ಋಣಾತ್ಮಕ ಚಿಂತನೆ ದೇಹಕ್ಕೂ ಹಾಗೂ ಮನಸಿಗೂ ಎರಡಕ್ಕೂ ಕೆಟ್ಟದ್ದೇ...
ಋಣಾತ್ಮಕ ಚಿಂತನೆ ಎಂಬುದು ಮನಸ್ಸಿಗೆ ಅಂಟಿದ ಕ್ಯಾನ್ಸರ್ ನಂತೆ. ನಮ್ಮನ್ನು ತಿಂದು ತಿಂದು ಕೊಲ್ಲುತ್ತದೆ.
ಎಲ್ಲದರಲ್ಲೂ
ತಪ್ಪು ಹುಡುಕಿಕೊಂಡು ಹೋದರೆ ನಮಗೆ ಪರಿಪೂರ್ಣವಾದ ವಸ್ತು ಹಾಗೂ ವ್ಯಕ್ತಿ ಎಲ್ಲೂ
ಸಿಗುವುದೇ ಇಲ್ಲ. ದೇವರೂ ಸಹ ತಪ್ಪು ಮಾಡುತ್ತಾನೆ ,ಅಂದಮೇಲೆ ನಾವೇನು ಮಹಾ !
ಅಲ್ಲವೇ....
ಎಲ್ಲರಿಗೂ ಲೋಟದಲ್ಲಿ ನೀರು ತುಂಬಿರುವ ಬಗೆಗಿನ ಆಲೋಚನೆ ಕುರಿತು ಇರುವ ಕಥೆಯ ಬಗ್ಗೆ ತಿಳಿದೇ ಇದೆ.
ಒಬ್ಬರು
ಅರ್ಧ ಖಾಲಿ ಇದೆ ಅಂದ್ರೆ ಇನ್ನೊಬ್ಬರು ಅರ್ಧ ತುಂಬಿದೆ ಎನ್ನುತ್ತಾರೆ, ಇಬ್ಬರ ಉತ್ತರವೂ
ಸರಿ ಆದರೆ ಅರ್ಧ ತುಂಬಿದೆ ಅನ್ನುವ ಧನಾತ್ಮಕ ಚಿಂತನೆ ನಮ್ಮ ಬದುಕಿನ ಪಥವನ್ನೆ
ಬದಲಿಸುತ್ತದೆ. ಕೊಂಕು ಹೇಳುವ, ಎಲ್ಲದರಲ್ಲೂ ನ್ಯೂನತೆ ಹುಡುಕುವುದು ಸುಲಭ ಆದರೆ ಅದು
ಜೀವನಕ್ಕೆ ಮಾರಕ.
ಒಂದು
ಕಥೆ ಹೇಳುವೆ ಕೇಳಿ, ಒಮ್ಮೆ ಬಾಟ ಕಂಪೆನಿ ಯವರು ಆಫ್ರಿಕಾದ ಒಂದು ಪ್ರದೇಶದಲ್ಲಿ ತಮ್ಮ
ಶಾಖೆಯನ್ನು ಸ್ಥಾಪನೆ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಒಂದು ಸಣ್ಣ ಸರ್ವೇ
ಮಾಡಬೇಕೆಂದು ಇಬ್ಬರು ಮಾರ್ಕೆಟಿಂಗ್ ಆಫೀಸರ್ ಗಳನ್ನು ಅಲ್ಲಿಗೆ ಕಳುಹಿಸಿದರು. ಒಂದು
ವಾರದ ಸರ್ವೇ ನಂತರ ಬಂದ ಆ ಇಬ್ಬರು ತಮ್ಮ ಸಲಹೆಗಳನ್ನು ಸಲ್ಲಿಸಿದರು.
ಮೊದಲನೇ
ಅಧಿಕಾರಿ ಹೇಳಿದಂತೆ " ಅಲ್ಲಿ ಯಾರೂ ಸಹ ಚಪ್ಪಲಿಯನ್ನು ಧರಿಸುತ್ತಿರಲ್ಲಿಲ್ಲ
,ಆದ್ದರಿಂದ ಅಲ್ಲಿ ಚಪ್ಪಲಿ ಅಂಗಡಿ ತೆರೆದರೆ ಯಾವುದೇ ವ್ಯಾಪಾರ ಆಗುವುದಿಲ್ಲ, ಆದ್ದರಿಂದ
ಅಂಗಡಿ ತೆರೆಯುವ ಪ್ಲಾನ್ ಅನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದರು.
ಇನ್ನು,
ಮತ್ತೊಬ್ಬ ಅಧಿಕಾರಿಯು ಬೇರೆಯೇ ರೀತಿಯ ಸಲಹೆಗಳನ್ನು ಸಲ್ಲಿಸಿದನು. ಇದನ್ನು ನೋಡಿದ
ಕಂಪನಿಯವರಿಗೆ ಆಶ್ಚರ್ಯ ಆಗಿತ್ತು. ಅವರು ಹೇಳಿದ್ದ ಪ್ರಕಾರ ಅಲ್ಲಿ ಯಾರೂ ಸಹ
ಚಪ್ಪಲಿಗಳನ್ನು ಬಳಸುತ್ತಿರಲಿಲ್ಲ , ಅದುವೇ ನಮಗೆ ಟ್ರಂಪ್ ಕಾರ್ಡ್, ನಾವು ಇಲ್ಲಿ
ಚಪ್ಪಲಿಯನ್ನು ಪರಿಚಯಿಸಿದರೆ ನಮಗೆ ಉತ್ತಮ ವ್ಯಾಪಾರ ಆಗುತ್ತದೆ ಎಂದು ಆತ್ಮವಿಶ್ವಾಸದಿಂದ
ವರದಿ ನೀಡಿದ್ದನು. ಇದೇ ತಿಳಿಸುವುದು, ಧನಾತ್ಮಕವಾಗಿ ಹಾಗೂ ಋಣಾತ್ಮವಾಗಿ
ಚಿಂತಿಸುವರಿಗೆ ಇರುವ ವ್ಯತ್ಯಾಸ..ಎಲ್ಲಾ ವಿಷಯಗಳಲ್ಲೂ ಸಹ ಋಣಾತ್ಮಕ ಹಾಗೂ ಧನಾತ್ಮಕ
ವಿಷಯ ಇರುತ್ತದೆ ಅದರಲ್ಲಿ ನಾವು ಯಾವುದನ್ನು ಸ್ವೀಕರಿಸುತ್ತೇವೆ ಅನ್ನುವುದು ಬಹಳ
ಪ್ರಮುಖ ಆಗಿರುತ್ತದೆ.
ನಾವು
ಮಾತನಾಡುವ ಪದಗಳಿಗಿಂತ ಅದನ್ನು ಹೇಗೆ ಸ್ವೀಕರಿಸುತ್ತೇವೆ ಅನ್ನುವ ಮನೋಭಾವ ಮುಖ್ಯ
ಆಗಿರುತ್ತದೆ. ನಮಗೆ ತುಂಬಾ ಪ್ರೀತಿಸುವ ವ್ಯಕ್ತಿಗಳು ಏನಾದ್ರೂ ತಪ್ಪು ಮಾಡಿದರೂ ಹಾಗೂ
ತಪ್ಪು ಮಾತನಾಡಿದರು ಸಹ ನಮಗೆ ಅವರು ಇಷ್ಟ ಇದ್ದರೆ ಅದನ್ನು ನಾವು ಧನಾತ್ಮಕವಾಗಿ
ತೆಗೆದುಕೊಳ್ಳುತ್ತೇವೆ, ಕೋಪಗೊಳ್ಳುವುದಿಲ್ಲ. ಅದೇ ವ್ಯಕ್ತಿಗಳನ್ನು ನಾವು
ದ್ವೇಷಿಸುತ್ತಿದ್ದರೆ ಅದೇ ಮಾತುಗಳಿಗೆ ನಾವು ಕೋಪ ಗೊಳ್ಳುತ್ತೇವೆ. ಮಾತುಗಳು ಅದೇ
ಆಗಿರುತ್ತದೆ ಆದರೆ ಅದನ್ನು ಸ್ವೀಕರಿಸುವ ಮನೋಭಾವ ಬೇರೆಯದೇ ಆಗಿರುತ್ತದೆ. ಆದ್ದರಿಂದ
ನಮ್ಮ ಮನಸ್ಸು ಧನಾತ್ಮಕವಾಗಿ ಚಿಂತಿಸಬೇಕು ಹಾಗೂ ಧನಾತ್ಮಕವಾಗಿ ಸ್ವೀಕರಿಸಬೇಕು. ತಪ್ಪು
ಮಾಡಿದ್ದೀಯ ಎಂದು ಯಾರಾದರೂ ಹೇಳಿದರೆ ಅದನ್ನು ನಮ್ರತೆಯಿಂದ ಸ್ವೀಕರಿಸಬೇಕು. ಅದು
ನಮ್ಮನ್ನು ಜೀವನದ ಹಾಗೂ ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ.
ಕೇವಲ
ಧನಾತ್ಮಕವಾಗಿ ಮಾತ್ರ ಇರಬೇಕು ಎಂದು ನಾನು ಹೇಳುವುದಿಲ್ಲ. ಬದಲಾಗಿ ಒಮ್ಮೊಮ್ಮೆ
ಋಣಾತ್ಮಕ ಚಿಂತನೆಗಳು ಕೂಡ ಅವಶ್ಯಕ. ವಿಮಾನ ಕಂಡುಹಿಡಿದ ನಂತರ ಬಂದ ಒಂದು ಋಣಾತ್ಮಕ
ಚಿಂತನೆ ( ಅಪಘಾತ ಆದರೆ) ಅಂದು ಪ್ಯಾರಾಚೂಟ್ ಕಂಡುಹಿಡಿಯಲು ಸಹಾಯ ಆಯಿತು. ಹಾಗೆಯೇ
ಒಮ್ಮೊಮ್ಮೆ ಒಂದೊಂದು ವಿಷಯಗಳನ್ನು ಅರಿಯಲು ಋಣಾತ್ಮಕ ಆಲೋಚನೆ ಬೇಕಾಗುತ್ತದೆ. ಆದರೆ ಅದೇ
ಆಲೋಚನೆಗಳು ನಮ್ಮ ಜೀವನವನ್ನು ನಡೆಸಬಾರದು ಅಷ್ಟೆ. ಮುಳ್ಳನ್ನು ಮುಳ್ಳಿನಿಂದಲೇ
ತೆಗೆಯಬೇಕು ಅನ್ನುತ್ತಾರಲ್ಲ ಹಾಗೆ.
ಋಣಾತ್ಮಕ
ಚಿಂತನೆಗಳು ಹೆಚ್ಚಿದಂತೆ ಮನಸ್ಸಿನಲ್ಲಿ ಒತ್ತಡ ಹೆಚ್ಚುತ್ತದೆ. ಒತ್ತಡ ಹೆಚ್ಚಿದಂತೆ
ಮನಸ್ಸು–ದೇಹ ದಣಿಯುತ್ತದೆ.ದಣಿವಿನಿಂದ ಅಲಸ್ಯವೂ ಎದುರಾಗುತದೆ. ಋಣಾತ್ಮಕ ಚಿಂತನೆ
ನಮ್ಮನ್ನು ನಿಧಾನವಾಗಿ ಚಿಂತೆಗೆ ನೂಕುತ್ತದೆ. ಚಿಂತೆಯು ಕೊನೆಗೆ ಚಿತೆಯ ಮೇಲೇರುವಂತೆ
ಮಾಡಿಬಿಡುತ್ತದೆ. ಎಷ್ಟು ಪ್ರಭಾವ ಇದೆ ಅಲ್ಲವೇ ಒಂದು ಸಣ್ಣ ಋಣಾತ್ಮಕ ಚಿಂತನೆಗೆ.
ಮದುವೆ
ಮನೆಗೆ ಹೋಗಿ ಕೇವಲ ಊಟ ಮಾಡಿ , ನನಗೆ ಐಸ್ ಕ್ರೀಂ ಸಿಗಲಿಲ್ಲ ಎಂಬ ಕಾರಣಕ್ಕೆ
ಮದುವೆಯನ್ನೇ ಮುರಿದ ಮಹಾಪುರುಷರು ಇದ್ದಾರೆ, ಮನೆಯಲ್ಲಿ ಮಾಡಿದ ಸಾಂಬರಲ್ಲಿ ಉಪ್ಪು
ಕಡಿಮೆ ಇದೆ ಎಂದು ಹೆಂಡತಿಗೆ ವಿಚ್ಛೇದನ ನೀಡಲು ಹೊರಟ ವೀರರಿದ್ದಾರೆ. ಅರಳಿಕಟ್ಟೆಯಲ್ಲಿ
ಕುಳಿತು ,ಪಾರ್ಲಿಮೆಂಟ್ ಮಾದರಿಯ ಚರ್ಚೆ ಮಾಡಿ ಕೇವಲ ತಪ್ಪು ಹುಡುಕುವ ಗಾವ ಸಚಿವರು
ಇದ್ದಾರೆ. ಎಲ್ಲದರಲ್ಲೂ ಋಣಾತ್ಮಕ ಚಿಂತನೆ ಮಾಡುವ ಹಲವರು ನಮ್ಮ ಮದ್ಯೆಯೆ ಇದ್ದಾರೆ.
ಇದರಿಂದ ನಮಗೆ ಪ್ರಯೋಜನ ಕಡಿಮೆ. ಎಲ್ಲವನ್ನೂ ಮಾಡುವ ಮೊದಲೇ ಫಲಿತಾಂಶದ ಬಗ್ಗೆ
ನಕಾರಾತ್ಮಕ ಯೋಚನೆ ಸಲ್ಲ.
ಪರೀಕ್ಷೆ
ಬರೆಯುವ ಮುಂಚೆಯೇ ನಾನು ನಪಾಸಾದರೆ ? ಪ್ರಯತ್ನ ಮಾಡುವ ಮುಂಚೆಯೇ ಸೋತರೆ ಎಂದು ಆಲೋಚನೆ
ಮಾಡಿದರೆ ಏನು ಸಿಗುತ್ತದೆ ಹೇಳಿ,,, ಪರೀಕ್ಷೆ ಹಾಗೂ ಪ್ರಯತ್ನ ಮಾಡಿದ ನಂತರ ತಾನೇ
ಗೊತ್ತಾಗುವುದು ಫಲ ಏನು ಬರುವುದು ಎಂದು.. ಏನೂ ಮಾಡದೇ ಇದ್ದರೆ ನಮಗಿರುವುದು ಒಂದೇ ಫಲ
ಅದು ನಪಾಸು ,ಆದರೆ ಪ್ರಯತ್ನ ಮಾಡಿದರೆ ನಪಾಸಿನ ಜೊತೆ ಪಾಸು ಸಹ ಆಗಬಹುದು
ಅಲ್ಲವೇ.ಪ್ರಯತ್ನ ಮಾಡೋಣ, ಫಲಾಫಲ ದೇವರಿಗೆ ಬಿಡೋಣ. ಅದನ್ನೇ ಹೇಳಿದ್ದಲ್ಲವೆ
ಶ್ರೀಕೃಷ್ಣ....
ಇನ್ನು ಅಂತಹ ವ್ಯಕ್ತಿಯ ಜೊತೆ ವ್ಯವಹರಿಸಲು ಪುಟ್ಟ ಸಲಹೆ ಏನೆಂದರೆ...
ಮೊದಲು
ಆ ವ್ಯಕ್ತಿ ನಮಗೆ ತುಂಬಾ ಆತ್ಮೀಯರಾದರೆ ಅವರನ್ನು ಬದಲಿಸಲು ಪ್ರಯತ್ನ ಮಾಡಬೇಕು.
ಇಲ್ಲವಾದರೆ ಅವರು ಹೇಳುವ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಅದನ್ನು ಒಂದು
ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಡಬೇಕು.
ಆದಷ್ಟು
ಅಂತಹ ವ್ಯಕ್ತಿಗಳ ಸಹವಾಸವನ್ನು ಮಾಡಲೇ ಬಾರದು.ಮಾಡಿದ್ದೆ ಆದರೆ ಅವರನ್ನು ಜಾಸ್ತಿ ನಮ್ಮ
ಜೊತೆ ಬೆರೆಯಲು ಬಿಡಬಾರದು. ಬಿಟ್ಟರು ಸಹ ಅವರ ಮಾತುಗಳಿಗೆ ತುಪ್ಪ ಹಚ್ಚಬಾರದು, ಕಿಚ್ಚು
ಹತ್ತಿಸಿಕೊಳ್ಳಬಾರದು.
ಯಾರಾದರೂ
ಹೀಗೆ ಋಣಾತ್ಮಕವಾಗಿ ಹೇಳುತ್ತಿದ್ದಾರೆ ಎಂದರೆ ಅವರಿಗೆ ಒಮ್ಮೆ ಅದು ತಪ್ಪು ಅಂದು
ಮನವರಿಕೆ ಮಾಡಲು ಪ್ರಯತ್ನಿಸಬೇಕು. ಅವರು ಕೇಳದೆ ಇದ್ದಾಗ ಅವರ ಜೊತೆ ವಾದ ಬೇಡ. ಹಂದಿಯ
ಜೊತೆ ಗುದ್ದಾಡಿದರೆ ಯಾರಿಗೆ ಕೊಳೆಯಾಗುವುದು ಒಮ್ಮೆ ಯೋಚಿಸಿ.
ಯಾರಾದರೂ
ಕೊಂಕು ಮಾತನಾಡುತ್ತಿದ್ದರೆ ,ಒಂದು ಸಣ್ಣ ಮುಗುಳ್ನಗೆ ನೀಡಿ , thank u ಅಂದುಬಿಡಿ,
ಬದಲಾಗಿ ಅವರ ಜೊತೆ ವಾದ ವಿವಾದ ಬೇಡ. ನಮ್ಮ ಸಣ್ಣ ನಗು ಅವರ ನಕಾರಾತ್ಮಕ ಚಿಂತನೆಗಳಿಗೆ ಆಯುರ್ವೇದದಲ್ಲಿ ಕಷಾಯ ಕೊಟ್ಟಂತೆ ಇರುತ್ತದೆ. ಒಮ್ಮೆ ಪ್ರಯತ್ನಿಸಿ.
ನಾವು
ಮಾಡುವ ಹಲವು ಕೆಲಸಗಳನ್ನು ಟೀಕಿಸುವ ಹಲವು ಮಂದಿ ಇರುತ್ತಾರೆ. ನಾವು ನಡೆದು ಹೋಗುವಾಗ
ನಮ್ಮ ಮೇಲೆ ಯಾರಾದರೂ ಕಲ್ಲು ಎಸೆದರೆ ಅದನ್ನು ಟೀಕೆ ಮಾತ್ರ ಎಂದು ಪರಿಗಣಿಸಿದೆ ಆ
ಕಲ್ಲುಗಳನ್ನು ಬಳಸಿ ಮನೆ ನಿರ್ಮಾಣ ಮಾಡುವಾತ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ.
ಟೀಕೆಗಳು
ನಮ್ಮ ಯಶಸ್ಸಿನ ಪಯಣಕ್ಕೆ ಉಚಿತ ಟಿಕೆಟ್ ಇದ್ದಂತೆ. ಅದನ್ನು ಬಳಸಿ ನಾವು ನಮ್ಮ
ಪಯಣವನ್ನು ಮುಂದುವರೆಸಬೇಕು. ಆದರೆ ಅದನ್ನು ಋಣಾತ್ಮಕವಾಗಿ ಸ್ವೀಕರಿಸಿ ದುಃಖಿಸಿ ಚಿಂತೆ
ಮಾಡುವ ಕೆಲಸ ಬೇಡ.
ಯಾವಾಗಲೂ
ನನ್ನ ಆಲೋಚನೆ ಒಂದೇ, ಋಣಾತ್ಮಕ ಎಂದರೆ ಒಂದು (-) ಇದ್ದ ಹಾಗೆ, ಆದ್ರೆ ಎರಡು( -)
ಸೇರಿಸಿ ನಾವು ( +) ಮಾಡಿಕೊಂಡು ಜೀವನ ಸಾಗಿಸಬೇಕು, ಯಶಸ್ಸು ಕಾಣಬೇಕು, ಅಲ್ಲವೇ?
ಜೀವನದಲ್ಲಿ
ಎಲ್ಲದರಲ್ಲೂ ತಪ್ಪು ಹುಡುಕಿ ನಮ್ಮನ್ನು ನಾವೇ ಹಾಳು ಮಾಡಿಕೊಳ್ಳುವ ಬದಲಾಗಿ
ಧನಾತ್ಮಕವಾಗಿ ಚಿಂತಿಸೋಣ, ಉತ್ತಮ ಜೀವನ ನಿರ್ಮಾಣ ನಮ್ಮ ಕೈಯಲ್ಲೇ ಇದೆ. ಏನಂತೀರಾ ???
ವಂದನೆಗಳೊಂದಿಗೆ
,ಇಂತಿ ತಮ್ಮ ನಂಜುಂಡಸ್ವಾಮಿ,,
No comments:
Post a Comment
welcome to dgnsgreenworld Family