www.dgnsgreenworld.blogspot.com

Friday, December 27, 2019

ಬಿಟ್ಟು ಬಿಡಿ ಅವಳನ್ನು ಅವಳದೇ ಸಮಯ ಅನುಭವಿಸಲು.

SAVE NATURE, HEALTHY, WEALTHY & WISE. dgnsgreenworld Family

ಬಿಟ್ಟು ಬಿಡಿ ಅವಳನ್ನು
ಅವಳದೇ ಸಮಯ ಅನುಭವಿಸಲು.

ಮುಂಜಾನೆಯೇ ಎದ್ದು ಕಸಗೂಡಿಸಿ
ಒದ್ದೆಯಾದ ನೆಲದಲ್ಲಿ ರಂಗೋಲಿಯ ಬಿಡಿಸಿ

ಮಗಳ ಜಡೆಯ ಹೆಣೆದು‌‌ ಮಗನ ಕ್ರಾಪು ತೆಗೆದು
ಕೂಗುವ ಗಂಡನ ನಿಭಾಯಿಸಿ

ಉಸ್ಸೆಂದು ತುಸು ಬೆಚ್ಚಗಿನ ಚಹಾ ಕುಡಿಯಲು ಕುಳಿತಾಗ
ಬಿಟ್ಟು ಬಿಡಿ ಅವಳನು
ಅವಳದೇ ಸಮಯ ಅನುಭವಿಸಲು.

ಅಪರೂಪಕ್ಕೆ ಮನೆಮಂದಿಯೆಲ್ಲಾ
ಹೊರಗೆ ಊಟಕ್ಕೆ ಹೋದಾಗ
ತನ್ನ ಆಸೆಯ ಅದುಮಿಟ್ಟು
ನಿಮ್ಮ ಅಭಿರುಚಿಯ ತಿನಿಸುಗಳನ್ನು ತಯಾರಿಸಿ
ತನ್ನ ಇಷ್ಟದ ತಿಂಡಿಯನ್ನೇ ಮರೆತ
ಅವಳನ್ನು ಬಿಟ್ಟು ಬಿಡಿ ಅವಳದೇ ನೆಚ್ಚಿನ ಖಾದ್ಯ ಆರಿಸಲು.

ಸಂಬಂಧಿಕರ ಮದುವೆ ಮುಂಜಿಗಳಿಗೆ
ಸೀರೆಗೊಪ್ಪುವ ರವಿಕೆ ತೊಟ್ಟು ಸಿದ್ಧವಾಗುತ್ತಿರುವಾಗ
ನಿಮಗೆ ಒಪ್ಪುವ ದಿರಿಸು
ಮಕ್ಕಳು ಇಷ್ಟಪಡುವ ಉಡುಪು
ಅನುದಿನವು ಒಗೆದು ಇಸ್ತ್ರಿ ಮಾಡಿ
ನಿಮ್ಮನ್ನು ಮಕ್ಕಳನ್ನು ಕಳೆಗಟ್ಟುವಂತೆ ಮಾಡಿದ
ಬಿಟ್ಟುಬಿಡಿ ಅವಳನ್ನು ಅವಳ
ಇಷ್ಟದ ಬಟ್ಟೆಗಳ ಧರಿಸಲು

ಬೆಳೆಗ್ಗೆಯಿಂದ ಬಿಡುವಿಲ್ಲದ ಕೆಲಸದಲಿ
ಮೈಮನಗಳೆಲ್ಲಾ ಆಯಾಸದಿಂದ ಬಳಲಿರಲು
ಸಿಕ್ಕ ಅಲ್ಪ ಸಮಯದಲ್ಲೇ ತನ್ನ ನೆಚ್ಚಿನ ಧಾರವಾಹಿ ನೋಡಲೆಂದು ಅವಳು ಕುಳಿತಾಗ

ನಿಮ್ಮ ಮನರಂಜನೆಯ ಕಾರ್ಯಕ್ರಮಗಳಲಿ
ನೀವು ಮೈಮರೆತು ಕುಳಿತಿರಲು
ಸದ್ದಿಲ್ಲದೆ ರಾತ್ರಿ ಊಟ ತಯಾರಿಸಲು
ಕಣ್ಮರೆಯಾಗುವ ಅವಳನು
ಬಿಟ್ಟುಬಿಡಿ ಅವಳದೇ ಪ್ರಪಂಚದಲಿ ವಿಹರಿಸಲು

ಯಾವುದೋ ಒಂದು ದಿನ ಏಳುವುದು ತಡವಾಗಿ
ನಿಮಗೆ ತಿಂಡಿಯ ಕೊಡುವುದು ವಿಳಂಬವಾದರೆ
ತರೇವಾರಿ ಭಕ್ಷಗಳ ತಯಾರಿಸಿ
ಬಗೆಬಗೆಯ ಜನರ ಸಮ್ಮಾಳಿಸಿ
ಹಸಿದ ಹೊಟ್ಟೆಯ ತುಂಬಿಸಿದ ಆ ಮಾತೆಯನು
ಬಿಟ್ಟುಬಿಡಿ ಒಂದು ದಿನವಾದರೂ ಅವಳ ಸಮಯಕ್ಕೆ ಏಳಲು.

ಬಿಟ್ಟು ಬಿಡಿ ಅವಳನು ಜೀವಿಸಲು
ಕಳೆಯಲಿ ಸಮಯವ
ದಿಟ್ಟಿಸುತ ಕಿಟಕಿಯಲಿ
ನಡುವೆ ಗುಟುಕರಿಸುತ ಬಿಸಿ ಕಾಫಿಯ

ಜೀವನವಿಡೀ ತನ್ನ ಬಹುಪಾಲು ಸಮಯವ
ಕುಟುಂಬಕ್ಕೆ ಧಾರೆಯೆರೆದು
ಪೊರೆದ ಆ ಮಹಾತ್ಯಾಗಿಗೆ
ತನ್ನದೇ ಕೆಲವು ಕ್ಷಣಗಳನು
ತನಗಾಗಿ ಅನುಭವಿಸಲು
ಬಿಟ್ಟು ಬಿಡಿ.....‌. ಬಿಟ್ಟು ಬಿಡಿ.....‌‌..

ವಂದೆಗಳೊಂದಿಗೆ.
            

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World