www.dgnsgreenworld.blogspot.com

Sunday, May 17, 2020

ಪುರಾಣಗಳಿಂದ #ಆಯ್ದ #ಕೆಲವು #ಸುಂದರವಾದ #ಸುಭಾಷಿತಗಳು

💐🌺💐 #ಪುರಾಣಗಳಿಂದ #ಆಯ್ದ #ಕೆಲವು #ಸುಂದರವಾದ #ಸುಭಾಷಿತಗಳು 💐🌺💐

🔹ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ. 
👉ರಾಮಾಯಣ

🔹ಕಾಮವು ವಿಷಯಭೋಗದಿಂದ ಎಂದಿಗೂ ಶಾಂತವಾಗುವುದಿಲ್ಲ. ತುಪ್ಪದ ಹವಿಸ್ಸಿನಿಂದ ಬೆಂಕಿಯು ಹೆಚ್ಚುವಂತೆ ಅದು ಇನ್ನು ಪ್ರಭಲವಾಗುತ್ತದೆ.
👉ಮಹಾಭಾರತ ಆದಿಪರ್ವ

🔹ಸಾವಿರಾರು ತಂದೆ ತಾಯಿಗಳು , ನೂರಾರು ಹೆಂಡರು ಮಕ್ಕಳು ಈ ಸಂಸಾರದಲ್ಲಿ ಆಗಿಹೋದರು. ಹೀಗಿರುವಾಗ ಅವರು ಯಾರ ಸಂಬಂಧಿಗಳು. ? ನಾವು ಯಾರ ಸಂಬಂಧಿಗಳು ? 
👉ಮಹಾಭಾರತ ಶಾಂತಿ ಪರ್ವ

🔹ಬೆಳಿಗ್ಗೆ ಮಾಡಿದ ಅಡಿಗೆ ಮತ್ತು ಆಹಾರವು  ಹಳಸಿಹೋಗುತ್ತದೆ. ಹೀಗಿರುವಾಗ, ಅದೇ ಅನ್ನರಸದಿಂದ ಬೆಳೆದು ಬಂದ  ಈ ಶರೀರ ಹೇಗೆ ನಿತ್ಯವಾದೀತು. 
👉ಗರುಡ ಪುರಾಣ

🔹ತಾಳವಿಲ್ಲದ ರಾಗ ಹೇಗೋ, ಮಾನವಿಲ್ಲದ ರಾಜ ಹೇಗೋ, ಮದೋದಕವಿಲ್ಲದ ಆನೆ ಹೇಗೋ, ಹಾಗೆ ಜ್ಞಾನವಿಲ್ಲದ ಯತಿ. 
👉ರಾಮಾಯಣ 

🔹ಸರ್ಪವು ಜೀರ್ಣವಾದ ಪೊರೆಯನ್ನು ಬಿಡುವಂತೆ , ಯಾವನು ತಾಳ್ಮೆಯಿಂದ ಕೋಪವನ್ನು ದೂರಮಾಡುವನೋ ಅವನೇ ಮನುಷ್ಯ. 
👉ರಾಮಾಯಣ ಸುಂದರ ಕಾಂಡ 

🔹ಸುಖ ಸಾಧನಗಳಾದ ಪ್ರಿಯ ವಿಷಯಗಳು ಈ ಮೂರುಲೋಕದಲ್ಲಿ ಎಷ್ಟಿವಿಯೋ ಅವೆಲ್ಲವೂ ಸೇರಿದರು, ಇಂದ್ರಿಯಯಗಳ ಸೆಳೆತಕ್ಕೆ ಒಳಗಾದವನನ್ನು ತೃಪ್ತಿಪಡಿಸಲಾರವು.  
👉ಶ್ರೀಮದ್ ಭಾಗವತ 

🔹ಗಾಳಿಯನ್ನು ಸುತ್ತಿ ಬಂಧಿಸಬಹುದು. ಆಕಾಶವನ್ನಾದರೂ ಕತ್ತರಿಸಬಹುದು. ಅಲೆಗಳನ್ನು ಪೋಣಿಸಬಹುದು. ಆದರೆ ಆಯುಸ್ಸಿನಲ್ಲಿ ನಂಬಿಕೆ ಇಡುವುದಕ್ಕಾಗುವುದಿಲ್ಲ. 
👉ಗರುಡ ಪುರಾಣ

🔹ಕಲಿಯುಗದಲ್ಲಿ ಯಾರು ಹರಿಸ್ಮರಣೆ ಮಾಡುತ್ತಾರೋ, ಅಥವಾ ಮಾಡಿಸುತ್ತಾರೆಯೋ, ಅವರೇ ಭಾಗ್ಯಶಾಲಿಗಳು ಹಾಗು ಕೃತಾರ್ಥರು. 
👉ಶ್ರೀಮದ್ ಭಾಗವತ 

🙏 ಓಂ ನಮೋ ಭಗವತೆ ವಾಸುದೇವಾಯ ನಮಃ🙏

🌷🌷ಶುಭವಂದನೆಗಳು, ಶುಭದಿನ, ಶುಭಮಸ್ತು, ಸರ್ವೇ ಜನಾ ಸುಖೀನೋ ಭವಂತು🌷🌷

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World