www.dgnsgreenworld.blogspot.com

Saturday, June 20, 2020

ನಿನ್ನ ಮೆಚ್ಚಲೆಬೇಕು ಕರೋನಾ..*👌👌???

*ನಿನ್ನ ಮೆಚ್ಚಲೆಬೇಕು ಕರೋನಾ..*👌👌

ಕಣ್ಣಿಗೆ ಕಾಣದೆ
ಮಳೆ,ಗಾಳಿ ,ಬಿಸಿಲಿನ್ನು ಲೆಕ್ಕಿಸದೆ ನಿಶ್ಯಬ್ದವಾಗಿ
ಜಗತ್ತಿನಾದ್ಯಂತ ಹಬ್ಬಿದ 
ನಿನ್ನ ಛಲ ಮೆಚ್ಚಲೇಬೇಕು
 ಕರೋನಾ..
 
ಮಸೀದಿ,ಮಂದಿರ, ಚರ್ಚಗಳ ತಂಟೆಗೆ ಹೋದರೆ ಸರಕಾರವೇ ಬೀಳುತ್ತಿತ್ತು,
ರಕ್ತದ ಕೋಡಿ ಹರಿಯುತ್ತಿತ್ತು, 
ಒಂದು ಮಾತನಾಡದೆ 
ಅವುಗಳನ್ನು ಮುಚ್ಚಿಸಿ 
ದೇವರು ಎಲ್ಲಾ ಕಡೆ  ಇದ್ದಾನೆಂದು ತೋರಿಸಿದ ನಿನ್ನ 
ರೀತಿಗೆ ಎಲ್ಲರೂ 
ಮೆಚ್ಚಲೆಬೇಕು ಕರೋನಾ..

ಎಲ್ಲಾ ಟಿವಿಗಳಲ್ಲಿ ಭಯ
ಹುಟ್ಟಿಸುವ ಭವಿಷ್ಯಕಾರರನ್ನು
ಮೂಲೆ ಗುಂಪು ಮಾಡಿದ
ನಿನ್ನ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಕರೋನ..

ಒಂದು ತಿಂಗಳು ಮದ್ಯಪಾನ ಇಲ್ಲದೆ ಇರಬಹುದೆಂದು ತೋರಿಸಿಕೊಟ್ಟು ,
ನಂತರ
ಮುಜರಾಯಿ ತೀರ್ಥಕ್ಕಿಂತ
ಅಬಕಾರಿ ತೀರ್ಥವೇ ಮೇಲೆಂದು ತಿಳಿಸಿದ
ನಿನ್ನನ್ನು ಮೆಚ್ಚಲೇಬೇಕು ಕರೋನ..

ಅದ್ದೂರಿತನಕ್ಕೆ ಕಡಿವಾಣ ಹಾಕಿ,
ಮದುವೆಗಳನ್ನು 50 ಜನರನ್ನ ಮಾತ್ರ ಸೇರಿಸಿ
ಸರಳವಾಗಿ, ಅರ್ಥಪೂರ್ಣವಾಗಿ 
ಮಾಡಬಹುದು ಎಂದು ತೋರಿಸಿಕೊಟ್ಟ ನಿನ್ನ ಪರಿಯನ್ನ ಎಲ್ಲರೂ
ಮೆಚ್ಚಲೇಬೇಕು ಕರೋನ..

ಸತ್ತರೆ ಯಾರು ಹಿಂದೆ ಬರಲ್ಲ
ಅಂತ ತಿಳಿಸಿ
ಅಂತ್ಯ ಸಂಸ್ಕಾರಕ್ಕೆ
ನಿಜವಾದ 
ದುಃಖತಪ್ತರು 20 ಜನರು ಸಾಕು 
ಎಂದು ಅರ್ಥೈಸಿದ ನಿನ್ನ ರೀತಿಯನ್ನ
ಮೆಚ್ಚಲೇಬೇಕು  ಕರೋನ..

ಮಾಲ್,ಮಲ್ಟಿಪ್ಲೆಕ್ಸ್,ಪಬ್
ಕ್ಲಬ್ ಮುಚ್ಚಿ
ಬಸ್ ,ರೈಲು, ವಿಮಾನಗಳಿಲ್ಲದೆ
ಸಿನೆಮಾ ನಾಟಕ ಬಿಟ್ಟು
ಮನೆಯವರ ಜೊತೆಗೆ ಸುಖವಾಗಿ ಇರಬಹುದೆಂದು ತೋರಿಸಿ ಕೊಟ್ಟ ನಿನ್ನ ಪ್ರೀತಿ ಮೆಚ್ವಲೆಬೇಕು 
ಕರೋನಾ..

ಮಾರ್ಕ್ಸ್ ಪಡೆಯುವುದೆ 
ಜೀವನವಲ್ಲ..
ನಿಜವಾದ ಪಾಠಶಾಲೆ ಜೀವನಾನುಭವ , 
ನಮ್ಮ ಅಂತರಾತ್ಮವೇ ನಿಜವಾದ 
ಪರೀಕ್ಷೆಯ ಕೊಠಡಿ ಎಂದು ತೋರಿಸಿದ ಚಾಣಕ್ಯನ ನೀತಿ 
ಮೆಚ್ಚಲೇಬೇಕು ಕರೋನ..

ಊರು ಬಿಟ್ಟುಎಲ್ಲೇಲ್ಲೋ ಹೋದವರನ್ನು ಮತ್ತೆ ಕರೆಯಿಸಿ
ಹುಟ್ಟಿದ ಊರು , ಒಕ್ಕಲುತನ
ಹೊಟ್ಟೆಗೆ ಅನ್ನ ಹಾಕುತ್ತವೆಂದು 
ತಿಳಿಸಿದ ನಿನ್ನ ಮಹಿಮೆ
ಮೆಚ್ಚಲೇಬೇಕು 
ಕರೋನ..

ಎಷ್ಟು ಆಸ್ತಿ ,ಬಂಗಾರ ಇದ್ದರೂ
ಆರೋಗ್ಯ ಮುಖ್ಯ ,
ಬಡವ ,ಶ್ರೀಮಂತ ಯಾರಾದರೂ  ಪ್ರಾಣ ಮುಖ್ಯ
ಎಂದು ಮತ್ತೊಮ್ಮೆ ತಿಳಿಸಿದ  ನಿನಗೆ ಮೆಚ್ಚಲೇಬೇಕು ಕರೋನ..

ತಂತ್ರಜ್ಞಾನದಿಂದ
ಎಲ್ಲಾ ಗ್ರಹಗಳನ್ನು ಸುತ್ತಿದರೂ,
ಮನುಷ್ಯ ವಿಜ್ಞಾನದಲ್ಲಿ ಎಷ್ಟೆ ಮುಂದುವರೆದರೂ
ಕಾಲಕ್ಕೆ ಶರಣಾಗಬೇಕೆಂದು
ತಿಳಿಸಿದ ಪರಿ
ಮೆಚ್ಚಲೇಬೇಕು ಕರೋನ..

ಅಣು ಬಾಂಬ್ ,ಯುದ್ಧ ವಿಮಾನ ,ಟ್ಯಾಂಕರ್ ಗಳು 
ಸಾವಿರ ಇದ್ದು ,ಮುಂದುವರಿದ ದೇಶವೆಂದು ಮೆರೆಯುತ್ತಿದ್ದರೂ
ಸಾಂಕ್ರಾಮಿಕ ರೋಗಕ್ಕೆ ಶರಣಾಗಬೇಕೆಂದು
ತಿಳಿಸಿದ್ದು 
ಮೆಚ್ಚಲೇಬೇಕು ಕರೋನ..

ಸಸ್ಯಹಾರ ಶ್ರೇಷ್ಠ ಎಂದು ಹೇಳುತಾ
ಪ್ರಕೃತಿಯನ್ನು ಕಾಪಾಡಿದರೆ
ನಾವು ಉಳಿಯುತ್ತೆವೆ
ಎಲ್ಲಾ ಧರ್ಮಗಳು ಪೊಳ್ಳು
ನಿಜವಾದ ಧರ್ಮ ಮನುಜ
ಧರ್ಮವೆಂದು ಹೇಳಿದ್ದು
ಮೆಚ್ಚಲೇಬೇಕು ಕರೋನ..

ಜಗತ್ತಿನ ಕಹಿ ಸತ್ಯಗಳನ್ನು
ಬಿಡಿ ,ಬಿಡಿಯಾಗಿ 
ತೋರಿಸಿ ಕೊಟ್ಟು
ಸನ್ಮಾರ್ಗದಿ 
ನಡೆಯಿರೆಂದು ಹೇಳಿದ
ನಿನ್ನ ಶಕ್ತಿ ,ಯುಕ್ತಿಯ ಕರೋನಾಗೀತ
ಎಲ್ಲರೂ ಮೆಚ್ಚಲೇಬೇಕು ಕರೋನ....   dgns                        ಸಾಕಿನ್ನು ಮನುಷ್ಯ ಸುಸ್ತಾಗಿದ್ದಾನೆ. ಬಿಟ್ಟು ಬಿಡು ಬದುಕಲಿ..... ಇನ್ನಾದರೂ ಪಶ್ಚಾತ್ತಾಪದೊಂದಿಗೆ.....  ಇಷ್ಟಕ್ಕೂ ಬುದ್ದಿ ಬರಲಿಲ್ಲವೆಂದರೆ.........? ಭಗವಂತನ ಆಟ ಬಲ್ಲವರಾರು?????                                          dgnsgreenworld  ✍️✍️✍️

No comments:

Post a Comment

welcome to dgnsgreenworld Family

ಮನಸೇ ಎಲ್ಲವೂ.

The mind is everything. What you think you become. ಮನಸ್ಸೇ ಎಲ್ಲವೂ. ನೀವು ಏನಾಗುತ್ತೀರಿ ಎಂದು ಯೋಚಿಸುತ್ತೀರೋ ಅದುವೇ ಆಗುತ್ತೀರಿ. ವಂದನೆಗಳೊಂದಿಗೆ.  Very g...

Green World