www.dgnsgreenworld.blogspot.com

Friday, August 2, 2024

ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....

ನಿಜ ಅಲ್ಲವೇ...
√ಇದು ಗಡಿಯಾರವನ್ನು ತಿಂದಿತು,,
√ಇದು ಟಾರ್ಚನ್ನು ಮೂಲೆಗೆಸೆಯಿತು,,
√ಇದು ಪೋಸ್ಟ್ ಕಾರ್ಡ್‌ಗಳನ್ನು ಹರಿಯಿತು,,
√ಇದು ಪುಸ್ತಕಗಳನ್ನು ಮುಚ್ಚಿತು,,
√ಇದು ರೇಡಿಯೋವನ್ನು ನಿಲ್ಲಿಸಿತು,,
√ಟೇಪ್ ರೆಕಾರ್ಡರನ್ನು ಮೂಲೆಗುಂಪಾಗಿಸಿತು,,  √ಕ್ಯಾಮರಾವನ್ನು ನಾಶಪಡಿಸಿತು,,
√ಕ್ಯಾಲ್ಕುಲೇಟರ್ ನ ಕೆಲಸ ನಿಲ್ಲಿಸಿತು,,
√ನಮ್ಮ ಜ್ಞಾಪಕಶಕ್ತಿಯನ್ನು ಕಬಳಿಸಿತು.

√ಥಿಯೇಟರ್ ಇಲ್ಲ, ನಾಟಕ ಇಲ್ಲ,
ಆಟವಿಲ್ಲ, ಹಾಡು ಇಲ್ಲ...
 
√ಇದೇ ಬ್ಯಾಂಕ್,
√ಇದೇ ಹೋಟೆಲ್,
√ಇದೇ ಕಿರಾಣಿ ಅಂಗಡಿ,
√ಇದು ಡಾಕ್ಟರ್,
√ಇದು ಜ್ಯೋತಿಷಿ... 

ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...
ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....

ಮನುಷ್ಯನಿಗೆ ಹುಚ್ಚು ಹಿಡಿಯುತ್ತಿದೆ,,,
ಆದರೆ ಫೋನ್ ಮಾತ್ರ ಮತ್ತೂ 
ಮತ್ತೂ ಸ್ಮಾರ್ಟ್ ಆಗುತ್ತಲಿದೆ,,,
ಬಾಯಿ ಮ್ಯೂಟ್ ಆಗುತ್ತಲಿದೆ...
ಎಸ್, ನಿಜ...  
ಕೇವಲ ಬೆರಳ ಸ್ಪರ್ಶದಿಂದ ಜೀವನ...
ಆದರೆ ಯಾರೂ ನಿಜವಾದ ಸಂಪರ್ಕದಲ್ಲಿಲ್ಲ...

ಕೆಲವು ವರ್ಷಗಳ ಹಿಂದೆ luxury ಆಗಿದ್ದ ಮೊಬೈಲು ಈಗ ಆಗಿದೆ necessary

_ಅಳುವ ಮಗುವ ಸಂತೈಸಲು ಬೇಕು ಮೊಬೈಲು,
_ಸಮಯ ಕಳೆಯಲು ಬೇಕೇ ಬೇಕು 
ತಾತಂಗೂ ಮೊಬೈಲ್

ಭೂಮಿಗೆ ಬಂದ ಮೊದಲ ಕ್ಷಣದಿಂದ ಹಿಡಿದು ಭೂಮಿ ಸೇರುವ ಕೊನೆಯ ಕ್ಷಣದವರೆಗೂ 
ಆ ಬಾಲ ವೃದ್ಧರಾಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುವ  ಈ ಮಾಯಾಂಗನೆಯಿಂದ ಮುಕ್ತಿ ಇಲ್ಲವೇ!!??
Dgns

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World