ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)
ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)
ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)
ವಯಸ್ಸು 50 ಆದಾಗ
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)
ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಪೇದೆ ಆಗಿದ್ದವನೂ ಗೌರವ ಕೊಡಲಾರ)
ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)
ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)
ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)
ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.
*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸಿರಿ.*
No comments:
Post a Comment
welcome to dgnsgreenworld Family