'' ಸರ್... ಹೆಂಡ್ತಿ ಗರ್ಭಿಣಿಯಾದಳು. ಸ್ವಲ್ಪ ತಡವಾಗಿ ಸಾಕು ಅಂತ ನಾವು ನಿರ್ಧರಿಸಿದ್ದೆವು. ಆದರೆ ಎಲ್ಲೋ ಎಡವಟ್ಟಾಗೋಯ್ತು.......
ಮಾತ್ರೆಗಳನ್ನೂ ನಂಬಲಾಗದಾಯಿತು......
ಇದು ಆರನೇಯ ತಿಂಗಳು...
ನನಗೆ ರಜೆ ಇಲ್ಲ....
ಆಗ ಆಕೆ ಒಂಟಿಯಾಗುತ್ತಾಳೆ...."
ಹರೀಶನಿಗೆ ಯಾವಾಗಲೂ ಪರಿಹಾರಗಳನ್ನು ಸೂಚಿಸುತ್ತಿದ್ದ ಮಾಸ್ಟರ್ ಆಗಿರುವ ವಿನಾಯಕ ಮಾಸ್ಟರ್ ಹತ್ತಿರ ಆತ ತನಗೆದುರಾದ ಸಮಸ್ಯೆಯನ್ನು ಹೇಳಿಕೊಂಡ....
ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ.
ಏಳನೆಯ ತಿಂಗಳು ಅಡ್ಮಿಟ್ ಮಾಡಬೇಕು. ಪ್ರಸವಾನಂತರದ ಚಿಕಿತ್ಸೆಗಳ ಬಳಿಕ ಮನೆತಲುಪಿಸುತ್ತಾರೆ. ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೋ..........
ಆತ ಅಡ್ರೆಸ್ ಮತ್ತು ಫೋನ್ ನಂಬರ್ ಬರಕ್ಕೊಂಡು ಮಾಸ್ಟರ್ ಗೆ ಥ್ಯಾಂಕ್ಸ್ ಹೇಳಿ ಹಿಂತಿರುಗಿದ......
ತಿಂಗಳುಗಳ ನಂತರ ..... ಆತ ಪುನಃ ಮಾಸ್ಟರನ್ನು ಭೇಟಿಯಾಗುತ್ತಾನೆ.....
'' ಸರ್ ... ಮಗುವಿಗೆ ನಾಲ್ಕು ತಿಂಗಳಾಗಿದೆ..... ಪತ್ನಿಗೆ ರಜೆ ಮುಂದುವರಿಸಲು ಸಾಧ್ಯವಿಲ್ಲ.... ನನಗೆ ಪ್ರಮೋಶನೂ ಆಗಿದೆ....."
ಮಾಸ್ಟರ್ ಗೆ ವಿಷಯ ಅರ್ಥವಾಯಿತು.
ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ.
ಮೂರು ವಯಸಿನವರೆಗೆ ಮಗುವನ್ನು ನೋಡಿಕೊಳ್ಳುವ ಒಂದು ಪ್ಯಾಕೇಜ್..... ಬೆಳಿಗ್ಗಿನಿಂದ ಸಂಜೆವರೆಗೂ ನೋಡಿಕೊಳ್ಳುತ್ತಾರೆ.... ಮತ್ತೆ ಫುಲ್ ಟೈಮ್ ಬೇಕಾದರೆ ಅದಕ್ಕೆ ಸ್ವಲ್ಪ ರೇಟು ಹೆಚ್ಚು ಕೊಡಬೇಕಾಗುತ್ತೆ......
ಫೋನ್ ನಂಬರ್ ಬರೆದುಕೊ....
ಆತ ಸಂತೋಷದಿಂದ ಮಾಸ್ಟರ್ ಗೆ ನಮಿಸಿ ಹಿಂತಿರುಗಿದ.....
ಮೂರು ವರ್ಷಗಳ ಬಳಿಕ ಆತ ಪುನಃ ಮಾಸ್ಟರನ್ನು ಕಾಣಲು ಹೋಗುತ್ತಾನೆ
" ಮಾಸ್ಟರ್ ಮಗುವಿಗೆ ನಾಲ್ಕು ವರ್ಷವಯಸಾಗುತ್ತಿದೆ. ನಮ್ಮ ಕೆಲಸಗಳು ತುಂಬಾ ಬ್ಯುಸಿಯಾಗಿದೆ ಮಗುವಿನ ವಿದ್ಯಾಭ್ಯಾಸ....!?"
ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ...
'' ಸ್ವಲ್ಪ ದೊಡ್ಡ ಪ್ಯಾಕೇಜಾಗಿದೆ. ಡಿಗ್ರಿ ಮುಗಿಯುವವರೆಗೂ ನೋಡಿಕೊಳ್ಳುತ್ತಾರೆ. ಮಗುವನ್ನು ತಿಂಗಳಿಗೊಮ್ಮೆ ಹೋಗಿ ನೋಡ್ಕೊಂಡು ಬರಬಹುದು ಅಡ್ರೆಸ್ ಬರೆದುಕೋ....."
ಆತ ಮನಸಲ್ಲಿ ನೆನೆದ ಎಷ್ಟು ಒಳ್ಳೆಯ ಮಾಸ್ಟರ್.... ಆತ ಅಡ್ರೆಸ್ ಬರೆದು ಮಾಸ್ಟರ್ ಗೆ ಧನ್ಯವಾದಗಳನ್ನು ಹೇಳಿ ಅಲ್ಲಿಂದ ಹಿಂತಿರುಗುತ್ತಾನೆ.....
ವರ್ಷಗಳನೇಕ ಉರುಳಿದವು....
ಮಾಸ್ಟರನ್ನು ಹುಡುಕಿಕೊಂಡು ಒಬ್ಬ ಯುವಕ ಬರುತ್ತಾನೆ...
ಮಾಸ್ಟರ್ ನ ಕಣ್ಣುಗಳು ಮಂಜಾಗತೊಡಗಿತು. ನೆನಪಿನ ಶಕ್ತಿಯೂ ಕಡಿಮೆಯಾಗಿತು.
ಯುವಕ ತನ್ನನ್ನು ಪರಿಚಯಿಸಿದ.
ಮಾಸ್ಟರ್ - ಓ... ಹರೀಶನ ಮಗನಾ..... ?
ಯುವಕ - ಹೌದು ಸರ್..... ಪಪ್ಪ ಮಾಸ್ಟರ್ ನ ಬಗ್ಗೆ ಯಾವಾಗಲೂ ಹೇಳುತ್ತಾರೆ...
ಯುವಕ ಬಂದ ವಿಷಯವನ್ನು ಹೇಳುತ್ತಾನೆ -
" ಪಪ್ಪನಿಗೂ ಮಮ್ಮಿಗೂ ನೆನಪುಶಕ್ತಿ ತುಂಬಾ ಕಡಿಮೆಯಾಗಿದೆ. ಓವರಾಗಿ ಮಾತಾಡುತ್ತಾರೆ... ಮಕ್ಕಳ ಹಾಗೆ ಹಟ ಮಾಡುತ್ತಾರೆ. ವಯಸುಕೂಡಾ ಹೆಚ್ಚಾಯಿತು. ನನಗಂತೂ ಸಮಯವೇ ಇಲ್ಲ.... ಪತ್ನಿಯೂ ಒಳ್ಳೆಯ ಸಂಬಳದ ಕೆಲಸದಲ್ಲಿದ್ದಾಳೆ..... ಮತ್ತೆ ಆಕೆ ಇವನ್ನೆಲ್ಲಾ ಸುದಾರಿಸಿಕೊಂಡು ಹೋಗುವ ಹಳ್ಳಿಯ ಹುಡುಗಿಯಲ್ಲ..."
ಮಾಸ್ಟರ್ ಗೆ ಎಲ್ಲವೂ ಅರ್ಥವಾಗೋಯ್ತು.
ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ...
" ಒಳ್ಳೆಯ ಪರಿಚರಣೆಯಿಂದ ನೋಡಿಕೊಳ್ಳುವ ಒಂದು ಪ್ಯಾಕೇಜ್..... ಸಾವನ್ನಪ್ಪಿದರೆ ಅವರವರ ಮತಪ್ರಕಾರ ಶವಸಂಸ್ಕಾರವನ್ನೂ ಮಾಡುತ್ತಾರೆ.... ಸಾಧಾರಣ ವೃದ್ಧಾಶ್ರಮ ಎಂದೇ ಹೇಳಬಹುದು..... ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೊ"
ಯುವಕ ಸಂತೋಷದಿಂದ ಅಡ್ರೆಸ್ ಮತ್ತು ಫೋನ್ ನಂಬರನ್ನು ಬರಕ್ಕೊಂಡ. ನಂಬರ್ ತಪ್ಪದ ಹಾಗೆ ಮತ್ತೊಮ್ಮೆ ನಂಬರನ್ನು ಓದಿ ಕೇಳಿಸಿದ....
ಮಾಸ್ಟರ್ ಗೆ ನಮಿಸಿ ಅಲ್ಲಿಂದ ಹಿಂತಿರುಗಿದ...
ಮಾಸ್ಟರ್ ನ ಕಣ್ಣಿಂದ ಎರಡು ಹನಿ ಕಣ್ಣೀರು ಉದುರಿದವು......
ಮಾಸ್ಟರ್ ಯೋಚಿಸಿದರು - " ನಾವು ಏನನ್ನು ಕೊಡುತ್ತೇವೋ ಅದುವೇ ನಮಗೆ ಮರಳಿ ಸಿಗುವುದು "
dgnsgreenworld
No comments:
Post a Comment
welcome to dgnsgreenworld Family