ಒಂದು ಸಲ ಅಣ್ಣ - ತಮ್ಮಂದಿರಿಬ್ಬರು ಸಮುದ್ರ ತೀರದಲ್ಲಿ ಯಾವುದೋ ವಿಷಯಕ್ಕಾಗಿ ಜಗಳ ಆಡುತ್ತಿರುತ್ತಾರೆ. ಆಗ ಅಣ್ಣನು ತಮ್ಮನ ಕೆನ್ನೆಗೆ ಹೊಡೆದಾಗ ತಮ್ಮನು ಏನು ಹೇಳುವುದಿಲ್ಲ.
#ಬದಲಾಗಿ ಮರಳಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " ಇವತ್ತು ನನ್ನ ಅಣ್ಣ ನನ್ನ ಕೆನ್ನೆಗೆ ಹೊಡೆದ."
ಮತ್ತೇ ಮಾರನೆಯ ದಿನ ಸ್ನಾನ ಮಾಡಲು ಸಮುದ್ರಕ್ಕೆ ಹೋದಾಗ ತಮ್ಮ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುತ್ತಾನೆ.
ಆಗ ಅಣ್ಣನು ತಮ್ಮನ ಪ್ರಾಣವನ್ನು ರಕ್ಷಿಸುತ್ತಾನೆ. ಆಮೇಲೆ ತಮ್ಮನು ಕಲ್ಲಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " #ಇವತ್ತು_ನನ್ನ ಅಣ್ಣ ನನ್ನ ಪ್ರಾಣವನ್ನು ರಕ್ಷಿಸಿದ."
ಅಣ್ಣ: ನಿನ್ನೆ ಹೊಡೆದಾಗ ಮರಳಿನ ಮೇಲೆ ಬರೆದೆ ಹಾಗೂ ಇವತ್ತು ಪ್ರಾಣ ಉಳಿಸಿದಾಗ ಕಲ್ಲಿನ ಮೇಲೆ ಬರೆದೆ ಈ ರೀತಿ ಯಾಕೆ?
ತಮ್ಮ: ನಮಗೆ ಯಾರಾದರೂ ದುಃಖವನ್ನು ಕೊಟ್ಟರೆ ಅದನ್ನು ಮರಳಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಬಹು ಬೇಗನೆ ಅಳಿಸಿ ಹೋಗುತ್ತದೆ. ಆದರೆ ನಮಗೆ ಯಾರಾದರೂ ಒಳ್ಳೆಯದು ಮಾಡಿದರೆ ಅದನ್ನು ಕಲ್ಲಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಯಾವತ್ತು ಅಳಿಸಿ ಹೋಗುವುದಿಲ್ಲ.
ಒಳಾರ್ಥ: ನಮಗೆ ಏನಾದರೂ ಕೆಟ್ಟದ್ದು ಆದರೆ ಅದನ್ನು ಕೂಡಲೇ ಮರೆಯಬೇಕು, ಒಳ್ಳೆಯದು ಆದರೆ ಯಾವಾಗಲೂ ನೆನಪಿನಲ್ಲಿಡಬೇಕು.
ಶುಭ ದಿನ...
🌹🙏
dgnsgreenworld
No comments:
Post a Comment
welcome to dgnsgreenworld Family