www.dgnsgreenworld.blogspot.com

Thursday, March 5, 2020

ಮುಟ್ಟು ಮುಟ್ಟೆಂದು ಯಾಕೆ ಜರಿಯುವೆ ಮನುಜ,,,,,

SAVE NATURE, HEALTHY, WEALTHY & WISE. dgnsgreenworld Family

#ಮುಟ್ಟು....!

ಮುಟ್ಟು ಮುಟ್ಟೆಂದು ಯಾಕೆ ಜರಿಯುವೆ ಮನುಜ
ಮುಟ್ಟಿನಿಂದಲೇ ಹುಟ್ಟಿರುವೆ ನೀನು,
ಮುಟ್ಟು ನಿಲ್ಲವುದರ ಮರ್ಮದ ಹಿಂದೆ ನೀನಿರುವೆ
ಮುಟ್ಟಿಲ್ಲದಿದ್ದರೆ ಈ ಭೂಮಿಯ ಮೇಲೆ ನೀನಿರಲಾಗುತ್ತಿತ್ತೆ....?

ಗರ್ಭಾಶಯದಿಂದ ಒಸರುವ ರಕ್ತ
ನಿನ್ನ ಮೈಯೊಳಗೆ ಹರಿದಾಡುವ ರಕ್ತ ಬೇರಿಲ್ಲ
ಓ ಮೂಢ..! ನೀನ್ಯಾಕೆ ಇದನ್ನರಿತಿಲ್ಲ
ಮುಟ್ಟಾದ ದೇಹವನು ಮೈಲಿಗೆಯೆಂದು ದೂರವಿಡುವೆಯಲ್ಲ...!
ಮೊದಲು ನಿನ್ನ ಮನದೊಳಗಿರುವ
ಮೈಲಿಗೆಯ ಸ್ವಚ್ಚ ಮಾಡಿಕೊ....!

ಮುಟ್ಟು....! ಮುಟ್ಟು....! ಮುಟ್ಟು....!
ಮುಟ್ಟಿನ ಒಳಗುಟ್ಟು ನೀ ತಿಳಿಯೋ
ಮುಟ್ಟಿರುವುದು ! ಮುಟ್ಟಬೇಕೆಂದಿರುವುದು !
ಮುಟ್ಟಿನಿಂದಲೇ ಪಡೆದಿರುವೆ,
ಮುಟ್ಟು ಕೊಳಕಲ್ಲ...! ಕೊಳಕದು ನಿನ್ನ ಮನಸು...!
ನಿನಗೇನು ಅರಿವಿದೆ..! ಮುಟ್ಟು ಕೊಳಕೆನ್ನುವ ನೀನು
ಅದರಿಂದಲೇ ಜನಿಸಿರುವೆ...!!

ಒಮ್ಮೆಯಾದರೂ ಆ ಜಾಗದಲ್ಲಿ ನಿನ್ನ ನೀ ಕಲ್ಪಿಸಿಕೊ...!
ಮುಟ್ಟಿನ ಯಾತನೆಯನ್ನೊಮ್ಮೆ ಅನುಭವಿಸಿ ನೋಡು...!
ಕರುಳ ಹಿಂಡುವ ನೋವು ನಿನಗೂ ತಿಳಿಯುವುದು
ಋತುಚಕ್ರ ಕಾಲನಿಯತಿಯ ಸಹಜ ಕ್ರಿಯೆ
ಅದನ್ಯಾಕೆ ಅಪವಿತ್ರವೆಂದು ಕಾಣುವೆ...!
ಅದರಲ್ಲಿಯೇ ಜನಿಸಿದ ನೀನು ಅಪವಿತ್ರವಲ್ಲವೇನು ??

ಬಿಸಿ ಉಸುರಿನ ದೇಹ ಬೀಗಿ ಹಿಡಿದು
ಪ್ರತಿ ಮಾಸಿಕದಲೂ ನುಂಗುವ ನೋವು
ಅದು ನಿನ್ನ ಹುಟ್ಟಿಗಲ್ಲವೇ...!
ಅವಳ ಮುಟ್ಟಿನ ರಹಸ್ಯಕೆ ವಿಸ್ಮಯಪಡು 
ಮುಟ್ಟಿನ ವ್ಯಥೆ ನೋಡಿ ಮರುಕಪಡು ನಿನ್ನೊಳಗೊಮ್ಮೆ,....!!

ಒಡಲನೋವು ತನ್ನೊಳಗೆ ತಾನನುಭವಿಸಿ
ಜಗದ ಕತ್ತಲೆಯ ಸರಿಸಿ...!
ಹೊಸತುಭಾವ ಹೊಸಬೆಳಕು ತೋರುತ್ತ..!
ಉಸಿರು ಗಟ್ಟಿಹಿಡಿದು ಯಾತನೇ ಪಡುತ್ತ
ಈ ಭೂವಿಗೆ ನಿನ್ನನ್ನು ತಂದವಳು ಹೆಣ್ಣಲ್ಲವೇ...!
ಅವಳ ತಾಯ್ತನದ ನೋವು ನೀನೆಕೆ ಅರಿಯುತಿಲ್ಲ ...!!

ಮುಟ್ಟು ...! ಮುಟ್ಟು...! ಹೇಸಿಗೆಯ ಮುಟ್ಟು....!
ಹಾಸಿಗೆಯ ಮುಟ್ಟು...! ದೇಹದ ಮೈಲಿಗೆಯ ಮುಟ್ಟು !
ಮುಟ್ಟು ಕಳಂಕವೆಂದು ಜರಿಯಬೇಡವೋ ಮನುಜ‌
ಹೊಲೆಯಲ್ಲಲ್ಲದೆ ಜಗವು ತಲೆಯಲ್ಲಿ ಹುಟ್ಟುವುದೇ...!!

ವಂದೆಗಳೊಂದಿಗೆ,,,,,,,,,,,,

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World