www.dgnsgreenworld.blogspot.com

Thursday, August 29, 2024

ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ.

********ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ....ಅವ್ರು ಅಸಹಾಯಾಕರಾಗಿ... ತಲೆಯನ್ನ ತಗ್ಗಿಸುತ್ತಾರೆ... ದೃತರಾಷ್ಟ್ರ ಕಣ್ಣು ಕಾಣದವನು...ಇನ್ನೂ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳು....ಆರ್ಥನಾದ ಕೇಳಿಸುತ್ತಿದ್ದರೂ.. ಏನೂ ಮಾಡದ ಸ್ಥಿತಿ...ಇನ್ನೂ ದ್ರೋಣಾಚಾರ್ಯ ಆಶ್ವತ್ತಾಮ..ವಿಧುರ.. ಕರ್ಣ...ದುರ್ಯೋಧನನ ಆಜ್ಞೆಗೆ ಕಟ್ಟು ಬಿದ್ದವರು....ಇನ್ನೂ ಪಾಂಡವರು...ಸ್ಥಿತಿ ಅಂತೂ ಅಯೋಮಯ... ಈ ಕಡೆ ಪಗಡೆ ಆಟದಲ್ಲಿ... ಸಕಲವನ್ನೂ ಕಳೆದುಕೊಂಡು..ಕೊನೆಯದಾಗಿ  ತಮ್ಮ ಪತ್ನಿಯಾದ ಪಾಂಚಾಲಿಯನ್ನ ಪಣಕ್ಕಿಟ್ಟು.. ಅವಳನ್ನು ಸಹ ಕಳೆದುಕೊಂಡು...ತಲೆ ತಗ್ಗಿಸಿ ಕೂತವರು...ಈಗ ದ್ರೌಪದಿ  ಕೌರವರ ಕೈ ಗೊಂಬೆ...ಆ ಕಡೆ ದುಷ್ಯಾಸನ ದ್ರೌಪದಿ ಕೂದಲನ್ನ... ಹಿಡಿಡೆಳೆದು...ಅವಳ ಸೆರಗಿಗೆ ಕೈ ಹಾಕಿ ಎಳೆಯುವಾಗ....ಕೌರವರು ಧೂರ್ಯೋಧನನ... ಅಟ್ಟಹಾಸದ ನಗು... ಮತ್ತು ಶಕುನಿಯ... ಕರ್ಕಶವಾದ.. ನಗು....ದ್ರೌಪದಿ.. ಮತ್ತೊಮ್ಮೆ... ಎಲ್ಲರ ಹೆಸರು ಕೂಗಿ ಕೂಗಿ... ಕಾಪಾಡುವಂತೆ ಅಂಗಲಾಚಿ ಬೇಡುತ್ತಾಳೆ..." ಓ ರಥರೇ. ಅತಿರಥರೇ..ಮಹಾ ರಥರೇ...ಕುರುಕುಲ ಸೊಸೆಗೆ  ಇಷ್ಟು ಅನ್ಯಾಯವಾಗುತ್ತಿದ್ದರೂ ಒಬ್ಬರಾದರೂ... ತಡೆಯಬಲ್ಲಿರಾ..ಎಂದು..ರಾಗವಾಗಿ ಗೋಳಾಡುತ್ತ ಇರುವಾಗ... ಭೀಮನ ಕಣ್ಣು ಕೆಂಪಾಗಿರತ್ತೆ.... ಅರ್ಜುನನ ಆವೇಶ ಮಿತಿಮೀರತ್ತೆ...ಆದರೂ ಏನೂ ಮಾಡದ ಸ್ಥಿತಿ......ಕಟ್ಟ ಕಡೆಯದಾಗಿ... ದ್ರೌಪದಿಯ ಸ್ಮರಣೆಗೆ ಬಂದಿದ್ದು... ಭಗವಂತ... ಈ ಸಂಧರ್ಭದಲ್ಲಿ ನನ್ನನ್ನು ಕಾಪಾಡುವ ಏಕ ಮಾತ್ರ ಶಕ್ತಿ ಅದು ಭಗವಂತನೇ ಎಂದು ಅವಳಿಗೆ ಆಗ ಅರಿವಾಗಿತ್ತು.. ಜೋರಾಗಿ....ಗೂಪಾಲ... ಮಾಧವಾ.....ಪರ0ಧಾಮ.. ಅಣ್ಣಾ...ಕೃಷ್ಣಾ...ಎಂದು ಕೈ ಮೇಲೆತ್ತಿ  ಮುಗಿದಾಗ..ಸರ್ವಲOಕೃತ ಭೂಷಿತನಾಗಿ....ತೂಗು ಮಂಚದ ಮೇಲೆ ಅಷ್ಟ ಪತ್ನಿಯರ ಮಧ್ಯ ಹಾಯಾಗಿ ಕೊಳಲು ಹಿಡಿದು ಅದೇ ತಾನೇ ಭೋಜನವಾಗಿ ತಾOಬೂಲ  ಸವೇಯುತ್ತ ಪವಡಿಸಿದವನಿಗೆ...ಅವಳ ಆರ್ಥನಾದ ಕೇಳಿ... ರುಕ್ಮಿಣಿಯ  ಮಡಿಲಲ್ಲಿ  ತಲೆ ಇಟ್ಟು.. ಸತ್ಯಭಾಮೆಯ ತೊಡೆಯ ಮೇಲೆ ಕಾಲಿಟ್ಟು ಮಲಗಿದವನು ತಟ್ ಅಂತ ಮಾಯವಾಗಿಬಿಡುತ್ತಾನೆ...ಆ ಕಡೆ ಶ್ರೀಕೃಷ್ಣನ ಪತ್ನಿಯರಿಗೆ ಗೊಂದಲ.. ನನ್ನ ಗಂಡನಿಗೆ ಇಷ್ಟು ತುರ್ತಾದ ಕೆಲ್ಸವೆನಿರಬಹುದು ಅಂತ... ತಕ್ಷಣ ಈ ಕಡೆ ಬಂದವನೇ...ನಿರಂತರವಾಗಿ ಅವಳಿಗೆ ವಸ್ತ್ರ ಕೊಟ್ಟು ಅವಳ ಮಾನವನ್ನ ಉಳಿಸುತ್ತಾನೆ....ಕೊನೆಗೆ ದುಷ್ಯಾಸನ...ಸೀರೆ ಸೆಳೆದು ಸೆಳೆದು... ಸುಸ್ತಾಗಿ...ನೆಲಕಚ್ಚಿ ಬಿದ್ದಿರುತ್ತಾನೆ...ಕೋಪದಿಂದ ಧುರ್ಯೋಧನ... ಶಕುನಿ.. ಕೃಷ್ಣ ಲೀಲೆಯನ್ನ ನೋಡುತ್ತಾ...ಬುಸುಗುಟ್ಟುತ್ತಿರುತ್ತಾರೆ... ದೃತರಾಷ್ಟ್ರನಿಗೆ.. ಪಶ್ಚಾತಾಪದ ಅರಿವಾಗಿ... ತಪ್ಪಾಯಿತೆOದು... ದ್ರೌಪದಿಗೆ ಕ್ಷಮೆ ಕೋರಿ...3 4 ಇಚ್ಛೆಯ ವರವನ್ನ ಕೊಟ್ಟು... ಕಳುಹಿಸುತ್ತಾರೆ.... ಇತ್ತ ರೂಷಾವೇಶದಿಂದ...ಪಾಂಡವರು ಅರಮನೆಗೆ ಬಂದ ನಂತರ... ದ್ರೌಪದಿ.. ಸ್ವಲ್ಪ ಕೋಪದಿಂದ ಅಣ್ಣಾ... ನೀನೇಕೆ ಇಷ್ಟು ತಡವಾಗಿ ಬಂದೆ... ನೀನು ಮುಂಚೆಯೇ ಬಂದಿದ್ದರೆ ಇಷ್ಟೆಲ್ಲ ನಡೆಯುತ್ತಿರಲಿಲ್ಲವೆಂದು  ಹೇಳಿದಾಗ... ಶ್ರೀಕೃಷ್ಣನ ಉತ್ತರ ತುಂಬಾ ಅದ್ಭುತವಾಗಿತ್ತು... " ದ್ರೌಪದಿ...ನನ್ನನ್ನು ಕೇಳಿ ನಿನ್ನ ಪತಿಯರು ಜೂಜಾಟಕ್ಕೆ ಇಳಿದಿದ್ದರಾ? ಜೂಜಾಡುವುದು.. ತಪ್ಪು ಎಂದು ಗೊತ್ತಿದ್ದರೂ ಅಂತಹದೊಂದು... ಆಟವಾಡಲು ತುದಿಗಾಲಲ್ಲಿ ತಿಂತಿದ್ದರು... ಅದು.. ಆ ಕುತಂತ್ರಿ ಶಕುನಿಯ ಜೊತೆ... ಆಗ ನೀನು ಕರೆದಿದ್ದರೆ... ಧರ್ಮರಾಯನ ಬದಲಿಗೆ ನಾನೇ ಆಟಕ್ಕೆ ಕೂತು... ಕೌರವರಿಗೆ ಶಕುನಿಗೆ ಮಣ್ಣು ಮುಕ್ಕಿಸುತ್ತಿದ್ದೆ....ಇನ್ನೂ ನೀನೂ...ಇಷ್ಟೆಲ್ಲ ನಡೆಯುತ್ತಿರುವಾಗ... ನೀನು... ಯಾರಾದರೂ ನನ್ನ ಸಹಾಯಕ್ಕೆ ಬರುವರಾ ಎಂದು ಅಂಗಲಾಚಿ ಬೇಡಿದೆ... ಅಲ್ಲಿ ಇದ್ದದ್ದು ಯಾರು ಸಾಮಾನ್ಯರಲ್ಲ ಅತಿರಥ ಮಹಾರಥರು... ಅವರ್ಯಾರು ಬರಲಿಲ್ಲ...ಕೊನೆಗೆ ನೀನು ಕರೆದಿದ್ದು ನನ್ನನ್ನ... ನೀನು ಅವರೆಲ್ಲರಿಗಿಂತ ಮುಂಚೆಯೇ ನನ್ನ ಕರೆದಿದ್ದರೆ... ನಾನು ಮುಂಚೆಯೇ ಬರುತ್ತಿದ್ದೆ... ಅದಿಷ್ಟು ಜನರಲ್ಲಿ ಒಬ್ಬರಾದರೂ ನಿನ್ನ ಸಹಾಯಕ್ಕೆ ಬಂದಿದ್ದರೆ... ನಿನಗೆ ನನ್ನ ಅವಶ್ಯಕತೆಯಾದರೂ ಎಲ್ಲಿ ಇರುತಿತ್ತು... ನೀನು ಯಾವುದೇ ದಾರಿ ಕಾಣದೆ ಇದ್ದಾಗ...ನನ್ನನ್ನು ಪ್ರಾರ್ಥಿಸಿದೆ ನಾನು ತಕ್ಷಣ ಬಂದೆ.... ದೋಷವೆಲ್ಲ ನಿಮ್ಮ ಬಳಿ ಇಟ್ಟುಕೊಂಡು ತಡವಾಗಿ ಬಂದೆ ಎಂದು ನನ್ನನ್ನೇ ದೂರುತ್ತೀಯಲ್ಲ ಇದ್ಯಾವ ನ್ಯಾಯ ಹೇಳಮ್ಮ ತಂಗಿ ಎಂದಾಗ " ಇದನ್ನು ಕೇಳಿ... ಅವಳೆಗೆ...ತಪ್ಪಿನ ಅರಿವಾಗಿ ಪಶ್ಚಾತಾಪದ ಕಣ್ಣೀರು ಹರಿಯದೊಡಗುತ್ತೆ..... "ಈ ಒಂದು ಸಂಧರ್ಭ ನಮ್ಮ ಜೀವನಕ್ಕೂ ಅನ್ವಯವಾಗತ್ತೆ...ಅವರು ನಮ್ಮವರು ಇವರು ನಮ್ಮವರು ಅನ್ನುವ ಭ್ರಮೆಯಲ್ಲಿ ಇರ್ತೀವಿ...ನಮಗೆ ಕಷ್ಟ ಬಂದಾಗ ನಾವು ಸಹ ಅವರಿವರಿಗೆ...ಸಹಾಯ ಕೋರಿ...ಕೊನೆಗೆ...ಯಾವುದೇ ದಾರಿ ಕಾಣದೆ ಇದ್ದಾಗ...ಹೋಗಿ ಭಗವಂತನ ಪಾದಕ್ಕೆ ಬೀಳುತ್ತೇವೆ....ನೀನೇ ಗತಿ ಭಗವಂತ ಅಂತ ಶರಣಾಗತಿ ಬೇಡುತ್ತೇವೆ...ಕೆಲವೊಮ್ಮೆ ಯಾರು ಅಂದ್ರೆ ಯಾರು ಸಹ ನಮ್ಮ ಸಹಾಯಕ್ಕೆ ಬಾರದೆ ಇರುವ ಸ್ಥಿತಿ...ಅವರಿವರಿಗೆ ಸಹಾಯ ಕೂರುವ ಮುನ್ನವೇ ಒಂದೇ ಒಂದು ಕ್ಷಣ ಭಗವಂತನ   ಸ್ಮರಣೆ ಮಾಡಿದರೆ...ಅವನೇ ಯಾವುದೋ ಒಂದು ರೂಪದಲ್ಲಿ ದಾರಿಯನ್ನ ತೋರಿಸುತ್ತಾನೆ...ಎಂಬುವದಕ್ಕೆ  ಈ ಸಂಧರ್ಭವೇ ಸಾಕ್ಷಿ...🙏🙏"ಕೃಷ್ಣO ಒಂದೇ ಜಗತ್ ಗುರುO" 🙏🙏
ವಂದನೆಗಳೊಂದಿಗೆ
  ಇತಿ 
ನಂಜುಂಡಸ್ವಾಮಿ 

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World