ಮೊದಲು ಭಾರತೀಯರು ಮಾನಸಿಕವಾಗಿ ಸ್ವತಂತ್ರ ರಾಗಬೇಕಾಗಿದೆ.ಇಂದು ಬಹುತೇಕ ಭಾರತೀಯರ ಮನಸ್ಥಿತಿ ಹೇಗಿದೆ ಎಂದರೆ ಯಾವುದೋ ವಿಜ್ಞಾನಿಗಳು ಅಥವಾ ಕಾರ್ಪೊರೇಟ್ ಕಂಪೆನಿಗಳು ಸಿಪಾರಸ್ಸು ಮಾಡಿದರೆ ಕೊಳಚೆಯನ್ನಾದರೂ ತಿನ್ನುವ ಮಾನಸಿಕ ಪರಿಸ್ಥಿತಿ ನಮ್ಮದಾಗಿದೆ ಮೊದಲು ನಾವು ಅದರಿಂದ ಹೊರಬರಬೇಕಿದೆ
ಪ್ರಸ್ತುತ ಇರುವ ಸಾಂಕ್ರಾಮಿಕ ರೋಗಗಳಿಗೆ ನಮ್ಮ ಆಹಾರ ಪದ್ದತಿ ಯಲ್ಲೇ ಔಷಧಿಗಳಿವೆ ಆದರೆ ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ ಮಾಹಿತಿ ಇದ್ದರೂ ನಂಬಿಕೆ ಇಲ್ಲ ಯಾಕಂದ್ರೆ ನಾವು ಯಾರು ಮತ್ತು ನಾವು ಏನು ಎಂಬುದನ್ನೇ ಮರೆತು ಬದುಕುವ ಸಮಾಜ ನಮ್ಮದಾಗಿದೆ......
ಇದು ಎಲ್ಲಿಯವರೆಗೆ ಅಂದರೆ WHO IMA ನಂತಹ ಅಲೋಪತಿ ದಳ್ಳಾಳಿಗಳು ಹೇಳಿದರೆ ಮಾತ್ರ ನಾವು ನಂಬಬಲ್ಲೆವು ನಮ್ಮ ಹಿರಿಯರ ಔಷದೀಯ ಪದ್ದತಿ ಅಥವಾ ನಮ್ಮ ವೇದ ಪುರಾಣಗಳಲ್ಲಿ ಸೂಚಿಸಲ್ಪಟ್ಟ ಮನೆ ಮದ್ದುಗಳ ಮೇಲೆ ನಮಗೇ ನಂಬಿಕೆ ಇಲ್ಲದಾಗಿದೆ ಅಷ್ಟರಮಟ್ಟಿಗೆ ನಮ್ಮ ತನವನ್ನು ಕಳಕೊಂಡಿದ್ದೇವೆ.
ಆಯುರ್ವೇದ ಅಂದ್ರೆ ಬರೀ ಮೆಡಿಕಲ್ ನಲ್ಲಿ ಸಿಗುವ ಔಷದ ಮಾತ್ರ ಅಲ್ಲ ಹಿಂದೆ ನಾವು ನಮ್ಮ ಮನೆಗಳಲ್ಲೇ ಹಬ್ಬಹರಿದಿನಗಳ ನೆಪದಲ್ಲಿ,ಹಾಗೂ ನಿತ್ಯ ಸೇವಿಸುವ ವಿವಿಧ ರೀತಿಯ ಸೊಪ್ಪು ತರಕಾರಿ ಮತ್ತು ಮಸಾಲೆಗಳಲ್ಲೇ ಅಡಗಿದೆ ಈ ಆಯುರ್ವೇದ ಔಷಧ. ಅದರ ಬಗ್ಗೆ ನಮಗೆಷ್ಟು ಜನರಿಗೆ ಮಾಹಿತಿ ಇದೆ ?.....
ಇಲ್ಲ ಇಂದಿನ ನಮ್ಮ ಆಹಾರ ಪದ್ದತಿ ? ನಮಗೆಲ್ಲಾ ಇವತ್ತು ಎಲ್ಲಾ ರಾಸಾಯನಿಕ ಯುಕ್ತ ರೆಡಿಮೇಡ್ ಆಹಾರ ಗಳೇ ಬೇಕು .ಯಾಕಂದ್ರೆ ಅದನ್ನು ದೊಡ್ಡ ಕಂಪೆನಿಗಳು ಹೆಸರಾಂತ ಬ್ರಾಂಡ್ ಗಳಲ್ಲಿ ಮಾರುತ್ತಾರೆ...ಎಂತಹ ವಿಪರ್ಯಾಸ?
ನಮ್ಮಲ್ಲಿ ಎಷ್ಟು ಜನರಿಗೆ ಪಂಚಗವ್ಯ ದ ಮಹತ್ವ ಗೊತ್ತು ? ಕಾಳುಮೆಣಸಿನ ಔಷಧೀಯ ಗುಣ ಗೊತ್ತು? ಜೀರಿಗೆ ಧನಿಯಾ ಕಾಳಿನ ಮಹತ್ವ ನಮಗೇನು ತಿಳಿದಿದೆ ?
ಅರಶಿಣ ಶುಂಠಿ ಮಹತ್ವ ಬರೀ ಮಸಾಲೆಗೆ ಸೀಮಿತವಾಗಿದೆ
ತುಳಸಿ ಯ ಮಹತ್ವ ಪೂಜೆಗಷ್ಟೇ ಸೀಮಿತ ಮನೆಯಂಗಳದ ಹೂದೋಟ ದಲ್ಲಿರುವ ದಾಸವಾಳ ನಿತ್ಯಪುಷ್ಪ ಬರೀ ಅಲಂಕಾರಕ್ಕಷ್ಟೇ ಸೀಮಿತ ಗರಿಕೆ ಯ ಔಷದೀಯ ಉಪಯೋಗದ ಮಾಹಿತಿ ಎಲ್ಲೂ ಇಲ್ಲ ಅಜ್ಜಿ ಕಾಡಿನಿಂದ ಅದಾವುದೋ ಗಿಡಗಳ ಚಿಗುರು ಆರಿಸಿಕೊಂಡು ಬಂದು ಮಾಡಿಕೊಡುತಿದ್ದ ರೈತದ ಬಗ್ಗೆ ನೆನಪೇ ಇಲ್ಲ .
ಎಷ್ಟು ಜನರಿಗೆ ತಿಳಿದಿದೆ ಗೊನೆ ಬಿಟ್ಟ ಬಾಳೆಗಿಡದ ಒಳಗಿನ ಕಾಂಡ ಕಿಡ್ನಿಯಲ್ಲಿನ ರೋಗಕ್ಕೆ ಉಪಯೋಗ ಎಂದು ಮನೆಯ ಕೈತೊಟದಲ್ಲಿರುವ ಡೊಡ್ಡಪತ್ರೆ ಒಂದೆಲಗ ನೆಲನೆಲ್ಲಿ ಎಷ್ಟು ಜನರಿಗೆ ಪರಿಚಯ ಇದೆ? ಬಜೆ ಹಿಪ್ಪಲಿ ಯ ಹೆಸರುಗಳು ಎಷ್ಟು ಜನರಿಗೆ ಗೊತ್ತು ನೆಲ್ಲಿಯಲ್ಲಿರುವ ಔಷಧೀಯ ಗುಣ ಯಾರಿಗೆ ಗೊತ್ತು ಪಾರಜಾತ ಪುಷ್ಪ ಮತ್ತು ಅದರ ಗಿಡದ ಭಾಗಗಳಲ್ಲಿರುವ ಮದ್ದಿನ ಗುಣ ನಮಗೇನು ತಿಳಿದಿದೆ
ಹೇಳಲಿಕ್ಕೆ ಹೋದರೆ ಇನ್ನೂ ಮತ್ತಷ್ಟೋ ಅನೇಕ ....
ಸೌಂದರ್ಯ ವರ್ಧಕ ವಾಗಿ ರಾಸಾಯನಿಕ ಕ್ರೀಂ ಬಳಸುವ ನಾವು ಮನೆಯಲ್ಲೇ ಇರುವ ಲೋಳೆಸರ ( ಅಲೋವೆರ) ಮತ್ತು ಹಸಿ ಅರಿಷಿಣ ತೇದು ಹಚ್ಚಿದರೆ ಮುಖದ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಮರೆತೇ ಬಿಟಿಟಲ್ವಾ....ಮಾಮೂಲಿ ಕೆಮ್ಮಿಗೂ ಅಲೋಪತಿ ಮಾತ್ರೆ ತೆಗೆದು ಕೊಳ್ಳುವ ನಾವು ಅದನ್ನು ಕಾಳು ಮೆಣಸು(ಪೆಪ್ಪರ್) ಮತ್ತು ಜೇನಿನಲ್ಲೇ ಕಡಿಮೆ ಆಗುತ್ತೆ ಅನ್ನೋದನ್ನೇ ಮರೆತಿಲ್ಲವೇ?.
ಇಷ್ಟು ಔಷಧೀಯ ಗುಣಗಳಿರುವ ಮನೆ ಮದ್ದುಗಳಿರುವ ನಮ್ಮ ದೇಶದಲ್ಲಿ ಹೀಗೇಕೆ ? ನಿಜ ನಾವು ನಮ್ಮ ತನ ಮೆರೆತಿದ್ದೇವೆ ? ನಾವು ಯಾರು ಮತ್ತು ನಾವು ಏನು ಎಂಬುದನ್ನೇ ಮರೆತು ನಮ್ಮ ಸಂಸ್ಕೃತಿ ಬಿಟ್ಟು ಬದುಕುತಿದ್ದೇವೆ ಇದು ಬದಲಾಗಬೇಕು ಮತ್ತೆ ನಾವ್ಯಾರು ಎಂಬುದನ್ನು ಅರಿತು ಬದುಕಿ ಈ ಮೆಡಿಕಲ್ ಮಾಫಿಯಾ ವನ್ನು ಎದುರಿಸಿ ದೇಶವನ್ನು ರಕ್ಷಿಸಬೇಕಾಗಿದೆ.
ಇನ್ನು ಮನೆ ಮದ್ದಾಗಲೀ ಆಯುರ್ವೇದ ವಾಗಲೀ ಅಲೋಪತಿಯಂತೆ ನಮ್ಮ ದೇಹಕ್ಕೆ ಯಾವುದೇ ಹಾನಿಮಾಡದೆ ರೋಗಬನ್ನು ಬುಡದಿಂದ ಕಿತ್ತು ಬಿಸಾಕಿ ಮತ್ತೆಂದೂ ಬಾರದಿರುವಂತೆ ನಮ್ಮ ದೆಃವನ್ನು ಕಾಪಾಡುತ್ತದೆ.
ಇಂದು ನಮ್ಮ ಆಯುರ್ವೇದ ಇಷ್ಟು ಕಠಿಣ ಸವಾಲುಗಳನ್ನು ಎದುರಿಸಲು ಕಾರಣವೂ ಇದೇ ಭಾರತೀಯರು ಮತ್ತೆ ತಮ್ಮ ಮೂಲವಾದ ಆಯುರ್ವೇದ ದ ಕಡೆಗೆ ವಾಲಿದರೆ ಮತ್ತೆ ಅಲೋಪತಿಯ ಮಾರುಕಟ್ಟೆ ಕುಸಿತಗೊಂಡು ತಮ್ಮ ಬಂಡವಾಳಕ್ಕೆ ಕುತ್ತು ಬರುವುದು ಖಚಿತ ಅನ್ನೋದು ಫಾರ್ಮಾ ಲಾಬಿಗಳ ಭಯ ಮಾತ್ರ ಅಲ್ಲ ಇದರ ಹಿಂದೆ ಇರೋ ಕ್ರಿಶ್ಚಿಯನ್ ಮಿಷಙರಿಗಳಿಗೂ ಇದು ಅಪತ್ಯ ಯಾವಾಗ ಭಾರತೀಯ ಮತ್ತೆ ಆಯುರ್ವೇದ ದ ಕಡೆಗೆ ವಾಲಿದರೆ ಭಾರತೀಯ ಮೂಲಕ್ಕೆ ಹಿಂತಿರುಗಿದರೆ ಮತಾಂತರದ ಕೆಲಸವೂ ಅಸಾಧ್ಯ ಅನೋದಕ್ಕಾಗೇ ಅವರು ಆಯುರ್ವೇದ ದ ಬಗ್ಗೆ ಅಪಪ್ರಚಾರ ಸುಳ್ಳು ಮಾಹಿತಿ ಹರಡಿ ಜನರಲ್ಲಿ ಗೊಂದಲ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಲು ತಿದ್ದಾರೆ....
ಇದಕ್ಕೆಲ್ಲ ಪರಿಹಾರ ಭಾರತೀಯರು ಮಾನಸಿಕ ಗುಲಾಮಿತನದಿಂದ ಹೊರಬಂದು ಮತ್ತೆ ಭಾರತೀಯ ಚಿಂತನೆಯ ಭಾರತೀಯ ರಾಗೋದು ಒಂದೇ ಪರಿಹಾರ.....
ಸರ್ವೇ ಭವಂತು ಸುಖಿನಃ
ವಂದೇ ಮಾತರಂ
ಮತ್ತೆ ನಾವು ನಾವಾಗೋಣ. ಫಾರ್ವರ್ಡ್ ಮೆಸೇಜ್ ತುಂಬಾ ಉಪಯುಕ್ತ ಅನಿಸಿ ಗುಂಪಿನಲ್ಲಿ ಹಾಕಿದ್ದೆನೆ.🙏
No comments:
Post a Comment
welcome to dgnsgreenworld Family