಉತ್ತು, ಬಿತ್ತದಿದ್ದರೆ, ಪ್ರಕೃತಿ ಅದನ್ನು ಹುಲ್ಲಿನಿಂದ ತುಂಬಿಸುತ್ತದೆ. ಅದೇ ರೀತಿ, ಧನಾತ್ಮಕ  ಆಲೋಚನೆಗಳು ಮನಸ್ಸಿನಲ್ಲಿ ತುಂಬದಿದ್ದರೆ,  ನಕಾರಾತ್ಮಕ ಆಲೋಚನೆಗಳು ತಾನೇ ತಾನಾಗಿ  ಸ್ಥಾನವನ್ನು ಪಡೆದುಕೊಳ್ಳುತ್ತವೆ.
2) ಯಾರು ಏನನ್ನು ಹೊಂದಿದ್ದಾರೋ,  ಅದನ್ನು ಮಾತ್ರ ಹಂಚುತ್ತಾರೆ. ಮನದಲ್ಲಿ ಸಂತೋಷ ಹೊಂದಿರುವವರು, ಸಂತೋಷವನ್ನು ಹಂಚುತ್ತಾರೆ. ಭ್ರಮೆಯನ್ನು ಹೊಂದಿರುವವರು ಭ್ರಮೆಯನ್ನೇ ಬಿತ್ತರಿಸುತ್ತಾರೆ, ಭಯವನ್ನೇ ತುಂಬಿಕೊಂಡವರು ಭಯವನ್ನೇ ವಿತರಿಸುತ್ತಾರೆ.
3) ನಾವು ಜೀವನದಲ್ಲಿ ಜೀರ್ಣವಾಗುವಷ್ಟೇ ಪಡೆಯಬೇಕು. ಅದನ್ನೇ  ಜೀರ್ಣಿಸಿಕೊಳ್ಳಲು ಕಲಿಯಬೇಕು. ಏಕೆಂದರೆ, ಆಹಾರ ಜೀರ್ಣವಾಗದಿದ್ದರೆ ರೋಗಗಳು ಹೆಚ್ಚಾಗುತ್ತವೆ. ಹಣ ಜೀರ್ಣವಾಗದಿದ್ದರೆ, ತೋರಿಕೆ, ಗರ್ವ ಹೆಚ್ಚಾಗುತ್ತದೆ. ಮಾತು  ಜೀರ್ಣವಾಗದಿದ್ದರೆ, ಮನಸ್ತಾಪಗಳು ಹೆಚ್ಚಾಗುತ್ತವೆ. ಹೊಗಳಿಕೆ ಜೀರ್ಣವಾಗದಿದ್ದರೆ, ದುರಹಂಕಾರ ಬೆಳೆಯುತ್ತದೆ. ತೆಗಳಿಕೆ ಜೀರ್ಣವಾಗದಿದ್ದರೆ, ದ್ವೇಷ ಬೆಳೆಯುತ್ತದೆ. ಸಂಸಾರದ ಗುಟ್ಟು ಜೀರ್ಣವಾಗದಿದ್ದರೆ, ಮನಃಕ್ಲೇಶ ಹೆಚ್ಚಾಗುತ್ತದೆ. ದುಃಖ ಜೀರ್ಣವಾಗದಿದ್ದರೆ, ಹತಾಶೆ ಬೆಳೆಯುತ್ತದೆ. ಸಂತೋಷ ಜೀರ್ಣವಾಗದಿದ್ದರೆ, ವಿಕೃತಿ ಹೆಚ್ಚಾಗುತ್ತದೆ.
*****
ವಂದನೆಗಳೊಂದಿಗೆ

ಮನಸ್ಸಿನಲ್ಲಿ ವೈರತ್ವವನ್ನು ಹುಟ್ಟಿಸುವ ಬದಲು ಚೆನ್ನಾಗಿ ಯೋಚಿಸಿ ನೋಡೋಣ

ಒಮ್ಮೆ ಒಂದು ಏಡಿ ಸಮುದ್ರದ ತೀರದಲ್ಲಿ ನಡೆದುಕೊಂಡು ಹೋಗುತ್ತಾ ಇತ್ತು , ಹಾಗೆಯೇ ಸ್ವಲ್ಪ ಮುಂದಕ್ಕೆ ಹೋಗಿ ತಿರುಗಿ ತಿರುಗಿ ತನ್ನ ಕಾಲಿನ ಅಚ್ಚು ನೋಡಿ ಖುಷಿ ಪಡುತ್ತಾ ಇತ್ತು. ಇನ್ನು ಮುಂದಕ್ಕೆ ನಡೆದು ತನ್ನ ಕಾಲಿನ ಅಚ್ಚ ಒಂದು ಡಿಸೈನ್ ಆಗಿದೆ ಎಂದು ಅದನ್ನು ನೋಡಿ ಇನ್ನು ಖುಷಿ ಪಟ್ಟಿತು.
        ಅಷ್ಟರಲ್ಲೇ ಜೋರಾಗಿ ಸಮುದ್ರದ ಅಲೆ ಬಂದು ಏಡಿಯ ಕಾಲಿನ ಅಚ್ಚು ಎಲ್ಲಾ ಅಳಸಿ ಹೋಯಿತು. ಇದನ್ನು ಕಂಡು ಕೋಪಿತನಾಗಿ ಏಡಿಯು ಸಮುದ್ರದ ಅಲೆಗೆ ಕೇಳಿತು : " ಎ ಅಲೆಯೇ ನಾನು ನಿನ್ನನ್ನು ನನ್ನ ಗೆಳೆಯನೆಂದು ಅಂದು ಕೊಂಡಿದ್ದೆ , ಇದು ಏನು ಮಾಡಿದೆ ನೀನು ನನ್ನ ಕಾಲಿನ ಸುಂದರ ಅಚ್ಚನ್ನು ಯಾಕೆ ಅಳಿಸಿ ಬಿಟ್ಟೆ ನೀನೊಬ್ಬ ಗೆಳೆಯನಾ " .

       ಆಗ ಅಲೆಯು ಹೇಳಿತು : " ಅಲ್ಲಿ ನೋಡು ಮೀನುಗಾರರು ಕಾಲಿನ ಅಚ್ಚನ್ನು ನೋಡಿ ಏಡಿಯನ್ನು ಹಿಡಿಯುತ್ತಾ ಇದ್ದಾರೆ, ಓ ಗೆಳೆಯ ಅವರು ನಿನ್ನನು ಹಿಡಿಯ ಬಾರದೆಂದು ನಿನ್ನ ಕಾಲಿನ ಅಚ್ಚನ್ನು ಅಳಿಸಿಬಿಟ್ಟೆ ಕಣೋ ".
      
        ನಿಜ..... ನಾವು ಕೆಲವೊಮ್ಮೆ ನಮ್ಮ ಎದುರಿನವರ ಮಾತನ್ನು ಕೇಳುವುದಿಲ್ಲ, ಮತ್ತು ನಾವು ನಮ್ಮ ಯೋಚನೆಯ ಅನುಗುಣವಾಗಿ ಅವರನ್ನು ತಪ್ಪೆಂದು ಬಾವಿಸುತ್ತೇವೆ. 
*ಮನಸ್ಸಿನಲ್ಲಿ ವೈರತ್ವವನ್ನು ಹುಟ್ಟಿಸುವ ಬದಲು ಚೆನ್ನಾಗಿ ಯೋಚಿಸಿ , ಮಾತಿನ ತಿರುಳನ್ನು ಅರಿತು ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದೇ ಲೇಸು ...*
ವಂದನೆಗಳೊಂದಿಗೆ

ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ಏನು ಪ್ರಯೋಜನವಾಗುತ್ತದೆ ತಿಳಿದುಕೊಳ್ಳೋಣ.

ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ಏನು ಪ್ರಯೋಜನವಾಗುತ್ತದೆ ತಿಳಿದುಕೊಳ್ಳೋಣ.

ಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ.ಬೆಲ್ಲವನ್ನು ಸಕ್ಕರಗೆ ಬದಲಿಯಾಗಿ ಉಪಯೋಗಿಸುತ್ತಾರೆ. ಬೆಲ್ಲದಿಂದ ಅನೇಕ ಸಿಹಿ ಪದಾರ್ಥಗಳನ್ನೂ ಮಾಡುತ್ತಾರೆ. ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿದೆ. ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿದರೆ ಹೇಗಿರುತ್ತದೆಂದು ಗೊತ್ತೆ? ತುಂಬಾ ರುಚಿಕರವಾಗಿರುತ್ತದೆ…! ಕೆಲವರು ಹೀಗೆ ಬಿಸಿ ಹಾಲಿಗೆ ಬೆಲ್ಲವನ್ನು ಸೇರಿಸಿ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಕೇವಲ ರುಚಿಕರವಾಗಿರುವುದೇ ಅಲ್ಲದೇ ಇತರೆ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆ ಆಗುತ್ತವೆ. ಈ ರೀತಿ ಕುಡಿಯುವುದರಿಂದ ನಮಗಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ

1.ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ.

2. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಏರು ಪೇರಾಗುತ್ತದೆ. ಶರೀರಕ್ಕೆ ಪೋಷಕಾಂಷಗಳು ಸೇರ್ಪಡೆಯಾಗುವುದಿಲ್ಲ. ಆದರೆ,ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.

3. ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತುಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.

4. ಮಹಿಳೆಯರಿಗೆ ಋತುಚಕ್ರದಲ್ಲಿ ಪೀಡಿಸುವ ವಿವಿಧ ಸಮಸ್ಯೆಗಳು,ಮುಖ್ಯವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.

5.ಬೆಲ್ಲ ಬೆರೆಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿಬಯಾಟಿಕ್,ಆಂಟಿ ವೈರಲ್ ಗುಣಗಳಿರುತ್ತದೆ. ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಸೊಂಕುಗಳು ಕಡಿಮೆಯಾಗುತ್ತವೆ.

6. ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ನೋವುಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ ಮತ್ತು ಕೀಲುಗಳು ದೃಢವಾಗುತ್ತವೆ.

ವಂದನೆಗಳೊಂದಿಗೆ

ಇಂದಿನ ಸತ್ಯವಿಷಯಗಳು



""""""""ಇಂದಿನ ಸತ್ಯವಿಷಯಗಳು”"""""""""""

🔹ರಸ್ತೆಗಳು ವಿಶಾಲವಾಗಿವೆ, ಆದರೆ 
      ದೃಷ್ಟಿಕೋನ ಸಂಕುಚಿತವಾಗಿವೆ!
🔹ನಾವು ಹೆಚ್ಚು ಖರೀದಿಸುತ್ತೇವೆ, ಆದರೆ 
     ಕಡಿಮೆ ಉಪಯೋಗಿಸುತ್ತೇವೆ!
🔹ನಮ್ಮ ಮನೆಗಳು ದೊಡ್ಡದಾಗುತ್ತಿವೆ,
      ಆದರೆ ಕುಟುಂಬ ಚಿಕ್ಕದಾಗಿರುತ್ತದೆ !
🔹ಅನುಕೂಲಗಳು ಹೆಚ್ಚಿವೆ, ಆದರೆ 
     ಅನುಭವಿಸಲು ಸಮಯವೇ ಇಲ್ಲ!
🔹ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ 
      ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
🔹ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ 
      ವಿವೇಚನೆ ಕಡಿಮೆಯಾಗಿದೆ!
🔹ಪರಿಣತರು ಹೆಚ್ಚಿದ್ದಾರೆ,
      ಸಮಸ್ಯೆಗಳು ಹೆಚ್ಚಿವೆ!
🔹ಔಷಧಿಗಳು ಹೆಚ್ಚಿವೆ,
     ಆರೋಗ್ಯ ಕಡಿಮೆಯಾಗಿದೆ!
🔹ನಾವು ಹೆಚ್ಚು ಗಳಿಸುತ್ತೇವೆ, ಆದರೂ
     ನೆಮ್ಮದಿಯಿಂದ ಜೀವಿಸುತ್ತಿಲ್ಲ.
🔹ತುಂಬ ವೇಗವಾಗಿ ಹೋಗುತ್ತೇವೆ,ತುಂಬ 
     ಬೇಗ ಕೋಪಿಸಿಕೊಳ್ಳುತ್ತೇವೆ!
🔹ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ,
     ಬೆಳಿಗ್ಗೆ ತುಂಬ ಬಳಲುತ್ತೇವೆ
🔹ಕಡಿಮೆ ಓದುತ್ತೇವೆ,
      ತುಂಬ ಟೀವಿ ನೋಡುತ್ತೇವೆ:
🔹ತೋರಿಕೆಯ ಭಕ್ತಿ ಜಾಸ್ತಿ,
      ಪರಿಶುದ್ಧ ಮನದ ಪ್ರಾರ್ಥನೆ ಕಡಿಮೆ
🔹ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ 
      ನಮ್ಮ ಮೌಲ್ಯಗಳು ಕುಸಿದಿವೆ!
🔹ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ 
      ಕಡಿಮೆ ಪ್ರೀತಿಸುತ್ತೇವೆ ಜೊತೆಗೆ ತುಂಬ 
      ಸುಳ್ಳು  ಹೇಳುತ್ತೇವೆ!
🔹ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ,
      ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
🔹ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, 
     ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು  
     ಭೇಟಿಯಾಗಲು ಹೋಗುವುದಿಲ್ಲ.
🔹ನಾವು ಬಹಿರಂಗದಲ್ಲಿ ಗೆದ್ದವರಂತೆ ಅಂದುಕೊಳ್ಳುತ್ತೇವೆ,
      ಆದರೆ ಅಂತರಂಗದಲ್ಲಿ  ಸೋಲುತ್ತಿದ್ದೇವೆ!
🔹ಗಾಳಿಯನ್ನು ಶುದ್ಧಿಗೊಳಿಸಲು ಹೆಣಗುತ್ತೇವೆ, 
     ಆದರೆ ನಮ್ಮ ಆತ್ಮ ಮಲೀನಗೊಂಡಿದ್ದು ನಮಗೆ
      ಗೋಚರವಾಗುವುದಿಲ್ಲ.
🔹ಬರವಣಿಗೆ ಹೆಚ್ಚಾಗಿದೆ, ಆದರೆ 
      ಅರಿವು ಕಡಿಮೆಯಾಗಿದೆ!
🔹ಹೆಚ್ಚು ಆಲೋಚಿಸುತ್ತೇವೆ, ಆದರೆ 
     ಕಡಿಮೆ ಸಾಧಿಸುತ್ತೇವೆ!
🔹ನಮ್ಮ ಆರ್ಥಿಕ ಸ್ಥಿತಿ  ಸುಧಾರಿಸಿದೆ,ಆದರೆ 
     ನೈತಿಕತೆ ಕುಸಿದಿದೆ!
🔹ಇದು ವಿವಿಧ ಭಕ್ಷಗಳ ಕಾಲ, ಆದರೆ 
      ಕಡಿಮೆ ಜೀರ್ಣಶಕ್ತಿಯ ಕಾಲ
🔹ಎತ್ತರದ ನಿಲುವು ಠೀವಿ, ಆದರೆ ಕುಬ್ಜ ವ್ಯಕ್ತಿತ್ವ
🔹ವಿಶ್ವಶಾಂತಿಯ ಬಗ್ಗೆ ಮಾತನ್ನಾಡುತ್ತೇವೆ,
      ಆದರೆ ಮನೆಯಲ್ಲಿ ಕಾದಾಡುತ್ತೇವೆ!
🔹ಗಂಡ ಹೆಂಡಿರ  ದುಡಿಮೆ ಹೆಚ್ಚಾಗಿದೆ,
     ಆದರೆ ಸಂಬಂಧಗಳು ಛಿದ್ರಗೊಂಡು 
     ವಿಚ್ಛೇದನಗಳು ಹೆಚ್ಚಾಗಿವೆ!
🔹ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ 
     ಮನಶ್ಯಾಂತಿ  ಮುರಿದುಬಿದ್ದಿದೆ.
ವಂದನೆಗಳೊಂದಿಗೆ

Thursday, February 17, 2022

*Care or control ??*

*Care or control ??*

I was in a  a consultation with a middle age couple.They started fighting right in front of me.  The upset husband said- See doc....I 'care' so much for her & this is what I get in return..To which the fuming wife replied- He doesn't care...he just 'controls'...!

The care from one person was perceived as control by another ! 

Made me think...what is care and what is control?? How to identify them??

Soon I received the answer.

I had an argument with my teenage daughter over a trivial disciplinery issue...Harsh words were exchanged leaving both of us in tears...😪
After sometime, as our emotions settled down , we said sorry to each other...My daughter hugged me  
and said-Papa ,you know why you got upset?  You were not  upset because I did wrong..but u were upset because I didnt follow your instructions....there is a big difference..!

I was stunned with her mature thinking pattern. ..I received my answer too... I was trying to control her under the disguise of care...that caused the conflict ....

If I really 'care' for someone , I will not get upset or angry with that person...I will keep searching different ways to help him..

If I am struggling in any relationship...I need to closely observe if there is any subtle  control hidden behind my apparent care...because 

Care is an expression of love while control is an expression of ego...

Control cuts...Care connects ...

Control hurts...Care heals...

Keep caring for people but dont control them ... because 

Often people are not wrong...
they are just 'different'...

Keep caring... 
dgns
Thank you

Tuesday, February 8, 2022

*ಹಣ ದುಬಾರಿ ಎಂದು ವಿಮಾನದಲ್ಲಿ ಊಟ ಮಾಡದ ಸೈನಿಕರು ..*

*ಹಣ ದುಬಾರಿ ಎಂದು ವಿಮಾನದಲ್ಲಿ ಊಟ ಮಾಡದ ಸೈನಿಕರು ..*  

*2 ನಿಮಿಷ ಸಮಯವಿದ್ದರೆ ತಪ್ಪದೇ ಓದಿ ..*🥲

ವಿಮಾನದಲ್ಲಿ ನನ್ನ ಜಾಗದಲ್ಲಿ ಕುಳಿತೆ. ಡೆಲ್ಲಿ ತಲುಪಲು ಐದಾರು ಗಂಟೆಗಳ ಪ್ರಯಾಣ. ಒಂದು ಉತ್ತಮವಾದ ಪುಸ್ತಕ ಓದುವುದು, ಒಂದು ಗಂಟೆ ನಿದ್ರೆ ನನ್ನ ಪ್ರಯಾಣದ ಕಾರ್ಯಕ್ರಮ. ವಿಮಾನ ಹೊರಡುವುದಕ್ಕೆ ಐದು ನಿಮಿಷಗಳ ಮುಂಚೆ ನನ್ನ ಅಕ್ಕ ಪಕ್ಕದ ಸೀಟುಗಳಲ್ಲಿ ಹತ್ತು ಜನ ಯೋಧರು ಕುಳಿತು ಕೊಂಡಿದ್ದರು. ವಿಮಾನ ತುಂಬಿತ್ತು. ಕಾಲಕ್ಷೇಪಕ್ಕೆ ನನ್ನ ಪಕ್ಕದಲ್ಲಿ ಕುಳಿತ ಯೋಧನನ್ನು “ಎಲ್ಲಿಗೆ ಪ್ರಯಾಣ” ಎಂದು ವಿಚಾರಿಸಿದೆ. “ಆಗ್ರಾಗೆ ಸಾರ್, ಅಲ್ಲಿ ಎರಡುವಾರ ಶಿಕ್ಷಣ, ನಂತರ ಆಪರೇಷನ್ ಗೆ ಕಳಿಸುತ್ತಾರೆ” ಎಂದನು.
ಒಂದು ಗಂಟೆ ಕಳೆಯಿತು .. ಅನೌಸಮೆಂಟ್ “ಬೇಕಾದವರು ಹಣ ಕೊಟ್ಟು ಊಟ ಪಡೆಯ ಬಹುದು” ಎಂದು. ಸರಿ ತುಂಬಾ ಸಮಯವಿದೆ ಊಟ ಮುಗಿಸಿದರೆ ಒಂದು ಕೆಲಸವಾಗುತ್ತದೆ ಎಂದು ನನ್ನ ಪರ್ಸ ತೆಗೆದು ಊಟ ಖರೀದಿಸಲು ಮುಂದಾದಾಗ ಈ ಮಾತುಗಳು ನನ್ನ ಕಿವಿಗೆ ಬಿದ್ದವು ..
”ನಾವು ಸಹಾ ಊಟಮಾಡೋಣವೇ? ಎಂದು ಒಬ್ಬ ಯೋಧ ಮತ್ತೊಬ್ಬನನ್ನು ಕೇಳುತ್ತಾನೆ …. ಅದಕ್ಕೆ ಆತನು “ಬೇಡ .. ಇಲ್ಲಿ ಊಟ ದುಬಾರಿ … ವಿಮಾನದಿಂದ ಇಳಿದ ತಕ್ಷಣ ಯಾವುದಾದರೂ ಸಾಧಾರಣವಾದ ಕಡೆ ಊಟಮಾಡೋಣ” ಎಂದನು.
ಅದಕ್ಕೆ ಆ ಮೊದಲಿನ ಯೋಧ “ಸರಿ” ಎಂದು ಸುಮ್ಮನಾದನು.
ನಾನು ವಿಮಾನದ ಪರಿಚಾರಕಿಯ ಬಳಿ ಹೋಗಿ “ದಯವಿಟ್ಟು ನೀವು ಆ ಯೋಧರೆಲ್ಲರಿಗೂ ಊಟ ಕೊಡಿ ಅದರ ಹಣ ನಾನು ಸಂದಾಯಿಸುತ್ತೇನೆ“ ಎಂದೆನು. ಹಣ ಪಡೆದು ಎಲ್ಲರಿಗೂ ಊಟದ ಡಬ್ಬಿಗಳನ್ನು ಕೊಟ್ಟರು.

ಆ ಪರಿಚಾರಕಿ ಕಣ್ಣಲ್ಲಿ ನೀರು .. “ಸಾರ್ ನನ್ನ ತಮ್ಮ ಕಾರ್ಗಿಲ್ ನಲ್ಲಿ ಇದ್ದಾನೆ. ಅವನಿಗೆ ನೀವು ಊಟ ಬಡಿಸಿದಷ್ಟು ಸಂತಸವಾಗುತ್ತಿದೆ” ಎನ್ನುತ್ತಾ ಕೈ ಮುಗಿದಳು. ನನಗೆ ಕಣ್ಣೀರು ತಡೆಯಲಾಗಲಿಲ್ಲ . ದುಃಖದಿಂದ ಬಂದು ನನ್ನ ಸೀಟಿನಲ್ಲಿ ಕುಳಿತೆ. ನಾನು ಊಟ ಮುಗಿಸಿ ಕೈ ತೊಳೆಯಲು ವಾಶ್ ರೂಂ ಕಡೆ ಹೊರಟೆ … ನನ್ನ ಹಿಂದೆಯೇ ಒಬ್ಬ ವಯಸ್ಸಾದವರು ಬಂದು, ”ನಾನು ನಡೆದದ್ದೆಲ್ಲವನ್ನೂ ಗಮನಿಸಿದ್ದೇನೆ. ನಿಮಗೆ ಅಭಿನಂದನೆಗಳು, ಈ ನಿಮ್ಮ ಸಂತೋಷದಲ್ಲಿ ನನಗೂ ಸ್ವಲ್ಪ ಪಾಲು ಕೊಡಿ” ಎಂದು ಒಂದೈದು ನೂರು ರೂಪಾಯಿಯ ಹೊಸ ನೋಟನ್ನು ನನ್ನ ಕೈಯಲ್ಲಿ ತುರುಕಿ, “ನಿಮ್ಮ ಆನಂದದಲ್ಲಿ ನನ್ನ ಭಾಗ ಎಂದರು."

ನಾನು ನನ್ನ ಸೀಟಿನಲ್ಲಿ ಬಂದು ಕುಳಿತೆ. ಒಂದು ಕಾಲು ಗಂಟೆ ಕಳೆದಿರಬಹುದು, ವಿಮಾನದ ಕ್ಯಾಪ್ಟನ್… ಯಾರನ್ನೊ ಹುಡುಕುತ್ತಾ .. ಸೀಟು ನಂಬರು ಗಳನ್ನು ನೋಡುತ್ತಾ ನನ್ನ ಬಳಿ ಬಂದು, ನನ್ನನ್ನು ನೋಡಿ ಮುಗುಳು ನಗೆ ಬೀರುತ್ತಾ “ನಿಮಗೆ ಶೇಕ್ ಹ್ಯಾಂಡ್ ಕೊಡ ಬಹುದೇ “,ಎಂದು ನನ್ನ ಕೈ ಕುಲುಕಿದರು. ನಾನು ನನ್ನ ಸೀಟಿನ ಪಟ್ಟಿ ಯನ್ನು ಕಳಚಿ, ನಿಂತುಕೊಂಡೆ .. ಆತನು “ನಾನು ಹಲವು ವರ್ಷ ಪೈಲೆಟ್ ಆಗಿ ಕೆಲಸಮಾಡಿದ್ದೇನೆ, ಆಗ ಯಾರೋ ಒಬ್ಬರು ನಿಮ್ಮ ಹಾಗೆ ಊಟ ಕೊಡಿಸಿದರು. ಅದು ನಿಮ್ಮಂತಹ ಜನರ ಪ್ರೇಮದ ಕುರುಹು … ನಾನು ಅದನ್ನು ಎಂದೆಂದಿಗೂ ಮರೆಯಲಾರೆ” ಎಂದನು…
ಸಹ ಪ್ರಯಾಣಿಕರೆಲ್ಲಾ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು. ನನಗೆ ತುಂಬಾ ಸಂಕೋಚವಾಯಿತು. ನಾನು ಒಂದು ಉತ್ತಮವಾದ ನಡವಳಿಕೆ ತೋರಿರಬಹುದು ಆದರೆ ಹೊಗಳಿಕೆಗಾಗಿ ಅಲ್ಲ.

ನಾನು ನನ್ನ ಸೀಟಿನಿಂದ ಮುಂದಿನ ಸೀಟುಗಳತ್ತ ಬಂದೆ. ಒಬ್ಬ 18 ವರ್ಷದ ಹುಡುಗ ನನ್ನ ಕೈ ಕುಲುಕುತ್ತಾ ಒಂದು ನೋಟನ್ನು ಕೊಟ್ಟ . 
ಪ್ರಯಾಣ ಮುಗಿಯಿತು. ನಾನು ವಿಮಾನದಿಂದ ಹೊರ ಬರಲು ಬಾಗಿಲ ಬಳಿ ನಿಂತಿದ್ದೆ. ಯಾರೋ ಒಬ್ಬರು ನನ್ನ ಜೇಬಿನಲ್ಲಿ ಎನನ್ನೋ ಇಟ್ಟರು …. ಮತ್ತೊಂದು ನೋಟು,
ನಾನು ಹೊರ ಬಂದು ನೋಡಿದಾಗ ಆ ಯೋಧರೆಲ್ಲರೂ ಒಂದು ಕಡೆ ನಿಂತಿದ್ದರು, ನಾನು ಬೇಗ ಬೇಗ ಅವರ ಹತ್ತಿರ ಹೋಗಿ, ವಿಮಾನದಲ್ಲಿ ಸಹ ಪ್ರಯಾಣಿಕರು ಬಲವಂತದಿಂದ ನನಗೆ ಕೊಟ್ಟ ಹಣವನ್ನು ಜೇಬಿನಿಂದ ತೆಗೆದು ಅವರಿಗೆ ಕೊಡುತ್ತಾ, “ನೀವು ನಿಮ್ಮ ಶಿಕ್ಷಣ ನಡೆಯುವ ಊರು ತಲುಪುವ ಮುಂಚೆ ಏನ್ನಾದರೂ ತಿನ್ನಲು ಪ್ರಯೋಜನವಾಗುತ್ತದೆ. ನೀವು ನಮ್ಮ ದೇಶವನ್ನು ರಕ್ಷಿಸಲು ಪಡುತ್ತಿರುವ ಶ್ರಮದ ಮುಂದೆ ಈ ನಮ್ಮ ಸಹಾಯ ಬಹಳಾ ಚಿಕ್ಕದು. ನಿಮ್ಮಗಳಿಗೆ ಆ ಭಗವಂತನು ದಯೆತೋರಲಿ, ನಿಮ್ಮ ಪರಿವಾರದ ಸದಸ್ಯರೆಲ್ಲರೂ ಸುಖವಾಗಿರಲಿ” ಎಂದಾಗ ನನಗೆ ಅರಿವಿಲ್ಲದೇ ಧಾರಾಕಾರವಾದ ಕಣ್ಣೀರು.
ಆ ಹತ್ತು ಜನ ಯೋಧರೂ ಸಹ ಪ್ರಯಾಣಿಕರ ಒಲವನ್ನೂ ಸೂರೆಗೊಂಡಿದ್ದರು. ನಾನು ಕಾರು ಹತುತ್ತಾ … ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆಯಲು ಸಿದ್ಧರಾದ ಈ ಯುವಕರಿಗೆ ನೂರುಕಾಲ ಸುಖವಾಗಿ ಬಾಳುವಂತೆ ಹರಸು ಸ್ವಾಮಿ”, ಎಂದು ಭಗವಂತನಲ್ಲಿ ಕೇಳಿಕೊಂಡೆ.
ಸೈನಿಕನೆಂದರೆ ತನ್ನ ಬಾಳನ್ನು ನಾಡಿಗಾಗಿ ತ್ಯಾಗ ಮಾಡುವ ಬ್ಲಾಂಕ್ ಚೆಕ್ ನಂತೆ. “ಬಾಳೆಲ್ಲವೂ ತನ್ನ ಬದುಕನ್ನು ಮುಡುಪಾಗಿಡುವ ಬ್ಲಾಂಕ್ ಚೆಕ್ಕು”
ಎಷ್ಟು ಸಾರಿ ಓದಿದರೂ ಈ ಪ್ರಸಂಗ ಮನ ತಣಿಸುತ್ತದೆ.
ಭಾರತ ಮಾತೆಯ ಈ ಮುದ್ದು ಮಕ್ಕಳನ್ನು ಗೌರವಿಸುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ
ಜೈ ಜವಾನ್. ….🇮🇳 
ಭಾರತ್ ಮಾತಾಕೀ ಜೈ 🇮🇳….
(ವಾಟ್ಸಪ್ ಸಂದೇಶ)

Monday, February 7, 2022

ನಿತ್ಯಸತ್ಯ ಜ್ಞಾನದ ಭಂಡಾರ

ನಿತ್ಯಸತ್ಯ  ಜ್ಞಾನದ ಭಂಡಾರ🌹

ಯಾವಾಗ ಭಕ್ತಿ ಆಹಾರ ಹೊಕ್ಕುತ್ತದೋ, ಅದು ಪ್ರಸಾದವಾಗುತ್ತದೆ 

ಯಾವಾಗ ಭಕ್ತಿ ಹಸಿವನ್ನು ಹೊಕ್ಕುತ್ತದೋ, ಅದು ಉಪವಾಸವಾಗುತ್ತದೆ

ಯಾವಾಗ ಭಕ್ತಿ‌ ನೀರನ್ನು ಹೊಕ್ಕುತ್ತದೋ ಅದು ಅಮೃತವಾಗುತ್ತದೆ

ಯಾವಾಗ ಭಕ್ತಿ ಸಂಗೀತವನ್ನು ಹೊಕ್ಕುತ್ತದೋ ಅದು ಕೀರ್ತನೆಯಾಗುತ್ತದೆ

ಯಾವಾಗ ಭಕ್ತಿ ಮನೆಯನ್ನು ಹೊಕ್ಕುತ್ತದೋ ಅದು‌‌ ದೇವಾಲಯವಾಗುತ್ತದೆ

ಯಾವಾಗ ಭಕ್ತಿ ಕಾಯಕದಲ್ಲಿ ಹೊಕ್ಕುತ್ತದೋ ಅದು‌ ಕರ್ಮವಾಗುತ್ತದೆ

ಯಾವಾಗ ಭಕ್ತಿ ಯಾತ್ರೆ ಹೊಕ್ಕುತ್ತದೋ ಅದು ತೀರ್ಥಯಾತ್ರೆಯಾಗುತ್ತದೆ

ಯಾವಾಗ ಭಕ್ತಿ ವ್ಯಕ್ತಿಯಲ್ಲಿ ಬರುತ್ತೋ ಅವನು ಭಕ್ತನಾಗುತ್ತಾನೆ.
ವಂದನೆಗಳೊಂದಿಗೆ

Thursday, February 3, 2022

*ನರಸ್ಯಾಭರಣಂ ರೂಪಂ**ರೂಪಸ್ಯಾಭರಣಂ ಗುಣಾಃ|**ಗುಣಸ್ಯಾಭರಣಂ ಜ್ಞಾನಂ**ಜ್ಞಾನಸ್ಯಾಭರಣಂ ಕ್ಷಮಾ ||*

*ನರಸ್ಯಾಭರಣಂ ರೂಪಂ*
*ರೂಪಸ್ಯಾಭರಣಂ ಗುಣಾಃ|*
*ಗುಣಸ್ಯಾಭರಣಂ ಜ್ಞಾನಂ*
*ಜ್ಞಾನಸ್ಯಾಭರಣಂ ಕ್ಷಮಾ ||*

   _ಮನುಷ್ಯ ಸುಂದರವಾಗಿ ಕಾಣುವುದು ತನ್ನ ರೂಪದಿಂದ.._

   _ರೂಪ ಸುಂದರವಾಗಿ ಕಾಣುವುದು ಸದ್ಗುಣಗಳಿಂದ.._

   _ಸದ್ಗುಣಗಳು ಸುಂದರವಾಗಿ ಕಾಣುವುದು ಜ್ಞಾನದಿಂದ.._

   _ಜ್ಞಾನ ಸುಂದರವಾಗಿ ಕಾಣುವುದು ಕ್ಷಮೆಯಿಂದ..!_

       *_ಕ್ಷಮಾಗುಣವಿಲ್ಲದಿದ್ದರೆ ಮನುಷ್ಯನ ರೂಪ, ಗುಣ, ಜ್ಞಾನ.. ಎಲ್ಲವೂ ವ್ಯರ್ಥ..._*
     
        🔯 ಶುಭ ದಿನ💐🙏🏼

*ನೀವೇ ನಿಮ್ಮ ದೇಹಕ್ಕೆ ಭಯೋತ್ಪಾದಕರು*

*ನೀವೇ ನಿಮ್ಮ ದೇಹಕ್ಕೆ ಭಯೋತ್ಪಾದಕರು* 
😱😲🤥😨😰🥵🤐😵

1) ನೀವು ಬೆಳಿಗ್ಗೆ ಉಪಾಹಾರ ಮಾಡದಿದ್ದಾಗ ಹೊಟ್ಟೆ ಹೆದರುತ್ತದೆ.😟

(2) ನೀವು 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದಾಗ ಮೂತ್ರಪಿಂಡಗಳು ಭಯಪಡುತ್ತವೆ.🥵

(3) ನೀವು 11 ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯದಲ್ಲಿ ಎಚ್ಚರಗೊಳ್ಳದಿದ್ದಾಗ ಪಿತ್ತಕೋಶವು ಹೆದರುತ್ತದೆ.😔

(4) ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದಾಗ ಸಣ್ಣ ಕರುಳು ಹೆದರುತ್ತದೆ.😖🤒

(5) ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೊಡ್ಡ ಕರುಳುಗಳು ಹೆದರುತ್ತವೆ.🤬

(6) ಸಿಗರೇಟ್ ಮತ್ತು ಬೀಡಿಗಳ ಹೊಗೆ, ಕೊಳಕು ಮತ್ತು ಕಲುಷಿತ ವಾತಾವರಣದಲ್ಲಿ ನೀವು ಉಸಿರಾಡುವಾಗ ಶ್ವಾಸಕೋಶವು ಹೆದರುತ್ತದೆ.😱🤢

(7) ನೀವು ಭಾರವಾದ ಕರಿದ ಆಹಾರ, ಜಂಕ್ ಮತ್ತು ತ್ವರಿತ ಆಹಾರವನ್ನು ಸೇವಿಸಿದಾಗ ಯಕೃತ್ತು ಭಯವಾಗುತ್ತದೆ.🥶

(8) ನಿಮ್ಮ ಊಟವನ್ನು ಹೆಚ್ಚು ಉಪ್ಪು ಮತ್ತು ಕೊಲೆಸ್ಟ್ರಾಲ್ ನೊಂದಿಗೆ ಸೇವಿಸಿದಾಗ ಹೃದಯ ಭಯವಾಗುತ್ತದೆ.💔❣

(9) ರುಚಿ ಮತ್ತು ಮುಕ್ತವಾಗಿ ಲಭ್ಯವಿರುವುದರಿಂದ ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದಾಗ ಮೇದೋಜ್ಜೀರಕ ಗ್ರಂಥಿಯು ಹೆದರುತ್ತದೆ.☹

(10) ನೀವು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಬೆಳಕಿನಲ್ಲಿ ಕತ್ತಲೆಯಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಭಯಭೀತರಾಗುತ್ತವೆ.😵

ಮತ್ತು

(11) ನೀವು ನಕಾರಾತ್ಮಕ ವಿಷಯಗಳನ್ನು ಯೋಚಿಸಲು ಪ್ರಾರಂಭಿಸಿದಾಗ ಮೆದುಳು ಹೆದರುತ್ತದೆ.🤔

ನಿಮ್ಮ ದೇಹದ ಭಾಗಗಳನ್ನು ನೋಡಿಕೊಳ್ಳಿ ಮತ್ತು ಅವರನ್ನು ಹೆದರಿಸಬೇಡಿ.🤝

ಈ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ ಮತ್ತು ಬಹುಶಃ ನಿಮ್ಮ ದೇಹದಲ್ಲಿ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಭಾಗಗಳನ್ನು ಆರೋಗ್ಯವಾಗಿಡಿ
💪👍🏻🤝

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World