www.dgnsgreenworld.blogspot.com

Tuesday, March 16, 2021

ಕನ್ನಡ ಪುಸ್ತಕಗಳನ್ನು ಓದಿರಿ... ಓದಿಸಿ....ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ.

_*ಕನ್ನಡಿಗರಿಗೊಂದು ಕಿವಿಮಾತು*_

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ  ಅಃ ಈಗೇ ಆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತ ವ್ಯಾಯಮವಾಗುತ್ತದೆ.
ಶುದ್ಧ ಪರಿಶುದ್ಧ ಜೇನಿನ ಹಾಗೆ.... ನಮ್ಮ ಕನ್ನಡ ಭಾಷೆ ಇದೆ.
ಪೂರ್ವದಲ್ಲಿ ಗುರುಗಳು ಮಕ್ಕಳ ಹತ್ತಿರ ವರ್ಣಮಾಲೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಈಗೇ ಕಂಠಪಾಠ ಮಾಡುವುದರಿಂದ ಕಂಠದಿಂದ ಮುಖದವರೆಗೆ ನಮಗೆ ತಿಳಿಯದೆನೆ ವ್ಯಾಯಾಮವಾಗುತ್ತಿತ್ತು.
ಹೇಗೆಂದರೆ 👇🏻
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಈಗೇ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತಾ ವ್ಯಾಯಾಮವಾಗುತ್ತದೆ.
ಕ ಖ ಗ ಘ ಙ 👉🏻ಕಂಠ ಭಾಗ 
ಚ ಛ ಜ ಝ ಞ 👉🏻 ಕಂಠದ ಮೇಲಿನ ನಾಲಿಗೆಯ ಮೊದಲ ಭಾಗ
ಟ ಠ ಡ ಢ ಣ 👉🏻 ನಾಲಿಗೆಯ ಮಧ್ಯಭಾಗ 
ತ ಥ ದ ಧ ನ 👉🏻 ನಾಲಿಗೆಯ ಕೊನೆಯ ಭಾಗ 
ಪ ಫ ಬ ಭ ಮ 👉🏻 ತುಟಿಗಳು 
ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ 👉🏻ಬಾಯೆಲ್ಲ ಈಗೇ ಮುಖವೆಲ್ಲಾ ಹಲ್ಲುಗಳ ಸಮೇತ ವ್ಯಾಯಾಮವಾಗುತ್ತದೆ. 

ಸುಂದರ ಸುಮಧುರ ಸೌಮ್ಯವಾದ ಮೃದುತ್ವದಿಂದ ಕೂಡಿದ ಪರಿಶುದ್ಧ ಜೇನು ನಮ್ಮ ಕನ್ನಡ ಭಾಷೆ.ಆನಂದವಾಗಿ ಮನಸ್ಸಿಗೆ ಹಾಯ್ ಆಗಿ ಕೇಳಿಸುವ ಮಾತುಗಳು ನಮ್ಮೆಲ್ಲರ ಬಾಯಿಂದ ಉಚ್ಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ. ಕನ್ನಡ ಭಾಷೆಯನ್ನು ಅಂದವಾಗಿ ಬರೆಯುವವರಿಗೆ ಚಿತ್ರಕಲೆ ಸ್ವಂತವಾಗುವುದಂತೆ ಏಕೆಂದರೆ ನಮ್ಮ ವರ್ಣಮಾಲೆಗೆ ಅಷ್ಟು ಮೆಲುಕು ಇದೆಯಂತೆ.
ನಮ್ಮೊಳಗಿನ ಭಾವವನ್ನು ವಿವರವಾಗಿ ಮಾತೃಭಾಷೆಯಲ್ಲಿ ವರ್ಣಿಸುವಷ್ಟು ಮತ್ತೆ  ಬೇರೆ ಯಾವ ಭಾಷೆಯಲ್ಲೂ ವರ್ಣಿಸಲು ಸಾಧ್ಯವಿಲ್ಲ. ಕನ್ನಡಿಗರೆಂದರೆ ಮುಂಜಾವ ಅರಳಿದ ಪುಷ್ಪದಂತೆ  ಅವನ್ನೋಡಿದರೆ ಎಷ್ಟು ಆಹ್ಲಾದಬರಿತವಾಗುವುದೋ.... ಹಾಗೆ ಕನ್ನಡಿಗರ ಮನಸ್ಸು. 
ಕನ್ನಡದಲ್ಲಿ ಮಾತಾಡಿ...
ಕನ್ನಡದಲ್ಲಿ ಬರೆಯಿರಿ....
ಕನ್ನಡ ಪುಸ್ತಕಗಳನ್ನು ಓದಿರಿ... ಓದಿಸಿ....
ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ. 

🙏🏼🙏🏼🙏
            ನಂಜುಂಡಸ್ವಾಮಿ 

No comments:

Post a Comment

welcome to dgnsgreenworld Family

ಮನಸೇ ಎಲ್ಲವೂ.

The mind is everything. What you think you become. ಮನಸ್ಸೇ ಎಲ್ಲವೂ. ನೀವು ಏನಾಗುತ್ತೀರಿ ಎಂದು ಯೋಚಿಸುತ್ತೀರೋ ಅದುವೇ ಆಗುತ್ತೀರಿ. ವಂದನೆಗಳೊಂದಿಗೆ.  Very g...

Green World