www.dgnsgreenworld.blogspot.com

Saturday, March 28, 2020

ಇದಲ್ಲವೇ ಮನುಷ್ಯನ ದರ್ಪಕ್ಕೆ .... ಭಗವಂತನ ಉತ್ತರ.?

SAVE NATURE : HEALTHY, WEALTHY & WISE. dgnsgreenworld Family

ರಜೆಯೇನೊ ಇದೆ.
ಆದರೆ ಸಂಭ್ರಮವಿಲ್ಲ.
ಸುತ್ತಲೂ ನಮ್ಮವರೇ ಇದ್ದಾರೆ
ಆದರೂ ಒಂಟಿ ಎನ್ನಿಸುತ್ತಿದೆ.
ಗೊಂದಲದ ಗೂಡಾಗಿದೆ ಮನ
ಏನೋ ತಳಮಳ.

ತುಂಟ ಮಕ್ಕಳ ಕೈಯನ್ನು
ಕಟ್ಟಿ ಹಾಕಿದ ಅನುಭವ.
ಯಾವುದೋ ಅಜ್ಞಾತ ಕಣ್ಣುಗಳು
ನಮ್ಮನ್ನು ಬೇಟೆಯಾಡಲು
ತವಕಿಸಿ ನಿಂತಿದೆ.

ನಾವೆಲ್ಲರೂ ಬಲಿಪಶುಗಳು
ಶರಣಾಗತಿಯೊಂದೇ
ನಮ್ಮ ಮುಂದಿರುವ ದಾರಿ.
ಯಾವ ಆಯುಧವೂ
ನಾನಿದ್ದೇನೆ ಧೈರ್ಯವಾಗಿ ಹೋರಾಡು
ಎಂದು ನಮ್ಮ ರಕ್ಷಣೆಗೆ ನಿಂತಿಲ್ಲ.

ಚಂದಿರ-ಮಂಗಳ ಗ್ರಹಗಳಲ್ಲೆಲ್ಲಾ
ನಮ್ಮದೇ ಆಧಿಪತ್ಯ ಇರಬೇಕೆಂದು
ಹಪಹಪಿಸುತ್ತಿದ್ದೊ,
ನಾವಿರುವ ಭೂಮಿಯಲ್ಲೇ
ನಮ್ಮ ಉಳಿವಿಗಾಗಿ ಅಂಜಿ
ಕೂತಿದ್ದೇವೆ.

ಏನಾಯಿತು ನಮ್ಮ ಜ್ಞಾನ-ವಿಜ್ಞಾನ ?
ಪಾಂಡಿತ್ಯ?
ಬುದ್ಧಿವಂತಿಕೆ ಎಲ್ಲಾ??

ಒಂದು ಅಣುಬಾಂಬಿನಲ್ಲಿ
ಇಡೀ ಶತ್ರು ರಾಷ್ಟ್ರವನೇ
ಸರ್ವನಾಶ ಮಾಡುವ
ದಿಟ್ಟತನ ದರ್ಪ ಅಹಂಕಾರಗಳೆಲ್ಲವೂ,
ಯಾವುದೋ ಅಣುವಿಗೆ ಹೆದರಿ
ನಾವೆಲ್ಲರೂ ಮುದುರಿ
ಅಡಗಿ ಕುಳಿತ್ತಿದ್ದೇವಲ್ಲಾ;
ಕನ್ನಡಿಯೆ ನಮ್ಮನ್ನು ನೋಡಿ
ಅಣಕಿಸಿ ನಗುತ್ತಿದೆ.

ಯಾರಲ್ಲೂ ಯುದ್ಧದ ಮಾತಿಲ್ಲ,
ಯಾರನ್ನೂ ಗೆಲ್ಲುವ ಹಠವಿಲ್ಲ,
ಮನುಷ್ಯನ ಪೌರುಷದ
ಮಾತಿಗೆ ನಾವೇ ನಕ್ಕು
ಸುಮ್ಮನಾಗಬೇಕು.

*ಬದುಕಬೇಕೆಂದರೆ ಬಗ್ಗಿ ನಡೆಯಬೇಕು.* _ಆಜ್ಞಾಧಾರಕ-ಅದೃಶ್ಯ ಅವನ ಅಣತಿಯನ್ನು ಪಾಲಿಸುವುದಷ್ಟೇ ನಮಗುಳಿದಿರುವ ದಾರಿ._

*ಇದಲ್ಲವೇ ಮನುಷ್ಯನ ದರ್ಪಕ್ಕೆ ....  ಭಗವಂತನ ಉತ್ತರ.*

ವಂದೆಗಳೊಂದಿಗೆ🙏🏻
Dgns

Thursday, March 26, 2020

ಒಂದು ಸಣ್ಣ ಕಥೆ*

SAVE NATURE : HEALTHY, WEALTHY & WISE. dgnsgreenworld Family
*ಒಂದು ಸಣ್ಣ ಕಥೆ*

ಒಂದು ಗ್ರಾಮದಲ್ಲಿ ಅಪ್ರತಿಮ ದೈವಭಕ್ತನಾದ ವ್ಯಕ್ತಿಯೊಬ್ಬನಿದ್ದ. ತನ್ನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ದೇವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದ ಅವನ ಮೇಲೆ ಊರಿನವರಿಗೆಲ್ಲ ಅತಿಯಾದ ಗೌರವವಿತ್ತು.

ಹೀಗಿರಲು ಒಂದು ದಿನ ಸಾಯಂಕಾಲ ಅವನಿಗೆ ಪಕ್ಕದೂರಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತು. ಆದರೆ ಆ ಊರಿಗೆ ಹೋಗಲು ಒಂದು ದೊಡ್ಡ ಕಾಡನ್ನು ದಾಟಿ ಹೋಗಬೇಕಾಗಿತ್ತು. ಆ ಕಾಡಿನಲ್ಲಿ ಅತ್ಯಂತ ಕ್ರೂರ ಮೃಗಗಳು ವಾಸಿಸುತ್ತಿದ್ದವು. ಕತ್ತಲೆ ಬೇರೆ.  ರಾತ್ರಿ ವೇಳೆಯಲ್ಲಿ ಆ ಕಾಡನ್ನು ದಾಟಲು ಪ್ರಯತ್ನಿಸಿದ ಯಾರೊಬ್ಬರೂ ಆ ಕಡೆ ತಲುಪಿದ ಉದಾಹರಣೆ ಇರಲಿಲ್ಲ.

ಅವನ ಅನಿವಾರ್ಯತೆಯನ್ನು ತಿಳಿದ ಮಿತ್ರರನೇಕರು ರಾತ್ರಿ ಕಾಡನ್ನು ದಾಟದಿರುವಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ಅವನ ಮನವೊಲಿಸಲು ಪ್ರಯತ್ನಿಸಿದರು. ಆದರೆ ‘ನನಗೆ ದೇವರಿದ್ದಾನೆ, ಏನೂ ಆಗುವುದಿಲ್ಲ’ ಎಂಬ ಧೈರ್ಯದಿಂದಾಗಿ ಅವನು ಹೋಗಲು ತೀರ್ಮಾನಿಸಿದ.

ವಿಷಯ ತಿಳಿದ ಅವನ ಧಾರ್ಮಿಕ ಗುರುಗಳು ಅವನನ್ನು ತಡೆದರು ‘ಇಲ್ಲ ಗುರೂಜಿ, ನನಗೆ ಹೋಗಲೇ ಬೇಕು, ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದನಾತ.
ಊರಿನ ಪ್ರಧಾನ ಅವನ ಬಳಿ ಬಂದು ರಾತ್ರಿ ಹೋಗದಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ವಿನಂತಿಸಿದ. ‘ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದು ಉತ್ತರಿಸಿದ.
ಕಾಡಿನ ಬಳಿ ತಲುಪುವಷ್ಟರಲ್ಲಿ  ಗ್ರಾಮದ ಕಾವಲುಗಾರ ಓಡೋಡಿ ಬಂದ ‘ಸ್ವಾಮೀ, ಈಗ ಹೋಗಬೇಡಿ, ಕ್ರೂರ ಮೃಗಗಳು ನಿಮ್ಮನ್ನು ಬೇಟೆಯಾಡುತ್ತವೆ’ ಎಂದು ನಿವೇದಿಸಿದ. ‘ಸುಮ್ನಿರು, ನನಗೇನೂ ಆಗುವುದಿಲ್ಲ, ದೇವರಿದ್ದಾನೆ’ ಎಂದು ಹೇಳಿ ಆತ ಮುನ್ನಡೆದ.

ಕಾಡನ್ನು ಪ್ರವೇಶಿಸುವಾಗ ಒಂದು ಕಾಡುಪ್ರಾಣಿ ಅವನೆದುರು ಬಂತು. ತಕ್ಷಣ ಪಕ್ಕದಲ್ಲಿದ್ದ ಕೋಲೊಂದನ್ನು ತೆಗೆದು ಅದನ್ನು ಓಡಿಸಿದ.
ಮುಂದಕ್ಕೆ ಹೋಗುವಾಗ ತೋಳಗಳ ಗುಂಪೊಂದು ಕೊಂದ ಮಾನವನ ದೇಹವೊಂದನ್ನು ಎಳೆದಾಡುತ್ತಾ ಅವನೆದುರಿನಿಂದ ಹೋದವು. ಆದರೆ ಅದಾವುದನ್ನೂ ಲೆಕ್ಕಿಸದೆ ಅತಿಯಾದ ಧೈರ್ಯದಿಂದ ಮುಂದೆ ನಡೆದ.

ಆದರೆ ಈ ನಡೆಯು ಬಹಳಷ್ಟು ಸಾಗಲಿಲ್ಲ. ಸಿಂಹವೊಂದು ಅವನ ಮೇಲೆರಗಿ ಅವನನ್ನು ಕೊಂದೇ ಬಿಟ್ಟಿತು.

ಈಗ ಆತನು ದೇವರನ್ನು ಭೇಟಿ ಮಾಡುವ ಸಮಯ
‘ದೇವರೇ, ನೀನು ನನಗೆ ಮೋಸ ಮಾಡಿದೆ’ ಆತ ದೂರಿಕೊಂಡ
‘ವತ್ಸಾ, ನಾನು ಯಾರಿಗೂ ಮೋಸ ಮಾಡುವುದಿಲ್ಲ’ ದೇವರು ಮುಗುಳ್ನಕ್ಕರು.
‘ಇಲ್ಲ, ನೀನು ನನಗೆ ಮೋಸ ಮಾಡಿದೆ. ಇಲ್ಲಾಂದ್ರೆ ಇಷ್ಟು ವರ್ಷ ನಿನ್ನನ್ನು ಪೂಜಿಸಿದ್ದಕ್ಕೆ, ನಿನ್ನ ಭಕ್ತಿ ಮಾಡಿದ್ದಕ್ಕೆ ನನ್ನನ್ನು ಕಾಡುಪ್ರಾಣಿಗೆ ಬಲಿ ಮಾಡಿದೆಯಲ್ಲ. ಒಂದು ಮುನ್ಸೂಚನೆಯನ್ನೂ ಕೊಡಲಿಲ್ಲ ನೀನು ನನಗೆ’ ಆತ ಮತ್ತೆ ದೂರಿದ.

*‘ವತ್ಸಾ, ಯಾರು ಹೇಳಿದ್ದು ಮುನ್ಸೂಚನೆ ಕೊಟ್ಟಿಲ್ಲ ಅಂತ?? ನೀನು ಭಂಡ ಧೈರ್ಯ ತೆಗೆದುಕೊಂಡು ಪ್ರಯಾಣ ಆರಂಭಿಸಿದಾಗ ನಿನ್ನ ಗುರುಗಳ ರೂಪದಲ್ಲಿ ನಿನ್ನನ್ನು ತಡೆಯಲು ಪ್ರಯತ್ನಿಸಿದೆ. ಬಳಿಕ ಊರಿನ ಪ್ರಧಾನನ ರೂಪದಲ್ಲಿ ಬಂದೆ, ಕಾವಲುಗಾರನ ರೂಪದಲ್ಲಿ ಬಂದೆ, ಕಾಡುಪ್ರಾಣಿಯ ರೂಪದಲ್ಲಿ ಬಂದೆ, ಕಡೆಗೆ ಈ ಮೊದಲು ಆ ಕಾಡನ್ನು ದಾಟಲು ಪ್ರಯತ್ನಿಸಿದ ಓರ್ವನ ದೇಹವನ್ನು ತೋಳಗಳು ಕೊಂದು ಎಳೆದಾಡುತ್ತಿದ್ದುದನ್ನು ನಿನಗೆ ತೋರಿಸಿದೆ. ಆದರೆ ನೀನು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಅಧಿಕಪ್ರಸಂಗದಿಂದ ಮುನ್ನಡೆದೆ. ಈಗ ಹೇಳು, ನಾನು ನಿನಗೆ ಮೋಸ ಮಾಡಿದ್ದೇನೆಯೇ?’*
***********

ಮಿತ್ರರೇ,
ಕೊರೋನಾ ವೈರಸ್ ಜಗತ್ತನ್ನೇ ಆವರಿಸಿದೆ. ಮನೆಯಿಂದ ಹೊರಬರಬೇಡಿ ಎಂದು ತಿಳಿದವರು ಹೇಳುತ್ತಿದ್ದಾರೆ. ಟಿವಿ, ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ನೋಡುತ್ತಾ ಇದ್ದೇವೆ. ಸರಕಾರ, ಜಿಲ್ಲಾಧಿಕಾರಿ, ಪೊಲೀಸರು, ಆರೋಗ್ಯ ಇಲಾಖೆಯವರು ಪದೇ ಪದೇ ವಿನಂತಿಸಿಕೊಳ್ಳುತ್ತಿದ್ದಾರೆ. ಇತರ ದೇಶಗಳಲ್ಲಿ ಸಾವಿಗೀಡಾದವರ ಫೋಟೋಗಳನ್ನು, ವಿಡಿಯೋಗಳನ್ನು ನೋಡ್ತಾ ಇದ್ದೇವೆ. ನಮಗೆ ಇನ್ನೂ ಬುದ್ಧಿ ಯಾವಾಗ ಬರುತ್ತದೆ? ದೇವರಿದ್ದಾನೆ ಎಂಬ ಭಂಡ ಧೈರ್ಯವೋ, ನನಗೇನೂ ಆಗಲ್ಲ ಎಂಬ ಅಹಂಕಾರವೋ ಯಾವುದೂ ಈಗ ನಡೆಯಲ್ಲ. ಕೊರೋನಾ ಎಂಬ ಕ್ರೂರ ವಿಧಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಉಳಿಯುವುದೇ ಬಿಟ್ಟು ಅನ್ಯ ದಾರಿಯಿಲ್ಲ.
ವಂದೆಗಳೊಂದಿಗೆ

Sunday, March 22, 2020

ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ.,,,,,

SAVE NATURE : HEALTHY, WEALTHY & WISE. dgnsgreenworld Family

" Thank you Corona "

ಬ್ರಹ್ಮಾಂಡವೆಂಬ ಮುಗಿಯದ ವಿಸ್ತಾರದಲ್ಲಿ ಭೂಮಿ ಎಂಬ ಪುಟ್ಟ ಗೂಡಿನ ,  ಪುಟ್ಟ ದೇಶದ , ಪುಟ್ಟ ಊರಿನ , ಪುಟ್ಟ ಗಲ್ಲಿಯಲ್ಲಿ , ಎಲ್ಲ ನನ್ನಿಂದ ಮಾರಾಯ ಎಂದು ಬೀಗುತ್ತಿದ್ದ ಮನುಷ್ಯನಿಗೆ ಪ್ರಕೃತಿ ಸಣ್ಣ ಚಡಿಯೇಟು ಕೊಟ್ಟು ಮನೆ ಒಳಗೆ ಕೂರಿಸಿದೆ.

ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ. ಕಣ್ಣಿಗೆ ಕಾಣದ ಒಂದು ವೈರಸ್ ನಮ್ಮ ಅಹಂಕಾರ, ದವಲತ್ತು , ಜಾತಿ-ಧರ್ಮ ಎಲ್ಲದರ ಹೆಡೆಮುರಿಕಟ್ಟಿ ಮನೆಯೊಳಗೆ ಕೂರುವಂತೆ ಮಾಡಿದೆ , ಮಾನವ ದೇವರಾಗುವ ಹುಂಬತನದಲ್ಲಿ ಓಡುತ್ತಿದ್ದ ವೇಗಕ್ಕೆ ಕಾಲು ಮುರಿದು ಕೂರಿಸಿದೆ . ಬಂದ ಆಪತ್ತಿಗೆ ನಾವು ದೇವರನ್ನು ಬಯ್ಯುವುದಕ್ಕೆ ಆಗದೆ ಸಂಕಟ ಪಡುತ್ತಿರುವುದು ಇದು ಮೊದಲನೇ ಬಾರಿ ಇರಬೇಕು ! ಈ Corona  ನಮ್ಮ ಪಾಪದ ಕೂಸು ದೇವರನ್ನು ಹೊಣೆ ಮಾಡುವುದಕ್ಕೆ ಹೇಗೆ ಸಾಧ್ಯ.

ದಿನಬೆಳಗಾದರೆ ಟಿವಿಯಲ್ಲಿ ನಿತ್ಯ ಬರುತ್ತಿದ್ದ ಜ್ಯೋತಿಷಿಗಳು ಎಲ್ಲೋ ಮಾಯವಾಗಿದ್ದಾರೆ!
ಭಕ್ತರನ್ನು ನಿತ್ಯವೂ ತಾವು ದೇವಮಾನವರು ಎಂದು ನಂಬಿಸುತ್ತಿದ್ದ ಪವಾಡಪುರುಷರು ಭಕ್ತರನ್ನು ಭೇಟಿ ಮಾಡುವುದು ನಿಲ್ಲಿಸಿದ್ದಾರೆ. ಜಾತಿಗಳ ಮೇಲೆ ದೇವಸ್ಥಾನಗಳಿಗೆ , ದೇವರ ದರ್ಶನಗಳಿಗೆ ಅನುಮತಿ  ನೀಡುತ್ತಿದ್ದವರು, ಜ್ವರ ಇಲ್ಲದವರಿಗೆ ಮಾತ್ರ ಪ್ರವೇಶ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಬೀದಿಗೊಂದು ಬ್ಯೂಟಿಪಾರ್ಲರ್ ಗಳು ನಗುತ್ತಾ ನಿಂತಿದ್ದ ಬೀದಿಗಳಲ್ಲಿ , ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ , ಸಿನಿಮಾ,  ರಾಜಕೀಯ,  ಶೇರು ಮಾರುಕಟ್ಟೆ , ನಿತ್ಯವೂ ಸಿಂಗರಿಸಿ ನಿಲ್ಲುತ್ತಿದ್ದ Mall ಗಳು,  ಊರಲ್ಲಿ ಬಳುಕುತ್ತಾ ಓಡಾಡುತ್ತಿದ್ದ ಮೆಟ್ರೋ ,  ಮೈಮುರಿದು ಕೈಚಾಚಿ ನಿಂತಿದ್ದ ಫ್ಲೈಓವರ್ ಗಳು ಎಲ್ಲವೂ ಬಂದ್ .

Corona ಮತ್ತೆ ನಮಗೆ ಬದುಕು ಕಲಿಸುತ್ತಿದೆ , ಬದುಕಿನ ಅರ್ಥ ತಿಳಿಸುತ್ತಿದೆ , ಗಾಳಿಯಲ್ಲಿನ ಮಲಿನ ದಿನನಿತ್ಯವೂ ಕಡಿಮೆ ಮಾಡಿದೆ , ಇರುವೆಯಂತೆ ಮುತ್ತುತ್ತಿದ್ದ ಜನರ ಗುಂಪನ್ನು ಚದುರಿಸಿದೆ , ಕುಟುಂಬಗಳನ್ನು ಮತ್ತೆ ಒಂದು ಮಾಡಿದೆ
ಗಂಡ-ಹೆಂಡತಿ ಜೊತೆಗೆ ಕುಳಿತು ಮಾತನಾಡುತ್ತಿದ್ದಾರೆ, ಮಕ್ಕಳಿಗೆ ಅಪ್ಪ ಅಮ್ಮ ಮನೆಯಲ್ಲಿ ಸಿಗುತ್ತಾರೆ ಅನ್ನೋ ನಂಬಿಕೆ ಮತ್ತೆ ಹುಟ್ಟಿದೆ , ಕೈತೊಳೆದು ಊಟ ಮಾಡಬೇಕು ಎಂದು ಹಿರಿಯರು ಹೇಳುತ್ತಿದ್ದಾಗ ಕಿವಿಗೆ ಹಾಕಿಕೊಳ್ಳದ ನಾವು , ಈಗ ದಿನಕ್ಕೆ 30 ಬಾರಿ ಕೈತೊಳೆಯುವಂತೆ ಮಾಡಿದೆ.

 ಜೀವಕ್ಕೆ ಇರುವ ಬೆಲೆ ನಮಗೆ ಸ್ಪಷ್ಟವಾಗಿ ಮನದಟ್ಟಾಗಿದೆ , ಹುಚ್ಚು ಕುದುರೆಯಂತೆ ಓಡುತ್ತಿದ್ದ ನಮಗೆ ಲಗಾಮು ಬಿದ್ದಿದೆ , ಜೀವಕ್ಕೆ ಹೆದರಿ ನಮ್ಮ ನಮ್ಮ ಊರುಗಳಿಗೆ ಓಡಿ ಬಂದಿದ್ದೇವೆ , ಅಮ್ಮನ ಕಳವಳ , ಅಪ್ಪನ ಆತಂಕ,  ಸ್ನೇಹಿತರ ಕಾಳಜಿ ಎಲ್ಲವೂ ಅರಿವಾಗಿದೆ . ನಾವು ಬದುಕಿದ ಬದುಕಿನ ಬಗ್ಗೆ ಒಂದು ಅವಲೋಕನ ಮಾಡಿಕೊಳ್ಳೋಣ ಮತ್ತೆ ನಾವು ಬದುಕುವ ಬದುಕಲ್ಲಿ ತಪ್ಪುಗಳಾದರೆ ಆ ತಪ್ಪುಗಳಿಗೆ ನಮ್ಮ ಮಕ್ಕಳು ಬೆಲೆ ತೆರಬೇಕಾಗುತ್ತದೆ .

Corona ಥ್ಯಾಂಕ್ಯು ,

Saturday, March 21, 2020

ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ!*

SAVE NATURE, HEALTHY, WEALTHY & WISE. dgnsgreenworld Family
🏃🏽‍♀🏃🏼‍♂🧎🏾‍♂🙇🏻‍♀🙇🏻‍♂

*ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿದ್ದಂತೆ ವೇಗ ತಗ್ಗಿಸಿದೆ.... ಪ್ರಕೃತಿ ಮಾತೆಗೆ ತಲೆತಗ್ಗಿಸಿದೆ, ದುರಹಂಕಾರ ಮದೋನ್ಮತ್ತತೆಗಳಿಗೆ ಬಲವಾದ ಪೆಟ್ಟು ಬಿದ್ದಿದೆ !!!*🏃🏃😩😩

*ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ!*

ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವುದನ್ನು ಕೊರೊನಾ ಸಾಬೀತುಪಡಿಸಿದೆ.
 ವರ್ಷಾನುಗಟ್ಟಲೆಯಿಂದ ಯಾರ್ಯಾರು ಹೇಗೇ ಬಡಕೊಂಡರೂ ಬದಲಾಗದ ಮನುಷ್ಯನನ್ನು ಕೋವಿಡ್-19 ಎಂಬ ಕಣ್ಣಿಗೆ ಕಾಣದ ವೈರಸ್ ಬದಲಿಸಿದೆ.

ಹೌದು, ಹೊರಗಡೆ ತಿನ್ಬೇಡ್ರೋ, ರಸ್ತೆ ಬದಿಯ ಆಹಾರ ಒಳ್ಳೆಯದಲ್ಲ, ಮನೆಯಲ್ಲೇ ಅಡುಗೆ ಮಾಡಿಕೊಂಡು ಸೇವಿಸಿ, ಹಾಳುಮೂಳಿಗೆ ಬೈಬೈ ಅನ್ನಿ ಅಂತ ಎಷ್ಟು ಬಾರಿ ಆರೋಗ್ಯ ತಜ್ಞರು, ಆಹಾರ ತಜ್ಞರು ಬಡಕೊಂಡಿಲ್ಲ? ಜಂಕ್ ಫುಡ್ ಬೇಡ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರಗಳನ್ನು ಸೇವಿಸಿ ಎಂಬ ಲಕ್ಷಾಂತರ ಲೇಖನಗಳು ಬಂದಿವೆ, ಹಾಗಿದ್ದೂ ಅದಕ್ಕೆ ಕಿವಿಗೊಟ್ಟವರು ಬಹಳ ಅಪರೂಪ. ಆದರೆ, ಈ ಕೊರೊನಾ ಬಂದಿದ್ದೇ ಬಂದಿದ್ದು, ಜನ ಫ್ರೀಯಾಗಿ ಕೊಡ್ತೀವಿ ಬನ್ರಪ್ಪಾ ಎಂದರೂ ಹೊರಗಿನ ಆಹಾರ ಸೇವಿಸಲು ಮನಸ್ಸು ಮಾಡುತ್ತಿಲ್ಲ.
ಜಂಕ್ ಫುಡ್ ಅಂತೂ ದೂರದ ಮಾತು. ಗಂಜಿ ಕುಡಿದ್ರೂ ಮನೆಯಲ್ಲೇ ಮಾಡಿ ಕುಡೀತೀವಿ ಅಂತಿದಾರೆ. ಇನ್ನು ಸಸ್ಯಾಹಾರದ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅದಕ್ಕೆ ಜಾತಿ, ಧರ್ಮದ ಬಣ್ಣ ಕಟ್ಟಿ ವಾದ ಮಾಡಿ ದ್ವೇಷ ಕಾರುತ್ತಿದ್ದವರೆಲ್ಲ ಸಡನ್ನಾಗಿ ಮಾಂಸಾಹಾರ ಸೇವನೆಯಿಂದ ದೂರವುಳಿದಿದ್ದಾರೆ.

ಇನ್ನು ಸಂಬಂಧಗಳ ವಿಷಯಕ್ಕೆ ಬರೋಣ. ಒಬ್ಬರಿಗೊಬ್ಬರು ಸಮಯ ಕೊಡಲಾಗದೆ ಅದೇ ವಿಷಯಕ್ಕೆ ಪ್ರತಿ ದಿನ ಕಿತ್ತಾಟ ನಡೆಸುತ್ತಿದ್ದರು ಗಂಡ ಹೆಂಡತಿ. ರಜೆ ಬಂದರೂ ಮನೆಯೊಳಗೆ ನಿಲ್ಲದ ಮಕ್ಕಳು. ಅಜ್ಜಅಜ್ಜಿಯರಷ್ಟೇ ಮನೆ ಕಾಯೋಕೆ ಎಂಬಂತಾಗಿತ್ತು. ಎಲ್ಲ ಒಟ್ಟಾಗಿ ಸಮಯ ಕಳೆಯಲು ಪ್ರವಾಸವೊಂದೇ ದಾರಿ ಎಂಬಂತಾಗಿತ್ತು. ಎಲ್ಲರೂ ವಾರದಲ್ಲೊಂದಾದರೂ ಊಟವನ್ನು ಒಟ್ಟಿಗೇ ಕುಳಿತು ಮಾಡೋಣವೆಂದರೂ ಸಾಧ್ಯವಾಗುತ್ತಿರಲಿಲ್ಲ.

 ಆದರೆ ಈಗ ಕೊರೊನಾ ಕ್ವಾರಂಟೈನ್ ಎಂದು ಇಡೀ ದಿನ ಕುಟುಂಬಗಳು ಜೊತೆಗೇ ಸಮಯ ಕಳೆಯುತ್ತಿವೆ. ವರ್ಷಗಟ್ಟಲೆಯಿಂದ ಊರಿಗೆ ಬಾರದ ಮಗನನ್ನು ನೆನೆದು ಅಳುತ್ತಿದ್ದ ಅಪ್ಪಅಮ್ಮನಿಗೆ ಹಳ್ಳಿಯ ಹಾದಿ ಹಿಡಿದ ಮಗನಿಂದ ಖುಷಿಯಾಗಿದೆ.

 ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುತ್ತಿದ್ದಾರೆ. ಒಂದು ವಿಷಯದ ಕುರಿತು ಮನೆಯವರೆಲ್ಲ ಚರ್ಚಿಸುತ್ತಿದ್ದಾರೆ. ಮಕ್ಕಳಿಗೆ ರಜಾಮಜಾ ಕುಟುಂಬದೊಂದಿಗೆ ಸಿಗುತ್ತಿದೆ.

ಪರಿಸರದ ಕುರಿತ ಜಾಗೃತಿ ಸಪ್ತಾಹಗಳು, ಲೇಖನಗಳು, ಮಾಧ್ಯಮಗಳ ಎಚ್ಚರಿಕೆಗಳು, ಅಧ್ಯಯನಗಳು ಎಲ್ಲದಕ್ಕೂ ಕಿವುಡಾಗಿದ್ದ ಜನರೆಲ್ಲ ಈಗ ಮನೆಯೊಳಗೇ ಉಳಿದಿರುವುದರಿಂದ, ಕಾರ್ಖಾನೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ಕಚೇರಿಗಳು ಕ್ಲೋಸ್ ಆಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಟ್ಟಿರುವುದರಿಂದ, ಶಾಲಾಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ, ವಾಹನಗಳು ರಸ್ತೆಗಿಳಿಯದ ಕಾರಣ ವಾಯುಮಾಲಿನ್ಯ ಅಚ್ಚರಿಯ ರೀತಿಯಲ್ಲಿ ತಗ್ಗುತ್ತಿದೆ. ಗಾಳಿ ಸ್ವಚ್ಛವಾಗುತ್ತಿದೆ, ಶಬ್ದಮಾಲಿನ್ಯಕ್ಕೂ ತಡೆ ಬಿದ್ದಿದೆ.

ಬಹಳ ಕಡಿಮೆ ಕಸಕಡ್ಡಿ ಧೂಳು ಸಮುದ್ರ, ಹೊಳೆಗಳಿಗೆ ಸೇರುತ್ತಿವೆ. ಜಲಚರಗಳು ಖುಷಿಯಾಗಿವೆ. ವಿಮಾನಗಳ ಅಬ್ಬರವಿಲ್ಲದೆ ಆಕಾಶ ಆರಾಮಾಗಿದೆ, ಇಷ್ಟು ದಿನ ಬಚ್ಚಿಟ್ಟುಕೊಂಡಿದ್ದ ನಕ್ಷತ್ರಗಳೆಲ್ಲ ನಿಧಾನವಾಗಿ ಗೋಚರವಾಗುತ್ತಾ ಮಿಂಚಲಾರಂಭಿಸಿವೆ. ಲಕ್ಷುರಿ ಹಡಗುಗಳ ಕೊಳೆಯಿಲ್ಲದೆ ಸಾಗರಗಳು ಸಂತೋಷವಾಗಿವೆ.

ಮರ ಕಡಿಯುವವರು ಬರುತ್ತಾರೆಂಬ ಭಯವಿಲ್ಲದೆ ಖುಷಿಯಿಂದ ಗಾಳಿ ಬೀಸಲಾರಂಭಿಸಿವೆ. ಇವೆಲ್ಲವೂ ಕೊರೊನಾಕ್ಕೆ ಕೃತಜ್ಞತೆ ಹೇಳುತ್ತಿವೆ.
ಸ್ವಚ್ಛತೆಯ ಕುರಿತು ಬಾಯ್ ಬಾಯ್ ಬಡಿದುಕೊಂಡರೂ ಬದಲಾಗದ ಜನರು ಈಗ ಪದೇ ಪದೆ ಕೈ ತೊಳೆಯುತ್ತಿದ್ದಾರೆ.

 ಬಾಯಿಗೆ ಕರವಸ್ತ್ರ ಅಡ್ಡ ಹಿಡಿದು ಕೆಮ್ಮುವ ಸೀನುವ ಅಭ್ಯಾಸ ರೂಢಿಸಿಕೊಳ್ಳುತ್ತಿದ್ದಾರೆ. ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಗಮನ ಹರಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಈಗ ಅರಿತುಕೊಳ್ಳುತ್ತಿದ್ದಾರೆ.

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದವರೆಲ್ಲ ಈಗ ಸಣ್ಣ ಶೀತಕ್ಕೂ ಆಸ್ಪತ್ರೆಗೆ ಓಡುತ್ತಿದ್ದಾರೆ. ಆರೋಗ್ಯ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ, ಯೋಗ ಮಾಡುತ್ತಿದ್ದಾರೆ. ಹಣವೇ ಎಲ್ಲ ಅಂದುಕೊಂಡವರು ಲಕ್ಷ ಲಕ್ಷ ಲಾಸ್ ಆಗುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ, ಆರೋಗ್ಯವಿದ್ದರೆ ಸಾಕಪ್ಪಾ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

 *ಇದಲ್ಲವೇ ಅಚ್ಛೇ ದಿನ್?*
ಯಾವುದೋ ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿದ್ದಂತೆ ವೇಗ ತಗ್ಗಿಸಿದೆ. ವೇಗ ತಗ್ಗಿದರೂ ಹೆಚ್ಚೇನೂ ಬದಲಾಗದು, ನಿಧಾನದ ಬದುಕು ಕೆಟ್ಟದೇ ಎಂದು ಈಗ ಅರಿವಾಗಿದೆ. ಇಷ್ಟು ದಿನದ ಜೀವನಶೈಲಿ ಕುರಿತ ಆತ್ಮವಿಮರ್ಶೆ ಮಾಡಿಕೊಳ್ಳಲು ಈಗ ಸಮಯ ಸಿಕ್ಕಿದೆ.

*ಕಳೆದ 50 ವರ್ಷಗಳ ಹುಚ್ಚು ಕೋಡಿ ಓಟ ಪರಿಸರದ ವಿರುದ್ಧ ಮನುಷ್ಯನದಾಗಿತ್ತು. ಈಗ ಆತನಿಗೆ ಪ್ರಕೃತಿ ಮುಂದೆ ತಾನೆಷ್ಟು ಸಣ್ಣವನು ಎಂದು ಅರಿಯಲು ಸಣ್ಣದೊಂದು ದಾರಿ ಸಿಕ್ಕಿದೆ. ಉಸಿರಾಡಲು ಸಮಯ ಸಿಕ್ಕಿದೆ, ಶಾಂತವಾಗಿರಲು, ನಮ್ಮ ಅರ್ಥ ಕಳೆದುಕೊಂಡ ಬದುಕಿನ ಕುರಿತು ಪರಾಂಬರಿಸಿ ಮುಂದುವರಿಯಲು ಸರಿಯಾದ ಸಮಯ ಇದಾಗಿದೆ. ಈ ಗ್ರಹದ ಎಲ್ಲ ಜೀವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಇನ್ನೂ ಅವಕಾಶವಿದೆ. _ಕೊರೊನಾ ನೆಪದಲ್ಲಿ ಅಷ್ಟಾದರೂ ಬದಲಾಗೋಣ ಅಲ್ಲವೇ?_*

ಪ್ರಕೃತಿಯ ಮಡಿಲಿನಲ್ಲಿ ಕೋಟ್ಯಾಂತರ ಜೀವರಾಶಿಗಳು ಇವೆ, ಅದರಲ್ಲಿ  ಮನುಷ್ಯನೂ ಕೂಡ ಒಂದು ಜೀವಿ, ಪ್ರಪಂಚದಲ್ಲಿ ಮನುಷ್ಯ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೈಜ್ಞಾನಿಕವಾಗಿ  ಹಾಗೂ ತಾಂತ್ರಿಕವಾಗಿ ಎಷ್ಟೇ ಬೆಳವಣಿಗೆ ಸಾಧಿಸಿದರು, ಮನುಷ್ಯನಿಂದ ಯಾವುದೇ ಒಂದು ಮೂಲ ವಸ್ತುವನ್ನು ಸೃಷ್ಟಿಸುವ ಶಕ್ತಿಯಿಲ್ಲ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಪರಿವರ್ತಿಸಬಹುದು ಅಷ್ಟೇ.
 ಹಾಗಾಗಿ ಮನುಷ್ಯನಿಗೆ ನಾನು ನನ್ನಿಂದ ನನ್ನಿಂದಲೇ ಎಲ್ಲಾ ನಾನೇ ಈ ತರಹದ ಆಡಂಬರದ ಅವಶ್ಯಕತೆ ಇಲ್ಲ ಕೋಟ್ಯಾಂತರ ಜೀವರಾಶಿಗಳಲ್ಲಿ ನಾವು ಸಹ ಒಂದು ಜೀವಿ ಅಷ್ಟೇ.
 ಮನುಷ್ಯರು ನಾವು ಇನ್ನಾದರೂ ಪ್ರಕೃತಿಯನ್ನು ಹಾಳುಮಾಡದೆ, ನಿಸರ್ಗದ ಜೊತೆ ಬೆರೆತು ಬದುಕಬೇಕು, ಸಕಲ ಜೀವರಾಶಿಗಳು ನಮ್ಮ ಜೊತೆ ಸಂತೋಷವಾಗಿ ಬದುಕು ಸಾಗಿಸಲು ನಾವುಗಳು ಸಹಕಾರಿಯಾಗಬೇಕು ಹಾಗೂ ಪ್ರಕೃತಿ ಮಾತೆಯನ್ನು  ಸಂರಕ್ಷಣೆ ಮಾಡಿ
ಮುಂದಿನ ಪೀಳಿಗೆ ಆರೋಗ್ಯವಾಗಿ ಬದುಕಲು ನಾವೆಲ್ಲರೂ  ಸರ್ವರೀತಿಯಲ್ಲೂ ಸನ್ನದ್ಧರಾಗಿ ನಡೆದುಕೊಳ್ಳುತ್ತೇವೆ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಕೊಳ್ಳೋಣ

*ನಮೋ ಸನಾತನ ಧರ್ಮ, ಜೈ ಹಿಂದ್*🌺
ವಂದೆಗಳೊಂದಿಗೆ dgns,,

Friday, March 20, 2020

ಕೊರೋನ ಬಗ್ಗೆ ಇಟಲಿ ಪ್ರಜೆಯ ಪತ್ರ

SAVE NATURE, HEALTHY, WEALTHY & WISE. dgnsgreenworld Family

ಕೊರೋನ ಬಗ್ಗೆ ಇಟಲಿ ಪ್ರಜೆಯ ಪತ್ರ.
ಕನ್ನಡಕ್ಕೆ ನೌಫಲ್ ಸಾಲ್ಮರ

ಇಟಲಿ ಪ್ರಜೆಯ ಪತ್ರ,

ಎಲ್ಲರಿಗೂ ಶಾಂತಿ ...

ನಾವು ಇಟಲಿಯ ಮಿಲನ್ ಎಂಬ ನಗರ‌ದಲ್ಲಿ ವಾಸಿಸುತ್ತಿದ್ದೇವೆ.

ಇಲ್ಲಿ ಈ ಕಷ್ಟದ ದಿನಗಳಲ್ಲಿ ಜೀವನ(How is life here in Milan During These Difficult Days)ಹೇಗಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ ನಮ್ಮ ತಪ್ಪುಗಳಿಂದ ನೀವು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ.
ನಾವು ಮನೆಯಲ್ಲಿದ್ದೇವೆ, ಬೀದಿಗಿಳಿಯಲು  ನಮಗೆ ಅನುಮತಿ ಇಲ್ಲ, ಯಾರಾದರೂ ಮನೆಯಿಂದ ಹೊರಗೆ ಹೋದರೆ ಅವರನ್ನು ಪೊಲೀಸರು ಬಂಧಿಸುತ್ತಾರೆ.
ವ್ಯಾಪಾರಗಳು, ಮಾಲ್‌ಗಳು, ಇತ್ಯಾದಿಗಳನ್ನು ಮುಚ್ಚಲಾಗಿದೆ, ಬೀದಿಗಳು ನಿರ್ಜನವಾಗಿದೆ.

ಇದು ಪ್ರಪಂಚದ ಅಂತ್ಯ ಎಂಬ  ಭಾವನೆಯಾಗುತ್ತಿದೆ.

ಜೀವಿಸುತ್ತಿದ್ದ ದೇಶವಾದ  ಇಟಲಿ ಕೆಲವೇ ಸೆಕೆಂಡುಗಳಲ್ಲಿ ಕರಾಳ ದೇಶದಂತೆ ಮಾರ್ಪಟ್ಟಿದೆ.
ಇಲ್ಲಿನ ಜನರು ದುಃಖ, ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ.
ಈ ದುಃಸ್ವಪ್ನವು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ.

ನಾವು ಮಾಡಿದ ತಪ್ಪು ಏನೆಂದರೆ, ಇಲ್ಲಿ ರೋಗ ಪ್ರಾರಂಭವಾದಾಗ ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅವರು ಎಂದಿನಂತೆ ಕೆಲಸಕ್ಕೆ ಹೋದರು, ಅವರು ನಗರಗಳು ಮತ್ತು ಮನರಂಜನಾ ಸ್ಥಳಗಳಿಗೆ ಪ್ರಯಾಣಿಸಿದರು. ನಾವು ರಜಾದಿನದಂತೆ ಆಚರಿಸಿದೆವು.
ಎಲ್ಲರೂ ಅದೇ ತಪ್ಪನ್ನು ಮಾಡುತ್ತಿದ್ದರು.

ಅದಕ್ಕಾಗಿಯೇ ನಾನು ನಿಮಗೆ ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿಪಾತ್ರರಿಗೆ, ಪೋಷಕರು, ಅಜ್ಜ ಅಜ್ಜಿಯರನ್ನು ರಕ್ಷಿಸಿ, ಏಕೆಂದರೆ ಈ ಅನಾರೋಗ್ಯವು ಅವರಿಗೆ ಅಪಾಯವನ್ನುಂಟು ಮಾಡುತ್ತದೆ.
ಪ್ರತಿದಿನ ಸುಮಾರು 200 ಜನರು ಇಲ್ಲಿ ಸಾಯುತ್ತಿದ್ದಾರೆ.  ಉತ್ತಮ ಔಷಧವಿಲ್ಲದ ಕಾರಣ ಅಲ್ಲ(ಮಿಲನ್‌ನಲ್ಲಿರುವ ಆಸ್ಪತ್ರೆ ವಿಶ್ವದ ಉತ್ತಮ ವೈದ್ಯಕೀಯ ಕೇಂದ್ರವಾಗಿದೆ) ಆದರೆ ಎಲ್ಲರಿಗೂ ಸ್ಥಳವಿಲ್ಲ, ಆದ್ದರಿಂದ ವೈದ್ಯರು ಅವರನ್ನು ಸಾವಿಗೆ ಮಾತ್ರ ತಲುಪಿಸಬಹುದು ...

ಅದನ್ನು ಮೊದಲು ನೋಡಿದ್ದಕ್ಕಾಗಿ ನಾವು ಬೆಲೆ ತೆರುತ್ತಿದ್ದೇವೆ. ಆದ್ದರಿಂದ ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ. ನಾವು ಮಾಡಿದ ಮೂರ್ಖತನವನ್ನು ನೀವು ಪುನರಾವರ್ತಿಸಬೇಡಿ.

ನಾವು ಹೇಳುವುದನ್ನು ನೀವು ಆಲಿಸಿ(ಪಾಲಿಸಿ).

ದಯವಿಟ್ಟು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಬೇಡಿ. ಹೊರಗೆ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದನ್ನು ತಪ್ಪಿಸಿ, ಮನೆಯೊಳಗೆ ಹೆಚ್ಚಾಗಿ ಇರಿ, ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ಜನರಿಂದ ಒಂದು ಮೀಟರ್ ದೂರವಿದ್ದು ಮಾತನಾಡಿ, ಹತ್ತಿರ ಹೋಗಬೇಡಿ, ಮುದ್ದಾಡಬೇಡಿ.
ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಸೇವಿಸಿ.
ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಅಧಿಕಾರಿಗಳಿಗೆ ಸಹಾಯ ಮಾಡಿ.

ನಮ್ಮ ಪುಟ್ಟ ಇಟಲಿ ದೇಶವು ಅದರ ಕೆಟ್ಟ ಸ್ಥಿತಿಗೆ ಹೋಗಬಹುದು.
ಇಟಲಿ ಇಂದು ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ದೇಶವಾಗಿದೆ. ಆರು ಕೋಟಿಗೂ ಹೆಚ್ಚು ಜನರು ಮನೆಗಳಿಗೆ ಸೀಮಿತರಾಗಿದ್ದಾರೆ (ಸಂಪರ್ಕತಡೆಯನ್ನು).

ನಾವು ಆರಂಭದಲ್ಲೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ಅನುಸರಿಸಿದ್ದರೆ ಇದನ್ನು ತಡೆಯಬಹುದಿತ್ತು & ನಾವು ಈ ಪರಿಸ್ಥಿತಿಗೆ ಈ ರೀತಿ ಆಗುತ್ತಿರಲಿಲ್ಲ.

ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ

ಈ ಪೋಸ್ಟ್ ಅನ್ನು ಎಲ್ಲರಿಗೂ ಹಂಚಿಕೊಳ್ಳಿ.

A letter from Italy,

 peace for all,
 We live in Italy - Milan,
 I'm going to share with you and explain to you, "How is life here in Milan" during these difficult days and how do I think you should learn from the mistakes and their consequences that we live here.
 We are currently in quarantine.  We don't take to the streets, the police are in constant motion and arrest anyone outside his home.
 Everything is closed!  ... business, malls, stores, all streets without movement.
 Feeling of the end of the world !!
 Italy, the country of living life, is transformed from one moment to the next as if it were a dark country of war.
 It is a fact that I never thought I would ever live!
 People are confused, sad, anxious and helpless, and often do not understand how this reality was imposed on them and when this whole nightmare will end.
 The big mistake was that at the start of the first hit people continued to lead their lives as usual and took to the streets for work, entertainment and feeling like a vacation period, so gatherings with friends and banquets abound.
 Everyone was wrong and so were you!
 I beg you, be careful, this is neither a laugh nor a joke.
 Protect your loved ones, your parents, and your grandparents!  The disease is dangerous for them.
 About 200 people die here every day, not because medicine in Milan is not good (it's one of the best in the world), but rather because there are no places for everyone!
 Doctors choose who will die!  This is only because of the silliness of the citizens at the beginning, who decided to continue their lives as usual, regardless of the new situation!
 Please, learn from the mistakes, we are a small country that could end up with a great tragedy.
 Listen well now ,,, 🙏
 Don't go out into crowded places.
 Try not to eat in public places.
  Stay longer at home during this time!
 Listen to the Ministry of Health guidelines (don't play it!).
  Talk about a meter away from each person, do not come close, do not cuddle or accept.
 Get a complementary and preventive treatment and learn from others' mistakes.
 We recommend that you take vitamin C to boost your immune system.

 Helping professionals prevent the spread of the epidemic ...

  In Italy, the entire country is isolated, meaning 60 million people in quarantine !!
 This would have been prevented if people had heard the instructions from the beginning.
 Take care of yourself and the life of the one you love ❤❤

 Share the message to all people
dgns
Thank you .

Wednesday, March 11, 2020

ಕಣ್ಣಿಗೆ ಕಾಣದ ಒಂದು ವೈರಸ್????????

SAVE NATURE, HEALTHY, WEALTHY & WISE. dgnsgreenworld Family
ಕಣ್ಣಿಗೆ ಕಾಣದ ಒಂದು ವೈರಸ್ ವಿಶ್ವದ ಎಲ್ಲಾ ಬಲಿಷ್ಠ ರಾಷ್ಟ್ರಗಳ ನಾಯಕರ ಅಹಂಕಾರ, ದೌಲತ್ತು, ಕಪಟ ರಾಜಕಾರಣ, ರಕ್ತ ರಾಜಕಾರಣ, ಗಡಿಗಳೆಂಬ ಮೌಡ್ಯ, ಅಭಿವೃದ್ಧಿ ಎನ್ನುವ ಮಿಥ್ಯೆ ಎಲ್ಲವನ್ನೂ ನಿವಾಳಿಸಿ ಬಿಸಾಡಿದೆ.
ಇಡೀ ವಿಶ್ವವನ್ನು ನೂರಾರು ಬಾರಿ ನಾಶ ಮಾಡಬಹುದಾದಷ್ಟು ಬಾಂಬ್, ಬಂಕರ್ ಗಳನ್ನು ಶೇಖರಿಸಿ ಇಟ್ಟುಕೊಂಡಿರುವ ಎಲ್ಲಾ ದೇಶಗಳನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ಹೈರಾಣಾಗಿಸಿದೆ.
ವಿಶ್ವದ ಮುಕ್ತಿ ನಮ್ಮದೇ ಕೈಯಲ್ಲಿ ಇದೆ ಎಂದು ತಾವು ನಂಬಿಕೊಂಡು, ತಮ್ಮ ಭಕ್ತರನ್ನೂ ನಂಬಿಸಿದ್ದ ಎಲ್ಲಾ ಧರ್ಮ ಗುರುಗಳೂ ತಮ್ಮ ಪಾದಪೂಜೆಗಳನ್ನು ರದ್ದುಗೊಳಿಸಿದ್ದಾರೆ. ಕೆಮ್ಮು , ಜ್ವರ ಇರುವವರಿಗೆ ದೇವರ ದರ್ಶನವನ್ನು ದೇವಸ್ಥಾನಗಳು ನಿಷೇಧಿಸಿ ಫಲಕಗಳನ್ನು ಲಗತ್ತಿಸುತ್ತಿವೆ. ಜೀವಮಾನವಿಡೀ ವಿಜ್ಞಾನದ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳು ಜಗತ್ತಿನಾದ್ಯಂತ ಭಯ ಬೀತಗೊಂಡು ಮೌನಕ್ಕೆ ಶರಣಾಗಿದ್ದಾರೆ.
ದೇಶದೇಶಗಳನ್ನೇ ಖರೀದಿಸುವಷ್ಟು ಸಂಪತ್ತನ್ನು ತನ್ನದೇ ದೇಶದ ಜನರಿಂದ ಸುಲಿಗೆ ಮಾಡಿದ ಅತೀ ಶ್ರೀಮಂತರ ಹಣ ಷೇರು ಮಾರುಕಟ್ಟೆಯಲ್ಲಿ ತುಕ್ಕು ಹಿಡಿಯುತ್ತಿದೆ.
ಮನುಷ್ಯ ನಿರ್ಮಾಣದ ಬಾಂಬು,ಬಂಕರ್, ಧರ್ಮ, ಜಾತಿ, ಯುದ್ದ, ಯುದ್ದೋನ್ಮಾದ, ಗಡಿ, ವ್ಯಾಪ್ತಿ, ಬೇಲಿ, ಪೌರತ್ವ, ಅಧಿಕಾರ, ವಿಶ್ವ ನಾಯಕ, ವಿಶ್ವ ಗುರು,  ಶ್ರೀಮಂತಿಕೆ...ಇತ್ಯಾದಿ ಎಲ್ಲಾ ಅಹಂ ಮತ್ತು ದೌಲತ್ತನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ನಿವಾಳಿಸಿ ಬಿಸಾಡಿದೆ..Life is short understand all human beings🙏🙏🙏🙏🙏
ವಂದೆಗಳೊಂದಿಗೆ

Thursday, March 5, 2020

ಮುಟ್ಟು ಮುಟ್ಟೆಂದು ಯಾಕೆ ಜರಿಯುವೆ ಮನುಜ,,,,,

SAVE NATURE, HEALTHY, WEALTHY & WISE. dgnsgreenworld Family

#ಮುಟ್ಟು....!

ಮುಟ್ಟು ಮುಟ್ಟೆಂದು ಯಾಕೆ ಜರಿಯುವೆ ಮನುಜ
ಮುಟ್ಟಿನಿಂದಲೇ ಹುಟ್ಟಿರುವೆ ನೀನು,
ಮುಟ್ಟು ನಿಲ್ಲವುದರ ಮರ್ಮದ ಹಿಂದೆ ನೀನಿರುವೆ
ಮುಟ್ಟಿಲ್ಲದಿದ್ದರೆ ಈ ಭೂಮಿಯ ಮೇಲೆ ನೀನಿರಲಾಗುತ್ತಿತ್ತೆ....?

ಗರ್ಭಾಶಯದಿಂದ ಒಸರುವ ರಕ್ತ
ನಿನ್ನ ಮೈಯೊಳಗೆ ಹರಿದಾಡುವ ರಕ್ತ ಬೇರಿಲ್ಲ
ಓ ಮೂಢ..! ನೀನ್ಯಾಕೆ ಇದನ್ನರಿತಿಲ್ಲ
ಮುಟ್ಟಾದ ದೇಹವನು ಮೈಲಿಗೆಯೆಂದು ದೂರವಿಡುವೆಯಲ್ಲ...!
ಮೊದಲು ನಿನ್ನ ಮನದೊಳಗಿರುವ
ಮೈಲಿಗೆಯ ಸ್ವಚ್ಚ ಮಾಡಿಕೊ....!

ಮುಟ್ಟು....! ಮುಟ್ಟು....! ಮುಟ್ಟು....!
ಮುಟ್ಟಿನ ಒಳಗುಟ್ಟು ನೀ ತಿಳಿಯೋ
ಮುಟ್ಟಿರುವುದು ! ಮುಟ್ಟಬೇಕೆಂದಿರುವುದು !
ಮುಟ್ಟಿನಿಂದಲೇ ಪಡೆದಿರುವೆ,
ಮುಟ್ಟು ಕೊಳಕಲ್ಲ...! ಕೊಳಕದು ನಿನ್ನ ಮನಸು...!
ನಿನಗೇನು ಅರಿವಿದೆ..! ಮುಟ್ಟು ಕೊಳಕೆನ್ನುವ ನೀನು
ಅದರಿಂದಲೇ ಜನಿಸಿರುವೆ...!!

ಒಮ್ಮೆಯಾದರೂ ಆ ಜಾಗದಲ್ಲಿ ನಿನ್ನ ನೀ ಕಲ್ಪಿಸಿಕೊ...!
ಮುಟ್ಟಿನ ಯಾತನೆಯನ್ನೊಮ್ಮೆ ಅನುಭವಿಸಿ ನೋಡು...!
ಕರುಳ ಹಿಂಡುವ ನೋವು ನಿನಗೂ ತಿಳಿಯುವುದು
ಋತುಚಕ್ರ ಕಾಲನಿಯತಿಯ ಸಹಜ ಕ್ರಿಯೆ
ಅದನ್ಯಾಕೆ ಅಪವಿತ್ರವೆಂದು ಕಾಣುವೆ...!
ಅದರಲ್ಲಿಯೇ ಜನಿಸಿದ ನೀನು ಅಪವಿತ್ರವಲ್ಲವೇನು ??

ಬಿಸಿ ಉಸುರಿನ ದೇಹ ಬೀಗಿ ಹಿಡಿದು
ಪ್ರತಿ ಮಾಸಿಕದಲೂ ನುಂಗುವ ನೋವು
ಅದು ನಿನ್ನ ಹುಟ್ಟಿಗಲ್ಲವೇ...!
ಅವಳ ಮುಟ್ಟಿನ ರಹಸ್ಯಕೆ ವಿಸ್ಮಯಪಡು 
ಮುಟ್ಟಿನ ವ್ಯಥೆ ನೋಡಿ ಮರುಕಪಡು ನಿನ್ನೊಳಗೊಮ್ಮೆ,....!!

ಒಡಲನೋವು ತನ್ನೊಳಗೆ ತಾನನುಭವಿಸಿ
ಜಗದ ಕತ್ತಲೆಯ ಸರಿಸಿ...!
ಹೊಸತುಭಾವ ಹೊಸಬೆಳಕು ತೋರುತ್ತ..!
ಉಸಿರು ಗಟ್ಟಿಹಿಡಿದು ಯಾತನೇ ಪಡುತ್ತ
ಈ ಭೂವಿಗೆ ನಿನ್ನನ್ನು ತಂದವಳು ಹೆಣ್ಣಲ್ಲವೇ...!
ಅವಳ ತಾಯ್ತನದ ನೋವು ನೀನೆಕೆ ಅರಿಯುತಿಲ್ಲ ...!!

ಮುಟ್ಟು ...! ಮುಟ್ಟು...! ಹೇಸಿಗೆಯ ಮುಟ್ಟು....!
ಹಾಸಿಗೆಯ ಮುಟ್ಟು...! ದೇಹದ ಮೈಲಿಗೆಯ ಮುಟ್ಟು !
ಮುಟ್ಟು ಕಳಂಕವೆಂದು ಜರಿಯಬೇಡವೋ ಮನುಜ‌
ಹೊಲೆಯಲ್ಲಲ್ಲದೆ ಜಗವು ತಲೆಯಲ್ಲಿ ಹುಟ್ಟುವುದೇ...!!

ವಂದೆಗಳೊಂದಿಗೆ,,,,,,,,,,,,

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World