www.dgnsgreenworld.blogspot.com

Saturday, August 31, 2024

*ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ*

*ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ* 
ನೀವು ಹಿಂದೂ ಆಗಿರಲಿ ಅಥವಾ ಬೇರೆ ಯಾವುದೇ ಧರ್ಮದವರಾಗಿರಲಿ. ನೀವು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ನೀವು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ನೀವು ನಿಮ್ಮ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಸಂಕ್ಷಿಪ್ತವಾಗಿ, ನೀವು ಮನುಷ್ಯರಾಗಿದ್ದರೆ, ಕೆಳಗಿನ ಮಹಾಭಾರತದಿಂದ ಅಮೂಲ್ಯವಾದ *"9 ಮುತ್ತುಗಳನ್ನು"* ಓದಿ ಮತ್ತು ಅರ್ಥಮಾಡಿಕೊಳ್ಳಿ: 

1. ನಿಮ್ಮ ಮಕ್ಕಳ ವಿವೇಚನಾರಹಿತ ಬೇಡಿಕೆಗಳು ಮತ್ತು ಆಸೆಗಳನ್ನು ನೀವು ಸಮಯಕ್ಕೆ ನಿಯಂತ್ರಿಸದಿದ್ದರೆ, ನೀವು ಜೀವನದಲ್ಲಿ ಅಸಹಾಯಕರಾಗುತ್ತೀರಿ... **"*ಕೌರವರು"** 
2. ನೀವು ಎಷ್ಟೇ ಬಲಶಾಲಿಯಾಗಿದ್ದರೂ, ನೀವು ಅಧರ್ಮವನ್ನು ಬೆಂಬಲಿಸಿದರೆ, ನಿಮ್ಮ ಶಕ್ತಿ, ಆಯುಧಗಳು, ಕೌಶಲ್ಯಗಳು ಮತ್ತು ಆಶೀರ್ವಾದಗಳು ಎಲ್ಲವೂ ನಿಷ್ಪ್ರಯೋಜಕವಾಗುತ್ತವೆ... **"*ಕರ್ಣ"** 
3. ನಿಮ್ಮ ಮಕ್ಕಳು ಮಹತ್ವಾಕಾಂಕ್ಷೆಯಿಂದ ತಮ್ಮ ಜ್ಞಾನವನ್ನು ದುರುಪಯೋಗಪಡಿಸಿಕೊಳ್ಳದಂತೆ  ನೋಡಿಕೊಳ್ಳಿ, ಇಲ್ಲವಾದರೆ ಸಂಪೂರ್ಣ ವಿನಾಶವುಂಟಾಗುತ್ತದೆ..  **" *ಅಶ್ವತ್ಥಾಮ"** 
4. ಅಧರ್ಮಿಗಳಿಗೆ ಶರಣಾಗುವಂಥ ಭರವಸೆಗಳನ್ನು ಎಂದಿಗೂ ನೀಡಬೇಡಿ...   **" *ಭೀಷ್ಮ ಪಿತಾಮಹ"*** 
5. ಸಂಪತ್ತು, ಅಧಿಕಾರ, ಆಡಳಿತ ಮತ್ತು ತಪ್ಪು ಮಾಡುವವರ ಬೆಂಬಲದ ದುರುಪಯೋಗವು ಅಂತಿಮವಾಗಿ ಸಂಪೂರ್ಣ ವಿನಾಶಕ್ಕೆ ಕಾರಣವಾಗುತ್ತದೆ... **" *ದುರ್ಯೋಧನ"***
6. ಕುರುಡನಿಗೆ ಅಧಿಕಾರವನ್ನು ಎಂದಿಗೂ ಹಸ್ತಾಂತರಿಸಬೇಡಿ, ಅಂದರೆ ಸ್ವಾರ್ಥ, ಸಂಪತ್ತು, ಹೆಮ್ಮೆ, ಜ್ಞಾನ, ಮೋಹ ಅಥವಾ ಕಾಮದಿಂದ ಕುರುಡನಾದವನು, ಅದು ವಿನಾಶಕ್ಕೆ ಕಾರಣವಾಗುತ್ತದೆ ... **"*ಧೃತರಾಷ್ಟ್ರ"*** 
7. ಜ್ಞಾನದ ಜೊತೆಯಲ್ಲಿ ಬುದ್ಧಿವಂತಿಕೆ ಇದ್ದರೆ, ನೀವು ಖಂಡಿತವಾಗಿಯೂ ವಿಜಯಶಾಲಿಯಾಗುತ್ತೀರಿ... **" *ಅರ್ಜುನ"***
8. ಮೋಸವು ನಿಮ್ಮನ್ನು ಎಲ್ಲಾ ಸಮಯದಲ್ಲೂ ಪ್ರತಿಯೊಂದು ವಿಷಯಗಳಲ್ಲಿ ಯಶಸ್ಸಿನತ್ತ ಕೊಂಡೊಯ್ಯುವುದಿಲ್ಲ... **" *ಶಕುನಿ"***
9. ನೀವು ನೈತಿಕತೆ, ಸದಾಚಾರ ಮತ್ತು ಕರ್ತವ್ಯವನ್ನು ಯಶಸ್ವಿಯಾಗಿ ಎತ್ತಿ ಹಿಡಿದರೆ, ಜಗತ್ತಿನ ಯಾವ ಶಕ್ತಿಯೂ ನಿಮಗೆ ಹಾನಿ ಮಾಡಲಾರದು...**" *ಯುಧಿಷ್ಠಿರ"***

 
*ಸರ್ವೇ ಜನಾ ಸುಖಿನೋ ಭವಂತು.*
🙏🚩

Thursday, August 29, 2024

ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ.

********ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ....ಅವ್ರು ಅಸಹಾಯಾಕರಾಗಿ... ತಲೆಯನ್ನ ತಗ್ಗಿಸುತ್ತಾರೆ... ದೃತರಾಷ್ಟ್ರ ಕಣ್ಣು ಕಾಣದವನು...ಇನ್ನೂ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳು....ಆರ್ಥನಾದ ಕೇಳಿಸುತ್ತಿದ್ದರೂ.. ಏನೂ ಮಾಡದ ಸ್ಥಿತಿ...ಇನ್ನೂ ದ್ರೋಣಾಚಾರ್ಯ ಆಶ್ವತ್ತಾಮ..ವಿಧುರ.. ಕರ್ಣ...ದುರ್ಯೋಧನನ ಆಜ್ಞೆಗೆ ಕಟ್ಟು ಬಿದ್ದವರು....ಇನ್ನೂ ಪಾಂಡವರು...ಸ್ಥಿತಿ ಅಂತೂ ಅಯೋಮಯ... ಈ ಕಡೆ ಪಗಡೆ ಆಟದಲ್ಲಿ... ಸಕಲವನ್ನೂ ಕಳೆದುಕೊಂಡು..ಕೊನೆಯದಾಗಿ  ತಮ್ಮ ಪತ್ನಿಯಾದ ಪಾಂಚಾಲಿಯನ್ನ ಪಣಕ್ಕಿಟ್ಟು.. ಅವಳನ್ನು ಸಹ ಕಳೆದುಕೊಂಡು...ತಲೆ ತಗ್ಗಿಸಿ ಕೂತವರು...ಈಗ ದ್ರೌಪದಿ  ಕೌರವರ ಕೈ ಗೊಂಬೆ...ಆ ಕಡೆ ದುಷ್ಯಾಸನ ದ್ರೌಪದಿ ಕೂದಲನ್ನ... ಹಿಡಿಡೆಳೆದು...ಅವಳ ಸೆರಗಿಗೆ ಕೈ ಹಾಕಿ ಎಳೆಯುವಾಗ....ಕೌರವರು ಧೂರ್ಯೋಧನನ... ಅಟ್ಟಹಾಸದ ನಗು... ಮತ್ತು ಶಕುನಿಯ... ಕರ್ಕಶವಾದ.. ನಗು....ದ್ರೌಪದಿ.. ಮತ್ತೊಮ್ಮೆ... ಎಲ್ಲರ ಹೆಸರು ಕೂಗಿ ಕೂಗಿ... ಕಾಪಾಡುವಂತೆ ಅಂಗಲಾಚಿ ಬೇಡುತ್ತಾಳೆ..." ಓ ರಥರೇ. ಅತಿರಥರೇ..ಮಹಾ ರಥರೇ...ಕುರುಕುಲ ಸೊಸೆಗೆ  ಇಷ್ಟು ಅನ್ಯಾಯವಾಗುತ್ತಿದ್ದರೂ ಒಬ್ಬರಾದರೂ... ತಡೆಯಬಲ್ಲಿರಾ..ಎಂದು..ರಾಗವಾಗಿ ಗೋಳಾಡುತ್ತ ಇರುವಾಗ... ಭೀಮನ ಕಣ್ಣು ಕೆಂಪಾಗಿರತ್ತೆ.... ಅರ್ಜುನನ ಆವೇಶ ಮಿತಿಮೀರತ್ತೆ...ಆದರೂ ಏನೂ ಮಾಡದ ಸ್ಥಿತಿ......ಕಟ್ಟ ಕಡೆಯದಾಗಿ... ದ್ರೌಪದಿಯ ಸ್ಮರಣೆಗೆ ಬಂದಿದ್ದು... ಭಗವಂತ... ಈ ಸಂಧರ್ಭದಲ್ಲಿ ನನ್ನನ್ನು ಕಾಪಾಡುವ ಏಕ ಮಾತ್ರ ಶಕ್ತಿ ಅದು ಭಗವಂತನೇ ಎಂದು ಅವಳಿಗೆ ಆಗ ಅರಿವಾಗಿತ್ತು.. ಜೋರಾಗಿ....ಗೂಪಾಲ... ಮಾಧವಾ.....ಪರ0ಧಾಮ.. ಅಣ್ಣಾ...ಕೃಷ್ಣಾ...ಎಂದು ಕೈ ಮೇಲೆತ್ತಿ  ಮುಗಿದಾಗ..ಸರ್ವಲOಕೃತ ಭೂಷಿತನಾಗಿ....ತೂಗು ಮಂಚದ ಮೇಲೆ ಅಷ್ಟ ಪತ್ನಿಯರ ಮಧ್ಯ ಹಾಯಾಗಿ ಕೊಳಲು ಹಿಡಿದು ಅದೇ ತಾನೇ ಭೋಜನವಾಗಿ ತಾOಬೂಲ  ಸವೇಯುತ್ತ ಪವಡಿಸಿದವನಿಗೆ...ಅವಳ ಆರ್ಥನಾದ ಕೇಳಿ... ರುಕ್ಮಿಣಿಯ  ಮಡಿಲಲ್ಲಿ  ತಲೆ ಇಟ್ಟು.. ಸತ್ಯಭಾಮೆಯ ತೊಡೆಯ ಮೇಲೆ ಕಾಲಿಟ್ಟು ಮಲಗಿದವನು ತಟ್ ಅಂತ ಮಾಯವಾಗಿಬಿಡುತ್ತಾನೆ...ಆ ಕಡೆ ಶ್ರೀಕೃಷ್ಣನ ಪತ್ನಿಯರಿಗೆ ಗೊಂದಲ.. ನನ್ನ ಗಂಡನಿಗೆ ಇಷ್ಟು ತುರ್ತಾದ ಕೆಲ್ಸವೆನಿರಬಹುದು ಅಂತ... ತಕ್ಷಣ ಈ ಕಡೆ ಬಂದವನೇ...ನಿರಂತರವಾಗಿ ಅವಳಿಗೆ ವಸ್ತ್ರ ಕೊಟ್ಟು ಅವಳ ಮಾನವನ್ನ ಉಳಿಸುತ್ತಾನೆ....ಕೊನೆಗೆ ದುಷ್ಯಾಸನ...ಸೀರೆ ಸೆಳೆದು ಸೆಳೆದು... ಸುಸ್ತಾಗಿ...ನೆಲಕಚ್ಚಿ ಬಿದ್ದಿರುತ್ತಾನೆ...ಕೋಪದಿಂದ ಧುರ್ಯೋಧನ... ಶಕುನಿ.. ಕೃಷ್ಣ ಲೀಲೆಯನ್ನ ನೋಡುತ್ತಾ...ಬುಸುಗುಟ್ಟುತ್ತಿರುತ್ತಾರೆ... ದೃತರಾಷ್ಟ್ರನಿಗೆ.. ಪಶ್ಚಾತಾಪದ ಅರಿವಾಗಿ... ತಪ್ಪಾಯಿತೆOದು... ದ್ರೌಪದಿಗೆ ಕ್ಷಮೆ ಕೋರಿ...3 4 ಇಚ್ಛೆಯ ವರವನ್ನ ಕೊಟ್ಟು... ಕಳುಹಿಸುತ್ತಾರೆ.... ಇತ್ತ ರೂಷಾವೇಶದಿಂದ...ಪಾಂಡವರು ಅರಮನೆಗೆ ಬಂದ ನಂತರ... ದ್ರೌಪದಿ.. ಸ್ವಲ್ಪ ಕೋಪದಿಂದ ಅಣ್ಣಾ... ನೀನೇಕೆ ಇಷ್ಟು ತಡವಾಗಿ ಬಂದೆ... ನೀನು ಮುಂಚೆಯೇ ಬಂದಿದ್ದರೆ ಇಷ್ಟೆಲ್ಲ ನಡೆಯುತ್ತಿರಲಿಲ್ಲವೆಂದು  ಹೇಳಿದಾಗ... ಶ್ರೀಕೃಷ್ಣನ ಉತ್ತರ ತುಂಬಾ ಅದ್ಭುತವಾಗಿತ್ತು... " ದ್ರೌಪದಿ...ನನ್ನನ್ನು ಕೇಳಿ ನಿನ್ನ ಪತಿಯರು ಜೂಜಾಟಕ್ಕೆ ಇಳಿದಿದ್ದರಾ? ಜೂಜಾಡುವುದು.. ತಪ್ಪು ಎಂದು ಗೊತ್ತಿದ್ದರೂ ಅಂತಹದೊಂದು... ಆಟವಾಡಲು ತುದಿಗಾಲಲ್ಲಿ ತಿಂತಿದ್ದರು... ಅದು.. ಆ ಕುತಂತ್ರಿ ಶಕುನಿಯ ಜೊತೆ... ಆಗ ನೀನು ಕರೆದಿದ್ದರೆ... ಧರ್ಮರಾಯನ ಬದಲಿಗೆ ನಾನೇ ಆಟಕ್ಕೆ ಕೂತು... ಕೌರವರಿಗೆ ಶಕುನಿಗೆ ಮಣ್ಣು ಮುಕ್ಕಿಸುತ್ತಿದ್ದೆ....ಇನ್ನೂ ನೀನೂ...ಇಷ್ಟೆಲ್ಲ ನಡೆಯುತ್ತಿರುವಾಗ... ನೀನು... ಯಾರಾದರೂ ನನ್ನ ಸಹಾಯಕ್ಕೆ ಬರುವರಾ ಎಂದು ಅಂಗಲಾಚಿ ಬೇಡಿದೆ... ಅಲ್ಲಿ ಇದ್ದದ್ದು ಯಾರು ಸಾಮಾನ್ಯರಲ್ಲ ಅತಿರಥ ಮಹಾರಥರು... ಅವರ್ಯಾರು ಬರಲಿಲ್ಲ...ಕೊನೆಗೆ ನೀನು ಕರೆದಿದ್ದು ನನ್ನನ್ನ... ನೀನು ಅವರೆಲ್ಲರಿಗಿಂತ ಮುಂಚೆಯೇ ನನ್ನ ಕರೆದಿದ್ದರೆ... ನಾನು ಮುಂಚೆಯೇ ಬರುತ್ತಿದ್ದೆ... ಅದಿಷ್ಟು ಜನರಲ್ಲಿ ಒಬ್ಬರಾದರೂ ನಿನ್ನ ಸಹಾಯಕ್ಕೆ ಬಂದಿದ್ದರೆ... ನಿನಗೆ ನನ್ನ ಅವಶ್ಯಕತೆಯಾದರೂ ಎಲ್ಲಿ ಇರುತಿತ್ತು... ನೀನು ಯಾವುದೇ ದಾರಿ ಕಾಣದೆ ಇದ್ದಾಗ...ನನ್ನನ್ನು ಪ್ರಾರ್ಥಿಸಿದೆ ನಾನು ತಕ್ಷಣ ಬಂದೆ.... ದೋಷವೆಲ್ಲ ನಿಮ್ಮ ಬಳಿ ಇಟ್ಟುಕೊಂಡು ತಡವಾಗಿ ಬಂದೆ ಎಂದು ನನ್ನನ್ನೇ ದೂರುತ್ತೀಯಲ್ಲ ಇದ್ಯಾವ ನ್ಯಾಯ ಹೇಳಮ್ಮ ತಂಗಿ ಎಂದಾಗ " ಇದನ್ನು ಕೇಳಿ... ಅವಳೆಗೆ...ತಪ್ಪಿನ ಅರಿವಾಗಿ ಪಶ್ಚಾತಾಪದ ಕಣ್ಣೀರು ಹರಿಯದೊಡಗುತ್ತೆ..... "ಈ ಒಂದು ಸಂಧರ್ಭ ನಮ್ಮ ಜೀವನಕ್ಕೂ ಅನ್ವಯವಾಗತ್ತೆ...ಅವರು ನಮ್ಮವರು ಇವರು ನಮ್ಮವರು ಅನ್ನುವ ಭ್ರಮೆಯಲ್ಲಿ ಇರ್ತೀವಿ...ನಮಗೆ ಕಷ್ಟ ಬಂದಾಗ ನಾವು ಸಹ ಅವರಿವರಿಗೆ...ಸಹಾಯ ಕೋರಿ...ಕೊನೆಗೆ...ಯಾವುದೇ ದಾರಿ ಕಾಣದೆ ಇದ್ದಾಗ...ಹೋಗಿ ಭಗವಂತನ ಪಾದಕ್ಕೆ ಬೀಳುತ್ತೇವೆ....ನೀನೇ ಗತಿ ಭಗವಂತ ಅಂತ ಶರಣಾಗತಿ ಬೇಡುತ್ತೇವೆ...ಕೆಲವೊಮ್ಮೆ ಯಾರು ಅಂದ್ರೆ ಯಾರು ಸಹ ನಮ್ಮ ಸಹಾಯಕ್ಕೆ ಬಾರದೆ ಇರುವ ಸ್ಥಿತಿ...ಅವರಿವರಿಗೆ ಸಹಾಯ ಕೂರುವ ಮುನ್ನವೇ ಒಂದೇ ಒಂದು ಕ್ಷಣ ಭಗವಂತನ   ಸ್ಮರಣೆ ಮಾಡಿದರೆ...ಅವನೇ ಯಾವುದೋ ಒಂದು ರೂಪದಲ್ಲಿ ದಾರಿಯನ್ನ ತೋರಿಸುತ್ತಾನೆ...ಎಂಬುವದಕ್ಕೆ  ಈ ಸಂಧರ್ಭವೇ ಸಾಕ್ಷಿ...🙏🙏"ಕೃಷ್ಣO ಒಂದೇ ಜಗತ್ ಗುರುO" 🙏🙏
ವಂದನೆಗಳೊಂದಿಗೆ
  ಇತಿ 
ನಂಜುಂಡಸ್ವಾಮಿ 

Tuesday, August 27, 2024

“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ

ಒಂದು ದಿನ ಅಲ್ಬರ್ಟ್ ಐನ್‍ಸ್ಟೈನ್ ಬೋರ್ಡ್ ಮೇಲೆ ಬರೆದರು:
9 x 1 = 09
9 x 2 = 18
9 x 3 = 27
9 x 4 = 36
9 x 5 = 45
9 x 6 = 54
9 x 7 = 63
9 x 8 = 72
9 x 9 = 81
9 x 10 = 91
ಅವರ ಸ್ಟೂಡೆಂಟ್ಸ್ ಗಳಲ್ಲಿ ಗೊಂದಲ ಉಂಟಾಯಿತು ಏಕೆಂದರೆ ಆಲ್ಬರ್ಟ್ ಐನ್‌ಸ್ಟೈನ್ ತಪ್ಪು ಮಾಡಿದ್ದರು! 
9 x 10 ಗೆ ಸರಿಯಾದ ಉತ್ತರ 90 
ಎಲ್ಲಾ ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡಿದರು.ಆದರೆ ಆಲ್ಬರ್ಟ್ ಐನ್‌ಸ್ಟೈನ್ ಎಲ್ಲರೂ ಮೌನವಾಗಿರಲು ಕಾಯ್ದು  ಹೇಳಿದರು:
“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ  ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ ಮತ್ತು ಅದನ್ನು ಆನಂದಿಸುತ್ತದೆ. ಆದ್ದರಿಂದ ಟೀಕೆಗಳು ನಿಮ್ಮ ಕನಸುಗಳನ್ನು ನಾಶಮಾಡಲು ಬಿಡಬೇಡಿ, ಎಂದಿಗೂ ತಪ್ಪು ಮಾಡದ ವ್ಯಕ್ತಿ ಏನನ್ನೂ ಮಾಡದವನು. ”

Friday, August 2, 2024

ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....

ನಿಜ ಅಲ್ಲವೇ...
√ಇದು ಗಡಿಯಾರವನ್ನು ತಿಂದಿತು,,
√ಇದು ಟಾರ್ಚನ್ನು ಮೂಲೆಗೆಸೆಯಿತು,,
√ಇದು ಪೋಸ್ಟ್ ಕಾರ್ಡ್‌ಗಳನ್ನು ಹರಿಯಿತು,,
√ಇದು ಪುಸ್ತಕಗಳನ್ನು ಮುಚ್ಚಿತು,,
√ಇದು ರೇಡಿಯೋವನ್ನು ನಿಲ್ಲಿಸಿತು,,
√ಟೇಪ್ ರೆಕಾರ್ಡರನ್ನು ಮೂಲೆಗುಂಪಾಗಿಸಿತು,,  √ಕ್ಯಾಮರಾವನ್ನು ನಾಶಪಡಿಸಿತು,,
√ಕ್ಯಾಲ್ಕುಲೇಟರ್ ನ ಕೆಲಸ ನಿಲ್ಲಿಸಿತು,,
√ನಮ್ಮ ಜ್ಞಾಪಕಶಕ್ತಿಯನ್ನು ಕಬಳಿಸಿತು.

√ಥಿಯೇಟರ್ ಇಲ್ಲ, ನಾಟಕ ಇಲ್ಲ,
ಆಟವಿಲ್ಲ, ಹಾಡು ಇಲ್ಲ...
 
√ಇದೇ ಬ್ಯಾಂಕ್,
√ಇದೇ ಹೋಟೆಲ್,
√ಇದೇ ಕಿರಾಣಿ ಅಂಗಡಿ,
√ಇದು ಡಾಕ್ಟರ್,
√ಇದು ಜ್ಯೋತಿಷಿ... 

ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...
ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....

ಮನುಷ್ಯನಿಗೆ ಹುಚ್ಚು ಹಿಡಿಯುತ್ತಿದೆ,,,
ಆದರೆ ಫೋನ್ ಮಾತ್ರ ಮತ್ತೂ 
ಮತ್ತೂ ಸ್ಮಾರ್ಟ್ ಆಗುತ್ತಲಿದೆ,,,
ಬಾಯಿ ಮ್ಯೂಟ್ ಆಗುತ್ತಲಿದೆ...
ಎಸ್, ನಿಜ...  
ಕೇವಲ ಬೆರಳ ಸ್ಪರ್ಶದಿಂದ ಜೀವನ...
ಆದರೆ ಯಾರೂ ನಿಜವಾದ ಸಂಪರ್ಕದಲ್ಲಿಲ್ಲ...

ಕೆಲವು ವರ್ಷಗಳ ಹಿಂದೆ luxury ಆಗಿದ್ದ ಮೊಬೈಲು ಈಗ ಆಗಿದೆ necessary

_ಅಳುವ ಮಗುವ ಸಂತೈಸಲು ಬೇಕು ಮೊಬೈಲು,
_ಸಮಯ ಕಳೆಯಲು ಬೇಕೇ ಬೇಕು 
ತಾತಂಗೂ ಮೊಬೈಲ್

ಭೂಮಿಗೆ ಬಂದ ಮೊದಲ ಕ್ಷಣದಿಂದ ಹಿಡಿದು ಭೂಮಿ ಸೇರುವ ಕೊನೆಯ ಕ್ಷಣದವರೆಗೂ 
ಆ ಬಾಲ ವೃದ್ಧರಾಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುವ  ಈ ಮಾಯಾಂಗನೆಯಿಂದ ಮುಕ್ತಿ ಇಲ್ಲವೇ!!??
Dgns

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)

ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)

ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)

ವಯಸ್ಸು 50 ಆದಾಗ 
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)

ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಪೇದೆ ಆಗಿದ್ದವನೂ ಗೌರವ ಕೊಡಲಾರ)

ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)

ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು  ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)

ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸಿರಿ.*

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World