www.dgnsgreenworld.blogspot.com

Thursday, December 26, 2019

ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು

SAVE NATURE, HEALTHY, WEALTHY & WISE. dgnsgreenworld Family

ಜೀವನದಲ್ಲಿ ತುಂಬಾ ನೋವು, ಬೇಸರವಾದಾಗ ಬುದ್ಧನ ಈ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು!!
ಮನುಷ್ಯನು ತನ್ನ ಜೀವನದಲ್ಲಿ ಎಷ್ಟು ಒಳ್ಳೆಯವರಾಗಿದ್ದರೂ ಕೂಡ ಅವನಿಗೆ ಜನರು ಈ ಸಮಾಜದಲ್ಲಿ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಅವನನ್ನು ಅಲ್ಲಗೆಳೆಯುತ್ತಾರೆ. ಆಗ ಅವನಿಗೆ ಅನಿಸುತ್ತದೆ ನಾನು ಜೀವನದಲ್ಲಿ ಇಷ್ಟು ಒಳ್ಳೆಯವನಾಗಿ ಯಾಕೆ ಇರಬೇಕು ಅಂತ. ಕೆಲವೊಮ್ಮೆ ಅವನಲ್ಲಿರುವ ಹುಮ್ಮಸ್ಸು ಕಡಿಮೆಯಾಗಿಬಿಡುತ್ತದೆ ಇಂಥ ಜನರ ನಡುವೆ ಹೇಗೆ ಇರೋದು ಅಂತ. ಆದರೆ ಸ್ನೇಹಿತರೇ ಜನರ ವರ್ತನೆಯಿಂದ ನೀವು ಎಂದಿಗೂ ಕೂಡ ಮನಸ್ಸನ್ನು ಬದಲಾಯಿಸಕೊಳ್ಬೇಡಿ. ನೀವು ಒಳ್ಳೆಯವರು ಅಥವಾ ನೀವು ಏನು ಅಂತ ನಿಮಗೆ ತಿಳಿದಿದ್ದರೆ ಸಾಕು.

ಹಾಗಾದರೆ ಮನುಷ್ಯನಿಗೆ ಬೇಸರವಾದಾಗ ಅಥವಾ ಅವನಲ್ಲಿರುವ ತಹ ಉತ್ಸಾಹ ಹುಮ್ಮಸ್ಸು ಕಡಿಮೆಯಾದಾಗ ಏನು ಮಾಡಬೇಕು ಅಂತ ಅನಿಸುತ್ತಾ ಇದ್ದರೆ ಬುದ್ಧನ ಈ ಮಾತುಗಳನ್ನು ನೆನಪಿಸಿಕೊಳ್ಳಿ. ಆಗ ನಿಮ್ಮಲ್ಲಿರುವ ಚೈತನ್ಯ ಹುಮ್ಮಸ್ಸು ಇನ್ನೂ ಹೆಚ್ಚುತ್ತದೆ. ಹಾಗಾದರೆ ಬುದ್ಧ ಹೇಳಿರುವಂತಹ ಆ ಮಾತುಗಳನ್ನು ತಿಳಿದುಕೊಳ್ಳೋಣ. ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇಷ್ಟವಾಗಿ ಇದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ.

* ಬುದ್ಧ ಹೇಳಿರುವುದು ಏನೆಂದರೆ ಮನುಷ್ಯರು ಒಳ್ಳೆಯವರಾಗಿ ಇರಬೇಕು. ಆದರೆ ಅದನ್ನು ಯಾವತ್ತಿಗೂ ಸಾಬೀತು ಮಾಡಿ ತೋರಿಸಲು ಹೋಗಬಾರದು.

*ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವನೇ ಅವನ ಬಾಳಿನ ಚಾಲಕ ನಾಗಿರಬೇಕು. ಆ ಒಂದು ಅಧಿಕಾರವನ್ನು ಬೇರೆಯವರ ಕೈಗೆ ಕೊಡಬಾರದು. ಹಾಗೆ ಮಾಡಿದಲ್ಲಿ ನಿಮ್ಮ ಜೀವನದ ದಾರಿಯೂ ಕೂಡಾ ತಪ್ಪಿ ಬಿಡುತ್ತದೆ. ಆಗ ಅದು ಸೂತ್ರವಿಲ್ಲದ ಗಾಳಿ ಪಟದ ಹಾಗೆ ಆಗಿ ಬಿಡುತ್ತದೆ ಆ ವ್ಯಕ್ತಿಯ ಜೀವನ.

* ನಮ್ಮ ಜೀವನದಲ್ಲಿ ನಾವು ಯಾರಿಗೂ ಕೂಡಾ ಕ್ಷಮೆ ಕೇಳಲು ಹೋಗಬಾರದು. ಯಾಕೆ ಅಂದರೆ ಅವರುಗಳೇ ನಮ್ಮ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಮೇಲೆ ನಾವೇಕೆ ಕ್ಷಮೆ ಕೇಳಬೇಕು. ಒಂದು ವೇಳೆ ತಪ್ಪು ನಮ್ಮದಿದ್ದರೆ ಮಾತ್ರ ಕ್ಷಮೆ ಕೇಳುವುದು ಉತ್ತಮ. ಅದಲ್ಲದೆ ಯಾವತ್ತಿಗೂ ಕೂಡ ನಮ್ಮ ತಪ್ಪಿಲ್ಲದಿದ್ದರೆ ಯಾರಿಗೂ ಕ್ಷಮೆ ಕೇಳಬಾರದು.

* ವ್ಯಕ್ತಿಯೊಬ್ಬ ಒಂಟಿಯಾಗಿ ಇದ್ದರೆ ಅವನ ಹಾಗೆ ಯಾರೂ ಇಲ್ಲ ಎಂದು ಅದರ ಅರ್ಥ ಅಲ್ಲ. ಅವನುಗೆ ಎಷ್ಟೇ ಕಷ್ಟ ಬಂದರೂ ಕೂಡ ಒಬ್ಬನೇ ನಿಭಾಯಿಸುವ ಶಕ್ತಿ ಅವನಿಗಿದೆ ಎಂದು ಅರ್ಥ.

* ಮನುಷ್ಯನು ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಂಡಿರಬೇಕು. ಅದು ನಮ್ಮ ಖಾಸಗಿ ಜೀವನದ ವಿಷಯವೇ ಇರಲಿ ಅಥವಾ ಮತ್ತೊಬ್ಬರ ಜೀವನದ ವಿಷಯವೇ ಆಗಲಿ ಎಲ್ಲಾ ಸಂದರ್ಭದಲ್ಲಿ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಳ್ಳಬೇಕು.

* ಮನುಷ್ಯ ಜೀವನದಲ್ಲಿ ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ. ಆದರೆ ಅದೇ ಹಣ ಮನುಷ್ಯನು ನಂಬಿಕೆಗೆ ಅರ್ಹವೋ ಅಲ್ಲವೋ ಎಂಬುದನ್ನು ಪರೀಕ್ಷಿಸುತ್ತದೆ ಮತ್ತು ಮನುಷ್ಯನ ಸ್ವಭಾವವನ್ನು ಕೂಡ ಈ ಒಂದು ಹಣ ಪರಿಕ್ಷಿಸಬಲ್ಲದು.

* ಈ ಜಗತ್ತಿನಲ್ಲಿ ಎಲ್ಲರೂ ಕೂಡ ಒಂದಲ್ಲಾ ಒಂದು ತರಹದ ಮುಖವಾಡವನ್ನು ಹಾಕಿಕೊಂಡಿರುವವರು. ಆದ್ದರಿಂದ ಮನುಷ್ಯನು ತನ್ನ ಹುಷಾರಿನಲ್ಲಿ ಅವನು ಇದ್ದರೆ ಒಳ್ಳೆಯದು. ಎಲ್ಲರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಆಪ್ತರು ಎಂದು ನಂಬಿ ಮೋಸ ಹೋಗುವುದು ಹೆಚ್ಚಾಗಿದೆ. ಆದ್ದರಿಂದ ಮುಖವಾಡವನ್ನು ಹಾಕಿಕೊಂಡು ನಡೆಸುತ್ತಿರುವ ಈ ಬದುಕನ್ನು ಎಂದಿಗೂ ಕೂಡ ನಂಬಲು ಹೋಗಬಾರದು.

* ಮಕ್ಕಳಿಗೆ ಶಿಕ್ಷಣವನ್ನು ಎಂದಿಗೂ ಕೂಡ ಅವರು ಶ್ರೀಮಂತರಾಗಬೇಕು ಎಂದು ಕೊಡಿಸಬೇಡಿ. ಅವರಿಗೆ ಖುಷಿಯಾಗಿರುವುದು ಹೇಗೆ ಎಂಬುದನ್ನು ತಿಳಿಸಿಕೊಡಿ. ಆಗ ಅವರು ದೊಡ್ಡವರಾದಾಗ ವಸ್ತುವಿನ ಬೆಲೆ ತಿಳಿಯುವುದರ ಬದಲು ಆ ವಸ್ತುವಿನ ಮಹತ್ವವನ್ನು ತಿಳಿದುಕೊಳ್ಳುತ್ತಾರೆ.

* ಮನುಷ್ಯನ ಜೀವನದಲ್ಲಿ ಅವನು ಎಷ್ಟು ಕೆಟ್ಟ ಜನರ ಸಹವಾಸವನ್ನು ಮಾಡುವುದಿಲ್ಲವೋ ಅವನಿಗೆ ಅಷ್ಟು ಒಳ್ಳೆಯದಾಗುತ್ತದೆ.

* ಈ ಸಮಾಜದಲ್ಲಿ ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಆದರೆ ಬಲಶಾಲಿ ವ್ಯಕ್ತಿಗಳು ಅದನ್ನು ಕ್ಷಮಿಸಿ ಬಿಡುತ್ತಾರೆ ಮತ್ತು ಬುದ್ಧಿವಂತ ವ್ಯಕ್ತಿಗಳು ಅದನ್ನು ನಿರ್ಲಕ್ಷಿಸುತ್ತಾರೆ.

* ಮನುಷ್ಯ ತನ್ನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ ತನ್ನ ಹಿಂದಿನ ದಿನಗಳನ್ನು ನೆನೆದು ದುಃಖಿಸದೇ ಮತ್ತು ಮುಂದಿನ ದಿನಗಳ ಬಗ್ಗೆ ಯೋಚಿಸಬಾರದು. ಇಂದಿನ ದಿನವನ್ನು ಖುಷಿಯಿಂದ ಕಳೆಯುವುದನ್ನು ಕಲಿತುಕೊಳ್ಳಬೇಕು.

* ಮನುಷ್ಯನ ಜೀವನದಲ್ಲಿ ಅವನ ಖುಷಿಗೆ ಅವನೇ ಕಾರಣೀಕರ್ತರಾಗಬೇಕು. ಆ ಖುಷಿಗೆ ಬೇರೆಯವರು ಕಾರಣೀಕರ್ತರಾಗಬಾರದು. ಅಂದರೆ ಅರ್ಥ ತಾನು ಖುಷಿಯಾಗಿರಬೇಕು. ಅಂದರೆ ಅದಕ್ಕೆ ಕಾರಣ ನಾವೇ ಆಗಿರಬೇಕು ನಮಗೆ ಬೇರೆಯವರು ಬಂದು ಖುಷಿ ಪಡಿಸಬೇಕು ಅಂತ ಕುಳಿತುಕೊಂಡರೆ ಅದು ತಪ್ಪಾಗುತ್ತದೆ.

* ಮನುಷ್ಯನು ತನ್ನ ಜೀವನದಲ್ಲಿ ಸತ್ಯ ಹೇಳುವವರನ್ನು ನಂಬಬೇಕು. ಆ ಸತ್ಯ ಎಷ್ಟೇ ಕಹಿಯಾಗಿದ್ದರೂ ಪರವಾಗಿಲ್ಲ ಅದನ್ನು ನಾವು ಸ್ವೀಕರಿಸುವಂತೆ ಇರಬೇಕು.

* ಮನುಷ್ಯನು ಜೀವನದಲ್ಲಿ ಎಂದಿಗೂ ಕೂಡ ಗಿಳಿಯಂತೆ ಇರಬಾರದು. ಯಾವಾಗಲೂ ಹದ್ದಿನಂತೆ ಇರಬೇಕು. ಯಾಕೆ ಅಂದರೆ ಗಿಳಿಯೂ ತುಂಬಾನೇ ಮಾತನಾಡುತ್ತದೆ. ಯಾವುದೇ ರೀತಿಯ ಕೆಲಸ ಮಾಡಿ ತೋರಿಸುವುದಿಲ್ಲ. ಆದರೆ ಹದ್ದು ಮಾತನ್ನು ಕಡಿಮೆ ಮಾಡಿ, ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತದೆ ಅದಕ್ಕೆ ಅದು ಬಾನೆತ್ತರಕ್ಕೆ ಹಾರುವ ಶಕ್ತಿ ಹದ್ದಿಗೆ ಇದೆ.

* ಜೀವನದಲ್ಲಿ ಬದಲಾವಣೆ ಎಂಬುದು ಅನಿವಾರ್ಯ ಅಂದಾಗ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗಬೇಕು. ನೀವು ಏನನ್ನಾದರೂ ಒಂದು ಒಳ್ಳೆಯದನ್ನು ತ್ಯಾಗ ಮಾಡುತ್ತಿದ್ದೀರಾ ಅಂದರೆ ನಿಮಗೆ ಅಲ್ಲೊಂದು ಉತ್ತಮವಾದದ್ದು ಸಿಕ್ಕೇ ಸಿಗುತ್ತದೆ.

* ಈ ಭೂಮಿ ಮೇಲೆ ಯಾರೊಂದಿಗೂ ಕೂಡ ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಹೋಗಬಾರದು. ಯಾಕೆ ಅಂದರೆ ಬಾಂಧವ್ಯವೂ ಹೆಚ್ಚಾದಾಗ ನಿರೀಕ್ಷೆಗಳು ಹೆಚ್ಚಾಗುತ್ತದೆ. ನಿರೀಕ್ಷೆಗಳು ಹೆಚ್ಚಾದಾಗ ನೋವು ಆಗುವುದು ಕೂಡ ಹೆಚ್ಚಾಗುತ್ತದೆ.

* ಅತಿಯಾದ ಯೋಚನೆ ಮಾಡುವುದೇ ನಮ್ಮ ಜೀವನದಲ್ಲಿ ಹೆಚ್ಚು ದುಃಖವನ್ನು ತಂದೊಡ್ಡುವುದು. ಆದ್ದರಿಂದ ಅತಿಯಾದ ಯೋಚನೆ ಮಾಡುವುದು ಬಿಟ್ಟು ಬಿಡಬೇಕು.

* ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು.

ಇದು ಬುದ್ಧ ನಮಗೆಲ್ಲ ಹೇಳಿರುವಂತಹ ಕೆಲವೊಂದು ಮಾತುಗಳು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ನೆಮ್ಮದಿಯ ಜೀವನ ಸಾಗಿಸಬಹುದು.

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World