ಒಂದು ರಾತ್ರಿ ಒಬ್ಬ ಬಡಿಗನ ಅಂಗಡಿಯಲ್ಲಿ ಒಂದು ಹಾವು ಬಂತು.
ಅದು ಕತ್ತಲೆಯಲ್ಲಿ ಹರಿದಾಡುತ್ತಿದಂತೆ ಗರಗಸದ ಹತ್ತಿರ ಸುಳಿಯಿತು, ಗರಗಸದ ಮೊನಚಾದ ಒಂದು ಹಲ್ಲಿಗೆ ಅದರ ಬಾಲ ತಾಗಿ ಸ್ವಲ್ಪ ಗಾಯವಾಯಿತು, ತಕ್ಷಣವೇ ಅದು ತಿರುಗಿ ಗರಗಸವನ್ನು ಕಡಿಯಲು ಪ್ರಯತ್ನಿಸಿತು, ಅದರಿಂದ ಹಾವಿನ ಬಾಯಿಗೆ ಗಾಯವಾಯಿತು, ಗಾಯದಿಂದ ವಿಚಲಿತವಾದ ಹಾವು ಕೋಪದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೇ, ಗರಗಸ ತನ್ನನ್ನು ಕಚ್ಚುತ್ತಿದೆ ಎಂದು ಭಾವಿಸಿತು, ಗರಗಸವನ್ನು ಉಸಿರುಗಟ್ಟಿಸಿ ಸಾಯಿಸುವ ಉದ್ದೇಶದಿಂದ ಅದು ಗರಗಸವನ್ನು ಸುತ್ತಿಕೊಳ್ಳಲು ಶುರುಮಾಡಿತು, ಗಾಯ ಹೆಚ್ಚಾದಂತೆ ಗರಗಸವನ್ನು ಮತ್ತಷ್ಟು ಶಕ್ತಿ ಮೀರಿ ಬಿಗಿಯಾಗಿಸಿತು, ಆದರೇ ಮೈಯೆಲ್ಲಾ ಗಾಯವಾಗಿದ್ದು ಹಾವಿಗೆ ಹೊರತು, ಗರಗಸಕ್ಕೇನೂ ಆಗಲಿಲ್ಲ, ಗಾಯದಿಂದ ಅತೀ ಯಾದ ರಕ್ತಸ್ರಾವವಾಗಿ ಹಾವು ಸತ್ತೇಹೋಯಿತು..
ಹೀಗೆ
ಒಮ್ಮೊಮ್ಮೆ ನಮಗೆ ತೊಂದರೆ ಮಾಡಿದವರನ್ನು ಶಿಕ್ಷಿಸುವ ಭರದಲ್ಲಿ ನಾವು ಉದ್ವೇಗಗೊಳ್ಳುತ್ತೇವೆ. ಕೋಪದಲ್ಲಿ ಪ್ರತಿಕ್ರಿಯಿಸಿ ಅವರಿಗೆ ಹಾನಿ ಮಾಡಲು ಪ್ರಯತ್ನಿಸುತ್ತೇವೆ. ಆದರೆ ನಿಜವಾಗಿಯೂ ನಾವು ನಮಗೇ ಶಿಕ್ಷಿಸಿಕೊಂಡಿರುತ್ತೇವೆ, ನಮಗೇನೆ ಹಾನಿಯಾಗಿರುತ್ತದೆ.
ಕೆಲ ಅಹಿತಕರ ಘಟನೆಗಳನ್ನು, ಕೆಲವು ನಮಗಾಗದ ವ್ಯಕ್ತಿಗಳನ್ನು, ಅವರ ಕಟು ಮಾತುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು.
ನಮಗಾದ ಕ್ಷಣಿಕ ನೋವಿನಿಂದ ನಾವು ತಪ್ಪು ಹೆಜ್ಜೆಇಟ್ಟು ಪರಿತಪಿಸುವಂತೆ ಆಗಬಾರದು.
ದ್ವೇಷ, ಉದ್ವೇಗಕ್ಕಿಂತ ಪ್ರೀತಿ ಸಹನೆ ದೊಡ್ಡವು.
Dgns
No comments:
Post a Comment
welcome to dgnsgreenworld Family