www.dgnsgreenworld.blogspot.com

Friday, May 29, 2020

ದೇವರಿಗೆ *ಬಾಳೆ ಹಣ್ಣು* ಮತ್ತು *ತೆಂಗಿನಕಾಯಿ* ಯಾಕೆ *ಶ್ರೇಷ್ಟ ನೈವೇದ್ಯ?*

ದೇವರಿಗೆ *ಬಾಳೆ ಹಣ್ಣು* ಮತ್ತು *ತೆಂಗಿನಕಾಯಿ* ಯಾಕೆ *ಶ್ರೇಷ್ಟ ನೈವೇದ್ಯ?*

🍌🍌🍌🍌🍌🍌🍌🍌🍌🍌🍌🍌🍌🍌

ದೇವಸ್ಥಾನಕ್ಕೆ ಹೋಗವಾಗ *ಬಾಳೆಹಣ್ಣು* ಮತ್ತೆ *ತೆಂಗಿನಕಾಯಿ* ಯಾಕೆ ತೆಗೆದುಕೊಂಡು ಹೋಗುತ್ತೇವೆ?

ದೇವರಿಗೆ ಈ *ಬಾಳೆಹಣ್ಣು* ಮತ್ತು *ತೆಂಗಿನಕಾಯಿ* ಏಕೆ ಶ್ರೇಷ್ಠ?

ಬೇರೆ ಯಾವ ಹಣ್ಣನ್ನೂ ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ?

ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ *ಬಾಳೆ ಹಣ್ಣು* ನಿವೇದಿಸುತ್ತಾರೆ ಹಾಗೆಯೇ *ತೆಂಗಿನಕಾಯಿ* ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯವೇನು?

ಹೆಚ್ಚಾಗಿ ನಾವು ಒಂದು ಹಣ್ಣನ್ನು ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.

ಆದರೆ *ಬಾಳೆಹಣ್ಣ* ನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ *ಬಾಳೆಹಣ್ಣನ್ನೇ* ಹಾಗೇ ಎಸೆದರೂ ಅದು ಮತ್ತೆ ಬೆಳೆಯುವುದಿಲ್ಲ. *ತೆಂಗಿನಕಾಯಿ* ಯೂ ಅಷ್ಟೆ, ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ.

ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ *ಜನ್ಮವಿಲ್ಲದ ಮುಕ್ತಿ* ಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು. ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.

ಅಷ್ಟೇ ಅಲ್ಲ, ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ; ತೆಂಗಿನ ಮರ ಉಪಯೋಗಿಸದ ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.*

*ಪರಿಶುದ್ಧ* ವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ ಎಂಬ ತತ್ವವು ಇದರಲ್ಲಿದೆ.

ಇನ್ನೂ ಹೇಳಬೇಕೆಂದರೆ, *ಬಾಳೆ* ಮತ್ತು *ತೆಂಗಿನ* ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ ಎಲ್ಲರಿಗೂ ಉಪಯುಕ್ತವಾಗಿವೆ. ಹಾಗೆಯೇ ಬೇರೆಯವರಿಗೆ ಸಹಾಯ ಮಾಡುವುದೇ ನಮ್ಮ ಜನ್ಮಕ್ಕೆ ಸಫಲತೆ ನೀಡುವುದು ಎಂಬ ಗೂಢಾರ್ಥವಿದೆ.

ತೆಂಗಿನ ಕಾಯಿಯನ್ನು ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷವೂ ಕೂಡ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಆ ಶಕ್ತಿ ತೆಂಗಿನಕಾಯಿಗೆ ಇದೆ. ಆದಕಾರಣ *ತೆಂಗಿನಮರ* ವನ್ನು *ಕಲ್ಪವೃಕ್ಷ* ಎಂದು ಕರೆಯುತ್ತಾರೆ.

ನಮ್ಮ *ಸಂಪ್ರದಾಯ* ದಲ್ಲಿ ಇಷ್ಟೊಂದು ಅರ್ಥವಿರುವುದು ನಮ್ಮ *ಭಾರತದ ಪರಂಪರೆ* ಯ ಘನತೆಗೆ ಸಾಕ್ಷಿಯಾಗಿದೆ.

Saturday, May 23, 2020

ದೇವನೂರು ಸುಕ್ಷೇತ್ರ ಮಠದ ಇತಿಹಾಸ..... ಶ್ರೀಮನ್ನಿರಂಜನ ಗುರುಮಲ್ಲೇಶ್ವರ ಇತಿಹಾಸ.

ದೇವನೂರು ಸುಕ್ಷೇತ್ರ ಮಠದ ಇತಿಹಾಸ.....   ಶ್ರೀಮನ್ನಿರಂಜನ ಗುರುಮಲ್ಲೇಶ್ವರ ಇತಿಹಾಸ.          

              ಹನ್ನೆರಡನೆಯ ಶತಮಾನದಲ್ಲಿ ಕಾಯಕ-ದಾಸೋಹ ತತ್ತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 19ನೇ ಶತಮಾನದ ಪೂರ್ವಾರ್ಧಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀಮನ್ನಿರಂಜನ ಗುರುಮಲ್ಲೇಶ್ವರರ ಕಾಲದಲ್ಲಿ. ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ತ್ವವು ಶ್ರೀಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು!ಹೊನ್ನಾಳಿ ತಾಲ್ಲೂಕಿನ ಚವುಳಂಗ ಗ್ರಾಮ ಶ್ರೀಗುರು ಮಲ್ಲೇಶ್ವರರ ಪೂರ್ವಿಕರಿದ್ದ ಸ್ಥಳ. ಅಲ್ಲಿ ನಂದಿಬಸವಾರ್ಯರೆಂಬ ಗೃಹಸ್ಥರು. ಇವರ ಮಗ ಶರಣಪ್ಪ. ಇವರ ಪತ್ನಿ ಶರ್ವಾಣಮ್ಮ. ಶರಣಪ್ಪನವರಿಗೆ ಶಿವಾಂಬೆ ಎಂಬ ಇನ್ನೊಬ್ಬ ಮಡದಿ ಇದ್ದರೆಂದು ಹೇಳಲಾಗಿದೆ. ಇಂಥ ಶಿವದಂಪತಿಗಳ ಮಗನೇ ಗುರುಮಲ್ಲೇಶ. ಇವರು 1827ರ ಅವಧಿಯಲ್ಲಿ ಜನಿಸಿದರೆಂದು ಹೇಳಲಾಗುತ್ತಿದೆ. ಶರಣಪ್ಪ ದಂಪತಿ ಗುರು-ಲಿಂಗ-ಜಂಗಮ ಪ್ರೇಮಿಗಳು. ಇವರ ಮನೆ ದಾಸೋಹಕ್ಕೆ ಹೆಸರಾಗಿತ್ತು. ಬಾಲಕ ಗುರುಮಲ್ಲೇಶ ಮತ್ತು ಶರಣಪ್ಪ ದಂಪತಿ ಚವುಳಂಗದಿಂದ ಮೈಸೂರಿಗೆ ಬಂದು ನೆಲೆಸಿದರು. ಇದಕ್ಕೆ ಎರಡು-ಮೂರು ಕಾರಣಗಳನ್ನು ಹೇಳುತ್ತಾರೆ. ಅವುಗಳಲ್ಲಿ ವಾಸ್ತವಿಕವಾದದ್ದು ಇದೆಂದು ತೋರುತ್ತದೆ. ಶರಣಪ್ಪ ದಂಪತಿ ಮಾಡುತ್ತಿದ್ದ ಧರ್ಮಪ್ರಸಾರ ಹಾಗೂ ದಾಸೋಹಕಾರ್ಯಗಳ ಜನಪ್ರಿಯತೆ ಆಗ ಮೈಸೂರನ್ನು ಆಳುತ್ತಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿಯುತ್ತದೆ. ಉದಾರ ಚರಿತರೂ ಧರ್ವಭಿ ಮಾನಿಗಳೂ ಆದ ಮಹಾರಾಜರು ಚವುಳಂಗ ಸಮೀಪದ ಜೋಡಿಗ್ರಾಮಗಳನ್ನು ಹಾಗೂ ನ್ಯಾಮತಿಗೆ ಹೋಗುವ ಮಾರ್ಗದಲ್ಲಿರುವ ಶಿವಾಲಯದ ಸಮೀಪದ ಹಿರೇಹಳ್ಳದ ಜಮೀನನ್ನು ಇವರಿಗೆ ಇನಾಮಾಗಿ ನೀಡಿದ್ದರು. ಈ ಹೊಲಗಳಿಂದ ಬಂದ ಆದಾಯದಿಂದ ಗುರು-ಲಿಂಗ-ಜಂಗಮ ಸೇವೆ ಮಾಡಿಕೊಂಡು ದಂಪತಿ ಇರುತ್ತಿದ್ದರು. ಆಗಾಗ್ಗೆ ಮೈಸೂರಿಗೆ ಮಹಾರಾಜರನ್ನು ನೋಡಲು ಬರುತ್ತಿದ್ದುದೂ ಉಂಟು. ಹೀಗೆ ಬಂದಾಗ, ದೀವಟಿಗೆಯ ಬೀದಿಯಲ್ಲಿದ್ದ ಅನೇಕ ವೀರಶೈವಮಠಗಳಿಗೆ ಭೇಟಿನೀಡಿ ಸ್ವಾಮಿಗಳ ದರ್ಶನಾಶೀರ್ವಾದ ಪಡೆಯುತ್ತಿದ್ದರು. ಇಲ್ಲಿದ್ದ ಅನೇಕ ಮಠಗಳಲ್ಲಿ ಚೌಕಿಮಠವೂ ಒಂದು. ಈ ಮಠದ ಸ್ವಾಮಿಗಳಾಗಿದ್ದವರು ಶ್ರೀಗುರುಮಲ್ಲೇಶ್ವರರು. ಇವರನ್ನು ಶರಣಪ್ಪ ಸ್ವಾಮಿಗಳೆಂದು ಜನ ಕರೆಯುತ್ತಿದ್ದರು. ಇವರ ಬಗ್ಗೆ ಶರಣಪ್ಪ ದಂಪತಿಗೆ ಅಪಾರ ಗೌರವ, ಭಕ್ತಿ. ಇದು ಅಂತಿಮವಾಗಿ ಮೈಸೂರಿನ ಚೌಕಿಮಠದಲ್ಲಿ ಉಳಿಯಲು ಕಾರಣವಾಯಿತು. ಆಗ ಇವರ ಮಗ ಗುರುಮಲ್ಲೇಶನಿಗೆ ಎರಡು ವರ್ಷ.ಶರಣಪ್ಪ ದಂಪತಿ ಮೈಸೂರಿಗೆ ಬಂದ ಮೇಲೆ ಶಿವಯೋಗ-ಶಿವಧ್ಯಾನ- ಶಿವಕಾಯಕದಲ್ಲಿ ನಿರತರಾದರು; ಸ್ವಾಮಿಗಳ ಸೇವೆಗೆ ನಿಂತುಕೊಂಡರು. ಮಗನಿಗೆ ಸ್ವಾಮಿಗಳು ‘ಗುರುಮಲ್ಲ’ ಎಂದು ನಾಮಕರಣ ಮಾಡಿ, ಗುರು-ಲಿಂಗ-ಜಂಗಮದ ರಹಸ್ಯ ಬೋಧಿಸಿದರು. ಈತ ಮುಂದೆ ದೊಡ್ಡ ಗುರುವಾಗುತ್ತಾನೆಂದು ತಿಳಿಸಿದರು. ಗುರುಮಲ್ಲನ ಶಿವಪ್ರತಿಭೆ ಇದರಿಂದಾಗಿ ಪುಟಿದು ಬೆಳೆಯಿತು. ಶರಣಪ್ಪ ಸ್ವಾಮಿಗಳು ಶತಾಯುಷಿಗಳಾಗಿದ್ದರು. ಅವರು ಗುರುಮಲ್ಲನನ್ನು ಮಹಾಲಿಂಗೇಶ್ವರ ಮಠದ ಬೆತ್ತಲೆಗುಂಡೆ ಸ್ವಾಮಿಗಳಿಗೆ ಒಪ್ಪಿಸಿದರು. ಕೆಲವು ದಿನಗಳಲ್ಲೇ ಶರಣಪ್ಪ ಸ್ವಾಮಿ ಲಿಂಗೈಕ್ಯರಾದರು. ಬಾಲಕ ಗುರುಮಲ್ಲ ಬೆತ್ತಲೆಗುಂಡೆ ಸ್ವಾಮಿಗಳ ಸನ್ನಿಧಿಯಲ್ಲಿ ಶಿವಯೋಗ ತತ್ತ್ವದ ರಹಸ್ಯ ತಿಳಿದನು. ಊರಿಗೆ ಹೋಗಿದ್ದ ಶರಣಪ್ಪ ಅಕಾಲಿಕ ಮರಣಕ್ಕೆ ತುತ್ತಾದ. ಇತ್ತ ಚೌಕಿಮಠದಲ್ಲಿದ್ದ ತಾಯಿ ಶರಣಾಂಬೆಯೂ ಶಿವೈಕ್ಯಳಾದಳು. ಗುರುಮಲ್ಲ ಈಗ ಪ್ರೌಢಾವಸ್ಥೆಗೆ ತಲುಪಿದ್ದ. ಅವನು ಪ್ರತಿನಿತ್ಯ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಬೆಟ್ಟದ ಮಧ್ಯದಲ್ಲಿರುವ ಮಹಾನಂದಿಯ ಆಜುಬಾಜಿನ ಬೃಹತ್ ಬಿಲ್ವವೃಕ್ಷದ ಅಡಿಯಲ್ಲಿ ಸತತವಾಗಿ ಹನ್ನೆರಡು ವರ್ಷ ಲಿಂಗಾನುಷ್ಠಾನ ಮಾಡತೊಡಗಿದ. ಶಿವಕಳೆ ಆತನಲ್ಲಿ ವರ್ಧಿಸಿತು. ಗುರುಮಲ್ಲಪ್ಪ ಶಿವಯೋಗದ ಮರ್ಮ ತಿಳಿದು ಅನುಭಾವಿ ಸ್ಥಿತಿಗೆ ತಲುಪಿದ್ದು ಸಹಜವೇ ಆಗಿತ್ತು.ಸಾಧನೆಯ ಶಿಖರ: ಗುರುಮಲ್ಲಪ್ಪ ಪ್ರತಿನಿತ್ಯ ಲಿಂಗಾನುಷ್ಠಾನದಲ್ಲಿದ್ದು, ಸೂರ್ಯ ಹುಟ್ಟಿ ಮೇಲೆ ಬರುವವರೆಗೆ ಏಕಚಿತ್ತದಿಂದ ಅನುಸಂಧಾನ ಮಾಡುತ್ತ ಅಂತಮುಖಿಗಳಾಗುತ್ತಿದ್ದರು. ಅನಂತರ ಮಠಕ್ಕೆ ಬಂದು ಸ್ನಾನ, ಪೂಜಾದಿಗಳನ್ನು ಮುಗಿಸುತ್ತಿದ್ದರು. ಸ್ವಾಮಿಗಳ ಅಣತಿಯಂತೆ ಅವರು ಕಂತೆಭಿಕ್ಷೆಗಾಗಿ ಅರಮನೆಯಿಂದ ಹಿಡಿದು ಭಕ್ತರ ಮನೆಯವರೆಗೂ ಹೋಗಿ ಪ್ರಸಾದವನ್ನು ತಂದು ಲಿಂಗಕ್ಕೆ ಅರ್ಪಿಸಿ ಮಠದಲ್ಲಿ ಸೇರುತ್ತಿದ್ದ ಗುರುಜಂಗಮರಿಗೆ, ಅನಾಥರಿಗೆ ಬಡಿಸಿ ಅವರ ತೃಷೆ ನೀಗಿಸುತ್ತಿದ್ದರು. ನಂತರ ಸೂಕ್ತರೀತಿಯಲ್ಲಿ ಶಿವಬೋಧೆ ಮಾಡುತ್ತಿದ್ದರು. ಇದೆಲ್ಲದರ ಪ್ರಭಾವದಿಂದಾಗಿ ಗುರುಮಲ್ಲಪ್ಪ ಸದ್ಭಕ್ತರನ್ನು ಸಂಪಾದಿಸಿದರು. ಗುರುಮಲ್ಲಪ್ಪನವರ ಹೆಸರಿನಲ್ಲಿ ಹಲವು ಪವಾಡಗಳು ನಡೆದಿವೆ. ಅವುಗಳಲ್ಲಿ ಕರುಳಿನ ಪವಾಡ, ಬ್ರಹ್ಮಪಿಶಾಚಿ ಮುಕ್ತಗೊಳಿಸಿದ ಪವಾಡ ಪ್ರಮುಖವಾದವು.ಒಂದು ದಿನ ಮೈಸೂರಿನ ಮಹಾಲಿಂಗೇಶ್ವರ ಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಪ್ರವಚನ ನಡೆಯುತ್ತಿತ್ತು. ಒಡೆಹುಲ್ಲ ಬಂಕಯ್ಯ ಎಂಬ ಶರಣನ ಜೀವನ-ಸಾಧನೆ ಕುರಿತು ಪುರಾಣಿಕರು ಪ್ರವಚನ ನೀಡುತ್ತ, ‘ಇಂಥ ಶರಣರು ಯಾರಿದ್ದಾರೆ? ಈಗಿನವರೆಲ್ಲ ಕಪಟಿಗಳು, ವಂಚಕರು’ ಎಂದು ಜರಿದರು. ಗುರುಮಲ್ಲಪ್ಪನವರಿಗೆ ಈ ಮಾತು ಇಷ್ಟವಾಗಲಿಲ್ಲ. ಅವರು ಕೋಪೋದ್ರಿಕ್ತರಾಗಿ ತಮ್ಮ ಹೊಟ್ಟೆಯನ್ನು ಸೀಳಿ ಕರುಳನ್ನು ತಮ್ಮ ಕೊರಳಿಗೆ ಹಾಕಿಕೊಂಡರು! ಈ ದೃಶ್ಯನೋಡಿದ ಪುರಾಣಿಕರು ಮತ್ತು ಭಕ್ತರು ಭಯಭೀತರಾಗಿ ಕ್ಷಮೆಯಾಚಿಸಿದರು. ಈ ಸುದ್ದಿ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿಯಿತು. ಅವರು ಬಂದು ಭಕ್ತರನ್ನು ರಕ್ಷಿಸಬೇಕೆಂದು ಶ್ರೀಗಳಲ್ಲಿ ಕೋರಿದರು. ಶರಣಪ್ಪ ದಂಪತಿ ವಿಷಯ ತಿಳಿದು ಅಲ್ಲಿಗೆ ಬಂದು ಪಾದೋದಕ ಕುಡಿಸಿ, ಕರುಳನ್ನು ಹೊಟ್ಟೆಗೆ ಹಾಕಿ ವಿಭೂತಿಯ ಲೇಪನ ಮಾಡಿದರು.ಗುರುಮಲ್ಲೇಶ್ವರರ ‘ಕರುಳ ಪವಾಡ’ದಿಂದ ಅವರ ಮಹತ್ವ ಅರಿತ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಅರಮನೆಗೆ ಶ್ರೀಗಳನ್ನು ಆಹ್ವಾನಿಸಿದರು. ರಾಜೋಚಿತವಾದ ಸತ್ಕಾರ ಅಲ್ಲಿ ನಡೆಯಿತು. ಒಂದು ಹರಿವಾಣದಲ್ಲಿ ಮುತ್ತು -ರತ್ನ-ಚಿನ್ನಾಭರಣಗಳನ್ನು ತುಂಬಿ ಸ್ವೀಕರಿಸಬೇಕೆಂದು ಮಹಾರಾಜರು ಬಿನ್ನವಿಸಿಕೊಂಡರು. ಕಾಯಕನಿಷ್ಠರಾದ ಗುರುಮಲ್ಲಪ್ಪನವರು ‘ಮಹಾರಾಜರೇ ಇವೆಲ್ಲ ಯಾರ ಸ್ವತ್ತು? ಪ್ರಜೆಗಳದ್ದು ಅಲ್ಲವೆ? ಇವು ನ್ಯಾಯವಾಗಿ ಅವರಿಗೆ ಸಲ್ಲ ಬೇಕು. ಶಿವನಿಗದು ಪ್ರಿಯವಲ್ಲ’ ಎಂದು ನಯವಾಗಿ ತಿರಸ್ಕರಿಸಿದರು. ನಂತರ ‘ನೋಡಿ ಮಹಾರಾಜರೇ, ಪ್ರತಿಯೊಬ್ಬರು ತನುಮನಗಳನ್ನು ದಂಡಿಸಿ ಸತ್ಯಶುದ್ಧ ಕಾಯಕದಿಂದ ಸಂಪಾದಿಸಿ ತಂದುಕೊಟ್ಟದ್ದು ಮಾತ್ರ ನಿಜವಾದ ಭಕ್ತಕಾಣಿಕೆ’ ಎಂದು ಹೇಳಿ ಮಹಾರಾಜರನ್ನು ಆಶೀರ್ವದಿಸಿ ಅರಮನೆಯಿಂದ ಹೊರಟರು. ಇದಾದ ಕೆಲದಿನಗಳ ನಂತರ ಮಹಾರಾಜರು ಮಾರುವೇಷ ಧರಿಸಿ ಕಮ್ಮಾರನ ಕುಲುಮೆಯಲ್ಲಿ ಕಾಯಕ ಮಾಡಿದರು. ಅವರು ನೀಡಿದ ಒಂದು ಹಾಗ (ನಾಲ್ಕಾಣೆ)ವನ್ನು ಗುರುಮಲ್ಲೇಶ್ವರರಿಗೆ ಅರ್ಪಿಸಿದರು. ಸತ್ಯಶುದ್ಧಕಾಯಕದ ಮಹತ್ವವನ್ನು ಅವರು ಅರಿತರು. ಗುರುಮಲ್ಲೇಶ್ವರರ ನಿಃಸ್ವಾರ್ಥ ಮತ್ತು ಸರಳತೆ ನೋಡಿ ಮಹಾರಾಜರಲ್ಲಿ ಅವರ ಬಗೆಗಿನ ಭಕ್ತಿ-ಗೌರವ-ವಿಶ್ವಾಸಗಳು ಇನ್ನಷ್ಟು ಅಧಿಕಗೊಂಡವು. ಮಹಾರಾಜರು ಗುರುಮಲ್ಲೇಶ್ವರರಿಂದ ಲಿಂಗತತ್ತೊ್ವೕಪದೇಶ ಪಡೆದರು. ನಂತರ ಕಳೆದುಹೋದ ರಾಜ್ಯಾಡಳಿತ ಮೈಸೂರು ಮಹಾರಾಜರಿಗೆ ದೊರಕಿತು. ಇದು ಗುರುಮಲ್ಲೇಶ್ವರರ ಮಹಿಮೆಯೇ ಸರಿ.ದೇವನೂರಿನತ್ತ: ಗುರುಮಲ್ಲೇಶ್ವರರು ಮೈಸೂರನ್ನು ಬಿಟ್ಟು ನಂಜನಗೂಡು ತಾಲ್ಲೂಕಿಗೆ ಸೇರಿದ ದೇವನೂರನ್ನು ತಮ್ಮ ಸುಕ್ಷೇತ್ರವನ್ನಾಗಿ ಮಾಡಿಕೊಂಡದ್ದು ಸರಿಯಷ್ಟೆ. ಅದು ಸ್ವಾಮಿಗಳ ಪಾದಸ್ಪರ್ಶದಿಂದ ಅವಿಮುಕ್ತ ಕ್ಷೇತ್ರವಾಯಿತು. ಗುರುಮಲ್ಲೇಶ್ವರರು ಇಲ್ಲಿ ಬಂದು ನೆಲೆಸಲು ಒಂದು ಅನಿಮಿತ್ತಕಾರಣ ಉಂಟು. ಈ ಊರಿನ ಮುಖಂಡರು ಪಟೇಲ್ ಸುಬ್ಬೇಗೌಡರು. ಇವರ ಧರ್ಮಪತ್ನಿ ಶಂಕರಮ್ಮ. ಈಕೆಗೆ ಬಹಳ ದಿನಗಳಿಂದ ಬ್ರಹ್ಮಪಿಶಾಚಿಯೊಂದು ಆವರಿಸಿಕೊಂಡಿತ್ತು. ಪಟೇಲರು ಇದನ್ನು ಹೋಗಲಾಡಿಸಲು ನಾನಾ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಗುರುಮಲ್ಲೇಶ್ವರರನ್ನು ಕರೆತಂದರೆ ನಿವಾರಣೆ ಆಗುತ್ತದೆಂಬ ವಿಷಯ ಸುಬ್ಬೇಗೌಡರ ಕಿವಿಗೆ ಬಿದ್ದಿತು. ಅವರು ಸಾಹಸಪಟ್ಟು ಶ್ರೀಗಳನ್ನು ತಮ್ಮ ಮನೆಗೆ ಕರೆತಂದರು. ಗುರುಮಲ್ಲೇಶ್ವರರು ತಮ್ಮೊಡನೆ ಮುಪ್ಪಿನಸ್ವಾಮಿಗಳನ್ನೂ ಕರೆದೊಯ್ದಿದ್ದರು. ಬ್ರಹ್ಮಪಿಶಾಚಿ ಆವರಿಸಿಕೊಂಡಿದ್ದ ಶಂಕರಮ್ಮನನ್ನು ಕರೆತಂದರು. ಆಕೆ ಸ್ವಾಮಿಗಳ ಪಾದಗಳಿಗೆ ನಮಸ್ಕರಿಸಿ ಕುಳಿತುಕೊಂಡರು. ಶಂಕರಮ್ಮನವರ ಮಸ್ತಕದ ಮೇಲೆ ಗುರುಮಲ್ಲೇಶ್ವರರು ಹಸ್ತ ಇಡುತ್ತಿದ್ದಂತೆ ಬ್ರಹ್ಮಪಿಶಾಚಿ ‘ನನ್ನ ಜನ್ಮ ಸಾರ್ಥಕ ಆಯಿತು’ ಎಂದು ಹೇಳುತ್ತ ಶಂಕರಮ್ಮನವರನ್ನು ಬಿಟ್ಟು ಹೊರಟು ಹೋಯಿತು. ಸುಬ್ಬೇಗೌಡರಿಗೆ ಬೆಟ್ಟದಂತೆ ಬಂದ ಆಪತ್ತು ಮಂಜಿನಂತೆ ಕರಗಿಹೋಯಿತು. ಕೆಲವುದಿನ ಅಲ್ಲಿ ಶ್ರೀಗಳು ಕಂತೆಭಿಕ್ಷೆ ಮೂಲಕ ಜನರ ಪ್ರೀತಿ ಗಳಿಸಿದರು. ದೇವನೂರಿನ ಜನ ಶ್ರೀಗಳು ತಮ್ಮ ಊರಿನಲ್ಲೇ ಇರಬೇಕೆಂದು ಕೋರಿಕೊಂಡರು. ಭಕ್ತರೆಲ್ಲರ ಪ್ರಾರ್ಥನೆಯಂತೆ ದೇವನೂರಿನಲ್ಲಿಯೇ ನೆಲೆ ನಿಲ್ಲಲು ಶ್ರೀಗಳು ನಿರ್ಧರಿಸಿದರು. ಸ್ವಲ್ಪದಿನ ಸುಬ್ಬೇಗೌಡರ ಮನೆಯಲ್ಲಿದ್ದು, ಅನಂತರ ವಿಶಾಲವಾದ ಬೇರೊಂದು ಮನೆಯ ವ್ಯವಸ್ಥೆಯೂ ಆಯಿತು. ಮೈಸೂರಿನ ಮಹಲಿಂಗೇಶ್ವರ ಮಠದಲ್ಲಿ ನಡೆಯುತ್ತಿದ್ದಂತೆ ಇಲ್ಲಿಯೂ ಕಂತೆಭಿಕ್ಷದ ಕಾಯಕ ಪ್ರಾರಂಭಿಸಿದರು. ಈ ಕಾಯಕದಿಂದ ಮನೆಮನೆಗಳಲ್ಲಿ ನೀಡುತ್ತಿದ್ದ ಪ್ರಸಾದ ತಂದು ಸಮಸ್ತರಿಗೂ ಬಡಿಸುತ್ತಿದ್ದರು. ಶ್ರೀಗುರು ಮಲ್ಲೇಶ್ವರರು ‘ಸದ್ಭಕ್ತರ ಕಾಮಧೇನು’ ಎಂದು ಪ್ರಕೀರ್ತಿತಗೊಂಡರು. ಜನರು ಅವರಿಂದ ಲಿಂಗತತ್ತೊ್ವೕಪದೇಶ ಮಾಡಿಸಿಕೊಳ್ಳಲು ತಾಮುಂದು, ನಾ ಮುಂದು ಎಂದು ಮುಗಿ ಬೀಳತೊಡಗಿದರು. ಇಂತಹ ಜನರಿಗೆ ವೀರಶೈವಧರ್ಮದ ಅಷ್ಟಾವರಣ, ಪಂಚಾಚಾರ ಮತ್ತು ಷಟ್​ಸ್ಥಲ ತತ್ತ್ವಗಳನ್ನು ಬಲು ಸುಲಭವಾಗಿ ತಿಳಿಯ ಹೇಳತೊಡಗಿದರು. ಗುರುಮಲ್ಲೇಶ್ವರರು ಶಿವಯೋಗ ಸಂಪತ್ತನ್ನು ಜನರಿಗೆ ಹಂಚುತ್ತಿದ್ದುದು ಸರಿಯಷ್ಟೆ. ಅವರು ಒಳ್ಳೆಯ ಅಂಗಸಾಧಕರು ಮತ್ತು ಯೋಗಪಟುಗಳಾಗಿದ್ದರು. ಗ್ರಾಮಗ್ರಾಮಗಳಲ್ಲಿ ‘ಗರಡಿಮನೆ’ ಕಟ್ಟಿಸಿ, ಯುವಕರಿಗೆ ಅಂಗಸಾಧನೆಗೆ ಬೆಂಬಲ ನೀಡಿದರು. ಇದು ಲಿಂಗಾನುಸಂಧಾನಕ್ಕೆ ಪರೋಕ್ಷ ದಾರಿ ಎಂದು ತಿಳಿಸುತ್ತಿದ್ದರು.ಗುರುಮಲ್ಲೇಶ್ವರರು ಅಪ್ರತಿಮ ಶಿವಯೋಗನಿಷ್ಠರು. ಎಲ್ಲೋ ಹುಟ್ಟಿ, ಮತ್ತೆಲ್ಲೊ ಬೆಳೆದು, ಇನ್ನೆಲ್ಲೊ ಸಾಧನೆಯ ಶಿಖರವೇರಿದ್ದು ಸಾಮಾನ್ಯವಲ್ಲ. ಅವರು ದುಡಿದು ತಿನ್ನುವ ಕಾಯಕವನ್ನು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೋಧಿಸಿದರು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರಿನ ಕಡೆ ನಾನಾ ಕಾರಣಗಳಿಂದಾಗಿ ವೀರಶೈವರು ಅಷ್ಟಾವರಣಗಳಿಂದ ದೂರವಿದ್ದರು. ಇಂಥ ಜನರಿಗೆ ‘ಲಿಂಗಬೋಧೆ’ ಮಾಡಿ ಅರಿವನ್ನು ಹೆಚ್ಚಿಸಿದರು. ಇಂಥ ಮಹಾತ್ಮರ ಶಿಷ್ಯರಲ್ಲಿ ಪೂಜ್ಯ ಭಿಕ್ಷದಾರ್ಯರು, ಶರಣಬಸಪ್ಪ ತಾತ ಪ್ರಮುಖರು. ಅವರು ಷಟ್​ಸ್ಥಲ ತತ್ತ್ವ ಬೋಧಿಸುವ ಪರಿಯಂತೂ ವಿಶಿಷ್ಟವಾಗಿತ್ತು. ಸಾಧಕನು ಭಕ್ತಸ್ಥಲದಿಂದ ಹೊರಟು ಐಕ್ಯಸ್ಥಲದಲ್ಲಿ ಪ್ರಯಾಣಮಾಡಿ, ಶಿವನಲ್ಲಿ ಸಮರಸಗೊಳ್ಳುತ್ತಿದ್ದ. ಇಲ್ಲಿ ಭಕ್ತಿಯೇ ಮೊದಲ ಸೋಪಾನ. ಪ್ರತಿಯೊಬ್ಬರೂ ಮೊದಲು ತಮ್ಮ ಹೃದಯದಲ್ಲಿ ಪ್ರೇಮಜ್ಯೋತಿ ಹೊತ್ತಿಸಿಕೊಂಡು ಆ ಜ್ಯೋತಿಗೆ ತ್ಯಾಗದ ಎಣ್ಣೆ ಎರೆಯುತ್ತ ಪ್ರಪಂಚವೆಲ್ಲ ದೇವನ ಕರುಣೆಯೆಂದು ತಿಳಿದು, ಪ್ರಪಂಚದ ಕಣಕಣದಲ್ಲಿಯೂ ಪರಮಾತ್ಮ ಇರುವನೆಂದು ಅರಿತು, ಜೀವಭಾವವನ್ನು ಬಿಟ್ಟು ದೇವಭಾವವನ್ನು ಹಿಡಿಯಬೇಕೆಂದು ಶ್ರೀಗಳು ಅರುಹುತ್ತಿದ್ದರು. ಸಾಧಕನು ಸದಾನಂದನಾಗಿ ಪ್ರಪಂಚದಲ್ಲಿದ್ದರೂ ಪರಮಾತ್ಮನಲ್ಲಿ ಅವನ ಮನ ಏಕಭಾವಗೊಳ್ಳುತ್ತಿತ್ತು. ಸಾಧಕನು ಆರು ಸೋಪಾನಗಳನ್ನು ಹಂತಹಂತವಾಗಿ ಏರಿ, ಭಗವಂತನ ಸಾಕ್ಷಾತ್ಕಾರವನ್ನು ಇದರಿಂದ ಪಡೆಯಲು ಸಾಧ್ಯ. ಭಕ್ತರು ಸಾಧನೆಗೆ ಪೂರಕವಾಗಿ ನೂರಾರು ಊರುಗಳಲ್ಲಿ ಶ್ರೀಗುರುಮಲ್ಲೇಶ್ವರರ ಹೆಸರಿನಲ್ಲಿ ಭಜನಾ ಸಂಘಗಳನ್ನು ರಚಿಸಿಕೊಂಡರು.ಗುರುಮಲ್ಲೇಶ್ವರರು ನಿತ್ಯನಿರಂತರವಾಗಿ ಕಾಯಕ-ದಾಸೋಹ ನಿಷ್ಠೆ ಮಾಡಿದರು. ಆಚಾರ-ವಿಚಾರಗಳನ್ನು ಅಭೇದಗೊಳಿಸಿದರು. ಪರಿಪೂರ್ಣ ಸಾಧಕರಾಗಿ ವಿರಾಜಮಾನರಾದರು. ಶ್ರೀಗಳು ಕ್ರಿ.ಶ.1899ರ ಜೂನ್ 25ರಂದು ಬೆಳಗ್ಗೆ ಬಯಲಲ್ಲಿ ಬಯಲುಗೊಂಡರು. ಗುರುಗಳ ಅಂಗಕ್ರಿಯೆ ನಿಂತು ಲಿಂಗಮಯವಾಯಿತು. ಇವರು ಬಯಲುಗೊಳ್ಳುವ ಪೂರ್ವದಲ್ಲಿ ಭಿಕ್ಷದಾರ್ಯರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅವರ ಮಸ್ತಕದ ಮೇಲೆ ಹಸ್ತವನ್ನು ಇಟ್ಟು ‘ನನ್ನನ್ನು ಕಂಡಂತೆ ಎಲ್ಲರನ್ನು ಕಾಣು’ ಎಂದು ಹೇಳಿ ಮೌನವಾದರು. ಗುರುಮಲ್ಲೇಶ್ವರರು ನಿರ್ವಲಯವಾದ ಸುದ್ದಿ ಹರಡಿತು. ಜನ ತಂಡೋಪತಂಡವಾಗಿ ಬಂದರು. ಶ್ರೀಗಳ ಲಿಂಗಶರೀರವನ್ನು ಶ್ರೀಮಠದಲ್ಲಿ ಸಾಂಪ್ರದಾಯಕವಾಗಿ ಕ್ರಿಯಾಸಮಾಧಿಯಲ್ಲಿ ನಿಕ್ಷೇಪಿಸಿದರು. ಅನಂತರ ಬಯಲು ಗದ್ದುಗೆ ನಿರ್ವಿುಸಲಾಯಿತು. ಶ್ರೀಗುರು ಮಲ್ಲೇಶ್ವರರು ಬಯಲಿನೊಳಗಿನ ಬಯಲಾಗಿ ನೂರ ಇಪ್ಪತ್ತು ವರ್ಷಗಳು ಕಳೆದಿವೆ. ಅವರು ಸ್ಥಾಪಿಸಿದ ಮುನ್ನೂರಕ್ಕೂ ಹೆಚ್ಚು ಭಿಕ್ಷಾಮಠಗಳು ಜನರ ಸೇವಾಕಾರ್ಯಕ್ಕೆ ಸಂಕೇತವಾಗಿ ಉಳಿದುಕೊಂಡಿವೆ. ಅವರು ಹೊತ್ತಿಸಿದ ಒಲೆ ಆರದೆ ಇಂದಿಗೂ ಉರಿಯುತ್ತಿದೆ. ದೇವನೂರು ಸುಕ್ಷೇತ್ರವಾಗಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

Sunday, May 17, 2020

👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇

👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇

👉ನಗರದಲ್ಲಿ 50ಲಕ್ಷ ಖಚು೯ ಮಾಡಿ ಮನೆ ಕಟ್ಟಿಸುವ
ಬದಲು 👇

ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ..👌

💛❤💛❤💛❤💛❤💛

👉30000 ರೂ ಖಚು೯ ಮಾಡಿ AC ಖರೀದಿಸುವ
ಬದಲು 👇

30 ರೂ ಖಚು೯ ಮಾಡಿ ಮನೆಯ ಆವರಣದಲ್ಲಿ ಸಸಿಯನ್ನು ನೆಡಿ..👌

💛❤💛❤💛❤💛❤💛

👉ಶುಗರ್, ಬಿಪಿ, ಹೃದಯ ಕಾಯಿಲೆಗಳಿಗಾಗಿ ದಿನಕ್ಕೆ 3 ಬಾರಿಯಂತೆ ತಿಂಗಳ ಔಷಧಿಗಳ ಮೆನು ಸಿದ್ಧಪಡಿಸುವ 
ಬದಲಾಗಿ👇

ದಿನಕ್ಕೆ 3 ಹೊತ್ತು ಯಾವ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕೆಂಬುವುದರ ಮೆನು ಸಿದ್ದಪಡಿಸಿಕೊಳ್ಳಿ..👇

💛❤💛❤💛❤💛❤💛

👉Week end ಅಂತ ವಾರದ ಕೊನೆಯ ಎರಡು ದಿನಗಳನ್ನು ನಗರದ ಬೀದಿ, ಮಾಲ್ ಗಳಲ್ಲಿ ಅಲೆಯುವ
ಬದಲು 👇

ತೋಟಗಳಲ್ಲಿನ ಗಿಡ-ಮರ, ಪಕ್ಷಿ- ಪ್ರಾಣಿಗಳ ಜೊತೆ ಕಳೆಯಿರಿ..👌

💛❤💛❤💛❤💛❤💛

👉ಪಿಜ್ಜಾ ಬಗ೯ರ್, ಬಟ್ಟೆಗಳಿಗಾಗಿ ನೀರಿನಂತೆ ಹಣ ಖಚು೯ ಮಾಡುವ
ಬದಲು👇

ಹೊಟ್ಟೆಗಾಗಿ ತಾಜಾ ಹಣ್ಣು ತರಕಾರಿಗಳನ್ನು ಸವಿಯಲು ಖಚು೯ ಮಾಡಿ👌

💛❤💛❤💛❤💛❤💛

👉ಸಲೂನ್ ಗಳಲ್ಲಿ ಮಸಾಜ್, ಸೌಂದಯ೯ಕರಣಕ್ಕಾಗಿ ಖಚು೯ ಮಾಡುವ
ಬದಲು👇

👉ಮಾನವೀಯತೆಯಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿ..👌

💛❤💛❤💛❤💛❤💛

👉ಲೇಟ್ ನೈಟ್ ಪಾಟಿ೯ಗಳಿಗಾಗಿ ಸಮಯ - ಹಣ ಕಳೆಯುವ
ಬದಲಾಗಿ 👇

ನಸುಕಿನ ಜಾವ ಹೊಲ-ಮನೆ  ಕೆಲಸಗಳನ್ನು ಮಾಡಿ..👌

💛❤💛❤💛❤💛❤💛

👉ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಗೋಸ್ಕರ ರಾಶಿ ರಾಶಿ ಗಿಫ್ಟ್ ಪ್ರೆಸೆಂಟ್ ಮಾಡುವ 
ಬದಲು👇

ಬಂಧುಗಳಿಗಾಗಿ, ಬಡಜನರಿಗಾಗಿ ಸಹಾಯ ಮಾಡಲು ಖಚು೯ ಮಾಡಿ..👌

💛❤💛❤💛❤💛❤💛

👉ಕ್ರಿಕೆಟ್ -ಸಿನೆಮಾ ತಾರೆಯರನ್ನು, ಪರಸ್ತ್ರೀ - ಪರಪುರುಷರನ್ನು ಮೋಹಿಸುವ
ಬದಲು👇

ನಿಮ್ಮ ಸ್ವಂತ ತಂದೆ - ತಾಯಿ,ಗಂಡ - ಹೆಂಡತಿ, ಬಂಧು- ಬಳಗ ಹಾಗೂ ಸ್ನೇಹಿತರನ್ನು ಪ್ರೀತಿಸಿ..👌👍

💛❤💛❤💛❤💛❤💛

👉ಮೇಲಿನ ಎಲ್ಲ ಆಧುನಿಕ ಆಡಂಬರ ಜೀವನ , ತೋರಿಕೆಯ ಜೀವನದಿಂದಾಗಿ ನಾವು ಹಣ - ಗುಣ ಮತ್ತು ಆರೋಗ್ಯ- ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುತ್ತಿರುವ ಜನರನ್ನು ಕುಬೇರರನ್ನಾಗಿಸುತ್ತಿದ್ದೇವೆ.

ಅದರ ಬದಲು👇

ನೈಜ ಜೀವನವನ್ನು ನಾವು ರೂಢಿಸಿಕೊಂಡಲ್ಲಿ ಸ್ವಸ್ಥ ಆರೋಗ್ಯ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಂಡು, ರಕ್ತ ಹೀರುವ ಎಲ್ಲ ಪರೋಪ ಜೀವಿಗಳ ಬಾಧೆಯಿಂದ ಮುಕ್ತರಾಗಿ ನಾವೇ ಆರೋಗ್ಯ ಹಾಗೂ ಐಶ್ವಯ೯ವಂತರಾಗಿ  ಬದುಕಬಹುದು..👌👍

💛❤💛❤💛❤💛❤💛

ಈಗ👇

ನಿಮಗೆ ಯಾವ ರೀತಿಯ ಜೀವನ ಬೇಕೆಂಬುದನ್ನು ನೀವೇ ನಿಧ೯ರಿಸಿಕೊಂಡು ಬದುಕಿ..

ಏಕೆಂದರೆ👇

ನಾವು ಮಾಡುವ ಕಾರ್ಯಗಳು ಒಳ್ಳೆಯವೋ ಅಥವಾ ಕೆಟ್ಟವೋ ಆಗಿರಬಹುದು.. ಆದರೆ ಆ ಕಾರ್ಯಗಳಿಗೆ ತಕ್ಕಂಥ ಪ್ರತಿಫಲಗಳನ್ನು ದೇವರು ಮುಂದೊಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುದನ್ನು ಮರೆಯದಿರಿ🙏

💛❤💛❤💛❤💛❤💛

ಒಳ್ಳೆ ಕಾರ್ಯಗಳನ್ನು ಮಾಡಿ👌 ಒಳ್ಳೆಯ ಪ್ರತಿಫಲಗಳನ್ನು ಸ್ವೀಕರಿಸಿ👍......🙏
dgnsgreenworld
💛❤💛❤💛❤💛❤💛

ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ?

ಹದಿ ಹರಯ!

ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,
ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.

ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,
ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.

ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ,
ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ ಇರುವುದಿಲ್ಲ.

ಅಪ್ಪ ಕೇಳಿದ್ದೆಲ್ಲ ತಂದುಕೊಡಲಿಲ್ಲ ಎಂದು ನೀ ಬೇಸರಿಸಬೇಡ,
ಎಷ್ಟೋ ಮಕ್ಕಳ ಅಪ್ಪ ಬಾರು ಬಿಟ್ಟು ಮನೆಗೇ ಬರುವುದಿಲ್ಲ.

ಅಮ್ಮ ಮಾಡಿದ ತಿಂಡಿ ಚೆನ್ನಾಗಿಲ್ಲ ಎಂದು ನೀ ಮೂಗು ಮುರಿಯಬೇಡ,
ಎಷ್ಟೋ ಜನರ ಮನೆಯಲ್ಲಿ ಬೆಳಗ್ಗೆ ತಂಗಳನ್ನಕ್ಕೂ ಗತಿ ಇರುವುದಿಲ್ಲ.

ಗುರು ಹಿರಿಯರು ತಿದ್ದಿ ತೀಡುತ್ತಾರೆಂದು ನೀ ಹಳಿಯಬೇಡ,
ಎಷ್ಟೋ ಜನರಿಗೆ ಶಾಲೆಗೆ ಹೋಗುವ ಭಾಗ್ಯವೇ ಇರುವುದಿಲ್ಲ.

ಜನರು ನಿನ್ನ ನಡೆ - ನುಡಿ, ಉಡುಗೆ - ತೊಡುಗೆಗಳನ್ನು ಸದಾ ಕಾಲ ಹದ್ದಿನ ಕಣ್ಣಿಟ್ಟು ಗಮನಿಸಿ ಮಾತನಾಡಿಕೊಳ್ಳುತ್ತಾರೆಂದು ಸಮಾಜವನ್ನು ದ್ವೇಷಿಸಬೇಡ,
ಯಾಕೆಂದರೆ ಬೆಂಗಳೂರಿನಂಥ ನಗರಗಳಲ್ಲಿ ನೀನು ಕುಡಿದು ತೂರಾಡುತ್ತಾ ಸಭ್ಯತೆಯ ಎಲ್ಲೆ ಮೀರಿ ಬೆತ್ತಲಾಗಿ ಚರಂಡಿಯಲ್ಲಿ ಬಿದ್ದರೂ ಯಾರೂ ನಿನ್ನ ಕಡೆ ಕಣ್ಣು ಹಾಯಿಸುವುದೂ ಇಲ್ಲ.

ಎಲ್ಲಿಗೆ ಹೋದೆ? ಯಾಕೆ ಹೋದೆ? ಇಷ್ಟೇಕ ತಡ? ಇಷ್ಟೇಕೆ ಬೇಗ? ಅದು ಏನು? ಇದು ಯಾಕೆ? ಅವರು ಯಾರು? ಇದು ಬೇಕಾ? ಅಂತ ಎಲ್ಲವನ್ನೂ ಪ್ರಶ್ನಿಸುತ್ತಾರೆಂದು ಸಿಡುಕಬೇಡ,
ಎಷ್ಟೋ ಜನರಿಗೆ ನಮ್ಮವರು - ತಮ್ಮವರು, ಹಿಂದು ಮುಂದು, ಬಂಧು - ಬಾಂಧವರು, ಹೇಳುವವರು - ಕೇಳುವವರೇ ಇರುವುದಿಲ್ಲ!

ಇತ್ತ ನೋಡು, 

ಭಗವಂತ ನಿನಗೆ ಕೊಟ್ಟ ಭಾಗ್ಯ, ಅಪ್ಪ ಅಮ್ಮ ಅಣ್ಣ ಅಕ್ಕ, ಕುಟುಂಬ, ನೆಂಟರಿಷ್ಟರು, ಗುರು ಹಿರಿಯರು ಮತ್ತು ಸಮಾಜವೆಂಬ ಬಂಧನ. ನಿನ್ನ ರಕ್ಷೆಗೆಂದು ಭಗವಂತನೇ ಕಟ್ಟಿದ ರಕ್ಷಾ ಬಂಧನ!

ಒಂದು ವೇಳೆ ನೀ ಪ್ರಾಣಿಯಾಗಿ ಹುಟ್ಟಿದ್ದಿದ್ದರೆ ಈ ಬಂಧನಗಳ್ಯಾವುದೂ ನಿನಗೆ ಇರುತ್ತಲೇ ಇರಲಿಲ್ಲ.

ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ! ಅನ್ನುವ ದಾಸವಾಣಿ ನಿನಗೆ ಅರ್ಥವೂ ಆಗುತ್ತಿರಲಿಲ್ಲ!

ತಮ್ಮ/ತಂಗಿ,

ಉಳಿಯ ಪೆಟ್ಟು ಬೀಳದಿದ್ದರೆ ಶಿಲೆಯೊಂದು ಮೂರ್ತಿಯಾಗಲು ಸಾಧ್ಯವೇ?

ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ?

ನೀನು ದ್ವೇಷಿಸಬೇಕಾಗಿದ್ದು ವಯೋಸಹಜ ಅಹಂಕಾರ, ಜಂಭ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಂಚಲತೆ, ಸ್ವಾರ್ಥಗಳನ್ನೇ ಹೊರತು, ಅವುಗಳಿಗೆ ಬಲಿಯಾಗದಂತೆ ಸದಾ ಕಾಲ ನಿನ್ನನ್ನು ರಕ್ಷಿಸುವ ಅಪ್ಪ, ಅಮ್ಮ, ಅಣ್ಣ, ಅಕ್ಕ, ಗುರು - ಹಿರಿಯರು, ನೆಂಟರಿಷ್ಟರು ಮತ್ತು ಸಮಾಜವನ್ನಲ್ಲ.

ಚಿಂತಿಸು, ಭಾವಿಸು, ಯೋಚಿಸು,
ಪರಿಪೂರ್ಣವಾಗಲು ಭಗವಂತ ನಿನಗೆ ಕೊಟ್ಟ ಅವಕಾಶಕ್ಕಾಗಿ ಅವನಿಗೆ ವಂದಿಸು! ಬರುವ ಜನ್ಮದಲ್ಲೂ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ ಇಲ್ಲೇ ಹುಟ್ಟುವಂತಾ ವರವನ್ನು ಪ್ರಾರ್ಥಿಸು!

dgnsgreenworld
("ನನ್ನ ಜೀವನ - ನನ್ನಿಷ್ಟ" ಎನ್ನುವ ಮನೆಹಾಳು ಸಿದ್ಧಾಂತದ ಬೆನ್ನು ಬಿದ್ದ ಎಲ್ಲ ಹದಿಹರಯದ ಯುವಕ ಯುವತಿಯರಿಗೆ ಸಮರ್ಪಣೆ.)

*ಪ್ರತಿ ಹೆಜ್ಜೆಯಲ್ಲು ಒಂದು ತಿರುವು..**ಆ ತಿರುವಲ್ಲಿ ಅದರದೆ ಆದ ನೋವು ನಲಿವು..*

*ಪ್ರತಿ ಹೆಜ್ಜೆಯಲ್ಲು ಒಂದು ತಿರುವು..*
*ಆ ತಿರುವಲ್ಲಿ  ಅದರದೆ ಆದ ನೋವು ನಲಿವು..*
*ಜೀವನ ಅಂದರೆನೇ ಇಷ್ಟು.*
*ಬಯಸಿದೆಲ್ಲ ಸಿಗೊಲ್ಲ*
*ಸಿಕ್ಕಿದರೂ ಆ ವಸ್ತುವಿಗೆ ಬೆಲೆ ಇರೊಲ್ಲ..*
*ನಾವು ಬದುಕಿನಿಂದ ನೂರು ಪಾಠ ಕಲಿತೀವಿ ಅಂದ್ರೇ  ಅದೇ ಬದುಕು ನಮಗೆ ಸಾವಿರ ಪಾಠ ಹೇಳಿ ಕೊಡುತ್ತೆ.*
*ಮರೆಯದೆ ತಿಳಿ ನಿನ್ನ ಹೆಜ್ಜೆಗೆ  ನಿನ್ನದೆ ಆದ ಬೆಲೆ ಇದೆ.*
    💐⚜ *ಶುಭ ಮುಂಜಾನೆ*⚜💐dgns

ಪುರಾಣಗಳಿಂದ #ಆಯ್ದ #ಕೆಲವು #ಸುಂದರವಾದ #ಸುಭಾಷಿತಗಳು

💐🌺💐 #ಪುರಾಣಗಳಿಂದ #ಆಯ್ದ #ಕೆಲವು #ಸುಂದರವಾದ #ಸುಭಾಷಿತಗಳು 💐🌺💐

🔹ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ. 
👉ರಾಮಾಯಣ

🔹ಕಾಮವು ವಿಷಯಭೋಗದಿಂದ ಎಂದಿಗೂ ಶಾಂತವಾಗುವುದಿಲ್ಲ. ತುಪ್ಪದ ಹವಿಸ್ಸಿನಿಂದ ಬೆಂಕಿಯು ಹೆಚ್ಚುವಂತೆ ಅದು ಇನ್ನು ಪ್ರಭಲವಾಗುತ್ತದೆ.
👉ಮಹಾಭಾರತ ಆದಿಪರ್ವ

🔹ಸಾವಿರಾರು ತಂದೆ ತಾಯಿಗಳು , ನೂರಾರು ಹೆಂಡರು ಮಕ್ಕಳು ಈ ಸಂಸಾರದಲ್ಲಿ ಆಗಿಹೋದರು. ಹೀಗಿರುವಾಗ ಅವರು ಯಾರ ಸಂಬಂಧಿಗಳು. ? ನಾವು ಯಾರ ಸಂಬಂಧಿಗಳು ? 
👉ಮಹಾಭಾರತ ಶಾಂತಿ ಪರ್ವ

🔹ಬೆಳಿಗ್ಗೆ ಮಾಡಿದ ಅಡಿಗೆ ಮತ್ತು ಆಹಾರವು  ಹಳಸಿಹೋಗುತ್ತದೆ. ಹೀಗಿರುವಾಗ, ಅದೇ ಅನ್ನರಸದಿಂದ ಬೆಳೆದು ಬಂದ  ಈ ಶರೀರ ಹೇಗೆ ನಿತ್ಯವಾದೀತು. 
👉ಗರುಡ ಪುರಾಣ

🔹ತಾಳವಿಲ್ಲದ ರಾಗ ಹೇಗೋ, ಮಾನವಿಲ್ಲದ ರಾಜ ಹೇಗೋ, ಮದೋದಕವಿಲ್ಲದ ಆನೆ ಹೇಗೋ, ಹಾಗೆ ಜ್ಞಾನವಿಲ್ಲದ ಯತಿ. 
👉ರಾಮಾಯಣ 

🔹ಸರ್ಪವು ಜೀರ್ಣವಾದ ಪೊರೆಯನ್ನು ಬಿಡುವಂತೆ , ಯಾವನು ತಾಳ್ಮೆಯಿಂದ ಕೋಪವನ್ನು ದೂರಮಾಡುವನೋ ಅವನೇ ಮನುಷ್ಯ. 
👉ರಾಮಾಯಣ ಸುಂದರ ಕಾಂಡ 

🔹ಸುಖ ಸಾಧನಗಳಾದ ಪ್ರಿಯ ವಿಷಯಗಳು ಈ ಮೂರುಲೋಕದಲ್ಲಿ ಎಷ್ಟಿವಿಯೋ ಅವೆಲ್ಲವೂ ಸೇರಿದರು, ಇಂದ್ರಿಯಯಗಳ ಸೆಳೆತಕ್ಕೆ ಒಳಗಾದವನನ್ನು ತೃಪ್ತಿಪಡಿಸಲಾರವು.  
👉ಶ್ರೀಮದ್ ಭಾಗವತ 

🔹ಗಾಳಿಯನ್ನು ಸುತ್ತಿ ಬಂಧಿಸಬಹುದು. ಆಕಾಶವನ್ನಾದರೂ ಕತ್ತರಿಸಬಹುದು. ಅಲೆಗಳನ್ನು ಪೋಣಿಸಬಹುದು. ಆದರೆ ಆಯುಸ್ಸಿನಲ್ಲಿ ನಂಬಿಕೆ ಇಡುವುದಕ್ಕಾಗುವುದಿಲ್ಲ. 
👉ಗರುಡ ಪುರಾಣ

🔹ಕಲಿಯುಗದಲ್ಲಿ ಯಾರು ಹರಿಸ್ಮರಣೆ ಮಾಡುತ್ತಾರೋ, ಅಥವಾ ಮಾಡಿಸುತ್ತಾರೆಯೋ, ಅವರೇ ಭಾಗ್ಯಶಾಲಿಗಳು ಹಾಗು ಕೃತಾರ್ಥರು. 
👉ಶ್ರೀಮದ್ ಭಾಗವತ 

🙏 ಓಂ ನಮೋ ಭಗವತೆ ವಾಸುದೇವಾಯ ನಮಃ🙏

🌷🌷ಶುಭವಂದನೆಗಳು, ಶುಭದಿನ, ಶುಭಮಸ್ತು, ಸರ್ವೇ ಜನಾ ಸುಖೀನೋ ಭವಂತು🌷🌷

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World