www.dgnsgreenworld.blogspot.com

Tuesday, March 16, 2021

ಕನ್ನಡ ಪುಸ್ತಕಗಳನ್ನು ಓದಿರಿ... ಓದಿಸಿ....ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ.

_*ಕನ್ನಡಿಗರಿಗೊಂದು ಕಿವಿಮಾತು*_

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ  ಅಃ ಈಗೇ ಆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತ ವ್ಯಾಯಮವಾಗುತ್ತದೆ.
ಶುದ್ಧ ಪರಿಶುದ್ಧ ಜೇನಿನ ಹಾಗೆ.... ನಮ್ಮ ಕನ್ನಡ ಭಾಷೆ ಇದೆ.
ಪೂರ್ವದಲ್ಲಿ ಗುರುಗಳು ಮಕ್ಕಳ ಹತ್ತಿರ ವರ್ಣಮಾಲೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಈಗೇ ಕಂಠಪಾಠ ಮಾಡುವುದರಿಂದ ಕಂಠದಿಂದ ಮುಖದವರೆಗೆ ನಮಗೆ ತಿಳಿಯದೆನೆ ವ್ಯಾಯಾಮವಾಗುತ್ತಿತ್ತು.
ಹೇಗೆಂದರೆ 👇🏻
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಈಗೇ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತಾ ವ್ಯಾಯಾಮವಾಗುತ್ತದೆ.
ಕ ಖ ಗ ಘ ಙ 👉🏻ಕಂಠ ಭಾಗ 
ಚ ಛ ಜ ಝ ಞ 👉🏻 ಕಂಠದ ಮೇಲಿನ ನಾಲಿಗೆಯ ಮೊದಲ ಭಾಗ
ಟ ಠ ಡ ಢ ಣ 👉🏻 ನಾಲಿಗೆಯ ಮಧ್ಯಭಾಗ 
ತ ಥ ದ ಧ ನ 👉🏻 ನಾಲಿಗೆಯ ಕೊನೆಯ ಭಾಗ 
ಪ ಫ ಬ ಭ ಮ 👉🏻 ತುಟಿಗಳು 
ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ 👉🏻ಬಾಯೆಲ್ಲ ಈಗೇ ಮುಖವೆಲ್ಲಾ ಹಲ್ಲುಗಳ ಸಮೇತ ವ್ಯಾಯಾಮವಾಗುತ್ತದೆ. 

ಸುಂದರ ಸುಮಧುರ ಸೌಮ್ಯವಾದ ಮೃದುತ್ವದಿಂದ ಕೂಡಿದ ಪರಿಶುದ್ಧ ಜೇನು ನಮ್ಮ ಕನ್ನಡ ಭಾಷೆ.ಆನಂದವಾಗಿ ಮನಸ್ಸಿಗೆ ಹಾಯ್ ಆಗಿ ಕೇಳಿಸುವ ಮಾತುಗಳು ನಮ್ಮೆಲ್ಲರ ಬಾಯಿಂದ ಉಚ್ಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ. ಕನ್ನಡ ಭಾಷೆಯನ್ನು ಅಂದವಾಗಿ ಬರೆಯುವವರಿಗೆ ಚಿತ್ರಕಲೆ ಸ್ವಂತವಾಗುವುದಂತೆ ಏಕೆಂದರೆ ನಮ್ಮ ವರ್ಣಮಾಲೆಗೆ ಅಷ್ಟು ಮೆಲುಕು ಇದೆಯಂತೆ.
ನಮ್ಮೊಳಗಿನ ಭಾವವನ್ನು ವಿವರವಾಗಿ ಮಾತೃಭಾಷೆಯಲ್ಲಿ ವರ್ಣಿಸುವಷ್ಟು ಮತ್ತೆ  ಬೇರೆ ಯಾವ ಭಾಷೆಯಲ್ಲೂ ವರ್ಣಿಸಲು ಸಾಧ್ಯವಿಲ್ಲ. ಕನ್ನಡಿಗರೆಂದರೆ ಮುಂಜಾವ ಅರಳಿದ ಪುಷ್ಪದಂತೆ  ಅವನ್ನೋಡಿದರೆ ಎಷ್ಟು ಆಹ್ಲಾದಬರಿತವಾಗುವುದೋ.... ಹಾಗೆ ಕನ್ನಡಿಗರ ಮನಸ್ಸು. 
ಕನ್ನಡದಲ್ಲಿ ಮಾತಾಡಿ...
ಕನ್ನಡದಲ್ಲಿ ಬರೆಯಿರಿ....
ಕನ್ನಡ ಪುಸ್ತಕಗಳನ್ನು ಓದಿರಿ... ಓದಿಸಿ....
ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ. 

🙏🏼🙏🏼🙏
            ನಂಜುಂಡಸ್ವಾಮಿ 

ನಮಗೆ ಏನಾದರೂ ಕೆಟ್ಟದ್ದು ಆದರೆ ಅದನ್ನು ಕೂಡಲೇ ಮರೆಯಬೇಕು, ಒಳ್ಳೆಯದು ಆದರೆ ಯಾವಾಗಲೂ ನೆನಪಿನಲ್ಲಿಡಬೇಕು.

ಒಂದು ಸಲ ಅಣ್ಣ - ತಮ್ಮಂದಿರಿಬ್ಬರು ಸಮುದ್ರ ತೀರದಲ್ಲಿ ಯಾವುದೋ ವಿಷಯಕ್ಕಾಗಿ ಜಗಳ ಆಡುತ್ತಿರುತ್ತಾರೆ. ಆಗ ಅಣ್ಣನು ತಮ್ಮನ ಕೆನ್ನೆಗೆ ಹೊಡೆದಾಗ ತಮ್ಮನು ಏನು ಹೇಳುವುದಿಲ್ಲ. 

#ಬದಲಾಗಿ ಮರಳಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " ಇವತ್ತು ನನ್ನ ಅಣ್ಣ ನನ್ನ ಕೆನ್ನೆಗೆ ಹೊಡೆದ." 

ಮತ್ತೇ ಮಾರನೆಯ ದಿನ ಸ್ನಾನ ಮಾಡಲು ಸಮುದ್ರಕ್ಕೆ ಹೋದಾಗ ತಮ್ಮ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುತ್ತಾನೆ. 

ಆಗ ಅಣ್ಣನು ತಮ್ಮನ ಪ್ರಾಣವನ್ನು ರಕ್ಷಿಸುತ್ತಾನೆ. ಆಮೇಲೆ ತಮ್ಮನು ಕಲ್ಲಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " #ಇವತ್ತು_ನನ್ನ ಅಣ್ಣ ನನ್ನ ಪ್ರಾಣವನ್ನು ರಕ್ಷಿಸಿದ."

ಅಣ್ಣ: ನಿನ್ನೆ ಹೊಡೆದಾಗ ಮರಳಿನ ಮೇಲೆ ಬರೆದೆ ಹಾಗೂ ಇವತ್ತು ಪ್ರಾಣ ಉಳಿಸಿದಾಗ ಕಲ್ಲಿನ ಮೇಲೆ ಬರೆದೆ ಈ ರೀತಿ ಯಾಕೆ?

ತಮ್ಮ:  ನಮಗೆ ಯಾರಾದರೂ ದುಃಖವನ್ನು ಕೊಟ್ಟರೆ ಅದನ್ನು ಮರಳಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಬಹು ಬೇಗನೆ ಅಳಿಸಿ ಹೋಗುತ್ತದೆ. ಆದರೆ ನಮಗೆ ಯಾರಾದರೂ ಒಳ್ಳೆಯದು ಮಾಡಿದರೆ ಅದನ್ನು ಕಲ್ಲಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಯಾವತ್ತು ಅಳಿಸಿ ಹೋಗುವುದಿಲ್ಲ. 

ಒಳಾರ್ಥ: ನಮಗೆ ಏನಾದರೂ ಕೆಟ್ಟದ್ದು ಆದರೆ ಅದನ್ನು ಕೂಡಲೇ ಮರೆಯಬೇಕು, ಒಳ್ಳೆಯದು ಆದರೆ ಯಾವಾಗಲೂ ನೆನಪಿನಲ್ಲಿಡಬೇಕು.
ಶುಭ ದಿನ...
🌹🙏
dgnsgreenworld

Sunday, March 14, 2021

ಸಂಪೂರ್ಣ ಭಾರತದಲ್ಲಿ ನಗದು ರಹಿತ ವ್ಯವಹಾರಗಳಾದರೆ ಏನಾಗಬಹುದೆಂದು ಒಮ್ಮೆ ಓದಿ ಬಿಡಿ

ಸಂಪೂರ್ಣ ಭಾರತದಲ್ಲಿ ನಗದು ರಹಿತ ವ್ಯವಹಾರಗಳಾದರೆ ಏನಾಗಬಹುದೆಂದು ಒಮ್ಮೆ ಓದಿ ಬಿಡಿ

👉 ಕಪ್ಪು ಹಣ  0%
👉 ಹಣವನ್ನು ಮುಚ್ಚಿಡುವುದು ಬಂದ್ 0%
👉 ಕಾಗದ ಹಾಳಾಗಿ ಹೋಗುವುದು  0%
👉 ನಕಲಿ ನೋಟು  0℅
👉 ಕಳ್ಳ ಸುಳ್ಳರು  0%
👉 ಭ್ರಷ್ಟಾಚಾರ  0%
👉 ಟ್ಯಾಕ್ಸ್ ಕಳ್ಳತನ 0%
👉 ಸಮಯದ ಕೊರತೆ  0℅
👉 ಹಣವನ್ನು ಎಣಿಸುವ ಗಡಿಬಿಡಿ 0%
👉 ಅಪಹರಣ ಕಿಡ್ನಾಪ್ 0%
👉 ಹಗರಣಗಳು  0%
👉  ಬ್ಯಾಂಕ್ ಮುಂದೆ ಕ್ಯೂ 0%
👉 ದೇಶದ ಪ್ರಗತಿ 100%
👉 ಪ್ರಾಮಾಣಿಕತೆ 100%
👉 ಪಾರದರ್ಶಿಕತೆ 100%
👉 ಅರ್ಥ ವ್ಯವಸ್ಥೆ ಬಲಯುತ ಆಗುವುದು 
👉 ಭಯೋತ್ಪಾದಕರು ದೇಶದಲ್ಲಿ ಹೆಜ್ಜೆ ಇಡುವುದಿಲ್ಲ
👉 ನಕ್ಸಲವಾದ ಕಡಿಮೆ ಆಗುವುದು 
👉 ಕಾಗದ ಉಳಿಯುತ್ತದೆ ವಾತಾವರಣ ಚೆನ್ನಾಗಿರುತ್ತದೆ 
👉 ಬ್ಯಾಲೆನ್ಸ್ ಶೀಟ್ ತಮ್ಮ  ಪಾಸ್ ಬುಕ್ ಆಗಿರುತ್ತದೆ 
👉ಅಕೌಂಟ್ ನ ಪ್ರಿಪ್ರೇಷನ್ ಚಾರ್ಜ್ ಕಡಿಮೆಯಾಗುತ್ತದೆ 
👉 ನಮ್ಮ ಖರ್ಚಿನ ಲೆಕ್ಕಾಚಾರ ಸರಿಯಾಗಿ ಸಿಗುವುದು 
👉 ಭಾರತ ಬೇಗನೆ ಮುಂದುವರೆದ ದೇಶವಾಗುವುದು 

* ಪ್ರಪಂಚದಲ್ಲಿ ಸ್ವಲ್ಪ ಇಂತಹ ದೇಶಗಳಿವೆ ಅವು ನಗದು ರಹಿತ ವ್ಯವಹಾರ ಮಾಡುತ್ತಿವೆ  ಮತ್ತು ಅದರ ಪ್ರಯೋಜನ ಪಡೆಯುತ್ತಿವೆ ಅವ್ಯಾವುವೆಂದು ಮತ್ತು ಎಷ್ಟು ಪ್ರಮಾಣದಲ್ಲಿ ನಗದು ರಹಿತವಾಗಿವೆಯೆಂದು ಒಮ್ಮೆ ನೋಡಿ ಬಿಡಿ

 💸ಬೆಲ್ಜಿಯಂ  93% ಕ್ಯಾಶ್ ಲೇಸ್ 

 💸 ಫ್ರಾನ್ಸ್ 92% ಕ್ಯಾಶ್ ಲೇಸ್ 

 💸ಕೆನಾಡ 90% ಕ್ಯಾಶ್ ಲೇಸ್ 

 💸ಯುಕೆ  89% ಕ್ಯಾಶ್ ಲೇಸ್ 

  ಆಸ್ರ್ಟೇಲಿಯಾ  86% ಕ್ಯಾಶ್ ಲೇಸ್ 

ಬನ್ನಿ ನನ್ನ ಪ್ರೀತಿಯ ಭಾರತೀಯರೆ ನಾವೆಲ್ಲರೂ ಸೇರಿ ನಗದು  ರಹಿತ ವ್ಯವಹಾರ ಮಾಡುವುದಕ್ಕೆ ಸಹಯೋಗ ಕೊಡೋಣ ಭಾರತದ ಕಟ್ಟಕಡೆಯ ಪ್ರಜೆಯಗೂ ಅವನ ಅವಶ್ಯಕತೆಗಳನ್ನು ಪೋರೈಸಿಕೊಳ್ಳುವಂತೆ ನೋಡಿಕೊಳ್ಳೋಣ ಹಾಗೂ ಭಯೋತ್ಪಾದನೆ ಭ್ರಷ್ಟಾಚಾರ ಹಗರಣ ಮುಕ್ತ ಮಾಡೋಣ 

ಮತ್ತು ನಮಗಿಂತ ಎಷ್ಟೋ ಸಣ್ಣಪುಟ್ಟ ದೇಶದ ಜನತೆ  ಇಂದು  ನಗದು ರಹಿತ ವ್ಯವಹಾರ ಮಾಡುತ್ತಾರೆ ಅಂದಮೇಲೆ ನಾವೆಲ್ಲರೂ ಏಕೆ ಮಾಡಲು ಸಾಧ್ಯವಿಲ್ಲ  ಇದನ್ನು ಎಷ್ಟು ಶೇರ್ ಮಾಡಿ ಎಂದರೆ ಈ ಧ್ವನಿ ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿಸಲಿ ಹಾಗೂ ನಾವು ಇದನ್ನು ಗರ್ವದಿಂದ ಹೇಳಿಕೊಳ್ಳಬಹುದು 
#ನಗದು_ರಹಿತ_ಭಾರತ 
#ಭ್ರಷ್ಟಾಚಾರ_ಮುಕ್ತ_ಭಾರತ  

ವಂದನೆಗಳೊಂದಿಗೆ
 ನಂಜುಂಡಸ್ವಾಮಿ dgnsgreenworld@gmail.com

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World