www.dgnsgreenworld.blogspot.com

Sunday, March 22, 2020

ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ.,,,,,

SAVE NATURE : HEALTHY, WEALTHY & WISE. dgnsgreenworld Family

" Thank you Corona "

ಬ್ರಹ್ಮಾಂಡವೆಂಬ ಮುಗಿಯದ ವಿಸ್ತಾರದಲ್ಲಿ ಭೂಮಿ ಎಂಬ ಪುಟ್ಟ ಗೂಡಿನ ,  ಪುಟ್ಟ ದೇಶದ , ಪುಟ್ಟ ಊರಿನ , ಪುಟ್ಟ ಗಲ್ಲಿಯಲ್ಲಿ , ಎಲ್ಲ ನನ್ನಿಂದ ಮಾರಾಯ ಎಂದು ಬೀಗುತ್ತಿದ್ದ ಮನುಷ್ಯನಿಗೆ ಪ್ರಕೃತಿ ಸಣ್ಣ ಚಡಿಯೇಟು ಕೊಟ್ಟು ಮನೆ ಒಳಗೆ ಕೂರಿಸಿದೆ.

ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ. ಕಣ್ಣಿಗೆ ಕಾಣದ ಒಂದು ವೈರಸ್ ನಮ್ಮ ಅಹಂಕಾರ, ದವಲತ್ತು , ಜಾತಿ-ಧರ್ಮ ಎಲ್ಲದರ ಹೆಡೆಮುರಿಕಟ್ಟಿ ಮನೆಯೊಳಗೆ ಕೂರುವಂತೆ ಮಾಡಿದೆ , ಮಾನವ ದೇವರಾಗುವ ಹುಂಬತನದಲ್ಲಿ ಓಡುತ್ತಿದ್ದ ವೇಗಕ್ಕೆ ಕಾಲು ಮುರಿದು ಕೂರಿಸಿದೆ . ಬಂದ ಆಪತ್ತಿಗೆ ನಾವು ದೇವರನ್ನು ಬಯ್ಯುವುದಕ್ಕೆ ಆಗದೆ ಸಂಕಟ ಪಡುತ್ತಿರುವುದು ಇದು ಮೊದಲನೇ ಬಾರಿ ಇರಬೇಕು ! ಈ Corona  ನಮ್ಮ ಪಾಪದ ಕೂಸು ದೇವರನ್ನು ಹೊಣೆ ಮಾಡುವುದಕ್ಕೆ ಹೇಗೆ ಸಾಧ್ಯ.

ದಿನಬೆಳಗಾದರೆ ಟಿವಿಯಲ್ಲಿ ನಿತ್ಯ ಬರುತ್ತಿದ್ದ ಜ್ಯೋತಿಷಿಗಳು ಎಲ್ಲೋ ಮಾಯವಾಗಿದ್ದಾರೆ!
ಭಕ್ತರನ್ನು ನಿತ್ಯವೂ ತಾವು ದೇವಮಾನವರು ಎಂದು ನಂಬಿಸುತ್ತಿದ್ದ ಪವಾಡಪುರುಷರು ಭಕ್ತರನ್ನು ಭೇಟಿ ಮಾಡುವುದು ನಿಲ್ಲಿಸಿದ್ದಾರೆ. ಜಾತಿಗಳ ಮೇಲೆ ದೇವಸ್ಥಾನಗಳಿಗೆ , ದೇವರ ದರ್ಶನಗಳಿಗೆ ಅನುಮತಿ  ನೀಡುತ್ತಿದ್ದವರು, ಜ್ವರ ಇಲ್ಲದವರಿಗೆ ಮಾತ್ರ ಪ್ರವೇಶ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಬೀದಿಗೊಂದು ಬ್ಯೂಟಿಪಾರ್ಲರ್ ಗಳು ನಗುತ್ತಾ ನಿಂತಿದ್ದ ಬೀದಿಗಳಲ್ಲಿ , ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ , ಸಿನಿಮಾ,  ರಾಜಕೀಯ,  ಶೇರು ಮಾರುಕಟ್ಟೆ , ನಿತ್ಯವೂ ಸಿಂಗರಿಸಿ ನಿಲ್ಲುತ್ತಿದ್ದ Mall ಗಳು,  ಊರಲ್ಲಿ ಬಳುಕುತ್ತಾ ಓಡಾಡುತ್ತಿದ್ದ ಮೆಟ್ರೋ ,  ಮೈಮುರಿದು ಕೈಚಾಚಿ ನಿಂತಿದ್ದ ಫ್ಲೈಓವರ್ ಗಳು ಎಲ್ಲವೂ ಬಂದ್ .

Corona ಮತ್ತೆ ನಮಗೆ ಬದುಕು ಕಲಿಸುತ್ತಿದೆ , ಬದುಕಿನ ಅರ್ಥ ತಿಳಿಸುತ್ತಿದೆ , ಗಾಳಿಯಲ್ಲಿನ ಮಲಿನ ದಿನನಿತ್ಯವೂ ಕಡಿಮೆ ಮಾಡಿದೆ , ಇರುವೆಯಂತೆ ಮುತ್ತುತ್ತಿದ್ದ ಜನರ ಗುಂಪನ್ನು ಚದುರಿಸಿದೆ , ಕುಟುಂಬಗಳನ್ನು ಮತ್ತೆ ಒಂದು ಮಾಡಿದೆ
ಗಂಡ-ಹೆಂಡತಿ ಜೊತೆಗೆ ಕುಳಿತು ಮಾತನಾಡುತ್ತಿದ್ದಾರೆ, ಮಕ್ಕಳಿಗೆ ಅಪ್ಪ ಅಮ್ಮ ಮನೆಯಲ್ಲಿ ಸಿಗುತ್ತಾರೆ ಅನ್ನೋ ನಂಬಿಕೆ ಮತ್ತೆ ಹುಟ್ಟಿದೆ , ಕೈತೊಳೆದು ಊಟ ಮಾಡಬೇಕು ಎಂದು ಹಿರಿಯರು ಹೇಳುತ್ತಿದ್ದಾಗ ಕಿವಿಗೆ ಹಾಕಿಕೊಳ್ಳದ ನಾವು , ಈಗ ದಿನಕ್ಕೆ 30 ಬಾರಿ ಕೈತೊಳೆಯುವಂತೆ ಮಾಡಿದೆ.

 ಜೀವಕ್ಕೆ ಇರುವ ಬೆಲೆ ನಮಗೆ ಸ್ಪಷ್ಟವಾಗಿ ಮನದಟ್ಟಾಗಿದೆ , ಹುಚ್ಚು ಕುದುರೆಯಂತೆ ಓಡುತ್ತಿದ್ದ ನಮಗೆ ಲಗಾಮು ಬಿದ್ದಿದೆ , ಜೀವಕ್ಕೆ ಹೆದರಿ ನಮ್ಮ ನಮ್ಮ ಊರುಗಳಿಗೆ ಓಡಿ ಬಂದಿದ್ದೇವೆ , ಅಮ್ಮನ ಕಳವಳ , ಅಪ್ಪನ ಆತಂಕ,  ಸ್ನೇಹಿತರ ಕಾಳಜಿ ಎಲ್ಲವೂ ಅರಿವಾಗಿದೆ . ನಾವು ಬದುಕಿದ ಬದುಕಿನ ಬಗ್ಗೆ ಒಂದು ಅವಲೋಕನ ಮಾಡಿಕೊಳ್ಳೋಣ ಮತ್ತೆ ನಾವು ಬದುಕುವ ಬದುಕಲ್ಲಿ ತಪ್ಪುಗಳಾದರೆ ಆ ತಪ್ಪುಗಳಿಗೆ ನಮ್ಮ ಮಕ್ಕಳು ಬೆಲೆ ತೆರಬೇಕಾಗುತ್ತದೆ .

Corona ಥ್ಯಾಂಕ್ಯು ,

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World